ಕಿರುಕುಳ

(ಹಿಂಸೆ ಇ���ದ ಪುನರ್ನಿರ್ದೇಶಿತ)

ಕಿರುಕುಳ ಶಬ್ದವು ಮನ ನೋಯಿಸುವ ಸ್ವರೂಪದ ವರ್ತನೆಗಳ ವಿಸ್ತೃತ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ತೊಂದರೆ ಕೊಡುವ ಅಥವಾ ಅಸಮಾಧಾನಗೊಳಿಸುವ ವರ್ತನೆಯೆಂದು ತಿಳಿಯಲಾಗುತ್ತದೆ, ಮತ್ತು ಇದು ವಿಶಿಷ್ಟವಾಗಿ ಪುನರಾವರ್ತನೆಗೊಳ್ಳುತ್ತದೆ. ಕಾನೂನಿನ ಅರ್ಥದಲ್ಲಿ, ಇದು ಮನಸ್ಸು ಕಲಕುತ್ತದೆ ಅಥವಾ ಬೆದರಿಸುತ್ತದೆ ಎಂದು ಕಾಣುವ ವರ್ತನೆ. ಲೈಂಗಿಕ ಕಿರುಕುಳ ಪದವು ಸಾಮಾನ್ಯವಾಗಿ ಕಾರ್ಯಸ್ಥಳದಲ್ಲಿನ ನಿರಂತರ ಮತ್ತು ಅನಪೇಕ್ಷಿತ ಲೈಂಗಿಕ ಮುಂಚಲನಗಳನ್ನು ಸೂಚಿಸುತ್ತದೆ, ಮತ್ತು ಇದನ್ನು ತಿರಸ್ಕರಿಸುವುದರಿಂದ ಆಗುವ ಪರಿಣಾಮಗಳು ಬಲಿಪಶುವಿಗೆ ಸಂಭಾವ್ಯವಾಗಿ ಬಹಳ ಅನನುಕೂಲಕರವಾಗಿರುತ್ತವೆ.

ಪೋಲೀಸ್ ಕಿರುಕುಳವೆಂದರೆ ಕಾನೂನು ಅಧಿಕಾರಿಗಳಿಂದ ಮಾಡಲಾದ ಸರಿಯಲ್ಲದ ಉಪಚಾರ. ಇದರಲ್ಲಿ ವಿಪರೀತ ಬಲಪ್ರಯೋಗ, ವ್ಯಕ್ತಿಚಿತ್ರ ದಾಖಲಿಸುವಿಕೆ, ಬೆದರಿಕೆಗಳು, ಒತ್ತಾಯಿಸುವಿಕೆ ಮತ್ತು ವರ್ಣಸಂಬಂಧಿ, ಜನಾಂಗೀಯ, ಧಾರ್ಮಿಕ, ಲಿಂಗ ಸಂಬಂಧಿ/ಲೈಂಗಿಕ, ವಯಸ್ಸು ಸಂಬಂಧಿ ಅಥವಾ ಇತರ ರೂಪಗಳ ತಾರತಮ್ಯ ಸೇರಿವೆ ಆದರೆ ಇಷ್ಟಕ್ಕೇ ಸೀಮಿತವಲ್ಲ.

ಮಾನಸಿಕ ಕಿರುಕುಳವು ಅವಮಾನಿಸುವ, ಭಯಹುಟ್ಟಿಸುವ ಅಥವಾ ನಿಂದಾತ್ಮಕ ವರ್ತನೆ. ಇದನ್ನು ಪತ್ತೆಹಚ್ಚುವುದು ಕಷ್ಟ, ಮತ್ತು ಬಲಿಪಶು ವರದಿಗಳು ಅಥವಾ ದೂರುಗಳನ್ನು ಬಿಟ್ಟು ಬೇರೆ ಯಾವುದೇ ಸಾಕ್ಷಿಯನ್ನು ಬಿಡುವುದಿಲ್ಲ. ಇದು ವಿಶಿಷ್ಟವಾಗಿ ಒಬ್ಬ ವ್ಯಕ್ತಿಯ ಆತ್ಮಗೌರವವನ್ನು ಕುಗ್ಗಿಸುತ್ತದೆ ಅಥವಾ ಒಬ್ಬರಿಗೆ ಅಗಾಧ ಯಾತನೆ ಉಂಟುಮಾಡುತ್ತದೆ. ಇದು ಶಾಬ್ದಿಕ ಟೀಕೆಗಳು, ಬೆದರಿಕೆಗಳ ವ್ಯವಸ್ಥಿತ ಪ್ರಸಂಗಗಳು, ಆಕ್ರಮಣಕಾರಿ ಕ್ರಿಯೆಗಳು ಅಥವಾ ಪುನರಾವರ್ತಿತ ಸನ್ನೆಗಳ ರೂಪವನ್ನು ತೆಗೆದುಕೊಳ್ಳಬಹುದು. ವ್ಯಕ್ತಿಗಳಿಂದ ಅಥವಾ ಗುಂಪುಗಳಿಂದ ಕಾರ್ಯಸ್ಥಳದ ಕಿರುಕುಳವು ಈ ವರ್ಗದಲ್ಲಿ ಬರುತ್ತದೆ.

ಜನಾಂಗೀಯ ಕಿರುಕುಳವೆಂದರೆ ಅವನ ಜನಾಂಗ, ಕುಲ ಅಥವಾ ವರ್ಣದ ಕಾರಣ ಒಬ್ಬ ವ್ಯಕ್ತಿಯನ್ನು ಗುರಿಮಾಡುವುದು. ಈ ಕಿರುಕುಳದಲ್ಲಿ ನಿರ್ದಿಷ್ಟವಾಗಿ ವ್ಯಕ್ತಿಗೆ ಅವನ ಜನಾಂಗ, ಕುಲ ಅಥವಾ ವರ್ಣದ ಕಾರಣ ಕೀಳೆನಿಸುವಂತೆ ಮಾಡಲು ವಿನ್ಯಾಸಗೊಳಿಸಲಾದ ಶಬ್ದಗಳು, ಕಾರ್ಯಗಳು ಮತ್ತು ಕ್ರಿಯೆಗಳು ಸೇರಿವೆ.

ಧಾರ್ಮಿಕ ಕಿರುಕುಳವೆಂದರೆ ವ್ಯಕ್ತಿಗಳು ಒಂದು ನಿರ್ದಿಷ್ಟ ಧರ್ಮವನ್ನು ಪಾಲಿಸಲು ಆಯ್ದುಕೊಳ್ಳುವುದರಿಂದ ಅವರ ವಿರುದ್ಧ ಶಾಬ್ದಿಕ, ಮಾನಸಿಕ ಅಥವಾ ದೈಹಿಕ ಕಿರುಕುಳವನ್ನು ಬಳಸಲಾಗುತ್ತದೆ. ಧಾರ್ಮಿಕ ಕಿರುಕುಳವು ಒತ್ತಾಯಪೂರ್ವಕ ಹಾಗೂ ಅನೈಚ್ಛಿಕ ಮತಾಂತರಗಳನ್ನು ಕೂಡ ಒಳಗೊಳ್ಳಬಹುದು.

ಲೈಂಗಿಕ ಕಿರುಕುಳವು ಎಲ್ಲಿ ಬೇಕಾದರೂ ಆಗಬಹುದು ಆದರೆ ಅತ್ಯಂತ ಸಾಮಾನ್ಯವಾಗಿ ಕಾರ್ಯಸ್ಥಳ, ಶಾಲೆಗಳು ಮತ್ತು ಸೇನೆಯಲ್ಲಿ ಆಗುತ್ತದೆ. ಇದು ವ್ಯಕ್ತಿಗೆ ಅಹಿತಕರವೆನಿಸುವಂತೆ ಮಾಡುವ ಲೈಂಗಿಕ ಸ್ವರೂಪದ ಅನಗತ್ಯ ಮತ್ತು ಇಷ್ಟವಿಲ್ಲದ ಶಬ್ದಗಳು, ಕಾರ್ಯಗಳು, ಕ್ರಿಯೆಗಳು, ಸನ್ನೆಗಳು, ಸಂಕೇತಗಳು, ಅಥವಾ ವರ್ತನೆಗಳನ್ನು ಒಳಗೊಂಡಿರುತ್ತದೆ. ಪುರುಷರಿಗಿಂತ ಮಹಿಳೆಯರು ಗಣನೀಯವಾಗಿ ಬಾಧಿತರಾಗುವ ಸಾಧ್ಯತೆ ಹೆಚ್ಚು, ಮತ್ತು ಎಲ್‍ಜಿಬಿಟಿಕ್ಯು ಜನರು ಕೂಡ ಹೆಚ್ಚಿದ ಅಪಾಯವನ್ನು ಎದುರಿಸುತ್ತಾರೆ.

ಉಲ್ಲೇಖ

ಬದಲಾಯಿಸಿ
"https://kn.wikipedia.org/w/index.php?title=ಕಿರುಕುಳ&oldid=849157" ಇಂದ ಪಡೆಯಲ್ಪಟ್ಟಿದೆ