ಶತಾವರಿ (ದಕ್ಷಿಣ ಏಷ್ಯಾ ಪ್ರಭೇದ)
Shatavari | |
---|---|
Plant photographed at Pune | |
Scientific classification | |
Unrecognized taxon (fix): | Asparagus |
ಪ್ರಜಾತಿ: | A. racemosus
|
Binomial name | |
Asparagus racemosus | |
Synonyms | |
ಶತಾವರಿ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸರ್ವಋತು ಗಿಡ. ಆಸ್ಪರೇಗಸ್ ರೆಸಿಮೋಸಸ್ ಇದರ ಶಾಸ್ತ್ರಿಯ ನಾಮ. ಶತಮೂಲಿ, ಮುಕ್ಕುಲ, ಹಲವು ಮಕ್ಕಳ ತಾಯಿ ಎಂಬ ಹೆಸರುಗಳೂ ಇವೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಬೆಳೆಯುವ ಈ ಬಳ್ಳಿಯಲ್ಲಿ ಆಸ್ಪರೇಗಸ್ ರೆಸಿಮೋಸಿಸ್, ಆಸ್ಪರೇಗಸ್ ಅಡೆಸ್ಕಾಡರ್ಸ್, ಆಸ್ಪರೇಗಸ್ ಪೆಸಿನೇಟಿಸ್ ಎಂಬ ಮೂರು ಪ್ರಭೇದಗಳಿವೆ.
ಶತಾವರೀ ಬೇರುಗಳಿಗೆ ಕೊಳವೆ ಆಕಾರವಿದೆ. ಬಣ್ಣ ಬೂದು. ಬೇರುಗಳ ಉದ್ದ 15-45 ಸೆಂಮೀ. ಕನ್ನಡ ಭಾಷೆಯಲ್ಲಿ ಇದಕ್ಕೆ "ಹಲವು ಮಕ್ಕಳ ತಾಯಿಬೇರು" ಹಾಗೂ ಆಷಾಢಿ ಬೇರು ಎಂದೂ ಕರೆಯುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಬೇರು, ಎಲೆ, ಮಾಗಿದ ಹಣ್ಣು ಮತ್ತು ಬೀಜಗಳು ವಿವಿಧ ಬಗೆಯಲ್ಲಿ ಉಪಯೋಗವಾಗುತ್ತವೆ.[೨][೩][೪] ಗಿಡದಲ್ಲಿ ��ಸ್ಪರ್‌ಜಿನ್, ಆಲ್ಬ್ಯುಮಿನ್, ಲೋಳೆಸರ, ಸೆಲ್ಯೂಲೋಸ್‌ಗಳು ಇರುತ್ತವೆ. ಬೇರುಪುಡಿಯಲ್ಲಿ ಸಾಕರೀನ್ ಇದೆ. ಗಿಡದಲ್ಲಿ ರಾಳಸಕ್ಕರೆ, ಗೋಂದು, ಆಲ್ಬ್ಯುಮಿನ್, ಕ್ಲೋರೈಡ್, ಅಸಿಟೇಟ್, ಫಾಸ್ಫೇಟ್‌ಗಳು, ಪೊಟಾಸಿಯಮ್ ಮತ್ತು ಟೆರೋಸಿನ್ ಇವೆ. ಸಸ್ಯಗಳ ಎಲೆ, ತೊಗಟೆ, ಹೂ ಮುಂತಾದವುಗಳಿಂದ ಸುವಾಸನೆಯುಳ್ಳ ಆವಿಶೀಲ ತೈಲವೂ ಬೀಜಗಳಿಂದ ಸಾರತೈಲವೂ ಸಿಕ��ಕುತ್ತವೆ. ಈ ಸಸ್ಯದಲ್ಲಿ ಶತಾವರಿನ್ ಎಂಬ ಔಷಧೀಯ ಗುಣವುಳ್ಳ ಸಸ್ಯಕ್ಷಾರವಿದೆ. ಇದಕ್ಕೆ ಮೂತ್ರವರ್ಧಕ ಹಾಗೂ ಕ್ಷೀರವರ್ಧಕ, ಉಪಶಮನಕಾರಿ, ತಂಪುಕಾರಿ, ಸುಖರೇಚಕಕಾರಿ ಗುಣಗಳಿವೆ. ಬೇರು ಪುಡಿಯನ್ನು ಕಷಾಯ ರೂಪದಲ್ಲಿ ಅಥವಾ ಲೇಹ್ಯರೂಪದಲ್ಲಿ ಸೇವಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "Asparagus racemosus". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved April 25, 2009.
- ↑ Pizzorno Jr., Joseph E.; Murray, Michael T.; Joiner-Bey, Herb (2015). The Clinician's Handbook of Natural Medicine (3rd ed.). Churchill Livingstone. p. 516. ISBN 9780702055140.
- ↑ Hechtman, Leah (2018). Clinical Naturopathic Medicine (2 ed.). Elsevier. pp. 879, 908. ISBN 9780729542425.
- ↑ Goyal, R. K.; Singh, Janardhan; Lal, Harbans (September 2003). "Asparagus racemosus—an update". Indian Journal of Medical Sciences. 57 (9): 408–414. PMID 14515032.