ವಿಷಯಕ್ಕೆ ಹೋಗು

ವಹೀದಾ ರೆಹಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಹೀದಾ ರೆಹಮಾನ್ (ಜನನ 3 ಫೆಬ್ರವರಿ 1938) ಒಬ್ಬ ಭಾರತೀಯ ನಟಿ ಮತ್ತು ನೃತ್ಯಗಾರ್ತಿ. ಹಿಂದಿ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ರೆಹಮಾನ್ ಅವರ ಪುರಸ್ಕಾರಗಳಲ್ಲಿ ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿವೆ. ರೆಹಮಾನ್ ಅವರಿಗೆ 1972 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು, ನಂತರ ಇವರು 2011ರಲ್ಲಿ ಪದ್ಮಭೂಷಣವನ್ನು ಪಡೆದರು. ಇವರು ತಮ್ಮ ಚಲನಚಿತ್ರ ವೃತ್ತಿಜೀವನದಾದ್ಯಂತ ಗಮನಾರ್ಹವಾದ ಮಾಧ್ಯಮ ಪ್ರಸಾರವನ್ನು ಪಡೆದಿದ್ದಾರೆ.[][][][]

ರೆಹಮಾನ್ ತೆಲುಗು ಚಲನಚಿತ್ರ ರೋಜುಲು ಮರಾಯಿ (1955) ಯೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು ಮತ್ತು ಚಲನಚಿತ್ರ ನಿರ್ಮಾಪಕ ಗುರುದತ್ ಅವರ ಸಹಯೋಗದೊಂದಿಗೆ ಪ್ರಾಮುಖ್ಯವನ್ನು ಪಡೆದರು: ಅವುಗಳೆಂದರೆ ಪ್ರಣಯ ನಾಟಕಗಳಾದ ಪ್ಯಾಸಾ (1957) ಮತ್ತು ಕಾಗಜ಼್ ಕೆ ಫೂಲ್ (1959), ಮುಸ್ಲಿಂ ಸಾಮಾಜಿಕ ಚಲನಚಿತ್�� ಚೌಧ್ವೀನ್ ಕಾ ಚಾಂದ್ (1960) ಮತ್ತು ಪ್ರಣಯ ನಾಟಕ ಸಾಹಿಬ್ ಬೀಬಿ ಔರ್ ಗುಲಾಮ್ (1962). ಪ್ರಣಯಪ್ರಧಾನ ನಾಟಕ ಚಲನಚಿತ್ರ ಗೈಡ್ (1965) ನೊಂದಿಗೆ ರೆಹಮಾನ್ ಅವರು ಮಹತ್ವದ ತಿರುವನ್ನು ಪಡೆದರು. ಇದಕ್ಕಾಗಿ ಅವರು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು . ಪ್ರಣಯಪ್ರಧಾನ ರೋಮಾಂಚಕ ಚಿತ್ರ ನೀಲ್ ಕಮಲ್ (1968) ನಲ್ಲಿನ ಅಭಿನಯಕ್ಕಾಗಿ ಅವಳು ಮತ್ತೊಮ್ಮೆ ಈ ಪ್ರಶಸ್ತಿಯನ್ನು ಗೆದ್ದರು ಮತ್ತು ಹೆಚ್ಚುವರಿಯಾಗಿ ಹಾಸ್ಯಚಿತ್ರ ರಾಮ್ ಔರ್ ಶ್ಯಾಮ್ (1967) ಹಾಗೂ ನಾಟಕಚಿತ್ರ ಖಾಮೋಶಿ (1970) ಯಲ್ಲಿನ ಪಾತ್ರಗಳಿಗಾಗಿ ನಾಮನಿರ್ದೇಶನ ಪಡೆದರು.

ಅಪರಾಧ ನಾಟಕಚಿತ್ರ ರೇಷ್ಮಾ ಔರ್ ಶೇರಾ (1971) ನಲ್ಲಿ ಕುಲ ಮಹಿಳೆಯ ಪಾತ್ರಕ್ಕಾಗಿ, ಅವರು ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದರು. 1970 ರ ದಶಕದ ಆರಂಭದಿಂದ, ರೆಹಮಾನ್ ಪ್ರಾಥಮಿಕವಾಗಿ ಪೋಷಕ ಪಾತ್ರಗಳಲ್ಲಿ ಕೆಲಸ ಮಾಡಿದರು. ಮುಖ್ಯವಾದವುಗಳೆಂದರೆ ಪ್ರಣಯಪ್ರಧಾನ ಚಿತ್ರ ಫಗುನ್ (1973), ಸಂಗೀತಮಯ ಪ್ರಣಯಪ್ರಧಾನ ನಾಟಕಚಿತ್ರಗಳಾದ ಕಭಿ ಕಭಿ (1976), ಚಾಂದನಿ (1989) ಮತ್ತು ಲಮ್ಹೆ (1991). 1994 ರಲ್ಲಿ, ಅವರು ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು. ನಂತರದ ವರ್ಷಗಳಲ್ಲಿ ಅವರು ಚಲನಚಿತ್ರಗಳಲ್ಲಿ ವಿರಳವಾಗಿ ಕೆಲಸ ಮಾಡಿದ್ದಾರೆ.

ಆಕೆಯ ನಟನಾ ವೃತ್ತಿಯ ಹೊರತಾಗಿ, ರೆಹಮಾನ್ ಒಬ್ಬ ಲೋಕೋಪಕಾರಿ ಆಗಿದ್ದಾರೆ. ಅವರು ಶಿಕ್ಷಣದ ಪ್ರತಿಪಾದಕರಾಗಿದ್ದಾರೆ ಮತ್ತು ಭಾರತದಲ್ಲಿ ಬಡತನದ ವಿರುದ್ಧ ಹೋರಾಡುವ ಸಂಸ್ಥೆಯಾದ ರಂಗ್ ದೇಗೆ ರಾಯಭಾರಿಯಾಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Waheeda Rehman: The Quintessential Beauty of Bollywood". firstpost.com. Archived from the original on 24 september 2015. Retrieved 13 March 2014. {{cite web}}: Check date values in: |archive-date= (help)
  2. "I am not very keen on doing films: Waheeda Rehman". timesofindia.com. Archived from the original on 14 September 2017. Retrieved 13 March 2014.
  3. "Interview: Waheeda Rehman". glamsham.com. Archived from the original on 13 March 2014. Retrieved 13 March 2014.
  4. "'I did not consider myself beautiful' – Waheeda Rehman". india.com. Archived from the original on 4 March 2016. Retrieved 13 March 2014.