ಶೋಯೆಬ್ ಅಖ್ತರ್
Shoaib Akhtar | ||||
ಪಾಕಿಸ್ತಾನ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Shoaib Akhtar | |||
ಅಡ್ಡಹೆಸರು | The Rawalpindi Express | |||
ಹುಟ್ಟು | 8 13 1975 | |||
Rawalpindi, ಪಾಕಿಸ್ತಾನ | ||||
ಎತ್ತರ | 5 ft 11 in (1.80 m) | |||
ಪಾತ್ರ | Bowler | |||
ಬ್ಯಾಟಿಂಗ್ ಶೈಲಿ | Right handed | |||
ಬೌಲಿಂಗ್ ಶೈಲಿ | Right arm fast | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 150) | 29 November 1997: v West Indies | |||
ಕೊನೆಯ ಟೆಸ್ಟ್ ಪಂದ್ಯ | 8 December 2007: v India | |||
ODI ಪಾದಾರ್ಪಣೆ (cap 123) | 28 March 1998: v Zimbabwe | |||
ಕೊನೆಯ ODI ಪಂದ್ಯ | 3 May 2009: v Australia | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ ಕ್ರಿಕೆಟ್ | One Day International | First-class cricket | List A cricket | |
ಪಂದ್ಯಗಳು | 46 | 144 | 133 | 195 |
ಒಟ್ಟು ರನ್ನುಗಳು | 544 | 373 | 1,670 | 811 |
ಬ್ಯಾಟಿಂಗ್ ಸರಾಸರಿ | 10.07 | 9.81 | 12.27 | 12.10 |
೧೦೦/೫೦ | 0/0 | 0/0 | 0/1 | 0/1 |
ಅತೀ ಹೆಚ್ಚು ರನ್ನುಗಳು | 47 | 43 | 59* | 56 |
ಬೌಲ್ ಮಾಡಿದ ಚೆಂಡುಗಳು | 8,143 | 6,798 | 20,460 | 9,306 |
ವಿಕೆಟ್ಗಳು | 178 | 223 | 467 | 301 |
ಬೌಲಿಂಗ್ ಸರಾಸರಿ | 25.69 | 21.85 | 21.26 | 21.46 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 12 | 4 | 28 | 6 |
೧೦ ವಿಕೆಟುಗಳು ಪಂದ್ಯದಲ್ಲಿ | 2 | n/a | 2 | n/a |
ಶ್ರೇಷ್ಠ ಬೌಲಿಂಗ್ | 6/11 | 6/16 | 6/11 | 6/16 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 12/– | 17/– | 41/– | 30/– |
ದಿನಾಂಕ 9 May, 2009 ವರೆಗೆ. |
ಶೋಯೆಬ್ ಅಖ್ತರ್ ರು (ಪಂಜಾಬೀ, ಉರ್ದು: شعیب اختر; ಪಂಜಾಬ್ನ ರಾವಲ್ಪಿಂಡಿಯಲ್ಲಿ ಜನನ 13 ಆಗಸ್ಟ್ 1975) ಓರ್ವ ಪಾಕಿಸ್ತಾನೀ ಬಲಗೈ ವೇಗದ ಬೌಲರ್ ಆಗಿದ್ದು ವಿಶ್ವದ ಅಧಿಕ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟ್ ಪಂದ್ಯವೊಂದರಲ್ಲಿ ಎರಡು ಬಾರಿ 161.3 ಕಿಲೋಮೀಟರ್‌ಗಳ (100.2 mph) ವೇಗದಲ್ಲಿ ಎಸೆತ/ಬೌಲಿಂಗ್‌ವನ್ನು ಮಾಡಿದ್ದು ವಿಶ್ವ ದಾಖಲೆಯಾಗಿದೆ. ಜಡ/ನಿರ್ಜೀವ ಪಿಚ್‌ಗಳಲ್ಲಿಯೂ ವೇಗದ ಯಾರ್ಕರ್‌ಗಳು ಹಾಗೂ ತೀಕ್ಷ್ಣ ಬೌನ್ಸರ್‌ಗಳನ್ನು ಎಸೆಯಬಲ್ಲ ಅವರ ಸಾಮರ್ಥ್ಯವು ಅವರನ್ನು ಮಾರಕರನ್ನಾಗಿಸಿವೆ.
ಆದಾಗ್ಯೂ, ಅವರು ಕ್ರಿಕೆಟ್ ವಿವಾದದಿಂದ ದೂರವಿದ್ದವರೇ ಅಲ್ಲ, ಬಹಳಷ್ಟು ಬಾರಿ ಸಾಂಘಿಕ ಕ್ರೀಡಾಪಟುವಲ್ಲವೆಂಬ ದೂರುಗಳಿಗೆ ಕಾರಣರಾಗಿದ್ದಾರೆ. ಶೋಯೆಬ್ ಅವರನ್ನು 2005ರಲ್ಲಿ ಆಸ್ಟ್ರೇಲಿಯಾದಲ್ಲಿನ ಪ್ರವಾಸದಿಂದ ಸ್ವದೇಶಕ್ಕೆ ಮರಳಿ ಕಳಿಸಲಾಗಿತ್ತು. ಅದಾದ ವರ್ಷದ ನಂತರ ನಿಷೇಧಿತ ಮದ್ದುಸೇವನೆ ಪರೀಕ್ಷೆಯಲ್ಲಿ ಧನಾತ್ಮಕ ವರದಿಯಿಂದ ಉದ್ದೀಪನ ಮದ್ದು ಕಳಂಕಕ್ಕೊಳಪಟ್ಟಿದ್ದರು. ಆದಾಗ್ಯೂ ಅವರ ಮೇಲೆ ಹೇರಿದ್ದ ನಿಷೇಧವನ್ನು ಕೋರಿಕೆಯ ಮೇರೆಗೆ ಹಿಂತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್ 2007ರಲ್ಲಿ, ತಮ್ಮ ಸಹಆಟಗಾರ ಮೊಹಮ್ಮದ್ ಆಸಿಫ್‌ರೊಡನೆ ಬೀದಿರಂಪ/ಜಗಳ ಮಾಡಿಕೊಂಡ ಆರೋಪದ ಮೇಲೆ ಅನಿರ್ದಿಷ್ಟ ಅವಧಿಯವರೆಗೆ PCBಯು ಶೋಯೆಬ್ ಅವರ ಮೇಲೆ ನಿಷೇಧ ಹೇರಿತ್ತು.[೧] 1 ಏಪ್ರಿಲ್ 2008ರಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಂಸ್ಥೆಯ ಕಾರ್ಯನೀತಿಯ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡಿದ ಕಾರಣಕ್ಕಾಗಿ ಶೋಯೆಬ್ ಅವರ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿತ್ತು.[೨] ಅಕ್ಟೋಬರ್ 2008ರ ಹಾಗೆ, ಲಾಹೋರ್ ಉಚ್ಚ ನ್ಯಾಯಾಲಯವು ಮೊಕದ್ದಮೆಯ ವಿಚಾರಣೆ ಮುಗಿಯುವವರೆಗೆ 5 ವರ್ಷಗಳ ನಿಷೇಧವನ್ನು ಅಮಾನತ್ತಿನಲ್ಲಿರಿಸಿದೆಯಲ್ಲದೇ ಶೋಯೆಬ್‌ರವರನ್ನು ಕೆನಡಾದ ಟ್ವೆಂಟಿ20 ನಾಲ್ಕು ತಂಡಗಳ ಪಂದ್ಯಾವಳಿಯ 15-ಮಂದಿಯ ತಂಡಕ್ಕೆ ಹೆಸರಿಸಲಾಗಿದೆ.[೩]
ಆರಂಭಿಕ ವರ್ಷಗಳು
[ಬದಲಾಯಿಸಿ]ಶೋಯೆಬ್‌ರವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ರಾವಲ್ಪಿಂಡಿಯ ಸನಿಹದ ಸಣ್ಣ ಪಟ್ಟಣ ಮೋರ್ಗಾದಲ್ಲಿ ಜನಿಸಿದರು. ಅವರ ತಂದೆ ಮೋರ್ಗಾದಲ್ಲಿ ಅಟ್ಟಾಕ್ ಆಯಿಲ್ ರಿಫೈನರಿ ಎಂಬ ಸಂಸ್ಥೆಯಲ್ಲಿ ನೌಕರರಾಗಿದ್ದರು. ಅವರ ತಂದೆಯವರು ಪಂಜಾಬೀಯಾಗಿದ್ದರೆ ಅವರ ತಾಯಿಯು ಪಖ್‌ಟೂನ್/ಪಾಖ್‌ಟೂನ್ ಜನಾಂಗದವಾಗಿದ್ದಾರೆ. ಶೋಯೆಬ್ ತನ್ನ ಶಿಕ್ಷಣವನ್ನು ಮೋರ್ಗಾದ ಎಲಿಯಟ್ ಪ್ರೌಢಶಾಲೆಯಲ್ಲಿ ಆರಂಭಿಸಿ ನಂತರ ರಾವಲ್ಪಿಂಡಿಯ ಅಸ್ಘರ್ ಮಾಲ್ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಅಲ್ಲಿ ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿದುದರ ಪರಿಣಾಮವಾಗಿ ಅವರು ಲೋಕಪ್ರಸಿದ್ಧಿ ಪಡೆಯಲು ಸಾಧ್ಯವಾಯಿತು.
ಕ್ರಿಕೆಟ್ ವೃತ್ತಿಜೀವನ
[ಬದಲಾಯಿಸಿ]ಶೋಯೆಬ್'ರ ಗಮನ ಸೆಳೆಯುವಂತಹಾ ಸಾಧನೆಗಳ ಓಟವು 1999ರಲ್ಲಿ ಅವರು ಪ್ರಸಿದ್ಧಿಗೆ ಬರಲು ಕಾರಣವಾದ ಭಾರತ ವಿರುದ್ಧದ ಪೂರ್ವ-ವಿಶ್ವ ಕಪ್ ಸರಣಿಯಲ್ಲಿ ಆರಂಭಗೊಂಡಿತು. ಷಾರ್ಜಾ ಹಾಗೂ ನಂತರ 1999ರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಪ್ರದರ್ಶಿಸಿದ ಅಸಾಧಾರಣ ಎಸೆತ/ಬೌಲಿಂಗ್‌ಗಳ ಮೂಲಕ ಅದು ಮುಂದುವರೆಯಿತು. ಸ್ಮರಣೀಯ ಸಾಧನೆಯು ಕಲ್ಕತ್ತಾದಲ್ಲಿ ನಡೆದ ಏಷ್ಯನ್ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ 1999ರಲ್ಲಿ ಪಾಕಿಸ್ತಾನ ತಂಡಕ್ಕೆ ಅವರು ಸೇರ್ಪಡೆಗೊಂಡ ಹೊಸದರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್‌ರವರ ವಿಕೆಟ್‌ಗಳೂ ಸೇರಿದಂತೆ ಎಂಟು ವಿಕೆಟ್‌ಗಳನ್ನು ಯಶಸ್ವೀ ಎಸೆತಗಳ ಮೂಲಕ ಪಡೆದಾಗ ಭಾರತದಲ್ಲಿ ಬಂದಿತು. ಅದು ಶೋಯೆಬ್'ರು ಸಚಿನ್ ತೆಂಡೂಲ್ಕರ್‌ರನ್ನು ಎದುರಿಸಿದ ಪ್ರಥಮ ಸಂದರ್ಭವಾಗಿತ್ತಲ್ಲದೇ ಶೋಯೆಬ್ ಸಚಿನ್‌ಗೆ ಬೌಲ್ ಮಾಡಿದ ಪ್ರಥಮ ಎಸೆತವಾಗಿತ್ತು.
ನಂತರ 2002ರಲ್ಲಿ ಅವರು ಆಸ್ಟ್ರೇಲಿಯಾದ ವಿರುದ್ಧ ಚುರುಕಾದ ಎಸೆತ/ಬೌಲಿಂಗ್ ದಾಳಿ ಮಾಡಿ ಉತ್ತಮ ಬೆಳವಣಿಗೆ ತೋರಿದರು. 2003ರ ವಿಶ್ವ ಕಪ್ ವಿಶೇಷವಾಗಿ ಅವರಿಗೆ ನೀಡಿದ ವಿಪರೀತ ಪ್ರಚಾರದಿಂದಾಗಿ ಅವರ ಪಾಲಿಗೆ ದೊಡ್ಡ ವಿಫಲತೆಯಾಗಿ ಪರಿಣಮಿಸಿದ ಕಾರಣ, ಅದರ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ನ್ಯೂಜಿಲೆಂಡ್ ವಿರುದ್ಧದ 2004ರ ಸರಣಿಯಲ್ಲಿ ಅಬ್ಬರದಿಂದ ತಂಡಕ್ಕೆ ಮರಳಿದರೂ 2004ರಲ್ಲಿಯೇ ಭಾರತದ ವಿರುದ್ಧದ ಸರಣಿಯನ್ನು ಕಳೆದುಕೊಂಡರು. ಅವರು ನಾಯಕ ಇಂಜಮಾಮ್-ಉಲ್-ಹಕ್‌ರು ತಂಡದ ಬದ್ಧತೆಯ ಬಗ್ಗೆ ಸಂಶಯ ವ್ಯಕ್ತಪಡಿಸುವಂತೆ ಗಾಯಗೊಳ್ಳುವಿಕೆಯ ನೆಪ ಹೂಡಿ ಮೈದಾನದಿಂದ ಹೊರನಡೆದಾಗ ಸರಣಿಯು ವಿವಾದದೊಂದಿಗೆ ಕೊನೆಗೊಂಡಿತು. ಅದರ ಪರಿಣಾಮವಾಗಿ ಇಂಜಮಾಮ್-ಉಲ್-ಹಕ್ ಹಾಗೂ ತರಬೇತುದಾರ ಬಾಬ್ ವೂಲ್ಮರ್‌ರವರುಗಳೊಂದಿನ ಬಾಂಧವ್ಯ ಹದಗೆಟ್ಟಿತು. ಆದಾಗ್ಯೂ PCBಯು ನೇಮಿಸಿದ ವೈದ್ಯಕೀಯ ಮಂಡಳಿಯು ಆತನಿಗೆ ಆದ ಗಾಯದ ಸ್ವರೂಪವನ್ನು ಪರಿಶೀಲಿಸಲು, ಎಲ್ಲಾ ಅನುಮಾನಗಳನ್ನು ತಳ್ಳಿಹಾಕಿತು.[೪]
2005ರಲ್ಲಿ, ಶೋಯೆಬ್ ತನ್ನ ತಂಡದ ಪ್ರಬಲ ಬೌಲರ್ ಎಂಬ ಹೆಗ್ಗಳಿಕೆಯನ್ನು ಮತ್ತೆ ಗಳಿಸಿಕೊಂಡರು. ಇಂಗ್ಲೆಂಡ್ ವಿರುದ್ಧದ ಮೂರು-ಟೆಸ್ಟ್‌ಪಂದ್ಯಗಳ ಸ್ವದೇಶೀ ಸರಣಿಯಲ್ಲಿ ಆಡುತ್ತಾ, ನಿರ್ಜೀವ/ಜಡ ಪಿಚ್‌ಗಳಲ್ಲೂ ಗಮನ ಸೆಳೆಯುವಂತಹಾ ಎಸೆತ/ಬೌಲಿಂಗ್ ಸಾಧನೆಗಳನ್ನು ಮಾಡಿ ಉತ್ತಮ ಸರಣಿ ನೀಡಿದರು. ಅವರ ನಿಧಾನಗತಿಯ ಚೆಂಡಿನ ಬಳಕೆಯು ಆಂಗ್ಲ ದಾಂಡಿಗರ/ಬ್ಯಾಟ್ಸ್‌ಮನ್‌ಗಳನ್ನು ಆಡಲಾರದಂತೆ ಮಾಡಿತ್ತು. ಅವರು ಹದಿನೇಳು ವಿಕೆಟ್‌ಗಳನ್ನು ಪಡೆದು ಸರಣಿಯೊಂದರಲ್ಲಿ ಅತ್ಯಂತ ಹೆಚ್ಚಿನ ವಿಕೆಟ್ ಪಡೆದವರಾಗಿ ಹೊರಹೊಮ್ಮಿದರು. ಆತನ ಸ್ವಪ್ರತಿಷ್ಠೆಯ ನಿಲುವು ಹಾಗೂ ತಂಡದ ಮೇಲಿರುವ ಬದ್ಧತೆಯ ಕೊರತೆಗಳಿಂದಾಗಿ ವರ್ಸೆಸ್ಟರ್‌ಷೈರ್ ಅಧ್ಯಕ್ಷ ಜಾನ್ ಎಲಿಯಟ್‌ರೂ ಮಾಡಿದ ಟೀಕೆಯಂತೆ ಎಲ್ಲಾ ಕಡೆಗಳಿಂದಲೂ ಟೀಕೆಗೊಳಪಟ್ಟಿದ್ದರಿಂದ ಆತನ ಪುನರಾಗಮನವು ಕೂಡಾ ಗಮನಾರ್ಹವಾಗಿತ್ತು. ಆತನ ಸಾಧನೆಯನ್ನು "ಎರಡೂ ತಂಡಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ನನ್ನ ಭಾವನೆಯ ಪ್ರಕಾರ (ಶೋಯೆಬ್) ಆತನಿರಬಹುದು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಆಂಗ್ಲ ನಾಯಕ ಮೈಕೆಲ್ ವಾಘನ್‌ರೂ ಗುರುತಿಸಿದ್ದರು.[೫] 100.2 mph ಎಸೆತದ ಮೂಲಕ ಕ್ರಿಕೆಟ್ ಎಸೆತ/ಬೌಲಿಂಗ್ ಇತಿಹಾಸದಲ್ಲಿನ 100 mphಗಳ ಗಡಿಯನ್ನು ಮೀರಿದ ಬೌಲರ್, ಎಂದೂ ಹೆಸರಾಗಿರುವರಲ್ಲದೇ, ಆ ಎಸೆತವು ಇದುವರೆಗೂ ಅತಿ ವೇಗದ್ದೆಂಬ ದಾಖಲೆಯನ್ನು ಉಳಿಸಿಕೊಂಡಿದೆ.
ಅಕ್ಟೋಬರ್ 29, 2007ರಂದು ���ಖ್ತರ್ ಲಾಹೋರ್‌ನಲ್ಲಿನ 13-ಪಂದ್ಯಗಳ ನಿಷೇಧದಿಂದ ಹೊರಬಂದು ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಹಾಗೂ ನಿರ್ಧಾರಕ ODI ಪಂದ್ಯದಲ್ಲಿ 4-43ರ ಗಳಿಕೆಯನ್ನು ಮಾಡಿ ಉತ್ತಮ ಸಾಧನೆ ತೋರಿಸಿದರು. ಅದಾದ ನಂತರ ಅವರನ್ನು ಪಾಕಿಸ್ತಾನದ 2007ರ ಭಾರತ ಪ್ರವಾಸಕ್ಕೆ ಆಯ್ಕೆಯಾದ 16-ಮಂದಿಯ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು, ಇದನ್ನು ಅವರು ಯಾವುದೇ ಘಟನೆಗಳಿಲ್ಲದೇ ಯಶಸ್ವಿಯಾಗಿ ಮುಗಿಸಿದರು.
ನ್ಯಾಯಾಧೀಶ ರಾಣಾ ಭಗವಾನ್‌ದಾಸ್ ಒಮ್ಮೆ ಶೋಯೆಬ್ ಅಖ್ತರ್‌ರು ಪಾಕಿಸ್ತಾನೀ ಕ್ರಿಕೆಟ್‌ನ ದಂತಕಥೆ ಎಂದು ಹೇಳಿಕೆ ನೀಡಿದ್ದಾರೆ.[೬]
ಕೌಂಟಿ ಕ್ರಿಕೆಟ್
[ಬದಲಾಯಿಸಿ]ಶೋಯೆಬ್ ಆಂಗ್ಲ ಕೌಂಟಿ ಕ್ರಿಕೆಟ್‌ನಲ್ಲಿ ಮೂರು ಕೌಂಟಿ ಪಂದ್ಯಗಳನ್ನು ಆಡಿದ್ದಾರೆ : ಸೋಮರ್‌ಸೆಟ್ (2001), ಡು/ದುರ್ಹಾಮ್ (2003 ಹಾಗೂ 2004) ಹಾಗೂ ವರ್ಸೆಸ್ಟರ್‌ಷೈರ್ (2005). ಅವರು ಅದರಲ್ಲಿ ಯಶಸ್ಸಿನ ಕ್ಷಣಗಳನ್ನು ಹೊಂದಿದ್ದರೂ (ಉದಾಹರಣೆಗೆ, ಡು/ದುರ್ಹಾಮ್ ಪರವಾಗಿ ಸೋಮರ್‌ಸೆಟ್ ವಿರುದ್ಧ 2003ರ ನ್ಯಾಷನಲ್ ಲೀಗ್‌ನಲ್ಲಿ 5-35 ವಿಕೆಟ್‌ಗಳನ್ನು ಪಡೆದು, ಎರಡು ವರ್ಷಗಳ ನಂತರ ಅದೇ ಸ್ಪರ್ಧೆಯಲ್ಲಿ ವರ್ಸೆಸ್ಟರ್‌ಷೈರ್‌ನ ಪರವಾಗಿ ಗ್ಲಾಮೋರ್ಗನ್‌ನ ವಿರುದ್ಧ 6-16 ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದರು) ಅವರು ಆರೋಗ್ಯ/ಸಾಮರ್ಥ್ಯ ಸಮಸ್ಯೆಗಳಿಂದ ಬಳಲಿದರಲ್ಲದೇ, ತಮ್ಮ ಕೆಲಸದಲ್ಲಿ ಅಗತ್ಯ ಶ್ರದ್ಧೆಯನ್ನು ತೋರಿಸುತ್ತಿಲ್ಲವೆಂದು ಆರೋಪವನ್ನೂ ಎದುರಿಸಿದರು. ಈ ಸಂದರ್ಭವು ನಿರ್ದಿಷ್ಟವಾಗಿ ವರ್ಸೆಸ್ಟರ್‌ಷೈರ್‌ಗೆ ಅನ್ವಯಿಸುತ್ತದೆ : ಅಧ್ಯಕ್ಷ ಜಾನ್ ಎಲಿಯಟ್ "ಆ ತರಹದ ಆಟಗಾರರು ನಮ್ಮ ಕ್ಲಬ್‌ಗೆ ತಕ್ಕವರಲ್ಲ. ವಾಸ್ತವವೆಂದರೆ, ಶೋಯೆಬ್‌ರು ತಾವಿರುವ ಯಾವುದೇ ಕ್ಲಬ್‌ಗೂ ಸೂಕ್ತರಲ್ಲ. ಅವರೊಬ್ಬ ಮಹಾತಾರೆ ಹಾಗೂ ಅವರು ಕೇವಲ ತಮಗನಿಸಿದ್ದಷ್ಟೇ ಮಾಡುತ್ತಾರೆ" ಎಂದು ಹೇಳಿದ್ದರು."[೭]
ಇಂಡಿಯನ್ ಪ್ರಿಮಿಯರ್ ಲೀಗ್
[ಬದಲಾಯಿಸಿ]ಶೋಯೆಬ್ IPLನ ಪ್ರಥಮ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ ಪರವಾಗಿ ಡೆಲ್ಲಿ ಡೇರ್‌ಡೆವಿಲ್ಸ್‌ನ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಪುನರಾಗಮನ ಮಾಡಿದರು}. 133 ರನ್ನುಗಳ ಅಲ್ಪ ಮೊತ್ತದಿಂದ ಪಾರಾಗಲು, ಶೋಯೆಬ್ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಂಡದ್ದು ಅಂತಿಮವಾಗಿ ಡೇರ್‌ಡೆವಿಲ್ಸ್ ತಂಡವನ್ನು 110ಕ್ಕೆ ಸೀಮಿತಗೊಳಿಸಿತು. ಅವರು ಮೂರು ಓವರ್‌ಗಳಿಂದ 4-11ರ ಅಂಕಿಅಂಶವನ್ನು ಪಡೆದ ಸಾಧನೆಯು ಅವರನ್ನು, ಪಂದ್ಯದ ಪ್ರಧಾನ ಆಟಗಾರ ಪ್ರಶಸ್ತಿಗೆ ಅರ್ಹರನ್ನಾಗಿಸಿತು.[೮][೯] ತನ್ನ ಸಾಧನೆಯನ್ನು ಸಮರ್ಥಿಸುವಂತೆ ಯಾವುದೇ ಅಂಶಗಳನ್ನು ತಿಳಿಸಲು ನಿರಾಕರಿಸಿದ ಶೋಯೆಬ್, "ನಾನು ಕೇವಲ ಪಂದ್ಯ ಗೆಲ್ಲುವುದನ್ನು ಇಚ್ಛಿಸಿದ್ದೆ ಅಷ್ಟೇ" ಎಂದರು." ನೈಟ್ ರೈಡರ್ಸ್' ನಾಯಕ ಸೌರವ್ ಗಂಗೂಲಿಯವರೂ ಶೋಯೆಬ್'ರ ಸಾಧನೆಯನ್ನು ಹೀಗೆ ಹೇಳಿಕೆ ನೀಡಿ ಪರಿಗಣಿಸಿದರು, "ಅವರು ನಮ್ಮ ದೇಶಕ್ಕೆ ಅನೇಕ [ವಿಚಾರಗಳು ] ಸಮಸ್ಯೆಗಳನ್ನಿಟ್ಟುಕೊಂಡು ಬಂದರು...ಆದರೆ ಅವರು ಬಹಳಷ್ಟು ಉತ್ತಮ ಪ್ರವೃತ್ತಿಯನ್ನೇ ತೋರಿದರು."[೧೦] ನೈಟ್ ರೈಡರ್ಸ್ ಅಖ್ತರ್‌ರನ್ನು ಅವರ IPL ಒಪ್ಪಂದದಿಂದ ಅವರ ಗಾಯಗಳ ಇತಿಹಾಸದಿಂದಾಗಿ ಅವರನ್ನು ಮುಕ್ತಗೊಳಿಸಿದ್ದಾರೆಂದು ವ್ಯಾಪಕ ವರದಿಗಳಿದ್ದರೂ ನೈಟ್ ರೈಡರ್ಸ್'ನ ಅಧಿಕಾರಿಗಳು ಈ ವರದಿಗಳನ್ನು ನಿರಾಕರಿಸಿ ವೇಗದ ಬೌಲರ್‌ರೊಡನೆ ಇನ್ನೂ ಮಾತುಕತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ[೧೧].
ಅಂತರರಾಷ್ಟ್ರೀಯ ಎಸೆತ/ಬೌಲಿಂಗ್ ದಾಖಲೆಗಳು
[ಬದಲಾಯಿಸಿ]ಟೆಸ್ಟ್‌ಗಳಲ್ಲಿ ಐದು-ವಿಕೆಟ್‌ಗಳ ಗಳಿಕೆಗಳು
[ಬದಲಾಯಿಸಿ]ಟೆಸ್ಟ್‌ಗಳಲ್ಲಿ ಐದು-ವಿಕೆಟ್‌ಗಳ ಗಳಿಕೆಗಳು | ||||||
---|---|---|---|---|---|---|
ಸಂಖ್ಯೆ | ಅಂಕಿಅಂಶಗಳು | ಪಂದ್ಯ | ವಿರುದ್ಧ | ನಗರ/ರಾಷ್ಟ್ರ | ಸ್ಥಳ | ಋತು/ಸಮಯ/ಕಾಲ |
1 | 5/43 | 3 | ದಕ್ಷಿಣ ಆಫ್ರಿಕಾ | ಡರ್ಬನ್, S.A. | ಕಿಂಗ್ಸ್‌ಮೀಡ್ | 1998 |
2 | 5/75 | 13 | ಶ್ರೀಲಂಕಾ | ಪೇಷಾವರ್, ಪಾಕಿಸ್ತಾನ | ಅರ್ಬಾಬ್ ನಿಯಾಜ್ ಕ್ರೀಡಾಂಗಣ | 1999 |
3 | 5/24 | 16 | ವೆಸ್ಟ್ ಇಂಡೀಸ್ | ಷಾರ್ಜಾ, UAE | ಷಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ | 2002 |
4 | 6/11 | 19 | ಆಸ್ಟ್ರೇಲಿಯಾ | ಕೊಲಂಬೋ, ಶ್ರೀಲಂಕಾ | PSS | 2002 |
5 | 6/50 | 25 | ಬಾಂಗ್ಲಾದೇಶ್ | ಪೇಷಾವರ್, ಪಾಕಿಸ್ತಾನ | ಅರ್ಬಾಬ್ ನಿಯಾಜ್ ಕ್ರೀಡಾಂಗಣ | 2003 |
6 | 5/48 | 27 | ನ್ಯೂಜಿಲೆಂಡ್ | ವೆಲ್ಲಿಂಗ್‌ಟನ್, ನ್ಯೂಜಿಲೆಂಡ್ | ಬೇಸಿನ್ ರಿಸರ್ವ್ | 2003 |
7 | 6/30 | 27 | ನ್ಯೂಜಿಲೆಂಡ್ | ವೆಲ್ಲಿಂಗ್‌ಟನ್, ನ್ಯೂಜಿಲೆಂಡ್ | ಬೇಸಿನ್ ರಿಸರ್ವ್ | 2003 |
8 | 5/60 | 30 | ಶ್ರೀಲಂಕಾ | ಫೈಸಲಾಬಾದ್, ಪಾಕಿಸ್ತಾನ | ಇಕ್ಬಾಲ್ ಕ್ರೀಡಾಂಗಣ | 2004 |
9 | 5/99 | 31 | ಆಸ್ಟ್ರೇಲಿಯಾ | ಪರ್ತ್, ಆಸ್ಟ್ರೇಲಿಯಾ | WACA ಮೈದಾನ | 2004 |
10 | 5/109 | 32 | ಆಸ್ಟ್ರೇಲಿಯಾ | ಮೆಲ್ಬೋರ್ನ್, ಆಸ್ಟ್ರೇಲಿಯಾ | MCG | 2004 |
11 | 5/71 | 36 | ಇಂಗ್ಲೆಂಡ್ | ಲಾಹೋರ್, ಪಾಕಿಸ್ತಾನ | ಗಡ್ಢಾಫಿ ಕ್ರೀಡಾಂಗಣ | 2005 |
ಟೆಸ್ಟ್‌ಗಳಲ್ಲಿ ಹತ್ತು -ವಿಕೆಟ್ ಗಳಿಕೆಗಳು
[ಬದಲಾಯಿಸಿ]ಟೆಸ್ಟ್‌ಗಳಲ್ಲಿ ಹತ್ತು -ವಿಕೆಟ್ ಗಳಿಕೆಗಳು | ||||||
---|---|---|---|---|---|---|
ಸಂಖ್ಯೆ | ಪಂದ್ಯ ಅಂಕಿಅಂಶಗಳು | ಪಂದ್ಯ | ವಿರುದ್ಧ | ನಗರ/ರಾಷ್ಟ್ರ | ಸ್ಥಳ | ಋತು/ಸಮಯ/ಕಾಲ |
1 | 10/80 | 25 | ಬಾಂಗ್ಲಾದೇಶ್ | ಪೇಷಾವರ್, ಪಾಕಿಸ್ತಾನ | ಅರ್ಬಾಬ್ ನಿಯಾಜ್ ಕ್ರೀಡಾಂಗಣ | 2003 |
2 | 11/78 | 27 | ನ್ಯೂಜಿಲೆಂಡ್ | ವೆಲ್ಲಿಂಗ್‌ಟನ್, ನ್ಯೂಜಿಲೆಂಡ್ | ಬೇಸಿನ್ ರಿಸರ್ವ್ | 2003 |
ODI ಐದು-ವಿಕೆಟ್ ಗಳಿಕೆಗಳು
[ಬದಲಾಯಿಸಿ]ODI ಐದು-ವಿಕೆಟ್ ಗಳಿಕೆಗಳು | ||||||
---|---|---|---|---|---|---|
ಸಂಖ್ಯೆ | ಪಂದ್ಯ ಅಂಕಿಅಂಶಗಳು | ಪಂದ್ಯ | ವಿರುದ್ಧ | ನಗರ/ರಾಷ್ಟ್ರ | ಸ್ಥಳ | ಋತು/ಸಮಯ/ಕಾಲ |
1 | 5/19 | 42 | ನ್ಯೂಜಿಲೆಂಡ್ | ಕರಾಚಿ, ಪಾಕಿಸ್ತಾನ | ನ್ಯಾಷನಲ್ ಕ್ರೀಡಾಂಗಣ | 2001 |
2 | 6/16 | 60 | ನ್ಯೂಜಿಲೆಂಡ್ | ವೆಲ್ಲಿಂಗ್‌ಟನ್, ನ್ಯೂಜಿಲೆಂಡ್ | ಬೇಸಿನ್ ರಿಸರ್ವ್ | 2002 |
3 | 5/25 | 64 | ಆಸ್ಟ್ರೇಲಿಯಾ | ಆಸ್ಟ್ರೇಲಿಯಾ, ಆಸ್ಟ್ರೇಲಿಯಾ | GABBA ಮೈದಾನ | 2002 |
4 | 5/54 | 127 | ಇಂಗ್ಲೆಂಡ್ | ಲಾಹೋರ್, ಪಾಕಿಸ್ತಾನ | ಗಡ್ಢಾಫಿ ಕ್ರೀಡಾಂಗಣ | 2005 |
ಕ್ರಿಕೆಟ್ ವಿವಾದಗಳು ಹಾಗೂ ಗಾಯಗೊಳ್ಳುವಿಕೆಗಳು
[ಬದಲಾಯಿಸಿ]ಶೋಯೆಬ್'ರ ವೃತ್ತಿಜೀವನವು ಗಾಯಗಳು/ಗಾಯಗೊಳ್ಳುವಿಕೆಗಳು, ವಿವಾದಗಳು, ಹಾಗೂ ಕೆಟ್ಟ ಮನೋಭಾವ/ನಿಲುವುಗಳ ಮೇಲಿನ ಆರೋಪಗಳಿಂದ ಪೀಡಿತವಾಗಿದೆ. ತನ್ನ ವಿಧ್ವಂಸಕ ವೇಗದಿಂದ ಕಿರಿಯ ವಯಸ್ಸಿನಲ್ಲೇ ತಾರಾಪಟ್ಟ ದೊರಕಿದ ನಂತರ ಅವರು ತನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳುವುದಕ್ಕಿಂತ ಹೆಚ್ಚಿನ ಆಸಕ್ತಿಯನ್ನು ಪ್ರಚಾರದ ಮೋಹಕತೆ/ಗ್ಲಾಮರ್‌ಗಳಲ್ಲಿ ಹೊಂದಿದ್ದರು. ಅವರು ಅಂತಿಮವಾಗಿ 100 mphಗಳ ಗಡಿಯನ್ನು ಮೀರಿದರೂ, ಅವರ ಮನೋಭಾವ/ನಿಲುವು ಆತನ ಖ್ಯಾತಿ ಹಾಗೂ ಆರೋಗ್ಯ/ಸಾಮರ್ಥ್ಯಗಳಿಗೆ ಅಪಾರ ಹಾನಿ ಉಂಟುಮಾಡಿತು. 2003 ವಿಶ್ವ ಕಪ್‌ನಲ್ಲಿನ ಕಳಪೆ ಪ್ರದರ್ಶನದ ನಂತರ, ಆಗಿನ ನಾಯಕ ವಕಾರ್ ಯೂನಿಸ್‌ರೊಡನೆ ವಾದ ವಿವಾದದ ಘರ್ಷಣೆ/ಕ್ಷುಲ್ಲಕ ಜಗಳಕ್ಕಿಳಿದಿದ್ದರು. ನಂತರ ಯೂನಿಸ್‌ರೂ ಸೇರಿದಂತೆ ಉಳಿದ ಆಟಗಾರರ ಜೊತೆಗೆ ಆತನನ್ನೂ ವಜಾ ಮಾಡಲಾಯಿತು. 2003ರಲ್ಲಿ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯೊಂದರಲ್ಲಿ, ಚೆಂಡನ್ನು ವಿರೂಪಗೊಳಿಸುತ್ತಿರುವಾಗ ಸಿಕ್ಕಿಬಿದ್ದು,ಚೆಂಡು ವಿರೂಪಗೊಳಿಸುವಿಕೆಯ ಆರೋಪದ ಮೇಲೆ ನಿಷೇಧಕ್ಕೊಳಗಾದ ಸರ್ವದಾ ಎರಡನೇ ಆಟಗಾರರೆನಿಸಿಕೊಂಡರು. ಅದೇ ವರ್ಷ ಒಂದು ಟೆಸ್ಟ್ ಹಾಗೂ ಎರಡು ODIಗಳ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೊಂದರಲ್ಲಿ ಪಾಲ್ ಆಡಮ್ಸ್‌ರನ್ನು ಅವಾಚ್ಯ ಪದದಿಂದ ನಿಂದಿಸಿದ್ದುದಕ್ಕಾಗಿ ನಿಷೇಧಕ್ಕೊಳಗಾದರು. ಭಾರತದೊಂದಿಗಿನ 2004ರ ಸ್ವದೇಶೀ/ಸ್ವದೇಶ ಸರಣಿಯಲ್ಲಿ, ಮಣಿಕಟ್ಟು ಹಾಗೂ ಬೆನ್ನಿನ ಗಾಯಗಳಿಗೆ ಒಳಗಾಗಿದ್ದು ಅವುಗಳ ಸತ್ಯಾಸತ್ಯತೆಗಳ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿತು. ಅಂತಿಮ ಟೆಸ್ಟ್‌ನಲ್ಲಿ ಅವರು ಆಘಾತ/ಗಾಯದ ಕಾರಣ ನೀಡಿ ಪಂದ್ಯದ ಮಧ್ಯದಲ್ಲಿ ಚೆಂಡೆಸೆತ/ಬೌಲ್ ಮಾಡದೇ ಉಳಿದಿದ್ದರೂ, ನಂತರ ಬ್ಯಾಟಿಂಗ್ ಮಾಡಲು ಬಂದು ಸುವ್ಯಕ್ತವಾಗುವಂತೆಯೇ ಆಹ್ಲಾದಿಸುತ್ತಾ ಆಟವಾಡಿ ಹಲವರ ಹುಬ್ಬೇರುವಂತೆ ಮಾಡಿದ್ದರು. ಅವರ ಗಾಯಗೊಳ್ಳುವಿಕೆಯು ನಾಟಕವೆಂದು ಸಿದ್ಧಪಡದಿದ್ದರೂ, ವಿಶೇಷವಾಗಿ ಪಂದ್ಯಾನಂತರದ ಪತ್ರಿಕಾ ಗೋಷ್ಠಿಯಲ್ಲಿ ಹಕ್‌ರು ತಮ್ಮ ಆಕ್ರೋಶವನ್ನು ಹೊರಹಾಕಿದಾಗ ಅವರ ಖ್ಯಾತಿಗೆ ಕುಂದು ಬಂದಿತು. ಅವರ ದುರುಪಯೋಗದ ನಡವಳಿಕೆ ಹಾಗೂ ಭಾಗಶಃ ರಾಜಕೀಯದಿಂದಾಗಿ ನಾಯಕ ಹಾಗೂ ತರಬೇತುದಾರರೊಂದಿಗಿನ ಅವರ ಬಾಂಧವ್ಯ ಮತ್ತಷ್ಟು ಹದಗೆಟ್ಟಿತು.
2005 ಆಸ್ಟ್ರೇಲಿಯಾ ಪ್ರವಾಸದಿಂದ ಅಶಿಸ್ತು, ಬದ್ಧತೆಯ ಕೊರತೆ, ಹಾಗೂ ಮನೋಭಾವದ ದೂರುಗಳಿಂದಾಗಿ ಎಂಬ ಪುಕಾರುಗಳ ನಡುವೆ ಮಂಡಿರಜ್ಜುವಿಗಾದ ಆಘಾತ/ಗಾಯದಿಂದಾಗಿ ಅವರನ್ನು ಹಿಂದೆ ಕಳಿಸಲಾಯಿತು. ಅದಾದ ನಂತರ ತಡ ರಾತ್ರಿಯ ನಿಷೇಧಾಜ್ಞೆಯನ್ನು ಉಲ್ಲಂಘಿಸಿದುದಕ್ಕಾಗಿ PCB ಅವರಿಗೆ ದಂಡ ವಿಧಿಸಿತು.[೧೨] ಈ ಸಂದರ್ಭದಲ್ಲಿ ಒಂದು ಕಾಲದಲ್ಲಿ ಸಹಆಟಗಾರರು, ಪ್ರತಿಸ್ಪರ್ಧಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಶೋಯೆಬ್ ಅವರಿಂದಲೇ ದೂಷಣೆಗೊಳಗಾದರು. ಅವರ ವೃತ್ತಿಜೀವನದ ಉಳಿದ ಭಾಗವು ಅಂತಿಮವಾಗಿ ಉದ್ದೀಪನ ಮದ್ದು ಸೇವನೆಯ ಬಳಕೆಯಿಂದಾಗಿ ಎರಡು ವರ್ಷಗಳ ನಿಷೇಧಕ್ಕೊಳಗಾಗುವವರೆಗೆ ಕೀಲು ಹಾಗೂ ಮೊಣಕಾಲು ಗಾಯಗೊಳ್ಳುವಿಕೆಗಳಿಂದ ಪರಿಹರಿಸಲಾಗದ ಜಟಿಲ ಸಮಸ್ಯೆಯಾಗಿ ಮಾರ್ಪಟ್ಟು ಫೆಬ್ರವರಿ 2006ರಲ್ಲಿ ಅವರು ಶಸ್ತ್ರಚಿಕಿತ್ಸೆಗೊಳಪಡುವುದು ಅನಿವಾರ್ಯವಾಯಿತು.
ನವೆಂಬರ್ 2006ರಲ್ಲಿ, ಪಾಕಿಸ್ತಾನೀ ತಂಡದ ಭಾರತದಲ್ಲಿನ ಸಂಪರ್ಕಾಧಿಕಾರಿ, ಅನಿಲ್ ಕೌಲ್‌ರು, ICC ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಹಿಂದಿನ ಸಂಜೆ ತಂಡದ ಬಸ್‌ನಲ್ಲಿ ನುಡಿಸಬೇಕಾದ ಸಂಗೀತದ ವಿಚಾರವಾಗಿ ಆರಂಭವಾದ ಜಗಳದಲ್ಲಿ ಶೋಯೆಬ್ ತರಬೇತುದಾರ ಬಾಬ್ ವೂಲ್ಮರ್‌ರಿಗೆ ಕಪಾಳಮೋಕ್ಷ ಮಾಡಿದರೆಂದು ಆರೋಪಿಸಿದರು. ಆದಾಗ್ಯೂ ನಂತರ ಶೋಯೆಬ್ ಹಾಗೂ ವೂಲ್ಮರ್ ಈರ್ವರೂ ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದರು.[೧೩]
ಉದ್ದೀಪನ ಮದ್ದುಕಳಂಕ
[ಬದಲಾಯಿಸಿ]ಅಕ್ಟೋಬರ್ 16, 2006ರಂದು ಮೊಹಮ್ಮದ್ ಆಸಿಫ್‌ರೊಂದಿಗೆ ಶೋಯೆಬ್‌ರ ಮೇಲೆ ನಡೆಸಿದ ಉದ್ದೀಪನಮದ್ದು ಸೇವನಾ ಪರೀಕ್ಷೆಯಲ್ಲಿ ನ್ಯಾಂಡ್ರೋಲಿನ್ ಪತ್ತೆಯಾದ್ದರಿಂದ ಅವರಿಬ್ಬರನ್ನು PCB ಅಮಾನತುಗೊಳಿಸಿತು.[೧೪] ಅದಾದ ನಂತರ ಅವರಿಬ್ಬರನ್ನು ICC ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ 2006ರಿಂದ ಹೊರತುಪಡಿಸಲಾಯಿತು.[೧೫] ಮಾಜಿ PCB ಅಧ್ಯಕ್ಷ ನಂತರ ಹೇಳಿಕೆ ನೀಡಿ ಉದ್ದೀಪನ ಮದ್ದಿನ ಪರೀಕ್ಷೆಗಳಿಗೆ ಅವರ ಸತತ "ವಿನಾಯಿತಿ/ನಿರ್ಬಂಧ/ನಿರಾಕರಣೆ"ಗಳಿಂದಾಗಿ ತಮಗೆ ಯಾವಾಗಲೂ ಶೋಯೆಬ್‌ರು ಮಾದಕವಸ್ತು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಅನುಮಾನವಿದ್ದುದಾಗಿ ತಿಳಿಯಪಡಿಸಿದ್ದರು.[೧೬] ಪಾಕಿಸ್ತಾನದ ನಾಯಕ ಇಂಜಮಾಮ್ ಉಲ್ ಹಕ್ ಕೂಡಾ ಹಿಂದೆಯೇ ಶೋಯೆಬ್'ರ ಉದ್ದೀಪನ ಮದ್ದು ದುರ್ಬಳಕೆ ಬಗ್ಗೆ ದೂರು ನೀಡಿದ್ದರೂ PCBಯು ಅವರ ಮೇಲೆ ಕ್ರಮ ಕೈಗೊಂಡಿರಲಿಲ್ಲ.[೧೭] ಪಾಕಿಸ್ತಾನದ ಸುದ್ದಿಸಂಸ್ಥೆಗಳ ವರದಿಗಳು ಕೇಂದ್ರ ರಾಜಧಾನಿಯ ಆರಕ್ಷಕರು ಶೋಯೆಬ್‌ರನ್ನು ಮಾದಕವಸ್ತುಗಳ ಸಮೇತ ಸುಮಾರು ಮೂರು ವರ್ಷಗಳ ಹಿಂದೆ ಬಂಧಿಸಿದ್ದುದಾಗಿ ತಿಳಿಸಿದ್ದವು. ನಂತರ ಅವರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ವಿಧಿಸಿದ್ದ ನಿಷೇಧಾಜ್ಞೆ ಮೀರಿ ಶೋಯೆಬ್ ನೈಟ್‌ಕ್ಲಬ್‌ವೊಂದರಲ್ಲಿ ಮಾರಿಜುವಾನಾದ ಧೂಮಪಾನ ಮಾಡುತ್ತಿದ್ದುದನ್ನುಕಂಡಿರುವುದಾಗಿ ವರದಿ ಮಾಡಲಾಗಿತ್ತು.[೧೭]
ಶೋಯೆಬ್ ತಕ್ಷಣವೇ ತಮ್ಮ ನಿರಪರಾಧಿತ್ವವನ್ನು ಘೋಷಿಸಿ ತಾವು ಯಾವುದೇ ಮಾದಕ ವಸ್ತುವನ್ನು ಉದ್ದೇಶಪೂರ್ವಕವಾಗಿ ಸೇವಿಸಿರುವುದನ್ನು ನಿರಾಕರಿಸಿದರು. ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ, ತಾವು ಸಹಆಟಗಾರರು ಅಥವಾ ಪ್ರತಿಸ್ಪರ್ಧಿಗಳನ್ನು ಮೋಸಗೊಳಿಸುವವರಲ್ಲವೆಂದು ಹೇಳಿಕೊಂಡಿದ್ದರು.[೧೮] PCBಯ ಆಂಟಿ-ಡೋಪಿಂಗ್ ಕಮಿಟಿ/ಮಾದಕವಸ್ತುಬಳಕೆ ನಿರೋಧಕ ಸಮಿತಿಯು (ADC), ಅವರು ಆಸಿಫ್‌ರೊಂದಿಗೆ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ತಾವೂ ಸ್ಟಿರಾಯ್ಡ್-ಅಲ್ಲದ ಪೂರಕ ಆಹಾರಗಳನ್ನು ಸೇವಿಸಿದ್ದುದಾಗಿ ವಾದಿಸಿದರು.[೧೯] ಆದಾಗ್ಯೂ ಅವರು ಕಮಿಟಿ/ಸಮಿತಿಯ ಮುಂದೆ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸುವಲ್ಲಿ ವಿಫಲರಾದರು. PCBಗೆ ಸಲ್ಲಿಸಿದ ತನ್ನ ವರದಿಯಲ್ಲಿ ADCಯು ಎರಡು ವರ್ಷಗಳ ನಿಷೇಧವನ್ನು ಶಿಫಾರಸು ಮಾಡಿತ್ತು.[೨೦]
ನವೆಂಬರ್ 1, 2006ರಂದು PCBಯು ಎರಡು-ವರ್ಷಗಳ ಕಾಲ ಶೋಯೆಬ್‌ರನ್ನು ಹಾಗೂ ಒಂದು-ವರ್ಷದ ಕಾಲ ಮೊಹಮ್ಮದ್ ಆಸಿಫ್‌ರನ್ನು ಅಮಾನತ್ತಿನಲ್ಲಿರಿಸಿ, ಆ ಅವಧಿಯಲ್ಲಿ ವೃತ್ತಿಪರ ಕ್ರಿಕೆಟ್ ಆಡದಂತೆ ನಿಷೇಧಿಸಿತು.[೨೧] ಶೋಯೆಬ್‌ರನ್ನು ಅದಾದ ನಂತರ ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಯ ಮಾದಕವಸ್ತು ಸೇವನೆಯ ತಪ್ಪಿತಸ್ಥರ ಪಟ್ಟಿಯಲ್ಲಿ ಸೇರಿಸಿತು.[೨೨] ಆದಾಗ್ಯೂ, ಡಿಸೆಂಬರ್ 5, 2006ರಂದು ತಮ್ಮ ವಕೀಲ ಅಬಿದ್ ಹಸನ್ ಮಿಂಟೋರ, ಮೂಲಕ ಶೋಯೆಬ್ ಮಾಡಿದ ಕೋರಿಕೆಯಿಂದ ಅವರ ಹೆಸರನ್ನು ತೆಗೆಯಲಾಯಿತು.[೨೩]
ಖುಲಾಸೆ
[ಬದಲಾಯಿಸಿ]ಡಿಸೆಂಬರ್ 5, 2006ರಂದು ಹಿಂದಿನ ಕಮಿಟಿ/ಸಮಿತಿಯು ತಮ್ಮ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕುವಂತೆ ಅವರು ಮಾಡಿದ್ದ ಕೋರಿಕೆಗಳನ್ನು ಪರಿಶೀಲಿಸಲು ನೇಮಿಸಿದ್ದ ನ್ಯಾಯಮಂಡಲಿಯು ಶೋಯೆಬ್ ಹಾಗೂ ಮೊಹಮ್ಮದ್ ಆಸಿಫ್‌ರನ್ನು ಖುಲಾಸೆಗೊಳಿಸಿತು. ಶೋಯೆಬ್'ರ ವಕೀಲ, Mr. ಅಬಿದ್ ಹಸನ್ ಮಿಂಟೊರಿಂದ ನಡೆದ ಸ್ಪಷ್ಟ ವಿಚಾರಣೆಯ ಬಳಿಕ, ನ್ಯಾಯಮೂರ್ತಿ ಫಕ್ರುದ್ದೀನ್ ಇಬ್ರಾಹಿಂರ ನೇತೃತ್ವದ ಮೂವರು-ಸದಸ್ಯರ ಕಮಿಟಿ/ಸಮಿತಿಯು ಖುಲಾಸೆಯ ಪರವಾಗಿ ಎರಡು-ಒಂದರ ಮತ ಹಾಕಿತು. ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಸೀಬ್ ಅಹ್ಸನ್ ಹಾಗೂ ಇಬ್ರಾಹಿಂರು ಖುಲಾಸೆಯ ಪರವಾಗಿದ್ದರೆ, ಮೂರನೆಯ ಸದಸ್ಯರಾದ ಡ್ಯಾನಿಷ್ ಜಹೀರ್‌ರು ಅಸಮ್ಮತಿಸಿದ್ದರು. ತಕ್ಷಣದ ಮಾದಕವಸ್ತು ಬಳಕೆಯ ಆರೋಪ ಮಾಡುವಿಕೆ ಹಾಗೂ ನಿರ್ದಯ ತೀರ್ಪನ್ನು ತಕ್ಷಣ ನೀಡುವಿಕೆಯಲ್ಲಿ ಅವ್ಯವಹಾರಗಳ ಸಾಧ್ಯತೆಯೂ ಸೇರಿದಂತೆ “ಆಕ್ಷೇಪಾರ್ಹ ಸಂದರ್ಭಗಳ”ನ್ನು ಎತ್ತಿತೋರಿಸಲಾಯಿತು. ಮಾನಕ ಪ್ರಕ್ರಿಯೆಗಳನ್ನು ಅನುಸರಿಸದಿದ್ದುದರಿಂದ ಸಂಪೂರ್ಣ ಉದ್ದೀಪನ ಮದ್ದುಸೇವನೆ ಪತ್ತೆಯ ಪ್ರಕ್ರಿಯೆಯೇ ತಾಂತ್ರಿಕವಾಗಿ ದೋಷಪೂರಿತವೆಂಬ ಅಭಿಪ್ರಾಯಕ್ಕೆ ಬರಲಾಯಿತು. ಕಮಿಟಿ/ಸಮಿತಿಯು ಪುಷ್ಟೀಕರಿಸಿದ ಇನ್ನಿತರ ವಿಚಾರಗಳಲ್ಲಿ ನಿಷೇಧಕ್ಕೊಳಗಾಗಿರುವ ಉದ್ದೀಪನ ಮದ್ದು ತಾವು ಸೇವಿಸುತ್ತಿದ್ದ ಪೂರಕ ಆಹಾರದಲ್ಲಿದೆ ಎಂಬ ಬಗ್ಗೆ ಈರ್ವರಿಗೂ ತಿಳಿದಿರಲಿಲ್ಲವೆಂದೂ, ಅದಕ್ಕೆ ಪ್ರಮುಖ ಕಾರಣ PCB ಸ್ವತಃ ತಾನೇ ಪೂರಕ ಆಹಾರಗಳಲ್ಲಿರಬಹುದಾದ ಕಲ್ಮಶತೆಯು ಉಂಟು ಮಾಡುವ ಅಪಾಯದ ಬಗ್ಗೆ ಮಾಹಿತಿಯನ್ನೇ ನೀಡಿರಲಿಲ್ಲವೆಂಬುದಾಗಿತ್ತು.[೨೪][೨೫]
ಶೋಯೆಬ್ ಹಾಗೂ ಮೊಹಮ್ಮದ್ ಆಸಿಫ್ ಇಬ್ಬರೂ ತಮಗೆ ಸಮಂಜಸವಾದ ವಿಚಾರಣೆಯ ಅವಕಾಶ ಕೊಟ್ಟಿದುದಕ್ಕಾಗಿ PCB ಅಧ್ಯಕ್ಷ ನಸೀಮ್ ಅಶ್ರಫ್ ಅವರಿಗೆ ಹಾಗೂ ತಮ್ಮ ಸಹಆಟಗಾರರು, ನಾಯಕ, ಹಾಗೂ ತರಬೇತುದಾರರು ನೀಡಿದ ನೈತಿಕ ಬೆಂಬಲಕ್ಕಾಗಿ ಕೃತಜ್ಞತೆ ಅರ್ಪಿಸಿದರು. ಆದಾಗ್ಯೂ ಅವರು ತಮ್ಮ ಫಾರ್ಮ್ ಮರುಕಂಡುಕೊಳ್ಳಲು ಹಾಗೂ ಆರೋಗ್ಯ/ಸಾಮರ್ಥ್ಯ ವೃದ್ಧಿಸಲು ಮೊದಲಿಗೆ ದೇಶೀಯವಾಗಿ ಆಟವಾಡಲು PCB ಶಿಫಾರಸು ಮಾಡಿದ ಕಾರಣ 2006ರ Nov-Dec/ನವೆಂ-ಡಿಸೆಂ ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿಯೇ ನಡೆದ ವೆಸ್ಟ್ ಇಂಡೀಸ್ vs. ಪಾಕಿಸ್ತಾನದ ಸರಣಿಯಲ್ಲಿ ಆಡಲಿಲ್ಲ.[೧]
ಆದಾಗ್ಯೂ, WADA, ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ ಸಂಸ್ಥೆಯು ಪಾಕಿಸ್ತಾನ'ದ ನಿರ್ಧಾರವನ್ನು ವೇಗದ ಬೌಲರ್‌ಗಳಾದ ಶೋಯೆಬ್ ಹಾಗೂ ಮೊಹಮ್ಮದ್ ಆಸಿಫ್‌ರ ಮೇಲೆ ಹೇರಿದ ನಿಷೇಧವನ್ನು ತೆಗೆಯುವ ಸ್ವಿಟ್ಜರ್ಲೆಂಡ್ನ ಲಾಸನ್ನೆಯಲ್ಲಿನ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ ಸಂಸ್ಥೆಗೆ ಈ ವ್ಯಾಜ್ಯವನ್ನು ತೆಗೆದುಕೊಂಡು ಹೋಗುವ ಮೂಲಕ ಪ್ರಶ್ನಿಸಿದರು.[೨] ಕ್ರಿಕೆಟ್'ನ ವಿಶ್ವವ್ಯಾಪಿ ನಿಯಂತ್ರಣ ಹೊಂದಿರುವ ಸಂಸ್ಥೆಯಾದ ICC ಸಂಸ್ಥೆಯು, WADAದ ದರಖಾಸ್ತಿಗೆ ಬೆಂಬಲ ಸೂಚಿಸಿ ತಾವು ಮಾದಕವಸ್ತುಮುಕ್ತ ಕ್ರೀಡೆಗೆ ಬದ್ಧರಿದ್ದೇವೆ ಎಂದು ಸಾರಿತು.[೩]
ಮಾರ್ಚ್ 1, 2007ರಂದು 2007ರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಬೇಕಾದ ಪಾಕಿಸ್ತಾನೀ ತಂಡಕ್ಕೆ ಶೋಯೆಬ್ ಹಾಗೂ ಆಸಿಫ್‌ರ ಹೆಸರಿನ ಸೇರ್ಪಡೆಯನ್ನು ತಂಡದ ಅಧಿಕಾರಿಗಳು ತಂಡವು ವೆಸ್ಟ್ ಇಂಡೀಸ್‌ಗೆ ಹೊರಡಬೇಕಿದ್ದ ಕೆಲವೇ ನಿಮಿಷಗಳ ಮೊದಲು ತಳ್ಳಿಹಾಕಿದರು. PCBಯೊಂದಿಗೆ ತಂಡದ ಆಡಳಿತ ಮಂಡಳಿಯು ಅವರ ಗಾಯಗಳು/ಗಾಯಗೊಳ್ಳುವಿಕೆಗಳು ಕೆರಿಬಿಯನ್‌ಗೆ ಕರೆದುಕೊಂಡು ಹೋಗುವುದಕ್ಕೆ ಸಾಧ್ಯವಾಗದಷ್ಟು ತೀವ್ರವಾಗಿದ್ದವು ಎಂದು ಹೇಳಿಕೆ ನೀಡಿತು. ಇಬ್ಬರನ್ನೂ ಸಮರ್ಥರೆಂದು ಘೋಷಿಸದ ಕಾರಣ ಅವರು ಅಧಿಕೃತ ಮಾದಕವಸ್ತು ಬಳಕೆ ತಪಾಸಣೆಗಳಿಗೆ ಒಳಗಾಗಿರಲಿಲ್ಲ.[೨೬]
ಜುಲೈ 2, 2007ರಂದು ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ ಸಂಸ್ಥೆಯು PCBಯು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುವುದು ತನ್ನ ಪರಿಧಿಗೆ ಬರುವುದಿಲ್ಲ ಎಂದು ಘೋಷಿಸಿ ಈ ಮೊಕದ್ದಮೆಯನ್ನು ವಜಾ ಮಾಡಿತು.[೨೭][೨೮]
ಮೇ 21, 2009ರಂದು, ಹಿಂದೆ ಚರ್ಮದ ಸೋಂಕು ಎಂದು ಭಾವಿಸಲಾಗಿದ್ದುದು ಜನನಾಂಗದ ಮೇಲಿನ ವೈರಸ್ಸಿನಿಂದುಂಟಾದ ನರಹುಲಿ/ಸಣ್ಣಗಂತಿಯೆಂದು ಪತ್ತೆಯಾದ ಕಾರಣ ಶೋಯೆಬ್ ಅಖ್ತರ್‌ರನ್ನು ಅವರ ರಾಷ್ಟ್ರದ ವಿಶ್ವ ಚಾಂಪಿಯನ್‌ಷಿಪ್ ಟ್ವೆಂಟಿ20 ತಂಡದಿಂದ ಕೈಬಿಡಲಾಯಿತು.[೨೯]
ಇತರೆ ವಿವಾದಗಳು
[ಬದಲಾಯಿಸಿ]ಆಗಸ್ಟ್ 2007ರಲ್ಲಿ, ಶೋಯೆಬ್ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ತೋರಿದ ಅಶಿಸ್ತಿಗಾಗಿ ತನ್ನ ಮೇಲೆ Rs. 300,000ಗಳ ದಂಡ ವಿಧಿಸಿದುದಕ್ಕಾಗಿ ಪ್ರತಿಭಟಿಸುತ್ತಾ PCBಯ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಿದ್ದಾಗಿ ವರದಿಯಾಗಿದೆ.[೩೦]
ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿದ್ದ ವಿಶ್ವ ಟ್ವೆಂಟಿ20 ಪ್ರಾರಂಭೋತ್ಸಕ್ಕೆ ಒಂದು ವಾರವಿರುವ ಹಾಗೆ, ಶೋಯೆಬ್ ತಮ್ಮ ಪಾಕಿಸ್ತಾನೀ ಸಹಆಟಗಾರ ಮೊಹಮ್ಮದ್ ಆಸಿಫ್‌ರನ್ನು ಎಡ ತೊಡೆಗೆ ಮೂಗೇಟಾಗುವಂತೆ ಬ್ಯಾಟ್‌ನಿಂದ ಹೊಡೆದಿದ್ದಾರೆ ಎಂಬ ವದಂತಿಗಳೆದ್ದವು. ಮೂಲಗಳ ಪ್ರಕಾರ, ಇಬ್ಬರೂ ಡ್ರೆಸ್ಸಿಂಗ್ ಕೋಣೆಯಲ್ಲಿ ಘರ್ಷಣೆ/ಕ್ಷುಲ್ಲಕ ಜಗಳ ಮಾಡುತ್ತಿದ್ದಾಗ ಆಸಿಫ್ ತಮ್ಮ ಎಡ ತೊಡೆಗೆ ಬ್ಯಾಟ್‌ನಿಂದ ಹೊಡೆತ ತಿಂದರು. ಮೂಲಗಳು ಹೇಳಿದ ಪ್ರಕಾರ ಆಸಿಫ್ ಹಾಗೂ ಷಾಹಿದ್ ಅಫ್ರೀದಿ ಪಾಕಿಸ್ತಾನದ ಕ್ರಿಕೆಟ್‌ನಲ್ಲಿ ತಾನು ಇಮ್ರಾನ್ ಖಾನ್‌ರಿಗೆ ಸಮಾನವಾದ ಸ್ಥಾನಮಾನ ಹೊಂದಿದ್ದೇನೆ ಎಂಬ ಶೋಯೆಬ್‌ರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದುದಲ್ಲದೇ ಅಂತಹಾ ಹೋಲಿಕೆ ಮಾಡಿದುದಕ್ಕಾಗಿ ಅಪಹಾಸ್ಯ ಮಾಡಿದಾಗ ಜಗಳ ಆರಂಭವಾಗಿತ್ತು.[೩೧] ಆದ ಆಘಾತ/ಗಾಯವು ಮೂಗೇಟಿಗಿಂತ ಹೆಚ್ಚಿನ ಗಂಭೀರತೆಯದ್ದಾಗಿರಲಿಲ್ಲವಾದರೂ ಈ ವಿಚಾರದ ಬಗ್ಗೆ ತಂಡದ ತನಿಖೆಯು ಬಾಕಿ ಇತ್ತು.[೩೨] ಪ್ರಾಥಮಿಕ ವಿಚಾರಣೆಯ ನಂತರ, ಶೋಯೆಬ್‌ರದ್ದೇ ತಪ್ಪೆಂದು ಸಾಬೀತಾದ್ದರಿಂದ ನಂತರ ಅವರನ್ನು ಟ್ವೆಂಟಿ20 ವಿಶ್ವ ಕಪ್ ತಂಡದಿಂದ[೩೩] ಅವರನ್ನು ತೆಗೆದುಹಾಕಿ ಸ್ವದೇಶೀ/ಸ್ವದೇಶಕ್ಕೆ ಕಳಿಸಲಾಯಿತು.[೩೪] ಅವರು PCBಯಿಂದ 5 ಪಂದ್ಯಗಳ ನಿಷೇಧಕ್ಕೊಳಗಾದರಲ್ಲದೇ ಜೀವಮಾನ ನಿಷೇಧವೂ ಸನ್ನಿಹಿತವಾದಂತೆ ಭಾಸವಾಗಿತ್ತು.[೩೫] ಶೋಯೆಬ್ ನಂತರ "ಆತ ನಮ್ಮ ಕುಟುಂಬದ ಬಗ್ಗೆ ಅನುಚಿತ ಟೀಕೆ ಮಾಡಿದರು. ಅದನ್ನು ನನಗೆ ತಡೆದುಕೊಳ್ಳಲಾಗಲಿಲ್ಲ" ಎನ್ನುತ್ತಾ ಜಗಳಕ್ಕೆ ಅಫ್ರೀದಿಯು ಕಾರಣರಾಗಿದ್ದರು ಎಂದು ಹೇಳಿದರು. ಆದಾಗ್ಯೂ ಈ ಆರೋಪಗಳನ್ನು ಅಲ್ಲಗಳೆದ ಅಫ್ರೀದಿ ತಾನು ಮಧ್ಯಪ್ರವೇಶಿಸದೇ ಹೋಗಿದ್ದರೆ ಆಸಿಫ್‌ಗೆ ಮತ್ತಷ್ಟು ಗಾಯಗೊಳ್ಳುವಿಕೆಯ ಸಾಧ್ಯತೆ ಇತ್ತು ಎಂದರು.[೩೬] ಆಸಿಫ್ ಕೂಡಾ ಮಧ್ಯೆ ಪ್ರವೇಶಿಸಿ ಶೋಯೆಬ್ ಸುಳ್ಳು ಹೇಳುತ್ತಿದ್ದಾರೆ "ಷಾಹಿದ್ ಅಫ್ರೀದಿಯವರಿಗೂ ಈ ಜಗಳಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ಶೋಯೆಬ್ ತಮ್ಮಲ್ಲಿ ಕ್ಷಮೆ ಕೋರಿಲ್ಲ" ಎಂದರು.[೩೭] ಶೋಯೆಬ್ ನಂತರ ಷಾಹಿದ್ ಅಫ್ರೀದಿ & ಮೊಹಮ್ಮದ್ ಆಸಿಫ್ ಸೇರಿದಂತೆ ಸಹಆಟಗಾರರೊಂದಿಗೆ ರಾಜಿ ಮಾಡಿಕೊಂಡರು
ಏಪ್ರಿಲ್ 1, 2008ರಂದು ಅಖ್ತರ್ ಆಟಗಾರರ' ನೀತಿ ಸಂಹಿತೆಯನ್ನು ಉಲ್ಲಂಘಿಸಿದುದಕ್ಕಾಗಿ ಐದು ವರ್ಷಗಳ ನಿಷೇಧಕ್ಕೊಳಗಾದರು. ನಿಷೇಧವು ಪಾಕಿಸ್ತಾನದ ಪರವಾಗಿ ಆಡುವ ಹಾಗೂ ಅಲ್ಲಿ ನಡೆಯುವ ಎಲ್ಲಾ ಕ್ರಿಕೆಟ್ ಪಂದ್ಯಗಳಿಗೆ ಅನ್ವಯಿಸಿತ್ತು.[೩೮] ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಕ್ಕೆ ನಿಷೇಧವು ಬಾಧಕವಾಗಿರದೇ ಇದ್ದರೂ, IPLನ ಆಡಳಿತ ಸಮಿತಿಯು ನಿಷೇಧದ ಕೊನೆಯವರೆಗೆ ಅಥವಾ ಅದನ್ನು ತೆಗೆಯುವವರೆಗೆ ಶೋಯೆಬ್‌ರನ್ನು ಪಂದ್ಯಾವಳಿಯಲ್ಲಿ ಸೇರಿಸಿಕೊಳ್ಳದಿರಲು ನಿರ್ಧರಿಸಿತು. ಸಮಿತಿಯ ಸದಸ್ಯ IS ಭಿಂದ್ರಾರವರು, "ಅವರು [PCBಯು] IPLನಲ್ಲಿ ಆಡಲು ಅನುಮತಿ ನೀಡಿದ್ದಾರಾದರೂ, ಅಂತರರಾಷ್ಟ್ರೀಯ ಶಿಸ್ತನ್ನು ಕಾಪಾಡಬೇಕೆಂದು ನಮಗನ್ನಿಸುತ್ತಿದೆ" ಎಂದು ಹೇಳಿದರೆಂದು ವರದಿಯಾಗಿದೆ."[೩೯] ಇದೇ ಸಮಯದಲ್ಲಿ, ಶೋಯೆಬ್ ನಿಷೇಧದ ವಿರುದ್ಧ ಹೋರಾಡಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧವೆಂದು ಸಂಕಲ್ಪಿಸಿದವರಂತೆ, "ನನಗೆ ಹಕ್ಕಿರುವುದರಿಂದ ನಾನು ಮೊರೆ ಹೋಗುತ್ತೇನೆ. ಅದು ವಿಫಲವಾದರೆ ನ್ಯಾಯಾಲಯಕ್ಕೆ ಹೋಗುತ್ತೇನೆ, ಅದೂ ವಿಫಲವಾದರೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇನೆ" ಎಂದರು.[೪೦] ಏಪ್ರಿಲ್ 3ರಂದು, PCB ಅಧ್ಯಕ್ಷ ನಸೀಮ್ ಅಶ್ರಫ್‌ರು ಶೋಯೆಬ್‌ರಿಗೆ ಸುದ್ದಿವಾಹಿನಿಯಲ್ಲಿ ಅಧ್ಯಕ್ಷರಿಗೆ ತಾನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಗಳಿಸಿದ್ದರಲ್ಲಿ ಪಾಲು ಕೊಡುವುದಕ್ಕೆ ನಿರಾಕರಿಸಿದ್ದಕ್ಕೆ ಶಿಕ್ಷೆಯಾಗಿ ನಿಷೇಧವನ್ನು ಹೇರಲಾಗಿದೆ ಎಂದು ಮಾಡಿದ ಆರೋಪವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾನೂನಾತ್ಮಕ ಸೂಚನಾ ಪತ್ರ ಕಳಿಸಿದರಲ್ಲದೇ, ಅಶ್ರಫ್ ತಮಗೆ "ವೈಯಕ್ತಿಕ ಮಾನಹಾನಿ ಮಾಡಿದುದಕ್ಕಾಗಿ" Rs100 ದಶಲಕ್ಷ (ಅಂದಾಜು US$1.6 ದಶಲಕ್ಷ) ಹಾಗೂ ಹೆಚ್ಚುವರಿಯಾಗಿ "ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಂಸ್ಥೆ ಹಾಗೂ ಪಾಕಿಸ್ತಾನದ ಕ್ರಿಕೆಟ್ ತಂಡಗಳ ಹೆಸರಿಗೆ ಕಳಂಕ ತಂದುದಕ್ಕಾಗಿ PCBಗೆ Rs100 ದಶಲಕ್ಷಗಳ ಮೊತ್ತದ" ಪರಿಹಾರ ನೀಡಬೇಕೆಂದು ಕೋರಿ ಮೊಕದ್ದಮೆ ದಾಖಲಿಸಿದ್ದರು.[೪೧] A ಮೂವರು-ಸದಸ್ಯರ ಮೇಲ್ಮನವಿ ನ್ಯಾಯಮಂಡಲಿಯು ಏಪ್ರಿಲ್ 30ರಂದು ಕೋರಿಕೆಯ ವಿಚಾರಣೆಯನ್ನು ಜೂನ್‌ಗೆ ಮುಂದೂಡಲು ನಿರ್ಧರಿಸಿ ತಾವು ತಾತ್ಕಾಲಿಕವಾಗಿ ��ೋಯೆಬ್'ರ ಮೇಲೆ ಹೇರಿದ ಐದು-ವರ್ಷದ ನಿಷೇಧವನ್ನು ಎತ್ತಿಹಿಡಿದಿರುವುದಾಗಿ ಘೋಷಿಸಿತು.[೪೨] ಶೋಯೆಬ್ ತನ್ನ ಹೇಳಿಕೆಗಳನ್ನು ಹಿಂಪಡೆದು "ನಿರ್ದಿಷ್ಟವಾಗಿ PCB ಅಧ್ಯಕ್ಷ Dr ನಸೀಮ್ ಅಶ್ರಫ್‌ರಿಗೆ ಹಾಗೂ ರಾಷ್ಟ್ರಕ್ಕೆ ಉಂಟಾಗಿರಬಹುದಾದ ಯಾವುದೇ ಮಾನಸಿಕ ಹಿಂಸೆ ಅಥವಾ ಮುಜುಗರಗಳಿಗಾಗಿ" ಬೇಷರತ್ತು ಕ್ಷಮೆ ಯಾಚಿಸಿದರೂ, ಅಶ್ರಫ್'ರ ವಕೀಲರು Rs22 ಕೋಟಿಗಳ ಮೊತ್ತದ (approx US$3.37 ದಶಲಕ್ಷ) ಮಾನಹಾನಿ ಮೊಕದ್ದಮೆಯನ್ನು ಶೋಯೆಬ್‌ರ ವಿರುದ್ಧ ಲಾಹೋರ್‌ನ ದಿವಾನಿ/ಸಿವಿಲ್ ನ್ಯಾಯಾಲಯದಲ್ಲಿ ಮೇ 2ರಂದು ಹೂಡಿದರು.[೪೩] ಮೇ 4ರಂದು, PCB'ಯ ಮೇಲ್ಮನವಿ ನ್ಯಾಯಮಂಡಲಿಯು ನಡೆಯುತ್ತಿರುವ IPLನಲ್ಲಿ ಶೋಯೆಬ್ ಪಾಲ್ಗೊಳ್ಳಲು ಅನುವಾಗುವಂತೆ ಜೂನ್ 4ರಂದು ತಾವು ಮತ್ತೆ ಸಭೆ ಸೇರುವವರೆಗೆ ಐದು-ವರ್ಷ ನಿಷೇಧಕ್ಕೆ ಒಂದು ತಿಂಗಳ ಕಾಲ ತಡೆನೀಡಿತು.[೪೪] ಒಂದು ದಿನದ ನಂತರ, ಇಸ್ಲಾಮಾಬಾದ್‌ನ ಪ್ರಮುಖ ರಾಜಕೀಯ ಅಧಿಕಾರಿ/ವ್ಯಕ್ತಿ ರೆಹ್‌ಮಾನ್ ಮಲಿಕ್‌ರ ಗೃಹದಲ್ಲಿ ಶೋಯೆಬ್ ಹಾಗೂ ಅಧ್ಯಕ್ಷ ನಸೀಮ್ ಅಶ್ರಫ್‌ರ ನಡುವೆ ರಾಜಿಯಾಗಿರುವುದರಿಂದ PCB ತಾವು ಮಾನಹಾನಿ ಮೊಕದ್ದಮೆಯನ್ನು ಮುಂದುವರಿಸುವುದಿಲ್ಲ ಎಂದು ಘೋಷಿಸಿತು. ಅಶ್ರಫ್‌ರು "ನನ್ನ ಘನತೆಯನ್ನು ಸಮರ್ಥಿಸಿಕೊಳ್ಳಲಾಗಿರುವುದರಿಂದ ಮಾನಹಾನಿ ಮೊಕದ್ದಮೆಯು ಮುಂದುವರಿಸಲಾಗುವುದಿಲ್ಲ," ಎಂಬ ಹೇಳಿಕೆ ನೀಡಿದರೆಂದು ವರದಿಯಾಗಿದೆ.[೪೫]
ಶೋಯೆಬ್ ಅಖ್ತರ್‌ರನ್ನು ಬ್ರಿಟಿಷ್ ವಲಸೆವಿಭಾಗದ ಅಧಿಕಾರಿಗಳು ಹೀಥ್ರೂ ವಿಮಾನನಿಲ್ದಾಣದಲ್ಲಿ ಇಳಿದ ನಂತರ ಊರ್ಜಿತ ಉದ್ಯೋಗ ವೀಸಾ ಇಲ್ಲದ ಕಾರಣ, ಅಖ್ತರ್ ಇಂಗ್ಲೆಂಡ್‌ಗೆ ಭೇಟಿ ನೀಡಲು ಊರ್ಜಿತ ವೀಸಾವನ್ನು ಹೊಂದಿದ್ದರೂ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಅಗತ್ಯವಾದ ಉದ್ಯೋಗ ವೀಸಾ ಇದ್ದರೂ ಇಲ್ಲದ ಕಾರಣ ಅವರು ಆಡಲು ಸಾಧ್ಯವಿಲ್ಲ ಎಂದು ಅಲ್ಲಿನ ಆಡಳಿತಾಧಿಕಾರಿಗಳು ಹೇಳಿದ ಕಾರಣ ಸೆಪ್ಟೆಂಬರ್ 4, 2008ರಂದು ಸ್ವದೇಶೀ/ಸ್ವದೇಶಕ್ಕೆ ಮರಳಿಕಳಿಸಿದರು. ಅದಾದ ನಂತರ ಅವರು ಅಗತ್ಯವಾಗಿದ್ದ ವೀಸಾವನ್ನು ಪಡೆದುಕೊಂಡು ಆಂಗ್ಲ ಕೌಂಟಿಸೈಡ್ ಸರ್ರೆಯಲ್ಲಿ ಅಲ್ಪಕಾಲೀನ ಕಾರ್ಯಕ್ಕಾಗಿ ಭಾಗವಹಿಸಲು ಮರಳಿದರು.[೪೬]
ಅಖ್ತರ್ ಲೈಂಗಿಕವಾಗಿ ಹರಡುವ ರೋಗವನ್ನು (ಲೈಂಗಿಕಾಂಗಗಳ ನರಹುಲಿ/ಸಣ್ಣಗಂತಿ) ಹೊಂದಿರುವುದಕ್ಕಾಗಿ ಅವರನ್ನು 2009ರ ವಿಶ್ವ ಟ್ವೆಂಟಿ20 ಚಾಂಪಿಯನ್‌ಷಿಪ್ ಪಂದ್ಯಾವಳಿಯಿಂದ ಹೊರಗಿರಿಸಲಾಗಿದೆಯೆಂದು ಬಹಿರಂಗ ಪಡಿಸಿದುದಕ್ಕೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಂಸ್ಥೆಯ ಮೇಲೆ ವ್ಯಾಜ್ಯ ಹೂಡುವುದಾಗಿ ಬೆದರಿಸಿದ್ದರೆಂದು ಹೇಳಲಾಗಿದೆ.[೪೭]
ಡಿಸೆಂಬರ್ 2009ರಲ್ಲಿ ಅಖ್ತರ್‌ರು ಆಸ್ಟ್ರೇಲಿಯಾದ ಪ್ರವಾಸೀ ಪಂದ್ಯಕ್ಕೆ ಆಯ್ಕೆಯಾಗಲು ಪ್ರಯತ್ನಿಸಲು ಲಿಪೋಸಕ್ಷನ್ ಸುರೂಪಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಮೂಲಕ ತೆಳುವಾಗಲು ಪ್ರಯತ್ನಿಸಿದ್ದತೆಂದು ದೂರಲಾಗಿತ್ತು. ಅವರ ವೈದ್ಯರು ಇದನ್ನು ನಿಜವೆಂದು ದೃಢಪಡಿಸಿದರೂ ಅಖ್ತರ್ ಈ ಆರೋಪಗಳನ್ನು ನಿರಾಕರಿಸಿದರು.
ಇವನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "PCB bans Shoaib Akhtar for an indefinite period". Archived from the original on 2008-04-20. Retrieved 2010-05-13.
- ↑ "ಶೋಯೆಬ್ ಅಖ್ತರ್ ಅವಾಚ್ಯ ಪದ ಬಳಕೆಗಾಗಿ 5-ವರ್ಷ ನಿಷೇಧಕ್ಕೊಳಗಾದರು | ಇದು ಅನ್ಯಾಯ". Archived from the original on 2008-04-03. Retrieved 2010-05-13.
- ↑ "Shoaib in for Canada, not Yousuf".
- ↑ "Bone scan puts Akhtar in the clear". 2004. Retrieved 2006-04-10.
- ↑ "Vaughan - Batsmen to blame". 2004. Retrieved 2006-04-10.
- ↑ Rediffnews. "The law is equal for everyone in Pakistan".
I have little interest in cricket. People are crazy about cricket and we feel happy when our country wins. The names of Hanif Mohammad, Imran Khan, Shoaib Akhtar all come to my mind once I think about cricket. These are legends of Pakistani cricket
- ↑ Steve Pittard and John Stern (2007-05-24). "Dodgy overseas signings". Cricinfo. Retrieved 2007-05-24.
- ↑ ಇಂಡಿಯನ್ ಪ್ರೀಮಿಯರ್ ಲೀಗ್ - 35ನೇ ಪಂದ್ಯ, ಕೋಲ್ಕತಾ ನೈಟ್ ರೈಡರ್ಸ್ v ಡೆಲ್ಲಿ ಡೇರ್‌ಡೆವಿಲ್ಸ್. Cricinfo.com. 2008-05-14ರಂದು ಪಡೆಯಲಾಗಿದೆ.
- ↑ ಶೋಯೆಬ್ ಲೀಡ್ಸ್ ಡೆಲ್ಲಿ ಡ್ರಬ್ಬಿಂಗ್ . Cricinfo.com. 2008-05-14ರಂದು ಪಡೆಯಲಾಗಿದೆ.
- ↑ ನಾನು ಏನನ್ನೂ ಸಾಧಿಸಿ ತೋರುವ ಅಂಶಗಳಿಲ್ಲ - ಶೋಯೆಬ್. Cricinfo.com. 2008-05-14ರಂದು ಪಡೆಯಲಾಗಿದೆ.
- ↑ ನೈಟ್ ರೈಡರ್ಸ್ ಅಖ್ತರ್‌ರೊಂದಿಗೆ ಇನ್ನೂ ಮಾತುಕತೆಯಲ್ಲಿದ್ದಾರೆ Archived 2009-02-14 ವೇಬ್ಯಾಕ್ ಮೆಷಿನ್ ನಲ್ಲಿ., ಫೆಬ್ರವರಿ 3, 2009
- ↑ ABC Sport - ಸ್ಪೋರ್ಟ್ - ಕ್ರಿಕೆಟ್ - ಪಾಕಿಸ್ತಾನ್ಸ್ ಅಖ್ತರ್ ಫೈನ್‌ಡ್ ಫಾರ್ ಆಸ್ಟ್ರೇಲಿಯನ್ ಡಿಸ್ಕೋ ಜಾಂಟ್
- ↑ ಶೋಯೆಬ್ ಸ್ಲಾಪ್‌ಡ್ ಕೋಚ್ ವೂಲ್ಮರ್ ಓವರ್ i-Pod ಸಾಂಗ್ - ನ್ಯೂಸ್ - ನ್ಯೂಸ್ - ಇಂಡಿಯಾಟೈಮ್ಸ್ ಕ್ರಿಕೆಟ್
- ↑ Cricinfo - ಆಸಿಫ್ ಅಂಡ್ ಅಖ್ತರ್ ಟು ರಿಟರ್ನ್ ಹೋಮ್
- ↑ Staff writers and wires (2006-10-16). "Shoaib returns positive test". FOX SPORTS Australia.
- ↑ ಶೋಯೆಬ್ ನೆವರ್ ಕೋಆಪರೇಟೆಡ್ ಫಾರ್ ಡೋಪ್ ಟೆಸ್ಟ್‌ಸ್: ಷಹರ್ಯಾರ್ - ನ್ಯೂಸ್ - ನ್ಯೂಸ್ - ಇಂಡಿಯಾಟೈಮ್ಸ್ ಕ್ರಿಕೆಟ್
- ↑ ೧೭.೦ ೧೭.೧ "ಪಾಕಿಸ್ತಾನ್ ನ್ಯೂಸ್ ಸರ್ವೀಸ್ - PakTribune". Archived from the original on 2011-06-15. Retrieved 2010-05-13.
- ↑ BBC SPORT | ಕ್ರಿಕೆಟ್ | ಷಾಕ್‌ಡ್ ಶೋಯೆಬ್ ಪ್ರೊಟೆಸ್ಟ್ಸ್‌ಸ್ ಇನ್ನೋಸೆನ್ಸ್
- ↑ Cricinfo - ಸ್ಯಾಡ್ ಬಟ್ ವೀ ಹ್ಯಾಡ್ ಟು ಮೇಕ್ ಆನ್ ಎಕ್ಸಾಂಪಲ್ ಆಫ್ ಶೋಯೆಬ್ - ಅಲಮ್
- ↑ "ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ - ಅಧಿಕೃತ ಜಾಲತಾಣ". Archived from the original on 2010-11-28. Retrieved 2010-05-13.
- ↑ Cricinfo - ಶೋಯೆಬ್ ಅಂಡ್ ಆಸಿಫ್ ಬ್ಯಾನ್‌ಡ್ ಫಾರ್ ಡ್ರಗ್ಸ್ ಯೂಸ್
- ↑ "ಆರ್ಕೈವ್ ನಕಲು". Archived from the original on 2007-09-27. Retrieved 2010-05-13.
- ↑ Cricinfo - ಶೋಯೆಬ್ ಅಂಡ್ ಆಸಿಫ್ ಆಕ್ವಿಟ್ಟೆಡ್
- ↑ Cricinfo - ಶೋಯೆಬ್ ಅಂಡ್ ಆಸಿಫ್ ಆಕ್ವಿಟ್ಟೆಡ್
- ↑ Cricinfo - ಡೋಪ್ ಆನ್ ದ ಡೋಪಿಂಗ್ ಸ್ಕ್ಯಾಂಡಲ್
- ↑ ಶೋಯೆಬ್ ಹಾಗೂ ಆಸಿಫ್ ವಿಶ್ವ ಕಪ್‌ನಿಂದ ಹೊರಗೆ :
- ↑ ಕೋರ್ಟ್ ಹ್ಯಾಸ್ ನೋ ಜ್ಯೂರಿಸ್‌ಡಿಕ್ಷನ್ ಇನ್ ಡೋಪಿಂಗ್ ಕೇಸ್. Cricinfo.com. 2007-07-03ರಂದು ಪಡೆಯಲಾಗಿದೆ.
- ↑ ಕೋರ್ಟ್ ಕೆನಾಟ್ ರೂಲ್ ಆನ್ ಪಾಕಿಸ್ತಾನ್ಸ್ ಡ್ಯುವೋ. Cricinfo.com. 2007-07-03ರಂದು ಪಡೆಯಲಾಗಿದೆ.
- ↑ http://content.cricinfo.com/wt202009/content/story/405415.html
- ↑ "Shoaib uses foul language to protest PCB decision". Archived from the original on 2012-07-13. Retrieved 2010-05-13.
- ↑ ಶೋಯೆಬ್ ಆಸಿಫ್‌ರಿಗೆ ಬ್ಯಾಟ್‌ನಿಂದ ಹೊಡೆದುದಕ್ಕಾಗಿ ತಂಡದಿಂದ ಹೊರಕ್ಕೆ ಸೆಪ್ಟೆಂಬರ್ 8, 2007 - ದ ಇಂಡಿಯನ್ ಎಕ್ಸ್‌ಪ್ರೆಸ್
- ↑ "Asif injured in dressing room spat by Akhtar".
- ↑ ಟ್ವೆಂಟಿ20 ವಿಶ್ವ ಕಪ್ ಗದ್ದಲದ ನಂತರ ಹಿಂದಕ್ಕೆ ಬರಹೇಳಿದ ಪಾಕಿಸ್ತಾನ Archived 2007-12-21 ವೇಬ್ಯಾಕ್ ಮೆಷಿನ್ ನಲ್ಲಿ. ಸೆಪ್ಟೆಂಬರ್ 7, 2007 ರಾಯಿಟರ್ಸ್
- ↑ ಘಟನೆಯ ನಂತರ ಶೋಯೆಬ್‌ರನ್ನು ಸ್ವದೇಶಕ್ಕೆ ಮರಳಿಕಳಿಸಲಾಗುತ್ತದೆ
- ↑ ಶೋಯೆಬ್ ಐದು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾದರು ಸೆಪ್ಟೆಂಬರ್ 8, 2007 ಡೈಲಿ ಟೈಮ್ಸ್
- ↑ "ಕ್ರಿಕೆಟ್ -ಪಾಕಿಸ್ತಾನದ ಅಖ್ತರ್ ಘರ್ಷಣೆ/ಕ್ಷುಲ್ಲಕ ಜಗಳಕ್ಕೆ ಕಾರಣವಾದರೆಂದು ಅಫ್ರೀದಿಯ ಮೇಲೆ ಆರೋಪಿಸಿದರು | ಕ್ರೀಡೆಗಳು | ಕ್ರಿಕೆಟ್ | ರಾಯಿಟರ್ಸ್". Archived from the original on 2007-12-19. Retrieved 2010-05-13.
- ↑ "ಶೋಯೆಬ್ ನಿಜವನ್ನು ಹೇಳುತ್ತಿಲ್ಲ : ಆಸಿಫ್". Archived from the original on 2011-06-04. Retrieved 2010-05-13.
- ↑ ಶೋಯೆಬ್ ಐದು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾದರು. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಶೋಯೆಬ್ IPLನಲ���ಲಿ ಆಡಲಾರರು. Cricinfo.com. 2008-05-04ರಂದು ಪಡೆಯಲಾಗಿದೆ.
- ↑ 'ನನ್ನನ್ನು ಬಲಿಪಶು ಮಾಡಲಾಗುತ್ತಿದೆ ' - ಶೋಯೆಬ್. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಅಶ್ರಫ್‌ರು ಶೋಯೆಬ್‌ರ ವಿರುದ್ಧ ಕಾನೂನು ತಿಳುವಳಿಕೆ/ಸೂಚನಾ ಪತ್ರ ಕಳಿಸಿದ್ದಾರೆ. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಶೋಯೆಬ್'ರ ಐದು-ವರ್ಷ ನಿಷೇಧವನ್ನು ಎತ್ತಿಹಿಡಿಯಲಾಗಿದೆ. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಅಶ್ರಫ್‌ರು ಶೋಯೆಬ್‌ರ ವಿರುದ್ಧ ಮಾನಹಾನಿ ಪ್ರಕರಣ ದಾಖಲು ಮಾಡಿದ್ದಾರೆ. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಶೋಯೆಬ್‌ರಿಗೆ IPLನಲ್ಲಿ ಆಡಲು ಹಾದಿ ಸುಗಮ. Cricinfo.com. 2008-05-04ರಂದು ಪಡೆಯಲಾಗಿದೆ.
- ↑ ಶೋಯೆಬ್‌ರ ಬಗ್ಗೆ ಮೃದು ಧೋರಣೆ ತಾಳಿದ PCB. Cricinfo.com. 2008-05-05ರಂದು ಪಡೆಯಲಾಗಿದೆ.
- ↑ ವೀಸಾ ಕಿರಿಕಿರಿಯ ಬಳಿಕ ಸ್ವದೇಶೀ/ಸ್ವದೇಶಕ್ಕೆ ಮರಳಿದ ಅಖ್ತರ್ Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ.. Cricdb.com. 2008-09-04ರಂದು ಪಡೆಯಲಾಗಿದೆ.
- ↑ ಶೋಯೆಬ್ ಅಖ್ತರ್'ರ ಲೈಂಗಿಕಾಂಗದ ನರಹುಲಿ/ಸಣ್ಣಗಂತಿ ಅವರನ್ನು ಪಾಕಿಸ್ತಾನದ ವಿಶ್ವ ಟ್ವೆಂಟಿ 20 ತಂಡದಿಂದ ಹೊರಗಿಡಲು ಕಾರಣ. 2009-08-10ರಂದು ಪಡೆಯಲಾಗಿದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಗುರ್ಜಾರರು
- ಪಾಕಿಸ್ತಾನದ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಆಟಗಾರರು
- ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಆಟಗಾರರು
- ಪಾಕಿಸ್ತಾನದ ಟ್ವೆಂಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು
- ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಕೃಷಿ ಅಭಿವೃದ್ಧಿ ಬ್ಯಾಂಕ್
- ಖಾನ್ ರಿಸರ್ಚ್ ಲ್ಯಾಬ್ಸ್ ಕ್ರಿಕೆಟ್ ಆಟಗಾರರು
- ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಸಂಸ್ಥೆಯ ಕ್ರಿಕೆಟ್ ಆಟಗಾರರು
- ರಾವಲ್ಪಿಂಡಿ ಕ್ರಿಕೆಟ್ ಆಟಗಾರರು
- ಡು/ದುರ್ಹಾಮ್ ಕ್ರಿಕೆಟ್ ಆಟಗಾರರು
- ಸೋಮರ್‌ಸೆಟ್ ಕ್ರಿಕೆಟ್ ಆಟಗಾರರು
- ವರ್ಸೆಸ್ಟರ್‌ಷೈರ್ ಕ್ರಿಕೆಟ್ ಆಟಗಾರರು
- ACC ಏಷ್ಯನ್ XI ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಆಟಗಾರರು
- ICC ವಿಶ್ವ XI ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು
- 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- 1999ರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- 2003ರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- 2007ರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- ಕ್ರಿಕೆಟ್ನಲ್ಲಿನ ಮಾದಕವಸ್ತು ಸೇವನೆ ಪ್ರಕರಣಗಳು
- ಮಾದಕವಸ್ತು ಸೇವನೆ ಪ್ರಕರಣಗಳಲ್ಲಿ ಪಾಕಿಸ್ತಾನೀ ಕ್ರೀಡಾಪಟುಗಳು
- 1975ರಲ್ಲಿ ಜನಿಸಿದವರು
- ಜೀವಿತ ಜನರು
- ರಾವಲ್ಪಿಂಡಿ ಜಿಲ್ಲೆಯ ಜನರು
- ಕೋಲ್ಕತಾ ಕ್ರಿಕೆಟ್ ಆಟಗಾರರು
- ಪಂಜಾಬಿ ಜನರು
- ಪಾಕಿಸ್ತಾನೀ ಮುಸಲ್ಮಾನರು
- ಪಾಕಿಸ್ತಾನೀ ಸುನ್ನೀ ಮುಸಲ್ಮಾನರು
- ಪಾಕಿಸ್ತಾನದ ಕ್ರಿಕೆಟ್ ಆಟಗಾರರು
- ಕ್ರಿಕೆಟ್