ವಿಷಯಕ್ಕೆ ಹೋಗು

ಹ್ಯಾನ್ಸ್ ಗೈಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾನ್ಸ್ ಗೈಗರ್
Hans Wilhelm "Gengar" Geiger (1928)
ಜನನ(೧೮೮೨-೦೯-೩೦)೩೦ ಸೆಪ್ಟೆಂಬರ್ ೧೮೮೨
Neustadt an der Haardt
ಮರಣ24 September 1945(1945-09-24) (aged 62)
Potsdam
ರಾಷ್ಟ್ರೀಯತೆಜರ್ಮನ್
ಕಾರ್ಯಕ್ಷೇತ್ರPhysics and sciences
ಸಂಸ್ಥೆಗಳುUniversity of Erlangen
University of Manchester
ಪ್ರಸಿದ್ಧಿಗೆ ಕಾರಣGeiger counter
Geiger–Marsden experiment
Atomic nucleus
ಪ್ರಭಾವಗಳುErnest Rutherford
John Mitchell Nuttall
ಗಮನಾರ್ಹ ಪ್ರಶಸ್ತಿಗಳುHughes Medal (1929)
Duddell Medal and Prize (1937)

ಹ್ಯಾನ್ಸ್ ಗೈಗರ್(30 ಸೆಪ್ಟೆಂಬರ್ 1882 – 24 ಸೆಪ್ಟೆಂಬರ್ 1945) ಜರ್ಮನ್ ಭೌತವಿಜ್ಞಾನಿ. ಸಶಕ್ತ ಉಪಪರಮಾಣ್ವಕ ಕಣಗಳನ್ನು ಪತ್ತೆಹಚ್ಚುವಲ್ಲಿ ಬಳಸುವ ಗೈಗರ್ ಗುಣಕದ ಉಪಜ್ಞೆಕಾರ (1913) . ಒಂದನೆಯ ಮಹಾಯುದ್ಧದ ಹಿಂದಿನ ವರ್ಷಗಳಲ್ಲಿ ಲಾರ್ಡ್ ರುದರ್ಫರ್ಡನ (1871-1937) ಸಮರ್ಥ ಸಹಾಯಕನಾಗಿ ಸೇವೆ ಸಲ್ಲಿಸಿದ ಮತ್ತು ಆ ಅವಧಿಯಲ್ಲಿ ಗೈಗರ್ ಗುಣಕವನ್ನು ನಿರ್ಮಿಸಿ ಪ್ರಸಿದ್ಧಿಗೆ ಬಂದ. ಯುದ್ಧಾರಂಭವಾದ (1914) ಬಳಿಕ ಸ್ವದೇಶವಾದ ಜರ್ಮನಿಗೆ ಮರಳಿ ಫಿರಂಗಿದಳದಲ್ಲಿ ಕೆಲಸ ಮಾಡಿದ. 1925ರಲ್ಲಿ ಕೀಲ್ ವಿಶ್ವವಿದ್ಯಾಲಯದಲ್ಲೂ 1929ರಲ್ಲಿ ಟ್ಯೂಬಿಂಜನ್ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕನಾಗಿ ನೇಮಕ ಪಡೆದ. ಪ್ರಖ್ಯಾತ ಆಂಗ್ಲ ವಿಜ್ಞಾನಿ ಜೇಮ್ಸ್‌ ಚಾಡ್ವಿಕ್ ಗೈಗರನ ಶಿಷ್ಯರಲ್ಲೊಬ್ಬ. 1882ರ ಸೆಪ್ಟೆಂಬರ್ 30ರಂದು ಜನನ, 1945 ಸೆಪ್ಟೆಂಬರ್ 24 ರಂದು ಮರಣ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: