ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಕಿ ಇಂಡಿಯಾ ಲೀಗ್
- ಹಾಕಿ ಲೀಗ್
- ಹೆಸರು = ಹಾಕಿ ಇಂಡಿಯಾ ಲೀಗ್
.
- ಹಾಕಿ ಇಂಡಿಯಾ ಲೀಗ್ (ಎಚ್ಐಎಲ್)(HIL,), ಪ್ರಾಯೋಜಕ ಕಾರಣಗಳಿಗಾಗಿ ಕೋಲ್ ಇಂಡಿಯಾ ಹಾಕಿ ಇಂಡಿಯಾ ಲೀಗ್ (HIL,)ಎಂದು ಕರೆಯಲಾಗುತ್ತದೆ. ಇದು ಭಾರತದ ವೃತ್ತಿಪರ ಹಾಕಿ ಲೀಗ್ ಆಗಿದೆ. ಲೀಗ್ ಹಾಕಿ ಇಂಡಿಯಾ ವನ್ನು ಭಾರತದ ಕ್ರೀಡೆಯ ಆಡಳಿತಕ್ಕೆ ಆಯೋಜಿಸಲಾಗಿದೆ. ಎಚ್ಐಎಲ್ ಇಂಡಿಯನ್ ಪ್ರೀಮಿಯರ್ ಲೀಗ್, ಇಂಡಿಯನ್ ಸೂಪರ್ ಲೀಗ್, ಮತ್ತು ಪ್ರೊ ಕಬಡ್ಡಿ ಲೀಗ್ ಜೊತೆಗೆ, ದೇಶದ ಪ್ರಮುಖ ಕ್ರೀಡಾ ಲೀಗ್ ಒಂದು ಪರಿಗಣಿಸಲಾಗುತ್ತದೆ. [2] ಎಚ್ಐಎಲ್ ಎರಡು ತಿಂಗಳ ಕಾಲ ಜನವರಿ ಯಿಂದ ಫೆಬ್ರುವರಿ ವರೆಗೆ ನಿಯಮಿತ ಋತುಮಾನದಲ್ಲಿ ಆರು ತಂಡಗಳನ್ನು ಒಳಗೊಂಡಿದ್ದು ಪ್ರತಿ ತಂಡವೂ 10 ಆಟಗಳನ್ನು ಆಟವಾಡುವುದು.. [3] ಚಾಂಪಿಯನ್ಷಿಪ್ ಪಂದ್ಯದಲ್ಲಿ ಹಾಕಿ ಇಂಡಿಯಾ ಲೀಗ್ ವಿಜೇತರನ್ನು ನಿರ್ಧರಿಸುತ್ತದೆ ಋತುವಿನ ನಡೆಸುವಿಕೆಯನ್ನು, ಕೊನೆಯಲ್ಲಿ ಮೊದಲ ನಾಲ್ಕು ತಂಡಗಳು. ಪ್ಲೇ ಆಫ್ ಗೆ ಹೋಗುತ್ತವೆ.[೧][೨]
- ಭಾರತದಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಹಾದಿಯಲ್ಲಿದ್ದ ಹಾಕಿ ಕ್ರೀಡೆಗೆ, 'ಹಾಕಿ ಇಂಡಿಯಾ ಲೀಗ್' (ಎಚ್‌ಐಎಲ್) ಹೊಸ ಜೀವ ಕಳೆ ನೀಡಿದೆ. 2013ರಲ್ಲಿ ಆರಂಭವಾದ ಈ ಲೀಗ್ ಹಾಕಿ ಲೋಕದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಹಿಂದಿನ ನಾಲ್ಕು ಆವೃತ್ತಿಯ ಲೀಗ್ ಅಪಾರ ಜನಮನ್ನಣೆ ಗಳಿಸಿದೆ.ಸದ್ಯದಲ್ಲೇ ಐದನೇ ಆವೃತ್ತಿಗೆ ಲೀಗ್ ಸಜ್ಜುಗೊಳ್ಳಲಿದೆ. ಕ್ರಿಕೆಟ್ ಟೂರ್ನಿಯ ಯಶಸ್ಸಿನ ಬಳಿಕ ಭಾರತದ ಕ್ರೀಡಾ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ಫುಟ್‌ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ವಾಲಿಬಾಲ್, ಕುಸ್ತಿ. ಹೀಗೆ ಲೀಗ್‌ಗಳ ಪರ್ವವೇ ಸೃಷ್ಟಿಯಾಗಿದೆ. ಹಾಕಿ ಕ್ರೀಡೆಯನ್ನು ಜನಪ್ರಿಯ ಗೊಳಿಸುವ ಗುರಿಯೊಂದಿಗೆ ಹಾಕಿ ಇಂಡಿಯಾ (ಎಚ್‌ಐ) ಆರಂಭಿಸಿದ ಈ ಲೀಗ್ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುವುದು ಮಾತ್ರವಲ್ಲದೆ ಆಟಗಾರರ ಕ್ರೀಡಾ ಬದುಕಿಗೂ ಮಹತ್ವದ ತಿರುವು ನೀಡಿದೆ. ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
- ಲೀಗ್‌ನಲ್ಲಿ ದೇಶ, ವಿದೇಶದ ಆಟಗಾರರು ಮತ್ತು ನುರಿತ ಕೋಚ್‌ಗಳು ಭಾಗವಹಿಸುತ್ತಿರುವುದರಿಂದ ಯುವ ಆಟಗಾರರಿಗೆ ಹೊಸ ತಂತ್ರಗಳು ಹಾಗೂ ಆಟದ ಕೌಶಲಗಳನ್ನು ಕಲಿಯಲೂ ಕೂಡಾ ಹಾಕಿ ಲೀಗ್ ನೆರವಾಗಿದೆ. ಲೀಗ್‌ನಲ್ಲಿ ದೇಶ, ವಿದೇಶದ ಆಟಗಾರರು ಮತ್ತು ನುರಿತ ಕೋಚ್‌ಗಳು ಭಾಗವಹಿಸುತ್ತಿರುವುದರಿಂದ ಯುವ ಆಟಗಾರರಿಗೆ ಹೊಸ ತಂತ್ರಗಳು ಹಾಗೂ ಆಟದ ಕೌಶಲಗಳನ್ನು ಕಲಿಯಲು ಹಾಕಿ ಲೀಗ್ ನೆರವಾಗಿದೆ.
- ಎಚ್‌ಐಎಲ್‌ನಲ್ಲಿ ವಿದೇಶಿ ಆಟಗಾರರ ದೊಡ್ಡ ಪಡೆ ಇದೆ. ಲೀಗ್‌ನ ಕೀರ್ತಿಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವ ಉದ್ದೇಶ ದಿಂದ ಹಾಕಿ ಇಂಡಿಯಾ ವಿವಿಧ ದೇಶಗಳ ಪ್ರತಭೆಗಳಿಗೆ ಅವಕಾಶ ಕೊಟ್ಟಿದೆ.
- ಜರ್ಮನಿಯ ಮೊರಿಟ್ಜ್ ಫರ್ಸ್‌್ಟೆ, ತೋಬಿಯಸ್ ಕಾನ್‌ಸ್ಟೆಂಟ್ ಹೌಕ್, ಸ್ಟಾಲ್ವರ್ಟ್ ಫರ್ಸ್‌್ಟೆ, ಫ್ಲೋರಿಯನ್ ಫಚಸ್, ಇಂಗ್ಲೆಂಡ್‌ನ ��್ಯಷ್ಲೆ ಜಾಕ್ಸನ್, ಬಾರಿ ಮಿಡ್ಲ್‌ಟನ್, ಆಸ್ಟ್ರೇಲಿಯಾದ ಜೆಮಿ ಡ್ವೆಯರ್, ಎಡ್ಡಿ ಒಕೆಂಡೆನ್, ಸಿಮನ್ ಆರ್ಕರ್ಡ್, ಜೆರೆಮಿ ಹೇವರ್ಡ್, ಸ್ಯಾಂಡರ್ ಡಿ ವಿಜನ್ ಅವರಂತಹ ಬಲಿಷ್ಠ ಮತ್ತು ಪ್ರತಿಭಾನ್ವಿತ ಆಟಗಾರರು ಲೀಗ್‌ಗೆ ನೆಚ್ಚಿನ ಕಳೆ ನೀಡಿದ್ದಾರೆ. 2012ರಲ್ಲಿ ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿ ಗೆದ್ದಿರುವ ಸ್ಟಾಲ್ವರ್ಟ್ ಅವರನ್ನು ಹೋದ ಬಾರಿ ಕಳಿಂಗ ಲ್ಯಾನ್ಸರ್ ಫ್ರಾಂಚೈಸ್ ದಾಖಲೆಯ ಮೊತ್ತ ನೀಡಿ ಖರೀದಿ ಮಾಡಿತ್ತು. ಇದು ಈ ಆಟಗಾರರ ಇರುವಿನ ಮಹತ್ವವನ್ನು ಸಾರುತ್ತದೆ.
- ಎಚ್‌ಐಎಲ್ ಅನೇಕ ಯುವ ಆಟಗಾರರ ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸಿದೆ. ರಾಷ್ಟ್ರೀಯ ಸೀನಿಯರ್ ಮತ್ತು ಜೂನಿಯರ್ ತಂಡಗಳಲ್ಲಿ ಆಡುತ್ತಿರುವ ಡ್ರ್ಯಾಗ್ ಫ್ಲಿಕ್ ಪರಿಣತ ಹರ್ಮನ್, ಪ್ರೀತ್ ಸಿಂಗ್, ಹಾಫ್ ಬ್ಯಾಕ್ ಅರ್ಮಾನ್ ಖುರೇಷಿ, ವರುಣ್ ಕುಮಾರ್, ಹರ್ಜೀತ್ ಸಿಂಗ್ ಮತ್ತು ಗೋಲ್ ಕೀಪರ್ ಆಕಾಶ್ ಚಿಕ್ಟೆ ಅವರೆಲ್ಲಾ ಈ ಲೀಗ್‌ನ ಮೂಲಕ ಹೆಸರು ಪಡೆದವರು.
- 2017ರ ಜನವರಿ 21 ರಂದು ಆರಂಭ:
- ಹಿಂದಿನ ನಾಲ್ಕು ಆವೃತ್ತಿಗಳನ್ನು ನೋಡಿದ ಹಾಕಿ ಪ್ರಿಯರು ಈಗ ಮತ್ತೊಮ್ಮೆ ಹಾಕಿಯ ಪಂದ್ಯಗಳನ್ನು ನೋಡುವ ಕಾಲ ಸಮೀಪಿಸುತ್ತಿದೆ. 2017ರ ಜನವರಿ 21 ರಂದು ಮುಂಬಯಿಯಲ್ಲಿ ಲೀಗ್‌ಗೆ ಚಾಲನೆ ಸಿಗಲಿದ್ದು, ದಬಂಗ್ ಡೆಲ್ಲಿ ಮತ್ತು ರಾಂಚಿ ರೇಯ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೆಬ್ರುವರಿ 25 ರಂದು ಸೆಮಿಫೈನಲ್ ನಡೆಯಲಿದ್ದು 26 ರಂದು ಫೈನಲ್ ನಿಗದಿಯಾಗಿದೆ.
- ದಕ್ಷಿಣ ಭಾರತದ ಅಭಿಮಾನಿಗಳನ್ನು ಲೀಗ್‌ನತ್ತ ಆಕರ್ಷಿಸಲು ಮುಂದಾಗಿರುವ ಹಾಕಿ ಇಂಡಿಯಾ ಬೆಂಗಳೂರಿನ ತಂಡಕ್ಕೂ ಲೀಗ್‌ನಲ್ಲಿ ಭಾಗವಹಿಸುವ ಅವಕಾಶ ನೀಡಿದೆ. ಜೆಎಸ್‌ಡಬ್ಲ್ಯು ಸಮೂಹ, ಬೆಂಗಳೂರು ಫ್ರಾಂಚೈಸ್‌ನ ಒಡೆತನ ಹೊಂದಿದ್ದು 2018ರ ಆವೃತ್ತಿಯಲ್ಲಿ ತಂಡ ಲೀಗ್‌ಗೆ ಅಡಿ ಇಡಲಿದೆ. ಬೆಂಗಳೂರಿನ ಸೇರ್ಪಡೆಯಿಂದಾಗಿ ಲೀಗ್‌ನಲ್ಲಿ ಭಾಗವಹಿಸುತ್ತಿರುವ ತಂಡಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
- ಹಾಕಿ ಇಂಡಿಯಾ ಲೀಗ್‌ನಲ್ಲಿ ಕರ್ನಾಟಕದ ಆಟಗಾರರೂ ಕೌಶಲ ತೋರಿಸಿದ್ದಾರೆ. ಅನುಭವಿ ವಿ.ಆರ್. ರಘುನಾಥ್, ಎಸ್.ವಿ. ಸುನಿಲ್, ನಿಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ, ಪ್ರಧಾನ್ ಸೋಮಣ್ಣ, ಪಿ.ಆರ್. ಐಯ್ಯಪ್ಪ ಅವರು ಜನರ ಗೆದ್ದಿದ್ದಾರೆ.
- ಮುಂಚೂಣಿ ಆಟಗಾರರಾದ ಸುನಿಲ್ ಮತ್ತು ನಿತಿನ್ ಪಂಜಾಬ್ ವಾರಿಯರ್ಸ್ ತಂಡ ಪ್ರತಿನಿಧಿಸುತ್ತಿದ್ದು, ನಿಕಿನ್ ಅವರು ದಬಂಗ್ ಮುಂಬಯಿ ತಂಡದಲ್ಲಿದ್ದಾರೆ. ಪ್ರಧಾನ್ ಸೋಮಣ್ಣ ಡೆಲ್ಲಿ ವೇವ್‌ರೈಡರ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಳಿಂಗ ಲ್ಯಾನ್ಸರ್ ಪರ ಆಡುವ ಉತ್ತಪ್ಪ ಕೂಡಾ ಉತ್ತಮ ಆಟಗಾರರು. ಡ್ರ್ಯಾಗ್‌ಫ್ಲಿಕ್ ಪರಿಣತ ಆಟಗಾರ ರಘುನಾಥ್ ಮತ್ತು ಐಯ್ಯಪ್ಪ ಅವರು ಉತ್ತರ ಪ್ರದೇಶ ವಿಜರ್ಡ್ಸ್ ತಂಡದಲ್ಲಿ ಚುರುಕುಆಟದಿಂದ ಗಮನಸೆಳೆದಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರಘುನಾಥ್ ಲೀಗ್‌ನಲ್ಲಿ ಒಟ್ಟು 27 ಗೋಲು ಗಳಿಸಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಸುನಿಲ್ ಒಟ್ಟಾರೆ 9 ಗೋಲು ದಾಖಲಿಸಿ ಮೆಚ್ಚಿಗೆ ಪಡೆದಿದ್ದಾರೆ.
- (ಪಂದ್ಯ ಮುಗಿದ ಬಳಿಕ ಪಾಕ್ ತಂಡದ ಮೊಹಮ್ಮದ್ ತೌಸಿಕ್,ಅಲಿ ಅಮ್ಜದ್ ಮತ್ತು ಶಫಾಕತ್ ರಸೂಲ್ ಅವರು ಆತಿಥೇಯ ಆಟಗಾರರ ಜೊತೆ ಅಸಭ್ಯವಾಗಿ ವರ್ತಿಸಿದ್ದರು.ಈ ಘಟನೆಯ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಹಾಕಿ ಇಂಡಿಯಾದ ಆಗಿನ ಅಧ್ಯಕ್ಷ ನರಿಂದರ್ ಬಾತ್ರಾ ಆಗ್ರಹಿಸಿದ್ದರು.ಆದರೆ ಪಾಕ್ ಮಾತ್ರ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಹಾಕಿ ಇಂಡಿಯಾ ಪಾಕ್ ಆಟಗಾರರನ್ನು ಲೀಗ್‌ನಿಂದ ಹೊರಗಿಡುವ ಕಠಿಣ ತೀರ್ಮಾನ ಕೈಗೊಂಡಿತ್ತು.)[೩]
ಸೀಸನ್:ಹಾಕಿ ಇಂಡಿಯಾ ಲೀಗ್
|
ಚಾಂಪಿಯನ್
|
ಸ್ಕೋರ್ (ವರದಿ)
|
ರನ್ನರ್ ಅಪ್
|
ಕ್ರೀಡಾಂಗಣ
|
ತಂಡಗಳು #
|
2013 |
ರಾಂಚಿ ರೈನೋಸ್ |
2-1 (ವರದಿ Archived 2021-08-02 ವೇಬ್ಯಾಕ್ ಮೆಷಿನ್ ನಲ್ಲಿ.) |
ಡೆಲ್ಲಿ Waveriders |
ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ |
5
|
2014 |
ಡೆಲ್ಲಿ ವೇವ್‍ರೈಡರ್ಸ್ |
3-3 (3-1 ಪೆನ್.) (ವರದಿ) |
ಪಂಜಾಬ್ ವಾರಿಯರ್ಸ್ |
ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ |
6
|
2015 |
ರಾಂಚಿ ರೇಸ್ |
2-2 (3-2 ಪೆನ್.) (ವರದಿ) |
ಪಂಜಾಬ್ ವಾರಿಯರ್ಸ |
ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ |
6
|
2016 |
ಜೇಪೀ ಪಂಜಾಬ್ ವಾರಿಯರ್ಸ್ |
6-1. (ವರದಿ) |
ಕಳಿಂಗ ಲ್ಯಾನ್ಸರ್ಸ್
|
ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ |
6
|
ಗೋಲಿನ ಲೆಕ್ಕ ಪ್ರಥಮ ಮೂರು ಆಟಗಾರರು
[ಬದಲಾಯಿಸಿ]
ಆಟಗಾರ |
ತಂಡ |
ಫೀಲ್ಡ ಗೋಲು |
ಪೆನಾಲ್ಟಿ ಕಾರ್ನರ್ |
ಪನಾಲ್ಟಿ ಸ್ಟ್ರೋಕ್ |
ಒಟ್ಟು
|
2013: ಓಟ್ಟು ಗೋಲುಗಳು: 147
|
ಸಂದಿಪ್ ಸಿಂಗ |
ಮುಬೈ |
|
11 |
11 |
11
|
ಮನದೀಪ್ ಸಿಂಗ |
ರಾಂಚಿ |
9 |
1 |
10 |
10
|
ವಿಆರ್ ರಘುನಾಥ್ |
ಉ.ಪ್ರದೇಶ |
|
9 |
9 |
9
|
2014;ಓಟ್ಟು ಗೋಲುಗಳು: 156
|
ಸಂದಿಪ್ ಸಿಂಗ |
ಪಂಜಾಬ್ |
|
10 |
11 |
11
|
ಪೀಲಟ್ ಗೊಂಜಾಲೊ |
ಕಲಿಂಗ |
1 |
7 |
8 |
8
|
ವಿಆರ್ ರಘುನಾಥ್ |
ಉ.ಪ್ರದೇಶ |
|
8 |
8 |
8
|
2015:ಓಟ್ಟು ಗೋಲುಗಳು:139
|
ಆ್ಯಶ್ಲೆ ಜಾಕ್ ಸನ್ |
ರಾಂಚಿ |
|
11 |
12 |
12
|
*ಸಂದಿಪ್ ಸಿಂಗ್ |
ಪಂಜಾಬ್ |
|
9 |
11 |
11
|
ವಿಆರ್ ರಘುನಾಥ್ |
ಉ.ಪ್ರದೇಶ |
|
8 |
8 |
8
|
2016:ಓಟ್ಟು ಗೋಲುಗಳು:220
|
ಗ್ಲನ್ ಟರ್ನರ್ |
ಕಳಿಂಗ |
12 |
2 |
16 |
16
|
ಆ್ಯಶ್ಲೆ ಜಾಕ್ ಸನ್ |
ರಾಂಚಿ |
6 |
8 |
14 |
14
|
ರೂಪಿಂದರ್ ಪಾಲ್ ಸಿಂಗ್ |
ಡೆಲ್ಲಿ |
|
12 |
12 |
12
|
[೩]
ವಿವರ |
|
ಹಣದ ಮೊತ್ತ
|
4ನೇ ಆವೃತ್ತಿಯ ಲೀಗ್ ನ ಒಟ್ಟು ಬಹುಮನ ಮೊತ್ತ: |
|
5.70 ಕೋಟಿ ರೂ
|
ವಿಜೇತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ : |
|
2.50 ಕೋಟಿ ರೂ
|
ರನ್ನರ್ಸ್ ಅಪ್ ತಂಡ ಪಡೆದ ಬಹುಮನ ಮೊತ್ತ: |
|
1.75 ಕೋಟಿ. ರೂ
|
ಮೂರನೇ ಸ್ಥಾನ ಪಡದವರು ಪಡೆದ ಮೊತ್ತ : |
|
75 ಲಕ್ಷ ರೂ.
|