ಮುಖೇಶ್ ಅಂಬಾನಿ
ಮುಕೇಶ್ ಧೀರುಭಾಯಿ ಅಂಬಾನಿ (ಜನನ: ೧೯ ಏಪ್ರಿಲ್, ೧೯೫೭) ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಪೆಟ್ರೋಲ್ ರಾಜಕುಮಾರನೆಂದು ಪ್ರಸಿದ್ಧವಾದ ಇವರು, ಧೀರುಭಾಯಿ ಅಂಬಾನಿ ಅವರ ಸುಪುತ್ರ. ರಿಲಾಯನ್ಸ್ ಇಂಡಸ್ಟ್ರೀಸಿನಲ್ಲಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಅತಿದೊಡ್ಡ ಷೇರುದಾರ. ಪ್ರತಿಷ್ಠಿತ ಫಾರ್ಚೂನ್ ಗ್ಲೋಬಲ್ ೫೦೦ ಕಂಪನಿಗಳ ಪಟ್ಟಿಯಲ್ಲಿ ರಿಲಾಯನ್ಸ್ ಹತ್ತನೆಯ ಸ್ಥಾನದಲ್ಲಿದೆ. ಈ ಸಂಸ್ಥೆಯು ಮುಖ್ಯವಾಗಿ ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮತ್ತು ತೈಲ-ಅನಿಲ ಕ್ಷೇತ್ರಗಳಲ್ಲಿ ವ್ಯವಹರಿಸುತ್ತದೆ.[೧]
೨೦೧೪ರಲ್ಲಿ ಫ಼ೋರ್ಬ್ಸ್ ತಯಾರಿಸಿದ ವಿಶ್ವದ ೩೬ ಜನ ಅತಿ ಪ್ರಭಾವಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಇವರು ಸೇರಿದ್ದಾರೆ. ೨೦೧೩ರ ಮಟ್ಟಿಗೆ, ಅವರು ಭಾರತದ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ. ಅಂಬಾನಿ ಅವರ ವೈಯಕ್ತಿಕ ಸಂಪತ್ತು $ 23.6 ಬಿಲಿಯನ್. ವಿಶ್ವದ 19 ನೇ ಶ್ರೀಮಂತ ವ್ಯಕ್ತಿ ಎಂದು ಪಟ್ಟಿ ಮಾಡಲಾಗಿದೆ. ರಿಲಯನ್ಸ್ ಮೂಲಕ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಆದ ಮುಂಬಯಿ ಇಂಡಿಯನ್ಸ್ ತಂಡದ ಮಾಲಿಕರಾಗಿದ್ದಾರೆ. 2012 ರಲ್ಲಿ, ಫೋರ್ಬ್ಸ್ ಇವರನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಮಾಲೀಕರು ಎಂದು ನೇಮಿಸಿದೆ.
ಇವರು ಅಮೆರಿಕ ಕಾರ್ಪೊರೇಷನ್ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಮತ್ತು ವಿದೇಶಾಂಗ ಸಂಬಂಧಗಳ ಪರಿಷತ್ತಿನ ಅಂತಾರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ಶಾಖೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.[೨]
ಮುಕೇಶ್ ರವರ ೨೦೦೮-೨೦೦೯ ವ್ಯವಹಾರದಲ್ಲಿ ಸುಮ್ಮರು ೭೭೮ ಮಿಲಿಯನ್ ಡಾಲರ್ ಲಾಭವನ್ನುಗಳಿಸಿದ್ದಾರೆ, ಅದು ತೈಲ ಬೆಲೆ ಕುಸಿದಿದ್ದಾಗ. ಇಲ್ಲದಿದ್ದರೆ ಲಾಭ ಇನ್ನು ಹೆಚ್ಚಾಗುತಿತ್ತು.[೧]
ಆರಂಭಿಕ ಜೀವನ
[ಬದಲಾಯಿಸಿ]ಮುಕೇಶ್ ಅಂಬಾನಿ ಅವರು ಧೀರುಭಾಯಿ ಅಂಬಾನಿ ಮತ್ತು ಕೋಕಿಲಾಬೇನ್ ಅಂಬಾನಿ ಅವರಿಗೆ 19 ಏಪ್ರಿಲ್ 1957 ರಂದು ಜನಿಸಿದರು. ಇವರಿಗೆ ಕಿರಿಯ ಸಹೋದರರಾಗಿ ಅನಿಲ್ ಅಂಬಾನಿ ಮತ್ತು ಇಬ್ಬರು ಸಹೋದರಿಯರು, ದೀಪ್ತಿ ಸಲ್ಗೌಂಕಾರ್ ಮತ್ತು ನೀನಾ ಕೊಠಾರಿ ಇದ್ದಾರೆ. ಅಂಬಾನಿ ಕುಟುಂಬದವರು 1970ರವರೆಗೆ ಮುಂಬಯಿ ನಗರದ ಭುಲೇಶ್ವರದಲ್ಲಿ ಅಲ್ಪಪ್ರಮಾಣದ ಎರಡು ಕೋಣೆ�� ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ನಂತರ ಧೀರೂಭಾಯಿ, ಕೊಲಾಬಾ ಎಂಬ ಸ್ಥಳದಲ್ಲಿ 14-ಮಹಡಿಯ ’ಸೀ ವಿಂಡ್’ ಹೆಸರಿನ ಅಪಾರ್ಟ್ಮೆಂಟ್ ಬ್ಲಾಕ್ ಖರೀದಿಸಿದರು. ಇತ್ತೀಚಿನವರೆಗು, ಮುಕೇಶ್ ಮತ್ತು ಅನಿಲ್ ಅವರ ಕುಟುಂಬಗಳು ಅಲ್ಲಿಯೆ ವಾಸಿಸುತ್ತಿದ್ದರು.[೩]
ತಮ್ಮ ಶಾಲಾ ದಿನಗಳನ್ನು ಪೆದ್ದರ್ ರಸ್ತೆಯಲ್ಲಿದ್ದ ’ಹಿಲ್ ಗ್ರೇಂಜ್ ಹೈ ಸ್ಕೂಲ್’ ನಲ್ಲಿ ಕಳೆದರು. ತಮ್ಮ ಸಹೋದರ ಅನಿಲ್ ಮತ್ತು ಹತ್ತಿರದ ಸಹಯೋಗಿ ಆನಂದ್ ಜೈನ್ ಇವರ ಸಹಪಾಠಿಗಳಾಗಿದ್ದರು.[೪] ರಾಸಾಯನಿಕ ಎಂಜಿನಿಯರಿಂಗ್ ಪದವಿಯನ್ನು ರಾಸಾಯನಿಕ ತಂತ್ರಜ್ಞಾನ ಇನ್ಸ್ಟಿಟ್ಯೂಟ್, ಮಾಟುಂಗಾ ಅಲ್ಲಿ ಪಡೆದರು. ನಂತರ ಇವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎಗಾಗಿ ನೋಂದಾಯಿಸಿದ್ದರು, ತಂದೆ ಪ್ರಾರಂಭಿಸಿದ್ದ ಉದ್ಯಮವಾದ ರಿಲಯನ್ಸ್ಸ, ಆಗ ಸಣ್ಣಗಿದ್ದರು, ಅದರ ಬೆಳವಣಿಗೆಗೆ ಸಹಾಯ ಮಾಡಲು ಅರ್ಧದಲ್ಲೆ ಬಿಟ್ಟು ಬಂದರು.
ವ್ಯವಹಾರ ಮತ್ತು ವೃತ್ತಿಜೀವನ
[ಬದಲಾಯಿಸಿ]1980 ರಲ್ಲಿ, ಇಂದಿರಾ ಗಾಂಧಿ ಅಡಿಯಲ್ಲಿ, ಭಾರತ ಸರ್ಕಾರವು ಖಾಸಗಿ ವಲಯಕ್ಕೆ PFY (ಪಾಲಿಯೆಸ್ಟರ್ ನಾರು ನೂಲು ಹುರಿಯ) ತಯಾರಿಕಾ ವಲಯವನ್ನು ತೆರೆಯಿತು. ಧೀರೂಭಾಯಿ ಅಂಬಾನಿಯವರು PFY ತಯಾರಿಕಾ ಘಟಕವನ್ನು ಸ್ಥಾಪಿಸಲು ಅರ್ಜಿ ಹಾಕಿದರು. ಟಾಟಾ, ಬಿರ್ಲಾ ಮತ್ತು ಇತರರಿಂದ ತೀವ್ರ ಪೈಪೋಟಿಯ ನಡುವೆಯೂ, ಧೀರೂಭಾಯಿ ಅವರಿಗೆ ಅರ್ಜಿ ನೀಡಲಾಯಿತು. ಮುಕೇಶ್ ಅವರು ರಿಲಾಯನ್ಸ್ ಅನ್ನು ೧೯೮೧ ನಲ್ಲಿ ಸೇರಿ, ಕೇವಲ ಪಾಲಿಯೆಸ್ಟರ್ ಬಟ್ಟೆಗಳ ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಉದ್ಯಮವನ್ನು ಪೆಟ್ರೋಕೆಮಿಕಲ್ಸ್, ಪೆಟ್ರೋಲಿಯಂ ಶುದ್ಧೀಕರಣ ಮತ್ತು ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆ ಎಡೆಗೆ ಕರೆದೊಯ್ದರು.
ಮುಖೇಶ್ ಅಂಬಾನಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉಪಕ್ರಮಗಳ ತಯಾರಿಕೆಯಲ್ಲಿ ತೊಡಗಿದ್ದ ರಿಲಯನ್ಸ್ ಇನ್ಫೋಕಾಂ ಲಿಮಿಟೆಡ್ (ಈಗ ರಿಲಾಯನ್ಸ್ ಕಮ್ಯುನಿಕೇಷನ್ ಲಿಮಿಟೆಡ್), ಸ್ಥಾಪಿಸಿದರು. 2010ನಲ್ಲಿ ಅಂಬಾನಿ ನಿರ್ದೇಶನದ ಅಡಿಯಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಜನಸಾಮಾನ್ಯ ತೈಲ ಶುದ್ಧೀಕರಣ ವಿಭಾಗವು ಜಾಮ್ನಗರದಲ್ಲಿ ಸ್ಥಾಪನೆಯಾಯಿತು. ಈ ವಿಭಾಗವು ದಿನಕ್ಕೆ 660,000 ಬ್ಯಾರೆಲ್ಸ್ ತೈಲ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡಿಸೆಂಬರ್ 2013 ರಲ್ಲಿ ಅಂಬಾನಿ ಮೊಹಾಲಿಯಲ್ಲಿ ನಡೆದ ಪ್ರಗತಿಪರ ಪಂಜಾಬ್ ಸಮ್ಮೇಳನದಲ್ಲಿ, ಭಾರ್ತಿ ಏರ್ಟೆಲ್ ಅವರೊಂದಿಗೆ "ಸಹಕಾರಿ ಉದ್ಯಮ" ಸ್ಥಾಪಿಸಿ ಭಾರತದಾದ್ಯಂತ 4G ನೆಟ್ವರ್ಕ್ ಡಿಜಿಟಲ್ ಮೂಲಸೌಕರ್ಯ ಸ್ಥಾಪಿಸುವರೆಂದು ಹೇಳಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]ವಿಶ್ವದಲ್ಲೆ ಅತಿ ಹೆಚ್ಚು ಬೆಲೆ ಬಾಳುವಂತಹ ಮುಂಬಯಿಯಲ್ಲಿ ಸ್ಥಾಪಿತವಾದ ಬಂಗಲೆ Antilia ಎಂಬ 27 ಅಂತಸ್ತಿನ ಖಾಸಗಿ ಕಟ್ಟಡದಲ್ಲಿ ಮುಕೇಶ್ ಅವರು ಪತ್ನಿಯಾದ ನೀತಾ ಅಂಬಾನಿ ಮಕ್ಕಳಾದ ಅನಂತ್, ಆಕಾಶ್ ಮತ್ತು ಇಶಾ ಜೊತೆಯಲ್ಲಿ ವಾಸಿಸುತ್ತಾರೆ. ಈ ಬಂಗಲೆಯು $ 1 ಬಿಲಿಯನ್ ಮೌಲ್ಯವನ್ನು ಹೊಂದಿದೆ. ಇತಿಹಾಸದಲ್ಲೆ ಅತ್ಯಂತ ದುಬಾರಿ ಮನೆಯೆಂದು ಹೇಳಲಾಗಿದೆ.
ಅಂಬಾನಿಯವರ 27 ಅಂತಸ್ತಿನ, 400,000 ಚದರ ಅಡಿ ಮನೆ Antilia ಅಟ್ಲಾನ್ಟಿಕ್ ಪ್ರದೇಶದ ಒಂದು ಪೌರಾಣಿಕ ದ್ವೀಪದ ಮೇರೆಗೆ ಹೆಸರಿಸಲಾಗಿದೆ. Antilia ಶಿಕಾಗೊ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ + ವಿಲ್ ಅವರಿಂದ ವಿನ್ಯಾಸಗೊಳಿಸಲಾಗಿದೆ. ಆಸ್ಟ್ರೇಲಿಯಾ ಮೂಲದ ನಿರ್ಮಾಣ ಕಂಪನಿ ಲೇಯ್ಟನ್ ಹೋಲ್ಡಿಂಗ್ಸ್ ನಿರ್ಮಾಣ ಆರಂಭಿಸಿತು. 8 ರಿಕ್ಟರ್ ಪ್ರಮಾಣದ ಭೂಕಂಪನವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ಕಟ್ಟಡ ನಿರ್ಮಾಣವಾಗಿರುವಂತಹ ಸ್ಥಳವು ಅನಾಥಾಶ್ರಮದ ನಿರ್ಮಾಣಕ್ಕೆ ಮೀಸಲಾಗಿತ್ತು, ಹಾಗು ಇದನ್ನು ಅಂಬಾನಿ ಅವರು ಅಕ್ರಮವಾಗಿ ಗಳಿಸಿದ್ದಾರೆ ಎಂದು ಹೇಳಲಾಗಿದೆ.[೫]
ಬೋರ್ಡ್ ಸದಸ್ಯತ್ವಗಳು
[ಬದಲಾಯಿಸಿ]- UDCT, ಮುಂಬಯಿನ ರಾಜ್ಯಪಾಲರ ಮಂಡಳಿಯ ಸದಸ್ಯರು
- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ, ಹಣಕಾಸು ಸಮಿತಿಯ ಅಧ್ಯಕ್ಷ
- ಭಾರತೀಯ ಪೆಟ್ರೋಕೆಮಿಕಲ್ಸ್ ನಿಗಮ ನಿಯಮಿತದಲ್ಲಿ ಮಾಜಿ ಅಧ್ಯಕ್ಷರು[೬]
- ರಿಲಯನ್ಸ್ ಪೆಟ್ರೋಲಿಯಂನ ಮಾಜಿ ಉಪ ಅಧ್ಯಕ್ಷ
- ರಿಲಯನ್ಸ್ ಪೆಟ್ರೋಲಿಯಂನ ಮಂಡಳಿಯ ಅಧ್ಯಕ್ಷ
- ರಿಲಯನ್ಸ್ ರಿಟೇಲ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ಆಡಿಟ್ ಸಮಿತಿಯ ಅಧ್ಯಕ್ಷ
- ರಿಲಯನ್ಸ್ ಪರಿಶೋಧನೆ ಮತ್ತು ಉತ್ಪಾದನೆಯ ಅಧ್ಯಕ್ಷ
- ಅಮೆರಿಕ ಕಾರ್ಪೊರೇಷನ್ ಬ್ಯಾಂಕಿನ ಮಾಜಿ ನಿರ್ದೇಶಕರು
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ https://en.wikipedia.org/wiki/Mukesh_Ambani
- ↑ https://en.wikipedia.org/wiki/Indian_Institute_of_Management_Bangalore
- ↑ https://en.wikipedia.org/wiki/Dhirubhai_Ambani
- ↑ https://en.wikipedia.org/wiki/Anil_Ambani
- ↑ https://en.wikipedia.org/wiki/Antilia_(building)
- ↑ https://en.wikipedia.org/wiki/Indian_Petrochemicals_Corporation_Limited