ಮೋರ್ನಿ
ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಮೊರ್ನಿ ಬೆಟ್ಟದಲ್ಲಿರುವ ಹಳ್ಳಿ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ ಮೋರ್ನಿ. ಇದು ಪಂಚಕುಲ ನಗರದಿಂದ ೩೫ ಕಿಲೋಮೀಟರ್ ದೂರದಲ್ಲಿದೆ. ಇದು ಹಿಮಾಲಯದ ನೋಟಗಳು, ಸಸ್ಯಗಳು ಮತ್ತು ಸರೋವರಗಳಿಗೆ ಹೆಸರುವಾಸಿಯಾಗಿದೆ.
ಪ್ರವಾಸೋದ್ಯಮ
[ಬದಲಾಯಿಸಿ]ಕೋಟೆಗಳು
[ಬದಲಾಯಿಸಿ]ಮೋರ್ನಿ ಕೋಟೆಯ ವಸ್ತುಸಂಗ್ರಹಾಲಯ
[ಬದಲಾಯಿಸಿ]ಮೊರ್ನಿ ಪ್ರದೇಶದಲ್ಲಿ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಕೋಟೆ ಇದೆ. ಇದನ್ನು ರಾಣಿ ಮೊರ್ನಿ ನಿರ್ಮಿಸಿದ್ದಾಳೆ. ಗುಡ್ಡಗಳು ಪೈನ್ ಮರಗಳಿಂದ ಆವೃತವಾಗಿವೆ ಮತ್ತು ಜನಪ್ರಿಯ ಚಾರಣ ಸ್ಥಳಗಳಾಗಿವೆ. ಈ ಕೋಟೆಯಲ್ಲಿ 2017-18ರಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಿದೆ.[೧]
ಗರ್ಹಿ ಕೋಟಾಹಾ ಕೋಟೆ
[ಬದಲಾಯಿಸಿ]ಗರ್ಹಿ ಕೋಟಾಹಾ ಕೋಟೆಯು ರಾ.ಹೆ. ೧ ರಲ್ಲಿದೆ. ಇದನ್ನು ಬ್ರಿಟಿಷ್ ರಾಜ್ ಭಾಗಶಃ ಕೆಡವಿದ್ದರಿಂದ ಈಗ ಹಾಳುಬಿದ್ದಿದೆ.[೨]
ಮಾಸೂಮ್ಪುರ್ ಕೋಟೆ
[ಬದಲಾಯಿಸಿ]ಮಸೂಮ್ಪೂರ್ ಕೋಟೆಯು ಒಂದು ಸಣ್ಣ ಹೊರಠಾಣೆ ಕೋಟೆಯಾಗಿದ್ದು ಮಣ್ಣಿನ ಗುಡ್ಡದ ಮೇಲಿದ್ದು ದಪ್ಪ ಕಲ್ಲು-ಇಟ್ಟಿಗೆ ಗೋಡೆಗಳನ್ನು ಹೊಂದಿದೆ. ಈಶಾನ್ಯ ದಿಕ್ಕಿನಲ್ಲಿರುವ ಸಮಲೋಥಾ ದೇವಸ್ಥಾನದ ಪ್ರವೇಶ ಮಾರ್ಗವನ್ನು ನಿಯಂತ್ರಿಸಲು ಇದನ್ನು ನಿರ್ಮಿಸಲಾಯಿತು.
ಟಿಕ್ಕರ್ ತಾಲ್ನ ಅವಳಿ ಸರೋವರಗಳು: ಭೀಮ್ ತಾಲ್ ಮತ್ತು ದ್ರೌಪದಿ ತಾಲ್
[ಬದಲಾಯಿಸಿ]ಒಂದು ಬೆಟ್ಟವು ಎರಡೂ ಸರೋವರಗಳನ್ನು ವಿಭಜಿಸುತ್ತದೆ. ದೊಡ್ಡದನ್ನು ಭೀಮ್ ತಾಲ್ ಅಥವಾ ಕೇವಲ ಟಿಕ್ಕರ್ ತಾಲ್ ಎಂದು ಕರೆಯಲಾಗುತ್ತದೆ, ಇದು 550 ಮೀಟರ್ ಅಗಲ ಮತ್ತು 460 ಮೀಟರ್ ಉದ್ದವಿದೆ.[೩][೪] ಚಿಕ್ಕದನ್ನು ದ್ರೌಪದಿ ತಾಲ್ ಅಥವಾ ಛೋಟಾ ಟಿಕ್ಕರ್ ತಾಲ್ ಎಂದು ಕರೆಯಲಾಗುತ್ತದೆ. ಇದು 365 ಮೀಟರ್ ಅಗಲ ಮತ್ತು ಉದ್ದವಾಗಿದೆ.
ಮೋರ್ನಿ ಗುಡ್ಡದ ಜಲಪಾತ
[ಬದಲಾಯಿಸಿ]ಕಾಡಿನ ಹಾದಿಯ ಮೂಲಕ ತಲುಪಬಹುದಾದ ಜಲಪಾತವಿದ್ದು ಮಳೆಗಾಲದಲ್ಲಿ ಸಕ್ರಿಯವಾಗಿರುತ್ತದೆ.[೩][೫]
ಮೊರ್ನಿ ಫೆಸೆಂಟ್ ಸಂತಾನೋತ್ಪತ್ತಿ ಕೇಂದ್ರ
[ಬದಲಾಯಿಸಿ]ಮೊರ್ನಿ ಫೆಸೆಂಟ್ ಸಂತಾನೋತ್ಪತ್ತಿ ಕೇಂದ್ರವು ಕೆಂಪು ಕಾಡೂಕೋಳಿಗಳು ಮತ್ತು ಕಾಲಿಜ್ ಫೆಸೆಂಟ್ಗಳ ಸಂತಾನೋತ್ಪತ್ತಿಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸೆರೆಯಲ್ಲಿ ಬೆಳೆಸಿದ ಪಕ್ಷಿಗಳನ್ನು ನಿಯಮಿತವಾಗಿ ಕಾಡಿಗೆ ಬಿಡುಗಡೆ ಮಾಡುತ್ತದೆ.
ಮೋರ್ನಿ ಗುಡ್ಡದ ಪುರಾತತ್ವ ದೇವಾಲಯ ತಾಣ
[ಬದಲಾಯಿಸಿ]ಟಿಕ್ಕರ್ ತಾಲ್ನ ತೀರದಲ್ಲಿರುವ ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಠಾಕೂರ್ ದ್ವಾರ್ ದೇವಾಲಯವನ್ನು[೬] 10 ನೇ ಶತಮಾನದ ದೇವಾಲಯ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಜಾನಪದ ದೇವತೆ ಬೂರಿ ಸಿಂಗ್ಗೆ ಸಮರ್ಪಿತವಾಗಿರುವ ಭೂರಿ ಸಿಂಗ್ ದೇವತಾ ದೇವಸ್ಥಾನವು 1870 ಮೀಟರ್ ಎತ್ತರದಲ್ಲಿನ ಪೆಜರ್ಲಿ ಗ್ರಾಮದಲ್ಲಿರುವ ಬಂಡೆ-ದೇವಾಲಯವಾಗಿದೆ.
ಮೂಲಿಕೆ ಕಾಡು
[ಬದಲಾಯಿಸಿ]2018 ರಲ್ಲಿ, ಹರಿಯಾಣ ಸರ್ಕಾರವು ಸಮುದಾಯ ಸ್ವ-ಸಹಾಯ ಗುಂಪುಗಳ ಸಹಾಯದಿಂದ 50,000 ಹೆಕ್ಟೇರ್ ಗಿಡಮೂಲಿಕೆ ಅರಣ್ಯವನ್ನು ಸ್ಥಾಪಿಸಲು ಪ್ರಾರಂಭಿಸಿತು.
ಛಾಯಾಂಕಣ
[ಬದಲಾಯಿಸಿ]-
ಟಿಕ್ಕರ್ ತಾಲ್ಗೆ ಒರಟಾಗಿ ಜೋಡಿಸಿದ ಕಲ್ಲುಗಳ ಮಾರ್ಗ
-
ಟಿಕ್ಕರ್ ತಾಲ್ನ ಜಲಸಂಗ್ರಹ
-
ಶಿಬಿರ ಮತ್ತು ಪಿಕ್ನಿಕ್ ಮೈದಾನವಿರುವ ಟಿಕ್ಕರ್ ತಾಲ್
-
ಪಿಕ್ನಿಕ್ ಮೈದಾನದಲ್ಲಿ ದಂಪತಿಗಳಿಗೆ ಸುಂದರವಾದ ಬೆಂಚ್
-
ಹರಿಯಾಣ ಪ್ರವಾಸೋದ್ಯಮದ ಮೌಂಟೇನ್ ಕ್ವಿಲ್ ಪ್ರವಾಸಿ ರೆಸಾರ್ಟ್
-
ಪಿಕ್ನಿಕ್ ಮೈದಾನವನ್ನು ಹೊಂದಿರುವ ಮೌಂಟೇನ್ ಕ್ವಿಲ್ ಪ್ರವಾಸಿ ರೆಸಾರ್ಟ್
-
ಮೌಂಟೇನ್ ಕ್ವಿಲ್ ಟೂರಿಸ್ಟ್ ರೆಸಾರ್ಟ್ನ ಸಮೀಪ ದರ್ಶನ
-
ಪ್ರಾಚೀ�� ಹಿಂದೂ ದೇವಾಲಯ
ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಕೊಂಡಿಗಳು
[ಬದಲಾಯಿಸಿ]- ಮೊರ್ನಿ ಹಿಲ್ಸ್ ವ್ಯೂ Archived 2018-02-01 ವೇಬ್ಯಾಕ್ ಮೆಷಿನ್ ನಲ್ಲಿ.
- ಚಂಡೀಗ Chandigarh ದಿಂದ ಮೊರ್ನಿ ಬೆಟ್ಟಕ್ಕೆ
ಆಧಾರಗಳು
[ಬದಲಾಯಿಸಿ]- Morni Hills View Archived 2017-09-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://haryana.punjabkesari.in/hisar/news/cm-has-done-inspection-of-herbal-forests-734137 CM has done inspection of herbal forests, Punjab Kesari, 8 Jan 2018.
- ↑ Masoompur fort ruins Archived 2021-01-16 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ೩.೦ ೩.೧ http://tourism.webindia123.com/tourism/hillstations/Morni/index.htm Morni Hills
- ↑ Taals of Morni hill Archived 2021-01-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "Tikker lake". Archived from the original on 2017-05-17. Retrieved 2021-02-07.
- ↑ William Wilson Hunter, 1885, The Imperial Gazetteer of India.
- http://pradhanmantrivikasyojana.in
- http://onlineapplyform.com/ Archived 2021-01-28 ವೇಬ್ಯಾಕ್ ಮೆಷಿನ್ ನಲ್ಲಿ.
- http://railwaysignallingconcepts.in
- http://vacancyrecruitment.com Archived 2021-01-16 ವೇಬ್ಯಾಕ್ ಮೆಷಿನ್ ನಲ್ಲಿ.