ಸಿಸ್ಕೋ ಕಂಪನಿ
ಸಂಸ್ಥೆಯ ಪ್ರಕಾರ | Public company |
---|---|
ಸ್ಥಾಪನೆ | . |
ಮುಖ್ಯ ಕಾರ್ಯಾಲಯ | San Jose, CA |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | John T. Chambers, Chuck Robbins |
ಸಿಸ್ಕೋ ಕಂಪನಿ
ಸಂಸ್ಥೆಯ ಇತಿಹಾಸ ಮತ್ತು ಸ್ಥಾಪಿತರು
[ಬದಲಾಯಿಸಿ]ಸಿಸ್ಕೋ ಒಂದು ಅಂತರಾಷ್ಟ್ರೀಯ ಕಂಪನಿ. ಸಿಸ್ಕೋ ಕಂಪನಿಯು ೧೯೮೪ರಲ್ಲಿ ಆರಂಭವಾಯಿತು.ಲೆನ್ ಬೊಸಾಕ್ ಮತ್ತು ಲರ್ನರ್ ಸ್ಯಾಂಡಿರ್ [೧] ಎಂಬ ಇಬ್ಬರು ವ್ಯಕ್ತಿಗಳು ಸೇರಿ ಸಿಸ್ಕೋ ಸಂಸ್ಥೆಯನ್ನು ಸ್ಥಾಪಿಸಿದರು.ಈ ಇಬ್ಬರು ಸಂಸ್ಥಾಪಕರು ಮೊದಲು ಸ್ಟಾಂಡ್ ಫಾರ್ಡ್ ಯೂನಿವರ್ಸಿಟಿಯ ಬೇರೆ ಬೇರೆ ವಿಭಾಗದಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ೧೯೮೧ರಂದು ಬೊಸಾಕ್ ಅವರು ಯೂನಿವರ್ಸಿಟಿರವರ ಒತ್ತಾಯದಿಂದ ಕೆಲಸ ಬಿಡಬೇಕಾಯಿತು .ಫ್ರಾನ್ಸಿಸ್ಕೊ ಎಂಬ ಪದವು ಸಿಸ್ಕೋ ಹೆಸರಿನ ಮೂಲವಾಗಿದೆ.ಈ ಕಂಪನಿಯ ಸಂಕೇತ ಚಿನ್ನದ ಬ್ರಿಡ್ಜಿನ ಎರಡು ಗೋಪುರಗಳನ್ನು ಬಿಂಬಿಸುವ ಉದ್ದೇಶವನ್ನು ಹೊಂದಿದೆ.ಸಿಸ್ಕೋ ಕಂಪನಿಯು ಕಾಲಿಫೋರ್ನಿಯಾದಲ್ಲಿ ಒಂದು ಸಣ್ಣ ಕಂಪನಿಯಾಗಿ ಬೆಳೆಯಿತು. ಇಂಟರ್ನೆಟ್ ಪ್ರಾರಂಭವಾಗುವ ಸಮಯದಲ್ಲಿ ಇದು ಪ್ರಸ್ತುತವಿತ್ತು.ಕಂಪನಿಯು ನೆಟ್ವರ್ಕ್ ಮತ್ತು ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ.ಸಿಸ್ಕೊ ಕಂಪನಿಯು ಅತ್ಯಮೂಲ್ಯವಾದ ಕಂಪನಿಗಳಲ್ಲಿ ಒಂದಾಗಿದೆ. ಆಗಸ್ಟ್ ೨೦,೧೯೯೦ರಂದು ಬೊಸಾಕ್ ಮತ್ತು ಲರ್ನರ್ ಇಬ್ಬರು ೧೭೦ಮಿಲಿಯನ್ ಹಣವನ್ನು ಪಡೆದು ಕಂಪನಿಯನ್ನು ತ್ಯಜಿಸಿ ಹೊರನಡೆದರು. .ಸಂಸ್ಥೆಯ ಪ್ರಾರಂಭದ ೧೯೯ದಿನಗಳಲ್ಲಿ ಉದ್ಯೋಗಿಗಳಿಗೆ ನಿರಂತರವಾಗಿ ಕೆಲಸಗಾರರಿಗೆ ಸಂಬಳವನ್ನು ನೀಡುವುದು ಕಂಪನಿಗೆ ಕಷ್ಟಕರವಾಗಿತ್ತು.ಇಂತಹ ಸಂಧರ್ಭದಲ್ಲಿ ಡೊನಾಲ್ಡ್ ವ್ಯಾಲಂಟೈನ್ ಅವರು ಸಿಸ್ಕೋ ಕಂಪನಿಗೆ ಭಂಡವಾಳ ನೀಡುವ ಮೂಲಕ ಕಂಪನಿಯ ಬಹುಪಾಲು ಒಡೆತನವನ್ನು ಹೊಂದುತ್ತಾರೆ. ಮುಂದಿನ ದಿನಗಳಲ್ಲಿ ಜಾನ್ ಮಾರ್ ಗ್ರಿಜ್ ಅವರು ಸಿಸ್ಕೋ ಕಂಪನಿಯ ಪ್ರೆಸಿಡೆಂಟ್ ಆಗುತ್ತಾರೆ. ೧೯೯೧ರಂದು ಜಾನ್ ಚೇಂಬರ್ಸ್ ಅವರು ಸಿಸ್ಕೋ ಸಂಸ್ಥೆಯನ್ನು ಸೇರಿದರು.ಸಿಸ್ಕೋ ಕಂಪನಿಯು ಅಭಿವ್ರುದ್ಧಿ ಮತ್ತು ಮೀಸಲಿಟ್ಟ ಜಾಲ ಗ್ರಂಥಿಗಳನ್ನು ಮಾರಿದ ಮೊದಲ ಕಂಪನಿಯಾಗಿದೆ.
ಅಭಿವ್ರುದ್ಧಿ ಮತ್ತು ಸ್ವಾಧೀನಪಡಿಸಿಕೊಂಡ ಸಂಸ್ಥೆಗಳು
[ಬದಲಾಯಿಸಿ]೧೯೯೨ರಿಂದ ೧೯೯೪ರ ನಡುವಿನ ಅವಧಿಯಲ್ಲಿ ಸಿಸ್ಕೋ ಕಂಪನಿಯು ಕಲ್ಪನಾ ಗ್ರ್ಯಾಂಡ್ ಜಂಕ್ಷನ್, ಮಾರಿಯೋ,ಮಾಝೋಲ, ಇಂಟರ್ನೆಟ್ ಸ್ವಿಚ್ಚಿಂಗ್ ಹಲವಾರನ್ನು ಸ್ವಾಧೀನಪಡಿಸಿಕೊಂಡಿತು.ಸಿಸ್ಕೋ ಕಂಪನಿಯು ಮೋಡಮ್ ಪ್ರವೇಶ ಕಪಾಟಿನಲ್ಲಿ(ಎ ಎಸ್ ೫೨೦೦) ತ್ವರಿತವಾಗಿ ಇಂಟರ್ನೆಟ್ ಸೇವೆ ಒದಗಿಸಿದರು. ೧೯೯೫ರಂದು ಜಾನ್ ಟಿ ಚೇಂಬರ್ಸ್ ಅವರ ವ್ಯಾಂಗ್ ಲ್ಯಾಬರೇಟರೀಸ್ ಕಂಪ್ಯೂಟರ್ ಇಂದಾಗಿ ಕಂಪನಿಯು ಇವರನ್ನು ಸಿ ಇ ಒ(ಅಧ್ಯಕ್ಷ)ಎಂದು ಆಯ್ಕೆಯಾದರು. ೧೯೯೩ರಂದು ಸಿಸ್ಕೋ ಕಂಪನಿಯು ಕ್ರಿಸೆಂಡೊ ಕಮ್ಯೂನಿಕೇಷನ್ಸ್ ಹಾರ್ಡ್ ವೇರನ್ನು ವಷಪಡಿಸಿಕೊಳ್ಳುತ್ತದೆ. ೧೯೯೪ರಲ್ಲಿ ಆರಂಭದಿಂದ ಹತ್ತು ವರ್ಷದ ನಂತರ ನೂರು ಮಿಲಿಯನ್ಗಿಂತಲೂ ಹೆಚ್ಚು ಲಾಭ ಪಡೆಯಿತು. ೧೯೯೫ ರಿಂದ ೧೯೯೬ರ ಕಾಲವಧಿಯಲ್ಲಿ ಕಂಪನಿಯು ಹನ್ನೊಂದು ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿತು.೧೯೯೬ರ ವರ್ಷದಲ್ಲಿ ಸ್ಟ್ರಾಟಕಾಮ್ ಎಂಬ ಸ್ವಿಚ್ಚಿಂಗ್ ಸಾಧನದ ಸಂಸ್ಥೆಯನ್ನು ಸಿಸ್ಕೋ ಕಂಪನಿಯು ವಷಪಡಿಸಿಕೊಳ್ಳುತ್ತದೆ.೧೯೯೮ರ ಹೊತ್ತಿಗೆ ಸಿಸ್ಕೋ ಕೋರ್ ಜಿಎಸ್ ಆರ್ ಮಾರ್ಗದರ್ಶಕಗಳ ಉತ್ಪನ್ನದೊಂದಿಗೆ ಇಂಟರ್ನೆಟ್ ತರಂಗದ ಸೇವೆಯಿಂದ ಕಂಪನಿಯು ಏಕಸ್ವಾಮ್ಯವನ್ನು ತಲುಪುತ್ತದೆ.೧೯೯೮ರಂದು ಸಿಸ್ಕೋ ಕಂಪನಿಯ ಬಂಡವಾಳ ನೂರು ಬಿಲಿಯನನ್ನು ತಲುಪುತ್ತದೆ. ೧೯೯೯ರಂದು ಸಿಸ್ಕೋ ಕಂಪನಿಯು ಹದಿನ್ನೇಳಕ್ಕಿಂತಲೂ ಹೆಚ್ಚು ವ್ಯವಹಾರದ ಜೊತೆ ಕೈ ಜೋಡಿಸುತ್ತದೆ.೧೯೯೯ರಲ್ಲಿ ಜುನಿಪರ್ ನೆಟ್ವರ್ಕ್ಸ್ [೨] ಹಲವಾರು ಉದ್ಯೋಗಗಳನ್ನು ಉಂಟುಮಾಡುತ್ತದೆ.೨೦೦೦ ವರ್ಷದಲ್ಲಿ ಸಿಸ್ಕೋ ಕಂಪನಿ ಮಾರುಕಟ್ಟೆಯ ಭಂಡವಾಳವು ೪೫೦ಶತಕೋಟಿ ತಲುಪಿತು.೨೦೦೦ ವರ್ಷದ ಎರಡನೇ ತ್ರೈಮಾಸಿಕದಲ್ಲಿ ೯೦೬ ಮಿಲಿಯನ್ ಆಧಾಯಗಳಿಸಿತು.೨೦೦೦ ವರ್ಷದ ���ದ್ದಕ್ಕೂ ಸಿಸ್ಕೋ ಕಂಪನಿಯು ಭಾರತದ ಗಣನೀಯ ಸ್ಥಾನದಲ್ಲಿರುತ್ತದೆ. ೨೦೦೦-೨೦೦೫ ಅಷ್ಟರಲ್ಲಿ ಅವರ ಆದಾಯ ಐವತ್ತು ಬಿಲಿಯನ್ ಹೆಚ್ಚಿಸಬೇಕೆಂಬುದು ಅವರ ಗುರಿಯಾಯಿತು.ಈ ಕಂಪನಿಯು ವಿವಿಧ ಜಾಲ ಪ್ರೋಟೋಕಾಲ್ ಇವುಗಳಿಗೆ ಹೊಂದುವ ಮಾರ್ಗನಿರ್ದೇಶಕಗಳನ್ನು ಮಾರಾಟಕ್ಕಿಡುವ ಮೂಲಕ ವಾಣಿಜ್ಯದಲ್ಲಿ ಯಶಸ್ವಿಗೊಂಡಿತು. ಸಿಸ್ಕೋ ಇಂದು ನೆಟ್ವರ್ಕಿಂಗ್ ಅಂತರಜಾಲ ಕಂಪನಿಯಾಗಿ ಯಶಸ್ವಿಯಾಗಿದೆ.ಸಿಸ್ಕೊ ಕಂಪನಿಯ ಸಾಧನಗಳು ಮಾರ್ಗದರ್ಶಕ ಮತ್ತು ಸ್ವಿಚ್ ಇವುಗಳು ಇಂಟರ್ನೆಟ್ಟಿನ ಬೆನ್ನೆಲುಬಾಗಿದೆ.೨೦೦೬ರರಲ್ಲಿ ಸಿಸ್ಕೋ ಕಂಪನಿಯು ಮಾನವ ನೆಟ್ವರ್ಕ್ ಎಂಬ ಜಾಹೀರಾತು ಆಂದೋಲನವನ್ನು ಅಳವಡಿಸಿಕೊಂಡಿತು. ಈ ಎಲ್ಲಾ ಪ್ರಯತ್ನಗಳ ಮುಖ್ಯ ಉದ್ದೇಶ ಸಿಸ್ಕೋ ಒಂದು ಮನೆಯ ಬ್ರ್ಯಾಂಡ್ ಎಂದು ಬೆಂಬಲಿಸಲು ವಿನ್ಯಾಸಗೊಳಿಸುವುದು.ಕಡಿಮೆ ಬೆಲೆಯ ಲಿಂಕ್ಸಿಸ್ ಉತ್ಪನ್ನಗಳು ಮತ್ತು ಭವಿಷ್ಯದ ಗ್ರಾಹಕ ಉತ್ಪನ್ನಗಳು ಇವುಗಳಿಗೆ ಸಿಸ್ಕೋ ಸಹಾಯಕವಾಗಿದೆ ಉದಾಹರಣೆ:- ಫ್ಲಿಪ್ ವೀಡಿಯೊ ಕ್ಯಾಮೆರಾ ಇನ್ನಿತರ ಉತ್ಪನ್ನಗಳು.೨೦೧೨ರಲ್ಲಿ ಸಿಸ್ಕೋ ಇಯು ೫ಮಿಲಿಯನ್ ಡಾಲರ್ ಬಳಸಿ ಟಿವಿ ಸಾಫ್ಟ್ವೇರ್ ಡೆವೆಲಪರ್ ಇವುಗಳನ್ನು ಪಡೆಯಲು ಆನುಮತಿ ದೊರೆಯಿತು.೨೩, ಜುಲೈ ೨೦೧೩ರರಂದು ಸಿಸ್ಕೋ ಸಿಸ್ಟಮ್ ೨.೭ ಬಿಲಿಯನ್ ಸೋರ್ಸ್ ಫೈಯರ್ ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದವನ್ನು ಘೋಷಿಸಿತು.೨೦೧೪ರ ವರ್ಷದಲ್ಲಿ ಸಿಸ್ಕೋ ಕಂಪನಿಯು ಶೇಕಡ ೬% ರಷ್ಟು ೪೦೦೦ ಸಾವಿರ ಕೆಲಸಗಾರರನ್ನು ಕೆಲಸದಿಂದ ವಜಮಾಡಿತು. ೨೦೧೩ನೆ ವರ್ಷದ ಕೊನೆಯಲ್ಲಿ ಮಾರುಕಟ್ಟೆಗಳಲ್ಲಿ ಆರ್ಥಿಕ ಅನಿಶ್ಚಿತ ಉಂಟಾಗುತ್ತದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಕಡಿಮೆ ಆಗುತ್ತದೆ. ಸಿಸ್ಕೋ ಕಂಪನಿಯ ಆದಾಯ ಕುಸಿಯುತ್ತದೆ.೨೦೧೪ ಏಪ್ರಿಲ್ ತಿಂಗಳಲ್ಲಿ ಸಿಸ್ಕೋ ಕಂಪನಿಯ ಬಂಡವಾಳ ಹೆಚ್ಚಾಗುತ್ತದೆ.ಆಗಷ್ಟ್ ೧೩, ೨೦೧೪ರಂದು ಸಿಸ್ಕೋ ಕಂಪನಿಯು ಎರಡನೇ ಪುನಃರಚನೆಯ ಭಾಗದಲ್ಲಿ ಶೇಕಡಾ ೮% ೬೦೦೦ ಸಾವಿರ ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಿದರು. ೨೦೧೫ರ ವರ್ಷದಲ್ಲಿ ಸಿಸ್ಕೋ ಕಂಪನಿಯ ಸಿ ಇ ಓ ಮತ್ತು ಅಧ್ಯಕ್ಷ ಜಾನ್ ಚೇಂಬರ್ಸ್ ಅವರನ್ನು ಸಿ ಇ ಓ ಪಟ್ಟದಿಂದ ಕಂಪನಿಯು ಕೆಳಗಿಳಿಸಿದರು. ಆದರೆ ಅಧ್ಯಕ್ಷಪಟ್ಟ ಉಳಿಯುತ್ತದೆ ಎಂದು ಘೋಷಿಸಿದರು.ಸಿಸ್ಕೋ ಕಂಪನಿಯು ಏಪ್ರಿಲ್ ೨,೨೦೧೫ರಂದು ಎಂಬ್ರೇನ್ ಸಾಫ್ಟ್ವೇರ್ ನಿರ್ಧಾರಿತ ನೆಟ್ವರ್ಕಿಂಗನ್ನು ಖರೀದಿಸಲು ಯೋಜನೆಯನ್ನು ಘೋಷಿಸಿದರು. ೨೦೧೫ ಸಿಸ್ಕೋ ತನ್ನ ಡಿ ಎನ್ ಎಸ್ ಸೇವೆಯಿಂದಾಗಿ ಹೆಸರುವಾಸಿಯಾಯಿತು ಮತ್ತು ಮೇಲ್ವಿಚಾರಣೆಯ ಡೊಮೈನನ್ನು ಸ್ವಾಧೀನಪಡಿಸಿಕೊಂಡಿತು. . ಈ ಕಂಪನಿಯು ನಿರ್ವಹಣೆಯ ವೇದಿಕೆಯ ಸೇವೆ ವಿನಿಮಯಕ್ಕೆ ಹೆಸರುವಾಸಿಯಾಗಿದೆ.ಸೆಪ್ಟೆಂಬರ್ ೩೦೧೫ರಂದು ಸಿಸ್ಕೋ ಖಾಸಗಿ ಕೋಟೆ ಕೊತ್ತಳಗಳಲ್ಲಿರುವ ದೊಡ್ಡ ಸಲಾಕೆಯ ಬಾಗಿಲು ಕಂಪ್ಯೂಟರ್ ಭದ್ರತಾ ಉದ್ಯಮ ಗ್ರಾಹಕರಿ ಹಾಗೂ ಸರ್ಕಾರಿ ವಲಯದ ಸೈಬರ್ ಸೆಂಟರ್ ಸೇವೆಯನ್ನು ಯುಕೆ ಕಂಪನಿಯ ಮೂಲದ ಕಂಪನಿಯು ಪಡೆಯಬೇಕೆಂದು ತನ್ನ ಉದ್ದೇಶವನ್ನು ಘೋಷಿಸಿತು.
ವಸ್ತು ಮತ್ತು ಸೇವೆಗಳು
[ಬದಲಾಯಿಸಿ]ಸಿಸ್ಕೊ ಸಂಸ್ಥೆಯ ವಸ್ತುಗಳು ಮತ್ತು ಸೇವೆಗಳುಅನಾಲಿಟಿಕ್ಸ್ ಮತ್ತು ಆಟೊಮೇಷನ್ ಸಾಫ್ಟ್ವೇರ್ ,ಅಪ್ಲಿಕೇಶನ್ ನೆಟ್ವರ್ಕಿಂಗ್ ಸೇವೆಗಳು,ಬ್ಲೇಡ್ ಬದಲಾಯಿಸುತ್ತದೆ, ಮೋಡ ಮತ್ತು ನಿರ್ವಹಣೆಯ ವ್ಯವಸ್ಥೆ,ಸಹಯೋಗ ಎಂಡ್ಪಾಯಿಂಟ್, ಡೇಟಾ ಸೆಂಟರ್ ಅನಾಲಿಟಿಕ್ಸ್, ಗ್ರಾಹಕ ಸಹಯೋಗ, ಡೇಟಾ ಸೆಂಟರ್ ನಿರ್ವಹಣೆ ಮತ್ತು ಆಟೊಮೇಷನ್ , ಆಪ್ಟಿಕಲ್ ನೆಟ್ವರ್ಕಿಂಗ್ , ಸಲಹಾ, ಅನುಷ್ಟಾನ, ತರಬೇತಿ, ಟೆಲಿಪ್ರೆಸೆನ್ಸ್ , ಭದ್ರತಾ ಡೇಟಾ ಸೆಂಟರ್ ಮುಂತಾದ ವಸ್ತು ಮತ್ತು ಸೇವೆಗಳನ್ನು ಒದಗಿಸುತ್ತದೆ.
==ಮಾಧ್ಯಮ ಮತ್ತು ಪ್ರಶಸ್ತಿಗಳು==
ಸಂಸ್ಥೆಯು ಮತ್ತದರ ಇತಿಹಾಸ ವೆಂಚರ್ಡ್ ಸಾಕ್ಷ್ಯಚಿತ್ರವನ್ನು 2011ರಂದು ಪ್ರದರ್ಶಿಸಲಾಯಿತು ಸಿಸ್ಕೋ ಸಂಸ್ಥೆಯು ನೌಕರರ ಮತ್ತು ಸಮುಧಾಯದ ನಡುವೆ ಒಳ್ಳೆಯ ಸಂಬಂಧವನ್ನು ಕಾಪಾಡುವ ಮೂಲಕ ರಾನ್ ಬ್ರೌನ್ ಪ್ರಶಸ್ತಿಯನ್ನು ಪಡೆಯಿತು. ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮರವರು ಸಿಸ್ಕೋ ಸಂಸ್ಥೆಯನ್ನು ಗುಣಮಟ್ಟದ ಸಂಸ್ಥೆ ಎಂದು ಗುರುತಿಸಿ ಗೌರವಿಸಿದರು. ತಂತ್ರಜ್ಞಾನ ಸಲಹಾ ಸಂಸ್ಥೆ (ಲೆಕ್ಸೆಲ್ನೋವ) ವರದಿಯ ಪ್ರಕಾರ, ಸಿಸ್ಕೋ ಸಂಸ್ಥೆಯು ಭದ್ರತಾ ಸಂಬಧಿತ ಪೇಟೆಂಟುಗಳ ಮೂಲಕ ಹೆಚ್ಚು ಆಧಾಯ ಪಡೆಯುತ್ತದೆ.
ತಂತ್ರಜ್ಞಾನದ ಆಧುನೀಕರಣ
[ಬದಲಾಯಿಸಿ]ಮೇಘ, ಥಿಂಗ್ಸ್ ಇಂಟರ್ನೆಟ್, ಸಾಫ್ಟ್ವೇರ್ ಡಿಫೈನ್ಡ್ ನೆಟ್ವರ್ಕಿಂಗ್ ಮುಂತಾದವುಗಳು
ಉಲ್ಲೇಖಗಳು
[ಬದಲಾಯಿಸಿ]
<reflist>