ಪಾಕ್ನಲ್ಲಿ ಉಗ್ರರ ದಾಳಿ:61 ಮಂದಿ ಸಾವು
- 25 Oct, 2016:ಪಾಕಿಸ್ತಾನದ ಖ್ವೆಟ್ಟಾ ನಗರದಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ಸೋಮವಾರ ಇಡೀ ರಾತ್ರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 61 ಮಂದಿ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಸಾವಿಗೀಡಾಗಿದ್ದಾರೆ. ಮೂವರು ಉಗ್ರರನ್ನು ಹೊಡೆದುರಿಳಿಸಲಾಗಿದೆ.
- ಕ್ವೆಟ್ಟಾ (ಪಿಟಿಐ): ಇಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು, 61 ಜನರ ಹತ್ಯೆ ಮಾಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ.[೩]
- ಬಲೂಚಿಸ್ತಾನ ಪ್ರಾಂತ್ಯದ ಸರ್ಯಬ ರಸ್ತೆಯಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ 24-10-2016 ಸೋಮವಾರ ರಾತ್ರಿ 11.10ಕ್ಕೆ ಉಗ್ರರು ದಾಳಿ ಆರಂಭಿಸಿದ್ದಾರೆ. ಪಾಕಿಸ್ತಾನ ಭದ್ರತಾ ಪಡೆ ಸಿಬ್ಬಂದಿ ಪ್ರತಿ ದಾಳಿ ನಡೆಸಿ ನೂರಾರು ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಿದ್ದಾರೆ. ಉಗ್ರರು ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಭದ್ರತಾಪಡೆ ವಸತಿ ನಿಲಯವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಗ್ರರು ನಡೆಸಿದ ದಾಳಿಯಲ್ಲಿ 60 ಮಂದಿ ಸಾವಿಗೀಡಾಗಿದ್ದಾರೆ, 115 ಜನ ಗಾಯಗೊಂಡಿದ್ದಾರೆ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. ಘಟನೆಯಲ್ಲಿ 118 ಮಂದಿ ಗಾಯಗೊಂಡಿದ್ದಾರೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಗೃಹ ಸಚಿವ ಬಿ. ಸರ್ಫರಾಜ್ ಟ್ವೀಟ್ ಮಾಡಿದ್ದಾರೆ. ಭದ್ರತಾಪಡೆ ನಡೆಸಿದ ಪ್ರತಿ ದಾಳಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಐದರಿಂದ ಆರು ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಅವರು ಈ ಮೊದಲು ಸುದ್ದಿಗಾರರಿಗೆ ತಿಳಿಸಿದ್ದಾರೆ.ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ 700 ತರಬೇತಿ ನಿರತ ಕೆಡೆಟ್ಗಳು ವಸತಿ ನಿಲಯದಲ್ಲಿ ತಂಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.[೪]
|
;ಕಿನ್ಯಾದ ಅತಿಥಿ ಗೃಹದ ಮೇಲೆ ಬಾಂಬ್ ದಾಳಿ
- 25 Oct, 2016-ಉತ್ತರ ಈಶಾನ್ಯ ಕಿನ್ಯಾದಲ್ಲಿನ ಅತಿಥಿ ಗೃಹವೊಂದರ ಮೇಲೆ ಮಂಗಳವಾರ ಬಾಂಬ್ ದಾಳಿ ನಡೆದಿದ್ದು, 12 ಮಂದಿ ಸಾವಿಗೀಡಾಗಿದ್ದಾರೆ. ಕಿನ್ಯಾದ ಅತಿಥಿ ಗೃಹದ ಮೇಲೆ ಬಾಂಬ್ ದಾಳಿ: 12 ಮಂದಿ ಬಲಿ ಘಟನಾ ಸ್ಥಳದಲ್ಲಿ 12 ಮೃತದೇಹಗಳು ದೊರಕಿದ್ದು, ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ದಳ ಹಾಗೂ ಶ್ವಾನ ದಳ ದಾಳಿಕೋರರಿಗಾಗಿ ಶೋಧ ಕಾರ್ಯ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.[೫]
|
30 ಕುರಿಗಾಹಿಗಳ ಹತ್ಯೆ
- ಕಾಬುಲ್ನಿಂದ ಬಂದ ಸುದ್ದಿ: ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಉಗ್ರರ ಗುಂಪೊಂದು ಆಪ್ಘಾನಿಸ್ತಾನದ ಪ್ರಾಂತೀಯ ರಾಜಧಾನಿ ಫೈರೋಜ್ ಕೋಹದ 30 ಕುರಿಗಾಹಿಗಳ ಹತ್ಯೆ ನಡೆಸಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. ಸರ್ಕಾರಿ ಪಡೆಗಳು ಸ್ಥಳೀಯರ ಸಹಕಾರದೊಂದಿಗೆ ಮಂಗಳವಾರ ಕಾರ್ಯಾಚರಣೆ ನಡೆಸಿ ದಯಿಷ್ ಉಗ್ರ ಸಂಘಟನೆಯ ಕಮಾಂಡರ್ನನ್ನು ಕೊಂದಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ದಯೀಷ್ ಉಗ್ರರು ಮಕ್ಕಳು ಸೇರಿದಂತೆ 30 ಕುರಿಗಾಹಿಗಳನ್ನು ಮಂಗಳವಾರ ಸಂಜೆಯ ಹೊತ್ತಿಗೆ ಅಪಹರಿಸಿ ಕೊಂದು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತದೇಹಗಳನ್ನು ಸ್ಥಳೀಯರು ಬುಧವಾರ ಗುರುತಿಸಿದ್ದಾರೆ.[೬]
|
ಬಿಎಸ್ಎಫ್ ಯೋಧನನ್ನು ಕೊಂದು ದೇಹವನ್ನು ತುಂಡರಿಸಿದ ಪಾಕ್
- ಜಮ್ಮು ಕಾಶ್ಮೀರದ ಮಚ್ಚಲ್ ಪ್ರದೇಶ:ಇಲ್ಲಿನ ಕುಪ್ವಾರ ಜಿಲ್ಲೆಯ ಮಚ್ಚಲ್ ಪ್ರದೇಶದಲ್ಲಿ ಶುಕ್ರವಾರ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಮತ್ತು ಗಡಿರಕ್ಷಣಾ ದಳ ಯೋಧರೊಬ್ಬರು ಹತ್ಯೆಗೀಡಾಗಿದ್ದಾರೆ. ಮಚ್ಚಲ್ ಪ್ರದೇಶದ ಗಡಿನಿಯಂತ್ರಣಾ ರೇಖೆ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿದಾಗ ಉಭಯ ರಾಷ್ಟ್ರಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆ ವೇಳೆ ಪಾಕ್ ಉಗ್ರರು ಬಿಎಸ್ಎಫ್ ಯೋಧನ ಮೇಲೆ ದಾಳಿ ನಡೆಸಿ ಆತನ ದೇಹವನ್ನು ತುಂಡು ತುಂಡು ಮಾಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಪಲಾಯನ ಮಾಡಿದ್ದಾರೆ. ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸುವ ಮೂಲಕ ಉಗ್ರರು ಪರಾರಿಯಾಗಲು ಸಹಾಯ ಮಾಡಿದೆ ಎಂದು ಭಾರತೀಯ ಸೇನೆ ದೂರಿದ್ದು, ಗಡಿಭಾಗದಲ್ಲಿ ಪಾಕ್ ಸೇನೆ ಪ್ರೇರೇಪಿತ ಉಗ್ರ ಕೃತ್ಯ ಇದಾಗಿದೆ. ಈ ಬರ್ಬರ ಕೃತ್ಯಕ್ಕೆ ಪಾಕ್ ತಕ್ಕ ಬೆಲೆ ತೆರಬೇಕಾಗುತ್ತದೆ ಗುಡುಗಿದೆ.[೭]
|
232 ಜನರ ಹತ್ಯೆ
- 29 Oct, 2016
- ಇರಾಕ್ನ ಮೋಸುಲ್ ನಗರದ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಐಎಸ್ ಉಗ್ರರ ನರಮೇಧ ಕಡಿಮೆಯಾಗುತ್ತಿಲ್ಲ. ಈ ಒಂದು ವಾರದಲ್ಲಿ 232 ಜನರನ್ನು ಐಎಸ್ ಉಗ್ರರು ಸಾಯಿಸಿದ್ದಾರೆ. ‘ಉಗ್ರರು ಕಳೆದ ಬುಧವಾರ 232 ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಇವರಲ್ಲಿ 190 ಮಂದಿ ಇರಾಕ್ ಭದ್ರತಾ ಪಡೆಯ ಮಾಜಿ ಅಧಿಕಾರಿಗಳು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ‘ಇತ್ತೀಚಿನ ದಿನಗಳಲ್ಲಿ ಹತ್ಯೆಯಾದ ಜನರ ಸಂಖ್ಯೆ ಹೆಚ್ಚಿದೆ’ ಎಂದು ವಕ್ತಾರೆ ರವೀನಾ ಶಾಮ್ದಸಾನಿ ಹೇಳಿದ್ದಾರೆ. ‘ಐಎಸ್ ಉಗ್ರರು ನಾಗರಿಕರ ಶಿರಚ್ಛೇದ ಮಾಡುತ್ತಿದ್ದಾರೆ. ಉಗ್ರರ ಹೋರಾಟದ ಕೊನೆಯ ನೆಲವಾಗಿ ಉಳಿದಿರುವ ಇರಾಕ್ನ ಉತ್ತರ ನಗರ ಮೋಸುಲ್ನಿಂದ ಜನರನ್ನು ಒತ್ತಾಯಪೂರ್ವಕವಾಗಿ ಸ್ಥಳಾಂತರ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.232 ಜನರ ಹತ್ಯೆ
|
;ಪತನದತ್ತ ಐಎಸ್
- 7 Nov, 2016;ಇರಾಕ್;
- ಮೋಸುಲ್ಗೆ ಇರಾಕ್ ಸೇನೆ ಮುತ್ತಿಗೆ: ಪತನದತ್ತ ಐಎಸ್:
- 2014ರ ಜೂನ್ನಲ್ಲಿ ಮೋಸುಲ್ ನಗರವನ್ನು ಐಎಸ್ ಉಗ್ರರು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿ ಇರಾಕ್ನ ಸೇನೆ ಈ ನಗರವನ್ನು ಪ್ರವೇಶಿಸಿದೆ. ಇರಾಕ್ನಲ್ಲಿ ಐಎಸ್ ಉಗ್ರರ ಪ್ರಾಬಲ್ಯ ಇರುವ ಪ್ರಮುಖ ಪ್ರದೇಶ ಇದು. ಹಾಗಾಗಿ ಅದರ ಮೇಲಿನ ಹಿಡಿತ ಉಳಿಸಿಕೊಳ್ಳಲು ಐಎಸ್ ಶಕ್ತಿಮೀರಿ ಶ್ರಮಿಸುತ್ತಿದೆ. ಮೋಸುಲ್ ನಗರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಐಎಸ್ ಭಾರಿ ಪ್ರಬಲ ಗುಂಪು ಎಂಬ ಭಾವನೆ ಸೃಷ್ಟಿಯಾಗಿತ್ತು. ಆದರೆ 2015ರ ಆರಂಭದಿಂದಲೇ ಐಎಸ್ನ ಶಕ್ತಿ ಕುಂದತೊಡಗಿದೆ. 2016ರ ಮೊದಲ ಆರು ತಿಂಗಳಲ್ಲಿ ಐಎಸ್ ತನ್ನ ನಿಯಂತ್ರಣದಲ್ಲಿದ್ದ ಶೇ 12ರಷ್ಟು ಪ್ರದೇಶವನ್ನು ಕಳೆದುಕೊಂಡಿದೆ ಎಂದು ಸಂಘರ್ಷ ವಿಶ್ಲೇಷಣಾ ಸಂಸ್ಥೆ ಐಎಚ್ಎಸ್ ಹೇಳಿದೆ. 2015ರಲ್ಲಿ 12,800 ಚದರ ಕಿಲೋಮೀಟರ್ ಪ್ರದೇಶದ ಮೇಲಿನ ಹಿಡಿತವನ್ನು ಐಎಸ್ ಕಳೆದುಕೊಂಡಿತು. ಐಎಸ್ ಪ್ರಾಬಲ್ಯದ ಪ್ರದೇಶ 78 ಸಾವಿರ ಚದರ ಕಿಲೋಮೀಟರ್ಗೆ ಇಳಿಯಿತು. 2016ರ ಜುಲೈ ಹೊತ್ತಿಗೆ ಇದು 68,300 ಚದರ ಕಿಲೋಮೀಟರ್ಗೆ ಕುಸಿಯಿತು.[೮]
- ವಿವರಕ್ಕೆ:[೧]
|
ಮೊಸೂಲ್ನಲ್ಲಿ 60 ಕೊಲೆ
- ನವೆಂಬರ್ 11, 2016 19:33
- ಐಸ್ ಮೊಸೂಲ್ನಲ್ಲಿ 60 ಜನರನ್ನು ಕೊಂದಿದ್ದಾರೆ, ಸಂತ್ರಸ್ತರಿಗೆ ಕಿತ್ತಳೆ ಬಣ್ಣದ ಬಟ್ಟೆ ಧರಿಸುತ್ತಾರೆ ಮತ್ತು 'ದ್ರೋಹಿಗಳು'ಎಂದು ಗುರುತು ಹಾಕಿದ್ದಾರೆ.
- ಇಸ್ಲಾಮಿಕ್ ರಾಜ್ಯ ಗುಂಪಿನ ಕಾದಾಳಿಗಳು ವರದಿಯಂತೆ ಈ ವಾರ 60 ಜನರು ಗುಂಡಿಕ್ಕಿ ಸಾಯಿಸಿದ್ದಾರೆ ಅವರು ಇರಾಕಿನ ಪಡೆಗಳ ಸಹಯೋಗವನ್ನು ಹೊಂದಿದ್ದರೆಂದು ಆರೋಪಿಸಿ, ನಂತರ ಅವರ ದೇಹಗಳನ್ನು ಕಂಬಕ್ಕೆ ನೇತುದ್ದಾರೆ,ಎಂದು ವಿಶ್ವಸಂಸ್ಥೆಯವರು ತಿಳಿಸಿದ್ದಾರೆ.[೯]
|
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಬಾಂಬ್ ಸ್ಫೋಟ
- 12 Nov, 2016 ಶನಿವಾರ:
- ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಯಾತ್ರಾಸ್ಥಳಕ್ಕೆ ಶುಕ್ರವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಗಳು ಬರುತ್ತಾರೆ. ಶುಕ್ರವಾರ ಬರುವ ಯಾತ್ರಿಗಳು ಶನಿವಾರ ಇಲ್ಲಿಂದ ಹಿಂದಿರುಗುತ್ತಾರೆ. ಯಾತ್ರಿಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎನ್ನಲಾಗಿದೆ.
- ಯಾತ್ರಾಸ್ಥಳಕ್ಕೆ ಹೋಗಿ ಬರುವ ಮಾರ್ಗ ಅಷ್ಟು ಅನುಕೂಲಕರವಾಗಿಲ್ಲ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕರಾಚಿಗೆ ಕಳಿಸಲಾಗಿದೆ ಎಂದು ‘ಡಾನ್’ ವರದಿ ಮಾಡಿದೆ.[೧೦]
|
ನಿಯಂತ್ರಣ ರೇಖೆಯ ಉದ್ದಕ್ಕೂ ಭ��ಗಿಲೆದ್ದ ಉದ್ವಿಗ್ನ ಪರಿಸ್ಥಿತಿ
- 24 Nov, 2016;ಯೋಧನ ಶಿರಚ್ಛೇದ ಅಮಾನುಷ;
- ಕಾಶ್ಮೀರದ ಉರಿ ಬಳಿ ನಮ್ಮ ಸೇನಾ ನೆಲೆ ಮೇಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ದಾಳಿಯ ನಂತರ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭುಗಿಲೆದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿಲ್ಲ. ಆ ದಾಳಿಗೆ ಉತ್ತರವಾಗಿ ನಮ್ಮ ಸೇನೆ ‘ನಿರ್ದಿಷ್ಟ ದಾಳಿ’ ನಡೆಸಿ ಪಾಕಿಸ್ತಾನದ ನಾಲ್ಕು ಸೇನಾ ನೆಲೆಗಳನ್ನು ನಾಶಪಡಿಸಿತ್ತು. ಅಲ್ಲದೆ ಕೆಲ ಉಗ್ರರನ್ನೂ ಹತ್ಯೆ ಮಾಡಿತ್ತು. ಮಂಗಳವಾರ ಬೆಳಗಿನ ಜಾವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಾಚಿಲ್ ವಲಯದ ಬಳಿ ಗಡಿ ನಿಯಂತ್ರಣ ರೇಖೆ ದಾಟಿ ಒಳಗೆ ಬಂದ ಪಾಕ್ ಸೇನೆಯ ಗಡಿ ಕ್ರಿಯಾ ತಂಡ (ಬಿಎಟಿ) ನಮ್ಮ ಸೇನೆಯ ಗಸ್ತು ತುಕಡಿಯ ಮೂವರು ಯೋಧರನ್ನು ಕೊಂದು ಹಾಕಿದೆ. ಅಷ್ಟೇ ಅಲ್ಲದೆ, ಇವರ ಪೈಕಿ ಒಬ್ಬ ಯೋಧನ ತಲೆ ಕತ್ತರಿಸಿದೆ.
- ಇಷ್ಟೊಂದು ಪೈಶಾಚಿಕವಾಗಿ ಅದು ವರ್ತಿಸುತ್ತಿರುವುದು ಮೂರು ವಾರಗಳ ಅವಧಿಯಲ್ಲಿ ಇದು ಎರಡನೇ ಸಲ. ಕಳೆದ ತಿಂಗಳು 28ರಂದು ಕೂಡ ಪಾಕ್ ಯೋಧರು ನಮ್ಮ ಒಬ್ಬ ಯೋಧನ ಶಿರಚ್ಛೇದ ಮಾಡಿದ್ದರು. ಅದಕ್ಕಿಂತಲೂ ಹಿಂದೆ ಅಂದರೆ 1999ರ ಕಾರ್ಗಿಲ್ ಯುದ್ಧದ ವೇಳೆ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಮತ್ತು ಐವರು ಯೋಧರನ್ನು ಪಾಕ್ ಸೈನಿಕರು ಕ್ರೂರವಾಗಿ ಹಿಂಸಿಸಿ ಕೊಂದಿದ್ದರು. ಅಂಗಾಂಗಗಳನ್ನು ಕತ್ತರಿಸಿ ಹಾಕಿದ್ದರು. ಇಂತಹ ನಡವಳಿಕೆ ಅತ್ಯಂತ ಖಂಡನೀಯ. ತೀರಾ ಅಮಾನವೀಯ. ಪಾಕ್ ಗಡಿ ಕ್ರಿಯಾ ತಂಡದಲ್ಲಿ ಅಲ್ಲಿನ ಸೈನಿಕರ ಜತೆಗೆ ಲಷ್ಕರ್, ಹಿಜಬುಲ್ ಮುಜಾಹಿದೀನ್, ಜೈಷ್ ಎ ಮೊಹಮ್ಮದ್ ಮುಂತಾದ ಕುಖ್ಯಾತ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ ಉಗ್ರಗಾಮಿಗಳೂ ಇದ್ದಾರೆ. ಭಾರತದ ಗಡಿಯೊಳಗೆ ನುಗ್ಗಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ತರಬೇತಿ ಪಡೆದ ಈ ಉಗ್ರರಿಗೆ ಮಾನವೀಯತೆ ಇಲ್ಲ.[೧೧]
|
ನಭ ಜೈಲಿಗೆ ನುಗ್ಗಿದ 10 ಮಂದಿ ಬಂದೂಕುಧಾರಿಗಳು
- 27 Nov, 2016;ನಭ ಜೈಲಿಗೆ ನುಗ್ಗಿದ 10 ಮಂದಿ ಬಂದೂಕುಧಾರಿಗಳು: ಖಲಿಸ್ತಾನ್ ಲಿಬರೇಷನ್ ಫೋರ್ಸ್ನ 6 ಮಂದಿ ಪರಾರಿ:
- ಪಂಜಾಬ್ನ ನಭ ಜೈಲಿಗೆ ಭಾನುವಾರ ಬೆಳಿಗ್ಗೆ ನುಗ್ಗಿದ 10 ಮಂದಿ ಬಂದೂಕುಧಾರಿಗಳು ಖಲಿಸ್ತಾನ್ ಲಿಬರೇಷನ್ ಫೋರ್ಸ್ನ (ಕೆಎಲ್ಎಫ್) ಸ್ವಯಂಘೋಷಿತ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಅಲಿಯಾಸ್ ಮಿಂಟೂ ಸೇರಿದಂತೆ ಆರು ಮಂದಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರ ಉಡುಪಿನಲ್ಲಿದ್ದ 10 ಮಂದಿ ಬಂದೂಕುಧಾರಿಗಳು ಜೈಲಿಗೆ ನುಗ್ಗಿ ಸುಮಾರು 200 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಸಿಖ್ ದಂಗೆ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಹರ್ಮಿಂದರ್ ಸಿಂಗ್ನನ್ನು 2014ರಲ್ಲಿ ಬಂಧಿಸಲಾಗಿತ್ತು.[೧೨]
- 29 Nov, 2016
- ಪಂಜಾಬ್ನ ನಾಭಾ ಜೈಲಿನಿಂದ ಭಾನುವಾರ ಬೆಳಗ್ಗೆ ಪರಾರಿ ಆಗಿದ್ದ ಖಲಿಸ್ತಾನ ಲಿಬರೇಷನ್ ಫ್ರಂಟ್ನ (ಕೆಎಲ್ಎಫ್) ಮುಖ್ಯಸ್ಥ ಹರಮಿಂದರ್ ಸಿಂಗ್ ಮಿಂಟೂನನ್ನು ಪರಾರಿಯಾದ ಕೆಲವೇ ತಾಸುಗಳಲ್ಲಿ ಬಂಧಿಸಲಾಗಿದೆ. ಇಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಈತನನ್ನು ಬಂಧಿಸಲಾಗಿದೆ. ಈತ ಮಲೇಷ್ಯಾ ಅಥವಾ ಜರ್ಮನಿಗೆ ತೆರಳಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.[೧೩]
|
;ಕಾಶ್ಮೀರದ ನಗ್ರೋಟಾ ಗಡಿ ಪ್ರದೇಶ:ಉಗ್ರರ ದಾಳಿ
- ಪೊಲೀಸ್ ವೇಷದಲ್ಲಿದ್ದ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ಸೈನಿಕರು ಹತರಾಗಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ಜಮ್ಮುವಿನ ನಗ್ರೋಟಾ ಗಡಿ ಪ್ರದೇಶದಲ್ಲಿ ನಡೆದಿದೆ. ನಾಲ್ಕು ಮಂದಿ ಉಗ್ರರು ಹತ್ಯೆಯಾಗಿರುವ ವರದಿಗಳು ಪ್ರಕಟವಾಗಿದ್ದು, ಖಚಿತ ಮಾಹಿತಿ ಲಭ್ಯವಾಗಿಲ್ಲ. ಸೇನೆಯ ಹಿರಿಯ ಅಧಿಕಾರಿಯೊಬ್ಬರು, ‘ಉಗ್ರರ ದಾಳಿಯಿಂದಾಗಿ 166 ಫಿರಂಗಿ ಘಟಕಗಳು ಧ್ವಂಸ ವಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಸೈನಿಕರು ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯಗಳಾಗಿವೆ.[೧೪]
|
ನಗರೋಟಾ ಸೇನಾ ಘಟಕದ ಮೇಲೆ ಧಾಳಿ
- 30 Nov, 2016;
- 16–ಕೋರ್ ವಿಭಾಗದ ಜಮ್ಮು ವಲಯದ ಕೇಂದ್ರ ಕಾರ್ಯಾಲಯಕ್ಕೆ ಸಮೀಪದಲ್ಲಿರುವ ನಗರೋಟಾ ಸೇನಾ ಘಟಕದ ಮೇಲೆ ಮಂಗಳವಾರ ಮುಂಜಾನೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಏಳು ಜನ ಯೋಧರು ಪ್ರಾಣ ಕಳೆದು ಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ. ಭಾರಿ ಪ್ರಮಾಣದಲ್ಲಿ ಶಸ್ತ್ರಸಜ್ಜಿತರಾಗಿದ್ದ, ಪೊಲೀಸ್ ಸಮವಸ್ತ್ರದಲ್ಲಿದ್ದ ಆರು ಉಗ್ರರು ನಗರೋಟಾದಲ್ಲಿನ ಸೇನಾ ಘಟಕದ ಮೇಲೆ ಬೆಳಿಗ್ಗೆ 5.30ರ ಸುಮಾರಿಗೆ ದಾಳಿ ನಡೆಸಿದರು.
- ‘ಸೇನಾ ಘಟಕದ ಮೇಲೆ ದಾಳಿ ನಡೆಸಿದ ಉಗ್ರರು ಮೊದಲು ಗ್ರೆನೇಡ್ ದಾಳಿ ನಡೆಸಿದರು, ಕಾವಲಿಗೆ ನಿಂತಿದ್ದ ಸೈನಿಕರ ಮೇಲೆ ಗುಂಡು ಹಾರಿಸಿದರು. ತಕ್ಷಣ ಯೋಧರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಅಧಿಕಾರಿ ಹಾಗೂ ಮೂವರು ಸೈನಿಕರು ಹುತಾತ್ಮರಾದರು’
- ‘ನಂತರ ಸೇನಾಧಿಕಾರಿಗಳು, ಅವರ ಕುಟುಂಬದ ಸದಸ್ಯರು ಹಾಗೂ ಸೈನಿಕರು ಇರುವ ಕಟ್ಟಡಕ್ಕೆ ಉಗ್ರರು ನುಗ್ಗಿದರು. ಆಗ ಕೆಲ ಕಾಲ ಅಲ್ಲಿ ಒತ್ತೆಯಂತಹ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು, 12 ಜನ ಸೈನಿಕರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಕಟ್ಟಡದಿಂದ ಹೊರತಂದರು’ ಎಂದು ಜೋಷಿ ಹೇಳಿದರು.ಆದರೆ ಇವರನ್ನು ಕಾಪಾಡುವ ಕಾರ್ಯಾಚರಣೆಯಲ್ಲಿ ಇನ್ನೊಬ್ಬ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾದರು ಎಂದು ಮಾಹಿತಿ ನೀಡಿದರು. ಮೂರು ಉಗ್ರರ ಮೃತದೇಹಗಳು ಸಿಕ್ಕಿವೆ. ಕಾರ್ಯಾಚರಣೆ ಮುಂದುವರಿದಿದೆ.[೧೫]
|
;ಆತ್ಮಹತ್ಯಾ ದಾಳಿ: 48 ಯೋಧರ ಸಾವು
- 19 Dec, 2016;ಅಡೆನ್ನ ಈಶಾನ್ಯ ಭಾಗದ ಸೇನಾಶಿಬಿರವೊಂದರ ಹೊರಭಾಗದಲ್ಲಿ ಭಾನುವಾರ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರನೊಬ್ಬ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 48 ಮಂದಿ ಯೆಮನ್ ಯೋಧರು ಸಾವನ್ನಪ್ಪಿದ್ದಾರೆ. ಸೇನಾಶಿಬಿರದ ಬಳಿ ವೇತನ ಪಡೆಯಲು ಬಂದ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆ¬¬¬ಸಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ‘ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.[೧೬]
|
;ಶಂಕಿತ ಉಗ್ರರಿಂದ ಬ್ಯಾಂಕ್ ಲೂಟಿ
- 8 Dec, 2016:
- ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಶಂಕಿತ ಉಗ್ರರು ಬ್ಯಾಂಕ್ ಲೂಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಶ್ಮಿರದಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್ ಲೂಟಿಯಾಗಿದೆ. ನಾಲ್ವರು ಮುಸುಕುಧಾರಿಗಳು ಪುಲ್ವಾಮ ಜಿಲ್ಲೆಯಲ್ಲಿನ ಅರಿಹಾಲ್ನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ ಶಾಖೆಗೆ ನುಗ್ಗಿ ಗುಂಡಿನಮಳೆಗರೆದು ನಗದು ದೋಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಗದು ಕೌಂಟರ್ನಿಂದ ಹಣ ದೋಚಿದ ಶಂಕಿತರು ಅಲ್ಲಿಂದ ಪರಾರಿ ಆಗುವ ಮುನ್ನ ಐದರಿಂದ ಆರು ಸುತ್ತು ಗುಂಡಿನ ದಾಳಿ ನಡೆಸಿದರು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಶಂಕಿತ ಉಗ್ರರು ಅಂದಾಜು ರೂ.10 ಲಕ್ಷ ದೋಚಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಉಗ್ರರು ನ.21ರಂದು ಮಧ್ಯಕಾಶ್ಮೀರದ ಛೋಹರ್ –ಇ–ಷರೀಫ್ ಪ್ರದೇಶದ ಬ್ಯಾಂಕ್ನಿಂದ ರೂ.13 ಲಕ್ಷ ಲೂಟಿ ಮಾಡಿದ್ದರು.[೧೭]
|
;ಉಗ್ರರ ಧಾಳಿ *18 Dec, 2016
- ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ನ ಜನದಟ್ಟಣೆ ಪ್ರದೇಶದಲ್ಲಿ ಶನಿವಾರ ಸೇನಾಪಡೆ ಸಿಬ್ಬಂದಿ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಸೇನಾಪಡೆ ಅಧಿಕಾರಿ ತಿಳಿಸಿದ್ದಾರೆ. ಪಾಂಪೋರ್ನ ಕದ್ಲಬಾಲ್ನಲ್ಲಿ ಮಧ್ಯಾಹ್ನ 3.15ರ ವೇಳೆಗೆ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಉಗ್ರರು, ಸೇನಾಪಡೆ ಸಿಬ್ಬಂದಿ ಇದ್ದ ವಾಹನದ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ನಾಗರಿಕರಿಗೆ ಪ್ರಾಣಹಾನಿಯಾಗುವುದನ್ನು ತಪ್ಪಿಸಲು ಪ್ರತಿದಾಳಿ ನಡೆಸಲಿಲ್ಲ. ಜನದಟ್ಟಣೆಯ ಲಾಭ ಪಡೆದ ಉಗ್ರರು ಪರಾರಿಯಾದರು’ ಎಂದು ಸಿಆರ್ಪಿಎಫ್ ಐಜಿ (ಕಾರ್ಯಾಚರಣೆ) ಹೇಳಿದ್ದಾರೆ.[೧೮]
|
;ಆತ್ಮಹತ್ಯಾ ಬಾಂಬ್ ದಾಳಿ
ಅಡೆನ್ನ ಈಶಾನ್ಯ ಭಾಗದ ಸೇನಾಶಿಬಿರವೊಂದರ ಹೊರಭಾಗದಲ್ಲಿ ಭಾನುವಾರ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರನೊಬ್ಬ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 48 ಮಂದಿ ಯೆಮನ್ ಯೋಧರು ಸಾವನ್ನಪ್ಪಿದ್ದಾರೆ.ಸೇನಾಶಿಬಿರದ ಬಳಿ ವೇತನ ಪಡೆಯಲು ಬಂದ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆ¬¬¬ಸಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.‘ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ’ಅಡೆನ್ನ ವಿಶೇಷ ಭದ್ರತಾ ಪಡೆ ಕಚೇರಿ ಹೊರಭಾಗದಲ್ಲಿ ಯೋಧರು ಒಟ್ಟಾಗಿ ಸೇರಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಐಎಸ್ ಈ ದಾಳಿ ಹೊಣೆಯನ್ನು ವಹಿಸಿಕೊಂಡಿದ್ದು, ದಾಳಿಕೋರನನ್ನು ‘ಹುತಾತ್ಮ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.[೧೯]
|
ಟರ್ಕಿಯಲ್ಲಿ ರಷ್ಯಾ ರಾಯಭಾರಿ ಕೊಲೆ
- 20 Dec, 2016
- ಟರ್ಕಿಯ ಅಂಕಾರಾದಲ್ಲಿ ಅಂಕಾರಕ್ಕೆ ರಷ್ಯಾ ರಾಯಭಾರಿಯಾಗಿರುವ ಆಂಡ್ರ್ಯೂ ಕರ್ಲೋವ್ ಅವರನ್ನು ಅಂಗರಕ್ಷಕನೇ ಹತ್ಯೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಕಲಾ ಗ್ಯಾಲರಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕರ್ಲೋವ್ ಮೇಲೆ ಈ ದಾಳಿ ನಡೆದಿದೆ. ಅಂಗರಕ್ಷಕ ಗುಂಡು ಹಾರಿಸುತ್ತಿದ್ದಂತೆ ‘ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ’ ಎಂದು ಕೂಗಿಕೊಂಡ ಎಂದು ವರದಿಯಾಗಿದೆ. ‘ಗಾಯಗೊಂಡಿದ್ದ ಕರ್ಲೋವ್ ಅವರು ನಿಧನ ಹೊಂದಿದ್ದಾರೆ. ಇದನ್ನು ನಾವು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿದ್ದೇವೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.[೨೦]
|
;ಜರ್ಮನಿಯಲ್ಲಿ ಟ್ರಕ್ ಹರಿಸಿ 12 ಜನರ ಹತ್ಯೆ
- 21 Dec, 2016
- ಬರ್ಲಿನ್ನಲ್ಲಿ ಇಲ್ಲಿನ ಜನನಿಬಿಡ ಕ್ರಿಸ್ಮಸ್ ಮಾರುಕಟ್ಟೆಯೊಂದರಲ್ಲಿ ಶಂಕಿತ ಪಾಕಿಸ್ತಾನಿ ಯುವಕನೊಬ್ಬ ಯದ್ವಾತದ್ವಾ ಟ್ರಕ್ ಚಲಾಯಿಸಿದ ಪರಿಣಾಮ 12 ಜನ ಮೃತಪಟ್ಟು, 48 ಮಂದಿ ಗಾಯಗೊಂಡಿದ್ದಾರೆ. ದಾಳಿಕೋರ, ಜರ್ಮನಿಯ ಆಶ್ರಯ ಅರಸಿ ಬಂದಿರುವ ವ್ಯಕ್ತಿ ಎಂದು ಶಂಕಿಸಲಾಗಿದೆ.
- ಪೋಲೆಂಡ್ನ ನೋಂದಣಿ ಸಂಖ್ಯೆ ಹೊಂದಿರುವ ಟ್ರಕ್ ಇಲ್ಲಿನ ಕೈಸರ್ ವಿಲ್ಹೆಲ್ಮ್ ಸ್ಮಾರಕ್ ಸರ್ಚ್ ಎದುರು ಇರುವ ಸಾಂಪ್ರದಾಯಿಕ ಕ್ರಿಸ್ಮಸ್ ಮಾರುಕಟ್ಟೆಗೆ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ ವೇಳೆಗೆ ನುಗ್ಗಿದೆ. ಈ ಸಂದರ್ಭ ಅಲ್ಲಿ ನೂರಾರು ಜನ ಸೇರಿದ್ದರು. ಮಾರುಕಟ್ಟೆಯೊಳಕ್ಕೆ ಸುಮಾರು 50ರಿಂದ 80 ಮೀಟರ್ ದೂರದವರೆಗೆ ಟ್ರಕ್ ನುಗ್ಗಿದ್ದರಿಂದ ಅನೇಕ ಅಂಗಡಿಗಳಿಗೂ ಹಾನಿಯಾಗಿದೆ.[೨೧]
|
;ಟರ್ಕಿಯಲ್ಲಿ ಗುಂಡಿನ ದಾಳಿ
- 2 Jan, 2017-ಸೋಮವಾರ:
- ಟರ್ಕಿಯ ಇಸ್ತಾಂಬುಲ್ನ ಕ್ಲಬ್ವೊಂದರಲ್ಲಿ ಶನಿವಾರ ತಡರಾತ್ರಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೃತ ಪಟ್ಟ 39 ಜನರ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ.ಮೃತಪಟ್ಟವರನ್ನು ಬಾಲಿವುಡ್ ನಿರ್ಮಾಪಕ ಅಬಿಸ್ ರಿಜ್ವಿ ಮತ್ತು ಗುಜರಾತ್ನ ಖುಷಿ ಷಾ ಎಂದು ಗುರುತಿಸಲಾಗಿದೆ. ಅಬಿಸ್ ರಿಜ್ವಿ ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಎನ್ಸಿಪಿ ಪ್ರಧಾನ ಕಾರ್ಯದರ್ಶಿ ಎ.ಎಚ್. ರಿಜ್ವಿ ಮಗ. ರಿಜ್ವಿ ಸಮೂಹ ಸಂಸ್ಥೆಗಳ ನಿರ್ದೇಶಕ ಮತ್ತು ಸಿಇಒ ಆಗಿದ್ದಾರೆ.[೨೨]
- ಟರ್ಕಿಯ ಇಸ್ತಾಂಬುಲ್ ನ ರೀನಾ ನೈಟ್ಕ್ಲಬ್ನ ಮೇಲೆ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಖಲೀಫನ ಸೈನಿಕರು ಈ ದಾಳಿ ನಡೆಸಿದ್ದಾರೆ ಎಂದು ಜಿಹಾದಿ ತಂಡವು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
- "ಮುಸಲ್ಮಾನರು ಬಹುಸಂಖ್ಯಾತ ರಾಗಿರುವ ರಾಷ್ಟ್ರವು ಕ್ರೈಸ್ತರ ಅಡಿಯಾಳುಗಳಂತೆ ಕೆಲಸ ಮಾಡುತ್ತಿದೆ. ಸಿರಿಯಾ ಹಾಗೂ ಇರಾಕ್ನಲ್ಲಿ ಐಎಸ್ ವಿರುದ್ಧದ ಹೋರಾಟಕ್ಕೆ ಅಂತರರಾಷ್ಟ್ರೀಯ ಒಕ್ಕೂಟದ ಜತೆಗೆ ಅಂಕಾರ ಕೈ ಜೋಡಿಸಲು ಮುಂದಾಗಿರುವುದಕ್ಕೆ ಪ್ರತಿಯಾಗಿ ಈ ದಾಳಿ" ನಡೆಸಿರುವುದಾಗಿ ತಿಳಿಸಿದೆ. ನೈಟ್ಕ್ಲಬ್ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರನ ಪತ್ತೆಗಾಗಿ ಟರ್ಕಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಇಸ್ತಾಂಬುಲ್ನ ಅಟಾಟುರ್ಕ್ ವಿಮಾನ ನಿಲ್ದಾಣದ ಮೇಲೆ ತ್ರಿವಳಿ ಬಾಂಬ್ ಸ್ಫೋಟ ನಡೆಸಿದ ದಾಳಿಕೋರರೊಂದಿಗೆ ನೈಟ್ಕ್ಲಬ್ ದಾಳಿಕೋರನಿಗೆ ನಂಟು ಇರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
- ರಾತ್ರಿ ಮೋಜಿಗೆ ಪ್ರಸಿದ್ಧವಾಗಿರುವ ರೀನಾ ಕ್ಲಬ್ ದ್ವಾರದಲ್ಲಿ ನಿಂತಿದ್ದ ಒಬ್ಬ ಪೊಲೀಸ್ ಮತ್ತು ನಾಗರಿಕರೊಬ್ಬರನ್ನು ಹತ್ಯೆ ಮಾಡಿದ ಸಾಂಟಾಕ್ಲಾಸ್ ದಿರಿಸಿನಲ್ಲಿದ್ದ ಬಂದೂಕುಧಾರಿ, ಕ್ಲಬ್ ಒಳಗಡೆ ನುಗ್ಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದನು. ದಾಳಿಕೋರ 120 ಗುಂಡು ಹಾರಿಸಿದ್ದು, ಬಟ್ಟೆ ಬದಲಾಯಿಸಿ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದನು ಎಂದು ವಿಶೇಷ ಪೊಲೀಸ್ ಪಡೆ ಅನುಮಾನ ವ್ಯಕ್ತಪಡಿಸಿದೆ. ದಾಳಿಯಲ್ಲಿ ಇಬ್ಬರು ಭಾರತೀಯರೂ ಸೇರಿದಂತೆ 16 ವಿದೇಶಿಯರು ಮೃತಪಟ್ಟಿದ್ದರು. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ನಡೆದಾಗ ಕ್ಲಬ್ನಲ್ಲಿ ಸುಮಾರು 700 ಜನರು ಇದ್ದರು ಎನ್ನಲಾಗಿದೆ. ನೈಟ್ಕ್ಲಬ್ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಸ್ತಾಂಬುಲ್ನ ಭಯೋತ್ಪಾದನಾ ನಿಗ್ರಹ ದಳ ಸೋಮವಾರ 8 ಮಂದಿ ಶಂಕಿತರನ್ನು ಬಂಧಿಸಿದೆ.[೨೩]
|
;ಶಂಕಿತನ ಬಂಧನ
- ಇಸ್ತಾಂಬುಲ್ನಲ್ಲಿ ಹೊಸ ವರ್ಷಾಚರಣೆ ವೇಳೆ 39 ಮಂದಿ ಬಲಿಯಾದ ಇಸ್ತಾಂಬುಲ್ನ ನೈಟ್ಕ್ಲಬ್ ಮೇಲಿನ ದಾಳಿ ಪ್ರಕರಣ ಸಂಬಂಧ ಟರ್ಕಿ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದಾರೆ.ಶಂಕಿತನು ಇಸ್ತಾಂಬುಲ್ನ ಎಸೆನ್ಯುರ್ಟ್ ಜಿಲ್ಲೆಯ ಮನೆಯೊಂದರಲ್ಲಿ ನಾಲ್ಕುವರ್ಷದ ಮಗನೊಂದಿಗೆ ಅವಿತುಕೊಂಡಿದ್ದ. ಘಟನೆ ಬಳಿಕ ಪೊಲೀಸರು ದಾಳಿಕೋರರ ಬಂಧನಕ್ಕೆ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಸ್ಥಳೀಯ ಸುದ್ದಿವಾಹಿನಿ ವರದಿಮಾಡಿದೆ. ಶಂಕಿತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ದಾಳಿ ಕುರಿತು ಹಾಗೂ ತಲೆಮರೆಸಿಕೊಂಡಿರುವ ದಾಳಿಕೊರನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಐಷರಾಮಿ ಹಾಗೂ ಅಂತರರಾಷ್ಟ್ರೀಯ ನೈಟ್ ಕ್ಲಬ್ ಎಂದೇ ಹೆಸರಾಗಿರುವ ರೈನಾ ನೈಟ್ ಕ್ಲಬ್ ಮೇಲೆ ಹೊಸ ವರ್ಷಾಚರಣೆಯ ರಾತ್ರಿ ಇಬ್ಬರು ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ 39 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್(ಐಎಸ್) ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿತ್ತು.[೨೪]
|
;ಬಾಗ್ದಾದ್ನಲ್ಲಿ ಬಾಂಬ್ ದಾಳಿ:36 ಬಲಿ
- 3 Jan, 2017
- ಬಾಗ್ದಾದ್: ನಗರದ ಜನನಿಬಿಡ ಪ್ರದೇಶದಲ್ಲಿ ಸೋಮವಾರ ನಡೆದ ಕಾರು ಬಾಂಬ್ ಆತ್ಮಾಹುತಿ ದಾಳಿಯಲ್ಲಿ 36 ಮಂದಿ ಸಾವಿಗೀಡಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ರಾಜಧಾನಿಯ ಈಶಾನ್ಯಭಾಗದಲ್ಲಿರುವ ಶಿಯಾ ಸಮುದಾಯದವರು ಬಹುಸಂಖ್ಯೆಯಲ್ಲಿರುವ ಸರ್ದ್ ಪಟ್ಟಣದಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದ ಕೂಲಿಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 36ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಶನಿವಾರ ಬಾಗ್ದಾದ್ನ ಪ್ರಮುಖ ಮಾರುಕಟ್ಟೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 27 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಐಎಸ್ ನಡೆಸಿತ್ತು[೨೫]
|
;ಫ್ಲೊರಿಡಾದ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ
- 7 Jan, 2017
- ಅಮೆರಿಕದ ಫ್ಲೊರಿಡಾದ ಫೋರ್ಟ್ ಲೌಡರ್ಡೇಲ್ ವಿಮಾನ ನಿಲ್ದಾಣದಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ (ಸ್ಥಳೀಯ ಕಾಲಮಾನ) ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಲಗೇಜ್ ಇಳಿಸಿಕೊಳ್ಳುವ ಪ್ರದೇಶದಲ್ಲಿ (Baggage claim area) ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ. ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಕೋರ ಅಲಾಸ್ಕಾ ಮೂಲದ ಎಸ್ಟೆಬನ್ ಸ್ಯಾಂಟಿಯಾಗೊ (26) ಎಂದು ಗುರುತಿಸಲಾಗಿದೆ. ಈತ ಇರಾಕ್ನ ನ್ಯಾಷನಲ್ ಗಾರ್ಡ್ನಲ್ಲಿ ಸೈನಿಕನಾಗಿದ್ದ. ಸೇವೆ ತೃಪ್ತಿದಾಯಕವಾಗಿಲ್ಲ ಎಂಬ ಕಾರಣ ನೀಡಿ ಕಳೆದ ವರ್ಷ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ. ಎಸ್ಟೆಬನ್ ಸ್ಯಾಂಟಿಯಾಗೊ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಸಹೋದರ ತಿಳಿಸಿದ್ದಾನೆ [೨೬]
|
;ಆಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ
- 11 Jan, 2017
- ಆಫ್ಘಾನಿಸ್ತಾನದ ವಿವಿಧೆಡೆ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟ 56 ಮಂದಿಯಲ್ಲಿ ಐವರು ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಅಧಿಕಾರಿಗಳು ಎಂದು ತಿಳಿದು ಬಂದಿದೆ. ದಕ್ಷಿಣ ಕಂದಹಾರ್ನ ಗವರ್ನರ್ ಕಚೇರಿ ಆವರಣದ ಸೋಫಾದಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಯುಎಇ ಅಧಿಕಾರಿಗಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಬಾಂಬ್ ಸ್ಫೋಟದಲ್ಲಿ ಕಂದಹಾರ್ನ ಗವರ್ನರ್ ಹುಮಾಯುನ್ ಅಜೀಜ್ ಮತ್ತು ಯುಎಇ ರಾಯಭಾರಿ ಜುಮಾ ಮೊಹಮ್ಮದ್ ಅಬ್ದುಲ್ಲ ಅಲ್ ಕಾಬಿ ಗಾಯಗೊಂಡಿದ್ದಾರೆ.
- ಇದಕ್ಕೂ ಮುನ್ನ ಕಾಬೂಲ್ನ ಸಂಸತ್ ಬಳಿ ಸಂಭವಿಸಿದ ಅವಳಿ ಸ್ಫೋಟದಲ್ಲಿ 36 ಮಂದಿ ಮೃತಪಟ್ಟು, 80 ಮಂದಿ ಗಾಯಗೊಂಡಿದ್ದರು. ‘ಅಮೆರಿಕ ಬೆಂಬಲಿತ ಪಡೆಗಳು ಅಲ್–ಕೈದಾ ಮತ್ತು ಐಎಸ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಪ್ರತೀಕಾರವಾಗಿ ತಾಲಿಬಾನ್ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[೨೭]
- ಆಫ್ಘಾನಿಸ್ತಾನದ ಸಂಸತ್ ಭವನದ ಸಮೀಪ ಮಂಗಳವಾರ ಸಂಭವಿಸಿದ ಮೂರು ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 50 ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದು, 80 ಜನರು ಗಾಯಗೊಂಡಿದ್ದಾರೆ. ‘ಮೊದಲ ಸ್ಫೋಟ ಸಂಸತ್ ಭವನದ ಸಮೀಪ ನಡೆಯಿತು. ಎರಡನೇ ಸ್ಫೋಟ ಕಾರ್ ಬಾಂಬ್ನದ್ದು. ರಸ್ತೆಯ ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರ್ ಸ್ಫೋಟಗೊಂಡಿತು’ ಎಂದು ಪ್ರತ್ಯಕ್ಷ್ಯದರ್ಶಿಗಳು ವಿವರಿಸಿದ್ದಾರೆ. ಸ್ಫೋಟದ ಹೊಣೆಯನ್ನು ಆಫ್ಘನ್ ತಾಲಿಬಾನ್ ಉಗ್ರರು ಹೊತ್ತುಕೊಂಡಿದ್ದಾರೆ. ಪ್ರಮುಖ ಬೇಹುಗಾರಿಕಾ ಏಜೆನ್ಸಿಯ ಸಿಬ್ಬಂದಿಯನ್ನು ಗುರಿಯಾಗಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳಿದ್ದಾರೆ.[೨೮]
|
;ಕೆನಡಾದ ಕ್ಯುಬೆಕ್ ಗುಂಡಿನ ದಾಳಿ
- 31 Jan, 2017;: 6 ಮಂದಿ ಬಲಿ;
- ಕೆನಡಾದ ಕ್ಯುಬೆಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ಶಸ್ತ್ರಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ 6 ಮಂದಿ ಸಾವಿಗೀಡಾಗಿದ್ದಾರೆ. ಭಾನುವಾರ ಸಂಜೆ ಪ್ರಾರ್ಥನೆ ವೇಳೆಗೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ದಾಳಿ ನಂತರ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಉಗ್ರರ ಕೃತ್ಯ ಎಂದು ಪೊಲೀಸ್ ಇಲಾಖೆ ವಕ್ತಾರೆ ಕ್ರಿಸ್ಟಿಯನ್ ಕೌಲೊಂಬೆ ತಿಳಿಸಿದ್ದಾರೆ.ರಾತ್ರಿ 7.15ರ ಸುಮಾರಿಗೆ ಈ ದಾಳಿ ನಡೆದಿದ್ದು, ಮೃತರು 35 ರಿಂದ 75 ವರ್ಷದ ಒಳಗಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- ವಲಸಿಗ ಮುಸ್ಲಿಂರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವುದಾಗಿ ಭಾನುವಾರ ಜಸ್ಟಿನ್ ಟ್ರುಡಿ ಹೇಳಿಕೆ ನೀಡಿದ್ದರು, ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ಕೆನಡಾದಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಜೂನ್ ತಿಂಗಳಲ್ಲಿ ಈ ಮಸೀದಿಯೂ ದುಷ್ಕರ್ಮಿಗಳ ಜನಾಂಗೀಯ ಆಕ್ರಮಣಕ್ಕೆ ತುತ್ತಾಗಿತ್ತು.[೨೯]
|
;ಪಾಕ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ
- 16 Feb, 2017
- ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಜನ ಸಾವನ್ನಪ್ಪಿ, 100ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿರುವ ಸೆಹವಾನ್ ಪಟ್ಟಣದ ಸೂಫಿ ಶಹಬಾಜ್ ಕಲಂದರ್ ಪ್ರಾರ್ಥನಾ ಮಂದಿರದ ಬಳಿ ನಡೆದಿದೆ. ಒಂದು ವಾರದ ಅವಧಿಯೊಳಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐದನೇ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ. ಧಮಲ್–ಎ–ಸೂಫಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದಿದ್ದ ನೂರಾರು ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ.
- ಸ್ಫೋಟ ನಡೆದ ಸ್ಥಳ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಧಾರ್ಮಿಕ ಸೂಫಿ ಸಂತತಿಯ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಲಾಲ್ ಶಹಬಾಜ್ ಖಲಂದರ್ ಅವರಿಗೆ ಸೇರಿದೆ. ಸ್ಫೋಟದ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದೆ [೩೦]
- 18 Feb, 2017;ಸಿಂಧ್ ಪ್ರಾಂತ್ಯದಲ್ಲಿ ಲಾಲ್ ಷಹಬಾಜ್ ಖಲಂದರ್ ದರ್ಗಾ ಮೇಲೆ ಗುರುವಾರ ಸಂಜೆ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.[೩೧]
|
;ವೈದ್ಯರ ಸೋಗಿನಲ್ಲಿ ದಾಳಿ: 30 ಸಾವು
- 9 Mar, 2017ಪ್ರಜಾವಾಣಿ ವಾರ್ತೆ;
- ಆಫ್ಘಾನಿಸ್ತಾನದ ಅತಿ ದೊಡ್ಡ ಸೇನಾ ಆಸ್ಪತ್ರೆಗೆ ಬುಧವಾರ ವೈದ್ಯರ ಸೋಗಿನಲ್ಲಿ ನುಗ್ಗಿದ ಐಎಸ್ ಉಗ್ರರು ನಡೆಸಿದ ದಾಳಿಗೆ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಸುಮಾರು 70 ಜನ ಗಾಯಗೊಂಡಿದ್ದಾರೆ. ಇಲ್ಲಿನ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಆಸ್ಪತ್ರೆಗೆ ವೈದ್ಯರಂತೆ ಬಿಳಿಕೋಟು ಧರಿಸಿ ಪ್ರವೇಶಿಸಿದ ದಾಳಿಕೋರರು ಅಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದರು. ಸುಮಾರು ಆರು ಗಂಟೆ ಕಾರ್ಯಾಚರಣೆ ಬಳಿಕ ಭದ್ರತಾ ಸಿಬ್ಬಂದಿ ಉಗ್ರರನ್ನು ಸದೆಬಡಿಯುವಲ್ಲಿ ಸಫಲರಾದರು.
- ಆಸ್ಪತ್ರೆಯೊಳಗಿದ್ದ ವೈದ್ಯಕೀಯ ಸಿಬ್ಬಂದಿ ಸಹಾಯಕ್ಕಾಗಿ ಫೇಸ್ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಮೊರೆಯಿಟ್ಟರು. ಆಸ್ಪತ್ರೆಯ ಹೊರಭಾಗದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ರಾಯಭಾರ ಕಚೇರಿಗಳಿರುವ ಸ್ಥಳದಲ್ಲಿ ಬೆಳಗ್ಗೆ 9 ಗಂಟೆಗೆ ಬಾಂಬ್ ಸ್ಫೋಟ ಸಂಭವಿಸಿದೆ. ಬಳಿಕ ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಒಬ್ಬಾತ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ.
- ನಂತರ ನಾಲ್ವರು ದಾಳಿಕೋರರು ಆಸ್ಪತ್ರೆಗೆ ನುಗ್ಗಿದರು. ಸೇನಾ ಹೆಲಿಕಾಪ್ಟರ್ಗಳು ಆಸ್ಪತ್ರೆ ಕಟ್ಟಡದ ಮೇಲ್ಭಾಗದಲ್ಲಿ ಹಾರಾಡುವಾಗ 10.45ರ ವೇಳೆಗೆ ಮತ್ತೊಂದು ಬಾಂಬ್ ಸ್ಫೋಟ ನಡೆದಿದೆ. ದಾಳಿಯಲ್ಲಿ ಕನಿಷ್ಠ ಐವರು ಆತ್ಮಾಹುತಿ ಬಾಂಬರ್ಗಳು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
- ದಾಳಿಯ ಹೊಣೆಯನ್ನು ಐಎಸ್ ಸಂಘಟನೆ ಹೊತ್ತುಕೊಂಡಿದೆ.[೩೨]
|
;ಸಿರಿಯಾದಲ್ಲಿ ಅವಳಿ ಬಾಂಬ್ ಸ್ಫೋಟ, 44 ಮಂದಿ ಸಾವು
- 11 Mar, 2017
- ಸಿರಿಯಾದ:ಡಮಾಸ್ಕಸ್ನಲ್ಲಿನ ಬಾಬ್ ಮುಸಲ್ಲಾ ಬಳಿಯ ಬಾಬ್–ಅಲ್ ಸಾಗೀರ್ ಪ್ರದೇಶದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಶಿಯಾ ಯಾತ್ರಾರ್ಥಿಗಳು ಸೇರಿದಂತೆ 44 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೆಲವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಬಾಂಬ್ ರಸ್ತೆಯ ಬಳಿ ಬಸ್ ಚಲಿಸುವಾಗ ಸ್ಫೋಟಗೊಂಡಿದೆ. ಮತ್ತೊಂದು ಬಾಂಬರ್ ಶಿಯಾ ಸಮುದಾಯದ ಪವಿತ್ರ ಸ್ಥಳವಾದ ಬಾಬ್ಅಲ್–ಸಾಗೀರ್ ಪ್ರದೇಶದಲ್ಲಿ ಸ್ವತಃ ತಾನೇ ಸ್ಫೋಟಿಸಿಕೊಂಡಿದ್ದಾನೆ.
- ಈ ಸ್ಥಳಕ್ಕೆ ಶಿಯಾ ಸಮುದಾಯಕ್ಕೆ ಸೇರಿದ ಯಾತ್ರಾರ್ಥಿಗಳು ಪ್ರಪಂಚದ ಮೂಲೆ ಮೂಲೆಯಿಂದಲೂ ಆಗಮಿಸುತ್ತಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ಮುಖ್ಯಸ್ಥ ರಾಮೀ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ. ಶಿಯಾಪಂಗಡಕ್ಕೆ ಸೇರಿದ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಅಲ್ಕೈದಾ ಹಾಗೂ ಐಎಸ್ ಸಂಘಟನೆಗೆ ಸೇರಿದ ಸುನ್ನಿ ತೀವ್ರವಾದಿಗಳು ದಾಳಿ ನಡೆಸಿದ್ದಾರೆ.[೩೩]
|
;ಬೆಂಗಳೂರಲ್ಲಿ ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಲ್ಇಟಿ
- 20 Mar, 2017;
- ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣ ಸಂಬಂಧ ಕರ್ನಾಟಕ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಪೊಲೀಸರು ವಶಕ್ಕೆ ಪಡೆದಿರುವ ಶಂಕಿತ ಹಬೀಬ್ ಮಿಯಾ (34), ಈ ವಿಷಯ ಹೇಳಿದ್ದಾನೆ.
|
;ಜೀವಾವಧಿ ಶಿಕ್ಷೆ ವಿಧಿಸಿದ್ದ ಹೈಕೋರ್ಟ್
- ಉಗ್ರರ ದಾಳಿ ವೇಳೆ ಗಣಿತದ ನಿವೃತ್ತ ಪ್ರಾಧ್ಯಾಪಕ ಮುನೀಷ್ಚಂದ್ರ ಪುರಿ ಎಂಬುವರ ಹತ್ಯೆಯಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಚಿಂತಾಮಣಿಯ ನೂರುಲ್ಲಾ ಖಾನ್ ಎಂಬಾತನನ್ನು ಬಿಹಾರದಲ್ಲಿ ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿಯಂತೆ ಆಂಧ್ರಪ್ರದೇಶದ ನೆಲಗೊಂಡದ ಮೊಹಮ್ಮದ್ ರೆಹಮಾನ್ ಅಲಿಯಾಸ್ ಉಮೇಶ್, ಬೆಂಗಳೂರು ಲಕ್ಕಸಂದ್ರದ ಅಫ್ಜರ್ ಪಾಷಾ ಅಲಿಯಾಸ್ ಬಷೀರುದ್ದೀನ್, ಚಿಂತಾಮಣಿಯ ನಜೀಮುದ್ದೀನ್ ಅಲಿಯಾಸ್ ಮುನ್ನಾ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊಹಮ್ಮದ್ ಇರ್ಫಾನ್ ಎಂಬುವರನ್ನು ಬಂಧಿಸಲಾಗಿತ್ತು. ಇವರಿಗೆ ಸ್ಥಳೀಯ ನ್ಯಾಯಾಲಯವು ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.
- ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದ ಮೆಹಬೂಬ್ ಇಬ್ರಾಹಿಂ ಸಾಬ್, 7 ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ. ಮತ್ತೊಬ್ಬ ಆರೋಪಿ ಚಾಂದ್ ಪಾಷಾ ಎಂಬಾತ ಆರೋಪಮುಕ್ತನಾಗಿದ್ದಾನೆ.[೩೪]
|
;ಐಐಎಸ್ಸಿ ದಾಳಿಗೂ ಮುನ್ನ ಮೂರು ಕಡೆ ಸಂಚು!
- 25 Mar, 2017
- ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆ ಸದಸ್ಯರು 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೋಟೆಲ್, ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಹಾಗೂ ಬನ್ನೇರುಘಟ್ಟ ರಸ್ತೆಯ ಐಐಎಂಬಿ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದರು.
- ಶಂಕಿತ ಉಗ್ರ ಹಬೀಬ್ ಮಿಯಾ ಪೊಲೀಸ್ ವಿಚಾರಣೆ ವೇಳೆ ಈ ಸಂಗತಿ ಬಾಯ್ಬಿಟ್ಟಿದ್ದಾನೆ. ‘ಸಂಘಟನೆ ಕಮಾಂಡರ್ನ ಸೂಚನೆಯಂತೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದೆವು. ಬಿಹಾರದಲ್ಲಿ ಓದುತ್ತಿದ್ದ ನೂರುಲ್ಲಾ ಖಾನ್ ಅಲಿಯಾಸ್ ಶಬಾವುದ್ದೀನ್, ದಾಳಿ ಮಾಡುವ ಉದ್ದೇಶದಿಂದ ವಿದ್ಯಾರ್ಥಿಯಾಗಿ 2005ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜನ್ನು ಸೇರಿಕೊಂಡಿದ್ದ’ ಎಂದು ಆತ ಹೇಳಿದ್ದಾನೆ. ‘ದಾಳಿ ನಡೆಸುವಂತೆ 2005ರ ಡಿಸೆಂಬರ್ನಲ್ಲಿ ಕಮಾಂಡರ್ನಿಂದ ಆದೇಶ ಬಂತು. ಅಂತರ್ಜಾಲದಲ್ಲಿ ಶೋಧ ನಡೆಸಿ, ಗಣ್ಯರು ಹೆಚ್ಚಾಗಿ ಸೇರುವಂಥ ಕಾರ್ಯಕ್ರಮಗಳು ಎಲ್ಲೆಲ್ಲಿವೆ ಎಂಬ ಪಟ್ಟಿ ಸಿದ್ಧಪಡಿಸಿಕೊಂಡೆವು.’ ‘ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವಾ ಕಂಪೆನಿಗಳ ಒಕ್ಕೂಟವು (ನಾಸ್ಕಾಂ) ಡಿ.15 ರಿಂದ 17ರವರೆಗೆ ಲೀ ಮೆರಿಡಿಯನ್ ಹೋಟೆಲ್ನಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು. ಆ ಹೋಟೆಲ್ ಮೇಲೆ ದಾಳಿ ನಡೆಸಲು ನಿರ್ಧರಿಸಿದ ಶಬಾವುದ್ದೀನ್, ತ್ರಿಪುರ ಹಾಗೂ ಹೈದರಾಬಾದ್ನಲ್ಲಿದ್ದ ಸಂಘಟನೆ ಸದಸ್ಯರನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದ. ಅದರಂತೆ, ನಾನು ನಾಲ್ಕು ಮಂದಿಯನ್ನು ಕಳುಹಿಸಿಕೊಟ್ಟಿದ್ದೆ. ಎಲ್ಲರೂ ಹೆಬ್ಬಾಳದ ಕೆಂಪಾಪುರದಲ್ಲಿ ಉಳಿದುಕೊಂಡಿದ್ದರು.’
|
; ಗಣ್ಯರು ಬರಲಿಲ್ಲ
[೩೫]
|
;ಸಿರಿಯಾದಲ್ಲಿ 47 ಜನರ ಸಾವು
- 21 Mar, 2017
- ಸಿರಿಯಾ ರಾಜಧಾನಿ ಡಮಾಸ್ಕಸ್ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 47 ಮಂದಿ ಹತ್ಯೆಯಾಗಿದ್ದಾರೆ ಎಂದು ಮಾನವ ಹಕ್ಕುಗಳ ವೀಕ್ಷಣಾಲಯ (ಎಸ್ಒಎಚ್ಆರ್) ವರದಿ ಮಾಡಿದೆ. ಮೃತಪಟ್ಟವರಲ್ಲಿ 26 ಜನರು ಭದ್ರತಾ ಪಡೆ ಸಿಬ್ಬಂದಿ ಹಾಗೂ 21 ಮಂದಿ ಉಗ್ರರು ಎಂದು ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ. ಇದರಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ ಇಬ್ಬರು ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಜೋಬರ್ ಪ್ರದೇಶದಲ್ಲಿ ಯುದ್ಧ ವಿಮಾನಗಳು 10 ಬಾರಿ ದಾಳಿ ನಡೆಸಿವೆ. ಮಾ.15 ರಂದು ಡಮಾಸ್ಕಸ್ನ ಕೇಂದ್ರ ಭಾಗದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 31 ಜನರು ಮೃತಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿತ್ತು. ಅದೇ ದಿನ ರೆಸ್ಟೊರೆಂಟ್ ಮೇಲೆ ನಡೆದ ಇನ್ನೊಂದು ಆತ್ಮಹತ್ಯಾ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.[೩೬]
|
;ಬ್ರಿಟನ್ನಲ್ಲಿ ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ
- ಸಂಸತ್ ಬಳಿ ಘಟನೆ;23 Mar, 2017;ಪಿಟಿಐ;ಐವರು ಸಾವು, 40 ಮಂದಿ ಗಾಯ
- ಲಂಡನ್: ಬ್ರಿಟನ್ ಸಂಸತ್ ಬಳಿ ಬುಧವಾರ ಏಕಲಾಲದಲ್ಲಿ ವಿವಿಧೆಡೆ ನಡೆದ ಉಗ್ರರ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದು, 40 ಜನ ಗಾಯಗೊಂಡಿದ್ದಾರೆ. ಇದು ‘ಇಸ್ಲಾಂ ಸಂಬಂಧಿತ ಭಯೋತ್ಪಾದನಾ ದಾಳಿ’ ಎಂದು ಹೇಳಲಾಗಿದೆ. ವಿವಿಧೆಡೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಆಧಿಕಾರಿ ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ದಾಳಿಕೋರನನ್ನು (ದಾಳಿಕೋರ ಖಾಲಿದ್ ಮಸೂದ್) ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಒಬ್ಬ ದಾಳಿಕೋರ ಸೇರಿದಂತೆ ಒಟ್ಟು ಐದು ಮಂದಿ ಸಾವಿಗೀಡಾಗಿದ್ದಾರೆ ಎಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
- ಸಂಸತ್ ಭವನದ ಬಳಿಯ ವೆಸ್ಟ್ಮಿನಿಸ್ಟರ್ ಸೇತುವೆ ಮೇಲೆ ಉಗ್ರನೊಬ್ಬ ಕಾರನ್ನು ಪಾದಚಾರಿ ಮಾರ್ಗದ ಮೇಲೆ ನುಗ್ಗಿಸಿ ನಡೆಸಿದ ಮತ್ತೊಂದು ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಾರು ನುಗ್ಗಿಸಿ ದಾಳಿ ನಡೆದ ಬಳಿಕ ಚಿಕಿತ್ಸೆಗೆ ದಾಖಲಿಸಿದ್ದ ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಉಗ್ರರರ ದಾಳಿಗೆ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.[೩೭]
- ಲಂಡನ್ : ಬ್ರಿಟನ್ ಸಂಸತ್ ಬಳಿ ದಾಳಿ ನಡೆಸಿದ ವ್ಯಕ್ತಿಯು ಮುಖ್ಯ ದ್ವಾರದ ಮೂಲಕ ಸಂಸತ್ತಿನ ಆವರಣ ಪ್ರವೇಶಿಸಲು ಮುಂದಾಗಿದ್ದ ಎಂದು ಮೂಲಗಳು ತಿಳಿಸಿವೆ. ‘ಮಫ್ತಿಯಲ್ಲಿದ್ದ ಪೊಲೀಸರು ಶರಣಾಗುವಂತೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರತಿದಾಳಿಗೆ ಮುಂದಾದ ಆತನನ್ನು ಗುಂಡಿಟ್ಟು ಕೊಲ್ಲಲಾಗಿದೆ’ ಎಂದು ಹೇಳಿವೆ. ಪಾದಚಾರಿಗಳ ಮೇಲೆರಗಿದ ಕಾರು: ಸಂಸತ್ ಕಟ್ಟಡದ ಸಮೀಪದಲ್ಲಿರುವ ವೆಸ್ಟ್ಮಿನಿಸ್ಟರ್ ಸೇತುವೆ ಬಳಿ ವ್ಯಕ್ತಿಯೊಬ್ಬ ಕಾರನ್ನು ಪಾದಚಾರಿಗಳ ಮೇಲೆ ಹರಿಸಿದ್ದು, ಮಹಿಳೆಯೊಬ್ಬರು ಬಲಿಯಾಗಿ, ಹಲವರು ಗಾಯಗೊಂಡಿದ್ದಾರೆ. ಇದು ಕೂಡಾ ಭಯೋತ್ಪಾದಕ ದಾಳಿಯೇ ಎಂಬುದು ಸ್ಪಷ್ಟವಾಗಿಲ್ಲ. ದಾಳಿಯಲ್ಲಿ ಒಟ್ಟು ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. ‘ಸಂಸತ್ ಕಟ್ಟಡದ ಸಮೀಪದಲ್ಲಿ ಇನ್ನಷ್ಟು ಅಹಿತಕರ ಘಟನೆಗಳು ವರದಿಯಾಗಿವೆ’ ಎಂದು ‘ಹೌಸ್ ಆಫ್ ಕಾಮನ್ಸ್’ ಸಭಾಧ್ಯಕ್ಷ ಡೇವಿಡ್ ಲಿಡಿಂಗ್ಟನ್ ತಿಳಿಸಿದ್ದಾರೆ. ‘ಈ ಘಟನೆಗಳಿಗೆ ಒಂದಕ್ಕೊಂದು ಸಂಬಂಧವಿದೆಯೇ ಎಂಬುದು ತಿಳಿದುಬಂದಿಲ್ಲ. ಪೊಲೀಸರಿಂದ ಖಚಿತ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗದು’ ಎಂದಿದ್ದಾರೆ. ಪಾದಚಾರಿಗಳ ಮೇಲೆ ಕಾರು ಹರಿಸಿದ ಅದೇ ವ್ಯಕ್ತಿ ಆ ಬಳಿಕ ಪೊಲೀಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ‘ವೆಸ್ಟ್ಮಿನಿಸ್ಟರ್ ಸೇತುವೆ ಸಮೀಪ ಹಲವು ಗಾಯಾಳುಗಳು ಬಿದ್ದಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
- ‘ಜನರ ಚೀರಾಟ ಕೇಳಿದಾಗ ಕಚೇರಿಯ ಕಿಟಕಿಯಿಂದ ಹೊರಗೆ ಇಣುಕಿದೆ. ಸುಮಾರು 40 ರಿಂದ 50 ಮಂದಿ ಸೇತುವೆ ಬಳಿಯಿಂದ ಸಂಸತ್ ಕಚೇರಿಯತ್ತ ಓಡುತ್ತಿರುವುದನ್ನು ನೋಡಿದೆ’ ಎಂದು ‘ಪ್ರೆಸ್ ಅಸೋಸಿಯೇಷನ್’ ಸಂಪಾದಕ ಆ್ಯಂಡ್ರ್ಯೂ ವುಡ್ಕಾಕ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಲಂಡನ್ನಲ್ಲಿ ನಡೆದ ದೊಡ್ಡ ದಾಳಿ ಇದಾಗಿದೆ. 2013 ರಲ್ಲಿ ಆಗ್ನೇಯ ಲಂಡನ್ನ ಬೀದಿಯಲ್ಲಿ ಇಬ್ಬರು ದಾಳಿಕೋರರು ಬ್ರಿಟನ್ನ ಯೋಧನನ್ನು ಇರಿದು ಸಾಯಿಸಿದ್ದರು. 2005 ರಲ್ಲಿ ನಾಲ್ವರು ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 52 ಮಂದಿ ಬಲಿಯಾಗಿದ್ದರು. ಲಂಡನ್ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿತ್ತು.[೩೮]
|
;ಮತ್ತಿಬ್ಬರ ಬಂಧನ
- 25 Mar, 2017
- ಬ್ರಿಟನ್ ಸಂಸತ್ ಬಳಿ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ. ‘ಎರಡು ದಿನಗಳಲ್ಲಿ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ. ಒಂಬತ್ತು ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದು, ಒಬ್ಬ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ನ ಹಂಗಾಮಿ ಉಪ ಕಮಿಷನರ್ ಮತ್ತು ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಮಾರ್ಕ್ ರೌಲಿ ಹೇಳಿದ್ದಾರೆ.
- ದಾಳಿಕೋರ ಖಾಲಿದ್ ಮಸೂದ್ನ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸುವಂತೆ ಅವರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ. ಡಾರ್ಟ್ಫೋರ್ಡ್ನಲ್ಲಿ ಜನಿಸಿದ್ದ ಖಾಲಿದ್ನ ಮೊದಲ ಹೆಸರು ಅಡ್ರಿಯಾನ್ ರಸೆಲ್ ಅಜಾವೊ ಎಂದಾಗಿತ್ತು. ಆತ ಇಸ್ಲಾಂಗೆ ಮತಾಂತರಗೊಂಡಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.[೩೯]
|
;ಕಾಶ್ಮೀರ: ಮೂವರು ನಾಗರಿಕರ ಬಲಿ
- 29 Mar, 2017;
- ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಎನ್ಕೌಂಟರ್ಗೆ ಒಬ್ಬ ಉಗ್ರ ಬಲಿಯಾಗಿದ್ದು, ಭದ್ರತಾ ಪಡೆಗಳ ಜತೆಗಿನ ಘರ್ಷಣೆಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
- ‘ಬಡ್ಗಾಂವ್ ಜಿಲ್ಲೆಯ ಚಡೂರ ಉಪ ವಿಭಾಗದ ದುರ್ಬುಗ್ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರನನ್ನು ಭದ್ರತಾ ಪಡೆಗಳು ಕೊಂದಿವೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ. ‘ಕಾರ್ಯಾಚರಣೆ ಕೊನೆಗೊಂಡಿದ್ದು, ಸ್ಥಳದಲ್ಲಿ ಒಬ್ಬ ಉಗ್ರನ ಮೃತದೇಹ ದೊರೆತಿದೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.
ಮೂವರು ನಾಗರಿಕರು ಬಲಿ
- ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಪ್ರತಿಭಟಿಸಿ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದಾಗ ಘರ್ಷಣೆ ಆರಂಭವಾಗಿದೆ.
ಅವರನ್ನು ಚದುರಿಸಲು ಗುಂಡು ಹಾರಿಸಿದಾಗ ಮೂವರು ಬಲಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.[೪೦]
|
;ಕಾಶ್ಮೀರ
- 3 Apr, 2017
- ಶ್ರೀನಗರದಲ್ಲಿನ ಪಂಥಾ ಚೌಕ್ ಬಳಿಯಿರುವ ಸಿಆರ್ಪಿಎಫ್ ಕಾವಲುಪಡೆ ಮೇಲೆ ಸೋಮವಾರ ಮಧ್ಯಾಹ್ನ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದೆರಡು ದಿನಗಳಲ್ಲಿ ರಕ್ಷಣಾ ಪಡೆ ಮೇಲೆ ನಡೆದ ಎರಡನೇ ದಾಳಿ ಪ್ರಕರಣವಾಗಿದೆ ಇದು.[೪೧]
|
;ಮಾಸ್ಕೊ-ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಸ್ಫೋಟ
- 3 Apr, 2017
- ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನ ಸುರಂಗ ಮಾರ್ಗದ ಮೆಟ್ರೊ ನಿಲ್ದಾಣಗಳಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎರಡು ಮೆಟ್ರೊ ನಿಲ್ದಾಣಗಳಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.[೪೨]
|
;20 ಜನರ ಹತ್ಯೆ ಮಾಡಿದ ದರ್ಗಾ ಪಾಲಕ
- ಪಿಟಿಐ;3 Apr, 2017;
- ಒಂದೇ ಕುಟುಂಬದ ಆರು ಸದಸ್ಯರು ಸೇರಿದಂತೆ 20 ಮಂದಿ ಮೇಲೆ ಲಾಠಿ ಮತ್ತು ಚೂರಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ದಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗ್ರಾಮವೊಂದರಲ್ಲಿ ನಡೆದಿದೆ. ಸರ್ಗೋಧಾ ಜಿಲ್ಲೆಯ ದರ್ಗಾವೊಂದರಲ್ಲಿ ಶನಿವಾರ ಮಧ್ಯರಾತ್ರಿ ಈ ಕೃತ್ಯ ಎಸಗಲಾಗಿದೆ ಎಂದು ಅಲ್ಲಿನ ಪೊಲೀಸ್ ಉಪ ಆಯುಕ್ತ ಲಿಯಾಖತ್ ಅಲಿ ಛಟ್ಟಾ ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ದರ್ಗಾದ ಪಾಲಕ ಅಬ್ದುಲ್ ವಹೀದ್ ಮತ್ತು ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಸ್ಥಳೀಯ ಧಾರ್ಮಿಕ ಮುಖಂಡ ಅಲಿ ಮೊಹಮ್ಮದ್ ಗುಜ್ಜರ್ ಅವರ ಸ್ಮರಣಾರ್ಥ ದರ್ಗಾವನ್ನು ನಿರ್ಮಿಸಲಾಗಿತ್ತು. ಅದರ ಉಸ್ತುವಾರಿಯನ್ನು ಅಬ್ದುಲ್ ವಹೀದ್ ವಹಿಸಿಕೊಂಡಿದ್ದ. ಇಲ್ಲಿ ಭೇಟಿ ನೀಡಿದರೆ ಪಾಪಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವ ನಂಬಿಕೆ ಭಕ್ತರದ್ದು.
- ಘಟನೆ ನಡೆದ ದಿನ ಭಕ್ತರಿಗೆ ದೂರವಾಣಿ ಕರೆ ಮಾಡಿ ದರ್ಗಾಕ್ಕೆ ಬರುವಂತೆ ವಹೀದ್ ಹೇಳಿದ್ದ. ದರ್ಗಾಕ್ಕೆ ಬಂದವರಿಗೆ ಅಮಲು ಪದಾರ್ಥ ನೀಡಿ, ನಂತರ ಅವರನ್ನು ವಿವಸ್ತ್ರಗೊಳಿಸಿ ಒಟ್ಟಿಗೆ ಕಟ್ಟಿಹಾಕಿ ಈ ಕೃತ್ಯ ಎಸಗಿದ್ದಾನೆ. ಈ ವೇಳೆ, ಇಬ್ಬರು ಮಹಿಳೆಯರು ಮತ್ತು ಪುರುಷರು ತಪ್ಪಿಸಿಕೊಂಡಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಪ್ಪಿಸಿಕೊಂಡವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ‘ತನ್ನ ಧಾರ್ಮಿಕ ಮುಖಂಡ ಅಲಿ ಮುಹಮ್ಮದ್ ಅವರಿಗೆ ಎರಡು ವರ್ಷಗಳ ಹಿಂದೆ ವಿಷ ನೀಡಿ ಕೊಲೆ ಮಾಡಿದ್ದಕ್ಕೆ ಇವರನ್ನು ಹತ್ಯೆ ಮಾಡಿದ್ದೇನೆ. ತಾನವರನ್ನು ಕೊಲ್ಲದಿದ್ದರೆ ಅವರು ನನಗೂ ವಿಷ ನೀಡುತ್ತಿದ್ದರು’ ಎಂದು ವಹೀದ್ ಹೇಳಿರುವುದಾಗಿ ಛಟ್ಟಾ ತಿಳಿಸಿದ್ದಾರೆ. ‘ಘಟನೆಯಲ್ಲಿ ಇನ್ನೂ ಹಲವರ ಕೈವಾಡ ಇರುವ ಬಗ್ಗೆ ಶಂಕಿಸಲಾಗಿದೆ. ಪ್ರಮುಖ ಶಂಕಿತ ಲಾಹೋರ್ನ ನಿವಾಸಿಯಾಗಿದ್ದು, ಪಾಕಿಸ್ತಾನದ ಚುನಾವಣಾ ಆಯೋಗದ ಉದ್ಯೋಗಿ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದ್ದಾರೆ.[೪೩]
|
;ರಷ್ಯಾದ ರೈಲಿನಲ್ಲಿ ಅವಳಿ ಸ್ಫೋಟ
- 3 Apr, 2017
- ರಷ್ಯಾದ ರೈಲು ಸುರಂಗ ಮಾರ್ಗದಲ್ಲಿ ದುರಂತ; 50ಕ್ಕೂ ಹೆಚ್ಚು ಜನರಿಗೆ ಗಾಯ; ಮೆಟ್ರೊ ರೈಲಿನಲ್ಲಿ ಅವಳಿ ಸ್ಫೋಟ: 10 ಸಾವು;ಸೇಂಟ್ ಪೀಟರ್ಸ್ಬರ್ಗ್ನ ಮೆಟ್ರೊ ಸುರಂಗ ಮಾರ್ಗದಲ್ಲಿ ಸೋಮವಾರ ಅವಳಿ ಸ್ಫೋಟ ಸಂಭವಿಸಿದ್ದು ಕನಿಷ್ಠ 10 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಗವರ್ನರ್ ಅವರ ವಕ್ತಾರರು ತಿಳಿಸಿದ್ದಾರೆ. ಸೆನ್ನಾಯ ಪ್ಲೊಶ್ಚೆಡ್ ಮತ್ತು ಟೆಕ್ನೊಲಾಜಿಚೆಸ್ಕಿ ಇನ್ಸ್ಟಿಟ್ಯೂಟ್ ನಿಲ್ದಾಣಗಳ ನಡುವಿನ ಸುರಂಗದಲ್ಲಿ ಈ ದುರಂತ ನಡೆದಿದೆ. ಎರಡು ರೈಲುಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಸೇಂಟ್ ಪೀಟರ್ಸ್ಬರ್ಗ್ನ ತುರ್ತುಸೇವಾ ವಿಭಾಗ ಮಾಹಿತಿ ನೀಡಿದೆ. ಸ್ಫೋಟಕ ವಸ್ತುವೊಂದನ್ನು ಮೆಟ್ರೊ ರೈಲಿನಲ್ಲಿ ಸಾಗಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಸಮಿತಿ ಹೇಳಿದೆ. ಉತ್ತರ ರಷ್ಯಾದ ಹಲವು ರೈಲ್ವೆ ಸುರಂಗಗಳನ್ನು ಮುಚ್ಚಲಾಗಿದ್ದು, ಜನರನ್ನು ತೆರವುಗೊಳಿಸಲಾಗುತ್ತಿದೆ ಎಂದು ರೈಲ್ವೆ ನಿಗಮ ತಿಳಿಸಿದೆ. ಸ್ಫೋಟದ ತೀವ್ರತೆಯಿಂದ ರೈಲಿನ ಬಾಗಿಲುಗಳು ಛಿದ್ರಗೊಂಡಿವೆ. ನಿಲ್ದಾಣದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳು ಹಾಗೂ ಗಾಯಾಳುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ರಾಜಧಾನಿ ಮಾಸ್ಕೋದ ಸುರಂಗ ಮಾರ್ಗಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಉಪ ಮೇಯರ್ ಮಾಕ್ಸಿಮ್ ಲಿಕ್ಸುಟೊವ್ ಅವರು ತಿಳಿಸಿದ್ದಾರೆ.[೪೪]
|
;ಕಾಶ್ಮೀರದಲ್ಲಿ ಭಯೊತ್ಪಾದನೆ
- 3 Apr, 2017
- ಶ್ರೀನಗರದಲ್ಲಿ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ ಯೋಧ ಸಾವು, ಹೊಣೆ ಹೊತ್ತ ಎಲ್ಇಟಿ;ಭದ್ರತಾಪಡೆ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ನ ಒಬ್ಬ ಯೋಧ ಸಾವಿಗೀಡಾಗಿದ್ದು, ಹತ್ತು ವರ್ಷದ ಬಾಲಕಿ ಹಾಗೂ ಇಬ್ಬರು ನಾಗರಿಕರು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆ ದಾಳಿಯ ಹೊಣೆ ಹೊತ್ತಿದೆ. ಸಿಆರ್ಪಿಎಫ್ನ ಕಾವಲುಪಡೆಯ ವಾಹನದ ಮೇಲೆ ನಡೆದ ಗುಂಡಿನ ದಾಳಿಯನ್ನು ತಾನು ನಡೆಸಿದ್ದಾಗಿ ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆ ಹೊಣೆ ಹೊತ್ತುಕೊಂಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕಾಶ್ಮೀರದಲ್ಲಿ ಭದ್ರತಾಪಡೆಗಳ ಮೇಲೆ ಲಷ್ಕರ್ ಉಗ್ರರು ದಾಳಿಯನ್ನು ತೀವ್ರಗೊಳಿಸುವುದಾಗಿ ಹೇಳಿರುವ ಲಷ್ಕರ್ನ ವಕ್ತಾರ ಅಬ್ದುಲ್ಲಾ ಗಜ್ನಾವಿ, ಈ ದಾಳಿ ನಡೆಸಿದ ಅಬು ಮೊಸಾ ಕೃತ್ಯವನ್ನು ಪ್ರಶಂಸಿಸಿದ್ದಾನೆ. ಜತೆಗೆ, ಆತನ್ನು ಸನ್ಮಾನಿಸುವುದಾಗಿ ಹೇಳಿ ಇಂಡಿಯಾ ಟುಡೆಗೆ ಮೇಲ್ ಕಳುಹಿಸಿದ್ದಾನೆ. ಸಿಆರ್ಪಿಎಫ್ನ ಕಾನ್ಸ್ಟೆಬಲ್ ಬಸಪ್ಪ ಅವರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ವಾಗಿದೆ ಎಂದು ವರದಿಯಾಗಿದೆ.[೪೫]
|
;ರಾಸಾಯನಿಕ ದಾಳಿಯಲ್ಲಿ 27 ಮಕ್ಕಳ ಸಾವು
ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ರಾಸಾಯನಿಕ ದಾಳಿಯಲ್ಲಿ 27 ಮಕ್ಕಳು ಮೃತಪಟ್ಟಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಗಾಯಗೊಂಡಿರುವ 546 ಜನರ ಪೈಕಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಈ ದಾಳಿಯಲ್ಲಿ ಸುಮಾರು 70 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯುನಿಸೆಫ್, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ದಾಳಿಗೆ ಗುರಿಯಾದವರ ಚಿಕಿತ್ಸೆಗಾಗಿ ಮೂರು ಸಂಚಾರಿ ಚಿಕಿತ್ಸಾಲಯಗಳು, ನಾಲ್ಕು ಆಸ್ಪತ್ರೆಗಳು ಮತ್ತು ಒಂಬತ್ತು ಆಂಬುಲೆನ್ಸ್ಗಳನ್ನು ನೀಡಿದೆ. ಅಗತ್ಯ ಔಷಧಗಳನ್ನು ಪೂರೈಸುತ್ತಿದೆ ಎಂದು ಹೇಳಿದೆ.[೪೬]
|
;ಈಜಿಪ್ಟ್ನ ಎರಡು ಚರ್ಚ್ಗಳಲ್ಲಿ ಸ್ಫೋಟ
- 10 Apr, 2017;
- ಈಜಿಪ್ಟ್ನ ಟಂಟಾ ಮತ್ತು ಅಲೆಕ್ಸಾಂಡ್ರಿಯಾ ಪಟ್ಟಣದ ಚರ್ಚ್ಗಳಲ್ಲಿ ಐಎಸ್ ಉಗ್ರರು ಭಾನುವಾರ ನಡೆಸಿದ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟು, 119ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ‘ಕೈರೊದಿಂದ 120 ಕಿ.ಮೀ. ದೂರದಲ್ಲಿರುವ ಟಂಟಾ ಪಟ್ಟಣದ ಮಾರ್ ಗರ್ಜೆಸ್ ಚರ್ಚ್ನ ಒಳಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, 27ಮಂದಿ ಮೃತಪಟ್ಟು 78 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಾದ ಒಂದು ಗಂಟೆಯ ಬಳಿಕ ಅಲೆಕ್ಸಾಂಡ್ರಿಯಾದ ಮಾನ್ಶಿಯಾ ಜಿಲ್ಲೆಯ ಸೇಂಟ್ ಮಾರ್ಕ್ಸ್ ಚರ್ಚ್ ಬಳಿ ಇನ್ನೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ‘ಆತ್ಮಾಹುತಿ ದಾಳಿಕೋರನೊಬ್ಬ ಸೇಂಟ್ ಮಾರ್ಕ್ಸ್ ಚರ್ಚ್ನ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಡೆದಾಗ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ’ ಎಂದು ಪೋಲಿಸರು ತಿಳಿಸಿದ್ದಾರೆ.[೪೭]
|
;ಮದರ್ ಆಫ್ ಆಲ್ ಬಾಂಬ್ಸ್
- Apr 13, 2017
- ಅಮೆರಿಕವು ಆಫ್ಘಾನಿಸ್ತಾನದ ನಂಗರ್ಹಾರ್ ಮೇಲೆ ಈವರೆಗಿನ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್ ಎಸೆದಿದೆ. ನಂಗರ್ಹಾರ್ನಲ್ಲಿ ಈಚೆಗೆ, ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಈ ಬಾಂಬ್ ಅನ್ನು ‘ಮ್ಯಾಸಿವ್ ಆರ್ಡಿನೆನ್ಸ್ ಏರ್ ಬ್ಲ್ಯಾಸ್ಟ್–ಎಂಒಎಬಿ’ ಎಂದು ಕರೆಯಲಾಗುತ್ತದೆ. 10.3 ಟನ್ ತೂಕದ ಈ ಬಾಂಬ್ ಭಾರಿ ಗಾತ್ರದಾದ್ದರಿಂದ, ‘ಮದರ್ ಆಫ್ ಆಲ್ ಬಾಂಬ್ಸ್’ ಎಂದೂ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ.[೪೮]
- ದಾಳಿಯಲ್ಲಿ ಬಳಸಲಾದ GBU-43 ಬಾಂಬ್ ಅಡ್ಡಹೆಸರು 'ಎಲ್ಲಾ ಬಾಂಬ್ಗಳನ್ನು ತಾಯಿ', ಇದು ಯೋಗ್ಯವಾಗಿ ವಿನಾಶಕಾರಿ ಶಕ್ತಿಯ ವಿವರಿಸುತ್ತದೆ. GBU-43 / ಬಿ ಬೃಹತ್ ಶಸ್ತ್ರಾಗಾರ ಏರ್ ಬ್ಲಾಸ್ಟ್ (MOAB) ಒಂದು 21.600 ಪೌಂಡ್, ಜಿಪಿಎಸ್ ನಿರ್ದೇಶಿತ ಸ್ಫೋಟಕ.
- ರಷ್ಯಾ, MOAB ಯ ನಾಲ್ಕು ಬಾರಿ ಶಕ್ತಿಶಾಲಿಯಾದ "ಎಲ್ಲಾ ಬಾಂಬ್ಸ್ ಪಿತಾಮಹ" ಎಂದು ಹೆಸರಾದ ಬಾಂಬ್ ಅಭಿವೃದ್ಧಿ ಮಾಡಿದೆ.[೪೯]
- ಎಲ್ಲಾ ಬಾಂಬ್ಗಳನ್ನು ತಾಯಿ'-ಪ್ರಯೋಗದಿಂದ ಅಫ್ಘಾನಿಸ್ಥಾನದಲ್ಲಿ 36 ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಕೊಲ್ಲಲ್ಪಟ್ಟರು.[೫೦]
- ಮದರ್ ಆಫ್ ಆಲ್ ಬಾಂಬ್ಸ್ (MOAB-GBU-43/B)
|
;ಆಫ್ಘನ್: ಸತ್ತವರ ಸಂಖ್ಯೆ 94ಕ್ಕೆ ಏರಿಕೆ
- 16 Apr, 2017
- ಆಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಅಚಿನ್ನಲ್ಲಿ ಐ.ಎಸ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಗುರುವಾರ ನಡೆಸಿದ್ದ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 94ಕ್ಕೆ ಏರಿದೆ. ‘ಬಲಿಯಾದವರಲ್ಲಿ ಯಾವುದೇ ನಾಗರಿಕರು ಸೇರಿಲ್ಲ’ ಎಂದು ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಅತಾವುಲ್ಲಾ ಕೊಗ್ಯಾನಿ ಶನಿವಾರ ಹೇಳಿದ್ದಾರೆ. ‘ಐ.ಎಸ್ ಸಂಘಟನೆಯ ನಾಲ್ವರು ಕಮಾಂಡರ್ಗಳು ಕೂಡಾ ಸತ್ತವರಲ್ಲಿ ಸೇರಿದ್ದಾರೆ.[೫೧]
|
;ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ
16 Apr, 2017;ರಶಿದಿನ್ ಪ್ರದೇಶ:
- ಸಿರಿಯಾದ ನಿರಾಶ್ರಿತರನ್ನು ಗುರಿಯಾಗಿರಿಸಿ ಎರಡು ಬಸ್ಗಳ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ 112 ಮಂದಿ ಸಾವೀಗೀಡಾಗಿದ್ದಾರೆ. ಸಿರಿಯಾ ನಿರಾಶ್ರಿತರ ಸ್ಥಳಾಂತಕ್ಕೆ ಬಸ್ನಲ್ಲಿ ಕರೆದೊಯ್ಯಲಾಗುತ್ತಿದ್ದ ವೇಳೆ ಸರ್ಕಾರಿ ಪಡೆಗಳ ನಿಯಂತ್ರಣದಲ್ಲಿರುವ ಪಶ್ಚಿಮ ಅಲೆಪ್ಪೊದ ಉಪ ನಗರ ರಶಿದಿನ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ 43 ಜನ ಸಾವೀಗೀಡಾಗಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ. ಆದರೆ, ಈ ಭೀಕರ ದಾಳಿಗೆ 112 ಜನ ಸಾವಿಗೀಡಾಗಿದ್ದಾರೆ ಎಂದು ಸಿರಿಯಾದಲ್ಲಿನ ಅಮೆರಿಕ ಮೂಲದ ಮಾನವ ಹಕ್ಕು ಮೇಲ್ವಿಚಾರಣಾ ಸಂಸ್ಥೆ ಭಾನುವಾರ ಹೇಳಿದೆ.[೫೨]
|
;ಛತ್ತೀಸ್ಗಡದಲ್ಲಿ ನಕ್ಸಲ್ ದಾಳಿ
- 24 Apr, 2017;26 ಸಿಆರ್ಪಿಎಫ್ ಯೋಧರು ಹುತಾತ್ಮ;
- ನಕ್ಸಲರು ಮತ್ತು ಸಿಆರ್ಪಿಎಫ್ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 26 ಯೋಧರು ಹುತಾತ್ಮರಾಗಿದ್ದು, 7 ಯೋಧರು ಗಾಯಗೊಂಡಿರುವ ಘಟನೆ ಛತ್ತೀಸ್ಗಡದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಸಿಆರ್ಪಿಎಫ್ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಸುಮಾರು 300 ಮಂದಿ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು.[೫೩]
|
;ಇಬ್ಬರು ಸೈನಿಕರ ಅಂಗಾಂಗಗಳನ್ನು ಕತ್ತರಿಸಿ ಕೊಲೆ
- 2 May, 2017;
- ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಬಳಿ ನಮ್ಮ ಗಡಿಯ ಒಳಗೆ ಪಾಕೀಸ್ತಾನದ ಸೈನಿಕರು ನುಗ್ಗಿ ಇಬ್ಬರು ಸೈನಿಕರ ಅಂಗಾಂಗಗಳನ್ನು ಕತ್ತರಿಸಿ ಅಮಾನುಷವಾಗಿ ಕೊಂದಿದೆ. ಹೋದ ವರ್ಷದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿಯೂ ಅದು ಇಂತಹುದೇ ದುಷ್ಕೃತ್ಯ ನಡೆಸಿತ್ತು. ಭಾರತ– ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ, ದಾಳಿ– ಪ್ರತಿದಾಳಿ ಸ್ವಾಭಾವಿಕ ಎನ್ನುವ ಪರಿಸ್ಥಿತಿಯಿದೆ. ಎದುರಾಳಿ ಯೋಧರ ದೇಹವನ್ನು ಕತ್ತರಿಸಿ ಸಾಯಿಸುವುದು ಮಾತ್ರ ಎಲ್ಲಕ್ಕಿಂತ ಹೀನಾಯ. ಯುದ್ಧಕೈದಿಗಳನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎನ್ನುತ್ತದೆ ಜಿನೀವಾ ಒಪ್ಪಂದ. ಆದರೆ ಈಗ ಯುದ್ಧ ನಡೆಯುತ್ತಿಲ್ಲ. ಗಡಿಯಲ್ಲಿ ಬರೀ ಕಾವಲು ಇದೆ, ಗಸ್ತು ನಡೆಯುತ್ತಿದೆ. ಹೀಗಿದ್ದರೂ ನಮ್ಮ ಗಡಿಯ ಒಳಗೆ ಸುಮಾರು 250 ಮೀಟರ್ನಷ್ಟು ಅತಿಕ್ರಮ ಪ್ರವೇಶ ಮಾಡಿ ಯೋಧರ ಮೇಲೆ ಎರಗಿಕೊಂದು ಹಾಕಿರುವುದನ್ನು ರಾಷ್ಟ್ರೀಯ ನಾಯಕರು ಖಂಡಿಸಿದ್ದಾರೆ.[೫೪]
- ಯಂತ್ರಣ ರೇಖೆಯಲ್ಲಿರುವ ಎರಡು ಕಾವಲು ಠಾಣೆಗಳ ಮೇಲೆ ಅಪ್ರಚೋದಿತವಾಗಿ ರಾಕೆಟ್ ಮತ್ತು ಫಿರಂಗಿ ದಾಳಿ ನಡೆಸಲಾಗಿದೆ. ಅದೇ ಹೊತ್ತಿಗೆ ಗಸ್ತು ತಂಡಗಳ ಮೇಲೆಯೂ ಗುಂಡಿನ ದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.ಕೃಷ್ಣಾ ಘಾಟಿ ವಲಯದಲ್ಲಿ ಪಾಕಿಸ್ತಾನದ ಕಾವಲು ಠಾಣೆ ಹೆಚ್ಚು ಅನುಕೂಲಕರ ಸ್ಥಳದಲ್ಲಿದೆ. ಭಾರತದ ಯೋಧರು ಸಾಗುತ್ತಿದ್ದಾಗ ಪಾಕಿಸ್ತಾನದ ಕಡೆಯಿಂದ ರಾಕೆಟ್ ಲಾಂಚರ್ಗಳು ಮತ್ತು ಫಿರಂಗಿಗಳಿಂದ ದಾಳಿ ನಡೆಸಲಾಗಿದೆ. ತಕ್ಷಣ ಮರಗಳ ಮರೆಯಲ್ಲಿ ಆಶ್ರಯ ಪಡೆದ ಯೋಧರು ಪ್ರತಿ ದಾಳಿ ಆರಂಭಿಸಿದ್ದಾರೆ.
- ಯೋಜಿತ ದಾಳಿ: ಪಾಕಿಸ್ತಾನದ ಗಡಿ ರಕ್ಷಣಾ ಪಡೆ ಸುಮಾರು 250 ಮೀಟರ್ನಷ್ಟು ಭಾರತದ ಭೂಪ್ರದೇಶದೊಳಕ್ಕೆ ಬಂದಿದೆ. ಗಸ್ತು ಪಡೆಯ ಕೆಲಸದ ವಿಧಾನವನ್ನು ಕೆಲವು ದಿನಗಳಿಂದ ಗಮನಿಸಿ ಈ ಕೃತ್ಯ ಎಸಗಲಾಗಿದೆ. ಸಂಪೂರ್ಣ ಅಧ್ಯಯನ ನಡೆಸಿ ದಾಳಿಯ ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.[೫೫]
|
;ಮ್ಯಾಂಚೆಸ್ಟರ್ನಲ್ಲಿ ಉಗ್ರರ ಧಾಳಿ
- ದಿ.೨೨-೫-೨೦೧೭ ರಾತ್ರಿ 10.33ಕ್ಕೆ (ಭಾರತೀಯ ಸಮಯ ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ) ಸ್ಫೋಟ ನಡೆಯಿತು.ಬ್ರಿಟನ್ನ ಮ್ಯಾಂಚೆಸ್ಟರ್ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ 22 ಮಂದಿ ಮೃತಪಟ್ಟಿದ್ದಾರೆ. 59 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹದಿಹರೆಯದ ಬಾಲಕ ಬಾಲಕಿಯರೇ ಹೆಚ್ಚಿದ್ದಾರೆ. ಸ್ಫೋಟದ ಹೊಣೆಯನ್ನು ಉಗ್ರಗಾಮಿ ಸಂಘಟನೆ ಐಎಸ್ ಹೊತ್ತುಕೊಂಡಿದೆ. ಯುರೋಪ್ನ ಅತ್ಯಂತ ದೊಡ್ಡ ಸಭಾಂಗಣ ಮ್ಯಾಂಚೆಸ್ಟರ್ ಅರೇನಾದಲ್ಲಿ ಅಮೆರಿಕದ ಪಾಪ್ ತಾರೆ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮ ಇನ್ನೇನು ಮುಗಿಯಿತು ಎಂಬ ಹೊತ್ತಿಗೆ ಆತ್ಮಹತ್ಯಾ ಬಾಂಬರ್ ಬಾಂಬ್ ಸ್ಫೋಟಿಸಿದ್ದಾನೆ.[೫೬]
- ಚಿತ್ರ:[೨]
|
;ಬಾಗ್ದಾದ್ನಲ್ಲಿ ಕಾರ್ ಬಾಂಬ್ ದಾಳಿ
- 30 May 2017
- ಮೇ ೨೯ ರಂದು ಬಾಗ್ದಾದ್ ನಲ್ಲಿ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದು, ಪರಿಣಾಮ 13 ಮಂದಿ ಸಾವನ್ನಪ್ಪಿ 24ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ. ಕೇಂದ್ರೀಯ ಬಾಗ್ದಾದ್'ನ ಪ್ರತಿಷ್ಠಿತ ಐಸ್ ಕ್ರೀಮ್ ಅಂಗಡಿಯಲ್ಲಿ ಬಾಂಬ್ ಸ್ಫೋಟಿಸಲಾಗಿದ್ದು, ಈ ವೇಳೆ ಸ್ಥಳದಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ದಾಳಿಯ ಹೊಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಉಪವಾಸ ದಿನ ಆರಂಭವಾಗಿದ್ದು. ಸೂರ್ಯ ಮುಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಬುಧವಾರ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.
ಕಾಬೂಲ್ನಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕ ಕಚೇರಿಗಳ ಸಮೀಪದಲ್ಲೇ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆಳುಗಿದ ಹಿನ್ನಲೆಯಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು ಊಟ ಸೇವಿಸಲು ಹೋಟೆಲ್ ಒಳ ಬಂದಿದ್ದರು. ಈ ವೇಳೆ ಉಗ್ರರು ಕಾರಿನಲ್ಲಿ ಬಾಂಬ್ ಇರಿಸಿ ಸ್ಫೋಟಿಸಿದ್ದಾರೆ.[೫೭]
|
;ಕಾಬೂಲ್ನಲ್ಲಿ ಕಾರ್ ಬಾಂಬ್ ಸ್ಫೋಟ
- 31 May, 2017
- ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಬುಧವಾರ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ಕಾಬೂಲ್ನಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕ ಕಚೇರಿಗಳ ಸಮೀಪದಲ್ಲೇ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.[೫೮]
|
;ಬಾಗ್ದಾದ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ
- 31 May, 2017;
- ಬಾಗ್ದಾದ್: ಇಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 27 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ ಐಸ್ಕ್ರೀಂ ಅಂಗಡಿ ಬಳಿ ಸಂಭವಿಸಿದ ಮೊದಲ ಆತ್ಮಾಹುತಿ ದಾಳಿಯಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಬಾಗ್ದಾದ್ನ ಪ್ರಮುಖ ಸೇತುವೆ ಬಳಿ ಕಾರಿನಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಇದರಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐಎಸ್ ಉಗ್ರರು ಮೊದಲನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಸ್ಫೋಟಕಗಳಿದ್ದ ವಾಹನ ಬಳಸಿ ದಾಳಿ ನಡೆಸಲಾಗಿದೆ ಎಂದು ಐಎಸ್ ಹೇಳಿಕೊಂಡಿದೆ.[೫೯]
|
;ಕಾಬೂಲ್ನ ಖೈರ್ ಖಾನಾ ಪ್ರದೇಶದಲ್ಲಿ ಧಾಳಿ
- ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಖೈರ್ ಖಾನಾ ಪ್ರದೇಶದ ಸ್ಮಶಾನದಲ್ಲಿ 3 ಜೂನ್, 2017 ಶನಿವಾರ ಸ್ಥಳೀಯ ರಾಜಕೀಯ ಮುಖಂಡರ ಪುತ್ರನ ಅಂತ್ಯಕ್ರಿಯೆ ನಡೆಯುವ ವೇಳೆ ಮೂರು ಬಾಂಬ್ಗಳು ಸ್ಫೋಟಗೊಂಡು ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ‘ಸ್ಥಳೀಯ ಮುಖಂಡ ಏಜಾದ್ಯಾರ್ ಅವರ ಪುತ್ರ ಸಲೀಮ್ ಏಜಾದ್ಯಾರ್ ಅಂತ್ಯಕ್ರಿಯೆಗಾಗಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದರು. ಈ ವೇಳೆ ಒಂದಾದ ನಂತರ ಒಂದರಂತೆ ಮೂರು ಬಾಂಬ್ಗಳು ಸ್ಫೋಟಗೊಂಡವು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಬೂಲ್ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಸಲೀಮ್ ಮೃತಪಟ್ಟಿದ್ದರು.[೬೦]
|
;ಮೊಟ್ಟಮೊದಲು ಇರಾನ್ನಲ್ಲಿ ಐಎಸ್ ದಾಳಿ
- 7 Jun, 2017
- ಇರಾನ್ ಸಂಸತ್ ಭವನ ಹಾಗೂ ಧಾರ್ಮಿಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಸಮಾಧಿ ಮೇಲೆ ಬಂದೂಕುಧಾರಿಗಳು ಹಾಗೂ ಆತ್ಮಾಹುತಿ ದಾಳಿಕೋರರು ಬುಧವಾರ ನಡೆಸಿದ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಎರಡೂ ಘಟನೆಗಳಲ್ಲಿ 42 ಜನ ಗಾಯಗೊಂಡಿದ್ದಾರೆ. ಅಧಿವೇಶನದ ಸಂದರ್ಭದಲ್ಲೇ ದಾಳಿ ನಡೆಸಿದ ಬಂದೂಕುಧಾರಿಯನ್ನು ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಹೊಡೆದುರುಳಿಸಲಾಯಿತು. ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕಾರ್ಯಾಚರಣೆ ಅಂತ್ಯವಾಯಿತು.ದಾಳಿ ನಡೆಯುತ್ತಿದ್ದ ವೇಳೆಯೇ ದಾಳಿಕೋರರ ವಿಡಿಯೊ ಬಿಡುಗಡೆ ಮಾಡಿದ ಐಎಸ್, ಇದೇ ಮೊದಲ ಬಾರಿಗೆ ಇರಾನ್ನಲ್ಲಿ ನಡೆಸಿದ ವಿಧ್ವಂಸಕ ಕೃತ್ಯದ ಹೊಣೆ ಹೊತ್ತುಕೊಂಡಿದೆ.
- ಕಲಾಪ ನಡೆಯುತ್ತಿದ್ದ ವೇಳೆ ಬಂದೂಕು ಹಿಡಿದು ಕಚೇರಿ ಒಳನುಗ್ಗಿದ ದಾಳಿಕೋರರ ಪೈಕಿ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಮಹಿಳೆಯರ ಉಡುಪು ಧರಿಸಿದ್ದ ಪುರುಷ ಬಂದೂಕುಧಾರಿಗಳು ದಾಳಿ ನಡೆಸಿದರು ಸಂಸತ್ ಭವನದ ಮೇಲೆ ದಾಳಿ ನಡೆದ ಕೆಲ ಹೊತ್ತಿನಲ್ಲೇ ರಾಜಧಾನಿ ಟೆಹರಾನ್ ಹೊರವಲಯದಲ್ಲಿರುವ ಇರಾನ್ ಧಾರ್ಮಿಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಸಮಾಧಿ ಮೇಲೆ ಆತ್ಮಾಹುತಿ ದಾಳಿಕೋರ ಹಾಗೂ ಬಂದೂಕುಧಾರಿಗಳು ದಾಳಿ ನಡೆಸಿದರು. ಈ ವೇಳೆ ಒಬ್ಬ ಸೈನಿಕ ಮೃತಪಟ್ಟಿದ್ದು, ಒಬ್ಬ ದಾಳಿಕೋರನನ್ನು ಹತ್ಯೆ ಮಾಡಲಾಯಿತು. ಮಹಿಳೆಯನ್ನು ಬಂಧಿಸಲಾಗಿದೆ.
|
;‘ದೇವರ ಇಚ್ಛೆ’
- ಕಚೇರಿ ಒಳಗೆ ಚಿತ್ರೀಕರಿಸಲಾದ 24 ಸೆಕೆಂಡ್ನ ವಿಡಿಯೊವನ್ನು ಐಎಸ್ನ ಅಮಖ್ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ. ಇದರಲ್ಲಿ ಕೇಳಿಬರುವ ಒಬ್ಬ ವ್ಯಕ್ತಿಯ ಧ್ವನಿಯು ಅರೇಬಿಕ್ ಭಾಷೆಯಲ್ಲಿದ್ದು, ದೇವರನ್ನು ಹೊಗಳುವ ಧಾಟಿಯಲ್ಲಿದೆ. ‘ನಾವು ಹೊರಡುತ್ತೇವೆಂದು ನೀವು ಯೋಚಿಸುತ್ತಿದ್ದೀರಾ. ನಾವಿಲ್ಲೇ ಇರುತ್ತೇವೆ. ಇದು ದೇವರ ಇಚ್ಛೆ’ ಎಂದು ಒಂದು ಧ್ವನಿ ಹೇಳುತ್ತದೆ. ಖೋಮೆನಿ ಅವರ ಸಮಾಧಿ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಸಮಾಧಿಯಿದ್ದ ಕ್ಷೇತ್ರದ ಬಳಿ ಬಂದು ಬಾಂಬ್ ಸ್ಫೋಟ ನಡೆಸಿರುವುದಾಗಿ ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.[೬೧]
|
;1993ರ ಮುಂಬೈ ಸರಣಿ ಬಾಂಬ್ ಸ್ಫೋಟ
- ನೋಡಿ:1993 Bombay bombings
- 1993 ರ ಬಾಂಬೆ ಬಾಂಬ್ ಸ್ಫೋಟಗಳು: 1993 ರ ಮಾರ್ಚ್ 12 ರಂದು ಬಾಂಬೆ, ಭಾರತದಲ್ಲಿ ನಡೆದ 12 ಬಾಂಬ್ ಸ್ಫೋಟಗಳ ಸರಣಿಯಾಗಿವೆ. ಅನೇಕ ಮುಸ್ಲಿಮರನ್ನು ಕೊಂದ ಗಲಭೆಗಳಿಗೆ ಪ್ರತೀಕಾರವಾಗಿ ನಡೆಸಿದ ಸಂಘಟಿತ ದಾಳಿಗಳು. ಭಾರತೀಯ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಬಾಂಬ್ ಸ್ಫೋಟಗಳು. ಇದು ಪ್ರಪಂಚದಾದ್ಯಂತದ ಈ ರೀತಿಯ ಸರಣಿ-ಬಾಂಬ್ ಸ್ಫೋಟಗಳಲ್ಲಿ ಮೊದಲನೆಯದು. ಏಕ ದಿನ ದಾಳಿಗಳಲ್ಲಿ 257 ಸಾವುಗಳು ಮತ್ತು 717 ಗಾಯಾಳುಗಳಿಗೆ ಕಾರಣವಾದವು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಶರದ್ ಪವಾರ್ ಅವರು ನಗರದ ಮುಸ್ಲಿಂ ವಸತಿಯಲ್ಲಿ ಒಬ್ಬರಿಂದ ಬಂದ ಕಾಲ್ಪನಿಕ ಘಟನೆ ಪ್ರಚಾರಗಳನ್ನು ತಡೆಗಟ್ಟಲು, ಹದಿಮೂರು ಸ್ಫೋಟಗಳನ್ನು ಘೋಷಿಸಿದರು.
- ಈ ದಾಳಿಯನ್ನು ದಾವೂದ್ ಇಬ್ರಾಹಿಂ, D- ಕಂಪೆನಿ ಎಂದು ಹೆಸರಿಸಲಾದ ಮುಂಬೈ ಮೂಲದ ಅಂತರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ನಿಂದ ಸಂಘಟಿಸಲಾಯಿತು. ಇಬ್ರಾಹಿಂ ಅವರ ಮುಂಬಯಿಯ ಟೈಗರ್ ಮೆಮೋನ್ ಮತ್ತು ಯಾಕುಬ್ ಮೆಮೊನ್ರ ಮೂಲಕ ಮುಂಬೈಯಲ್ಲಿ ಬಾಂಬ್ ದಾಳಿಗಳನ್ನು ಸಂಘಟಿಸಲು ಮತ್ತು ಸಹಾಯ ಮಾಡಲು ನಂಬಲಾಗಿದೆ ಎಂದು ನಂಬಲಾಗಿದೆ.[೬೨]
|
;ಇದರ ಅಪರಾಧಿಗಳಿಗೆ ಶಿಕ್ಷೆ
- 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ ಆರು ಜನರು ತಪ್ಪಿತಸ್ಥರು ಎಂದು ಇಲ್ಲಿಯ ವಿಶೇಷ ‘ಟಾಡಾ’ ನ್ಯಾಯಾಲಯ ತೀರ್ಪು ನೀಡಿದೆ.
- 993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ ಆರು ಜನರು ತಪ್ಪಿತಸ್ಥರು ಎಂದು ಇಲ್ಲಿಯ ವಿಶೇಷ ‘ಟಾಡಾ’ ನ್ಯಾಯಾಲಯ ತೀರ್ಪು ನೀಡಿದೆ. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟ ಸಂಭವಿಸಿ 24 ವರ್ಷಗಳ ನಂತರ ಎರಡನೇ ಹಂತದ ವಿಚಾರಣೆಯಲ್ಲಿ ಏಳು ಜನರ ಪೈಕಿ ಅಬ್ದುಲ್ ಖಯಾಂನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಖುಲಾಸೆ ಗೊಳಿಸಲಾಗಿದೆ. ಈ ಏಳು ಜನರ ವಿರುದ್ಧ ಕ್ರಿಮಿನಲ್ ಸಂಚು, ಸರ್ಕಾರದ ವಿರುದ್ಧ ದಾಳಿ ಮತ್ತು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.2007ರಲ್ಲಿ ಮುಗಿದ ಮೊದಲ ಹಂತದ ವಿಚಾರಣೆಯಲ್ಲಿ ನೂರು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ 23 ಜನರನ್ನು ನಿರ್ದೋಷಿಗಳು ಎಂದು ಖುಲಾಸೆ ಮಾಡಲಾಗಿದೆ. ಮೊದಲ ಹಂತದ ವಿಚಾರಣೆ ಮುಗಿಯುವ ಹಂತದಲ್ಲಿ ಮುಸ್ತಫಾ ದೊಸ್ಸಾ , ಅಬು ಸಲೇಂ, ಕರಿಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಶೀದ್ ಖಾನ್, ರಿಯಾಜ್ ಸಿದ್ದಕಿ, ತಹಿರ್ ಮರ್ಚಂಟ್ ಮತ್ತು ಅಬ್ದುಲ್ ಖಯಾಂನನ್ನು ಬಂಧಿಸಿದ್ದರಿಂದ ಮುಖ್ಯ ವಿಚಾರಣೆಯಿಂದ ಇವರ ವಿಚಾರಣೆಯನ್ನು ಬೇರ್ಪಡಿಸಿ ಎರಡನೇ ಹಂತದಲ್ಲಿ ವಿಚಾರಣೆ ನಡೆಸಲಾಯಿತು.
- ಭಯಾನಕ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತಿದ್ದಲ್ಲದೆ 713 ಜನರು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ 27 ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಸಿದ್ದಿಕಿಯನ್ನು ಹೊರತುಪಡಿಸಿ ಉಳಿದ ಐವರ ವಿರುದ್ಧದ ಕ್ರಿಮಿನಲ್ ಸಂಚು, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ಟಾಡಾ ಕಾಯ್ದೆ ಪ್ರಕಾರ ಮಾಡಲಾಗಿರುವ ಆಪಾದನೆಗಳು ಸಾಬಿತಾಗಿವೆ ಎಂದು ವಿಶೇಷ ನ್ಯಾಯಾಧೀಶ ಜಿ. ಎ. ಸನಪ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಅಬು ಸಲೇಂ ಮತ್ತಿತರರಿಗೆ ಶಸ್ತ್ರಾಸ್ತ್ರ ಸಾಗಾಟ ಮಾಡಲು ಸಹಾಯ ಮಾಡಿದ ಕಾರಣಕ್ಕೆ ಟಾಡಾ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮಾತ್ರ ಸಿದ್ದಿಕಿ ತಪ್ಪಿತಸ್ಥ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಏಳು ಜನರ ವಿರುದ್ಧ ಹೊರಿಸಲಾಗಿದ್ದ ಆಪಾದನೆ ಸಾಬೀತಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
- ಆರ್ಡಿಎಕ್ಸ್ ಮತ್ತು ಇತರ ಸ್ಫೋಟಕಗಳನ್ನು ದೊಸ್ಸಾ ಸರಣಿ ಸ್ಫೋಟಕ್ಕೆ ಸ್ವಲ್ಪ ದಿನ ಮೊದಲು ಭಾರತಕ್ಕೆ ತಂದಿದ್ದ ಹಾಗೂ ಶಸ್ತ್ರಾಸ್ತ್ರ ತರಬೇತಿಗಾಗಿ ಕೆಲವು ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ ಎಂದು ಆಪಾದಿಸಲಾಗಿದೆ.
- ದೊಸ್ಸಾ ತಂದಿದ್ದ ಸ್ಫೋಟಕಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಅಬು ಸಲೇಂ ಗುಜರಾತ್ನಿಂದ ಮುಂಬೈಗೆ ಸಾಗಿಸಿದ್ದ. ಎರಡು ಎಕೆ–47 ರೈಫಲ್ಗಳನ್ನು ನಟ ಸಂಜಯ್ ದತ್ಗೆ ನೀಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಿಬಿಐ ಕೋರಿಕೆಯಂತೆ ಅಬು ಸಲೇಂ ವಿರುದ್ಧದ ಕೆಲವು ಆಪಾದನೆಗಳನ್ನು ನ್ಯಾಯಾಧೀಶರು ತೆಗೆದು ಹಾಕಿದ್ದರು. ಭಾರತ ಮತ್ತು ಪೋರ್ಚುಗಲ್ ನಡುವ ಆಗಿರುವ ಅಪರಾಧಿಗಳ ಹಸ್ತಾಂತರ ಒಪ್ಪಂದದ ಪ್ರಕಾರ ಕೆಲವು ಆಪಾದನೆಗಳನ್ನು ಹೊರಿಸಲು ಅವಕಾಶ ಇರುವುದಿಲ್ಲ ಎಂದು ಸಿಬಿಐ ತಿಳಿಸಿತ್ತು. 750 ಸರ್ಕಾರಿ ಸಾಕ್ಷ್ಯಗಳು, 50 ಸಾಕ್ಷಿಗಳು, ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ದಾಖಲೆಗಳ ಆಧಾರದ ಮೇಲೆ ನ್ಯಾಯಾಧೀಶರು ಆರು ಜನರನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದಾರೆ.
ಎರಡನೇ ಹಂತದ ವಿಚಾರಣೆ 2007ರಲ್ಲೇ ಆರಂಭ ಆಗಿದ್ದರೂ ದೊಸ್ಸಾ, ಸಲೇಂ ಮತ್ತು ಸಿಬಿಐ ಸುಪ್ರೀಂಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರಿಂದ ವಿಚಾರಣೆ ಮುಕ್ತಾಯವಾಗಲು ವಿಳಂಬವಾಗಿದೆ. ಆರಂಭದಲ್ಲಿ ವಿಶೇಷ ನ್ಯಾಯಾಧೀಶ ಪ್ರಮೋದ್ ಖೋಡೆ ಅವರು ವಿಚಾರಣೆ ನಡೆಸಿ 2007ರಲ್ಲಿ ನೂರು ಜನರಿಗೆ ಶಿಕ್ಷೆ ವಿಧಿಸಿದ್ದಾರೆ.2013ರಲ್ಲಿ ಯಾಕೂಬ್ ಮೆಮೊನ್ನ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಇತರ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿ ಸುಪ್ರೀಂ ತೀರ್ಪು ನೀಡಿದ ನಂತರ ಟಾಡಾ ನ್ಯಾಯಾಲಯದಲ್ಲಿ ವಿಚಾರಣೆ ತ್ವರಿತಗೊಂಡಿತು.
|
;ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿರುವ ಆಪಾದಿತರು
- ಮುಂಬೈ ಸರಣಿ ಬಾಂಬ್ ಸ್ಫೊಟವಾಗಿ 24 ವರ್ಷ ಕಳೆದರೂ ಸುಮಾರು ಎರಡು ಡಜನ್ಗಳಷ್ಟು ಆಪಾದಿತರು ಇನ್ನೂ ತಲೆಮರೆಸಿ ಕೊಂಡಿದ್ದಾರೆ. ಕುಖ್ಯಾತ ಪಾತಕಿ, ಘೋಷಿತ ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕಾಸ್ಕರ್ ಮತ್ತು ಇಬ್ರಾಹಿಂ ಮುಸ್ತಾಕ್ ಅಬ್ದುಲ್ ರಜಾಕ್ ನದಿಂ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್ ಸೇರಿದಂತೆ ಸುಮಾರು 24 ಆಪಾದಿತರನ್ನು ಬಂಧಿಸಲು ಪೊಲೀಸರಿಗೆ ಇದುವರೆಗೆ ಸಾಧ್ಯವಾಗಲಿಲ್ಲ. ಆಪಾದಿತರು ಪಾಕಿಸ್ತಾನ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸನ್ನೂ ಹೊರಡಿಸಿದೆ.[೬೩]
|
;ಆಫ್ಘಾನಿಸ್ತಾನ: ಬ್ಯಾಂಕ್ ಹೊರಭಾಗದಲ್ಲಿ ಕಾರ್ಬಾಂಬ್ ಸ್ಫೋಟ
- 22 Jun, 2017;
- ದಕ್ಷಿಣ ಆಫ್ಘಾನಿಸ್ತಾನದ ಹೆಲ್ಮಾಂಡ್ನ ಲಷ್ಕರ್ ಘಾ ದಲ್ಲಿರುವ ನ್ಯೂ ಕಾಬೂಲ್ ಬ್ಯಾಂಕ್ ಶಾಖೆಯ ಹೊರಭಾಗದಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ 34 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಾಂತೀಯ ಗವರ್ನರ್ ವಕ್ತಾರ ಒಮರ್ ಜವಾಕ್, ‘ಈ ಘಟನೆಯಲ್ಲಿ ಗಾಯಗೊಂಡವರು ಹಾಗೂ ಸಾವನ್ನಪ್ಪಿದವರಲ್ಲಿ ಪೊಲೀಸರು, ನಾಗರಿಕರು, ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸಂಬಳ ಪಡೆಯಲು ಬ್ಯಾಂಕಿಗೆ ಬಂದಿದ್ದ ಸೈನಿಕರು ಕೂಡ ಸೇರಿದ್ದಾರೆ ಎಂದಿದ್ದಾರೆ.[೬೪]
|
;ಜಮ್ಮು– ಕಾಶ್ಮೀರದಲ್ಲಿ
- ಜಮ್ಮು– ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು;ಏಜೆನ್ಸಿಸ್
- 23 Jun, 2017:ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಾಮಿಯಾ ಮಸೀದಿಯ ಎದುರು ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಹೊಡೆದು ಕೊಂದಿದೆ. ಡಿವೈಎಸ್ಪಿ ಮೊಹಮ್ಮದ್ ಆಯೂಬ್ ಪಂಡಿತ್ ಮೃತ ಪೊಲೀಸ್ ಅಧಿಕಾರಿ. ‘ಉದ್ರಿಕ್ತರ ಗುಂಪು ಆಯೂಬ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದೆ. ಗಲಭೆ ಹೆಚ್ಚಾದಾಗ ಆಯೂಬ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಜನರ ಗುಂಪು ನೌಹಟ್ಟಾ ಪ್ರದೇಶದ ಬಾಟಾ ಚೌಕದ ಬಳಿ ಅವರನ್ನು ಹೊಡೆದು ಕೊಂದಿದೆ.[೬೫]
|
;ಪಾಕ್ನಲ್ಲಿ ಬಾಂಬ್ ಸ್ಫೋಟ
- 24 Jun, 2017;ಪಾಕಿಸ್ತಾನದ ಮೂರು ನಗರಗಳಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಒಟ್ಟು 42 ಮಂದಿ ಮೃತಪಟ್ಟಿದ್ದು, 121 ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥರ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.[೬೬]
ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ
- 10 Jul, 2017;
- ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್ನ ಮೇಲೆ ಸೋಮವಾರ ರಾತ್ರಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಗುಜರಾತ್ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 32 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ದಾಳಿಯಲ್ಲಿ ಸತ್ತವರ ಹೆಸರು, ವಿಳಾಸ ಮತ್ತು ಗುರುತು ಇದುವರೆಗೂ ಪತ್ತೆಯಾಗಿಲ್ಲ. ರಾತ್ರಿ 8.20ಕ್ಕೆ ಬಸ್ ಅನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಅನಂತನಾಗ್ ಜಿಲ್ಲೆಯ ಪಹಲ್ ಗಾಂವ್ ಮತ್ತು ಬಲ್ತಾಲ್ ಮೂಲ ಶಿಬಿರದಿಂದ 40 ದಿನಗಳ ಅಮರನಾಥ ಯಾತ್ರೆ ಜೂನ್ 28ರಂದು ಆರಂಭವಾಗಿತ್ತು. ಅಮರನಾಥ ಯಾತ್ರೆಯ ನಿಯಮವನ್ನು ಗುಜರಾತಿನ ಬಸ್ ಚಾಲಕ ಉಲ್ಲಂಘಿಸಿದ್ದಾನೆ ಎಂದು ಪೊಲೀಸ್ ಮತ್ತು ಸರ್ಕಾರದ ಉನ್ನತ ಮೂಲಗಳು ಹೇಳಿವೆ. ನಿಯಮಗಳ ಪ್ರಕಾರ, ಯಾತ್ರೆಯಲ್ಲಿ ಭಾಗವಹಿಸುವ ಯಾವುದೇ ವಾಹನಗಳು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಏಳು ಗಂಟೆ ನಂತರ ಭದ್ರತೆ ವ್ಯವಸ್ಥೆ ಇರುವುದಿಲ್ಲ.[೬೭]
|