ಬಂಡವಾಳಶಾಹಿ
Part of a series on |
Capitalism |
---|
ಬಂಡವಾಳಶಾಹಿ ಯು ಕೇವಲ"ಮಾರುಕಟ್ಟೆಗಳೊಂದಿಗೆ ಸಂಬಂಧಿಸಿದ ಆರ್ಥಿಕ ಪದ್ಧತಿಯಾಗಿರದೆ, ಮಾರುಕಟ್ಟೆಯ ಆಗುಹೋಗುಗಳನ್ನು ನೋಡಿಕೊಳ್ಳುವ ಆಡಳಿತ ವ್ಯವಸ್ಥೆಯೂ ಆಗಿದೆ."[೧] ಬಂಡವಾಳಶಾಹಿಯು ಮೂರು ಶ್ರೇಣಿಯ ಅಡಳಿತ ವ್ಯವಸ್ಥೆಗೆ ಪರೋಕ್ಷವಾಗಿ ನೆರವಾಗುತ್ತದೆ. ಆರ್ಥಿಕ ವಲಯದ ಸುಧಾರಣೆಗಾಗಿ ಬಂಡವಾಳದ ಅಗತ್ಯ ಪೂರೈಸುವುದು ಹಾಗೂ ಮೂಲಭೂತ ಸೌಲಭ್ಯಗಳನ್ನು ಸ್ಫರ್ಧಾತ್ಮಕವಾಗಿ ಬಳಸಿಕೊಂಡು ಉದ್ಯೋಗವಕಾಶ ಮತ್ತು ಇತರೆ ಅನುಕೂಲಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸಿಕೊಂಡು ಹೋಗುವುದೇ ಬಂಡವಾಳಶಾಹಿಯ ವ್ಯಾಖ್ಯಾನವಾಗಿದೆ.ಇದನ್ನು ರಾಜ್ಯ ಕಾನೂನು ಅಧಿಕಾರಗಳು ಹಾಗೂ ನಿಯಂತ್ರಕ ಏಜೆನ್ಸಿಗಳು ಜಾರಿಗೊಳಿಸುತ್ತವೆ.[೨]
ಇದು ಆರ್ಥಿಕ ಮತ್ತು ಸಾಮಾಜಿಕ ಪದ್ದತಿಗಳ ಆಚರಣೆಯಾಗಿದೆ. ಇದರಲ್ಲಿ ಬಂಡವಾಳ,ಅಶ್ರಮಿಕ ಉತ್ಪಾದನಾ ಸಂಗತಿಗಳು ಅಡಗಿರುತ್ತವೆ.(ಅಲ್ಲದೇ ಉತ್ಪಾದನಾ ವಿಧಾನಗಳು ಮತ್ತು ಖಾಸಗಿಯಾಗಿ ನಿಯಂತ್ರಿತ[ಸೂಕ್ತ ಉಲ್ಲೇಖನ ಬೇಕು] ಕಾರ್ಮಿಕರು,ಕಚ್ಚಾ ವಸ್ತುಗಳು ಹಾಗೂ ಬಂಡವಾಳಗಳ ವಹಿವಾಟುಗಳಲ್ಲಿ ಮಾರುಕಟ್ಟೆ ಯಿಂದ ಕೈಗಾರಿಕೆಗಳ ಮೂಲಕ ಬಳಸಲ್ಪಡುತ್ತವೆ. ಇದರಿಂದ ಬರುವ ಲಾಭಾಂಶವನ್ನು ತಂತ್ರಜ್ಞಾನದಲ್ಲಿ ಹೂಡಿಕೆದಾರರಿಗೆ ಹಾಗೂ ಬಂಡವಾಳದಾರರಿಗೆ ಮತ್ತು ಉದ್ಯಮಗಳಿಗೆ ಹಂಚಲಾಗುತ್ತದೆ.
ಬಂಡವಾಳ ಶಾಹಿ ವ್ಯಾಖ್ಯದ ಬಗ್ಗೆ ಇನ್ನೂ ಯಾವದೇ ಒಮ್ಮತವಿಲ್ಲ ಅಲ್ಲದೇ ಇದನ್ನು ಯಾವ ರೀತಿಯಾಗಿ ವರ್ಗೀಕರಿಸಬೇಕೆಂಬುದರ ಬಗ್ಗೆ ಖಚಿತವಾಗಿ ಹೇಳಿಲ್ಲ.[೩] ಬಂಡವಾಳಶಾಹಿಯ ವ್ಯಾಖ್ಯಾನ ವಿವಿಧ ಐತಿಹಾಸಿಕ ಪ್ರಕರಣಗಳನ್ನು ಅವಲಂಬಿಸಿದೆ.ಆಯಾ ಪ್ರದೇಶ,ಕಾಲಮಾನ, ಭೌಗೋಳಿಕತೆ, ರಾಜಕೀಯ ಹಾಗೂ ಸಂಸ್ಕೃತಿ ವ್ಯತ್ಯಾಸವನ್ನು ಆಧರಿಸಿದೆ.[೪] ಅರ್ಥಶಾಸ್ತ್ರಜ್ಞರು ರಾಜಕೀಯ ಆರ್ಥಿಕ ತಜ್ಞರು ಮತ್ತು ಇತಿಹಾಸಕಾರು ಬಂಡವಾಳಶಾಹಿ ಬಗ್ಗೆ ವಿಭಿನ್ನ ವಿಶ್ಲೇಷಣೆ ಮಾಡಿದ್ದಾರೆ. ಇದರ ಅರ್ಥವ್ಯಾಪ್ತಿಯನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿದ್ದಾರೆ. ಸಮಾಜ ವಿಜ್ಞಾನಿಗಳು, ಇತಿಹಾಸಜ್ಞರನ್ನೊಳಗೊಂಡು, ಆರ್ಥಿಕ ಸಮಾಜಶಾಸ್ತ್ರಜ್ಞರು, ಆರ್ಥಿಕ ತಜ್ಞರು, ಮಾನವಶಾಸ್ತ್ರಜ್ಞರು ಹಾಗೂ ತತ್ವಜ್ಣಾನ ಕ್ಷೇತ್ರದ ಪ್ರತಿಭಾವಂತರು, ಬಂಡವಾಳಶಾಹಿ ಶಬ್ದದ ಅರ್ಥ ವ್ಯಾಪ್ತಿ ಹುಡುಕಲು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಉತ್ಪಾದನಾ ಮೂಲಗಳ ಖಾಸಗಿ ಒಡೆತನ, ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ವಸ್ತುಗಳು ಹಾಗೂ ಸೇವೆಗಳ ನಿರ್ಮಾಣ, ಪೂರೈಕೆ ಮತ್ತು ದರ ಹಾಗೂ ಸಂಬಳ ನಿಗದಿ ಇವು ಬಂಡವಾಳಶಾಹಿಯ ಪ್ರಾಥಮಿಕ ಮೂಲಗಳು ಎಂಬ ಬಗ್ಗೆ ಕೆಲಮಟ್ಟಿಗೆ ವಿವಾದವಿದೆ.[೫]
ಸಾಮಾನ್ಯವಾಗಿ ಆರ್ಥಿಕ ತಜ್ಞರು ಮಾರುಕಟ್ಟೆಯ ತಾಂತ್ರಿಕ ವಿಧಾನಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ಮಾರುಕಟ್ಟೆಗಳ ಮೇಲೆ ಸರ್ಕಾರೀ ಆಡಳಿತ ಯಂತ್ರದ ನಿಯಂತ್ರಣ(ಸ್ವಾಯತ್ತತೆ ಮತ್ತು ಹೆಚ್ಚು ರಿಯಾಯತಿ)), ಆಸ್ತಿ ಹಕ್ಕುಗಳು[೬][೭]. ಆದರೆ ಬಹುತೇಕ ರಾಜಕೀಯ ಆರ್ಥಿಕ ವಲಯದ ಪರಿಣಿತರು ಖಾಸಗಿ ಆಸ್ತಿ ಒಡೆತನದ ಹಕ್ಕು, ಅಧಿಕಾರಸಂಬಂಧಗಳು, ಕೂಲಿ ಕಾರ್ಮಿಕ ಹಾಗೂ ದುಡಿಯುವವರ್ಗವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.[೮] ಎಲ್ಲರ ಒಮ್ಮತವೆಂದರೆ ಬಂಡವಾಳಶಾಹಿ ತತ್ವವು ಬಂಡವಾಳ ಹೂಡಿಕೆಯಿಂದಾಗಿ ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ.[೯] ಮಾರುಕಟ್ಟೆಗಳು ಹೇಗೆ ವರ್ತಿಸಬೇಕು ಮತ್ತು ಎಷ್ಟರ ಮಟ್ಟಿಗೆ ಅವುಗಳಿಗೆ ಮುಕ್ತತೆ ಇರಬೇಕು,ಎಂಬ ನಿರ್ಧಾರಕ್ಕೆ ಬೇಕಾಗುವ ನಿಯಮಾವಳಿಗಳ ರಚನೆ ಮಾತ್ರ ಖಾಸಗಿ ಒಡೆತನಕ್ಕೆ ಸೇರಿರಲಾರದು. ಇದು ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಸೂತ್ರಗಳನ್ನು ಒಳಗೊಂಡ ವಿಷಯವೆನಿಸಿದೆ. ಕೆಲವು ರಾಜ್ಯಗಳಲ್ಲಿ ಮಾರುಕಟ್ಟೆ ನಿಯಮಾವಳಿಗಳ ಬಗ್ಗೆ ಮಿಶ್ರ ಆರ್ಥಿಕತೆಯ ಸೂತ್ರಗಳಿವೆ.[೮]
ಬಂಡವಾಳಶಾಹಿ ತತ್ವ 16ನೆಯ ಶತಮಾನದಲ್ಲಿ ಯುರೋಪಿನಾದ್ಯಂತ ಪ್ರಾಧಾನ್ಯತೆ ಪಡೆದ ಒಂದು ವ್ಯಾಪಾರ-ವಹಿವಾಟಿನ ವಿಧಾನ ಅಭಿವೃದ್ಧಿ ಹೊಂದಿತು.ಪ್ರಾಚೀನ ಯುಗದಲ್ಲಿ ಬಂಡವಾಳಶಾಹಿಯಂತೆ ಕೆಲಸ ಮಾಡುತ್ತಿದ್ದ ಕೆಲವು ಸಂಘಟನೆಗಳಿದ್ದರೂ ಇದಕ್ಕೆ ಪ್ರಾಮುಖ್ಯತೆ ಬಂದದ್ದು ಈ ಶತಮಾನದ ನಂತರವೇ.ಮಧ್ಯ ಯುಗದಲ್ಲಿ ವ್ಯಾಪಾರಿ ಬಂಡವಾಳ ಹೂಡಿಕೆದಾರರರಿಂದಾಗಿ ಬಂಡವಾಳಶಾಹಿಯು ಮತ್ತಷ್ಟು ಪ್ರಗತಿ ಕಂಡಿತೆಂದು ಹೇಳಬಹುದು.[೧೦][೧೧][೧೨] ಬಂಡವಾಳಶಾಹಿ ಸಾಮ್ರಾಜ್ಯವು ಪಾಶ್ಚಿಮಾತ್ಯ ದೇಶಗಳಲ್ಲಿನ ಊಳಿಗಮಾನ್ಯ (ಜಮೀನುದಾರಿಕೆ) ಪದ್ದತಿ ಕೊನೆಗೊಂಡ ನಂತರ [೧೨] ಪ್ರವರ್ಧನಮಾನಕ್ಕೆ ಬಂತು.[೧೨] ಬಂಡವಾಳಶಾಹಿ ಸಾಮ್ರಾಜ್ಯವು 19ಮತ್ತು20ನೆಯ ಶತಮಾನದಲ್ಲಿ ಯುರೋಪಿನಾದ್ಯಂತ ನಿಧಾನಗತಿಯಲ್ಲಿ ಹರಡಿತು.ಪ್ರಪಂಚದಾದ್ಯಂತ ಕೈಗಾರಿಕರಣದ ಮೂಲೋದ್ದೇಶಕ್ಕೆ ಮುಖ್ಯವಾಹಿನಿಯಾಗಿ ಕೆಲಸ ಮಾಡಿತು.[೪]
ಶಬ್ದದ ಮೂಲ ವ್ಯುತ್ಪತ್ತಿ ಮತ್ತು ಬಳಕೆ
[ಬದಲಾಯಿಸಿ]bgcolor="#dbeaff" | ಬಂಡವಾಳಶಾಹಿ:ಬಂಡವಾಳಶಾಹಿಗಾಗಿ ಬಳಸಿದ ಇತರ ಪದಗಳು
|
ಬಂಡವಾಳ ಎಂಬ ಶಬ್ದವು ಲ್ಯಾಟಿನ್ ಪದ ಕ್ಯಾಪಿಟೇಲ್ ಅನ್ನುವದರ ತಳಹದಿ ಮೇಲೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆರಂಭಿಕ ಇಂಡೊ-ಯುರೊಪಿನ್ ನ ಕಾಪುಟ್ ಅಂದರೆ ಮೂಲದಲ್ಲಿ ಶಿರ ಅಥವಾ ಮೇಲ್ಭಾಗ; ಚಾಟೆಲ್ ಮತ್ತು ಕ್ಯಾಟಲ್ ಎಂದೂ ಕರೆಯಲಾಯಿತು. ನಂತರ ಇದನ್ನು ಚರಾಸ್ತಿ ಎಂದು ಪರಿಗಣಿಸಲಾಯಿತು.(ಇಂದಿನವರೆಗೂ ಅದನ್ನು ಪಶು ಸಂಪತ್ತು) ಎಂದೂ ಅರ್ಥೈಸಲಾಗುತ್ತದೆ. ಕ್ಯಾಪಿಟೇಲ್ ಎಂಬುದು 12ರಿಂದ 13ನೆಯ ಶತಮಾನಗಳಲ್ಲಿನ ಅವಧಿಗೆ ನಿಧಿ,ಮಾರಾಟ ವಸ್ತುಗಳ ಶೇಖರಣೆ,ಹಣಕಾಸು,ಮೊತ್ತದ ಮೇಲಿನ ಬಡ್ಡಿಹಣ ಎಂಬ ಅರ್ಥದಲ್ಲಿ ಬಳಕೆಯಲ್ಲಿತ್ತು.[೧೦][೨೦][೨೧] ಇಸವಿ 1283ರ ಹೊತ್ತಿಗೆ ಇದನ್ನು ವ್ಯಾಪಾರ-ವಹಿವಾಟು-ವಾಣಿಜ್ಯ ಸಂಬಂಧಿತ ಸಂಸ್ಥೆ, ಸಂಘಟನೆಗಳ ಬಂಡವಾಳ ರೂಪದ ಆಸ್ತಿ-ಪಾಸ್ತಿ ಎಂದೂ ಪರಿಗಣಿಸಲಾಗಿತ್ತು. ಈ ಶಬ್ದವು ಮೇಲಿಂದ ಮೇಲೆ ಅರ್ಥ ಬದಲಾವಣೆಗಳನ್ನು ಕಂಡಿದೆ. ಸಂಪತ್ತು, ಹಣ, ನಿಧಿ, ಸಾಮಗ್ರಿಗಳು, ಮೊತ್ತ, ಆಸ್ತಿ-ಪಾಸ್ತಿ, ಒಡೆತನ,ವಂಶಪಾರಂಪರೆಯ ಸ್ವತ್ತುಗಳೂ ಎಂದೂ ಸಮಾನಾರ್ಥಕವಾಗಿ ಬಳಸಲಾಗುತ್ತದೆ.[೧೦]
ಕ್ಯಾಪಿಟ್ಯಾಲಿಸ್ಟ (ಬಂಡವಾಳುದಾರ) ಎಂಬುದನ್ನು ಆರ್ಥಿಕ ಪದ್ದತಿ ಅಥವಾ ವಿಧಾನ ಎನ್ನುವುದಕ್ಕಿಂತ ಹೆಚ್ಚಾಗಿ ಬಂಡವಾಳ ಹೊಂದಿದವನು ಎಂದೇ ವ್ಯಾಖ್ಯಾನಿಸಲಾಗುತ್ತದೆ. ಆದರೆ ದಾಖಲೆಗಳ ಪ್ರಕಾರ ಹದಿನೇಳನೆಯ ಶತಮಾನದ ಮಧ್ಯ ಭಾಗದಲ್ಲಿ ಬಂಡವಾಳಶಾಹಿ ಪದ ಬಳಕೆಯಾಗಿತ್ತು ಎಂದು ಹೇಳಲಾಗುತ್ತದೆ. ಹಾಲಂಡ್ ಸಿಚೆ ಮರ್ಕ್ಯುರಿಯಸ್ ಕಾಲದ, 1633ಮತ್ತು1654ರ ಅವಧಿಗೆ ಇದನ್ನು ಬಂಡವಾಳದ ಮಾಲಿಕ ಎಂಬ ಅರ್ಥ ಬರುವಂತೆ ಬಳಸಲಾಯಿತು.[೧೦] ಆರ್ಥರ್ ಯಂಗ್‌ಮಾತ್ರ ಮೊದಲ ಬಾರಿಗೆ ತನ್ನ ಪುಸ್ತಕ ಟ್ರಾವೆಲ್ಸ್ ಇನ್ ಫ್ರಾನ್ಸ್ ನಲ್ಲಿ ಬಂಡವಾಳಗಾರ ಎಂದು ಬಳಸಿದ್ದಾರೆ(1792).[೨೧][೨೨] ಡೇವಿಡ್ ರಿಕಾರ್ಡೊಕೂಡಾ ತಮ್ಮ ಪುಸ್ತಕ, ಪ್ರಿನ್ಸಿಪಲ್ಸ್ ಆಫ್ ಪಾಲಿಟಿಕಲ್ ಎಕಾನಮಿ ಆಂಡ್‌ಟ್ಯಾಕ್ಸೆಷನ್ (1817)ನಲ್ಲಿ ಬಂಡವಾಳಗಾರ" ಎಂಬುದನ್ನು ಹಲವಾರು ಸಲ ಉಪಯೋಗಿಸಿದ್ದಾರೆ.[೨೩] ಸ್ಯಾಮ್ಯುಲ್ ಟೇಲರ್ ಕೋಲ್‌ರಿಡ್ಜ್ ಇಂಗ್ಲೀಷ್ ಕವಿ ಕೂಡಾ, ಬಂಡವಾಳಗಾರ ಎಂದೂ ತಮ್ಮ ಕೃತಿಟೇಬಲ್ ಟಾಕ್ ನಲ್ಲಿ ಬಳಕೆ ಮಾಡಿದ್ದಾರೆ.[೨೪] ಪೈರೆ ಜೊಸೆಫ್ ಪ್ರೌಧೊನ್ ಕೂಡಾ ತಮ್ಮ ಚೊಚ್ಚಿಲ ಕೃತಿ ವಾಟ್ ಇಸ್ ಪ್ರಾಪರ್ಟಿ ಯಲ್ಲಿ ಬಂಡವಾಳಗಾರ ಪದ ಬಳಕೆ ಮಾಡಿದ್ದಾರೆ. 1840ರಲ್ಲಿ ಬಂಡವಾಳದ ಮಾಲೀಕ ಎಂಬುದನ್ನು ಮನದಲ್ಲಿಟ್ಟುಕೊಂಡು ಇದನ್ನು ಬರೆದಿದ್ದಾರೆ. ಬೆಂಜಮಿನ್ ಡಿಸ್ರೇಲಿ ತಮ್ಮ ಪುಸ್ತಕ ಸೈಬಿಲ್ ನಲ್ಲಿ (1545) ಬಂಡವಾಳುದಾರ ಎಂದು ಉಪಯೋಗಿಸಿದ್ದಾರೆ.[೨೧] ಕಾರ್ಲ್ ಮಾರ್ಕ್ಸ್ ಮತ್ತು {0ಫ್ರಿಡ್ರಿಚ್ ಎಂಗಿಲ್ಸ್{/0} ಅವರು ಬಂಡವಾಳಗಾರ ಎಂಬ ಪದವನ್ನು (ಕಾಪಿಟಾಲಿಸ್ಟ್ ) ದಿ ಕಮ್ಯುನಿಷ್ಟ್ ಮನಿಫಿಸ್ಟೊ ಎಂಬ ಕೃತಿಯಲ್ಲಿ (1848) ಉಪಯೋಗಿಸಿದ್ದಾರೆ.
ಬಂಡವಾಳಶಾಹಿ ಎಂಬ ಶಬ್ದವು 1753ರ ವಿಶ್ವ ಕೋಶ ದಲ್ಲಿ ಸಿರಿವಂತ ಅಥವಾ ಶ್ರೀಮಂತ ಎಂಬರ್ಥಕ್ಕೆ ಸೀಮಿತಗೊಂಡು ಸಂಕುಚಿತ ಅರ್ಥಕ್ಕೆ ಅಂಟಿಕೊಂಡಿದೆ.[೧೦] ಆಕ್ಸ್ ಫರ್ಡ್ ಅರ್ಥಕೋಶ ದಲ್ಲಿ(OED) ಕಾದಂಬರಿಗಾರ ವಿಲಿಯಂ ಮೇಕ್ ಪೀಸ್ ಥಾಕರೆ 1854ರಲ್ಲಿ ಮೊದಲಬಾರಿಗೆ ಬಂಡವಾಳಶಾಹಿಗೆ ಬಂಡವಾಳದ ಮಾಲೀಕತ್ವ ಹೊಂದಿದವನು ಎಂದು ವಿವರಿಸಿದ್ದಾನೆ.[೨೧] ಅದೂ ಅಲ್ಲದೆ OED ಪ್ರಕಾರ ಜರ್ಮನ್ ಮೂಲದ ಅಮೆರಿಕನ್ ಕಾರ್ಲ ಅಡಾಲ್ಫ್ ದೊಹೈ,ಸಮಾಜ ವಿಜ್ಞಾನಿ ಮತ್ತು ಗುಲಾಮಗಿರಿ ವಿರುದ್ಧ ಹೋರಾಡಿದ ಸಮಾಜ ಸುಧಾರಕ 1863ರಲ್ಲಿ ಖಾಸಗಿ ಬಂಡವಾಳಶಾಹಿ ಎಂಬ ಪದ ಬಳಕೆಗೆ ಕಾರಣರಾದರು.
ಬಂಡವಾಳಶಾಹಿ ಇದರ ಆಧುನಿಕ ಕಾಲದ ಬಳಕೆಗೆ ನಾಂದಿ ಹಾಡಿದವರೆಂದರೆ 1850ರಲ್ಲಿ ಲೂಯಿಸ್ ಬ್ಲ್ಯಾಂಕ್ ಹಾಗೂ 1861ರಲ್ಲಿ ಪೈರೆಜೊಸೆಫ್ ಪ್ರೌಧೊನ್ ಮುಂಚೂಣಿಯಲ್ಲಿದ್ದಾರೆ.[೨೫] ಮಾರ್ಕ್ಸ್ ಮತ್ತು ಇಂಗಲ್ಸ್ ಬಂಡವಾಳಶಾಹಿ ಪದ್ಧತಿ ಯನ್ನು (ಕ್ಯಾಪ್ಟಾಲಿಸ್ಟಿಚಿಸ್ ಪದ್ಧತಿ)ಎಂದು ಬಳಸುವಾಗ ಕಾರ್ಲ್ ಮಾರ್ಕ್ಸ್ತ ತತ್ವವನ್ನು ಉಲ್ಲೇಖಿಸುತ್ತಾರೆ.[೨೬] ಬಂಡವಾಳುದಾರರ ಒಟ್ಟುಗೂಡಿಸುವಿಕೆಯ ಸಾಮಾನ್ಯ ನಿಯಮ ಇಪ್ಪತ್ತೈದನೆಯ ಅಧ್ಯಾಯ (ದಾಸ್ ಕಾಪಿಟಲ್) ದಾಸ್ ಕ್ಯಾಪಿಟಲ್ .
- Die Erhöhung des Arbeitspreises bleibt also eingebannt in Grenzen, die die Grundlagen des kapitalistischen Systems nicht nur unangetastet lassen, sondern auch seine Reproduktion auf wachsender Stufenleiter sichern.
- Die allgemeinen Grundlagen des kapitalistischen Systems einmal gegeben, tritt im Verlauf der Akkumulation jedesmal ein Punkt ein, wo die Entwicklung der Produktivität der gesellschaftlichen Arbeit der mächtigste Hebel der Akkumulation wird.
- Wir sahen im vierten Abschnitt bei Analyse der Produktion des relativen Mehrwerts: innerhalb des kapitalistischen Systems vollziehn sich alle Methoden zur Steigerung der gesellschaftlichen Produktivkraft der Arbeit auf Kosten des individuellen Arbeiters; ಬಂಡವಾಳಗಾರರ ಉತ್ಪಾದನಾ ವಿಧಾನ(ಕಾಪಿಟಾಲಿಸ್ಟಿಕ್ಸಿಚೆ ಪ್ರಾಡಕ್ಷನ್ಸ್ ಫಾರ್ಮ )ದಾಸ್ ಕ್ಯಾಪಿಟಲ್ (1867)[೨೭] ದಾಸ್ ಕ್ಯಾಪಿಟಲ್ ನ ಮೊದಲ ಆವೃತ್ತಿ ಪು.124 (ಜರ್ಮನಿ ಸಂಪುಟ) ಇಲ್ಲಿ "ಬಂಡವಾಳಶಾಹಿ" ಎಂಬ ಪದ ಆರ್ಥಿಕ ಪದ್ಧತಿಗಳ ಬಗ್ಗೆ ಎರಡು ಬಾರಿ ಬಳಕೆಯಾಗಿದೆ. ಥೆಯರೀಸ್ ಆಫ್ ಸರ್ಪಲಸ್ ವ್ಯಾಲ್ಯೂ ಎಂಬ ಗ್ರಂಥದಲ್ಲಿಯೂ ಉಲ್ಲೇಖಿತವಾಗಿದೆ. ದಾಸ್ ಕ್ಯಾಪಿಟಲ್ ನ ಮೂರು ಸಂಪುಟಗಳಲ್ಲಿ ಬಂಡವಾಳಶಾಹಿ ಪದ ಬಳಕೆ ಅಷ್ಟಾಗಿ ಕಾಣದಿದ್ದರೂ ಅದರ ಬದಲಾಗಿ ಬಂಡವಾಳದಾರ ಮತ್ತು ಬಂಡವಾಳ ಬಳಕೆಯ ವಿಧಾನಗಳ ಬಗೆಗಿನ ಪದಗಳು 2600 ಸಾರಿ ಮರುಕಳಿಸಿವೆ.
ಮಾರುಕಟ್ಟೆ ಆರ್ಥಿಕ ವಲಯದಲ್ಲಿ ಪ್ರಾಧಾನ್ಯತೆ ತೋರುವ ಮಾರ್ಕ್ಸ್ ಅವರ ಬಂಡವಾಳ ಹೂಡಿಕೆಯ ಉತ್ಪಾದನಾ ಮಾದರಿಯು, ಪ್ರಮುಖವಾಗಿ ಮೂಲ ಉತ್ಪಾದನಾ ಕ್ಷೇತ್ರ ಖಾಸಗಿಯವರ ಕೈಯೊಳಗಿದೆ ಎಂಬುದನ್ನು ವಿವರಿಸುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯಗಳು ಕಾನೂನು ರೀತ್ಯಾ ಒದಗಿಸುವ ವಾಣಿಜ್ಯ ನೀತಿ ಮತ್ತು ಮೂಲಭೂತ ಸೌಲಭ್ಯಗಳು ಉತ್ಪಾದನೆಗೆ ಉತ್ತೇಜನ ನೀಡುತ್ತವೆ.[೨೮][page needed] ಮಾರ್ಕ್ಸ್ ಮರಣಾನಂತರ, ಇಂಗಲ್ ಸಂಪಾದಿಸಿದ ದಾಸ್ ಕ್ಯಾಪಿಟಲ್ ನ ಎರಡು ಮತ್ತು ಮೂರನೆಯ ಸಂಪುಟದಲ್ಲಿ ಬಂಡವಾಳಶಾಹಿ ಪದವನ್ನು ನಿಯಮಿತವಾಗಿ ಬಳಸಿದ್ದಾನೆ.ಇದನ್ನು ಮೂರ್ನಾಲ್ಕು ಬಾರಿ ವಿನಿಯೋಗಿಸಿದ್ದಾನೆ. ದಾಸ್ ಕ್ಯಾಪಿಟಲ್ ನ ಮೂರು ಸಮಗ್ರ ಸಂಪುಟಗಳಲ್ಲಿ (1867,1885,1894)ಬಂಡವಾಳಗಾರ ಎಂಬ ಪದವನ್ನು 2600 ಬಾರಿ ಬಳಕೆ ಮಾಡಲಾಗಿದೆ.
ಸುಮಾರು 1877ರಲ್ಲಿ ಹ್ಯುಗ್ ಗ್ಯಾಬಟ್‌ನ ಬೆಟರ್ ಟೈಮ್ಸ್ ಕೃತಿ ಮತ್ತು 1884ರ ಪಾಲ್ ಮಾಲ್ ಗ್ಯಾಜೆಟ್‌ನಲ್ಲಿ ಸಹ ಬಂಡವಾಳಶಾಹಿ ಪದ ಬಳಕೆಯಾಗಿದೆ.[೨೧] ನಂತರ ಜರ್ಮನಿಯ ಆರ್ಥಿಕತಜ್ಞ ವೆರ್ನರ್ ಸೊಂಬಾರ್ಟ್ ತಮ್ಮ 1902ರ ದಿ ಜೆವ್ಸ್ ಅಂಡ್ ಮಾಡೆರ್ನ ಕ್ಯಾಪಿಟ್ಯಾಲಿಸಮ್ ((ಡೆ ಜುಡನ್ ಅಂಡ್ ವ್ರಿಚ್ ಫ್ಟಸ್ಲೆಬಿಯನ) ಪುಸ್ತಕದಲ್ಲಿ ಬಂಡವಾಳಶಾಹಿ ವ್ಯಾಖ್ಯಾನಕ್ಕೆ ಉತ್ಪಾದನಾ ವಿಧಾನಗಳು ಎಂಬ ವಿವರಣೆ ಒದಗಿಸಿದ್ದಾನೆ. ಸೊಂಬಾರ್ಟ್‌ರ ಹತ್ತಿರದ ಗೆಳೆಯ ಮತ್ತು ಸಹೋದ್ಯೋಗಿ ಮ್ಯಾಕ್ಸ್ ವೆಬ್ಬರ್ 1904ರ ತನ್ನ ದಿ ಪ್ರೊಟೆಸ್ಟಂಟ್ ಎಥಿಕ್ ಅಂಡ್ ದಿ ಸ್ಪಿರಿಟ್ ಆಫ್ ಕ್ಯಾಪಿಟ್ಯಾಲಿಸಿಮ್ (ಡೈ ಪ್ರೊಟೆಸ್ಟಂಟ್ ಟಿಸಿ ಎಥಿಕ್ ಅಂಡರ್ ಜೇಸ್ಟ್ ದೆಸ್ ಕಾಪಿಟ್ಯಾಲಿಸಮ್ ) ಗ್ರಂಥದಲ್ಲಿ ಬಂಡವಾಳಶಾಹಿ ತತ್ವ ಎಂದು ಉಲ್ಲೇಖಿಸಿದ್ದಾನೆ
ಬಂಡವಾಳಶಾಹಿಯ ಆರ್ಥಿಕ ಮೂಲಗಳು
[ಬದಲಾಯಿಸಿ]ಬಂಡವಾಳಶಾಹಿಯ ಆರ್ಥಿಕತೆ ಕೆಳಗಿನ ಉದಾಹರಣೆಗಳ ಮುಖಾಮುಖಿಯೊಂದಿಗೆ ಅಭಿ���ೃದ್ಧಿ ಕಂಡಿದೆ.
1. ವಸ್ತುಗಳು ಅಥವಾ ಸಾಮಗ್ರಿಗಳು: ಇದರಲ್ಲಿ ಎರಡು ಪ್ರಕಾರಗಳಿವೆ. ಬಂಡವಾಳ ಮೂಲದ ವಸ್ತುಗಳು ಇಲ್ಲವೇ ಆಸ್ತಿಗಳಿಗೆ ಸಂಬಂಧಿಸಿದ್ದು ಇನ್ನೊಂದು ಉಪಭೋಗದಾರರ ಅಥವಾ ಬಳಕೆದಾರರ ಸಾಮಗ್ರಿಗಳು. ಬಂಡವಾಳ ಆಧಾರಿತ ವಸ್ತುಗಳೆಂದರೆ ಇವುಗಳನ್ನು ತತ್ ಕ್ಷಣವೇ ಉಪಯೋಗಿಸಲು ಸಾಧ್ಯವಾಗದು (ಉದಾ:ಜಮೀನು,ಕಚ್ಚಾ ಸಾಮಗ್ರಿ,ಯಂತ್ರೋಪಕರಣಗಳು ಮತ್ತು ಫ್ಯಾಕ್ಟರಿಗಳು)ಆದರೆ ಬಳಕೆದಾರರ ಮೂಲವಸ್ತುಗಳು, (ಅದೆಂದರೆ,ಟೆಲಿವಿಜನ್ ,ಕಾರು, ಕಂಪ್ಯೂಟರ್ ವಸತಿ, ಮನೆಗಳು) ಇವುಗಳನ್ನು ಬೇರೆಯವರಿಗೆ ಮಾರಾಟ ಮಾಡಬಹುದಾಗಿದೆ.
2. ಹಣಕಾಸು: ನಗದು ಅಥವಾ ಹಣವೆಂದರೆ ಪ್ರಾಥಮಿಕವಾಗಿ ನಿರ್ಧರಿಸಲ್ಪಟ್ಟ ಒಂದು ವಿನಿಮಯದ ಮಾಧ್ಯಮ. ಸಾಮಗ್ರಿಗಳ ಮತ್ತು ಉಪಭೋಗದ ವಸ್ತುಗಳಿಗೆ ಸೂಕ್ತ ಮಾನದಂಡ ಮತ್ತು ಮೌಲ್ಯದೊಂದಿಗೆ ತನ್ನದೇ ಆದ ಗುಣ-ಮಟ್ಟ ತಂದುಕೊಡುತ್ತದೆ. ಇದು ವಸ್ತುಗಳ ಬದಲಿಗೆ ವಸ್ತುಗಳು ಎಂಬ ವಿನಿಮಯದಂತಹ ಪದ್ದತಿಯ ಸಾಂಪ್ರದಾಯಿಕ ಗೋಜಲಿಗೆ ಅಂತ್ಯ ಹಾಡುತ್ತದೆ.ಉತ್ಪಾದಕಗಳ ವಹಿವಾಟಿಗೆ ಪ್ರತ್ಯೇಕತೆ ತಂದುಕೊಡುತ್ತದೆ.ಇದರಿಂದಾಗಿ ಗ್ರಾಹಕ ವಸ್ತುಗಳು ಸುಲಭವಾಗಿ ಪರಸ್ಪರ ಕೊಡುಕೊಳ್ಳುವಿಕೆಗೆ ಹಾದಿ ಮಾಡಿಕೊಡುತ್ತದೆ.ಹಣ,ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿನ ಬಹುದೊಡ್ಡ ಸಮಸ್ಯೆಗೆ ಪರಿಹಾರ ಮಾರ್ಗ ಸೂಚಿಸುತ್ತದೆ.
3. ಕಾರ್ಮಿಕ ಶಕ್ತಿ: ಕಾರ್ಮಿಕ ಶಕ್ತಿಯು ಮನೋಬಲ ಹಾಗೂ ದೈಹಿಕ ದುಡಿಮೆಯ ಶಕ್ತಿಯನ್ನು ಒಳಗೊಂಡ ಮಾನವ ಸಂಪನ್ಮೂಲವೆನಿಸಿದೆ.ಉದ್ಯಮಶೀಲತೆಯ ಸಾಮರ್ಥ್ಯ ಮತ್ತು ಆಡಳಿತಾತ್ಮಕ ಕೌಶಲ್ಯಗಳು ಕಚ್ಚಾ ವಸ್ತುವೊಂದರಿಂದ ಮತ್ತೊಂದು ಪೂರ್ಣ ಪ್ರಮಾಣದ ವಸ್ತು ತಯಾರಿಗೆ ಅಗತ್ಯವಾಗಿರುತ್ತವೆ.
4. ಉತ್ಪಾದನಾ ಮೂಲಗಳುಮತ್ತೊಂದು ಹೆಸರೇ ಬಂಡವಾಳ ಮೂಲದ ವಸ್ತುಗಳು: ಹಲವು ಬಗೆಯಲ್ಲಿ ಉತ್ಪಾದನೆಗೆ ನೆರವಾಗುವ ಉಪಕರಣೆಗಳಿಗೆ ಉದಾಹರಣೆಗಾಗಿ ಉತ್ಪಾದನೆಗೆ ಪೂರಕವಾಗುವ ಸಲಕರಣೆಗಳು,ಯಂತ್ರೋಪಕರಣ ಮತ್ತು ಕಟ್ಟಡ ಇತ್ಯಾದಿ.
5. ಉತ್ಪಾದನೆ: ಕಾರ್ಮಿಕ ಶಕ್ತಿ ಮತ್ತು ಉತ್ಪಾದನಾ ಮೂಲಗಳನ್ನು ಬಳಸಿ ವಸ್ತು ಅಥವಾ ಸೇವೆಗಳ ಸಿದ್ಧಪಡಿಸುವ ಕ್ರಿಯೆಯೇ ಉತ್ಪಾದನೆ.[೨೯][೩೦]
ಇತಿಹಾಸ
[ಬದಲಾಯಿಸಿ]ಗ್ರೆಕೊ-ರೋಮನ್ ಬಂಡವಾಳಶಾಹಿ ತತ್ವ
[ಬದಲಾಯಿಸಿ]ಆಧುನಿಕ ಮಾರುಕಟ್ಟೆಗಳ ಮೂಲವನ್ನು, ಇದರ ಪ್ರವರ್ತಕರೆನ್ನಲಾದ ರೋಮನ್ ಸಾಮ್ರಾಜ್ಯದ ಕಾಲದಲ್ಲಿ ಹುಡುಕಲಾಗುತ್ತಿದೆ.[೩೧] ನಂತರ ಸಿರಿಯನ್ ಮುಸ್ಲಿಮರು ಇದರ ಪದ್ದತಿಗಳನ್ನು ಜನಪ್ರಿಯಗೊಳಿಸಿದರು. ಉಮಯ್ಯದ್ ಎಂಬ ಜನಾಂಗ ನೂತನ ಮಾರುಕಟ್ಟೆ, ಆಧುನಿಕ ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡಿ ಇದರ ವಿಜಯ ದುಂಧುಬಿಗೆ, ಫಲಗಳಿಗೆ ಕಾರಣರಾದರು.[೩೨]
ಇಸ್ಲಾಮಿ ಬಂಡವಾಳಶಾಹಿ
[ಬದಲಾಯಿಸಿ]ಇಸ್ಲಾಮಿಗಳ ಸುವರ್ಣ ಯುಗ ಮತ್ತು ಮುಸ್ಲಿಮ್ ಕೃಷಿ [೩೩] ಕ್ರಾಂತಿಯ ಸಂದರ್ಭದಲ್ಲಿ ಬಂಡವಾಳಶಾಹಿ ಮತ್ತು ಮುಕ್ತ ಮಾರುಕಟ್ಟೆಯ ಮೂಲ ವಿಧಾನಗಳು ಉಗಮಗೊಂಡವೆಂದು ಇತಿಹಾಸ ಹೇಳುತ್ತದೆ.[೩೪] ಇಲ್ಲಿಯೇ ಆರಂಭಿಕ ಮಾರುಕಟ್ಟೆ ಅರ್ಥ ವ್ಯವಸ್ಥೆ ಹಾಗೂ ವ್ಯಾಪಾರಿ ಬಂಡವಾಳಶಾಹಿಗಳು 8ರಿಂದ 12ನೆಯ ಶತಮಾನದಲ್ಲೇ ತಮ್ಮ ಬೇರುಗಳನ್ನು ಕಂಡುಕೊಂಡುಕೊಂಡವು. ಇದನ್ನೇ ಇಸ್ಲಾಮಿಕ್ ಬಂಡವಾಳಶಾಹಿ ಸಿದ್ಧಾಂತ ಎಂದು ಹೇಳಲಾಗುತ್ತದೆ.[೩೩] ಆಗ ಸ್ವತಂತ್ರವಾಗಿದ್ದ ಹಣಕಾಸು ಮತ್ತು ತೆರಿಗೆ ಆರ್ಥಿಕ ವಲಯ ಮುಸ್ಲಿಮ್ ಸಾಮ್ರಾಜ್ಯದಲ್ಲಿ ದಿನಾರ ಕರೆನ್ಸಿ ಚಲಾವಣೆ ಮೂಲಕ ಮತ್ತಷ್ಟು ಬಲಿಷ್ಟಗೊಂಡಿತು. ಇದರಿಂದಾಗಿ ಆರ್ಥಿಕ ಕ್ಷೇತ್ರ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಸ್ಥಿರ ಹಾಗೂ ಅಧಿಕ ಮೌಲ್ಯದ ದಿನಾರ್ ಹಣಕಾಸು-ತೆರಿಗೆ ವಲಯವನ್ನು ವಿಶಾಲ ತಳಹದಿಯ ಮೇಲೆ ಕಟ್ಟಲು ನೆರವಾಯಿತು. ಇದೇ ಸಂದರ್ಭದ���್ಲಿ ನೂತನ ವ್ಯವಹಾರಿಕತಾಂತ್ರಿಕ ಕೌಶಲ್ಯಗಳನ್ನು ಕಂಡುಕೊಳ್ಳಲಾಯಿತು. ಆರ್ಥಿಕ ತಜ್ಞರಿಂದ ಹೊಸ ವ್ಯಾಪಾರಿ ಸಂಘಟನೆಗಳು ವ್ಯಾಪಾರಿಗಳ ಸಮೂಹ ಪರಿಚಯಗೊಂಡವು. ವ್ಯಾಪಾರ,ವಾಣಿಜ್ಯ,ವಹಿವಾಟುಗಳು ನೂತನ ತಂತ್ರಜ್ಞಾನದೊಂದಿಗೆ ಹೊಸ ಆಯಾಮ ಪಡೆದುಕೊಂಡವು. ಇಂತಹ ಆವಿಷ್ಕಾರಗಳು ಆರಂಭಿಕ ವ್ಯಾಪಾರಿ ಕಂಪೆನಿ, ದೊಡ್ಡ ವಹಿವಾಟುಗಳು(ಉದ್ಯಮಗಳು),ವ್ಯಾಪಾರಿ ಒಪ್ಪಂದಗಳು, ಹಣ ಸಂದಾಯದ ಪತ್ರ, ದೂರದ ಅಂತಾರಾಷ್ಟ್ರೀಯ ವ್ಯಾಪಾರ, ಆರಂಭಿಕ ಪಾಲುದಾರಿಕೆಯ ರೂಪ(ಮುಫವಾಡಾ) ಅಂದರೆ ಸೀಮಿತ ಪಾಲುದಾರಿಕೆಗಳು(ಮುದರಾಬಾ) ಮತ್ತು ಸಾಲ, ಸಾಲಪಡೆಯುವಿಕೆ, ಲಾಭ, ನಷ್ಟ, ಬಂಡವಾಳ(ಅಲ್ ಮಲ್ ) ಬಂಡವಾಳ ಸಂಗ್ರಹಣೆ (ನಾಮಾ ಅಲ್ ಮಲ್ )ಇತ್ಯಾದಿಗಳನ್ನು ಪರಿಚಯಿಸಿತು. ಬಂಡವಾಳ ಶೇಖರಣೆ, ಬಂಡವಾಳ ವೆಚ್ಚಗಳು, ಕಂದಾಯ, ಚೆಕ್‌ಗಳು, ಪ್ರಾಮಿಸರಿ ನೋಟ, ದತ್ತಿ(ವಕ್ಫ್ ನೋಡಿ), ಹೊಸದಾಗಿ ಕಂಪೆನಿಗಳ ಆರಂಭ, ಉಳಿತಾಯ ಖಾತೆಗಳು, ವಹಿವಾಟಿನ ಖಾತೆಗಳು, ಆಭರಣಗಳ ಮೇಲಿನ ಸಾಲ, ವಿನಿಮಯ ದರಗಳು, ಬ್ಯಾಂಕ್ ವ್ಯವಹಾರಿಗಳು , ಹಣ ಪರಿವರ್ತಕರು, ಲೆಜ್ಜರ್‌ಗಳು, ಠೇವಣಿಗಳು, ಕಾರ್ಯಭಾರಗಳು, ಡಬಲ್ ಎಂಟ್ರಿ ಬುಕ್ ಕೀಪಿಂಗ್ ಪದ್ದತಿ[೩೫] ಹಾಗೂ ಕಾನೂನು ಪ್ರಕರಣಗಳು ಮೊದಲಾದವುಗಳಿಗೆ ಚಾಲನೆ ದೊರಕಿತು.[೩೬] ಸಂಘಟಿತ ಉದ್ಯಮ ವಲಯದ ಆರಂಭ ಇಸ್ಲಾಮ್ ಜಗತ್ತಿನ ವ್ಯಾಪಾರಿ ಯುಗದ ಮಧ್ಯಭಾಗದಲ್ಲಿ ಕಂಡು ಬಂದಿತು. ಇವುಗಳು ರಾಜ್ಯದಿಂದ ಸ್ವತಂತ್ರವಾಗಿರುವ ಕಾರ್ಪೋರೇಟ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದವು.ಏಜೆನ್ಸಿ ಸಂಘಟನೆಗಳು ಸಹ ಇದೇ ವೇಳೆಗೆ ಅಸ್ತಿತ್ವ[೩೭] ಕಂಡುಕೊಂಡವು. ಇಂತಹ ಹಲವಾರು ಆರಂಭಿಕ ಬಂಡವಾಳಶಾಹಿಯ ಪರಿಕಲ್ಪನೆಗಳು ಅಳವಡಿಸಲ್ಪಟ್ಟವು. ಯುರೋಪಿನ ಮಧ್ಯ ಭಾಗದಲ್ಲಿ ಪಸರಿಸಿ, 13ನೆಯ ಶತಮಾನದ ನಂತರ ಈ ವಾಣಿಜ್ಯ ಸೂತ್ರಗಳು ಜನಪ್ರಿಯವಾದವು.[೧೧]
ಕರಾರು ಒಪ್ಪಂದದ ವಿಧಾನಗಳ ಮೇಲಿನ ಅವಲಂಬನೆ ವ್ಯಾಪಾರ-ವಹಿವಾಟುದಾರರಿಗೆ ಹೆಚ್ಚು ಪರಿಣಾಮಕಾರಿಯಾಗಿ ಪರಿಣಮಿಸಿದವು. ಸಿರಿವಂತ ಬಂಡವಾಳ ಹೂಡಿಕೆದಾರರಿಂದ ಪಡೆದ ಸಾಲ ಇಲ್ಲವೇ ವ್ಯಾಪಾರಿಗಳ ಜಂಟಿ ಬಂಡವಾಳ ತೊಡಗಿಸುವವರ ನೆರವಿನಿಂದ ವ್ಯಾಪಾರಿಗಳು ಕಮೀಶನ್ ಆಧಾರದ ಮೇಲೆ ಖರೀದಿ ಮತ್ತು ಮಾರಾಟ ಮಾಡುತ್ತಿದ್ದರು. ಈ ವಹಿವಾಟು ನಡೆಸುತ್ತಿದ್ದವರಲ್ಲಿ ಬಹುತೇಕರು ಮುಸ್ಲಿಮರು,ಕ್ರಿಸ್ಚಿಯನ್ನರು ಮತ್ತು ಜೆವಿಷ್ ಗಳು ಆಗಿರುತ್ತಿದ್ದರು. ಇತ್ತೀಚೆಗೆ ಈಜಿಪ್ತನಲ್ಲಿ ದೇವಾಲಯವೊಂದರ ಅಗೆತದ ಸಂದರ್ಭದಲ್ಲಿ ದೊರೆತ ದಾಖಲೆಗಳಲ್ಲಿ ಮಧ್ಯ ಪೂರ್ವ ಯುಗದ ವ್ಯಾಪಾರಿಗಳ ಬುದುಕಿನ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯಗಳು ಲಭ್ಯವಾಗಿವೆ. ವ್ಯಾಪಾರಿ ಪಾಲುದಾರಿಕೆಯು ದೊಡ್ಡ ಪ್ರಮಾಣದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಮತ್ತು ವ್ಯಾಪಾರ ಮೂಲದ ಸಂಬಂಧಗಳು ದೂರದ ವಹಿವಾಟಿಗೆ ವ್ಯಾಪಾರ ಜಾಲ ನಿರ್ಮಿಸಿದವು. ಈ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ಆರ್ಥಿಕ ಮಾರುಕಟ್ಟೆ ಜಾಲ ಬಾಗ್ದಾದ್ನಲ್ಲಿನ ಬ್ಯಾಂಕ್ನಿಂದ ಹಣದ ಪರವಾನಿಗೆ ಪಡೆದು ಸ್ಪೇನ್ನಲ್ಲಿ ಹಣ ಸಂದಾಯದ ಸೌಲಭ್ಯ ಪಡೆಯಬಹುದಾಗಿದೆ.ಅದೇ ಚೆಕ್ ಪ್ರಕಾರದ ಸವಲತ್ತಿಗೆ ಇಂದು ಕಾರಣವಾಯಿತು.[ಸೂಕ್ತ ಉಲ್ಲೇಖನ ಬೇಕು] ಇದೇ ತೆರನಾದ ಸಂಪರ್ಕ ಜಾಲವು ನಗರಗಳಾದ್ಯಂತ ವ್ಯಾಪಕ ಮತ್ತು ವಿಶಿಷ್ಟವಾದ ಸೌಲಭ್ಯ ಒದಗಿಸಲಾರಂಭಿಸಿತು. ಹೀಗೆ ನಗರಗಳಲ್ಲಿ ಬಹುದೂರದ ತಾಣಗಳಿಗೆ ಹಣ ತಲುಪಿಸುವ ವ್ಯವಸ್ಥೆಗೆ ತೆರಿಗೆಗಳನ್ನು ಸಹ ವಿಧಿಸುವ ಪದ್ದತಿ ಆರಂಭಗೊಂಡಿತು. ಮುಸ್ಲಿಮರು ಹಾಗೂ ಜೆವ್ಸ್ ಗಳಿಂದ ಆವಿಷ್ಕಾರಗೊಂಡ ಆರ್ಥಿಕ ಪದ್ದತಿಗಳು ಆಧುನಿಕ ಅರ್ಥಶಾಸ್ತ್ರಪದ್ಧತಿಗೆ ಬುನಾದಿಯಾದವು.
ವಾಣಿಜ್ಯೋದ್ಯಮ (ಅರ್ಥಿಕ ವಿಧಾನ)
[ಬದಲಾಯಿಸಿ]16 ಮತ್ತು 18ನೆಯ ಶತಮಾನದಲ್ಲಿನ ಈ ಅವಧಿಯನ್ನು ವಾಣಿಜ್ಯೋದ್ಯಮ (ಅರ್ಥಿಕ ವಿಧಾನ) ಮತ್ತು ಆರ್ಥಿಕ ವಲಯದ ಮುನ್ನಡೆಯ ಕಾಲವೆಂದೂ ವರ್ಣಿಸಲಾಗುತ್ತದೆ.[೩೮] ಇದೇ ಅವಧಿಯಲ್ಲಿ ಸಾಗರೋತ್ತರ ವ್ಯಾಪಾರಿಗಳು ಹಲವಾರು ಹೊಸ ಭೂಪ್ರದೇಶಗಳನ್ನು ಪತ್ತೆಹಚ್ಚಿದರು.ಮುಖ್ಯವಾಗಿ ಇಂಗ್ಲೆಂಡ್ ಮತ್ತು ಕೆಳಭಾಗದ ದೇಶಗಳುಅಂದರೆ ಯುರೋಪಿಯನ್, ಅಮೆರಿಕನ್ ವಸಾಹತುಶಾಹಿಗಳು ಹಾಗೂ ಸಾಗರೋತ್ತರ ವ್ಯಾಪಾರವು ತೀವ್ರಗತಿಯಲ್ಲಿ ಬೆಳವಣಿಗೆ ಕಂಡವು. ವಾಣಿಜ್ಯೋದ್ಯಮ (ಅರ್ಥಿಕ ವಿಧಾನ) ಲಾಭಕ್ಕಾಗಿ ವ್ಯಾಪಾರ ನಡೆಸುವ ಪದ್ದತಿ,ಬಹಳಷ್ಟು ವಸ್ತುಗಳು ಬಂಡವಾಳಶಾಹಿರಹಿತ ಉತ್ಪಾದನಾ ಪದ್ದತಿಗಳ ಮೂಲಕ ಸಿದ್ಧಗೊಳ್ಳುತ್ತಿದ್ದವು.[೪] ಕೆಲವು ತಜ್ಞರ ಪ್ರಕಾರ ವಾಣಿಜ್ಯೋದ್ಯಮವು (ಅರ್ಥಿಕ ವಿಧಾನ) ಬಂಡವಾಳಶಾಹಿ ಪರಿಕಲ್ಪನೆಯ ಆರಂಭಿಕ ಹಂತ, ಅದರೆ ಆಧುನಿಕ ಬಂಡವಾಳಶಾಹಿಯ ಉಗಮ ತದನಂತರ ಆಯಿತೆಂದು ಇನ್ನುಳಿದವರು ವಾದ ಮಂಡಿಸುತ್ತಾರೆ. ಉದಾಹರಣೆಗಾಗಿ ಕಾರ್ಲ್ ಪೊಲನ್ಯಿಯವರ ಪ್ರಕಾರ ವಾಣಿಜ್ಯೋದ್ಯಮ (ಅರ್ಥಿಕ ವಿಧಾನ) ಮತ್ತು ವ್ಯಾಪಾರ ಕ್ಷೇತ್ರವು ತನ್ನೆಲ್ಲ ದೃಷ್ಟಿಯನ್ನು ವಾಣಿಜ್ಯೀಕರಣದ ಕಡೆಗೆ ಕೇಂದ್ರೀಕರಿಸಿದ್ದರೂ ಅದು ಉತ್ಪಾದನೆಯ ಬಹುಮುಖ್ಯ ಎರಡು ಅಂಶಗಳ ಹಿತ ಕಾಪಾಡಿದೆ. ಕಾರ್ಮಿಕ ಶಕ್ತಿ ಹಾಗೂ ಭೂಮಿ ಕೇವಲ ವಾಣಿಜ್ಯದ ಅಂಗಗಳಾಗದಂತೆ ನೋಡಿಕೊಳ್ಳಲಾಗಿದೆ.ಹೀಗಿರುವಾಗ ವಾಣಿಜ್ಯೋದ್ಯಮದ ಆರ್ಥಿಕ ನಿಯಂತ್ರಣಗಳು ಕೆಲಮಟ್ಟಿಗೆ(ಊಳಿಗ ಮಾನ್ಯ) ದಬ್ಬಾಳಿಕೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಹೆಚ್ಚಾಗಿ ಪೊಲನ್ಯಿ ಅವರ ವಾದದಂತೆ ಮಾರುಕಟ್ಟೆಗಳ ಸಾರ್ವತ್ರಿಕರಣವೇ ಬಂಡವಾಳಶಾಹಿಯ ಸಾಂಕೇತಿಕ ಅಸ್ತಿತ್ವಕ್ಕೆ ಕಾರಣ. ಭೂಮಿ,ಕಾರ್ಮಿಕ ಹಾಗೂ ಹಣ ಇವುಗಳನ್ನು ಅವರು ಕಾಲ್ಪನಿಕ ಸಾಮಗ್ರಿಗಳೆಂದು ಉಲ್ಲೇಖಿಸುತ್ತಾರೆ. ಒಂದು ಅಂದಾಜಿನಂತೆ 1834ರ ಸುಮಾರಿಗೆ ಇಂಗ್ಲೆಂಡ್ ನಲ್ಲಿ ಸ್ಫರ್ಧಾತ್ಮಕ ಕಾರ್ಮಿಕ ಮಾರುಕಟ್ಟೆ ಪ್ರತಿಷ್ಟಾಪನೆಗೆ ಮುಂಚೆ ಕೈಗಾರಿಕಾ ಬಂಡವಾಳಶಾಹಿಯನ್ನು ಒಂದು ಸಾಮಾಜಿಕ ಪದ್ದತಿಯನ್ನಾಗಿ ಅಳವಡಿಸಿರಲಿಲ್ಲ.ಅಲ್ಲದೇ ಈ ಅವಧಿಗೆ ಮೊದಲು ಇದು ಅಸ್ತಿತ್ವದಲ್ಲಿರಲಿಲ್ಲ.[೩೯]
ವಾಣಿಜ್ಯೋದ್ಯಮದ (ಅರ್ಥಿಕ ವಿಧಾನ) ಆರಂಭಿಕ ರೂಪರೇಷೆಗಳು ರೋಮನ್ ಸಾಮ್ರಾಜ್ಯದ ಸಂದರ್ಭದಲ್ಲಿ ಕಂಡುಬಂದಿರುವ ಲಕ್ಷಣಗಳಿವೆ. ರೋಮನ್ ಸಾಮ್ರಾಜ್ಯ ವಿಸ್ತಾರಗೊಡಂತೆ ವಾಣಿಜ್ಯೋದ್ಯಮದ (ಅರ್ಥಿಕ ವಿಧಾನ) ಕೈಗಾರಿಕೆ ಯುರೋಪಿನಾದ್ಯಂತ ಪಸರಿಸಿತು. ರೋಮನ್ ಸಾಮ್ರಾಜ್ಯದ ಪತನದ ನಂತರ ಬಹುತೇಕ ಯುರೋಪಿಯನ್ ಆರ್ಥಿಕ ವಲಯ ಸ್ಥಳೀಯ ಜಮೀನುದಾರಿಕೆ ಯ(ಊಳಿಗಮಾನ್ಯ ಪದ್ಧತಿಯ) ಹತೋಟಿಗೆ ಬಂದು ಅಲ್ಲಿನ ವಾಣಿಜ್ಯೋದ್ಯಮ (ಅರ್ಥಿಕ ವಿಧಾನ),ವ್ಯಾಪಾರೀ ವ್ಯವಸ್ಥೆ ಕುಸಿದು ಬಿತ್ತು. ಆದರೆ ವಾ���ಿಜ್ಯೋದ್ಯಮದ (ಅರ್ಥಿಕ ವಿಧಾನ) ನೀತಿಸೂತ್ರಗಳು ಮತ್ತು ತತ್ವ ಅರೇಬಿಯಾದಲ್ಲಿ ಅಸ್ತಿತ್ವದಲ್ಲಿದ್ದವು. ಒಂದಕ್ಕೊಂದು ಹತ್ತಿರದ ನೆರೆಹೊರೆಯವರ ಪರಿಧಿಯಲ್ಲಿ ಅರೇಬಿಯಾ ತನ್ನ ವ್ಯಾಪಾರಿ ಬೇರುಗಳನ್ನು ಈಜಿಪ್ತ್, ಪರ್ಸಿಯಾ ಮತ್ತು ಬೈಜಂಟಿಯಮ್‌ಗೆ ವಿಸ್ತರಿಸಿತು. ಇಸ್ಲಾಮ್ 7ನೆ ಶತಮಾನದಲ್ಲಿ ಪಸರಿಸುತ್ತಾ ಬಂದಂತೆ ವಾಣಿಜ್ಯೋದಮದ ವ್ಯಾಪಾರಿ ಪರಿಕಲ್ಪನೆ ಸ್ಪೇನ್, ಪೋರ್ಚಗಲ್, ಉತ್ತರಭಾಗದ ಆಫ್ರಿಕಾ ಮತ್ತು ಏಷ್ಯಾದೆಡೆಗೆ ತನ್ನ ಬಾಹುಗಳನ್ನು ಚಾಚಿತು. ವಾಣಿಜ್ಯೋದ್ಯಮದ (ಅರ್ಥಿಕ ವಿಧಾನ) ಸಿದ್ಧಾಂತಗಳಿಗೆ 14ನೆ ಶತಮಾನದಲ್ಲಿ ಅಂತಿಮ ಪರಿಷ್ಕರಣೆ ಮಾಡಲಾಯಿತು. ಇದು ಸ್ಪೇನ್ ಮತ್ತು ಪೋರ್ಚಗಲ್‌ಗಳಿಂದ ಹಬ್ಬಿ ತನ್ನ ಅಸ್ತಿತ್ವ ಸ್ಥಾಪಿಸಿತು ಎಂದು ಹೇಳಬಹುದು.[೪೦]
ವಾಣಿಜ್ಯೋದ್ಯಮ ಆರ್ಥಿಕ ಪದ್ದತಿಯ ಪ್ರಮುಖ ತತ್ವಾಂಶಗಳೆಂದರೆ ಚಿನಿವಾರ ಪೇಟೆಯ ಕಾರ್ಯ ವಿಧಾನ; ಇದು ಬೆಲೆಬಾಳುವ ಲೋಹಗಳ ಸಂಗ್ರಹಿಸುವ ಇಲ್ಲವೆ ಒಂದೆಡೆ ಒಟ್ಟುಮಾಡುವುದಕ್ಕೆ ಮಹತ್ವ ನೀಡುತ್ತದೆ. ವಾಣಿಜ್ಯೋದ್ಯಮದ ಆರ್ಥಿಕ ವಿಧಾನಗಳ ಪ್ರತಿಪಾದಕರ ಪ್ರಕಾರ ಒಂದು ರಾಜ್ಯವು ಹೆಚ್ಚು ಪ್ರಮಾಣದ ರಫ್ತು ಹಾಗೂ ಕಡಿಮೆ ಪ್ರಮಾಣದ ಆಮದು ಮಾಡಿಕೊಳ್ಳಬೇಕು. ಇದರ ನಡುವಿನ ವ್ಯತ್ಯಾಸದ ಪ್ರಮಾಣವನ್ನು ವಿದೇಶಿಗರು ಬೆಲೆಬಾಳುವ ಲೋಹಗಳ ರೂಪದಲ್ಲಿ ನೀಡಬೇಕೆಂದು ವಾದಿಸುತ್ತಾರೆ. ವಾಣಿಜ್ಯೋದ್ಯಮದ ಆರ್ಥಿಕ ವಿಧಾನಗಳ ಪ್ರತಿಪಾದಕರ ವಾದದಂತೆ ಸ್ವದೇಶದಲ್ಲಿ ಪಡೆಯಲಾಗದ ಕಚ್ಚಾ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬೇಕು. ಸರ್ಕಾರ ಕೂಡಾ ಉತ್ತಮ ಉತ್ಪಾದನಾ ಸಾಮರ್ಥ್ಯಕ್ಕೆ ಉತ್ತೇಜನ ನೀಡಬೇಕಾಗುತ್ತದೆ. ಸರ್ಕಾರಿ ರಿಯಾಯತಿಗಳು, ಉದಾಹರಣೆಗೆ ಮುಕ್ತ ಮತ್ತು ಸ್ವತಂತ್ರ ವ್ಯಾಪಾರ, ಏಕಸ್ವಾಮ್ಯಕ್ಕೆ ಅವಕಾಶ, ರಕ್ಷಣಾತ್ಮಕ ತೆರಿಗೆಗಳು ಸಿದ್ದವಸ್ತುಗಳ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗುತ್ತವೆ. ಯುರೋಪಿಯನ್ ವ್ಯಾಪಾರಿಗಳು ಸರ್ಕಾರಿ ನಿಯಂತ್ರಣದ ಮೂಲಕ ದೊರೆಯುವ ರಿಯಾಯತಿಗಳು ಮತ್ತು ಏಕಸ್ವಾಮ್ಯ ಹಕ್ಕುಗಳಿಂದ ಬಹುತೇಕ ತಮ್ಮ ವಸ್ತುಗಳ ಮಾರಾಟ ಮತ್ತು ಕೊಳ್ಳುವದರ ಮೂಲಕ ಉತ್ತಮ ಲಾಭ ಗಳಿಸಲು ಸಮರ್ಥರಾದರು. ಫ್ರಾನ್ಸಿಸ್ ಬೆಕಾನ್ ಅವರ ಮಾತುಗಳಲ್ಲಿ ಹೇಳುವುದಾದರೆ, ವಾಣಿಜ್ಯೋದ್ಯಮ ಆರ್ಥಿಕ ವಿಧಾನಗಳ ಮೂಲ ಉದ್ದೇಶವೆಂದರೆ ವ್ಯಾಪಾರದ ಉತ್ತಮ ಆರಂಭ ಮತ್ತು ಸಮತೋಲನ, ಉತ್ಪಾದಕರಿಗೆ ಉತ್ತೇಜನವೆಂದರೆ, ಜಡತ್ವ ನಿವಾರಣೆ, ತ್ಯಾಜ್ಯ ವಿಲೇವಾರಿಗೆ ಕಡಿಮೆ ವೆಚ್ಚದ ಕಾನೂನುಗಳು, ಭೂಮಿ ಫಲವತ್ತತೆ ಸುಧಾರಾಣೆ ಮತ್ತು ಕಾಳಜಿಪೂರ್ವಕ ಪೋಷಣೆ, ದರಗಳ ನಿಯಂತ್ರಣ. ಇಂತಹದೇ ಪದ್ದತಿಗಳು ಆರಂಭಿಕದಲ್ಲಿ ಮಧ್ಯ ಯುಗೀನ ಪಟ್ಟಣಗಳಲ್ಲಿ ಕಂಡುಬಂದವು.[೪೧] ವಾಣಿಜ್ಯೋದ್ಯಮದ ಆರ್ಥಿಕ ಪದ್ದತಿಗಳು ಬೆಳೆದಂತೆ ಅದಕ್ಕೆ ಸಮಕಾಲೀನವಾಗಿ ಏಕಸ್ವಾಮ್ಯತೆ, ಅಧಿಕಾರ ಚಲಾಯಿಸುವ ದಬ್ಬಾಳಿಕೆ ಪ್ರವೃತ್ತಿ ಬೆಳೆಯಿತು. ಆರ್ಥಿಕ ಕ್ಷೇತ್ರದ ನಿಯಂತ್ರಣಕ್ಕಾಗಿ ಸರ್ಕಾರ ಸ್ಥಳೀಯ ನಿರಂಕುಶ ಗುಂಪುಗಳಿಗೆ ಕಡಿವಾಣ ಹಾಕಿ ಅಂತಹ ಗುಂಪುಗಳನ್ನು ವಶಪಡಿಸಿಕೊಂಡಿತು. ಇದೇ ಸಂದರ್ಭದಲ್ಲಿ ಈ ಗುಂಪುಗಳು ಉತ್ಪಾದನೆ ಮತ್ತು ಅದಕ್ಕೆ ಸಂಬಂಧಪಟ್ಟ ಕೈಕಸಬುದಾರರ ಪ್ರಮಾಣವನ್ನು ತಮ್ಮ ಹತೋಟಿಯಲ್ಲಿಟ್ಟು ಮಾರುಕಟ್ಟೆಯ ಸಾಮಾನ್ಯ ದರಕ್ಕಿಂತ ಹೆಚ್ಚಿಗೆ ಪಡೆಯುವ ಹುನ್ನಾರ ಮಾಡಿದವು.ಈ ಗುಂಪುಗಳು ಸರ್ವಾಧಿಕಾರಿಯಂತೆ ವರ್ತಿಸಿ ಏಕಸ್ವಾಮ್ಯ ಸಾಧಿಸಲು ಮುಂದಾದವು.[೪೨]
ಬಂಡವಾಳಶಾಹಿಯ ವಾಣಿಜ್ಯಿಕ ಹಂತ, 18ನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್‌ರ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಡಚ್ ಈಸ್ಟ್ ಇಂಡಿಯಾ ಕಂಪೆನಿಗಳ ಅಸ್ತಿತ್ವದಿಂದ ಆರಂಭಗೊಂಡಿತು.[೧೧][೪೩] ಈ ಕಂಪೆನಿಗಳು ವಸಾಹತುಶಾಹಿ ಮತ್ತು ವಿಸ್ತರಣಾಧಿಕಾರದ ಲಕ್ಷಣಗಳೊಂದಿಗೆ ಅಲ್ಲಿನ ದೇಶ-ರಾಜ್ಯಗಳ ರಾಜಕೀಯ ಸ್ವಾತಂತ್ರ್ಯ ಮತ್ತು ಆಡಳಿತ ಸ್ವಾಮ್ಯತೆಯನ್ನೂ ಪಡೆದುಕೊಡವು.[೧೧] ಈ ಯುಗದುದ್ದಕ್ಕೂ, ಹಿಂದಿನ ವಾಣಿಜ್ಯೋದ್ಯಮ ಆರ್ಥಿಕ ಪದ್ದತಿ ಮೇಲೆ ವ್ಯಾಪಾರ ಕೈಗೊಳ್ಳುತ್ತಿದ್ದವರು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇತರೆ ವಸಾಹತುಶಾಹಿಗಳಲ್ಲಿ ತಮ್ಮ ಬಂಡವಾಳ ತೊಡಗಿಸಿ ಆದಾಯ ಪಡೆಯುತ್ತಿದ್ದರು.ಬಂಡವಾಳ ಹೂಡಿಕೆಯ ಮೂಲ ಉದ್ದೇಶವೇ ಪ್ರತಿಫಲದ ನಿರೀಕ್ಷೆಯಾಗಿತ್ತು. ಆಸ್ಟ್ರಿಯಾದ ಅರ್ಥಶಾಸ್ತ್ರಜ್ಞ ಜೊಸೆಫ್ ಸ್ಕಮ್ ಪೀಟರ್ ತಮ್ಮ ಹಿಸ್ಟರಿ ಆಫ್ ಇಕನಾಮಿಕ್ ಎನಾಲಸಿಸ್ ನಲ್ಲಿ ವಾಣಿಜ್ಯೋದ್ಯಮ ಆರ್ಥಿಕ ಪದ್ದತಿಗಳನ್ನು ಮೂರು ಅಂಶಗಳಿಗೆ ಸೀಮಿತಗೊಳಿಸಿದ್ದಾರೆ. ಮೊದಲನೆದು ವಿನಿಮಯ ನಿಯಂತ್ರಣಗಳು,ರಫ್ತು ಏಕಸ್ವಾಮ್ಯತೆ ಮತ್ತು ವ್ಯಾಪಾರದ ಸಮತೋಲನ.[೪೪]
ಕೈಗಾರಿಕಾಕರಣ ತತ್ವ
[ಬದಲಾಯಿಸಿ]ಡೇವಿಡ್ ಹೂಮ್ ಮತ್ತು ಆಡಮ್ ಸ್ಮಿತ್ ಅವರ ನೇತೃತ್ವದ ಹೊಸ ಆರ್ಥಿಕ ಅಧ್ಯಯನಕಾರರ ಸಮೂಹ ವಾಣಿಜ್ಯೋದ್ಯಮದ ಆರ್ಥಿಕ ಪದ್ದತಿಗಳ ಮೂಲಭೂತ ಅಂಶಗಳನ್ನೇ ಪ್ರಶ್ನಿಸಿದೆ. ಯಾಕೆಂದರೆ ಜಗತ್ತಿನ ಸಂಪತ್ತು ಸ್ಥಿರವಾಗಿರುತ್ತದೆ, ಒಂದರ ಹೆಚ್ಚಳಕ್ಕೆ ಇನ್ನೊಂದು ರಾಜ್ಯದ ಸಂಪತ್ತನ್ನು ಕಬಳಿಸಬೇಕಾಗುತ್ತದೆ ಎಂಬುದು ಅವರ ನಂಬಿಕೆಯ ವಾದ.[೪೫]
ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕೈಗಾರಿಕೋದ್ಯಮಿಯು, ಬಂಡವಾಳಶಾಹಿಯಲ್ಲಿ ಪ್ರಬಲರಾಗಿದ್ದ ವ್ಯಾಪಾರಿಗಳ ಸ್ಥಾನ ಆಕ್ರಮಿಸಿಕೊಂಡನು. ಇದರಿಂದಾಗಿ ಗ್ರಾಮೀಣ ಪ್ರದೇಶಗಲ್ಲಿ ಗ್ರಾಮೋದ್ಯೋಗ ಅವನತಿಯತ್ತ ಸಾಗಿತು. ಸಾಂಪ್ರದಾಯಿಕ ಕುಶಲತೆಯುಳ್ಳವರು, ಕೈಕಸಬುದಾರರ ಗುಂಪು ಹಾಗೂ ಅಲೆಮಾರಿಗಳ ಸಂಖ್ಯೆ ಕ್ಷೀಣಿಸಿತು. ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ ವಾಣಿಜ್ಯ ಬೆಳೆಗಳ ಅಧಿಕ ಇಳುವರಿ ಮೂಲಕ ಕೃಷಿ ವಲಯ ಯಂತ್ರೋಪಕರಣಗಳ ಅಳವಡಿಕೆಗೆ ಹೆಚ್ಚು ಒತ್ತು ನೀಡಿತು. ಕೈಗಾರಿಕಾ ಬಂಡವಾಳಶಾಹಿಯು ಉತ್ಪಾದನೆಗೆ ಅಭಿವೃದ್ಧಿ ಹೊಂದಿದ ಫ್ಯಾಕ್ಟರಿ ಪದ್ಧತಿಯೊಂದಿಗೆ ಗುರುತಿ ಸಿಕೊಂಡಿತು. ಸಂಕೀರ್ಣ ವಿಭಾಗದ ಪ್ರತ್ಯೇಕತೆ, ಕಾರ್ಮಿಕ ಕಾರ್ಯಪಡೆಯ ವಿಭಜನೆ ಕಾರ್ಯದ ನಡುವೆ ವಿಧಾನ ಮತ್ತು ನಿಯಮಿತತೆ ತಂದುಕೊಟ್ಟಿತು. ನಂತರ ಜಾಗತಿಕ ಮಟ್ಟದಲ್ಲಿ ಬಂಡವಾಳದಾರರ ಉತ್ಪಾದನಾ ಪದ್ದತಿ ಪ್ರಬಲಗೊಂಡಿತು.[೩೮]
ವಾಣಿಜ್ಯೋದ್ಯಮದ ಆರ್ಥಿಕ ಪದ್ದತಿಗಳಲ್ಲಿರುವಂತೆ ಬ್ರಿಟನ್ ತನ್ನ ಸ್ವದೇಶಿ ಆರ್ಥಿಕ ರಕ್ಷಣಾ ನೀತಿಯನ್ನು ಬಿಟ್ಟುಕೊಟ್ಟಿತು. ರಿಚರ್ಡ್ ಕೊಬದೆನ್ ಮತ್ತು ಜಾನ್ ಬ್ರೈಟ್ ಅವರು 19ನೆಯ ಶತಮಾನದಲ್ಲಿ ಮ್ಯಾಂಚಿಸ್ಟರ್ ಸ್ಕೂಲ್ ಪ್ರತಿಪಾದಿಸಿದ ತತ್ವಗಳನ್ನಾಧರಿಸಿ ಆರ್ಥಿಕ ವಲಯದ ಬೆಳವಣಿಗೆಗೆ ಅತ್ಯಲ್ಪ ಪ್ರಮಾಣದ ತೆರಿಗೆ ಪದ್ದತಿ ಕುರಿತಂತೆ ಹೊಸ ಆಂದೋಲನವನ್ನು ಪರಿಚಯಿಸಿದರು.[೪೬] ಬ್ರಿಟನ್ 1840ರಲ್ಲಿ, ಕಾರ್ನ(ಹಳೆಯ) ಕಾನೂನು ಮತ್ತು ಸಮುದ್ರ ಸಂಚಾರ ಸಂಶೋಧನೆಯ ಮಸೂದೆಗಳನ್ನು ಹಿಂದಕ್ಕೆ ಪಡೆದು ಕಡಿಮೆ ಪ್ರಮಾಣದ ಸ್ವದೇಶಿ ಆರ್ಥಿಕ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡಿತು.[೩೮] ಆಡಮ್ ಸ್ಮಿತ್ ಮತ್ತು ಡೆವಿಡ್ ರೆಕಾರ್ಡೊ ಅವರ ಮುಕ್ತ ವ್ಯಾಪಾರದ ಸಲಹೆಗಳನ್ನಾಧರಿಸಿ ಬ್ರಿಟನ್ ತನ್ನ ತೆರಿಗೆ ಮತ್ತು ಸರ್ಕಾರಿ ನಿಯಂತ್ರಿತ ಉತ್ಪಾದನಾ ಪ್ರಮಾಣಗಳನ್ನು ಕಡಿತಗೊಳಿಸಿತು. ಬ್ರಿಟನಲ್ಲಿ 1830ರ ವರೆಗೆ ಕಾರ್ಮಿಕ ಕ್ಷೇತ್ರದ ಮಾರುಕಟ್ಟೆ ಅಸ್ತಿತ್ವತಕ್ಕೆ ಬರುವ ಮುಂಚೆ ಬಂಡವಾಳಶಾಹಿ ಮಾರುಕಟ್ಟೆಯು ಪ್ರಾಬಲ್ಯ ಪಡೆದಿರಲಿಲ್ಲ ಎಂದು ಕಾರ್ಲ್ ಪೋಲನ್ಯಿ ವಾದಿಸುತ್ತಾನೆ. ಭೂಮಿ, ಹಣ ಮತ್ತು ಕಾರ್ಮಿಕ ಶಕ್ತಿಗಳು ಕೈಗಾರಿಕಾ ಕ್ರಾಂತಿ ಸಮಯದಲ್ಲಿ ವಾಣಿಜ್ಯದ ಮತ್ತು ಬಳಕೆ ಸಾಮಗ್ರಿಗಳಾಗಿ ಮಾರ್ಪಡುವವರೆಗೂ ಬಂಡವಾಳಶಾಹಿ ತಲೆ ಎತ್ತಿರಲಿಲ್ಲ ಎಂದೂ ಆತ ವಾದ ಮಂಡಿಸುತ್ತಾನೆ. ವಾಣಿಜ್ಯೀಕರಣದ ಸಮಾಜದಲ್ಲಿ ಫ್ಯಾಕ್ಟರಿ ಪದ್ದತಿ ಅಳವಡಿಕೆಗೆ ಹಾಗೂ ಮಾರುಕಟ್ಟೆ ವಿಸ್ತಾರಕ್ಕೆ ಕೈಗಾರಿಕಾ ಮೂಲಗಳಾದ ಭೂಮಿ,ಕಾರ್ಮಿಕ ಹಾಗೂ ಹಣದ ಅನಿವಾರ್ಯತೆ ಇದೆಯೆಂದು ಪೊಲನ್ಯಿ ಅವರ ಸ್ಫಷ್ಟ ಅಭಿಪ್ರಾಯ.[೪೭] ಉಳಿದ ಮೂಲಗಳ ಪ್ರಕಾರ ವಾಣಿಜ್ಯೋದ್ಯಮದ ಆರ್ಥಿಕ ಪದ್ದತಿಗಳು 1849ರಲ್ಲಿ ಸಮುದ್ರ ಸಂಚಾರ ಸಂಶೋಧನಾ ಅಂದರೆ ನೌಕಾಯಾನ ಮಸೂದೆ ವಾಪಸು ಪಡೆದ ನಂತರ ಮೂಲೆಗುಂಪಾದವು.[೪೬][೪೮][೪೯].
ಏಕಸ್ವಾಮ್ಯತೆ ತತ್ವ
[ಬದಲಾಯಿಸಿ]ದೊಡ್ಡ ದೊಡ್ಡ ಪ್ರದೇಶದಲ್ಲಿನ ಕೈಗಾರಿಕೆಗಳು 19ನೆಯ ಶತಮಾನದ ಕೊನೆ ಭಾಗದಲ್ಲಿ ಹಲವರ ಕೈಗೆ ಬಂದವು. ಇವುಗಳೆಂದರೆ ಟ್ರಸ್ಟ್‌ಗಳು(ದತ್ತಿ ಸಂಸ್ಥೆ),ಹಣಕಾಸು ವಹಿವಾಟುದಾರರು ಹಾಗೂ ಹೋಲ್ಡಿಂಗ್ ಕಂಪೆನಿಗಳ ನಿರ್ದೇಶನ ಮತ್ತು ನಿಯಂತ್ರಣಕ್ಕೊಳಪಟ್ಟವು. ಈ ಅವಧಿಯಲ್ಲಿ ಕೆಲವೇ ಕೆಲವು ಅಲ್ಪಸಂಖ್ಯಾ ಸ್ವಾಮ್ಯದ ಮಾರುಕಟ್ಟೆಯ ಕಂಪೆನಿಗಳು ಏಕಸ್ವಾಮ್ಯತ್ವ ಸಾಧಿಸಿ ಗರಿಷ್ಟ ಲಾಭ ಗಳಿಸಲು ಸಮರ್ಥವಾದವು.[೫೦] ಈ ಅವಧಿಯಲ್ಲಿ ಬಂಡವಾಳಶಾಹಿ ಲಕ್ಷಣಗಳೆಂದರೆ, ದೊಡ್ಡ ಪ್ರಮಾಣದಲ್ಲಿ ಕೈಗಾರಿಕಾ ಏಕಸ್ವಾಮ್ಯಗಳಿಗೆ, ನಿರಂಕುಶ ಮಾರಾಟ, ಒಂದೇ ಒಡೆತನದ ಮಾರಾಟ ಜಾಲಗಳಿಗೆ ಹಾದಿ ಮಾಡಿಕೊಟ್ಟಿತು.ಹಣಕಾಸುದಾರರು ತಮ್ಮ ಗಮನವನ್ನು ಇತರೆ ಪೂರಕ ಅಂಶಗಳತ್ತ ಕೇಂದ್ರೀಕರಿಸಿದರು.ಉಳಿದ ಆರ್ಥಿಕ ಪದ್ದತಿಗಳಾದ ಬ್ಯಾಂಕಿಂಗ್, ಶೇರು ಮಾರುಕಟ್ಟೆ, ಶೇರು ಸಂಗ್ರಹ, ಹೂಡಿಕೆಯ ಕಾರ್ಪೋರೇಟ್ ಹೋಲ್ಡಿಂಗ್ಸ್ ಮೂಲಕ ಮಾಲಿಕತ್ವವನ್ನು ಸಾಧಿಸಿದರು.[೪] ಪೆಟ್ರೋಲಿಯಂ,ಸಂಪರ್ಕ,ರೈಲು ಮಾರ್ಗ, ಹಡಗು ಜಲಮಾರ್ಗ, ಬ್ಯಾಂಕಿಂಗ್ ಹಾಗೂ ಹಣಕಾಸುವ್ಯವಹಾರದ ಉದ್ಯಮಗಳು ತಮ್ಮ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದು ಏಕಸ್ವಾಮ್ಯದ ಲಕ್ಷಣಗಳನ್ನು ಮೈಗೂಡಿಸಿಕೊಂಡವು. ಇಂತಹ ಕಾರ್ಪೋರೇಶನ್‌ಗಳು(ನಿಗಮಗಳು)ಕಾರ್ಮಿಕ ಉತ್ಪಾದನಾ ಕಾರ್ಯಸಾಮರ್ಥ್ಯ ನೀತಿಯ ಪ್ರತ್ಯೇಕತೆಯನ್ನು ಎತ್ತಿಹಿಡಿದವು. ಶೇರುದಾರರು, ಮಾಲಿಕರು, ಮ್ಯಾನೇಜರ್‌ಗಳು ಮತ್ತು ನಿಜವಾದ ಕಾರ್ಮಿಕರು ಎಂಬ ವಿಭಜನೆ ಕಂಡು ಬಂತು. ಆಡಳಿತ ಹಂತಗಳ ಗುರುತಿಸುವಿಕೆಯು ಆರಂಭವಾಯಿತು.[೫೧]
ದೊಡ್ಡ ಪ್ರಮಾಣದ ಕೈಗಾರಿಕಾ ಟ್ರಸ್ಟಗಳು 19ನೆಯ ಶತಮಾನದ ಕಾಲು ಭಾಗದ ಕೊನೆಯಲ್ಲಿ ಏಕಸ್ವಾಮ್ಯತೆದ ಮಿತಿಮೀರಿದವು. ಇದರಿಂದಾಗಿ ಪ್ರಚೋದಿತ US ಇವುಗಳ ಮೇಲೆ ಕಡಿವಾಣ ಹಾಕಲು ಕಾನೂನು ರೂಪಿಸಬೇಕಾಯಿತು. ಬರಬರುತ್ತಾ ಈ ಪ್ರಗತಿ ಯುಗದಲ್ಲಿ US ಸರ್ಕಾರವು ಟ್ರಸ್ಟ್ ವಿರೋಧಿ ಮತ್ತು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದು ದೊಡ್ಡ ಉದ್ಯಮಗಳನ್ನು ನಿಯಂತ್ರಿಸಲು ಮತ್ತು ಕೈಗಾರಿಕಾ ಗುಣಮಟ್ಟದ ಮೇಲಿನ ಹತೋಟಿಗಾಗಿ ಆಯಕಟ್ಟಿನ ಸ್ಥಾನದಲ್ಲಿರುವ ಪ್ರಮುಖ ಉದ್ಯಮಗಳಿಗೆ ಮೂಗುದಾರ ಹಾಕಿತು. ಆರ್ಥಿಕ ಕುಸಿತ,ಹಠಾತ್ ಹಾನಿ ಏರಿಕೆ ಉದ್ಯಮದಲ್ಲಿನ ಏರುಪೇರುಗಳ ಚಕ್ರ 19ನೆಯ ಶತಮಾನದಿಂದ ಇಲ್ಲಿಯವರೆಗೂ ಮರುಕಳಿಸುವ ನಿರಂತರ ಸಮಸ್ಯೆಯಾಗಿದೆ. ಅವಧಿ 1870 ಮತ್ತು 1880ರ ನಡುವಿನ ದೀರ್ಘಕಾಲೀನ ಕುಸಿತ ಹಾಗೂ 1930ರ ಬೃಹತ ಪ್ರಮಾಣದ ಆರ್ಥಿಕ ಕುಸಿತಗಳು ಇಡೀ ಬಂಡವಾಳಶಾಹಿ ಜಗತ್ತಿನ ಮೇಲೆ ಅಗಾಧ ಪರಿಣಾಮ ಬೀರಿದವು.ಇದಕ್ಕಾಗಿ ದೀರ್ಘಕಾಲಿಕ ಯೋಜನೆಗಳನ್ನು ಸಿದ್ದಪಡಿಸಿ ಬಂಡವಾಳಶಾಹಿ ಉಳುವಿಗೆ, ಪುನರ್ಜೀವ ನೀಡುವ ಚರ್ಚೆಗಳು ನಡೆದವು. ಮಾರ್ಕ್ಸ್‌ವಾದಿ ಟೀಕಾಕಾರರು,1930ರ ಅವಧಿಯ ಕುಸಿತಗಳಿಂದ ಬಂಡವಾಳಶಾಹಿ ಕ್ಷೀಣಗೊಳ್ಳುವುದು ಇಲ್ಲವೇ ನಾಶವಾಗಬಹುದೆಂಬ ಸಂಭವನೀಯತೆಯನ್ನು ಧೃಢವಾಗಿ ನಂಬಿದ್ದರು. ಸೊವಿಯತ್ ಯುನಿಯನ್‌ನ ಸಾಮರ್ಥ್ಯ ಪರಿಗಣಿಸಿ ಜಾಗತಿಕ ಕುಸಿತದ ದುಷ್ಪರಿಣಾಮಗಳನ್ನು ತಡೆಯಬಹುದೆಂದು ಅವರು ಲೆಕ್ಕ ಹಾಕಿದ್ದರು.[೫೨]
ಕೆಯಿನಿಸಿಯನ್ ತತ್ವ ಮತ್ತು ನವೀನ ಮಾದರಿಯ ಆರ್ಥಿಕ ಉದಾರಿಕರಣ
[ಬದಲಾಯಿಸಿ]ಜಾಗತಿಕ ಆರ್ಥಿಕ ಕುಸಿತದ 1930ರ ಅವಧಿಯು ರಾಜಕೀಯವಾಗಿ, ರಾಜ್ಯಗಳು ಬಹುಮುಖ್ಯ ಪಾತ್ರ ವಹಿಸುವಂತೆ ಮಾಡಿತು. ಜಗತ್ತಿನಾದ್ಯಂತ ಬಂಡವಾಳಶಾಹಿ ಆರ್ಥಿಕ ವಿಧಾನಗಳು ಹೊಸತನಕ್ಕೆ ಅಣಿಯಾದವು.
ವಿಶ್ವದ ಎರಡನೆಯ ಮಹಾಯುದ್ಧದ ನಂತರದ ಸಾಮಾಜಿಕ ಮತ್ತು ಆರ್ಥಿಕ ಪ್ರವೃತ್ತಿಗಳ ಅಧ್ಯಯನಕ್ಕೆ ವಿಶಾಲ ತಳಹದಿಯ ವಿಶ್ಲೇಷಣಾತ್ಮಕ ನೂತನ ಸಾಧನಗಳನ್ನು ಒಂದೆಡೆ ಸೇರಿಸಿ ಸಾಮಾಜಿಕ ವಿಜ್ಞಾನದಲ್ಲಿನ ಅಭಿವೃದ್ಧಿ ದೃಷ್ಟಿಕೋನಗಳಿಗೆ ಆದ್ಯತೆ ನೀಡಲಾಯಿತು. ಇವುಗಳಲ್ಲಿಕೈಗಾರಿಕರಣದ ನಂತರದ ಸಮಾಜ ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆ ಅಳವಡಿಸಿ ಅಭಿವೃದ್ಧಿಪಡಿಸಲಾಯಿತು.[೩೮] ಈ ಯುಗವು ಕೆಯಿನಿಸಿಯನ್ ಅವರ ಆರ್ಥಿಕ ಸ್ಥಿರ ಸೂತ್ರಗಳಿಂದ ದೊಡ್ದ ಪ್ರಮಾಣದಲ್ಲಿ ಪ್ರಭಾವಕ್ಕೊಳಗಾಯಿತು. ಯುದ್ಧದ ನಂತರದ ಆರ್ರ್ಥಿಕ ವಲಯದಭರಾಟೆಯು1960ರ ಕೊನೆಯಲ್ಲಿ ಮುಗಿಯಿತು. ನಂತರ 1970ರ ಆರಂಭದಲ್ಲಿ ಆರ್ಥಿಕ ವಲಯದ ಮಂದಗತಿ ಮತ್ತು ನಿರುದ್ಯೋಗಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದವು.[೫೩] ಅಪರೂಪವೆನ್ನುವಂತೆ ಮಂದಗತಿಯ ಉತ್ಪಾದನೆಯಿಂದ ಹೆಚ್ಚಿದ ಹಣದುಬ್ಬರವು ನಿರುದ್ಯೋಗಕ್ಕೆ ದಾರಿ ಮಾಡಿಕೊಟ್ಟಿತು. ಹೀಗಾಗಿ ಕೆಯಿನಿಯನ್ ತತ್ವ ಸಿದ್ದಾಂತದ ಕಲ್ಯಾಣದ ನಿಯಂತ್ರಣ ಮಾದರಿ ಹಿನ್ನಡೆ ಪಡೆದು ಆರ್ಥಿಕ ಕುಸಿತದ ಪರಿಣಾಮ ಎದುರಿಸಬೇಕಾಯಿತು. ಫ್ರೆಡ್ರಿಕ್ ಹಯೆಕ್ ಮತ್ತು ಮಿಲ್ಟನ್ ಫ್ರೆಡ್ ಮ್ಯಾನ್ ಅವರ ತತ್ವ ಸಿದ್ಧಾಂತಗಳು ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಪ್ರಭಾವ ಬೀರಿದವು. ಇದರಿಂದಾಗಿ ಸರಕಾರದ ಕಡಿಮೆ ಹಸ್ತಕ್ಷೇಪದ ಬಂಡವಾಳಶಾಹಿ ಸೂತ್ರ ಮತ್ತು ಉನ್ನತ ಮಟ್ಟದ ಉದಾರಿಕರಣದ ನೀತಿಗೆ ಒತ್ತು ನೀಡಲಾಯಿತು. ಆಗಿನ ಕಾಲದ ಆರ್ಥಿಕ ವಲಯದ ಪರ್ಯಾಯ ಸಿದ್ಧಾಂತವು, ಸರಕಾರದ ಕಡಿಮೆ ಹಸ್ತಕ್ಷೇಪ ಬಂಡವಾಳಶಾಹಿ ತತ್ವಕ್ಕಿಂತ ಹೆಚ್ಚು ಸಮರ್ಥವಾಗಿ ಕೆಯಿನಿಯನ್ ಸಿದ್ಧಾಂತಕ್ಕೆ ಪ್ರಾಮುಖ್ಯತೆ ನೀಡಿತು. ಈ ಸಿದ್ಧಾಂತಗಳಿಗೆ 1980ರ ಸುಮಾರಿಗೆ ಬಹುಮುಖ್ಯವಾಗಿ ಆಗಿನ US ಅಧ್ಯಕ್ಷ ರೊನಾಲ್ಡ್ ರೀಗನ್ ಮತ್ತು UKನ ಮಾರ್ಗರೆಟ್ ಥ್ಯಾಚರ್ ಅವರ ನೇತೃತ್ವದ ಸರ್ಕಾರಗಳು ಬಂಡವಾಳಶಾಹಿ ತತ್ವ ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡಿದವು. ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿಯು ಕೆಯಿನಿಯನ್ ತತ್ವದ ಸಮಾಜವಾದಿಸಮೂಹ ಸಿದ್ದಾಂತದಿಂದ ವಿಮುಖವಾಗಿ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಆಯ್ಕೆ ಮಾದರಿಯ ಅಂದರೆ ಮರುಮಾರುಕಟ್ಟೆ ವ್ಯವಸ್ಥೆಯ ಬಂಡವಾಳಶಾಹಿ ತತ್ವಗಳಿಗೆ ವಾಲಿತು. ಒಟ್ಟು ಸಮೂಹದ ಸಿದ್ಧಾಂತವು ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗಲಿಲ್ಲ.[೫೪] ಹಲವಾರು ಆರ್ಥಿಕ ಹಾಗೂ ರಾಜಕೀಯ ವಿಶ್ಲೇಷಕರು ಮಾರುಕಟ್ಟೆ ಬಂಡವಾಳಶಾಹಿ ತತ್ವದ ಪ್ರಬಲತೆಯಿಂದಾಗಿ ಕಮ್ಯುನಿಸ್ಟ್ ಸಿದ್ಧಾಂತ ಅವನತಿಯತ್ತ ಸಾಗಿತು ಎಂಬುದನ್ನು ಕಂಡರು. ಉದಾಹರಣೆಗಾಗಿ ಸೊಯಿಯತ್ ಯುನಿಯನ್ ಕಂಡ ಮಹಾ ಕುಸಿತ ಎಂದೂ ಅವರು ತಮ್ಮ ದೃಷ್ಟಿಕೋನದಿಂದ ಅಳೆಯುತ್ತಾರೆ.
ಜಾಗತೀಕರಣ
[ಬದಲಾಯಿಸಿ]ಕಳೆದ ಐದನೂರು ವರ್ಷಗಳ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನ ಹೆಚ್ಚಳ ಗಮನಿಸಿದರೆ ಇದು ಬಂಡವಾಳಶಾಹಿಯ ಅಭಿವೃದ್ಧಿಗೆ ಸಂಬಂಧಿಸಿದೆ ಎಂದೂ ಹೇಳಬಹುದು.ಆದರೆ ಕೆಲವು ವಿಚಾರವಾದಿಗಳ ಪ್ರಕಾರ 20ನೆ ಶತಮಾನದ ಕಾಲುಭಾಗದ ಅಂತ್ಯಕ್ಕೆ ಜಾಗತಿಕರಣವು,ಜನರ ಪಾಲುದಾರಿಕೆ ಹಾಗೂ ಬಂಡವಾಳದ ಹೆಚ್ಚಳದ ಪ್ರವೃತ್ತಿಗೆ ಕಾರಣವಾಗಿದೆ. ಇದರಿಂದಾಗಿ ದೇಶಗಳು ತಮ್ಮ ಮನೋಬಲ ಸುತ್ತುವರಿದ ಹಾಗೂ ತಮ್ಮ ಅಭಿವೃದ್ಧಿಗೆ ಬಂಡವಾಳಶಾಹಿರಹಿತ ಮಾದರಿಯ ಆರ್ಥಿಕ ಅಭಿವೃದ್ಧಿ ಸೂತ್ರಗಳಿಗೆ ನೆಲೆ ಮಾಡಿಕೊಟ್ಟಿವೆ. ಇಂದಿನ ಈ ವಿದ್ಯಮಾನಗಳು ವಿಶ್ವ ಮಾದರಿ ಬಂಡವಾಳಶಾಹಿ ಪದ್ದತಿಗಳ ನಿಜ ಅರ್ಥದಲ್ಲಿ ಬೆಂಬಲಿಸಿ ಬಲಿಷ್ಟಗೊಳಿಸಲಾಗುತ್ತದೆ ಎಂಬ ವಾದವನ್ನೂ ಹಲವರು ಮಂಡಿಸುತ್ತಾರೆ.[೩೮] ಆದಾಗ್ಯೂ ಜಾಗತಿಕರಣದ ಪ್ರಮಾಣ ಗಮನಿಸಿದರೆ ಆರಂಭಿಕ ಹಂತದಲ್ಲಿಗಿಂತ ಈಗ ಅಂತಹ ದೊಡ್ಡ ಪ್ರಮಾಣದ್ದೇನಲ್ಲ ಎಂದೂ ವಿಚಾರವಾದ��ಗಳು ವಾದಿಸುತ್ತಾರೆ.[೫೫]
ಬಂಡವಾಳಶಾಹಿ ಹೇಗೆ ಕೆಲಸ ಮಾಡುತ್ತದೆ
[ಬದಲಾಯಿಸಿ]ವ್ಯಕ್ತಿಗಳು
[ಬದಲಾಯಿಸಿ]ಆರ್ಥಿಕ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ತೊಡಗುವ ಉಪಭೋಗದಾರರು, ಕಾರ್ಮಿಕರು ಮತ್ತು ಹೂಡಿಕೆದಾರರು ವ್ಯಕ್ತಿಗಳಾಗಿ ಪರಿಗಣಿತರಾಗುತ್ತಾರೆ. ಉದಾಹರಣೆಗಾಗಿ ಉಪಭೋಗದಾರರು ಅಥವಾ ಬಳಕೆದಾರರು ವೈಯಕ್ತಿಕವಾಗಿ ತಮ್ಮ ಕೊಳ್ಳುವ ನಿರ್ಧಾರದಿಂದ ಉತ್ಪಾದನಾ ಮಾದರಿಗಳ ಅಸ್ತಿತ್ವಕ್ಕೆ ಕಾರಣರಾಗುತ್ತಾರೆ. ಅದಕ್ಕೆ ಪೂರಕವಾಗಿ ತಮ್ಮ ಉತ್ಪನ್ನಗಳನ್ನು ಸಂದರ್ಭಕ್ಕೆ ತಕ್ಕಂತೆ ಉತ್ಪಾದಕರು ಬದಲಾಯಿಸಿಕೊಳ್ಳುತ್ತಾರೆ. ಕಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಯಾವ ಕಾರ್ಯಕ್ಕೆ ಸಿದ್ಧಗೊಳ್ಳಬೇಕು ಹಾಗೂ ತಮ್ಮ ಕುಶಲತೆಗೆ ಎಂತಹ ಮಾರುಕಟ್ಟೆ ಆಯ್ಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಅವರೇ ನಿರ್ಧರಿಸುತ್ತಾರೆ. ಇನ್ನು ಹೂಡಿಕೆದಾರರು ತಮ್ಮ ಆದಾಯದಲ್ಲಿ ಎಷ್ಟನ್ನು ಉಳಿತಾಯ ಮಾಡಬೇಕು ಹಾಗೂ ಅದನ್ನು ಹೇಗೆ ತೊಡಗಿಸಬೇಕೆಂಬುದರ ಬಗ್ಗೆ ತೀರ್ಮಾನಿಸುತ್ತಾರೆ. ಇಂತಹ ಉಳಿತಾಯಗಳು ಉದ್ಯಮದ ಪ್ರಗತಿಗಾಗಿ ಹೂಡಿಕೆಗೆ ಅಗತ್ಯವಿರುವ ಹಣ ಒದಗಿಸಿಕೊಡುತ್ತವೆ.
ಉದ್ಯಮ ವಹಿವಾಟುಗಳು
[ಬದಲಾಯಿಸಿ]ವಹಿವಾಟಿನ(ಉತ್ಪಾದಕರು,ಕಂಪೆನಿಗಳು) ಸಂಸ್ಥೆಗಳು ಏನನ್ನು ಉತ್ಪಾದಿಸಬೇಕು ಹಾಗೂ ಉತ್ಪಾದನಾ ಕಾರ್ಯ ಎಲ್ಲಿ ನಡೆಯಬೇಕೆಂಬುದನ್ನು ನಿರ್ಧರಿಸುತ್ತವೆ. ಇವುಗಳು ತಮಗೆ ಬೇಕಾಗುವ ಸೂಕ್ತ ಕಚ್ಚಾವಸ್ತುಗಳು, ಕಾರ್ಮಿಕರು ಹಾಗೂ ಬಂಡವಾಳ ಶೇಖರಣೆಯನ್ನು ಒಟ್ಟುಗೂಡಿಸುತ್ತವೆ. ಉತ್ಪಾದಕಗಳ ಮಾರಾಟಕ್ಕಾಗಿ ವ್ಯಾಪಾರಿ ಸಂಸ್ಥೆಗಳು ಸೂಕ್ತ ಸ್ಥಳ ಒದಗಿಸುತ್ತವೆ. ಜಾಹಿರಾತು ಮತ್ತು ಹೊಸ ಮತ್ತು ಸುಧಾರಿತ ವಸ್ತುಗಳ ಮೂಲಕ ಉತ್ಪಾದನಾ ಸಂಸ್ಥೆಗಳು ಬಳಕೆದಾರರ ಕೊಳ್ಳುವ ನಿರ್ಧಾರವನ್ನು ಪ್ರಭಾವಿಸುತ್ತವೆ. ಬಂಡವಾಳಶಾಹಿ ಮಾರುಕಟ್ಟೆಯು ಯಾವಾಗಲೂ ಲಾಭದ ಹುಡುಕಾಟದಲ್ಲಿರುತ್ತದೆ.(ಆದಾಯಗಳು-ಖರ್ಚು,ವೆಚ್ಚಗಳು) ಇಂತಹ ಲಾಭದ ಅಗತ್ಯವನ್ನು ಲಾಭದ ಗುರಿ ಎಂದು ತಿಳಿಯಲಾಗುತ್ತದೆ. ಇದು ಕಂಪೆನಿಗಳಿಗೆ ಬಳಕೆದಾರರ ಇಚ್ಛೆ ಹಾಗೂ ಕೊಳ್ಳುವ ಸಾಮರ್ಥ್ಯ ಪರಿಗಣಿಸಿ ವಸ್ತುಗಳು ಮತ್ತು ಸೇವೆಗಳ ಉತ್ಪಾದನೆಗೆ ಪ್ರೊತ್ಸಾಹಿಸುತ್ತದೆ. ಯಶಸ್ಸು ಸಾಧಿಸಲು ಕಂಪೆನಿಗಳು ತಮ್ಮ ವಸ್ತುಗಳನ್ನು ಹೆಚ್ಚಿನ ಬೆಲೆ ಹಾಗೂ ನಿಗದಿತ ಪ್ರಮಾಣದಲ್ಲಿ ಮಾರಾಟ ಮಾಡಲೇಬೇಕಾಗುತ್ತದೆ. ಇದರ ಮೂಲಕ ಲಾಭ ಗಳಿಸಲು ಸಾಧ್ಯವಾಗುವುದು. ಕಂಪೆನಿಯ ಮಾರಾಟ ವ್ಯವಹಾರ ಅತ್ಯಲ್ಪವಾದರೆ ಅಥವಾ ಉತ್ಪಾದನಾ ಬೆಲೆಯು ಮಾರಾಟ ಬೆಲೆಗಿಂತ ಹೆಚ್ಚಾದರೆ ಅದು ತನ್ನ ಹೂಡಿಕೆಯ ಹಣವನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ಕಂಪೆನಿಯ ಲಾಭದ ಉದ್ದೇಶವು, ಪರಿಣಾಮಕಾರಿಯಾಗಿ ಸಂಪನ್ಮೂಲಗಳ ಬಳಕೆ ಹಾಗೂ ದಕ್ಷತೆಯ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಕಡಿಮೆ ಪ್ರಮಾಣದ ಕಚ್ಚಾ ವಸ್ತುಗಳು,ಕಾರ್ಮಿಕವರ್ಗ ಅಥವಾ ಮಿತ ಬಂಡವಾಳದ ಮೂಲಕ ಕಂಪೆನಿಯು ತನ್ನ ಉತ್ಪಾದನಾ ವೆಚ್ಚ ತಗ್ಗಿಸಿ ಹೆಚ್ಚು ಲಾಭ ಗಳಿಕೆಗೆ ದಾರಿ ಮಾಡಿಕೊಳ್ಳುತ್ತದೆ. ಬಂಡವಾಳಶಾಹಿ ಅರ್ಥವಲಯ ಮತ್ತು ಬಂಡವಾಳದಾರರ ಪ್ರಗತಿ ದರ ನಿರ್ಧರಿಸಲು ವಾಣಿಜ್ಯಶಾಸ್ತ್ರ ವಿಭಾಗವು ಮಹತ್ವದ ಪಾತ್ರ ವಹಿಸುತ್ತದೆ ವಸ್ತುಗಳ ಹಾಗೂ ಸೇವೆಗಳ ಒಟ್ಟು ಉತ್ಪಾದನೆ ಪ್ರಮಣ ಅಧಿಕಗೊಂಡರೆ ಅರ್ಥಿಕ ಪ್ರಗತಿ ಕಾಣುತ್ತದೆ. ಈ ಅಭಿವೃದ್ಧಿಯು ಮೂಲಭೂತ ಸೌಲಭ್ಯಗಳಲ್ಲಿ ಹೂಡಿಕೆ, ಬಂಡವಾಳ ಮತ್ತು ಉತ್ಪಾದನಾ ಮೂಲಗಳಲ್ಲಿ ತೊಡಗಿಸುವಿಕೆಯ ಅಗತ್ಯವನ್ನು ತಿಳಿಸುತ್ತದೆ. ಬಂಡವಾಳಶಾಹಿತ್ವ ದೇಶಗಳಲ್ಲಿ ಉತ್ಪಾದನಾ ಸಂಸ್ಥೆಗಳು ಎಷ್ಟು ಹಾಗೂ ಯಾವಾಗ ಈ ಉದ್ದೇಶಕ್ಕಾಗಿ ಹಣ ಹೂಡಬೇಕೆಂಬುದನ್ನು ನಿರ್ಧರಿಸುತ್ತವೆ.
ಮಾರುಕಟ್ಟೆ
[ಬದಲಾಯಿಸಿ]ಅರ್ಥಶಾಸ್ತ್ರಜ್ಞರು ಮಾರುಕಟ್ಟೆ ಎಂಬ ಪದವನ್ನು ಕೊಳ್ಳುವವರ-ಮಾರುವವರ ವಿನಿಮಯ ಕೇಂದ್ರವನ್ನಾಗಿ ಅರ್ಥೈಸಿದ್ದಾರೆ. ಇದರ ಮೂಲಕ ಬಳಕೆದಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಲು ನೆರವವಾಗುವ ಕೇಂದ್ರ ಸ್ಥಳವೇ ಮಾರುಕಟ್ಟೆ ಎನ್ನಲಾಗಿದೆ. ಬಂಡವಾಳಶಾಹಿ ಆರ್ಥಿಕ ವಲಯದಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆಗಳನ್ನು ಪೂರೈಕೆ ಮತ್ತು ಬೇಡಿಕೆ ಹಾಗೂ ಪೈಪೋಟಿ ಗಳು ನಿಯಂತ್ರಿಸುತ್ತವೆ. ಕಂಪೆನಿ ಉತ್ಪಾದಿಸಿ ಮಾರಾಟಕ್ಕೆ ಸಜ್ಜುಗೊಳಿಸಿದ ವಸ್ತು ಅಥವಾ ಸೇವೆಗಳ ಒಟ್ಟು ಮೊತ್ತವೆಂದರೆ ಪೂರೈಕೆ. ಉತ್ಪಾದಕರು ಮಾರಾಟಕ್ಕಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಪ್ರಮಾಣವೂ ಪೂರೈಕೆಗೆ ಸಂಬಂಧಿಸಿದೆ. ಬೇಡಿಕೆ ಎಂದರೆ ಜನರು ನಿಗದಿತ ಬೆಲೆಗೆ ಕೊಂಡುಕೊಳ್ಳಲು ಇಚ್ಛುಕರಾಗಿರುವ ಪ್ರಮಾಣವೆನಿಸಿದೆ. ಪೂರೈಕೆಗಿಂತ ಬೇಡಿಕೆ ಹೆಚ್ಚಿದಾಗ ಬೆಲೆಯೇರಿಕೆ,ಪೂರೈಕೆ ಬೇಡಿಕೆಗಿಂತ ಅಧಿಕಗೊಂಡಾಗ ಬೆಲೆ ಇಳಿಕೆ, ಮಾರುಕಟ್ಟೆ ದರ ಮತ್ತು ಪ್ರಮಾಣವನ್ನು ಹೊಸ ಸಮತೋಲದ ಮೂಲಕ ತೂಗಿಸಿಕೊಂಡು ಹೋಗಲು ನೆರವಾಗುತ್ತದೆ. ಎರಡೂ ಸಮತೋಲನವನ್ನು ಕಾಯ್ದುಕೊಂಡು ಬರುವುದು ಮಾರುಕಟ್ಟೆಯ ಲಕ್ಷಣವೆನಿಸಿದೆ. ಹಲವಾರು ಉತ್ಪಾದಕರು ಒಂದೇ ತೆರನಾದ ವಸ್ತುಗಳನ್ನು ಒಂದೇವರ್ಗದ ಕೊಳ್ಳುವವರಿಗೆ ಮಾರಾಟ ಮಾಡಲು ಯತ್ನಿಸಿದಾಗ ಪೈಪೋಟಿ ಏರ್ಪಡುತ್ತದೆ. ಬಂಡವಾಳಶಾಹಿ ಆರ್ಥಿಕ ವಲಯದಲ್ಲಿ ಪೈಪೋಟಿ ಅತ್ಯಂತ ಮಹತ್ವದ್ದಾಗಿದೆ. ಇದು ಹೊಸ ಸಂಶೋಧನೆ ಮತ್ತು ವಿವೇಚನಾಯುಕ್ತ ಬೆಲೆ ನಿಗದಿಗೆ ದಾರಿ ಮಾಡುಕೊಡುತ್ತದೆ. ತಮ್ಮ ಉತ್ಪಾದನೆಗಳ ಗುಣಮಟ್ಟ ಹೆಚ್ಚಳ ಮತ್ತು ನ್ಯಾಯಯುತ ಬೆಲೆ ನೀಡುವ ಕಂಪೆನಿಗಳು ತಮ್ಮ ಪೈಪೋಟಿದಾರರನ್ನು ಹಿಂದೆ ಹಾಕುತ್ತವೆ. ಇದೂ ಅಲ್ಲದೇ ಪೈಪೋಟಿ ಇಲ್ಲದಿದ್ದರೆ ಏಕಸ್ವಾಮ್ಯತ್ವ ಹಾಗೂ ' ಬೆಳೆದು ಬರಲು ಕಾರಣವಾಗಬಹುದು. ಮಾರುಕಟ್ಟೆಗೆ ಬೇಕಿರುವ ಎಲ್ಲಾ ಪ್ರಮಾಣದ ವಸ್ತುಗಳನ್ನು ಒಂದೇ ಕಂಪೆನಿ ಪೂರೈಕೆ ಮಾಡುತ್ತಿದ್ದರೆ ಅಲ್ಲಿ ಏಕಾಧಿಕಾರ ಇಲ್ಲವೇ ನಿರ���ಕುಶತೆ ಬೆಳೆಯುತ್ತದೆ. ಈ ಏಕಸ್ವಾಮ್ಯದ ಕಂಪೆನಿಯು ಉತ್ಪನ್ನಗಳ ಬೇಡಿಕೆಗಿಂತ ಕಡಿಮೆ ಪ್ರಮಾಣದ ವಸ್ತುಗಳನ್ನು ಪೂರೈಸಿ ಮನಬಂದಂತೆ ಬೆಲೆ ಹೆಚ್ಚಿಸುವ ಸಾಧ್ಯತೆ ಹೆಚ್ಚು. ಯಾಕೆಂದರೆ ಇಲ್ಲಿ ಪೈಪೋಟಿದಾರರ ಭೀತಿ ಇರುವದಿಲ್ಲ. ಕಾರ್ಟೆಲ್ ಅನ್ನುವುದು ಕಂಪೆನಿಗಳ ಸಮೂಹವೊಂದು ಒಟ್ಟಾಗಿ ಉತ್ಪಾದನೆಯಲ್ಲಿ ತೊಡಗಿ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸುತ್ತದೆ. ಇದು ಉತ್ಪಾದನಾ ಪ್ರಮಾಣ ಹಾಗೂ ಬೆಲೆ ಹೆಚ್ಚಳದ ನಿಯಂತ್ರಣಕ್ಕೆ ದಾರಿ ಮಾಡಿಕೊಡುತ್ತದೆ. ಹಲವಾರು ದೇಶಗಳು ಏಕಸ್ವಾಮ್ಯ ಹಾಗೂ ಉತ್ಪಾದನಾ ಕಂಪೆನಿಗಳ ಸರ್ವಾಧಿಕಾರ ರಚನೆಯಾಗದಂತೆ ನೋಡಿಕೊಳ್ಳಲು ಮತ್ತು ನಿಷೇಧಿಸಲು ಪೈಪೋಟಿ ಕಾನೂನುಗಳನ್ನು ಹೊಂದಿವೆ. ಏಕಸ್ವಾಮ್ಯ ವಿರೋಧಿ ಕಾನೂನುಗಳಿದ್ದರೂ ಸಹ ದೊಡ್ಡ ಕಾರ್ಪೋರೇಶನ್ ಗಳು ಸಣ್ಣಸಣ್ಣ ಕೈಗಾರಿಕೆಗಳನ್ನು ಹುಟ್ಟು ಹಾಕಿ ಏಕಸ್ವಾಮ್ಯದ ಸಾಧ್ಯತೆಗಳಿಗೆ ಅವಕಾಶ ಮಾಡಿವೆ. ಇಂತಹ ಕೈಗಾರಿಕೆಗಳು ತಾತ್ಕಾಲಿಕವಾಗಿ ದರ ಇಳಿಕೆ ಮಾಡಿ ಕೆಲಮಟ್ಟಿಗೆ ನಷ್ಟ ಅನುಭವಿಸಿ ಪೈಪೋಟಿಯನ್ನು ತಡೆಯಲು ಸಫಲವಾಗುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಪೈಪೋಟಿಗೆ ಕಡಿವಾಣ ಹಾಕಬಹುದು. ಹಲವಾರು ಬಂಡವಾಳಶಾಹಿ ದೇಶಗಳಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಅಗತ್ಯ ವಸ್ತುಗಳ ಪೂರೈಕೆ ಸಂಸ್ಥೆಗಳು ಏಕಸ್ವಾಮ್ಯದಂತೆ ವರ್ತಿಸುತ್ತವೆ(ಸಂಪರ್ಕ,ಅನಿಲ ಪೂರೈಕೆ,ವಿದ್ಯುತ್ ಇತ್ಯಾದಿ)ಆದರೆ ಇವುಗಳಿಗೆ ಸರ್ಕಾರದ ಅರ್ಥ ವ್ಯವಸ್ಥೆಯಲ್ಲಿ ಸಿಂಹ ಪಾಲು ಇರುವದರಿಂದ ಪ್ರಮುಖ ಪಾತ್ರವಹಿಸುತ್ತವೆ.
ಆದಾಯ
[ಬದಲಾಯಿಸಿ]ಬಂಡವಾಳಶಾಹಿ ಮೂಲದ ಆರ್ಥಿಕ ವ್ಯವಸ್ಥೆಯ ಆದಾಯವು ಪ್ರಾಥಮಿಕವಾಗಿ ಯಾವ ನೈಪುಣ್ಯತೆ ಕಸಬುದಾರಿಕೆಗಳು ಬೇಡಿಕೆಯಲ್ಲಿವೆ ಮತ್ತು ಯಾವ ಕುಶಲತೆಗಳು ಪೂರೈಕೆಯಾಗುತ್ತಿವೆ ಎನ್ನುವುದನ್ನು ಅವಲಂಬಿಸಿದೆ. ನಿಪುಣ ಕಾರ್ಮಿಕರ ಕೊರತೆ ಮಾರುಕಟ್ಟೆಯಲ್ಲಿ, ಕುಶಲ ಕಾರ್ಮಿಕರಿಗೆ ಹೆಚ್ಚು ಬೇಡಿಕೆ ಇದ್ದಾಗ ಇಂತಹ ಜನರು ಉತ್ತಮ ಮತ್ತು ಹೆಚ್ಚು ಆದಾಯವನ್ನು ಮಾರುಕಟ್ಟೆಯಲ್ಲಿ ತಂದುಕೊಳ್ಳುತ್ತಾರೆ. ಮಾಲಿಕರಿಂದ ಕೆಲಸಗಾರರಿಗೆ ಇರುವ ಹೆಚ್ಚಿನ ಬೇಡಿಕೆ ಅದೇ ತೆರನಾಗಿ ಕೆಲಸಗಳಿಗಾಗಿ ಕೆಲಸಗಾರರ ಬೇಡಿಕೆಯ ಸ್ಫರ್ಧಾತ್ಮಕ ಕೂಲಿ ದರಗಳನ್ನು ನಿರ್ಧರಿಸುತ್ತದೆ. ನಿಗದಿತ ಕೆಲಸಗಾರರ ಆಕರ್ಷಣೆಗೆ ಕಂಪೆನಿಗಳು ಅಧಿಕ ಕೂಲಿ ನೀಡುವ ಅಗತ್ಯವಿದೆ.ಇದೇ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ಕೆಲಸಗಾರರು ಇರುವಾಗ ಕಡಿಮೆ ಸಂಬಳಕ್ಕೆ ಕಾರ್ಮಿಕರು ಕೆಲಸ ಒಪ್ಪಿಕೊಳ್ಳಬೇಕಾಗುತ್ತದೆ. ಬಂಡವಾಳಶಾಹಿ ದೇಶಗಳಲ್ಲಿ ಕಾರ್ಮಿಕ ಒಕ್ಕೂಟಗಳು ಹಾಗೂ ಸರ್ಕಾರಗಳು ಕೂಡಾ ಕಾರ್ಮಿಕರ ಕೂಲಿ ದರ ನಿಗದಿ ಮೇಲೆ ಪ್ರಭಾವ ಬೀರುತ್ತವೆ. ಒಕ್ಕೂಟಗಳು ಕಾರ್ಮಿಕರ ಕೂಲಿ ದರ ನಿಗದಿ ಹಾಗೂ ಕೆಲಸದ ಉತ್ತಮ ಪರಿಸರ ನಿರ್ಮಾಣಕ್ಕೆ ಕಾರ್ಖಾನೆ ಮಾಲಿಕರೊಂದಿಗೆ ಕಾರ್ಮಿಕರ ಪ್ರತಿನಿಧಿಯಾಗಿ ಮಾತುಕತೆ ನಡೆಸುತ್ತವೆ. ಬಹಳಷ್ಟು ದೇಶಗಳಲ್ಲಿ ಕನಿಷ್ಟ ಕೂಲಿದರ ನಿಗದಿಪಡಿಸಲಾಗಿದ್ದು ಹಲವಾರು ಸರ್ಕಾರಿ ಏಜೆನ್ಸಿಗಳು ಕೆಲಸದ ಉತ್ತಮ ಪರಿಸರ ಹಾಗೂ ರಕ್ಷಣಾ ಗುಣಮಟ್ಟಕ್ಕಾಗಿ ಶ್ರಮಿಸುತ್ತಿವೆ.
ಸರಕಾರ (ಸರ್ಕಾರದ ಆಡಳಿತ)
[ಬದಲಾಯಿಸಿ]ಬಂಡವಾಳಶಾಹಿ ದೇಶಗಳಲ್ಲಿ ಸರ್ಕಾರಗಳು ಖಾಸಗಿ ಆಸ್ತಿ ಮತ್ತು ವ್ಯಕ್ತಿಗಳ ವಿಕಾಸಕ್ಕೆ ಮತ್ತು ಎಲ್ಲಿ ಬೇಕಾದರೂ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸಾಮಾನ್ಯವಾಗಿ ಸರ್ಕಾರ, ಕೂಲಿದರ ನಿಗದಿ ಹಾಗೂ ತಮ್ಮ ಉತ್ಪನ್ನಗಳಿಗೆ ದರ ನಿಗದಿಯ ನಿರ್ಧಾರ ತೆಗೆದುಕೊಳ್ಳಲು ಉತ್ಪಾದನಾ ಸಂಸ್ಥೆಗಳಿಗೆ ಅನುಮತಿ ನೀಡಿರುತ್ತದೆ. ಸರ್ಕಾರವೂ ಸಹ ಅಸಂಖ್ಯಾತ ಮಹತ್ವದ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಉದಾಹರಣೆಗಾಗಿ ಕರೆನ್ಸಿ ಬಿಡುಗಡೆ,ಸಾರ್ವಜನಿಕ ಸೇವೆಗಳ ಉಸ್ತುವಾರಿ ಮತ್ತು ಖಾಸಗಿ ಒಪ್ಪಂದಗಳ ಜಾರಿ ಇತ್ಯಾದಿ. ಸ್ಫರ್ಧಾ ನೀತಿ-ಸೂತ್ರಗಳ ರಚನೆ ಹಾಗೂ ಅನಾರೋಗ್ಯಕರ ಸ್ಫರ್ಧೆಗಳ ವ್ಯಾಪಾರಕ್ಕೆ ಪ್ರತಿಬಂಧಕ ಕಾನೂನುಗಳನ್ನೂ ರೂಪಿಸುತ್ತದೆ. ಸರ್ಕಾರದ ಏಜೆನ್ಸಿಗಳು ಸೇವಾಕ್ಷೇತ್ರದಲ್ಲಿನ ಗುಣಮಟ್ಟ ನಿಯಂತ್ರಿಸುತ್ತದೆ. ಉದಾಹರಣೆಗಾಗಿ ವಿಮಾನಯಾನ ಮತ್ತು ಪ್ರಸಾರಕೇಂದ್ರಗಳು, ಅದೂ ಅಲ್ಲದೇ ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸಹಾಯಧನ ಒದಗಿಸುತ್ತದೆ. ಇನ್ನೂ ಹೆಚ್ಚೆಂದರೆ ಸರ್ಕಾರವು ಬಂಡವಾಳದ ಹರಿವು ಮತ್ತು ಬಡ್ಡಿದರಗಳ ಮೇಲೆ ಹತೋಟಿ ಇಡುತ್ತದೆ.ಇದರಿಂದಾಗಿ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯ ಅಂಶಗಳನ್ನು ನಿಯಂತ್ರಿಸಲು ಸಾಧ್ಯವಾಗುವುದು.[೫೬]
ದೃಷ್ಟಿಕೋನಗಳು
[ಬದಲಾಯಿಸಿ]ಸಾಂಪ್ರದಾಯಿಕ ರಾಜಕೀಯ ಅರ್ಥವ್ಯವಸ್ಥೆ
[ಬದಲಾಯಿಸಿ]ಬ್ರಿಟನ್ನಲ್ಲಿ 18ನೆ ಶತಮಾನದ ಅಂತ್ಯ ಭಾಗದಲ್ಲಿ ಆರ್ಥಿಕ ಚಿಂತನೆಯ ಶಾಸ್ತ್ರೀಯ ಶಾಲೆಯೊಂದು ಜನ್ಮತಾಳಿತು. ಶಾಸ್ತ್ರೀಯ,ಸಾಂಪ್ರದಾಯಕ ರಾಜಕೀಯ ಅರ್ಥಶಾಸ್ತ್ರಜ್ಞರಾದ ಆಡಮ್ ಸ್ಮಿತ್, ಡೆವಿಡ್ ರಿಕಾರ್ಡೊ, ಜೀನ್ ಬ್ಯಾಪ್ಟಿಸ್ಟೆ ಸೆ ಮತ್ತು ಜಾನ್ ಸ್ಟುರ್ಟ ಮಿಲ್ ಇವರು ವಿಶ್ಲೇಶಣಾ ಗ್ರಂಥ ಪ್ರಕಟಿಸಿದ್ದಾರೆ.ಇದರಲ್ಲಿನ ಉತ್ಪಾದನೆ ಮತ್ತು ವಸ್ತುಗಳ ವಿನಿಮಯ, ಮಾರುಕಟ್ಟೆಯ ಮೂಲಭೂತ ಅಂಶಗಳು ಇಂದೂ ಕೂಡಾ ಸಮಕಾಲೀನರಿಗೆ ಅಧ್ಯಯನಕ್ಕೆ ಯೋಗ್ಯವಾಗಿವೆ.
ಫ್ರಾನ್ಸನಲ್ಲಿನ ಫ್ರಾಂಕೊಸಿಸ ಕೊಸ್ನೆಯ್ನಂತಹ ಭೌತಶಾಸ್ತ್ರಜ್ಞರು ಮುಕ್ತ ವ್ಯಾಪಾರಕ್ಕೆ ಭೂಮಿಯೇ ಮೂಲ ಸಂಪತ್ತು. ಇದರಿಂದಲೇ ಉತ್ಪಾದನಾ ಕಾರ್ಯ ಉಗಮಿಸುವುದೆಂಬುದನ್ನು ಸಾಧಿಸಿ ಉತ್ತೇಜಿಸಿದರು. ಕೊಸ್ನೆಯವರ ಟ್ಯಾಬ್ಲ್ಯುಎಕನಾಮಿಕ್ಯು(1759) ನಲ್ಲಿ ಅರ್ಥ ವ್ಯವಸ್ಥೆ ವಿಶ್ಲೇಷಣೆ ಮತ್ತು ಭೌತಶಾಸ್ತ್ರಜ್ಞರ ಆರ್ಥಿಕ ನೀತಿ-ಸೂತ್ರಗಳ ಬಗ್ಗೆ ವಿವರಿಸಲಾಗಿದೆ. ಇದಕ್ಕೆ ಪೂರಕವೆನ್ನುವಂತೆ ಅನ್ನೆ ರಾಬರ್ಟ್ ಜಾಕ್ಯೂಸ್ಟ್ ಟರ್ಗಾಟ್ ಅವರ ಆರ್ಥಿಕ ಬರಹಗಳನ್ನು ಸಹ ಅನುಸರಿಸಲಾಗಿದೆ. ಅನ್ನೆ ಅವರು ತೆರಿಗೆ ಮತ್ತು ಸೀಮಾ ಶುಲ್ಕ ವಿಧಿಸುವುದನ್ನು ವಿರೋಧಿಸುತ್ತಾರೆ. ಅವರು ಮುಕ್ತ ವ್ಯಾಪಾರವನ್ನು ಪ್ರತಿಪಾದಿಸುತ್ತಾರೆ. ರಿಚರ್ಡ್ ಕ್ಯಾಂಟಿಲನ್ ಅವರ ವ್ಯಾಖ್ಯಾನದಂತೆ, ಸುಧೀರ್ಘ ಸಮತೋಲನವು ಅದಾಯವನ್ನು ಸರಾಗವಾಗಿ ಹರಿವಂತೆ ಮಾಡುತ್ತದೆ. ಭೂಮಿಯ ಸುತ್ತ ಇರುವ ಪೂರೈಕೆ ಮತ್ತು ಬೇಡಿಕೆಗಳು ಕಡಿಮೆ ದರಗಳನ್ನು ಪ್ರಭಾವಿಸುತ್ತವೆ.
ಆಡಮ್ ಸ್ಮಿತ್‌ರ ದಿ ವೆಲ್ತ್ ನೇಷನ್ಸ್ ನಲ್ಲಿ (1776) ವ್ಯಾಪಾರದ ವಾಣಿಜ್ಯೋದ್ಯಮದ ಮೇಲೆ ಕಟು ಟೀಕೆ ಪ್ರಕಟವಾಗಿದೆ. ಇದರಲ್ಲಿ "ಸ್ವಾಭಾವಿಕ ಸ್ವತಂತ್ರ ವ್ಯವಸ್ಥೆ" ಎಂಬ ಭಾಗದಲ್ಲಿ ಅವರ ತರ್ಕವು ಸಾಮಾನ್ಯವಾಗಿ ಸಾಂಪ್ರದಾಯಿಕ ರಾಜಕೀಯ ಅರ್ಥವ್ಯವಸ್ಥೆಯ ಆರಂಭ ಎಂದು ಪರಿಗಣಿಸಲಾಗುತ್ತದೆ. ಸ್ಮಿತ್ ಇಂದಿನ ಬಂಡವಾಳಶಾಹಿ ತತ್ವಗಳಿಗೂ ಅನ್ವಯಿಸಬಹುದಾದ ಸಿದ್ದಾಂತಗಳನ್ನು ರಚಿಸಿದ್ದರು. ಮಾರುಕಟ್ಟೆಯಲ್ಲಿ ಅವರ"ಕಾಣದ ಕೈ" ಸಿದ್ಧಾಂತವು ಪ್ರಮುಖವಾಗಿತ್ತು. ಇದರ ಪ್ರಕಾರ " ವೈಯಕ್ತಿಕ ಹಿತಾಸಕ್ತಿ ಇಲ್ಲದಿದ್ದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು ಸಾಧ್ಯವಿದೆ ಎಂಬುದು ಅವರ ವಾದ". ಸ್ಮಿತ್, ಮುಕ್ತ ಮಾರುಕಟ್ಟೆಗಳ ಪರವಾಗಿ ವಾದ ಮಾಡುವಾಗ, ಅದು ಪರಿಣಾಮಕಾರಿಯಾಗಿರುತಿತ್ತು. ಅಂದಿನ ಪರಿಸ್ಥಿತಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಆ ಕಾಲದಲ್ಲಿದ್ದ ಜನಪ್ರಿಯ ವಾಣಿಜ್ಯೋದ್ಯಮದ(ವ್ಯಾಪಾರದ ವಿಧಾನಗಳ) ಮೇಲೆ ಆತನ ಸಿದ್ದಾಂತ ಗೆಲುವು ಸಾಧಿಸಬೇಕಾಗಿತ್ತುಅಲ್ಲದೇ ತನ್ನ ಅಭಿಪ್ರಾಯ ಗೆಲ್ಲಬೇಕಿತ್ತು.[೫೭] ಅವರ ಸಮಯದಲ್ಲಿದ್ದ ಏಕಸ್ವಾಮ್ಯ, ಸುಂಕ, ಅಮದು ರಪ್ತು ತೆರಿಗೆ,ಸುಂಕಗಳು ಮತ್ತು ಸರಕಾರ ವಿಧಿಸಿದ ಇತರ ನಿಬಂಧನೆಗಳನ್ನು ಟೀಕಿಸುತ್ತಿದ್ದರು.ಮಾರುಕಟ್ಟೆಯು ಸಂಪನ್ಮೂಲಗಳ ಪರಿಣಾಮಕಾರಿ ಮತ್ತು ದಕ್ಷ ನಿರ್ಣಾಯಕ ಎಂದು ಭಾವಿಸಿದ್ದರು. ಎರಡನೇ ಪ್ರಮುಖ ಸಾಂಪ್ರದಾಯಿಕ ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಆಧುನಿಕ ಕಾಲದ ಪ್ರಭಾವಿ ಅರ್ಥಶಾಸ್ತ್ರ ಪರಿಣಿತರಾದ ಡೇವಿಡ್ ರಿಕಾರ್ಡೊ ಕೂಡಾ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದವರಲ್ಲಿ ಒಬ್ಬ್ಗರಾಗಿದ್ದಾರೆ.[೫೮] ತಮ್ಮ ಪುಸ್ತಕ ದಿ ಪ್ರಿನ್ಸಿಪಲ್ಸ್ ಆಫ್ ಪಾಲಿಟಿಕಲ್ ಎಕಾನಮಿ ಆಂಡ್ ಟ್ಯಾಕ್ಸೆಷನ್ ನಲ್ಲಿ (1817) ಅಭಿಪ್ರಾಯ ಮಂಡಿಸಿದ್ದಾರೆ. ಅವರು ಹೋಲಿಕೆಯ ಅನುಕೂಲ ಸಿಂಧುದ ನಿಯಮವನ್ನು ಅಭಿವೃದ್ಧಿಪಡಿಸಿದರು. ಎಲ್ಲಾ ವಿಧದ ಆರ್ಥಿಕ ಉತ್ಪನ್ನಗಳ ವ್ಯವಹಾರದಲ್ಲಿ ಒಬ್ಬನೇ ವ್ಯಾಪಾರಿಯು ಹೆಚ್ಚು ಲಾಭ ಗಳಿಸುವ ಹೆಚ್ಚು ದಕ್ಷತೆ ಹೊಂದಿದ್ದರೂ ಸಹ, ಆ ವ್ಯವಹಾರದಲ್ಲಿ ತೊಡಗಿರುವವರಿಗೂ ಇದು ಲಾಭವಾಗುತ್ತದೆ ಏಕೆ ಎನ್ನುವುದನ್ನು ವಿವರಿಸುತ್ತದೆ. ಈ ತತ್ವವು ಮುಕ್ತ ವ್ಯಾಪಾರದ ಪ್ರಕರಣಗಳನ್ನು ಬೆಂಬಲಿಸುತ್ತದೆ. ರಿಕಾರ್ಡೊ ಸೇ'ರ ನಿಯಮದ ಬೆಂಬಲಿಗರಾಗಿದ್ದರು. ಸಂಪೂರ್ಣ ಉದ್ಯೋಗವಕಾಶವು ಸ್ಫರ್ಧಾತ್ಮಕ ಅರ್ಥ ವ್ಯವಸ್ಥೆಗೆ ಸ್ವಾಭಾವಿಕ ಸಮತೋಲನ ತರುತ್ತದೆ. ಇದೇ ತೆರನಾಗಿ ತುಲನಾತ್ಮಕ ಅರ್ಥವ್ಯವಸ್ಥೆಗೆ ಸಮತೋಲನ ಹೊಂದಿರಬೇಕು ಎಂಬ ಅಭಿಪ್ರಾಯವನ್ನೂ ಮಂಡಿಸಿದರು.[೫೯] ಹಣದುಬ್ಬರವು ಹಣ ಮತ್ತು ಸಾಲದ ಪ್ರಮಾಣದಲ್ಲಾಗುವ ಬದಲಾವಣೆಗೆ ನಿಕಟವಾದ ಸಂಬಂಧ ಸೂಚಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಕಚ್ಚಾವಸ್ತುವಿನ ಪ್ರತಿಯೊಂದು ಅಂಶದಿಂದ ಅದಕ್ಕಿಂತ ತೀರಾ ಕಡಿಮೆ ಪ್ರಮಾಣದ ಉತ್ಪನ್ನವನ್ನು ಮಾತ್ರ ಉತ್ಪಾದಿಸಬಹುದು ಎನ್ನುವ ಇಳಿಮುಖ ಪ್ರತಿಫಲದ ನಿಯಮದ ಪ್ರತಿಪಾದಕರಾಗಿದ್ದರು.[೬೦]
ಸಾಂಪ್ರದಾಯಿಕ ರಾಜಕೀಯ ಅರ್ಥವ್ಯವಸ್ಥೆಯ ಮಹತ್ವವು ಅರ್ಥವ್ಯವಸ್ಥೆಯಲ್ಲಿ ಸರಕಾರದ ಕನಿಷ್ಠ ಹಸ್ತಕ್ಷೇಪವಿರುವ ಸಾಂಪ್ರದಾಯಿಕ ಪ್ರಗತಿಪರ ಸಿದ್ದಾಂತದೊಂದಿಗೆ ಬಲವಾದ ಸಂಬಂಧ ಹೊಂದಿದೆ. ಹಾಗಾಗಿ ಕೆಲವು ಸಾರ್ವಜನಿಕ ಅವಶ್ಯಕ ಸರಕುಗಳು ಸರಕಾರದ ನಿಬಂಧನೆಗಳನ್ನು ವಿರೋಧಿಸುವ ಅಗತ್ಯವಿರುವುದಿಲ್ಲ.[೬೧] ಸಾಂಪ್ರದಾಯಿಕ ಉದಾರತಾವಾದವು ಅರ್ಥವ್ಯವಸ್ಥೆ ಮತ್ತು ಸರಕಾರದಂತಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳ ಕಾಯಿದೆಗಳನ್ನು ಸ್ಪಷ್ಟವಾಗಿ ವಿಂಗಡಿಸುತ್ತದೆ.[೬೨]
ಸರಕಾರದ ನಿಯಂತ್ರಣಕ್ಕೆ ಒಳಪಡದ ಮಾರುಕಟ್ಟೆಗಳಿಗೆ ಆರ್ಥಿಕ ಉದಾರೀಕರಣವು ಎಡೆ ಮಾಡಿಕೊಟ್ಟಾಗ, ಸರಕಾರವು ಸಾರ್ವಜನಿಕ ಅವಶ್ಯಕ ಸರಕುಗಳನ್ನು ಒದಗಿಸುವಲ್ಲಿ ಸಮರ್ಥವಾಗುವುದು.[೬೩] ಉದಾಹರಣೆಗೆ, ಖಾಸಗಿ ಸಂಸ್ಥೆಗಳಿಂದ ಪರಿಣಾಮಕಾರಿಯಾಗಿ ನಿರ್ಮಿಸಲಾಗದ ರಸ್ತೆಗಳು, ಕಾಲುವೆಗಳು, ಶಾಲೆಗಳು ಮತ್ತು ಸೇತುವೆಗಳ ಕಾಮಗಾರಿಯನ್ನು ಸರಕಾರವು ಕೈಗೆತ್ತಿಗೊಳ್ಳಬೇಕು ಎಂದು ಆಡಮ್ ಸ್ಮಿತ್ ವಾದಿಸಿದರು. ಆದಾಗ್ಯೂ ಈ ಸೇವೆಗಳನ್ನು ಬಳಸಲು ಸೂಕ್ತ ಶುಲ್ಕ ಪಾವತಿ ನಿಗದಿಪಡಿಸಬೇಕೆಂಬ ಅಭಿಪ್ರಾಯವನ್ನು ತಿಳಿಸಿದರು (ಉದಾ. ಸುಂಕ ನಿಗ��ಿ). ಇದಲ್ಲದೆ, ಅವರು ನವೀನ ಅನ್ವೇಷಣೆಗಳನ್ನು ಪ್ರೇರೆಪಿಸುವುದಕ್ಕಾಗಿ ಮುಕ್ತವ್ಯಾಪಾರ, ಹಕ್ಕುಸ್ವಾಮ್ಯಗಳು ಮತ್ತು ಹಕ್ಕುಪತ್ರಗಳಿಗೆ ಹೆಚ್ಚಿನ ಮಹತ್ವ ನೀಡಲು ಮುಯ್ಯಿಗೆ-ಮುಯ್ಯಿ ಸುಂಕಗಳನ್ನು ಶಿಫಾರಸುಮಾಡಿದರು.[೬೩]
ಮಾರ್ಕ್‌ರ ರಾಜಕೀಯ ಅರ್ಥ ವ್ಯವಸ್ಥೆ
[ಬದಲಾಯಿಸಿ]ಕಾರ್ಲ್ ಮಾರ್ಕ್ಸ್ ಪ್ರಕಾರ ಉತ್ಪಾದನಾ ವ್ಯವಸ್ಥೆಯವಿಧಾನದಲ್ಲಿ ಬಂಡವಾಳಶಾಹಿಯು ಐತಿಹಾಸಿಕ ಮಹತ್ವ ಹೊಂದಿರುತ್ತಾನೆ (ಉತ್ಪಾದನಾ ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ನಿಯಂತ್ರಿಸುವುದು, ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಜನರ ಸಂಬಂಧದ ಆಧಾರದ ಮೇಲೆ ಅವರ ನಡುವಿನ ಸಾಮಾಜಿಕ ಸಂಬಂಧಗಳೊಂದಿಗೆ ಜತೆಗೂಡಿಸಲಾಗುವುದು).ಹಾಗಾಗಿ ಬಂಡವಾಳಶಾಹಿ ಅಥವಾ ಬಂಡವಾಳಗಾರನು ಉತ್ಪಾದನಾ ಚಟುವಟಿಕೆಯಲ್ಲಿ ಪ್ರಮುಖ ಸ್ಥಾನ ಪಡೆದನು ಎಂದು ಕಾರ್ಲ್ ಮಾರ್ಕ್ಸ್ ಪರಿಗಣಿಸಿದ್ದರು.[೩೮] ಮಾರ್ಕ್ಸ್ ಅಭಿವೃದ್ಧಿ ವಿಚಾರದಲ್ಲಿ ಬಂಡವಾಳಗಾರ ವೇದಿಕೆ ಅಥವಾ "ಬಂಡವಾಳಶಾಹಿ ಸಮಾಜ" ಈವರೆಗೆ ಸಾಮಾಜಿಕ ಸಂಸ್ಥೆಯ ಆಧುನಿಕ ಪ್ರಕಾರವನ್ನು ಪ್ರತಿನಿಧಿಸುತ್ತಿದ್ದವು. ಆದರೆ ಅವರು ಶ್ರೀಮಂತ ವರ್ಗ, ನಂತರದ ಬಂಡವಾಳಗಾರರ ಸಮೂಹ ಅಂತ್ಯಗೊಳ್ಳುತ್ತಿದ್ದಂತೆ ಸಮಾಜವು ಸಮಾಜವಾದಿ ಅಥವಾ ಕಮ್ಯುನಿಸ್ಟ್ ಆಗಿ ಪರಿವರ್ತನೆಗೊಳ್ಳುತ್ತದೆ.ಉತ್ಪಾದನಾ ವಲಯದಲ್ಲಿ ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಾಗುತ್ತದೆ. ಅಂತಿಮವಾಗಿ ಉತ್ಪಾದನಾ ವಲಯದಲ್ಲಿ ಕಾರ್ಮಿಕ ವರ್ಗ ತನ್ನ ಪ್ರಭಾವ ಬೀರುವುದು ಎಂದು ಅವರು ಅಭಿಪ್ರಾಯಪಟ್ಟರು.[೬೪][೬೫]
ಆಡಮ್ ಸ್ಮಿತ್‌ರ ನಂತರ ಮಾರ್ಕ್ಸ್ ಮಾರುಕಟ್ಟೆ ವಸ್ತುವಿನ ವಿನಿಮಯ ಮೌಲ್ಯದಿಂದ ಅದರ ಬಳಕೆಯ ಮೌಲ್ಯವನ್ನು ಪ್ರತ್ಯೇಕಿಸಿದರು. ಮಾರ್ಕ್ಸ್‌ರ ಪ್ರಕಾರ ಉತ್ಪಾದನೆಗಾಗಿ ಖರೀದಿಸಿದ ವಸ್ತುವಿಗಿಂತ ಹೆಚ್ಚಿನ ವಿನಿಮಯ ದರದೊಂದಿಗೆ ಉತ್ಪಾದಿಸಿದ ವಸ್ತುಗಳ ಮಾರಾಟದಿಂದ ಬಂಡವಾಳವು ರಚನೆಗೊಳ್ಳುವುದು. ಮಾರ್ಕ್ಸ್ ಪ್ರಕಾರ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕ ಶಕ್ತಿಯು ಸಹ ಒಂದು ಬಳಕೆ ವಸ್ತು; ಬಂಡವಾಳಗಾರರು ನೀಡುವ ಕೂಲಿಯಲ್ಲಿನ ವಿನಿಮಯ ಮೌಲ್ಯವು ಅದು ಉತ್ಪಾದಿಸುವ ವಸ್ತುಗಳ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಇದು ಲಾಭದ ಉದ್ದೇಶವನ್ನೂ ಪೂರೈಸುತ್ತದೆ. ಮೌಲ್ಯದಲ್ಲಿನ ಈ ವ್ಯತ್ಯಾಸವು ಬಂಡವಾಳಗಾರರ ಬಲವಂತವಾಗಿ ಸಂಗ್ರಹಿಸಿ ಮಿಗುತಾಯ(ಉಳಿಕೆಯ) ಮೌಲ್ಯವನ್ನು ಹೊಂದಿರುವುದರಿಂದ ಲಾಭಾಂಶವನ್ನು ಒಳಗೊಂಡಿರುತ್ತದೆ. ಮಾಲೀಕರು ಕಾರ್ಮಿಕರಿಂದ ಹೆಚ್ಚುವರಿ ಕೆಲಸ ಹೇಗೆ ತೆಗೆದುಕೊಳ್ಳುತ್ತಾರೆ ಮತ್ತು ಮೇಲಾಡಳಿತಗಾರರು ಹೆಚ್ಚುವರಿ ಕಾರ್ಮಿಕ ಬಲವನ್ನು ಹೇಗೆ ಒಟ್ಟು ಸೇರಿಸುತ್ತಿದ್ದರು ಎನ್ನುವುದರ ವ್ಯತ್ಯಾಸವನ್ನು ಉತ್ಪಾದನೆಯ ಬಂಡವಾಳಗಾರ ವಿಧಾನವು ವಿವರಿಸುತ್ತದೆ. ಆದರೆ ಉತ್ಪಾದಿಸಿದ ವಸ್ತುವಿನ ಮಾರಾಟದಿಂದ ಬರುವ ಮೊತ್ತದಿಂದ ಬಂಡವಾಳಶಾಹಿಯು ಹೊಸ ಉತ್ಪನ್ನ ತಯಾರಿಸುವನು ಎಂದು ಮಾರ್ಕ್ಸ್ ತಮ್ಮ ಪುಸ್ತಕ ಕ್ಯಾಪಿಟಲ್ ನಲ್ಲಿ ಪ್ರತಿಪಾದಿಸುತ್ತಾರೆ.[೬೬] ಸ್ವತಂತ್ರವಾಗಿ ಬದುಕಲು ಬೇಕಾದ ಅವಶ್ಯಕ ಸಂಪನ್ಮೂಲಗಳಿಲ್ಲದೆ ಮತ್ತು ಕೂಲಿಗಾಗಿ ತಮ್ಮ ಕಾರ್ಮಿಕ ಶಕ್ತಿಯನ್ನು ಮಾರಿ ಬದುಕುವ ಭಾರಿ ಸಂಖ್ಯೆಯ ಜನರು ಬಂಡವಾಳಶಾಹಿ ಸಮಾಜದ ಪ್ರಮುಖ ಅಗತ್ಯತೆ ಎನಿಸಿದ್ದಾರೆ ಎಂದು ಅವರು ತಿಳಿಸಿದರು.[೬೭][೬೮][೬೯] ಅವರ ಬಂಡವಾಳಶಾಹಿ ವಿರುದ್ಧದ ಟೀಕೆಗೆ ದಂಗೆಯೆದ್ದ ಕಾರ್ಮಿಕರು ಸಮಾಜವಾದ ಮಾದರಿಯ ಅರ್ಥವ್ಯವಸ್ಥೆಯ ಬದಲಾವಣೆಗೆ ಕಾರಣರಾಗಿದ್ದರು ಎಂಬದು ಮಾರ್ಕ್ಸ್ರ ಅವರ ಊಹೆಯಾಗಿತ್ತು.[೭೦] ಮಾರ್ಕ್ಸ್ ಹೇಳುವಂತೆ, ಬಂಡವಾಳ ಹೂಡಿದ ಮಾಲೀಕರು ಅಥವಾ ಮಧ್ಯಮವರ್ಗದವರಿಂದ ಹೆಚ್ಚುವರಿ ಮೌಲ್ಯದ ಕಾರ್ಮಿಕ ಶಕ್ತಿಯ ಬಲವಂತದ ನಿರಂತರ ಶೇಖರಣೆಯ ಚಕ್ರವು ವರ್ಗ ಸಂಘರ್ಷಣೆಗೆ ತಳಹದಿಯಾಗಿದೆ. ಎಲ್ಲಾ ಮೌಲ್ಯಗಳ ಮತ್ತು ಲಾಭದ ಮೂಲ ಕಾರ್ಮಿಕನಾಗಿದ್ದಾನೆ ಎಂದು ಹೇಳುವ ಕಾರ್ಮಿಕ ಮೌಲ್ಯ ಸಿದ್ದಾಂತದ ಮಾರ್ಕ್‌ರ ನಿರೂಪಣೆಯೊಂದಿಗೆ ಈ ವಾದ ಮಂಡಿಸಲಾಗಿದೆ.
ಇಂಪೆರಿಯಲಿಸಮ್, ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಮ್ ನಲ್ಲಿ (1916) ವ್ಲಾಡಿಮಿರ್ ಲೆನಿನ್‌ರು ಸಾಂಪ್ರದಾಯಿಕ ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಪರಿಷ್ಕರಿಸಿದರು. ಬಂಡವಾಳಶಾಹಿ ವ್ಯವಸ್ಥೆಯು ಏಕಸ್ವಾಮ್ಯ ಬಂಡವಾಳಶಾಹಿಯನ್ನು ಖಂಡಿತವಾಗಿಯೂ ಪ್ರೇರೆಪಿಸುತ್ತದೆ ಎಂದು ಅವರು ವಾದಿಸಿದರು. ಇದನ್ನು "ಸಾಮ್ರಾಜ್ಯಶಾಹಿ" ಅಂತಲೂ ಕರೆಯಬಹುದಾಗಿದೆ. ಹೊಸ ಮಾರುಕಟ್ಟೆಗಳು ಮತ್ತು ಸಂಪನ್ಮೂಲಗಳನ್ನು ಹುಡುಕುವ ಬದಲು, ಅದು ಬಂಡವಾಳಶಾಹಿಯ ಅಂತಿಮ ಹಂತವನ್ನು ತಲುಪುವುದು.[೭೧] ಬಂಡವಾಳಶಾಹಿ ವರ್ಗದ ಜನರು ಪ್ರಾಧಾನ್ಯತೆ ಪಡೆದುಕೊಂಡಿರುತ್ತಾರೆ, ಆದರೆ ಅವರು ಪ್ರತ್ಯೇಕವಾಗಿರದೇ, ಸಮಾನವಾದ ಸ��ಮಾಜಿಕ ಜೀವನ ಶೈಲಿಯನ್ನು ಅನುಸರಿಸಬೇಕು ಎಂದು 20ನೇ ಶತಮಾನದ ಕೆಲವು ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು ಪರಿಗಣಿಸಿದರು.[೭೨] ಕಾರ್ಮಿಕರ ಹೆಚ್ಚುವರಿ ಕೆಲಸವನ್ನು ಬಂಡವಾಳಶಾಹಿಗಳು ಹೆಚ್ಚುವರಿ ಬಂಡವಾಳದಂತೆ ಬಳಸಿಕೊಳ್ಳುತ್ತಾರೆ; ಬಂಡವಾಳಗಾರ ಪ್ರಭಾವವಿರುವಲ್ಲಿ ಈ ರೀತಿಯ ಕಾರ್ಮಿಕರ ಬಳಕೆ ಹೆಚ್ಚಿರುತ್ತದೆ ಎನ್ನುವುದು ಈ ಚಿಂತಕರ ಅಭಿಪ್ರಾಯವಾಗಿತ್ತು. ಬಂಡವಾಳಶಾಹಿಗಳು ಹೆಚ್ಚುವರಿ ಬಂಡವಾಳ ಸಂಗ್ರಹಿಸಿ , ಅದನ್ನು ತನ್ನ ಹೂಡಿಕೆಯ ಆರ್ಥಿಕ ಚಟುವಟಿಕೆಯಿಂದ ಏನನ್ನೂ ಉತ್ಪಾದಿಸದಿದ್ದರೆ , ಆಗ ಬಂಡವಾಳೇತರ ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚಿನ ಜನರು ತೊಡಗುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಜದ ರಚನೆಯನ್ನು ಬಂಡವಾಳಗಾರರು ಮಾಡಿರಬಹುದು ಎನ್ನುವುದು ಮಾರ್ಕ್ಸ್ ನಂತರದ ಚಿಂತಕರ ವಾದವಾಗಿತ್ತು.[೭೩]
ಬಂಡವಾಳಶಾಹಿ ವ್ಯವಸ್ಥೆಯಡಿ ಸಾಂದರ್ಭಿಕ ಉತ್ಪಾದನೆ ಮಾಡುವ ಸ್ಥಳ ಮತ್ತು ಅಲ್ಲಿನ ರಾಜಕೀಯ ಚಟುವಟಿಕೆ,ವಿದ್ಯಮಾನಗಳ ಕುರಿತು ಒಂದು ಸಿದ್ಧಾಂತ ರಚಿಸಿ ಮಾರ್ಕ್ಸ್‌ವಾದಿ ಚಿಂತನೆಯನ್ನು ಡೇವಿಡ್ ಹಾರ್ವೆ ಮುಂದುವರಿಸಿದರು. ತಮ್ಮ ವಾದ ಸಮರ್ಥನೆಗೆ,ಅವರು ಮಾರ್ಕ್ಸ್‌ರ ಟೀಕೆಯ ಸಿದ್ಧಾಂತ ಬಳಸಿಕೊಂಡರು. ಬಂಡವಾಳಶಾಹಿ ವ್ಯವಸ್ಥೆಯು ತನ್ನದೇ ಆದ “ಸೀಮೆ(ಪರಿಮಿತಿ)” ಹೊಂದಿರಬೇಕು. ಆದರೆ ಯಾವ ಮಿತಿಗಳನ್ನು ಅಳವಡಿಸಿಕೊಳ್ಳಬೇಕು ಅಥವಾ ಅವುಗಳು ಯಾವ ಪ್ರಕಾರದಲ್ಲಿರಬೇಕು ಎನ್ನುವುದನ್ನು ನಾವು ಮೊದಲೇ ನಿರ್ಧರಿಸಲಾಗುವುದಿಲ್ಲ. ಸೀಮೆಯ ಈ ಪರಿಕಲ್ಪನೆಯು ಧನಾತ್ಮಕವಾಗಿದ್ದು, ಮಿತಿಗಳನ್ನು ಸ್ಥಿರವಾಗಿಸಲು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮಾದಕ ವ್ಯಸನಿಯು ತನ್ನ ಅಭ್ಯಾಸ ನಿಲ್ಲಿಸಿದಾಗ,ಅದು ಅವನ ಮೇಲೆ ಕೆಟ್ಟ ಪರಿಣಾಮ ಬೀರುವುದು. ಹಾರ್ವೆ ತಮ್ಮ ಪುಸ್ತಕ ಲಿಮಿಟ್ಸ್ ಟು ಕ್ಯಾಪಿಟಲ್ ನಲ್ಲಿ (1982) ಆರ್ಥಿಕ ಬಿಕ್ಕಟ್ಟಿನ ರಚನೆಯ ವ್ಯಾಪ್ತಿ ಮತ್ತು ಅದರ ಪರಿಣಾಮಕ್ಕೆ ಸಂಬಂಧಿಸಿದ ಬಂಡವಾಳಶಾಹಿತ್ವದ ಪ್ರಾದೇಶಿಕ ವಿಸ್ತಾರವನ್ನು ವಿಶೇಷ ಅಂಶವಾಗಿ ಗುರುತಿಸಿದ್ದಾರೆ. ಇದಲ್ಲದೆ, ಅವರು ಬಂಡವಾಳ ಶೇಖರಣೆ ಮತ್ತು ಉತ್ಪಾದನಾ ಬಂಡವಾಳಗಾರರ ವಿಧಾನದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣದ ಹರಿವಿನ ಪ್ರಮಾಣವನ್ನು ಅರ್ಥೈಸಿಕೊಳ್ಳುವುದಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು.[೭೪] ವಿಶ್ವ ಅರ್ಥವ್ಯವಸ್ಥೆಗಳಲ್ಲಿ ಅವುಗಳ ನಡುವೆ ಸಮಕಾಲೀನ ರಾಜಕೀಯ ಅರ್ಥವ್ಯವಸ್ಥೆಯ ಭವಿಷ್ಯದಲ್ಲಿ ಭಾರಿ ಅಸ್ಥಿರತೆ ಕಾಣಿಸಿದೆ.ಇದಕ್ಕೆ ಬಂಡವಾಳಶಾಹಿ ವ್ಯವಸ್ಥೆ ಕಾರಣವಾಗುತ್ತದೆಯೇ ಎಂಬ ಬಗ್ಗೆ ಹಾರ್ವೆ ತಮ್ಮ ಅಸಮತೋಲನ(ಅಸಮ) ಭೌಗೋಳಿಕ ಅಭಿವೃದ್ಧಿಯ ಸಿದ್ಧಾಂತದ ಬಗ್ಗೆ ಟಿಪ್ಪಣಿ ಎಂಬ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಈ ಕೆಳಗಿನ ನಾಲ್ಕು ಸಾಂದರ್ಭಿಕ ಆಧಾರದ ಮೇಲೆ ಅಸಮ ಅಭಿವೃದ್ಧಿಯ ಕಾರಣವನ್ನು ಅವರು ನಿರೂಪಿಸಿದರು: ಸಾಮಾಜಿಕ ಬದುಕಿನ ವ್ಯಾಪ್ತಿಯಲ್ಲಿ ಬಂಡವಾಳ ಸಂಗ್ರಹಣೆಯಲ್ಲಿ ಒಳಗೊಂಡಿರುವ ಅಂಶಗಳು; ಜನರಿಂದ ವಸೂಲಾತಿ ಮಾಡುವುದರ ಮೂಲಕ ಬಂಡವಾಳ ಸಂಗ್ರಹಣೆ; ಬಂಡವಾಳ ಸಂಗ್ರಹಣೆ ಮಾಡುತ್ತಿರುವ ಸ್ಥಳ ಅಥವಾ ಸಮಯ; ಮತ್ತು ರಾಜಕೀಯ, ಸಾಮಾಜಿಕ ಮತ್ತು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಬವಣೆಪಡುತ್ತಿರುವ “ಸಾಮಾಜಿಕ ವರ್ಗದವರಿಂದ ಶೇಖರಣೆ ಮಾಡುವುದು.[೭೫]
ವೇಬರ್‌ನ ರಾಜಕೀಯ ಸಮಾಜಶಾಸ್ತ್ರ
[ಬದಲಾಯಿಸಿ]ಕೆಲವು ಸಮಾಜ ವಿಜ್ಞಾನಗಳಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳು ಮತ್ತು ವ್ಯಾಖ್ಯಾನಗಳು 19ನೇ ಶತಮಾನದ ಜರ್ಮನಿಯ ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೇಬರ್‌ರಿಂದ ಪ್ರಭಾವಕ್ಕೆ ಒಳಗಾದವು. ಉತ್ಪಾದನೆಗಿಂತಉತ್ಪನ್ನಗಳ ಮಾರುಕಟ್ಟೆ ವಿನಿಮಯ ಪ್ರಮಾಣವು ಬಂಡವಾಳಶಾಹಿ ವ್ಯವಸ್ಥೆಯ ಮುಖ್ಯ ಲಕ್ಷಣ ಎಂದು ವೇಬರ್ ವ್ಯಾಖ್ಯಾನಿಸಿದರು. ಹಿಂದಿನ ಆರ್ಥಿಕ ಚಟುವಟಿಕೆ ವ್ಯವಸ್ಥೆಯಲ್ಲಿದ್ದ ಬಂಡವಾಳಶಾಹಿ ಉದ್ಯಮಗಳು ಸಾಮಾಜಿಕ ಪ್ರಕ್ರಿಯೆಯ ಕಡೆಗೆ ಒಲವು ತೋರಿದ್ದವು.ಇದೇ ವೇಳೆಗೆ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಸುಧಾರಣೆ'ಯನ್ನು ತರುವುದಾಗಿದೆ ಎಂದು ವೇಬರ್ ಅಭಿಪ್ರಾಯಪಟ್ಟಿದ್ದರು. ವೇಬರ್ ಪ್ರಕಾರ ಪ್ರಾಥಮಿಕ-ಬಂಡವಾಳಶಾಹಿ ಅರ್ಥಿಕ ವ್ಯವಸ್ಥೆಗಳಲ್ಲಿ, ಕೆಲಸಗಾರೆಂದರೆ ಸಂಸ್ಥೆಯಲ್ಲಿರುವ ಯಜಮಾನ ಮತ್ತು ಕೆಲಸಗಾರ ಅಥವಾ ಹಳ್ಳಿಯಲ್ಲಿರುವ ಧಣಿ ಮತ್ತು ಕೆಲಸದ ಸ್ಥಳದಲ್ಲೇ ವಾಸಿಸುವ ಒಕ್ಕಲಿಗನ ನಡುವಿನ ವೈಯಕ್ತಿಕ ಸಂಬಂಧ ಹೊಂದಿರುವ ಕಾರ್ಮಿಕರು ಅಥವಾ ಕೆಲಸಗಾರರು.[೭೬]
ವೇಬರ್ ತಮ್ಮ ದಿ ಪ್ರೋಟೆಸ್ಟೆಂಟ್ ಎತಿಕ್ ಆಂಡ್ ದಿ ಸ್ಪಿರಿಟ್ ಆಫ್ ಕ್ಯಾಪಿಟಲಿಸಮ್ ನಲ್ಲಿ (1904-1905) ಅಧುನಿಕ ಪಾಶ್ಚಿಮಾತ್ಯ ಬಂಡವಾಳಶಾಹಿಯ ವ್ಯವಸ್ಥೆಯ ನಿರ್ದಿಷ್ಟ ಪ್ರಕಾರಗಳನ್ನು ವಿವರಿಸಿದ್ದಾರೆ. ಧಾರ್ಮಿಕ ಅಂಶದ ಸಾಂಪ್ರದಾಯಿಕ ಆರ್ಥಿಕ ಚಟುವಟಿಕೆಗಳು ವ್ಯವಸ್ಥೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಪತ್ತೆಹಚ್ಚಲು ಪ್ರಯತ್ನಿಸಿರುವುದಾಗಿ ಬರೆದಿದ್ದಾರೆ. ವೇಬರ್ ಪ್ರಕಾರ 'ಬಂಡವಾಳಶಾಹಿಯ ಸ್ಫೂರ್ತಿಯು' ಸಾಮಾನ್ಯವಾಗಿ ಪ್ರಾಟೆಸ್ಟಂಟ್ ಧರ್ಮಗುರುಗಳ ದೈನಂದಿನ ಜೀವನದಿಂದ ಪ್ರೆರೇಪಿತ ಸಿದ್ಧಾಂತ. ಧಾರ್ಮಿಕ ನೀತಿಯಿಂದ ಬಂಡವಾಳ ಸಂಗ್ರಹಣೆಯ ಮತ್ತು ಹಾಗೇಯೆ ಬಂಡವಾಳದ ಮರುಹೂಡಿಕೆಯ ಪ್ರವೃತ್ತಿಯಾಗಿದೆ. ಇದು ಸೂಕ್ತವಾಗಿದ್ದು, ನಂತರ ಮಾರ್ಕ್ಸ್ ರಚಿಸಿದ "ಸ್ವಯಂ-ಸಂಗ್ರಹಿತ ಬಂಡವಾಳ"ದಂತೆ ಮಾರ್ಪಾಡಾಗುವುದು. ಇದನ್ನು ಪುಟ 22:29ಯಲ್ಲಿ ಹೀಗೆ ಚಿತ್ರಿಸಲಾಗಿದೆ: “ಕಷ್ಟಪಟ್ಟು ತನ್ನ ಕಾರ್ಯದಲ್ಲಿ ತೊಡಗಿರುವವನನ್ನು ನೀವು ನೋಡಿದ್ದೀರಾ? ಅವನು ಮುಂದೆ ರಾಜನ ಹಿಂದೆ ನಿಲ್ಲುತ್ತಾನೆ” ಮತ್ತು ಕೋಲೋಸಿಯನ್ಸ್ 3:23ನಲ್ಲಿ "ದೇವರು ಮನುಷ್ಯರಿಗಿಂತ ಮಿಗಿಲಾಗಿರುವವರೆಗೆ ನೀನು ಏನೇ ಮಾಡಿದರೂ, ನಿನ್ನ ಆತ್ಮ ತೃಪ್ತಿಯಾಗುವಂತೆ ಮಾಡು." ಪ್ರೋಟೆಸ್ಟೆಂಟ್ ಎಥಿಕ್ ನಲ್ಲಿ ವೇಬರ್ ಹೀಗೆ ಹೇಳುತ್ತಾರೆ: “ಆಧುನಿಕ ಅರ್ಥಿಕ ವ್ಯವಸ್ಥೆಯಲ್ಲಿ ಕಠಿಣ ಪರಿಶ್ರಮದೊಂದಿಗೆ ಅಧಿಕೃತವಾಗಿ ಉತ್ತಮ ಆದಾಯಗಳಿಸಿ” ಮತ್ತು "ಇತರ ಕಾನೂನುಬದ್ಧ ಆಧುನಿಕ ಉತ್ತಮವಾದುದ್ದನ್ನು ದೇವರು ನಿಮಗೆ ತೋರಿಸಿದರೆ, (ಅದು ನಿಮಗೆ ಆತ್ಮತೃಪ್ತಿಯನ್ನು ನೀಡಿದರೆ), ಒಂದು ವೇಳೆ ನೀವು ಅದನ್ನು ತಿರಸ್ಕರಿಸಿದರೆ ಮತ್ತು ಅಧಿಕೃತ ಕಡಿಮೆ ಗಳಿಕೆಯ ಮಾರ್ಗ ಆರಿಸಿ, ನೀವು ಉತ್ತಮವಾಗಿ ಕೆಲಸ ಮಾಡಿ ಮುಗಿಸಿ ಮತ್ತು ದೇವರ ನಿರ್ಣಯವನ್ನು ನೀವು ತಿರಸ್ಕರಿಸಿ ಮತ್ತು ದೇವರ ಕೊಡುಗೆಗಳನ್ನು ಅಗತ್ಯ ಬಂದಾಗ ಸ್ವೀಕರಿಸಿ,ಅವುಗಳನ್ನು ಬಳಸಿ: ನೀವು ಶ್ರೀಮಂತಿಕೆ ಪಡೆಯಲು ಕಷ್ಟಪಟ್ಟು ದುಡಿಯ ಬೇಕು. ಆದರೆ ಅದನ್ನು ಭೋಗಾಸಕ್ತಿ ಮತ್ತು ಪಾಪಕಾರ್ಯಗಳಿಗೆ ಬಳಸಬಾರದು" (ಪು. 108).
ವೇಬರ್‌ನ ಪ್ರಕಾರ ಪಾಶ್ಚಿಮಾತ್ಯ ಬಂಡವಾಳಶಾಹಿಯು "ನಿಯಮಾನುಸಾರ ಕಾರ್ಮಿಕ ಮುಕ್ತ ಆಧುನಿಕ ತರ್ಕಬದ್ಧ ಸಂಸ್ಥೆ." "ನಿಯಮಾನುಸಾರ ಮುಕ್ತ" ಕಾರ್ಮಿಕ ಪರಿಕಲ್ಪನೆ ಎಂದರೆ ಮಾರ್ಕ್ಸ್‌ರ ಎರಡು ದೃಷ್ಟಿಕೋನಗಳಂತೆ; ಕಾರ್ಮಿಕನು ಆಸ್ತಿಯನ್ನು ಹೊಂದಲು ಮುಕ್ತನಾಗಿದ್ದ. ಅದಲ್ಲದೇ ತನ್ನ ಕಾರ್ಮಿಕ ಶಕ್ತಿಯನ್ನು ಮರು ಉತ್ಪಾದನೆಗೆ ಸಜ್ಜುಗೊಳಿಸುವ ಸಾಮರ್ಥ್ಯ ಹೊಂದಿದ್ದನು. ಉದಾಹರಣೆಗೆ ತನ್ನ ಉತ್ಪಾದನೆಯಲ್ಲಿತೊಡಗಿಕೊಳ್ಳುವ ಹಕ್ಕನ್ನು ಕಳೆದುಕೊಂಡವನು ಎಂದು ಉದಾಹರಿಸಬಹುದು. ಈ ಮೇಲಿನ ಸಂದರ್ಭಗಳಲ್ಲಿ ಮಾತ್ರ ಈ ರೀತಿಯ ಪ್ರಕರಣಗಳು ಕಂಡುಬರುತ್ತಿದ್ದು. ವೇಬರ್‌ರ ಹೇಳಿದಂತೆ ಪಾಶ್ಟಿಮಾತ್ಯ ಬಂಡವಾಳಶಾಹಿ ಅಸ್ತಿತ್ವದ ಆಧುನಿಕ ಜಗತ್ತಿನಲ್ಲಿ ಇದು ಹೇರಳವಾಗಿ ಕಂಡುಬರುತ್ತದೆ.
"ಆಧುನಿಕ ಪಾಶ್ಚಿಮಾತ್ಯ ಬಂಡವಾಳಶಾಹಿ ವ್ಯವಸ್ಥೆಯು ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆಯಿಂದ ಉತ್ಪಾದನೆಯಲ್ಲಿ ಏರಿಕೆ ಕಂಡಿತು. ಇದರಿಂದ ಜನರ ಆರ್ಥಿಕ ಅಭಿವೃದ್ದಿಯೊಂದಿಗೆ ಜೀವನ ಮಟ್ಟ ಸುಧಾರಣೆಯಾಗಿದೆ. ಆದರೂ ಬಂಡೆಗಲ್ಲು ಸುಟ್ಟುಒಂದು ಟನ್ ಕಲ್ಲಿದ್ದಲಾಗಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುವಂತೆ, ಈ ವ್ಯವಸ್ಥೆಯ ಪರಿಣಾಮಗಳನ್ನು ನಿರ್ಧರಿಸಲು ಅಷ್ಟೇ ಸಮಯ ಬೇಕಾಗಬಹುದು" ಎಂದು ವೇಬರ್ ಅಭಿಪ್ರಾಯಪಟ್ಟಿದ್ದಾರೆ. ಪು. 123).[೭೭] ವೇಬರ್ ಬಂಡವಾಳಶಾಹಿ ವ್ಯವಸ್ಥೆಯ ಕುರಿತಾದ "ಸ್ಫೂರ್ತಿರಹಿತ ಪರಿಣಿತರು, ಹೃದಯ ವಿಲ್ಲದ ಮಾನವಜೀವಿಗಳು" ಟೀಕೆಯಲ್ಲಿ ಈ ವ್ಯವಸ್ಥೆಯ ಮೂಲ ಸುಧಾರಣೆಯ "ಉತ್ಸಾಹ"ವು ತನ್ನ ಜೀವಕಳೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಇನ್‌ಸ್ಟಿಟ್ಯುಷನಲ್ ಇಕನಾಮಿಕ್ಸ್
[ಬದಲಾಯಿಸಿ]ಇನ್‌ಸ್ಟಿಟ್ಯುಷನಲ್ ಇಕನಾಮಿಕ್ಸ್(ಸಾಂಸ್ಥಿಕ ಅರ್ಥಶಾಸ್ತ್ರ) ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಆರ್ಥಿಕ ಪಂಥವಾಗಿತ್ತು. ಇದನ್ನು ಬಂಡವಾಳಶಾಹಿ ವ್ಯವಸ್ಥೆಯ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಿಂದ ಬೇರ್ಪಡಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಸಂಸ್ಥೆಯು ಬಂಡವಾಳಶಾಹಿ ವ್ಯವಸ್ಥೆಯ ಕಾನೂನು ಚೌಕಟ್ಟುಗಳು (ಜಾನ್ R. ಕಾಮನ್ಸ್ ನೋಡಿ) ಮತ್ತು ವಿಕಾಸಾತ್ಮಕ, ರೂಢಿಸಿದ ಮತ್ತು ಅನುಮತಿಸಿದ ಪ್ರಕ್ರಿಯೆಗಳನ್ನು ರಚಿಸಿತು. ನಂತರ ಅವುಗಳನ್ನು ಬದಲಿಸಲಾಯಿತು (ಜಾನ್ ಡೇವಿ, ಥೋರ್ಸ್ಟೈನ್ ವೆಬ್ಲೆನ್ ಮತ್ತು ಡೇನಿಯನ್ ಬ್ರೋಮ್ಲಿ ನೋಡಿ.)
ಥೋರ್ಸ್ಟೈನ್ ವೆಬ್ಲೆನ್‌ರು ಇನ್‌ಸ್ಟಿಟ್ಯುಷನಲ್ ಇಕನಾಮಿಕ್ಸ್‌ನ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ತಮ್ಮ ಪುಸ್ತಕ ದಿ ಥಿಯರಿ ಆಫ್ ದಿ ಲಿಸರ್ ಕ್ಲಾಸ್‌ನಲ್ಲಿ (1899) ಬಂಡವಾಳಶಾಹಿಯಲ್ಲಿ ಯಶಸ್ಸು ಪ್ರದರ್ಶಿಸುವುದಕ್ಕಾಗಿ ತಮ್ಮ ಶ್ರೀಮಂತಿಕೆಯನ್ನು ಧಾರಳವಾಗಿ ಬಳಸಿಕೊಳ್ಳುವ ಶ್ರೀಮಂತರ ಪ್ರೇರಣೆಯನ್ನು ವಿಶ್ಲೇಷಿಸಿದರು. ಧಾರಾಳ ಬಳಕೆ ಪರಿಕಲ್ಪನೆಯು ಬಂಡವಾಳಶಾಹಿ ವ್ಯವಸ್ಥೆಗೆ ಸೂಕ್ತವಾದ ನವೀನ ಶೈಲಿಯ ದೃಷ್ಟಿಕೋನಕ್ಕೆ ನೇರ ವಿರೋಧ ಹೊಂದಿತ್ತು. ವ್ಯಾಪಾರ ಉದ್ಯಮದ ಸಿದ್ಧಾಂತದಲ್ಲಿ (1904) ವೆಬ್ಲೆನ್, ಜನರು ವಸ್ತುಗಳನ್ನು ಬಳಸುವಂತೆ ಮಾಡುವ ಕೈಗಾರಿಕಾ ಉತ್ಪನ್ನಗಳ ಪ್ರೇರಣೆಗಳನ್ನು ಲಾಭಕ್ಕಾಗಿ ಎಂಬುದನ್ನು ವಿವರಿಸಿದರು. ಇದನ್ನು ಕೈಗಾರಿಕಾ ಮೂಲ ಸೌಕರ್ಯಗಳನ್ನು ಬಳಸುವ ಅಥವಾ ತಪ್ಪಾಗಿ ಬಳಸುವ ವ್ಯಾಪಾರಿ ಪ್ರೇರಣೆಗಳಿಂದ ಪ್ರತ್ಯೇಕಿಸಿದರು. ವ್ಯಾಪಾರದ ಕೊನೆಯಲ್ಲಾಗುವ ನಷ್ಟಕ್ಕಾಗಿ ಕೆಲವೊಮ್ಮೆ ರೈತನು ಬಲಿಯಾಗುತ್ತಾನೆ ಎಂದು ವಾದಿಸಿದರು. ವ್ಯಾಪಾರೀ ಪದ್ಧತಿಗಳು ಮತ್ತು ��ಕಸ್ವಾಮ್ಯ ಸಮಾಜವು ಉತ್ಪಾದನೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯನ್ನು ನಿರ್ಬಂಧಿಸಿದವು. ಉದ್ಯಮಗಳು ತಮ್ಮ ಈಗಿರುವ ಬಂಡವಾಳ ಹೂಡಿಕೆಯನ್ನು ರಕ್ಷಿಸಿಕೊಳ್ಳುತ್ತವೆ ಮತ್ತು ರಾಜಕೀಯ ನಿಯಂತ್ರಣದ ವ್ಯಾಪಾರದಿಂದಾಗುವ ಅತಿಯಾದ ಸಾಲದ ಬಳಕೆ ಮತ್ತು ಸೈನ್ಯ ಮತ್ತು ಯುದ್ಧದ ವೆಚ್ಚದಲ್ಲಿ ಏರಿಕೆಯು ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತದೆ.
ಜರ್ಮನಿಯ ಐತಿಹಾಸಿಕ ಪಂಥ ಮತ್ತು ಆಸ್ಟ್ರೀಯನ್ ಪಂಥ
[ಬದಲಾಯಿಸಿ]ಬಂಡವಾಳಶಾಹಿ ಎಂಬ ಪದವನ್ನು ಮೊದಲು ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಸಂಸ್ಥೆಗಳಿಗಾಗಿ ಬಳಸಲಾಯಿತು ಎಂದು ಜರ್ಮನಿಯ ಸಾಂಪ್ರದಾಯಿಕ ಪಂಥವು ಅಭಿಪ್ರಾಯಪಟ್ಟಿತು. ಸೈದ್ಧಾಂತಿಕವಾಗಿ ಈ ದೃಷ್ಟಿಕೋನವು ವೇಬರ್ ವಿಚಾರಗಳಿಗೆ ಹೊಂದಿಕೆಯಾಗುತ್ತಿದ್ದರೂ ಸಹ, ಇವುಗಳು ಮಾರುಕಟ್ಟೆ ಮತ್ತು ವಿವಿಧ ಕ್ಷೇತ್ರಗಳಲ್ಲಿ [[ಹಣ(/0)ಹೂಡಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ.{1/}]] ಜರ್ಮನಿಯ ಸಾಂಪ್ರದಾಯಿಕ ಪಂಥದ ಅನುಯಾಯಿಗಳ ಪ್ರಕಾರ, ಇತಿಹಾಸದ ಮಧ್ಯಕಾಲದಲ್ಲಿ ಆರ್ಥಿಕ ವ್ಯವಸ್ಥೆಯು ಸಾಂಪ್ರದಾಯಿಕ ಆರ್ಥಿಕತೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಬದಲಾಯಿತು. ಇದು ಲಾಭ ಗಳಿಕೆಯಲ್ಲಿ ಹೆಚ್ಚು ಒತ್ತು ನೀಡುವ ಆಧುನಿಕ ನಾಣ್ಯ ಚಲಾವಣೆಯ ಆರ್ಥಿಕತೆಗೆ ಸಾಲ ಮತ್ತು ಹಣದಲ್ಲಿ ನಿರ್ಬಂಧಗಳನ್ನು ಹೇರಿತ್ತು.
19ನೇ ಶತಮಾನದ ಕೊನೆಯಲ್ಲಿ, ಕಾರ್ಲ್ ಮೆಂಜರ್‌ರ ಅವಧಿಯಲ್ಲಿ ಅಸ್ಟ್ರೀಯಾ ಆರ್ಥಿಕ ಪಂಥದ ಉಗಮದೊಂದಿಗೆ ಜರ್ಮನಿಯ ಐತಿಹಾಸಿಕ ಪಂಥವು ಚದುರಿ ಹೋಯಿತು. 20ನೇ ಶತಮಾನದ ಹೊತ್ತಿಗೆ ಆಸ್ಟ್ರೀಯಾ ಪಂಥದ ಅನುಯಾಯಿಗಳ ನಂತರದ ಪೀಳಿಗೆಯು ಪಾಶ್ಚಿಮಾತ್ಯ ವಾಣಿಜ್ಯ ಪಂಥಗಳ ಪ್ರಭಾವಕ್ಕೆ ಒಳಗಾಯಿತು. ಅಸ್ಟ್ರೀಯಾ ಆರ್ಥಿಕ ಪಂಥದ ಹರಿಕಾರ, ಅರ್ಥಶಾಸ್ತ್ರಜ್ಞ ಜೋಸೆಫ್ ಶುಮ್‌ಪೀಟರ್‌ರು ಬಂಡವಾಳಶಾಹಿಯ "ಸೃಜನಾತ್ಮಕ ವಿನಾಶ"ದಿಂದಾಗಿ ಮಾರುಕಟ್ಟೆಯ ನಿರಂತರ ಬದಲಾವಣೆಗೆ ಹೆಚ್ಚಿನ ಮಹತ್ವ ನೀಡಿದರು. ಎಲ್ಲಾ ಸಮಯದಲ್ಲಿಯೂ ಅಭಿವೃದ್ಧಿ ಹೊಂದುವ ಉದ್ಯಮಗಳು ಮತ್ತು ಕುಸಿಯುತ್ತಿರುವ ಉದ್ಯಮಗಳಿರುತ್ತದೆ ಎಂದು ಶುಮ್‌ಪೀಟರ್‌ರು ಪ್ರತಿಪಾದಿಸಿದ್ದರು. ಅವರ ಸಮಕಾಲೀನ ಅರ್ಥಶಾಸ್ತ್ರಜ್ಞರು ಶುಮ್‌ಪೀಟರ್‌ರ ವಿಚಾರಗಳ ಪ್ರಭಾವಕ್ಕೆ ಒಳಗಾಗಿದ್ದರು. ಆರ್ಥಿಕ ಅಭಿವೃದ್ಧಿಗಾಗಿ ಸಂಪನ್ಮೂಲಗಳು ಕುಸಿಯುತ್ತಿರುವ ಉದ್ಯಮದಿಂದ ವಿಸ್ತರಣೆಗೊಳ್ಳುತ್ತಿರುವ ಉದ್ಯಮಕ್ಕೆ ಹರಿಯಬೇಕು. ಆದರೆ ಬದಲಾವಣೆಗೆ ವಿವಿಧ ಪ್ರಕಾರದ ಸಾಂಸ್ಥಿಕ ವಿರೋಧವಿರುವುದರಿಂದ, ಇಳಿಮುಖವಾಗಿರುವ ಉದ್ಯಮದಿಂದ ಸಂಪನ್ಮೂಲಗಳು ಹೊರಬರುವುದು ಕಷ್ಟ ಎನ್ನುವುದನ್ನು ಅವರು ಗುರುತಿಸಿದರು.
ಆಸ್ಟ್ರೀಯಾದ ಅರ್ಥಶಾಸ್ತ್ರಜ್ಞರಾದ ಲುಡ್ವಿಗ್ ವೋನ್ ಮಿಸಸ್ ಮತ್ತು ಫ್ರೇಡ್ರಿಚ್ ಹಯೆಕ್‌ರು, 20ನೇ ಶತಮಾನದ ಸಮಾಜವಾದಿ ಯೋಜಿತ ಅರ್ಥವ್ಯವಸ್ಥೆಯ ಪ್ರತಿಪಾದಕರ ವಿರುದ್ದ ಮಾರುಕಟ್ಟೆ ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರತಿಪಾದಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಮಾರುಕಟ್ಟೆ ಬಂಡವಾಳಶಾಹಿ ವ್ಯವಸ್ಥೆ ಮಾತ್ರ ಜಟಿಲ ಆಧುನಿಕ ಅರ್ಥವ್ಯವಸ್ಥೆಯನ್ನು ನಿಭಾಯಿಸಬಹುದು ಎಂದು ಮಿಸೆಸ್ ಮತ್ತು ಹಯೆಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಧುನಿಕ ಅರ್ಥವ್ಯವಸ್ಥೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ವಿವಿಧ ಸರಕು ಮತ್ತು ಸೇವೆಗಳ ಉತ್ಪಾದಕರಿಗೆ ಮತ್ತು ದೊಡ್ಡ ಸಂಖ್ಯೆಯ ಗ್ರಾಹಕರಪಡೆ ನಿರ್ಮಾಣಗೊಳ್ಳುತ್ತದೆ. ಇದರೊಂದಿಗೆ ಉದ್ಯಮಿಗಳು ಮಾರುಕಟ್ಟೆ ಬಂಡವಾಳಶಾಹಿ ಹೊರತುಪಡಿಸಿ ಇತರ ಆರ್ಥಿಕ ಸಂಸ್ಥೆಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಿಸೆಸ್ ಮತ್ತು ಹಯೆಕ್ ವಾದಿಸಿದರು. ಅರ್ಥಶಾಸ್ತ್ರದ ಪೂರೈಕೆಯ ಪರ ವಿಚಾರವಾದಿಗಳು ಆಸ್ಟ್ರೀಯಾ ಪಂಥದಲ್ಲಿ ಕೆಲಸ ಮಾಡಿದರು. ಅವರು ವಿಶೇಷವಾಗಿ "ಪೂರೈಕೆಯು ತನ್ನದೇ ಆದ ರೀತಿಯಲ್ಲಿ ಬೇಡಿಕೆಯನ್ನು ಉಂಟುಮಾಡುತ್ತದೆ" ಎನ್ನುವ ಸೇ'ಸ್ ನಿಯಮಕ್ಕೆ ಒತ್ತು ನೀಡಿದರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದಕರ ನಿರ್ಧಾರಗಳಲ್ಲಿ ಸರಕಾರದ ನಿಯಂತ್ರಣದ ಕೊರತೆಯನ್ನು ಈ ಆರ್ಥಿಕ ಪಂಥವು ಬೆಂಬಲಿಸಿತು.
ಬಂಡವಾಳಶಾಹಿ ಮತ್ತು ವಾಣಿಜ್ಯೋದ್ಯಮ (ಅರ್ಥಿಕ ವಿಧಾನ) ನಡುವಿನ ವ್ಯತ್ಯಾಸ ಕಂಡುಹಿಡಿಯಲು ಮಾರ್ಕ್ಸ್ ವಿಫಲರಾಗಿದ್ದಾರೆ ಎಂದು ಆಸ್ಟ್ರೀಯಾದ ಅರ್ಥಶಾಸ್ತ್ರಜ್ಞರು ಟೀಕಿಸಿದ್ದಾರೆ.[೭೮][೭೯] ಬಂಡವಾಳಶಾಹಿ ವ್ಯವಸ್ಥೆಯೊಂದಿಗೆ ವಾಣಿಜ್ಯೋದ್ಯಮದ (ಅರ್ಥಿಕ ವಿಧಾನ) ಸಾಮ್ರಾಜ್ಯಾಶಾಹಿ, ವಸಹಾತುಶಾಹಿ, ಆರ್ಥಿಕ ರಕ್ಷಣಾವಾದಿ ಮತ್ತು ಹಸ್ತಕ್ಷೇಪ ಸಿದ್ದಾಂತವನ್ನು ಮಾರ್ಕ್ಸ್ ಸಂಯೋಜಿಸಿದ್ದಾರೆ.
ಲೈಸೆಜ್-ಫೈರ್(ಸರ್ಕಾರದ ಕಡಿಮೆ ಹಸ್ತಕ್ಷೇಪ-ಹೆಚ್ಚು ಸ್ವಾಯತ್ತ) ಬಂಡವಾಳಶಾಹಿ ವ್ಯವಸ್ಥೆಯು ಪ್ರಮುಖ ಆರ್ಥಿಕ ವ್ಯವಸ್ಥೆಯಾಗಿದ್ದಲ್ಲಿ, ಉದಾರೀಕರಣದ ಕೆಲವು ಪ್ರಕಾರಗಳಲ್ಲಿ ಆಸ್ಟ್ರೀಯನ್ ಅರ್ಥಶಾಸ್ತ್ರವು ಭಾರೀ ಪ್ರಭಾವ ಬೀರುವುದು.[೮೦] ಹೆನ್ರಿ ಹಜ್ಲಿಟ್, ಹಾನ್ಸ್-ಹೆರ್ಮಾನ್ ಹೋಪ್, ಇಸ್ರೇಲ್ ಕಿರ್ಜ್‌ನರ್, ಮುರ್ರಿ ರೊಥ್‌ಬಾರ್ಡ್, ವಾಲ್ಟರ್ ಬ್ಲಾಕ್ ಮತ್ತು ರಿಚರ್ಡ್ M. ಎಬೆಲಿಂಗ್ ಸೇರಿದಂತೆ ಅರ್ಥಶಾಸ್ತ್ರಜ್ಞರು ಮತ್ತು ರಾಜಕೀಯ ತತ್ವಜ್ಞಾನಿಗಳು ಮತ್ತು ಸಿದ್ಧಾಂತ ಪ್ರತಿಪಾದಕರು ಆಸ್ಟೀಯನ್ ಅರ್ಥಶಾಸ್ತ್ರದ ಪ್ರಭಾವಕ್ಕೆ ಒಳಗಾದರು.[೮೧][೮೨]
ಕೆಯಿನಿಸಿಯನ್ ಅರ್ಥಶಾಸ್ತ್ರ
[ಬದಲಾಯಿಸಿ]1937ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞರಾದ ಜಾನ್ ಮೋನಾರ್ಡ್ ಕೀನ್ಸ್‌ರು ತಮ್ಮ ಪುಸ್ತಕ ದಿ ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್, ಇಂಟರೆಸ್ಟ್ ಆಂಡ್ ಮನಿ ಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಬಂಡವಾಳ ಹೂಡಿಕೆಯಲ್ಲಿ ಇಳಿಮುಖಗೊಂಡಾಗ, ಅದರಿಂದ ಬೇತರಿಸಲು ಬೇಕಾಗುವ ಮೂಲಭೂತ ಸಾಮರ್ಥ್ಯದ ಸಮಸ್ಯೆ ಕಾರಣ ಎಂದು ವಾದಿಸಿದ್ದರು. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಅಧಿಕ ಪ್ರಮಾಣದ ನಿರುದ್ಯೋಗವಿದ್ದಾಗ ಆರ್ಥಿಕ ಸಮತೋಲನ ಅನಿಶ್ಚಿತವಾಗಿರಬಹುದು ಎಂದು ಕೇನ್ಸ್ ಅಭಿಪ್ರಾಯಪಟ್ಟರು. ಸೇ'ಸ್ ನಿಯಮವನ್ನು ತಿರಸ್ಕರಿಸಿದ, ಕೀನ್ಸ್ ಸಾಮಾನ್ಯ ನಿಯಮ ದಲ್ಲಿ ಪ್ರಸ್ತಾಪಿಸಿದ "ವ್ಯಾಪಕ ಬಂಡವಾಳದ ಸಾರ್ವತ್ರಿಕರಣ"ವಿಲ್ಲದೆ ಮಹಾ ಕುಸಿತ ಕೊನೆಗೊಳ್ಳುವುದಿಲ್ಲ ಎಂಬ ಊಹೆ ಹುಟ್ಟಿಕೊಂಡಿತು.ಕೆಲವರು ಹೊಸ ಸರಕು ಮತ್ತು ಸೇವೆಗಳನ್ನು ಖರೀದಿಸುವುದಕ್ಕಿಂತ ಶೀಘ್ರ ಹಣತರುವ(ನಗದೀಕರಿಸುವ ಆದ್ಯತೆ) ದ್ರವತೆ ಆದ್ಯತೆಯನ್ನು ಅನುಸರಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವಧಿ 1930ನೇ ದಶಕದಲ್ಲಿದ್ದ ಸರಕಾರದ ಕಡಿಮೆ ಹಸ್ತಕ್ಷೇಪ ಬಂಡವಾಳಶಾಹಿ ಮೂಲದ ಅರ್ಥಶಾಸ್ತ್ರವು ಒಟ್ಟು ಬೇಡಿಕೆಯನ್ನು ಪ್ರೇರೆಪಿಸಲು ಸರಕಾರದ ಯಾವುದೇ ಮಧ್ಯಪ್ರವೇಶವಿಲ್ಲದೆ, ಭಾರಿ ಪ್ರಮಾಣದ ನಿರುದ್ಯೋಗ ಮತ್ತು ಹಣದುಬ್ಬರವಿಳಿತಕ್ಕಾಗಿ ಹೋರಾಟ ನಡೆಸಿತು. ಇದು ಕೇನ್ಸಿಯನ್ ಅರ್ಥಶಾಸ್ತ್ರಕ್ಕೆ ಸವಾಲಾಗಿ ಪರಿಣಮಿಸಿತು. ಕೇನ್ಸ್ ಮತ್ತು ಅವರ ಬೆಂಬಲಿಗರು ಆರ್ಥಿಕ ಹಿಂಜರಿತವನ್ನು ತಪ್ಪಿಸಲು ಅರ್ಥವ್ಯವಸ್ಥೆಯ "ಉತ್ತೇಜನ"ವನ್ನು ಶಿಫಾರಸು ಮಾಡಿದರು: ತೆರಿಗೆಗಳ ಕಡಿತ, ಸರಕಾರಿ ಸಾಲದ ಏರಿಕೆ, ಮತ್ತು ಆರ್ಥಿಕ ಕುಸಿತದ ಅವಧಿಯಲ್ಲಿನ ಖರ್ಚು ಪ್ರಮಾಣ ಇದರ ಸಾರಾಂಶ. ಇದರಿಂದ ಸಂಬಳಗಳ ಭಾಗಶಃ ಕಡಿತ ಮತ್ತು ಜನರು ಹಣ ಕೂಡಿಹಾಕುವುದನ್ನು ತಪ್ಪಿಸಲು ಹಣದುಬ್ಬರವನ್ನು ಬಳಸಿಕೊಳ್ಳಲಾಯಿತು.ಇದು ರಾಷ್ಟ್ರಮಟ್ಟದಲ್ಲಿ ಸಂಬಳ ಪ್ರಮಾಣ ನಿಯಂತ್ರಿಸುವಲ್ಲಿ ಸಹಾಯಕವಾಯಿತು.[೮೩] ಜಾನ್ ಮೋನಾರ್ಡ್ ಕೀನ್ಸ್ ಬಂಡವಾಳಶಾಹಿ ವ್ಯವಸ್ಥೆಯ ಸಾಂಪ್ರದಾಯಿಕ ತತ್ವವನ್ನು ಪೂರ್ಣವಾಗಿ ತಿರಸ್ಕರಿಸದೇ ಮಾರ್ಕ್ಸ್‌ರ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸಿದರು. ಮಾರ್ಕ್ಸ್ ಇಷ್ಟಪಡದ ಆಕ್ರಮಣಕಾರಿ ವಿಸ್ತರಣೆಗಳು ಮತ್ತು ಕೈಗಾರಿಕಾ ಹಿಂಜರಿತಗಳಲ್ಲಿ ಆರ್ಥಿಕ ಸ್ಥಿರತೆ ವ್ಯಾಪಕಗೊಳ್ಳಬಹುದು ಎನ್ನುವ ಪರಿಣಾಮಕಾರಿ ನಿಯಮಗಳ ಸಾಬೀತಿಗೆ ಅವರು ಕೆಲಸಮಾಡಿದರು. ಈ ಬದಲಾವಣೆಗಳು ವ್ಯಾಪಾರ ಚಕ್ರದಲ್ಲಿ ಸ್ಥಿರತೆಯನ್ನು ತರಲು ಮತ್ತು ಕಾರ್ಮಿಕರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ಪ್ರಯತ್ನಿಸಿದವು. ಬಂಡವಾಳಶಾಹಿಯ ಮೊದಲ ಉದ್ದೇಶ ಮಹಾ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುವುದಾಗಿದೆ ಎನ್ನುವುದು ಕೇನ್ಸಿಯನ್ ನೀತಿಯಾಗಿತ್ತು ಎಂದು ಕೇನ್ಸಿಯನ್‌ತತ್ವ ಅಧ್ಯನಕಾರ ಅರ್ಥಶಾಸ್ತ್ರಜ್��ರು ಅಭಿಪ್ರಾಯಪಟ್ಟರು.[೮೪] ನವ ವಸಹಾತು ಮತ್ತು ಪೂರೈಕೆ ಪರ ಅರ್ಥಶಾಸ್ತ್ರ ಮತ್ತು ಆಸ್ಟ್ರೀಯಾ ಪಂಥಗಳಿಗೆ ಕೇನ್ಸ್‌ರ ಅಧ್ಯಯನದ ಸಾರಾಂಶವು ಸವಾಲಾಗಿ ಪರಿಣಮಿಸಿದೆ.
ಕೇನ್ಸ್‌ರ ಸಹೊದ್ಯೋಗಿ ಆಗಿರುವ ಪಿಯೆರೊ ಸ್ರಾಫಾ ಮತ್ತು ನಿರಂತರವಾಗಿ ಸ್ರಾಫಾ ಅನುಸರಿಸುವ ನಿಯೊ-ರಿಕಾರ್ಡಿಯನ್ ಪಂಥವು ಕೇನ್ಸಿಯನ್ ವಿಚಾರಕ್ಕೆ ಇನ್ನೊಂದು ಸವಾಲಾಗಿ ಪರಿಣಮಿಸಿತು. ಸ್ರಾಫಾರ ತಾಂತ್ರಿಕ ವಿಶ್ಲೇಷಣೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ನಿರ್ಮಾಪಕರು ಮತ್ತು ಗ್ರಾಹಕರ ಸಾಮಾಜಿಕ ಸಂಬಂಧವನ್ನು ಸಂಪೂರ್ಣವಾಗಿ ಉಲ್ಲೇಖಿಸಲಾಗಿದೆ. ಆದರೆ ಉತ್ಪಾದನೆಗಳ ಬೇಡಿಕೆಗೆ ಪ್ರಾಥಮಿಕ ಒತ್ತನ್ನು ನೀಡಲಾಗಿದೆ. ಸ್ರಾಫಾರ ಪ್ರಕಾರ ಬಂಡವಾಳವು ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಅಸ್ಥಿರತೆಗೆ ಕಾರಣವಾಗುವ ಅತಿ ಹೆಚ್ಚಿನ ಲಾಭ ದರವನ್ನು ಪ್ರತಿನಿಧಿಸುತ್ತದೆ.
ನವ ವಸಹಾತು ಅರ್ಥಶಾಸ್ತ್ರ ಮತ್ತು ಚಿಕಾಗೊ ಪಂಥ
[ಬದಲಾಯಿಸಿ]ಇಂದು, ಬಂಡವಾಳಶಾಹಿ ಕುರಿತು ಸಂಶೋಧನೆ ನಡೆಸುವ ಇಂಗ್ಲೀಷ್ ಸಂಪರ್ಕ ಭಾಷೆಯಾಗಿರುವ ದೇಶಗಳಲ್ಲಿರುವ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ನವ ವಸಹಾತು ಆರ್ಥಿಕ ಚಿಂತನೆಯ ಪ್ರೊತ್ಸಾಹಕ್ಕೆ ತೊಡಗಿವೆ. ವಿಶಾಲವಾಗಿ ವ್ಯಾಪಿಸಿದ ಮಾರುಕಟ್ಟೆ ಹೊಂದಾಣಿಕೆ ಮತ್ತು ಆಸ್ತಿ ಹಕ್ಕುಗಳ ಕಾಪಾಡಲು ಸರಕಾರಿ ಮಾರುಕಟ್ಟೆ ನಿಯಮದ ಪರಸ್ಪರ ವಿರೋಧದ ಪ್ರಕಾರಗಳು; ಕಾರ್ಮಿಕ ಮಾರುಕಟ್ಟೆಗಳ ನಿಬಂಧನೆಗಳನ್ನು ರಚಿಸುವುದು; ಸಂಸ್ಥೆಯ ಮಾಲೀಕರಿಂದ ಕಾರ್ಯನಿರ್ವಹಿಸವ ಉದ್ಯಮ ಆಡಳಿತ; ಮತ್ತು ಮುಖ್ಯವಾಗಿ ಸರಕಾರದ ಬಂಡವಾಳಕ್ಕಿಂತ ಹೆಚ್ಚು ಪ್ರಮಾಣದ ಬಂಡವಾಳ ಮಾರುಕಟ್ಟೆಯನ್ನು ಆಧರಿಸಿದ ಹಣಕಾಸು ವ್ಯವಸ್ಥೆಯನ್ನು ನವ ವಸಹಾತು ಆರ್ಥಿಕ ಚಿಂತನೆ ಪುಷ್ಠೀಕರಿಸಿದೆ.
ಆಡಮ್ ಸ್ಮಿತ್ ಮತ್ತು ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ನಂತರ ಮಿಲ್ಟನ್ ಫ್ರೆಡ್‌ಮ್ಯಾನ್ ಹಲವು ಮೂಲ ತತ್ವಗಳನ್ನು ರಚಿಸಿ, ಅವುಗಳಿಗೆ ಹೊಸ ರೂಪ ನೀಡಿದರು. 1970ರ ಸಪ್ಟೆಂಬರ್‌ನ ದಿ ನ್ಯೂಯಾರ್ಕ್ ಟೈಮ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅವರ ಲೇಖನದಲ್ಲಿ ಹೀಗೆ ಬರೆದಿದ್ದಾರೆ: ವ್ಯಾಪಾರದ ಸಾಮಾಜಿಕ ಜವಾಬ್ದಾರಿಯೆಂದರೆ “ವಂಚನೆ ಅಥವಾ ಮೋಸಯಿಲ್ಲದೆ ಮುಕ್ತ ಸ್ಪರ್ಧೆಯ ಮೂಲಕ ಲಾಭ ಹೆಚ್ಚಳಕ್ಕಾಗಿ ವಿನ್ಯಾಸಗೊಳಿಸಿದ ಚಟುವಟಿಕೆಗಳಲ್ಲಿ ಸಂಪನ್ಮೂಲಗಳ ಬಳಕೆ ಮತ್ತು ತೊಡಗಿಸಿಕೊಳ್ಳುವುದಾಗಿದೆ.” ಸ್ಮಿತ್‌ರ ವಾದಕ್ಕೆ ಸಮಾನವಾಗಿರುವ ಸ್ವಯಂ ಹಿತಾಸಕ್ತಿಯು ಸಮಾಜಕ್ಕೆ ಲಾಭ ತರುವಂತಿರುಬೇಕು ಎಂದು ಅಭಿಪ್ರಾಯಪಟ್ಟರು.[೮೫] ಈ ಕೆಲಸವು ನಂತರ ಬಂದ ರೋನಾಲ್ಡ್ ರೇಗನ್ ಮತ್ತು ಮಾರ್ಗರೇಟ್ ಥಾಚರ್‌ರ ಸರಕಾರಿ ಉದ್ಯಮಗಳ ಖಾಸಗೀಕರಣ (ಅಥವಾ ಖಾಸಗೀಕರಣ) ಮತ್ತು ಪೂರೈಕೆ ಪರ ಅರ್ಥಶಾಸ್ತ್ರಕ್ಕೆ ನಾಂದಿಯಾಯಿತು.
ಮುಕ್ತ ಮಾರುಕಟ್ಟೆ ವಾದ ಮತ್ತು ವಿತ್ತ ನಿಯಂತ್ರಣವಾದಿ ಯೋಜನೆಗಳಿಂದಾಗಿ ಚಿಕಾಗೊ ಅರ್ಥಶಾಸ್ತ್ರ ಪಂಥವು ಪರಿಚಿತವಾಗಿತ್ತು. ಫ್ರೆಡ್‌ಮ್ಯಾನ್ ಮತ್ತು ಇತರ ವಿತ್ತ ನಿಯಂತ್ರಣವಾದಿಗಳ ಪ್ರಕಾರ, ಮಾರುಕಟ್ಟೆ ಅರ್ಥವ್ಯವಸ್ಥೆಗಳನ್ನು ಸ್ವತಂತ್ರವಾಗಿ ಬಿಟ್ಟಲ್ಲಿ ತಾವೇ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತವೆ. ಸರಕಾರದ ಮಧ್ಯಪ್ರವೇಶದಿಂದ ಮಾತ್ರ ಆರ್ಥಿಕ ಕುಸಿತಗಳು ಉಂಟಾಗುತ್ತದೆ.[೮೬] ಉದಾಹರಣೆಗೆ ಫೆಡರಲ್ ರಿಸರ್ವ್‌ನಿಂದ ಹಣದ ಪೂರೈಕೆ ನಿಯಂತ್ರಿಸಿರುವುದರಿಂದ ಆರ್ಥಿಕತೆಯ ಮಹಾ ಕುಸಿತ ಉಂಟಾಯಿತೇ ಹೊರತು ಬಂಡವಾಳದ ಕೊರತೆಯಿಂದಲ್ಲ ಎಂದು ಜಾನ್ ಮೋನಾರ್ಡ್ ಕೀನ್ಸ್ ಈ ಹಿಂದೆ ವಾದಿಸಿದಂತೆಯೇ ಫ್ರೆಡ್‌ಮ್ಯಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಡರಲ್ ರಿಸರ್ವ್‌ನ ಅಧ್ಯಕ್ಷರಾಗಿದ್ದ ಬೆನ್ ಬೆರ್ನಾಂಕ್‌ರು ಮಹಾ ಆರ್ಥಿಕ ಕುಸಿತದ ಕಾರಣ ವಿವರಿಸುವ ಫ್ರೆಡ್‌ಮ್ಯಾನ್‌ರ ವಿಶ್ಲೇಷಣೆಯ ಅಧ್ಯಯನದಲ್ಲಿ ತೊಡಗಿರುವ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ.[೮೭]
ನವ ವಸಹಾತು ಅರ್ಥಶಾಸ್ತ್ರಜ್ಞರು ಮತ್ತು ಇಂದಿನ ಹಲವು ಅರ್ಥಶಾಸ್ತ್ರಜ್ಞರು ಪ್ರಕಾರ ಮೌಲ್ಯವು ವಸ್ತುನಿಷ್ಠವಾಗಿದ್ದು, ಅದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಸಮಯದಿಂದ ಸಮಯಕ್ಕೆ ಬದಲಾಗುತ್ತದೆ.[೮೮] ಹಾಗಾಗಿ ಮೌಲ್ಯಾಧಾರಿತ ಕಾರ್ಮಿಕ ನಿಯಮವನ್ನು ಒಪ್ಪಲಿಲ್ಲ. ಮಾರ್ಜಿನಲಿಸಮ್ ಎಂದರೆ ಕನಿಷ್ಠ ತುಷ್ಟಿಗುಣ ಮತ್ತು ಕನಿಷ್ಠ ವೆಚ್ಚದಿಂದ ಆರ್ಥಿಕ ಮೌಲ್ಯದ ಫಲಿತಾಂಶ ತಿಳಿಯುವುದಾಗಿದೆ (ಕನಿಷ್ಠತೆಯ ಸಿದ್ಧಾಂತಗಳು). ಪ್ರಸ್ತುತ ಬಳಕೆಯ ವಸ್ತುಗಳಲ್ಲದೆ, ನಷ್ಟದ ಜವಬ್ದಾರಿ ತೆಗೆದುಕೊಂಡು, ವಸ್ತುಗಳನ್ನು ಉತ್ಪಾದಿಸುವುದರಿಂದ ಲಾಭ ಗಳಿಸುವವರನ್ನು ಬಂಡವಾಳಗಾರರೆಂದು ಅರ್ಥಶಾಸ್ತ್ರಜ್ಞರು ಕರೆಯುತ್ತಾರೆ.
ರಾಜಕೀಯ ಸಮರ್ಥನೆ ಬೆಂಬಲ
[ಬದಲಾಯಿಸಿ]ಬೆಂಬಲ
[ಬದಲಾಯಿಸಿ]ಆರ್ಥಿಕ ಪ್ರಗತಿ
[ಬದಲಾಯಿಸಿ]ಒಟ್ಟು ಪ್ರಾದೇಶಿಕ ಉತ್ಪನ್ನ (GDP), ಬಳಕೆಯ ಸಾಮರ್ಥ್ಯ ಅಥವಾ ಜೀವನ ಮಟ್ಟದ ಮಾನದಂಡದಿಂದ ಆರ್ಥಿಕ ಅಭಿವೃದ್ಧಿ ಹೆಚ್ಚಿಸಲು ಬಂಡವಾಳಗಾರನ ಸಾಮರ್ಥ್ಯಕ್ಕೆ ಬಂಡವಾಳಶಾಹಿ ದೇಶಗಳಲ್ಲಿನ ಹಲವು ತಜ್ಞರು ಮತ್ತು ಪರಿಣಿತರು ಹೆಚ್ಚಿನ ಒತ್ತು ನೀಡಿದರು. ಆ ಅವಧಿಯಲ್ಲಿ ಇದರ ಬಗೆಗಿನ ವಾದವು ಪ್ರಮುಖವಾಗಿತ್ತು. ಉದಾಹರಣೆಗೆ ಉತ್ಪನ್ನ,ಆಡಮ್ ಸ್ಮಿತ್‌ರು ಬೆಲೆ ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಮಾರುಕಟ್ಟೆ ನಿಯಂತ್ರಣಗಳ ಮುಕ್ತಗೊಳಿಸುವ ತಮ್ಮ ಸಿದ್ಧಾಂತ ಸಮರ್ಥಿಸಿಕೊಂಡರು. ಆಧುನಿಕ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಉಗಮದೊಂದಿಗೆ ಜಾಗತಿಕ GDPಯಲ್ಲಿ ಏರಿಕೆ ಕಂಡುಬಂದಿತು ಎನ್ನುವುದನ್ನು ಹಲವು ತಜ್ಞರು ಗುರುತಿಸಿದರು.[೯೦][೯೧]
ಮಾನದಂಡ ಸರಿಯಿಲ್ಲದಾಗ, GDPಯ ಏರಿಕೆಯು (ತಲಾ ಆದಾಯ) ಆಹಾರ, ವಸತಿ, ಬಟ್ಟೆ, ಮತ್ತು ಆರೋಗ್ಯ ಸೇವೆಗಳ ಲಭ್ಯತೆಯ ಮೇಲೆ ಉತ್ತಮ ಜೀವನ ಮಟ್ಟವನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[೯೨] ವಾರದ ಕೆಲಸದ ಸಮಯದಲ್ಲಿ ಇಳಿಕೆ ಮತ್ತು ಮಕ್ಕಳು ಕೆಲಸದಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಇಳಿಕೆ ಮತ್ತು ಕಾರ್ಯಸ್ಥಳದಲ್ಲಿ ಹಿರಿಯರ ಪಾಲ್ಗೊಳ್ಳುವಿಕೆಗೆ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ.[೯೩][೯೪][೯೫][೯೬]
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯು ಇತರ ಅರ್ಥವ್ಯವಸ್ಥೆಯ ಪ್ರಕಾರಗಳಿಗಿಂತ ಹೊಸ ಉದ್ಯೋಗ ಅಥವಾ ವ್ಯಾಪಾರಗಳ ಮೂಲಕ ಆದಾಯ ಹೆಚ್ಚಿಸಕೊಳ್ಳಲು ವಿಫುಲ ಅವಕಾಶಗಳನ್ನು ನೀಡುತ್ತದೆ ಎಂದು ಇದರ ಪ್ರತಿಪಾದಕರು ಅಭಿಪ್ರಾಯಪಟ್ಟಿದ್ದಾರೆ. ಅವರ ಚಿಂತನೆಗಳ ಪ್ರಕಾರ, ಇದರ ಸಾಧ್ಯತೆಯು ಸಾಂಪ್ರದಾಯಿಕ ಊಳಿಗಮಾನ್ಯ ಅಥವಾ ಬುಡಕಟ್ಟು ಸಮಾಜ ಅಥವಾ ಸಮಾಜವಾದಿ ಪ್ರದೇಶಗಳಲ್ಲಿ ಹೆಚ್ಚಿರುತ್ತದೆ.
ರಾಜಕೀಯ ಸ್ವಾತಂತ್ರ
[ಬದಲಾಯಿಸಿ]ಸ್ಪರ್ಧಾತ್ಮಕ ಬಂಡವಾಳಶಾಹಿಯ ಆರ್ಥಿಕ ಸ್ವಾತಂತ್ರ್ಯವು ರಾಜಕೀಯ ಸ್ವಾತಂತ್ರದ ಅವಶ್ಯಕವಾಗಿದೆ ಎಂದು ಮಿಲ್ಟನ್ ಫ್ರೆಡ್‌ಮ್ಯಾನ್ ಅಭಿಪ್ರಾಯಪಟ್ಟರು. ಹಾಗೆಯೇ ಆರ್ಥಿಕ ಚಟುವಟಿಕೆಗಳ ಕೇಂದ್ರೀಯ ನಿಯಂತ್ರಣವು ರಾಜಕೀಯ ನಿಷೇಧತೆಯಿಂದ ತಡೆಗಟ್ಟುವಿಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿಸಿದರು. ಅವರ ಪ್ರಕಾರ ಮಾರುಕಟ್ಟೆ ಅರ್ಥವ್ಯವಸ್ಥೆಯ ವ್ಯವಹಾರಗಳು ಸ್ವಯಂ ಪ್ರೇರಿತವಾಗಿ ವಿವಿಧತೆ ಹೊಂದಿರುತ್ತವೆ. ರಾಜಕೀಯ ನಾಯಕರ ಮೇಲೆ ದಬ್ಬಾಳಿಕೆ ಮಾಡಲು ಮತ್ತು ಬಲವಂತವಾಗಿ ಅಧಿಕಾರ ದುರುಪಯೋಗಕ್ಕೆ ಸ್ವಯಂ ಪ್ರೇರಿತ ಚಟುವಟಿಕೆಗಳು ಅನುವುಮಾಡಿಕೊಡುತ್ತವೆ. ಫ್ರೇಡ್ರಿಚ್ ಹಯೆಕ್ ಮತ್ತು ಜಾನ್ ಮೋನಾರ್ಡ್ ಕೀನ್ಸ್‌ರು ಫ್ರೆಡ್‌ಮ್ಯಾನ್‌ರ ಚಿಂತನೆಯನ್ನು ಹಂಚಿಕೊಂಡರು. ಇವರಿಬ್ಬರೂ ಬಂಡವಾಳಶಾಹಿ ಅಸ್ತಿತ್ವ ಕಂಡುಕೊಳ್ಳಲು ಮತ್ತು ಏಳಿಗೆ ಹೊಂದಲು ಮುಕ್ತತೆ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.[೯೭][೯೮]
ಸ್ವಯಂ-ಸಂಘಟನೆ
[ಬದಲಾಯಿಸಿ]ಬಂಡವಾಳಶಾಹಿಯು ಯಾವುದೇ ಬಾಹ್ಯ ಮಾರ್ಗದರ್ಶನ ಅಥವಾ ಪೂರ್ವನಿಯೋಜನೆಯಿಲ್ಲದೆ, ಜಟಿಲ ವ್ಯವಸ್ಥೆಗೆ ಕಾರಣವಾಗಬಲ್ಲನು ಎಂದು ಆಸ್ಟ್ರೀಯಾ ಪಂಥದ ಅರ್ಥಶಾಸ್ತ್ರಜ್ಞರು ವಾದಿಸಿದರು. ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸಲು ಸ್ವಯಂ-ಸಂಘಟನೆ ವಿಷಯವನ್ನು ಬಳಸಲಾಯಿತು. ಇದರ ಬಗ್ಗೆ ವಿವರಿಸಲು ಫ್ರೇಡ್ರಿಚ್ ಹಯೆಕ್ "ಕ್ಯಾಟಲಕ್ಸಿ" ಎಂಬ ಪದ ಬಳಕೆ ಆಚರಣೆಗೆ ತಂದರು. ಇದರಂತೆ ಸ್ವಯಂ-ಸಂಘಟನೆಯ ಪ್ರಕ್ರಿಯೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯವು ಲಾಭ ಮಾಡಮಾಡುವುದೇ ಆಗಿದೆ. ಮಾರಾಟಗಾರ ಮತ್ತು ಖರೀದಿದಾರರ ನಡುವಿನ ವ್ಯವಹಾರದಲ್ಲಿ ಬೆಲೆಯಾಧಾರಿತ ವ್ಯವಸ್ಥೆ ಆರಂಭವಾದಾಗಿನಿಂದ, ಜನರ ತ್ವರಿತ ಮತ್ತು ಪೂರೈಕೆಯಾಗದ ಬಯಕೆಗಳನ್ನು ಅಂದಾಜಿಸುವಲ್ಲಿ ದರಗಳು ಪ್ರಬಲತೆ ಮೆರೆದವು. ಜನರ ಬಯಕೆಗಳನ್ನು ಈಡೇರಿಸಲು ಉದ್ಯಮಿಯು ತನ್ನ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸುತ್ತಾನೆ.ಇದರಿಂದ ದೊರೆಯುವ ಲಾಭವು ಅವನಿಗೆ ಪ್ರೋತ್ಸಾಹ ನೀಡುವುದು. ತಮ್ಮದೇ ಆದ ಆಸಕ್ತಿಗಳನ್ನು ಹೊಂದಿದ ಲಕ್ಷಾಂತರ ಜನರ ಚಟುವಟಿಕೆಗಳು ಪರಸ್ಪರ ಸಂಬಂಧ ಹೊಂದಿವೆ.[೯೯]
ಈ ಪರಸ್ಪರ ಸಂಬಂಧದ ವಿಕೇಂದ್ರಿಕೃತ ವ್ಯವಸ್ಥೆಯು ಬಂಡವಾಳಶಾಹಿ ವ್ಯವಸ್ಥೆಯ ಅಳವಡಿಸಿಕೊಂಡವರಿಗೆ ಉತ್ತಮ ಸಾಮರ್ಥ್ಯ ನೀಡುವುದರಿಂದ,ಅವರು ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದರು. ಈ ವ್ಯವಸ್ಥೆಯು ಅನ್ವಯಿಸಬೇಕಾದ ಹಲವು ಪರಿಹಾರಗಳನ್ನು ಸೂಚಿಸುತ್ತದೆ. ಮುಂಬರುವ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಜಾಗತಿಕ ಸ್ಪರ್ಧೆಯಿರುತ್ತದೆ ಎಂದೂ ಅರ್ಥಶಾಸ್ತ್ರಜ್ಞರು ವಾದಿಸಿದರು. ಇದಕ್ಕೆ ಪ್ರತಿಯಾಗಿ, ಕೆಲವೊಮ್ಮೆ ಕೇಂದ್ರಿಕೃತ ಯೋಜನೆಯು ತಪ್ಪು ಮುಂದಾಲೋಚನೆಯಿಂದ ಸೂಕ್ತವಲ್ಲದ ಪರಿಹಾರವನ್ನು ಆಯ್ಕೆಮಾಡುತ್ತದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ವಿವರಿಸಿದರು. ಆದಾಗ್ಯೂ, ಈಗಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಸರಕಾರವು ಕಾರ್ಯದಕ್ಷತೆ ವೃದ್ಧಿಸಲು ಪ್ರಯತ್ನ, ಮರುಕಳಿಸುವ ಅಸ್ಥಿರತೆ ಕಡಿಮಾಡುವುದು ಮತ್ತು ಹೆಚ್ಚಿನ ಸಾಮಾಜಿಕ ಉದ್ದೇಶಗಳ ಕೇಂದ್ರಿಕೃತ ಆರ್ಥಿಕ ಯೋಜನೆಯನ್ನು ಸಂಘಟಿಸುತ್ತದೆ. (ಬಡ್ಡಿ ದರವನ್ನು ಆಧರಿಸಿ, ದೇಶದ ಕೇಂದ್ರ ಬ್ಯಾಂಕ್ ಅನುಮತಿಸುವ ಸಾಧನಗಳನ್ನು ಬಳಸಿ ). ಆರ್ಥವ್ಯವಸ್ಥೆಯ ದೀರ್ಘಾವಧಿ ಚಟುವಟಿಕೆಯನ್ನು ನಾವು ಮುಂದಾಲೋಚಿಸಲಾಗುವದಿಲ್ಲ. ಈ ವ್ಯವಸ್ಥೆಯು ಕಾರ್ಯದಕ್ಷತೆ ನಿರ್ಮಾಣಕ್ಕೆ ಅಷ್ಟೊಂದು ನಿಯಂತ್ರಣ ಹೊಂದಿಲ್ಲ ಎಂದು ಆಸ್ಟ್ರೀಯಾ ಪಂಥದ ಪ್ರತಿಪಾದಕರು ಅಭಿಪ್ರಾಯಪಟ್ಟರು. ಉದಾಹರಣೆಗೆ ಫೆಡರಲ್ ರಿಸರ್ವ್‌ನ ತಪ್ಪಾದ ನೀತಿಗಳು ಮಹಾ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಮಿಲ್ಟನ್ ಫ್ರೆಡ್‌ಮ್ಯಾನ್ ವಾದಿಸಿದರು.[೮೭]
ನೈತಿಕ ಅಗತ್ಯತೆ
[ಬದಲಾಯಿಸಿ]ಆನ್ ರಾಂಡ್‌ರು ಸರಕಾರದ ಕಡಿಮೆ ಹಸ್ತಕ್ಷೇಪದ ಬಂಡವಾಳಶಾಹಿ ವ್ಯವಸ್ಥೆಯ ಬೆಂಬಲಿಗರಾಗಿದ್ದರು; ಅವರ ಅಟ್ಲಾಸ್ ಶ್ರುಗ್ಗಡ್ ಕಾದಂಬರಿಯು ವ್ಯಾಪಾರ ವಿಷಯದ ಪ್ರಭಾವಶಾಲಿ ಪ್ರಕಟಣೆಯಾಗಿದೆ. ಉತ್ತಮ ಮಾರಾಟವಾದ ಪುಸ್ತಕಗಳಲ್ಲಿ ಅದೂ ಒಂದಾಗಿದೆ.[೧೦೦] ನೈತಿಕತೆಯ ಹೊಸ ನಿಯಮದೊಂದಿಗೆ ಬಂಡವಾಳಶಾಹಿ ವ್ಯವಸ್ಥೆಯನ್ನು ಅನುಮೋದಿಸಿದ ಮೊದಲ ವ್ಯಕ್ತಿ ಇವರಾಗಿದ್ದಾರೆ (ವೈಚಾರಿಕ ಸ್ವಾರ್ಥತೆ).[೧೦೧] ಸಂಪೂರ್ಣ "ಸಾಧ್ಯತೆ" (ಅದು ಉತ್ತಮ ಆಸ್ತಿ ಶೇಖರಣೆ ವ್ಯವಸ್ಥೆಯಾಗಿತ್ತು) ಅಥವಾ ಅತಿಮಾನುಷ (ದೇವರು ಅಥವಾ ಧರ್ಮವು ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವುದು) ಆಧಾರದ ಮೇಲೆ ಬಂಡವಾಳಶಾಹಿ ವ್ಯವಸ್ಥೆಯನ್ನು ಅವರು ಸಮರ್ಥಿಸಿಕೊಳ್ಳಲಿಲ್ಲ, ಅಥವಾ ಇದರಿಂದಾಗಿ ಹೆಚ್ಚಿನ ಜನರು ಲಾಭ ಪಡೆಯಬಹುದಾಗಿದೆ, ನೈತಿಕವಾಗಿ ಮಾನ್ಯಗೊಂಡ ಸಾಮಾಜಿಕ-ರಾಜಕೀಯ ವ್ಯವಸ್ಥೆಯನ್ನು ಮಾತ್ರ ಈ ನಿಯಮವು ಅವಲಂಬಿಸಿದೆ. ಏಕೆಂದರೆ ಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಮತಿಸುತ್ತದೆ.[೧೦೨][೧೦೩] ಈ ಚಿಂತಕರು US ಲಿಬರ್ಟೆರಿಯನ್ ಪಕ್ಷದಲ್ಲಿ ಪ್ರಮುಖ ಪ್ರಭಾವ ಹೊಂದಿದ್ದರು. ಲಿಬರ್ಟೆರಿಯನ್ ಪಕ್ಷವು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸರಕಾರದ ಭಾಗಿತ್ವವನ್ನು ಸಂಪೂರ್ಣ ಅಥವಾ ಭಾಗಶಃ ಹಿಂದೆಗೆದುಕೊಳ್ಳಲು ಶಿಫಾರಸು ಮಾಡಿತು. ರಿಪಬ್ಲಿಕನ್ ಲಿಬರ್ಟಿ ಕಾಸಸ್‌ವು ರಿಪಬ್ಲಿಕನ್ ಪಕ್ಷದ ಲಿಬರ್ಟೆರಿಯನ್ ಅಂಗವಾಗಿತ್ತು.
ಟೀಕೆಗಳು
[ಬದಲಾಯಿಸಿ]ಬಂಡವಾಳಶಾಹಿ ವ್ಯವಸ್ಥೆಯು ಈ ಕೆಳಗಿನವರಿಂದ ಗಮನಾರ್ಹ ಟೀಕೆಗೊಳಗಾಯಿತು: ಸಮಾಜವಾದಿಗಳು, ಕ್ರಾಂತಿಕಾರಿಗಳು, ಕಮ್ಯುನಿಸ್ಟ್, ತಂತ್ರಜ್ಞಪ್ರಭುತ್ವವಾದಿಗಳು, ಕೆಲವು ಸಾಂಪ್ರದಾಯಿಕವಾದಿ, ಲುಡಿಟ್‌ಸ್, ನ್ಯಾರೋದ್ನಿಕ್‌ಸ್, ಕೆಲವು ರಾಷ್ಟ್ರೀಯವಾದಿ ಪಂಥ ಮತ್ತು ಶಂಕರ್ಸ್. ಧರ್ಮಗಳ ವಿರೋಧ ಮತ್ತು ಸರಕಾರದ ಮಧ್ಯಪ್ರವೇಶದಿಂದ ಹೊರಬಂದ ನಂತರ ಕಮ್ಯೂನಿಸ್ಟ್‌ಗೆ ಕ್ರಮೇಣವಾಗಿ ರೂಪಾಂತರವಾಗುವ ಮೊದಲು ಬಂಡವಾಳಶಾಹಿ ವ್ಯವಸ್ಥೆಯ ಕ್ರಾಂತಿಕಾರಿ ಪತನವು ಸಮಾಜವಾದದ ಅಸ್ತಿತ್ವಕ್ಕೆ ಕಾರಣವಾಯಿತು ಎಂದು ಮಾರ್ಕ್ಸ್‌ವಾದಿಗಳು ವಾದಿಸಿದರು.
ಕೆಲವು ಮಧ್ಯಮ ಪ್ರಜಾಪ್ರಭುತ್ವ ತತ್ವದ ಸಮಾಜವಾದಿಗಳು ಸೇರಿದಂತೆ ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು ಮತ್ತು ಕಾರ್ಮಿಕ ಪಕ್ಷಗಳು ಮಾರ್ಕ್ಸ್‌ವಾದದ ಪ್ರಭಾವಕ್ಕೆ ಒಳಗಾದರು. ಇವರು ಕ್ರಾಂತಿಕಾರಿ ಮಾರ್ಗಗಳ ಬದಲು ಅಸ್ತಿತ್ವದಲ್ಲಿರುವ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಬದಲಾವಣೆಗಳನ್ನು ಬಯಸಿದ್ದರು. ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಗೊಳಿಸುವ ಬದಲು,ಮಿಶ್ರ ಆರ್ಥವ್ಯವಸ್ಥೆಯೊಂದಿಗೆ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಎಂದರು. ಉದ್ಯಮ ಬಂಡವಾಳಶಾಹಿಗೆ ವಿರುದ್ಧವಾಗಿರುವ ಜಾಗತಿಕರಣ-ವಿರೋಧಿ ಆಂದೋಲನದಿಂದ ಬಂಡವಾಳಶಾಹಿ ವ್ಯವಸ್ಥೆಯ ಹಲವು ಅಂಶಗಳು ಟೀಕೆಗೊಳಗಾದವು.
ಧಾರ್ಮಿಕ ಟೀಕೆ ಮತ್ತು ವಿರೋಧ
[ಬದಲಾಯಿಸಿ]ಬಂಡವಾಳಶಾಹಿ ವ್ಯವಸ್ಥೆಯ ಕೆಲವು ಅಂಶಗಳನ್ನು ಹೆಚ್ಚಿನ ಧರ್ಮಗಳು ವಿರೋಧಿಸಿದವು; ಸಾಂಪ್ರದಾಯಿಕ ಯಹೂದಿ, ಕ್ರಿಸ್ಚಿನ್, ಮತ್ತು ಇಸ್ಲಾಂ ಧರ್ಮಗಳು ಬಡ್ಡಿಗಾಗಿ ಹಣ ಸಾಲ ನೀಡುವುದನ್ನು ನಿಷೇಧಿಸಿದ್ದವು. ಆದರೂ ಇಸ್ಲಾಂ ಬ್ಯಾಂಕಿಂಗ್ ವ್ಯವಸ್ಥೆಯ ವಿಧಾನಗಳು ಅಭಿವೃದ್ಧಿ ಹೊಂದಿದ್ದವು. ಕ್ರೈಸ್ತ ಧರ್ಮವು ಬಂಡವಾಳಶಾಹಿ ವ್ಯವಸ್ಥೆಯನ್ನು, ವಿಶೇಷವಾಗಿ ಅದರ ಭೌತಿಕ,ಭೋಗಾದಿ ಅಂಶಗಳನ್ನು ಹೊಗಳಿದೆ ಮತ್ತು ಟೀಕಿಸಿದೆ ಕೂಡ.[೧೦೪] ಮೊದಲ ಸಮಾಜವಾದಿಗಳು ಲಾಭಗಳಿಕೆ, ದುರಾಸೆ, ಸ್ವಾರ್ಥ, ಮತ್ತು ಹಣ ಸಂಗ್ರಹಣೆಯ "ಬೋರ್ಗೆಯಿಸ್"(ಬಂಡವಾಳಶಾಹಿ ಆರ್ಥಿಕ ಕಪಿಮುಷ್ಟಿಯ) ಮೌಲ್ಯಗಳ ವಿರುದ್ಧ ಕ್ರೈಸ್ತ ಧರ್ಮದ ಮೌಲ್ಯಗಳ ಸಹಾಯದೊಂದಿಗೆ ತಮ್ಮ ತತ್ವಗಳನ್ನು ರಚಿಸಿದರು.
ಕೆಲವು ಕ್ರೈಸ್ತ ಧರ್ಮೀಯರು ಸಂಪೂರ್ಣವಾಗಿ ಬಂಡವಾಳಶಾಹಿ ವ್ಯವಸ್ಥೆಯನ್ನು ಟೀಕಿಸಲಿಲ್ಲ. ಆದರೆ ಸೂಕ್ತ ಕಾರ್ಮಿಕ ಗುಣಮಟ್ಟ ಮತ್ತು ಉತ್ಪಾದನಾ ಸಂಬಂಧಗಳು ಸೇರಿದಂತೆ ಆರ್ಥಿಕ ನ್ಯಾಯದ ಖಾತ್ರಿಯೊಂದಿಗೆ,ಮಿಶ್ರ ಅರ್ಥವ್ಯವಸ್ಥೆಯನ್ನು ಬೆಂಬಲಿಸಿದರು. ಆನಂದ ಮಾರ್ಗ ಆಂದೋಲನದ ಸಂಸ್ಥಾಪಕ ಭಾರತೀಯ ತತ್ವಜ್ಞಾನಿ P.R. ಸರ್ಕಾರ್ ಬಂಡವಾಳಶಾಹಿ ವ್ಯವಸ್ಥೆಯ ಸಮಸ್ಯೆಗಳನ್ನು ಗುರುತಿಸಲು ಸಾಮಾಜಿಕ ನಿರಂತರ ಚಕ್ರ ನಿಯಮ ಅಭಿವೃದ್ಧಿಪಡಿಸಿದರು. ಈ ವ್ಯವಸ್ಥೆಯಲ್ಲಿನ ದೋಷಗಳಿಗೆ ಪರಿಹಾರವಾಗಿ ಪ್ರಗತಿಪರ ಬಳಕೆ ಸಿದ್ಧಾಂತವನ್ನು (PROUT) ಪ್ರಸ್ತಾಪಿಸಿದರು.[೧೦೫][೧೦೬]
2009ರಲ್ಲಿ ಪೋಪ್ ಬೆನೆಡಿಕ್ಟ್ XVI ಹೊರಡಿಸಿದ ಕ್ಯಾರಿಟಸ್ ಇನ್ ವೆರಿಟೇಟ್ (ಚ್ಯಾರಿಟಿ ಇನ್ ಟ್ರುತ್) ಸುತ್ತೋಲೆಯಲ್ಲಿ ಅವರು ಹೀಗೆ ಹೇಳಿದ್ದಾರೆ: "ವ್ಯಕ್ತಿಗೆ ಘನತೆ ಮತ್ತು ನ್ಯಾಯದ ಅಗತ್ಯವಿದೆ, ವಿಶೇಷವಾಗಿ ಇಂದು, ಆರ್ಥಿಕ ಚಟುವಟಿಕೆಗಳು ಹೆಚ್ಚುವರಿ ಆದಾಯ ಮತ್ತು ನೈತಿಕವಾಗಿ ಸ್ವೀಕರಿಸಲಾಗದ ರೀತಿಯಲ್ಲಿ ಅಸಮತೋಲನ ಸಂಪತ್ತಿನ ಹಂಚಿಕೆಯನ್ನು ಪ್ರತಿಪಾದಿಸಿವೆ "[೧೦೭] ಮತ್ತು "ಆದ್ದರಿಂದ ಆರ್ಥಿಕ ಚಟುವಟಿಕೆಗಳನ್ನು ಮಾಡುವಾಗ, ಅದರಿಂದ ಆರ್ಥಿಕ ಅಸಮತೋಲನ ಆಗುತ್ತದೆಯೇ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆ ಆರ್ಥಿಕ ಚಟುವಟಿಕೆಯು ಕೇವಲ ಸಂಪತ್ತಿನ ರಚನೆಯ ಯಂತ್ರವಾಗಿದ್ದು, ರಾಜಕೀಯ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರಬಾರದು ಮತ್ತು ಸಂಪತ್ತಿನ ಮರುವಿತರಣೆಯ ಮೂಲಕ ನ್ಯಾಯ ಒದಗಿಸಬೇಕು ".[೧೦೮]
ಮಾರ್ಕ್ಸ್‌ವಾದಿ ಮತ್ತು ಸ್ತ್ರೀಸಮಾನತಾವಾದಿಗಳ ಟೀಕೆ
[ಬದಲಾಯಿಸಿ]ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರಾಥಮಿಕವಾಗಿ ಸಾಮಾಜಿಕ ಮತ್ತು ಪರಿಸರ ಸಂರಕ್ಷಣೆಯ ನ್ಯಾಯಿಕ ನೆಲೆಯಲ್ಲಿ ಮಾರ್ಕ್ಸ್‌ವಾದಿ ಮತ್ತು ಸ್ತ್ರೀಸಮಾನತಾವಾದಿ ಭೂಗೋಳಶಾಸ್ತ್ರಜ್ಞರು ಟೀಕೆ-ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಮಾರ್ಕ್ಸ್‌ವಾದಿ ಅಭಿವೃದ್ಧಿ ಭೂಗೋಳಶಾಸ್ತ್ರಜ್ಞರು ಸಾಂಪ್ರದಾಯಿಕ-ವಸ್ತುಗಳ ವಿಶ್ಲೇಷಣೆಯನ್ನು ಕೈಗೊಂಡರು.ಇದರಿಂದ (‘ಲಿಟಲ್ d’ ಅಭಿವೃದ್ಧಿ) ಬಳಕೆಯಿಂದ(ಜಾಗತಿಕ ವಲಯದಲ್ಲಿ) ಗ್ಲೋಬಲ್ ಸೌತ್‍ನಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ನಿರ್ಬಂಧ, ವರ್ಗಗಳ ನಡುವಿನ ಹೋರಾಟ, ಅಸಮ ಅಭಿವೃದ್ಧಿ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ವಿಶ್ಲೇಷಿಸಿದರು. ಇದು ಬಂಡವಾಳ ಶೇಕರಣೆಯ ವಿಧಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗುಂಪುಗಳ ರಚನೆ ಮತ್ತು ರಾಜಕೀಯ, ಸರಕಾರದ ಪಾತ್ರ, ಸಂಪನ್ಮೂಲಗಳಿಗಾಗಿ ಹೋರಾಟ ಮತ್ತು ಆಗ್ರಾರಿಯನ್(ಗ್ರಾಮೀಣ ಕೃಷಿ) ಬಂಡವಾಳಶಾಹಿ ವ್ಯವಸ್ಥೆಯಲ್ಲಿ ರೈತರ ಇಳುವರಿಯ ಕುರಿತು ತನಿಖೆ ನಡೆಸಲಾಗುತ್ತದೆ.
ಸ್ತ್ರೀಸಮಾನತಾವಾದಿ ರಾಜಕೀಯ-ಆರ್ಥಿಕ ಸಂಶೋಧಕರು ಬಂಡವಾಳಗಾರರ ಉತ್ಪಾದನಾ ಪ್ರಕ್ರಿಯೆಗಳೊಂದಿಗೆ ಮರು ಉತ್ಪಾದನೆಗೆ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದರು.[೭೪] ಈ ಉತ್ಪಾದನಾವಲಯವು ಕೇವಲ ಪುರುಷ ಪ್ರಧಾನವೆಂಬ ಟೀಕೆಗಳು ಕಂಡು ಬಂದವು.ಇದನ್ನು ಗಂಭೀರವಾಗಿ ಪರಿಗಣಿಸಿ ಸ್ತ್ರೀಸ್ವಾತಂತ್ರ್ಯಕ್ಕೂ ಉತ್ಪಾದನಾವಲಯ ಎಟುಕುವಂತಿರಬೇಕೆಂಬುದು ಅವರ ವಾದವಾಗಿತ್ತು.
ಸಂಪತ್ತಿನ ಅಸಮತೋಲನದ ಹಂಚಿಕೆ
[ಬದಲಾಯಿಸಿ]ಸಂಪತ್ತು ಮತ್ತು ಅಧಿಕಾರದ ಅಸಮ(ಯುಕ್ತವಲ್ಲದ)ಹಂಚಿಕೆ; ಮಾರುಕಟ್ಟೆ ಏಕಸ್ವಾಮ್ಯ ಅಥವಾ ಅಲ್ಪಜನಾಧಿಪತ್ಯ (ಮತ್ತು ಸರಕಾರದಿಂದ ಅಲ್ಪಜನಾಧಿಪತ್ಯ); ಸಾಮ್ರಾಜ್ಯಶಾಹಿ, ಕ್ರಾಂತಿಕಾರಿ ಯುದ್ಧಗಳು ಹಾಗೂ ಆರ್ಥಿಕ ಮತ್ತು ಸಾಂಸ್ಕೃತಿಕ ಶೋಷಣೆಯ ವಿವಿಧ ಪ್ರಕಾರಗಳು; ಕಾರ್ಮಿಕರ ದಬ್ಬಾಳಿಕೆ ಮತ್ತು ಕಾರ್ಮಿಕ ಸಂಘವಾದಿಗಳು, ಮತ್ತು ಸಾಮಾಜಿಕ ತಾರತಮ್ಯ, ಆರ್ಥಿಕ ಅಸಮತೋಲನ, ನಿರುದ್ಯೋಗ, ಮತ್ತು ಆರ್ಥಿಕ ಅಸ್ಥಿರತೆಯಂತಹ ಸಂದರ್ಭಗಳೊಂದಿಗೆ ಬಂಡವಾಳಶಾಹಿ ವ್ಯವಸ್ಥೆಯು ಸಂಬಂಧಿಸಿದೆ ಎಂದು ಟೀಕಿಸಲ್ಪಟ್ಟಿದ್ದಾರೆ. ಬಂಡವಾಳಗಾರರ ಖಾಸಗಿ ಆಸ್ತಿಯೊಂದಿಗೆ ಸರಕಾರದ ಕಡಿಮೆ ಹಸ್ತಕ್ಷೇಪ ಸೇರಿಕೊಂಡಾಗ ಅದು ಅಲ್ಪಜನಾಧಿಪತ್ಯ ಅಸ್ತಿತ್ವಕ್ಕೆ ಕಾರಣವಾಗುತ್ತದೆ. ನಿರಂಕುಶ ಪ್ರವೃತ್ತಿಯು ಬಂಡವಾಳಶಾಹಿತ್ವದಲಿ ಕರಗತಗೊಂಡಿದೆ ಎಂದು ಟೀಕಾಗಾರರು ವಾದಿಸಿದ್ದಾರೆ. ಸಮಾಜವಾದಿಗಳ ಅಭಿಪ್ರಾಯದಂತೆ,ಬಂಡವಾಳಶಾಹಿಯು ಉತ್ಪಾದನೆಯಲ್ಲಿ ಹಲವು ಅಸ್ಥಿರತೆ ಮತ್ತು ಆಂತರಿಕ ವಿರೋಧಕ್ಕೆ ಕಾರಣವಾಗುವುದು. ಹಾಗಾಗಿ ಸಾರ್ವಜನಿಕ ನೀತಿಯು ವ್ಯವಸ್ಥೆಯನ್ನು ನಿಯಂತ್ರಿಸಬೇಕು.ಇದು ಯೋಜನಾರಹಿತವಾಗಿದ್ದರಿಂದ ಬಂಡವಾಳಶಾಹಿ ವ್ಯವಸ್ಥೆಯು ಅಷ್ಟಾಗಿ ಸೂಕ್ತವಲ್ಲವೆಂದು ಸಮಾಜವಾದಿಗಳು ಅಭಿಪ್ರಾಯಪಟ್ಟಿದ್ದಾರೆ.[೧೦೯]
20ನೇ ಶತಮಾನದ ಪ್ರಾರಂಭದಲ್ಲಿ, ವಿದೇಶದಲ್ಲಿರುವ ಬಂಡವಾಳಗಾರ ಹಿತಾಸಕ್ತಿ ಕಾಪಾಡಲು ಸರಕಾರಗಳು ಸೈನಿಕ ಬಲ ಬಳಸುವುದು ಕೂಡಾ ಏಕಸ್ವಾಮ್ಯ ಬಂಡವಾಳಶಾಹಿ ವ್ಯವಸ್ಥೆಗೆ ಅನಿವಾರ್ಯವಾಗಿದೆ ಎಂದು ವ್ಲಾಡಿಮಿರ್ ಲೆನಿನ್ ವಾದಿಸಿದ್ದಾರೆ.[೧೧೦] ಅರ್ಥಶಾಸ್ತ್ರಜ್ಞ ಬ್ರಾಂಕೊ ಹಾರ್ವೆಟ್ "ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿಯು ಬಂಡವಾಳ, ಉದ್ಯೋಗ ಮತ್ತು ಅಧಿಕಾರದೆಡೆಗೆ ಗಮನ ಕೇಂದ್ರೀಕರಿಸಲು ಕಾರಣವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಎಂದಿದ್ದಾರೆ. ಇದು ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯ ಹರಣಕ್ಕೆ ಕಾರಣವಾಗುವುದು ಎಂದು ಕೆಲವರಿಗೆ ಮಾತ್ರ ತಿಳಿದ ವಿಷಯ."[೧೧೧] ಬಂಡವಾಳಶಾಹಿ ವ್ಯವಸ್ಥೆಯ ಕುಸಿತಕ್ಕೆ ಮತ್ತು ಹೊಸ ಸಾಮಾಜಿಕ ಪ್ರಕಾರದ ಉಗಮಕ್ಕೆ ಹೆಚ್ಚುವರಿ ಆದಾಯ ಮತ್ತು ಸಂಪತ್ತಿನ ಅಸಮ ಹಂಚಿಕೆಗಳು ಕಾರಣವಾಗಿವೆ. ಇದೂ ಅಲ್ಲದೇ ಹಣಕಾಸು ಕುಸ��ತ ಮತ್ತು ಆರ್ಥಿಕ ಕುಸಿತದ ಪರಿಣಾಮಕ್ಕೆ ಮೂಲಭೂತ ಕಾರಣವಾಗಿವೆ ಎಂದು ಸೌತರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದ ಆರ್ಥಶಾಸ್ತ್ರ ಪ್ರಾಧ್ಯಾಪಕ ರವಿ ಬಾತ್ರ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ಅಲಕ್ಷ್ಯ
[ಬದಲಾಯಿಸಿ]ನಿರಂತರ ಆರ್ಥಿಕ ಅಭಿವೃದ್ದಿಗೆ ಬಂಡವಾಳಶಾಹಿ ವ್ಯವಸ್ಥೆಯ ಅಗತ್ಯವಿದೆ ಮತ್ತು ಭೂಮಿಯಲ್ಲಿರುವ ನವೀಕರಿಸಲಾಗದ ಸ್ವಾಭಾವಿಕ ಸಂಪನ್ಮೂಲ ಮತ್ತು ವಿಶಾಲವಾಗಿ ಉಪಯೋಗಿಸುವ ಇತರ ಸಂಪನ್ಮೂಲಗಳು ಈ ವ್ಯವಸ್ಥೆಯಿಂದಾಗಿ ಖಾಲಿಯಾಗುತ್ತದೆ ಎಂದು ಪರಿಸರವಾದಿಗಳು ವಾದಿಸಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಫ್ಯಾಕ್ಟರಿ ಉತ್ಪಾದನೆಯು ಸಾರ್ವತ್ರಿಕವಾಗಿ ಪರಿಸರ ರಕ್ಷಣಾ ವೆಚ್ಚದ ಹೊರೆಯನ್ನು ಹಂಚುವುದು ಪರಿಸರ ವ್ಯವಸ್ಥೆ ಮತ್ತು ಜೀವರಾಶಿ ಮೇಲೆ ದೊಡ್ಡ ಪ್ರಮಾಣದಲ್ಲಾಗುವ ದುಷ್ಪರಿಣಾಮವನ್ನು ಸಮರ್ಪಕವಾಗಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಮುರ್ರೆ ಬೂಕ್ಚಿನ್‌ರು ವಾದಿಸಿದರು. ಜೀತದಾಳುಗಳು, ಒಪ್ಪಂದದ ಮೇಲೆ ದುಡಿಯುವ ನೌಕರರು, ಕೈದಿಗಳು, ಮತ್ತು ಒತ್ತಾಯದ ಮೇಲೆ ದುಡಿಯುವ ಇತರ ಕಾರ್ಮಿಕರಂತಹ ಸ್ವಾತಂತ್ರವಿಲ್ಲದ ಕಾರ್ಮಿಕರು ಬಂಡವಾಳಗಾರರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುತ್ತಾರೆ ಎಂದು ಇಮಾನುಯೆಲ್ ವಲ್ಲೆರ್ಸ್ಟೈನ್‌ರಂತಹ ಕಾರ್ಮಿಕ ಇತಿಹಾಸತಜ್ಞರು ಮತ್ತು ವಿದ್ವಾಂಸರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿದ್ದಾರೆ.[೧೧೨]
ಪ್ರಜಾಪ್ರಭುತ್ವ, ಸರಕಾರ ಮತ್ತು ಕಾನೂನು ಚೌಕಟ್ಟುಗಳು
[ಬದಲಾಯಿಸಿ]ಖಾಸಗಿ ಸ್ವತ್ತು
[ಬದಲಾಯಿಸಿ]19ನೇ ಶತಮಾನದಿಂದ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತದ ಹಲವು ಕ್ಷೇತ್ರಗಳಲ್ಲಿ ಸರಕಾರ, ಅದರ ಕಾರ್ಯತಂತ್ರಗಳು ಮತ್ತು ಬಂಡವಾಳಶಾಹಿಗಳ ನಡುವಿನ ಸಂಬಂಧಗಳ ಬಗ್ಗೆ ಕ್ರಿಯಾಶೀಲ ಚರ್ಚೆಯಾಗುತ್ತಿದೆ. ಬಂಡವಾಳಶಾಹಿಯ ಪ್ರಮುಖ ಲಕ್ಷಣವೆಂದರೆ ಮಾಲೀಕತ್ವ ಮತ್ತು ವ್ಯವಹಾರಗಳು ಸ್ಪಷ್ಟವಾಗಿ ದಾಖಲಿಸುವ ಅಧಿಕೃತ ಸ್ವಾಮ್ಯದ ಆಸ್ತಿಯ ಹಕ್ಕನ್ನು ರಕ್ಷಿಸುವ ಕೆಲಸವಾಗಿದೆ, ಎಂದುಸಮಕಾಲೀನ ಅರ್ಥಶಾಸ್ತ್ರಜ್ಞ ಹೆರ್ನಾಂಡೊ ಡೆ ಸೊಟೊ ವಾದಿಸಿದ್ದಾರೆ.[೧೧೩]
ಮಾರುಕಟ್ಟೆಯ ಹಲವು ರೀತಿಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬಹುದಾದ ಭೌತಿಕ ಆಸ್ತಿಗಳನ್ನು ಬಂಡವಾಳವಾಗಿ ಪರಿವರ್ತಿಸುವ ಪ್ರಕ್ರಿಯೆ ಇದಾಗಿದೆ ಎಂದು ಡಿ ಸೊಟೊ ವರ್ಣಿಸಿದ್ದಾರೆ. ಇಂಗ್ಲೆಂಡ್‌ನ ಎನ್‌ಕ್ಲೋಸರ್ ಕಾಯಿದೆಗಳು( ಒಡೆತನದ ಸ್ವಾಧೀನ ಕಾನೂನು) ಮತ್ತು ಬೇರೆಡೆಯಲ್ಲಿರುವ ಇದಕ್ಕೆ ಸಮಾನ ಶಾಸನಗಳು ಸಮಗ್ರ ಸರಳ ಬಂಡವಾಳ ಸಂಗ್ರಹಣೆಯಲ್ಲಿ ಒಂದು ಭಾಗವಾಗಿವೆ.ಖಾಸಗಿ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದ ನಿರ್ದಿಷ್ಟ ಕಾನೂನು ಚೌಕಟ್ಟುಗಳಿಂದ ಬಂಡವಾಳಶಾಹಿ ವ್ಯವಸ್ಥೆಯ ಪ್ರಗತಿ ಸಾಧ್ಯ ಎಂದು ಹಲವು ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು ವಾದಿಸಿದರು.[೧೧೪][೧೧೫]
ಸಂಸ್ಥೆಗಳು
[ಬದಲಾಯಿಸಿ]ಹೊಸ ಸಾಂಸ್ಥಿಕ ಅರ್ಥಶಾಸ್ತ್ರ ಸಂಸ್ಥೆಗಳ ಕ್ಷೇತ್ರಕ್ಕೆ ಡೌಗ್ಲಾಸ್ ನಾರ್ಥ್‌ಅವರು ಮೊದಲ ಬಾರಿಗೆ ಪ್ರವೇಶಿಸಿದರು.ಬಂಡವಾಳಶಾಹಿಯ ಕಾರ್ಯಕ್ಷಮತೆ ಹೆಚ್ಚಲು, ಸರಿಯಾಗಿ ನಡೆಯಲು ಬೇಕಾದ ಕಾನೂನು ಚೌಕಟ್ಟು ನಿರ್ಮಿಸಲು ಈ ಸಂಸ್ಥೆ ಪ್ರಾಧಾನ್ಯ ನೀಡುತ್ತವೆ. ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿ ಮತ್ತು ರಾಜಕೀಯ ಮತ್ತು ಆರ್ಥಿಕ ಸಂಸ್ಥೆಗಳ ನಿರ್ಮಾಣ ಮತ್ತು ನಿರ್ವಹಣೆಯ ನಡುವಿನ ಸಂಬಂಧದ ಅಧ್ಯಯನಕ್ಕೆ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ.[೧೧೬] ಅರ್ಥಶಾಸ್ತ್ರಜ್ಞರು ನೂತನ ಆರ್ಥಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ನೀತಿ-ಸೂತ್ರ ಮತ್ತು ಇನ್ನಿತರ ಕೇಂದ್ರಿಕೃತ ಕ್ಷೇತ್ರಗಳಲ್ಲಿ ಆಡಳಿತದ ನಿಯಂತ್ರಣ ಯಾವ ತೆರನಾಗಿದೆ ಎಂದು ಪರಾಮರ್ಶಿಸುತ್ತಾರೆ. ಏಕೆಂದರೆ ಸರ��ಾರದ ಹಸ್ತಕ್ಷೇಪದ (ತೆರಿಗೆಗಳು, ಯೋಗಕ್ಷೇಮ(ಕಲ್ಯಾಣ ಯೋಜನೆ), ಮತ್ತು ಸರಕಾರಿ ನಿಯಮಗಳು) ಸಂಭಾವ್ಯ ಲಾಭದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ನೂತನ ಕೇನ್ಸನ ಅರ್ಥಶಾಸ್ತ್ರಜ್ಞನ ಬೆಂಬಲಿಗ ಗ್ರೆಗೊರಿ ಮ್ಯಾನ್‌ಕಿವ್‌ರ ಪ್ರಕಾರ ಸಂಪನ್ಮೂಲಗಳನ್ನು ಸರಿಯಾಗಿ ವಿಂಗಡಿಸದ ಮಾರುಕಟ್ಟೆಯಲ್ಲಿ "ವ್ಯಾಪಾರದ ವಿಫಲತೆ" ಅಥವಾ ಇಂತಹ ಸಂದರ್ಭಗಳಲ್ಲಿ ಪರಿಶೀಲಿಸಿ ಸರಕಾರದ ಹಸ್ತಕ್ಷೇಪದಿಂದಾಗಿ ಆ ಮಾರುಕಟ್ಟೆ ಅಭಿವೃದ್ಧಿಯಾಗುವುದು.[೧೧೭]
ಬಾಹ್ಯ ಪ್ರಧಾನ ಅಂಶಗಳಿದ್ದಾಗ ಮತ್ತು ಧನಾತ್ಮಕ ಬಾಹ್ಯ ಅಂಶಗಳಿಂದಾಗಿ ಕಡಿಮೆ ಉತ್ಪಾದನೆಯಾಗುತ್ತದೆ.ಋಣಾತ್ಮಕ ಬಾಹ್ಯ ಅಂಶಗಳಿರುವ ಉತ್ಪನ್ನಗಳ ಅಧಿಕ ಉತ್ಪಾದನೆಯು ಮಾರುಕಟ್ಟೆ ವಿಫಲತೆಗೆ ಕಾರಣವಾಗುತ್ತದೆ. ಉದಾಹರಣೆಗೆ ವಾಯುಮಾಲಿನ್ಯವು ಋಣಾತ್ಮಕ ಬಾಹ್ಯ ಅಂಶಗಳನ್ನು ಒಳಗೊಂಡಿದೆ.ಇದು ಯಾರ ನಿಯಂತ್ರಣದಲ್ಲಿಲ್ಲ.ಇದನ್ನು ಮಾರಾಟ ಜಾಲಕ್ಕೆ ಒಳಪಡಿಸಲಾಗದು ಮಲಿನಕಾರಕಗಳ ನಿಯಂತ್ರಣಕ್ಕೆ ವಾತಾವರಣದ ಗಾಳಿಯನ್ನು ಪಡೆಯುದಕ್ಕಾಗಲಿ ಅಥವಾ ಮಾರುವುದಕ್ಕಾಗಲಿ ಸಾಧ್ಯವಾಗದಿರುವುದರಿಂದ, ಮಾರುಕಟ್ಟೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಹೆಚ್ಚಿನ ಮಾಲಿನ್ಯವು ವಾಯುಮಂಡಲಕ್ಕೆ ಸೇರವು ಸಾಧ್ಯತೆ ಇದೆ. ಆದರೆ ಅಮಾಯಕ ಜನರು ತಾವು ತೊಡಗದ ಉತ್ಪಾದನೆ ಪ್ರಕ್ರಿಯೆಯಲ್ಲಿನ ಇಂತಹ ನಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಉತ್ಪಾದಕರು ಜನರ ಹಿತಾಸಕ್ತಿ ಬಲಿಕೊಟ್ಟು ಮಾಲಿನ್ಯದ ಕಡೆಗೆ ಗಮನಕೊಡದ ಜನರ ಮೇಲೆ, ಉದ್ದೇಶಪೂರ್ವಕವಾಗಿ ಹೆಚ್ಚಿನ ವಾಯುಮಾಲಿನ್ಯವನ್ನು(ಫ್ಯಾಕ್ಟರಿಗಳು) ಉಂಟುಮಾಡುವ ಸಾಧ್ಯತೆ ಇದೆ. ಮಾರುಕಟ್ಟೆ ವಿಫಲತೆ ಸಿದ್ಧಾಂತದ ಟೀಕಾಕಾರರಾದ ರೋನಾಲ್ಡ್ ಕೋಸ್, ಹಾರಾಲ್ಡ್ ಡೆಮ್ಸೆಟ್ಸ್ ಮತ್ತು ಜೇಮ್ಸ್ M. ಬುಕನಾನ್‌ರು ಸರಕಾರದ ಸೂತ್ರ-ನೀತಿಗಳು ಮತ್ತು ಯೋಜನೆಗಳು ಪರಿಪೂರ್ಣವಾಗಿರುವುದಿಲ್ಲ ಎಂದು ವಾದಿಸಿದರು. ಬಹಳಷ್ಟು ಸಲ ಮಾರುಕಟ್ಟೆ ವಿಫಲತೆಗಳು ಸಣ್ಣ ಪ್ರಮಾಣದಲ್ಲಿರುತ್ತವೆ. ಆದರೆ ಕೆಲವೊಮ್ಮೆ ಸರಕಾರದ ವಿಫಲತೆಗಳು ದೊಡ್ಡದಾಗಿರಬಹುದಾದ ಸಾಧ್ಯತೆ ಇದೆ. ಆದ್ದರಿಂದ ಕೆಲವೊಮ್ಮೆ ಅಸಮರ್ಪಕ ಮಾರುಕಟ್ಟೆಗಳು ಪರಿಪೂರ್ಣವಲ್ಲದ ಸರಕಾರೀ ಪರ್ಯಾಯಗಳಿಗಿಂತ ಉತ್ತಮವಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ದೇಶಗಳು ಕೆಲವು ಮಾರುಕಟ್ಟೆ ನಿಯಂತ್ರಣ ನೀತಿಗಳನ್ನು ಹೊಂದಿವೆ, ನಿಯಂತ್ರಣದ ಅಧಿಕಾರ ವ್ಯಾಪ್ತಿಯು ಯಾವಾಗಲೂ ವಿವಾದಕ್ಕೊಳಗಾಗಿದೆ.ನಿರೀಕ್ಷಿತ ನೀತಿ-ಸೂತ್ರಗಳ ಮಟ್ಟದ ಕುರಿತ ಚರ್ಚಿಸಲೇಬೇಕಾಗುತ್ತದೆ.
ಪ್ರಜಾಪ್ರಭುತ್ವ
[ಬದಲಾಯಿಸಿ]ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ ನಡುವಿನ ಸಂಬಂಧವು ವಿವಾದಾಸ್ಪದ ವಿಷಯವಾಗಿದೆ. 19ನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಕೈಗಾರಿಕಾ ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ವಯಸ್ಕ ಪುರುಷರಿಗೆ ನಾರ್ವತ್ರಿಕ ಮತದಾನ ಹಕ್ಕನ್ನು ವಿಸ್ತರಿಸಲಾಯಿತು. ಬಂಡವಾಳಶಾಹಿ ವ್ಯವಸ್ಥೆಯ ಜೊತೆಯಲ್ಲಿಯೇ ಪ್ರಜಾಪ್ರಭುತ್ವವು ವ್ಯಾಪಕವಾಗಿ ಹರಡಿತು. ಅದರಿಂದ ಸಿದ್ಧಾಂತ ಪ್ರತಿಪಾದಕರ ನಡುವೆ ಉತ್ತಮ ಸಂಬಂಧ ಬೆಳೆಯಿತು ಮತ್ತು ಇತರರ ಮೇಲೆಯೂ ಪ್ರಭಾವ ಬೀರಿದವು. ಆದಾಗ್ಯೂ 20ನೇ ಶತಮಾನದಲ್ಲಿ ಕೆಲವು ಲೇಖಕರ ಪ್ರಕಾರ ವಿವಿಧ ರಾಜಕೀಯ ಪ್ರಕಾರಗಳಲ್ಲಿ ಸಂಬಂಧ ಹೊಂದಿದ್ದ ಬಂಡವಾಳಶಾಹಿಯು ಆರ್ಥಿಕ ಉದಾರತೆಗೆ ಅವಕಾಶ ನೀಡಿದೆ ಎಂದು ಹೇಳಬಹುದು.ವೆನೆಜುಯೆಲ್‌ನ ಬೋಲಿವರಿಯನ್ ಗಣರಾಜ್ಯ ಮತ್ತು ಕ್ಯಾಚಲೋನಿಯಾದ ಕ್ರಾಂತಿಕಾರಿಪ್ರವೃತ್ತಿಗಳು ಪ್ರಜಾಪ್ರಭುತ್ವವಾದಿಗಳು ಬಂಡವಾಳಶಾಹಿ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿವೆ.ಇದು ದಬ್ಬಾಳಿಕೆಯ ಆಡಳಿತ ವ್ಯವಸ್ಥೆ, ರಾಜಪ್ರಭುತ್ವ, ಮತ್ತು ಏಕ ಪಕ್ಷ ಸರಕಾರಗಳು[೩೮] ಸೇರಿದಂತೆ ಉದಾರತೆಯ ಮುಕ್ತ ಪ್ರಜಾಪ್ರಭುತ್ವದಿಂದ ಸಂಪೂರ್ಣವಾಗಿ ಬೇರೆಯಾಗಿದೆ.[೧೧೮]
ಬಂಡವಾಳಶಾಹಿಯ ಅಭಿವೃದ್ಧಿಯು ಹೆಚ್ಚು ಕಡಿಮೆ ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಅಂತ್ಯಕ್ಕೆ ಕಾರಣವಾಯಿತು ಎಂದು ಕೆಲವು ಚಿಂತಕರು ವಾದಿಸುತ್ತಿರುವಾಗ ಇತರರು ಇದರ ಬಗ್ಗೆ ವಾದ-ವಿವಾದ ಮಾಡಿ ಈ ಘೋಷಣೆಯನ್ನು ಸಾಮಾನ್ಯವಾಗಿ ಒಪ್ಪುವದಿಲ್ಲ. ಬಂಡವಾಳಶಾಹಿ ಪ್ರಜಾಪ್ರಭುತ್ವಗಳು ಅಪರೂಪದ ಯುದ್ಧಗಳು ಮತ್ತು ಅಲ್ಪ ಪ್ರಮಾಣದ ಆಂತರಿಕ ಹಾನಿಗೆ ಕಾರಣವಾಗುತ್ತವೆ ಎನ್ನುವುದನ್ನು ಪ್ರಜಾಪ್ರಭುತ್ವ ಶಾಂತಿ ಸಿದ್ಧಾಂತದಲ್ಲಿನ ಸಂಶೋಧನೆ ತಿಳಿಸಿದೆ.[೧೧೯][೧೨೦] ಎರಡು ಪ್ರಜಾಪ್ರಭುತ್ವ ಬಂಡವಾಳಶಾಹಿ ಸರಕಾರಗಳ ನಡುವೆ ನಡೆಯುವ ಯುದ್ಧಗಳು ವಿರಳವಾಗಿರಬಹುದು ಮತ್ತು/ಅಥವಾ ಇಲ್ಲದಿರಬಹುದು. ಏಕೆಂದರೆ ಅವರ ಸರಕಾರದ ಪ್ರಕಾರವು ಪ್ರಜಾಪ್ರಭುತ್ವ ಅಥವಾ ಬಂಡವಾಳಶಾಹಿ ಆಗಿರುವುದಲ್ಲದೆ, ರಾಜಕೀಯವಾಗಿ ಸ್ಥಿರತೆ ಮತ್ತು ಸಾಮ್ಯತೆಯನ್ನು ಹೊಂದಿರುತ್ತದೆ ಎನ್ನುವುದು ಪ್ರಜಾಪ್ರಭುತ್ವ ಶಾಂತಿ ಸಿದ್ಧಾಂತಕ್ಕಿರುವ ಟೀಕೆಯಾಗಿದೆ.
ಸರ್ವಾಧಿಕಾರಿ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ರಾಜಕೀಯವಾಗಿ ಯಾವುದೇ ಸ್ವಾತಂತ್ರ್ಯ ನೀಡದೆ, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿದಂತೆ ಬಂಡವಾಳಶಾಹಿ ವ್ಯವಸ್ಥೆಯಡಿ ಆರ್ಥಿಕ ಅಭಿವೃದ್ಧಿಯಾಗಿದೆ. ಆದರೆ ಇದರ ವೇಗವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿರುತ್ತದೆ ಮತ್ತು ಭವಿಷ್ಯದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಡಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಾಗದಿರಬಹುದು ಎಂದು ಕೆಲವು ಟೀಕಾಕಾರರು ವಾದಿಸಿದ್ದಾರೆ.[೧೨೧][೧೨೨] ಅಧಿಕ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗಳನ್ನು ಹೊಂದಿರುವ ಸರಕಾರಗಳು ಸರ್ವಾಧಿಕಾರಿ ಅಥವಾ ದಬ್ಬಾಳಿಕೆ ರಾಜಕೀಯ ವ್ಯವಸ್ಥೆಗಳಡಿ ತಮ್ಮ ಏಳಿಗೆಯನ್ನು ಕಂಡಿರುತ್ತದೆ. ಸಿಂಗಾಪೂರ್ ಬಹುಮಟ್ಟಿನ ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಹೊಂದಿರುವುದರಿಂದ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತದೆ. ಆದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪೌರ ಹಕ್ಕುಗಳನ್ನು ರಕ್ಷಿಸುವುದಿಲ್ಲ. ಚೀನಾ ಗಣರಾಜ್ಯದಲ್ಲಿ ಆರಂಭದಿಂದಲೂ ದಬ್ಬಾಳಿಕೆಯ ಸರಕಾರವಿದ್ದರೂ ಸಹ ಖಾಸಗಿ (ಬಂಡವಾಳಗಾರ) ವಲಯದಲ್ಲಿ ತ್ವರಿತ ಗತಿಯಲ್ಲಿ ಏರಿಕೆ ಕಂಡಿದೆ. ಜರ್ಮನಿಯ ನಾಜಿಯಂತಹ ಸರ್ವಾಧಿಕಾರಿ ಆಡಳಿತವಿರುವ ದೇಶಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಅಧಿಕ ಏರಿಕೆ ಕಂಡಿದೆ.[೧೨೩] ಚಿಲಿಯಲ್ಲಿ ಅಗಸ್ಟೊ ಪಿನೋಚೆಟ್‌ರ ಸರ್ವಾಧಿಕಾರಿ ಆಡಳಿತದಲ್ಲಿ ಬಂಡವಾಳ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳಿಗೆ ಬಂಡವಾಳ ಹೂಡಲು ಸುರಕ್ಷತೆ ಒದಗಿಸುವುದರೊಂದಿಗೆ ಆರ್ಥಿಕ ಅಭಿವೃದ್ಧಿಗೆ ಕಾರಣರಾದರು.
ಈ ವ್ಯವಸ್ಥೆಗೆ ಬಂದ ಟೀಕೆಗಳಿಗೆ ಪ್ರತಿಯಾಗಿ, ಈ ವ್ಯವಸ್ಥೆಯು ಪ್ರಯೋಗಗಳನ್ನು ಬೆಂಬಲಿಸುವುದರಿಂದ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು ಎಂದು ಕೆಲವು ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಪಾದಕರು ವಾದಿಸಿದ್ದಾರೆ. ಉದಾಹರಣೆಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯದ ದೇಶಗಳು (ಸೂಚ್ಯಾಂಕಗಳಲ್ಲಿ ಉಲ್ಲೇಖಿಸಿದಂತೆ) ಅಲ್ಲಿನ ಬಡತನದ ಸೂಚ್ಯಾಂಕವನ್ನೊಳಗೊಂಡಂತೆ ಆದಾಯ ಮತ್ತು ನಿರೀಕ್ಷಿತ ಆಯುರ್ಮಾನದಂತಹ ಅಂಶಗಳನ್ನು ಹೊಂದಿದೆ. ಹೆಚ್ಚಿನ ಅಂಕ ಪಡೆದ ದೇಶಗಳ ನಡುವಿನ ಸಂಖ್ಯಾಸಾಸ್ತ್ರ ಆಧಾರಿತ ಸಂಬಂಧಕ್ಕೆ ವಿವಿಧ ಆರ್ಥಿಕ ಸ್ವಾತಂತ್ರ್ಯದ ಸೂಚ್ಯಾಂಕಗಳು ಸಂಕೇತಗಳಾಗಿವೆ.
ಬಂಡವಾಳಶಾಹಿಯ ವಿವಿಧ ಪ್ರಕಾರಗಳು
[ಬದಲಾಯಿಸಿ]ಅನಾರ್ಕೊ-ಬಂಡವಾಳಶಾಹಿ, ಉದ್ಯಮ ಬಂಡವಾಳಶಾಹಿ, ಸ್ನೇಹ ಬಂಡವಾಳಶಾಹಿ, ಹಣಕಾಸು ಬಂಡವಾಳಶಾಹಿ, ಸರಕಾರದ ಕಡಿಮೆ ಹಸ್ತಕ್ಷೇಪ ಬಂಡವಾಳಶಾಹಿ, ಟೆಕ್ನೋ ಬಂಡವಾಳಶಾಹಿ, ನಿಯೊ-ಬಂಡವಾಳಶಾಹಿ, ವಿಳಂಬ ಬಂಡವಾಳಶಾಹಿ, ಪೋಸ್ಟ್-ಬಂಡವಾಳಶಾಹಿ, ರಾಜ್ಯ ಬಂಡವಾಳಶಾಹಿ ಮತ್ತು ರಾಜ್ಯ ಏಕಸ್ವಾಮ್ಯ ಬಂಡವಾಳಶಾಹಿಯಂತಹ ವಿವಿಧ ಪ್ರಕಾರಗಳನ್ನು ಒಳಗೊಂಡಿದೆ. ಬಂಡವಾಳಶಾಹಿ ವಿರೋಧಿ ಆಂದೋಲನಗಳು ಮತ್ತು ಸಿದ್ಧಾಂತಗಳು ಜನಸಾಮಾನ್ಯರ ಕಷ್ಟಗಳು, ಸಂಸ್ಥೆ ಸಿದ್ಧಾಂತ ಮತ್ತು ಗುಲಾಮಗಿರಿ ಕೂಲಿಯಂತಹ ವ್ಯವಸ್ಥೆಗಳು ಇವೆ. ಸಂಬಂಧಿಸಿದ ಹಲವಾರು ಆಂದೋಲನಗಳು ಬಂಡವಾಳಶಾಹಿ ವಿರೋಧಿ ಮತ್ತು ನಿಷೇಧಾತ್ಮಕ ಸಂಸ್ಥೆಗಳನ್ನು ಒಳಗೊಂಡಿರುತ್ತದೆ.
ಇದನ್ನು ಗಮನಿಸಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ Scott, Bruce (2009). The Concept of Capitalism. Springer. p. 76. ISBN 3642031099.
{{cite book}}
: Cite has empty unknown parameter:|coauthors=
(help) - ↑ Scott, Bruce (2009). The Concept of Capitalism. Springer. p. 76. ISBN 3642031099.
{{cite book}}
: Cite has empty unknown parameter:|coauthors=
(help) - ↑ ಗ್ರೇಸ್ಬಿ, ರಿಚರ್ಡ್. ದಿ ಐಡಿಯಾ ಆಫ್ ಕ್ಯಾಪಿಟಲಿಸಮ್ ಬಿಫಾರ್ ದಿ ಇಂಡಸ್ಟ್ರಿಯಲ್ ರೆವೊಲ್ಯೂಷನ್. ಕ್ರಿಟಿಕಲ್ ಇಷ್ಯುಸ್ ಇನ್ ಹಿಸ್ಟರಿ. ಲೇಹಾಮ್, ಪರಿ: ರೋಮನ್ ಮತ್ತು ಲಿಟಲ್‌ಫೀಲ್ಡ್, 1999, ಪು.1
- ↑ ೪.೦ ೪.೧ ೪.೨ ೪.೩ Scott, John (2005). Industrialism: A Dictionary of Sociology. Oxford University Press.
- ↑ ಟೋರ್ಮಿ, ಸಿಮೊನ್. ಆಂಟಿ-ಕ್ಯಾಪಿಟಲಿಸಮ್ ವನ್‌ವರ್ಲ್ಡ್ ಪಬ್ಲಿಕೇಶನ್ಸ್, 2004. ಪು. 10
- ↑ Tucker, Irvin B. (1997). Macroeconomics for Today. p. 553.
- ↑ Case, Karl E. (2004). Principles of Macroeconomics. Prentice Hall.
- ↑ ೮.೦ ೮.೧ ಸ್ಟಿಲ್ವೆಲ್, ಫ್ರ್ಯಾಂಕ್. “ಪೋಲಿಟಿಕಲ್ ಎಕಾನಮಿ: ದಿ ಕಾಂಟೆಸ್ಟ್ ಆಫ್ ಇಕೋನಾಮಿಕ್ ಐಡಿಯಾಸ್.” ಮೊದಲ ಆವೃತ್ತಿ. ಆಕ್ಸ್‌ಫರ್ಡ್ ಯೂನಿವರ್ಸಿಟ್ ಪ್ರೆಸ್ ಮೆಲ್‌ಬೋರ್ನ್, ಆಸ್ಟ್ರೇಲಿಯಾ. 2002.
- ↑ ಎಕೋನೋಮಿಕ್ ಸಿಸ್ಟಮ್ಸ್ . (2009). ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ 2007 ಅಲ್ಟಿಮೇಟ್ ರೆಫರೆನ್ಸ್ ಸೂಟ್ . ಚಿಕಾಗೊ: ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ.
- ↑ ೧೦.೦ ೧೦.೧ ೧೦.೨ ೧೦.೩ ೧೦.೪ Braudel, Fernand (1982). "Production, or Capitalism away from home". The Wheels of Commerce, Vol. 2, Civilization & Capitalism 15th-18th Century. Los Angeles: University of California Press. pp. 231–373. ಉಲ್ಲೇಖ ದೋಷ: Invalid
<ref>
tag; name "Braudel on capitalism" defined multiple times with different content - ↑ ೧೧.೦ ೧೧.೧ ೧೧.೨ ೧೧.೩ Banaji, Jairus (2007). "Islam, the Mediterranean and the rise of capitalism". Journal Historical Materialism. Brill Publishers. 15: 47–74. doi:10.1163/156920607X171591. ಉಲ್ಲೇಖ ದೋಷ: Invalid
<ref>
tag; name "Banaji" defined multiple times with different content - ↑ ೧೨.೦ ೧೨.೧ ೧೨.೨ ೧೨.೩ Capitalism. Encyclopedia Britannica. 2006.
- ↑ Werhane, P.H. (1994). "Adam Smith and His Legacy for Modern Capitalism". The Review of Metaphysics. Philosophy Education Society, Inc. 47 (3).
- ↑ ೧೪.೦ ೧೪.೧ ೧೪.೨ "ಫ್ರೀ ಎಂಟರ್‌ಪ್ರೈಸ್." ರೋಜೆಟ್‌ರ 21ನೇ ಶತಮಾನದ ಅರ್ಥಕೋಶ, ಮೂರನೇ ಆವೃತ್ತಿ. ಫಿಲಿಪ್ ಲೀಫ್ ಸಮೂಹ 2008.
- ↑ Mutualist.org. "...ಸ್ವಯಂ ಪ್ರೇರಿತ ಸಂಸ್ಥೆಯ ಆಧಾರದ ಮೇಲೆ, ಮುಕ್ತ ವಿನಿಮಯ ಅಥವಾ ಪರಸ್ಪರ ಸಹಕಾರ."
- ↑ ಫ್ರೆಡ್‌ಮ್ಯಾನ್, ಮಿಲ್ಟನ್. 1962. ಕ್ಯಾಪಿಟಲಿಸಮ್ ಆಂಡ್ ಫ್ರಿಡಮ್. ಚಿಕಾಗೊ ವಿಶ್ವವಿದ್ಯಾಲಯ ಮುದ್ರಣಾಲಯ. ಪು 38.
- ↑ "ಮಾರ್ಕೆಟ್ ಎಕಾನಮಿ", ಮೆರಿಯಮ್-ವೆಬ್‌ಸ್ಟೆರ್ ಅನ್‌ಬ್ರಿಡ್ಜ್‌ಡ್ ಡಿಕ್ಷನರಿ
- ↑ "About Cato". Cato.org. Retrieved 2008-11-06.
- ↑ "The Achievements of Nineteenth-Century Classical Liberalism".
"ಉದಾರೀಕರಣ" ಎಂಬ ಪದವು ವಿಶ್ವದ ಹೆಚ್ಚಿನ ಭಾಗಗಳಲ್ಲಿ ತನ್ನ ಮೂಲಾರ್ಥವನ್ನು ಉಳಿಸಿಕೊಂಡಿದೆ. ದುರಾದೃಷ್ಟವಶಾತ್ ಇಪ್ಪತ್ತನೇ ಶತಮಾನ ಕೊನೆಯಲ್ಲಿ ಅಮೆರಿಕಾದಲ್ಲಿ ಇದು ಬೇರೆಯಾದ ಅರ್ಥ ಪಡೆದುಕೊಂಡಿತು. "ಮಾರುಕಟ್ಟೆ ಉದಾರೀಕರಣ," "ಸಾಂಪ್ರದಾಯಿಕ ಉದಾರೀಕರಣ," ಅಥವಾ "ಉದಾರೀಕರಣ"ನಂತಹ ಪದಗಳನ್ನು ಅಮೆರಿಕಾದ ಕೆಲವು ಸ್ಥಳಗಳಲ್ಲಿ ಬಳಸುತ್ತಾರೆ.
- ↑ ಎಟಿಮೊಲಜಿ ಆಫ್ "ಕ್ಯಾಟಲ್"
- ↑ ೨೧.೦ ೨೧.೧ ೨೧.೨ ೨೧.೩ ೨೧.೪ ಜೇಮ್ಸ್ ಅಗಸ್ಟಸ್ ಹೆನ್ರಿ ಮರ್ರಿ. "ಕ್ಯಾಪಿಟಲ್". ಎ ನ್ಯೂ ಇಂಗ್ಲೀಷ್ ಡಿಕ್ಷನರಿ ಆನ್ ಹಿಸ್ಟಾರಿಕಲ್ ಪ್ರಿನ್ಸಿಪಲ್ಸ್. ಆಕ್ಸ್‌ಫರ್ಡ್ ಇಂಗ್ಲೀಷ್ ಪ್ರೆಸ್ . ಸಂ 2. ಪುಟ 93. ಉಲ್ಲೇಖ ದೋಷ: Invalid
<ref>
tag; name "OED" defined multiple times with different content - ↑ ಆರ್ಥರ್ ಯಂಗ್. ಟ್ರಾವೆಲ್ಸ್ ಇನ್ ಫ್ರಾನ್ಸ್
- ↑ ರಿಕಾರ್ಡೊ, ಡೇವಿಡ್. ಪ್ರಿನ್ಸಿಪಲ್ಸ್ ಆಫ್ ಪಾಲಿಟಿಕಲ್ ಎಕಾನಮಿ ಆಂಡ್ ಟ್ಯಾಕ್ಸೆಷನ್>. 1821. ಜಾನ್ ಮರ್ರಿ ಪಬ್ಲಿಷರ್, 3ನೇ ಆವೃತ್ತಿ.
- ↑ ಸ್ಯಾಮ್ಯುಲ್ ಟೇಲರ್ ಕೋಲ್‌ರಿಡ್ಜ್. ಟೇಬಲ್ ದಿ ಕಂಪ್ಲೀಟ್ ವರ್ಕ್ಸ್ ಆಫ್ ಸ್ಯಾಮ್ಯುಲ್ ಟೇಲರ್ ಕೋಲ್‌ರಿಡ್ಜ್. ಪುಟ 267.
- ↑ ಬ್ರಾವುಡೆಲ್, ಫೆರ್ನಾಂಡ್. ದಿ ವೀಲ್ಸ್ ಆಫ್ ಕಾಮರ್ಸ್: ಸಿವಿಲೈಸೇಶನ್ ಆಂಡ್ ಕ್ಯಾಪಿಟಲಿಸಮ್ 15-18 ಶತಮಾನ, ಹಾರ್ಪರ್ ಮತ್ತು ರೋವ್, 1979, ಪು.237
- ↑ ಕಾರ್ಲ್ ಮಾರ್ಕ್ಸ್. ಅಧ್ಯಾಯ 16: ನಿರಪೇಕ್ಷ ಮತ್ತು ಸಾಪೇಕ್ಷ ಮಿಗುತಾಯ ಮೌಲ್ಯ. ದಾಸ್ ಕ್ಯಾಪಿಟಲ್ .
Die Verlängrung des Arbeitstags über den Punkt hinaus, wo der Arbeiter nur ein Äquivalent für den Wert seiner Arbeitskraft produziert hätte, und die Aneignung dieser Mehrarbeit durch das Kapital - das ist die Produktion des absoluten Mehrwerts. Sie bildet die allgemeine Grundlage des kapitalistischen Systems und den Ausgangspunkt der Produktion des relativen Mehrwerts.
ಕಾರ್ಮಿಕ ತನ್ನ ಸಾಮರ್ಥ್ಯಕ್ಕೆ ಸಮನಾಗಿ ಉತ್ಪಾದಿಸಬಹುದಾದ ಮಟ್ಟಕ್ಕಿಂತ ಹೆಚ್ಚು ಕಾರ್ಯಾವಧಿಯನ್ನು ವಿಸ್ತರಿಸುವುದು ಮತ್ತು ಬಂಡವಾಳದಿಂದ ಹೆಚ್ಚುವರಿ ಕಾರ್ಮಿಕರನ್ನು ಮೀಸಲಿರಿಸುವುದನ್ನು ನಿರಪೇಕ್ಷ ಮಿಗುತಾಯದ ಉತ್ಪಾದನೆ ಎನ್ನಬಹುದಾಗಿದೆ. ಇದು ಬಂಡವಾಳಗಾರ ವ್ಯವಸ್ಥೆ ಯ ಸಾಮಾನ್ಯ ಅವಶ್ಯಕ ಕೆಲಸವನ್ನು ಮಾಡುತ್ತದೆ ಮತ್ತು ಇದು ಸಾಪೇಕ್ಷ ಮಿಗುತಾಯ ಮೌಲ್ಯದ ಉತ್ಪಾದನೆಗೆ ಆರಂಭದ ಹಂತವಾಗಿದೆ.
- ↑ ಸೌಂಡರ್ಸ್, ಪೀಟರ್ (1995). ಕ್ಯಾಪಿಟಲಿಸಮ್ ಮಿನ್ನೆಸೋಟಾ ವಿಶ್ವವಿದ್ಯಾಲಯ ಮುದ್ರಣಾಲಯ. ಪು. 1
- ↑ ಕಾರ್ಲ್ ಮಾರ್ಕ್ಸ್. ದಾಸ್ ಕ್ಯಾಪಿಟಲ್ .
- ↑ ರಾಗನ್, ಕ್ರಿಸ್ಟಫರ್ T.S., ಮತ್ತು ರಿಚರ್ಡ್ G. ಲಿಪ್ಸೇ. ಮೈಕ್ರೋಇಕನಾಮಿಕ್ಸ್. ಟ್ವೆಲ್ಫ್‌ತ್ ಕೆನಡಿಯನ್ ಆವೃತ್ತಿ ಆ. ಟೊರೊಂಟೊ: ಪಿಯರ್ಸನ್ ಎಜ್ಯುಕೇಶನ್ ಕೆನಡಾ, 2008. ಮುದ್ರಣ ಮಾಧ್ಯಮ
- ↑ ರೋಬಿನ್ಸ್, ರಿಚರ್ಡ್ H. ಗ್ಲೋಬಲ್ ಪ್ರೋಬ್ಲೆಮ್ಸ್ ಆಂಡ್ ದಿ ಕಲ್ಚರ್ ಆಫ್ ಕ್ಯಾಪಿಟಲಿಸಮ್. ಬೋಸ್ಟನ್: ಆಲಿನ್ ಮತ್ತು ಬೇಕಾನ್, 2007. ಮುದ್ರಣ ಮಾಧ್ಯಮ
- ↑ ಎರ್ಕಾಂಪ್, ಪೌಲ್ (2005), "ದಿ ಗ್ರೈನ್ ಮಾರ್ಕೆಟ್ ಇನ್ ದಿ ರೋಮನ್ ಎಂಪೈರ್", (ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ)
- ↑ ಹಸನ್, M (1987) "ಹಿಸ್ಟರಿ ಆಫ್ ಇಸ್ಲಾಮ್". ಸಂ 1. ಲಾಹೋರ್, ಪಾಕಿಸ್ತಾನ್: ಇಸ್ಲಾಮಿಕ್ ಪಬ್ಲಿಕೇಷನ್ಸ್ Ltd. ಪು. 160.
- ↑ ೩೩.೦ ೩೩.೧ ಸುಭಿ Y. ಲಬಿಬ್ (1969), "ಕ್ಯಾಪಿಟಲಿಸಮ್ ಇನ್ ಮೆಡೀವಲ್ ಇಸ್ಲಾಮ್", ದಿ ಜರ್ನಲ್ ಆಫ್ ಇಕೋನಾಮಿಕ್ ಹಿಸ್ಟರಿ 29 (1), ಪು. 79–96 [81, 83, 85, 90, 93, 96].
- ↑ ದಿ ಕ್ಯಾಂಬ್ರಿಡ್ಜ್ ಇಕನಾಮಿಕ್ ಹಿಸ್ಟರಿ ಆಫ್ ಯೂರೋಪ್ , ಪು. 437. ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ, ISBN 0-521-08709-0.
- ↑ ಸುಭಿ Y. ಲಬಿಬ್ (1969), "ಕ್ಯಾಪಿಟಲಿಸಮ್ ಇನ್ ಮೆಡೀವಲ್ ಇಸ್ಲಾಮ್", ದಿ ಜರ್ನಲ್ ಆಫ್ ಇಕೋನಾಮಿಕ್ ಹಿಸ್ಟರಿ 29 (1), ಪುಟಗಳು 79–96 [92–3].
- ↑ ರೇ ಸ್ಪೀಯರ್ (2002), "ದಿ ಹಿಸ್ಟರಿ ಆಫ್ ದಿ ಪೀಯರ್-ರೀವ್ಯೂ ಪ್ರೋಸೆಸ್", ಟ್ರೆಂಡ್ಸ್ ಇನ್ ಬೈಯೋಟೆಕ್ನಾಲಜಿ 20 (8), ಪು. 357-358 [357].
- ↑ ಸೈಯದ್ ಅಮೀರ್ ಅರ್ಜೊಮಂದ್ (1999), "ದಿ ಲಾ, ಎಜೆನ್ಸಿ, ಆಂಡ್ ಪಾಲಿಸಿ ಇನ್ ಮಡೀಯಲ್ ಇಸ್ಲಾಮಿಕ್ ಸೊಸೈಟಿ: ಡೆವಲಪ್‌ಮೆಂಟ್ ಆಫ್ ದಿ ಇನ್‌ಸ್ಟಿಟ್ಯುಶನ್ಸ್ ಆಫ್ ಲರ್ನಿಂಗ್ ಫ್ರಮ್ ದಿ ಟೆನ್ತ್ ಟು ದಿ ಫಿಫ್ಟಿನ್ತ್ ಸೆಂಚುರಿ", ಕಂಪ್ಯಾರಿಟಿವ್ ಸ್ಟಡೀಸ್ ಇನ್ ಸೊಸೈಟಿ ಆಂಡ್ ಹಿಸ್ಟರಿ 41 , ಪುಟಗಳು 263–93. ಕೇಂಬ್ರಿಡ್ಜ್ ವಿಶ್ವವಿದಾಲಯ ಮುದ್ರಣಾಲಯ.
- ↑ ೩೮.೦ ೩೮.೧ ೩೮.೨ ೩೮.೩ ೩೮.೪ ೩೮.೫ ೩೮.೬ Burnham, Peter (2003). Capitalism: The Concise Oxford Dictionary of Politics. Oxford University Press.
- ↑ ಪೋಲನ್ಯಿ, ಕಾರ್ಲ್. ದಿ ಗ್ರೇಟ್ ಟ್ರಾನ್ಸ್‌ಫ��ರ್ಮೇಷನ್. ಬೀಕಾನ್ ಮುದ್ರಣಾಲಯ,ಬೋಸ್ಟನ್.1944.ಪು87
- ↑ ದಿ ರೈಸ್ ಆಫ್ ಕ್ಯಾಪಿಟಲಿಸಮ್
- ↑ ದಿ ಸವೆನ್ಟಿನ್ತ್ ಸೆಂಚುರಿ ಯ (ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 1961), ಪು. 24ದಲ್ಲಿ ಸರ್ ಜಾರ್ಜ್ ಕ್ಲಾರ್ಕ್ ಉಲ್ಲೇಖಿಸಿದ್ದಾರೆ .
- ↑ ಮನ್‌ಕ್ಯುರ್ ಒಲ್ಸನ್, ದಿ ರೈಸ್ ಆಂಡ್ ಡಿಕ್ಲೈನ್ ಆಫ್ ನೇಷನ್ಸ್: ಇಕನಾಮಿಕ್ ಗ್ರೋಥ್, ಸ್ಟ್ಯಾಗ್ಲಾಕ್ಷನ್, ಆಂಡ್ ಸೋಶಿಯಲ್ ರಿಜಿಡಿಟೀಸ್ (ನ್ಯೂ ಹೆವನ್ & ಲಂಡನ್ 1982).
- ↑ Economic system :: Market systems. Encyclopedia Britannica. 2006.
- ↑ ಶುಮ್‌ಪೀಟರ್, J.A. (1954) ಹಿಸ್ಟರಿ ಆಫ್ ಇಕನಾಮಿಕ್ ಎನಾಲಸಿಸ್
- ↑ Hume, David (1752). Political Discourses. Edinburgh: A. Kincaid & A. Donaldson.
- ↑ ೪೬.೦ ೪೬.೧ "laissez-faire". Archived from the original on 2008-12-02. Retrieved 2009-12-11.
- ↑ ಪೋಲನ್ಯಿ, ಕಾರ್ಲ್. ದಿ ಗ್ರೇಟ್ ಟ್ರಾನ್ಸ್‌ಫೋರ್ಮೇಷನ್, ಬೀಕಾನ್ ಮುದ್ರಣಾಲಯ. ಬೋಸ್ಟನ್. 1944. ಪು.78
- ↑ "Navigation Acts". Archived from the original on 2008-08-29. Retrieved 2009-12-11.
- ↑ LaHaye, Laura (1993). "Mercantilism". Concise Encyclepedia of Economics. Fortune Encyclopedia of Economics.
- ↑ [ಇಕಾನಮಿ ಪ್ರೋಫೆಸರ್ http://www.economyprofessor.com/economictheories/monopoly-capitalism.php Archived 2009-09-22 ವೇಬ್ಯಾಕ್ ಮೆಷಿನ್ ನಲ್ಲಿ.]
- ↑ Scott, John (2005). A Dictionary of Sociology. Oxford University Press.
- ↑ Engerman, Stanley L. (2001). The Oxford Companion to United States History. Oxford University Press.
- ↑ Barnes, Trevor J. (2004). Reading economic geography. Blackwell Publishing. p. 127. ISBN 063123554X.
- ↑ ಫಚರ್, ಜೇಮ್ಸ್. ಕ್ಯಾಪಿಟಲಿಸಮ್. 1ನೇ ಆವೃತ್ತಿ. ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 2004.
- ↑ Henwood, Doug (2003-10-01). After the New Economy. New Press. ISBN 1-56584-770-9.
- ↑ "ಕ್ಯಾಪಿಟಲಿಸಮ್." ವರ್ಲ್ಡ್ ಬುಕ್ ಎನ್‌ಸೈಕ್ಲೋಪಿಡಿಯಾ. 1988. 194. ಮುದ್ರಣ ಮಾಧ್ಯಮ
- ↑ ಡೆಜನ್, ರಾಬರ್ಟ್. ದಿ ಟ್ರಂಪ್ ಆಫ್ ಕ್ಯಾಪಿಟಲಿಸಮ್ . 1ನೇ ಆವೃತ್ತಿ. ನ್ಯೂ ಬ್ರುಸ್ವಿಕ್, NJ: ಟ್ರಾನ್ಸಾಕ್ಷನ್ ಪಬ್ಲಿಶರ್ಸ್, 2008.
- ↑ Hunt, E.K. (2002). History of Economic Thought: A Critical Perspective. M.E. Sharpe. p. 92.
- ↑ Blackwell Encyclopedia of Political Thought. Blackwell Publishing. 1991. p. 91.
- ↑ Skousen, Mark (2001). The Making of Modern Economics: The Lives and Ideas of the Great Thinkers. M.E. Sharpe. pp. 98–102, 134.
- ↑ ಎರಿಕ್ ಆರೋನ್, ವಾಟ್ಸ್ ರೈಟ್? (ದುರಾಲ್, ಆಸ್ಟ್ರೇಲಿಯಾ: ರೋಸ್‌ಬರ್ಗ್ ಪಬ್ಲೀಷಿಂಗ್, 2003), 75.
- ↑ Calhoun, Craig (2002). Capitalism: Dictionary of the Social Sciences. Oxford University Press.
- ↑ ೬೩.೦ ೬೩.೧ "Adam Smith". econlib.org.
- ↑ ದಿ ಕಮ್ಯುನಿಷ್ಟ್ ಮನಿಫಿಸ್ಟೊ
- ↑ "ಮಾರ್ಕ್ಸ್ ಹೇಳುವಂತೆ ಸಮಾಜದ ಪುನಾರಚನೆಯ ಸಮಸ್ಯೆಯು ಕೆಲವು ಮಂದಿಯ ಅಭ್ಯಾಸದಿಂದ ಹುಟ್ಟಿರುವುದಲ್ಲ. ಅದು ವ್ಯಕ್ತಿಯ ವೈಯಕ್ತಿಕ ವಿಶೇಷಾಸಕ್ತಿಯಿಂದ ಪ್ರೇರೆಪಿಸಲ್ಪಡುದು; ಉತ್ಪಾದನೆ ಹೆಚ್ಚಿದಂತೆ, ಕಬ್ಬಿಣ ಅದಿರಿನ ಅವಶ್ಯಕತೆಯೂ ಹೆಚ್ಚುತ್ತಾಹೋದದ್ದು ಒಂದಾದರೆ; ಮೌಲ್ಯದ ನಿಯಮದ ಸೂಚನೆಯಂತೆ ಇನ್ನಷ್ಟು ಉತ್ಪಾದನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇನ್ನೊಂದಡೆ." - ಲಿಯಾನ್ ಟ್ರೋಟ್‌ಸ್ಕಿ, "ಮಾರ್ಕಿಸಮ್ ಇನ್ ಅವರ್ ಟೈಮ್", 1939 (ಸಮಾಜವಾದದ ಅನಿವಾರ್ಯತೆ) [೧]
- ↑ Karl Marx. "Capital. v. 3. Chapter 47: Genesis of capitalist ground rent". Marxists. Retrieved 2008-02-26.
- ↑ ಕಾರ್ಲ್ ಮಾರ್ಕ್ಸ್. ಅಧ್ಯಾಯ ಇಪ್ಪತ್ತೈದು: ಬಂಡವಾಳಗಾರ ಸಂಗ್ರಹಣೆಯ ಸಾಮಾನ್ಯ ನಿಯಮ. ದಾಸ್ ಕ್ಯಾಪಿಟಲ್ .
- ↑ ಡೊಬ್, ಮೌರಿಸ್ 1947 ಸ್ಟಡೀಸ್ ಇನ್ ದ ಡೆವಲಪ್‌ಮೆಂಟ್ ಆಫ್ ಕ್ಯಾಪಿಟಲಿಸಮ್. ನ್ಯೂಯಾರ್ಕ್: ಇಂಟರ್ನ್ಯಾಷನಲ್ ಪಬ್ಲಿಷರ್ಸ್ Co., Inc.
- ↑ ಡೇವಿಡ್ ಹಾರ್ವೆ 1989 ದಿ ಕಂಡಿಶನ್ ಆಫ್ ಪೋಸ್ಟ್ಮೊಡೆರ್ನಿಟಿ
- ↑ ವೀನ್, ಫ್ರಾನ್ಸಿಸ್ ಬುಕ್ಸ್ ದ್ಯಾಟ್ ಶೂಕ್ ದಿ ವರ್ಲ್ಡ್: ಮಾರ್ಕ್‌ರ ದಾಸ್ ಕ್ಯಾಪಿಟಲ್ 1ನೇ ಆವೃತ್ತಿ. ಲಂಡನ್: ಅಟ್ಲಾಂಟಿಕ್ ಬುಕ್ಸ್, 2006
- ↑ "Imperialism, the Highest Stage of Capitalism". Marxists. 1916. Retrieved 2008-02-26.
- ↑ ಹೆಚ್ಚಿನ ಉದಾಹರಣೆಗಳಿಗಾಗಿ, ಸ್ಟೀಫನ್ ರೆಸ್ನಿಕ್ ಮತ್ತು ರಿಚರ್ಡ್ ವೋಲ್ಫ್‌ರು ಮಾಡಿದ ಕಾರ್ಯಗಳನ್ನು ನೋಡಿ.
- ↑ Ste. Croix, G. E. M. de (1982). The Class Struggle in the Ancient Greek World. pp. 52–3.
- ↑ ೭೪.೦ ೭೪.೧ ಲಾವ್ಸನ್, ವಿಕ್ಟೋರಿಯಾ. ಮೇಕಿಂಗ್ ಡೆವಲಪ್‌ಮೆಂಟ್ ಜಿಯಾಗ್ರಫಿ (ಹ್ಯುಮನ್ ಜಿಯಾಗ್ರಫಿ ಇನ್ ದಿ ಮೇಕಿಂಗ್). ನ್ಯೂಯಾರ್ಕ್: ಎ ಹೆಡ್ಡರ್ ಅರ್ನಾಲ್ಡ್ ಪಬ್ಲಿಕೇಷನ್, 2007. ಮುದ್ರಣ ಮಾಧ್ಯಮ
- ↑ ಹಾರ್ವೆ, ಡೇವಿಡ್. ಸೋಟ್ಸ್ ಟುವರ್ಡ್ಸ್ ಎ ಥಿಯರಿ ಆಫ್ ಅನ್‌ಇವನ್ ಜಿಯಾಗ್ರಫಿಕಲ್ ಡೆವಲಪ್‌ಮೆಂಟ್. ಮುದ್ರಣ ಮಾಧ್ಯಮ
- ↑ Kilcullen, John (1996). "MAX WEBER: ON CAPITALISM". Macquarie University. Archived from the original on 2012-05-21. Retrieved 2008-02-26.
- ↑ "Conference Agenda" (PDF). Economy and Society. Archived from the original (PDF) on 2009-03-26. Retrieved 2008-02-26.
- ↑ Rothbard, Murray N. (1973). "A Future of Peace and Capitalism". Modern Political Economy. Boston: Allyn and Bacon: 419–430. Archived from the original on 2010-01-10. Retrieved 2009-12-11.
In fact the mercantilist system is essentially what we've got right now. There is very little difference between state monopoly capitalism, or corporate state capitalism, whatever you want to call it, in the United States and Western Europe today, and the mercantilist system of the pre-Industrial Revolution era. There are only two differences; one is that their major activity was commerce and ours is industry. But the essential modus operandi of the two systems is exactly the same: monopoly privilege, a complete meshing in what is now called the "partnership of government and industry," a pervasive system of militarism and war contracts, a drive toward war and imperialism; the whole shebang characterized the seventeenth and eighteenth centuries.
- ↑ Osterfeld, David (1991). "Marxism, Capitalism and Mercantilism". The Review of Austrian Economics. 5 (1): 107–114. ISSN 0889-304.
{{cite journal}}
: Check|issn=
value (help) - ↑ ವಾಟ್ ಇಸ್ ಆಸ್ಟ್ರೀಯನ್ ಇಕನಾಮಿಕ್ಸ್?, ಲುಡ್ವಿಗ್ ವೋನ್ ಮಿಸಸ್ ಇನ್‌ಸ್ಟಿಟ್ಯುಟ್.
- ↑ ದಿಲೊರೆನ್ಜೊ, ಥೋಮಸ್. "ಫ್ರೆಡರಿಕ್ ಬಾಸ್ಟಿಯಟ್ (1801-1850): ಬಿಟ್ವಿನ್ ದಿ ಫ್ರೆಂಚ್ ಆಂಡ್ ಮರ್ಜಿನಾಲಿಸ್ಟ್ ರೆವೊಲ್ಯುಷನ್ಸ್." ಮಿಸೆಸ್.org|http://www.ಮಿಸೆಸ್.org/fredericbastiat.asp[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.ಮಿಸೆಸ್.org/journals/scholar/BastiatAustrian.pdf%7Cಥೋರ್ನ್‌ಟನ್[ಶಾಶ್ವತವಾಗಿ ಮಡಿದ ಕೊಂಡಿ], ಮಾರ್ಕ್. "ಫ್ರೆಡರಿಕ್ ಬಸ್ಟಿಯೆಟ್ ಆಸ್ ಆನ್ ಆಸ್ಟ್ರೀಯನ್ ಇಕಾನಮಿಸ್ಟ್." ಮಿಸೆಸ್.org.
- ↑ Paul Mattick. "Marx and Keynes: the limits of the mixed economy". Marxists. Retrieved 2008-02-26.
- ↑ ಎರ್ಹಾರ್ಡಟ್ III, ಇರ್ವಿನ್. "ಹಿಸ್ಟರಿ ಆಫ್ ಇಕನಾಮಿಕ್ ಡೆವಲಪ್‌ಮೆಂಟ್." ಸಿಂಸಿನ್ನಟಿ ವಿಶ್ವವಿದ್ಯಾಲಯ. ಲಿಂಡ್ನರ್ ಸೆಂಟರ್ ಆಡಿಟೋರಿಯಂ, ಸಿಂಸಿನ್ನಟಿ. 07 ನವೆಂ. 2008.
- ↑ ಫ್ರೆಡ್‌ಮ್ಯಾನ್, ಮಿಲ್ಟನ್. "ದಿ ಸೋಶಿಯಲ್ ರೆಸ್ಪೋಸಿಬಲಿಟಿ ಆಫ್ ಬ್ಯುಸಿನೆಸ್ ಇಸ್ ಟು ಇನ್‌ಕ್ರೀಸ್ ಇಟ್ಸ್ ಪ್ರಾಫಿಟ್ಸ್." ದಿ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್ 13 ಸೆಪ್. 1970.
- ↑ Felderer, Bernhard. Macroeconomics and New Macroeconomics.
- ↑ ೮೭.೦ ೮೭.೧ Ben Bernanke (2002-11-08). "Remarks by Governor Ben S. Bernanke". The Federal Reserve Board. Retrieved 2008-02-26.
- ↑ Yonary, Yuval P. (1998). The Struggle Over the Soul of Economics. Princeton University Press. p. 29. ISBN 0691034192.
- ↑ [183]
- ↑ Robert E. Lucas Jr. "The Industrial Revolution: Past and Future". Federal Reserve Bank of Minneapolis 2003 Annual Report. Archived from the original on 2008-05-16. Retrieved 2008-02-26.
- ↑ J. Bradford DeLong. "Estimating World GDP, One Million B.C. – Present". Archived from the original on 2009-12-07. Retrieved 2008-02-26.
- ↑ Clark Nardinelli. "Industrial Revolution and the Standard of Living". Retrieved 2008-02-26.
- ↑ Barro, Robert J. (1997). Macroeconomics. MIT Press. ISBN 0262024365.
- ↑ "Labor and Minimum Wages". Capitalism.org. Retrieved 2008-02-26.[ಶಾಶ್ವತವಾಗಿ ಮಡಿದ ಕೊಂಡಿ]
- ↑ Woods, Thomas E. (2004-04-05). "Morality and Economic Law: Toward a Reconciliation". Ludwig von Mises Institute. Archived from the original on 2008-04-30. Retrieved 2008-02-26.
- ↑ Norberg, Johan. "Three Cheers for Global Capitalism". The American Enterprise. Archived from the original on 2008-05-11. Retrieved 2008-02-26.
- ↑ Friedrich Hayek (1944). The Road to Serfdom. University Of Chicago Press. ISBN 0-226-32061-8.
- ↑ Bellamy, Richard (2003). The Cambridge History of Twentieth-Century Political Thought. Cambridge University Press. p. 60. ISBN 0-521-56354-2.
- ↑ Walberg, Herbert (2001). Education and Capitalism. Hoover Institution Press. pp. 87–89. ISBN 0-8179-3972-5.
- ↑ ಆನ್ ರಾಂಡ್'ಸ್ ಲಿಟರೇಚರ್ ಆಫ್ ಕ್ಯಾಪಿಟಲಿಸಮ್ , ದಿ ನ್ಯೂಯಾರ್ಕ್ ಟೈಮ್ಸ್
- ↑ ದಿ ವರ್ಚ್ಯು ಆಫ್ ಸೆಲ್‌ಫಿಶ್‌ನೆಸ್
- ↑ Capitalism: The Unknown Ideal
- ↑ ಕ್ಯಾಪಿಟಲಿಸಮ್ - ಥೀಯರಿ ದಿ ಆನ್ ರಾಂಡ್ ಲೆಕ್ಸಿಕಾನ್.
- ↑ "III. The Social Doctrine of the Church". The Vatican. Retrieved 2008-02-26.
- ↑ Dada Maheshvarananda. "After Capitalism". Archived from the original on 2008-03-11. Retrieved 2008-02-26.
- ↑ "proutworld". ProutWorld. Archived from the original on 2008-02-12. Retrieved 2008-02-26.
- ↑ ಕ್ಯಿರಿಟಾಸ್ ಇನ್ ವೆರೈಟೇಟ್ ಪ್ಯಾರಾಗ್ರಾಫ್ 32
- ↑ ಕ್ಯಿರಿಟಾಸ್ ಇನ್ ವೆರೈಟೇಟ್ ಪ್ಯಾರಾಗ್ರಾಫ್ 36
- ↑ ಬ್ರ್ಯಾಂಡರ್, ಜೇಮ್ಸ್ A. ಗವರ್ನಮೆಂಟ್ ಪಾಲಿಸಿ ಟುವರ್ಡ್ಸ್ ಬ್ಯುಸಿನೆಸ್. 4th ed. ಮಿಸ್ಸಿಸ್ಸಾಗಾ, ಒಂಟಾರಿಯೊ: ಜಾನ್ ವಿಲ್ಲಿ ಮತ್ತು ಮಕ್ಕಳು ಕೆನಡಾ , Ltd., 2006. ಮುದ್ರಣ ಮಾಧ್ಯಮ
- ↑ Vladimir Lenin. "Imperialism: The Highest Stage of Capitalism". Retrieved 2008-02-26.
- ↑ Horvat, B. The Political Economy of Socialism. Armonk, NY: M.E.Sharpe Inc. p. 11.
- ↑ 1980ನೇ ದಶಕದಲ್ಲಿ ಟಾಮ್ ಬ್ರಾಸ್‌ರ ಮುಂದಾಳತ್ವದಲ್ಲಿ ಬಂಡವಾಳಕ್ಕೆ ಹೂಡಿಕೆಗೆ ಸೂಕ್ತವಾದ ಸ್ವಾತಂತ್ರವಲ್ಲದ ಕಾರ್ಮಿಕರು ತಮ್ಮ ಹಕ್ಕಗಳಿಗಾಗಿ ವಾದಿಸಿದರು. ಟುವರ್ಡ್ಸ್ ಎ ಕಂಪ್ಯಾರೇಟಿವ್ ಪಾಲಿಟಿಕಲ್ ಇಕಾನಮಿ ಆಫ್ ಅನ್‌ಫ್ರೀ ಲೇಬರ್ (ಕ್ಯಾಸ್, 1999) ನೋಡಿ. Marcel van der Linden. ""Labour History as the History of Multitudes", Labour/Le Travail, 52, Fall 2003, p. 235-244". Archived from the original on 2012-08-02. Retrieved 2008-02-26.
- ↑ Hernando de Soto. "The mystery of capital". Retrieved 2008-02-26.
- ↑ Karl Marx. "Capital, v. 1. Part VIII: primitive accumulation". Retrieved 2008-02-26.
- ↑ N. F. R. Crafts (1978). "Enclosure and labor supply revisited". Explorations in economic history. 15 (15): 172–183. doi:10.1016/0014-4983(78)90019-0.
{{cite journal}}
: Unknown parameter|month=
ignored (help).ವಿ ದ ಸೇ ಯಸ್ - ↑ North, Douglass C. (1990). Institutions, Institutional Change and Economic Performance. Cambridge University Press.
- ↑ Principles of Economics. Harvard University. 1997. p. 10.
{{cite book}}
: Unknown parameter|unused_data=
ignored (help) - ↑ ಆನ್ ದಿ ಡೆಮೋಕ್ರ್ಯಾಟಿಕ್ ನೇಚರ್ ಆಫ್ ದಿ ವೆನೆಜುಯೆಲನ್ ಸ್ಟೇಟ್, [೨] Archived 2011-08-03 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿ. ಸಮಾಜವಾದದ ಪರ ಪ್ರಸ್ತುತ ಸರಕಾರಗಳ ತಿರಸ್ಕರಣೆ, [೩] Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು [೪] Archived 2008-09-11 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿ
- ↑ James Lee Ray. "Does democracy cause peace". Archived from the original on 2008-02-17. Retrieved 2008-02-26.
- ↑ Hegre, Håvard. "Towards a democratic civil peace? : opportunity, grievance, and civil war 1816-1992". Archived from the original on 2008-08-04. Retrieved 2008-02-26.
- ↑ Mesquita, Bruce Bueno de (2005-09). "Development and Democracy". Foreign Affairs. Retrieved 2008-02-26.
{{cite web}}
: Check date values in:|date=
(help) - ↑ Single, Joseph T. (2004-09). "Why Democracies Excel". New York Times. Retrieved 2008-02-26.
{{cite web}}
: Check date values in:|date=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ http://www.thirdworldtraveler.com/Fascism/Capitalism_Fascism_WW2.html
ಉಲ್ಲೇಖಗಳು
[ಬದಲಾಯಿಸಿ]- ಬ್ಯಾಚರ್, ಕ್ರಿಸ್ಟಿಯನ್ (2007) ಕ್ಯಾಪಟಲಿಸಮ್, ಎಥಿಕ್ಸ್ ಆಂಡ್ ದಿ ಪ್ಯಾರಡೊಕ್ಸನ್ ಆಫ್ ಸೆಲ್ಪ್-ಎಕ್ಸ್ಪ್ಲೋಯಿಟೇಶನ್ ಗ್ರಿನ್ ವರ್ಲಾಗ್. ಪು. 2
- ಡಿ ಜಾರ್ಜ್, ರಿಚರ್ಡ್ T. (1986) ಬ್ಯುಸಿನೆಸ್ ಎಥಿಕ್ಸ್ p. 104
- ಲ್ಯಾಷ್, ಸ್ಕೋಟ್ ಮತ್ತು ಉರ್ರಿ, ಜಾನ್ (2000). ಕ್ಯಾಪಿಟಲಿಸಮ್ ನಿಕೋಲಸ್ ಅಬೆರ್ಕ್ರೋಂಬೀಯಲ್ಲಿ, S. ಹಿಲ್ & BS ಟರ್ನರ್ (ಆವೃತ್ತಿಗಳು.), ದಿ ಪೆಗ್ವಿನ್ ಡಿಕ್ಷನರಿ ಆಫ್ ಸೋಶಿಯೋಲಜಿ (4ನೇ ಆವೃತ್ತಿ.) (ಪು. 36–40).
- Obrinsky, Mark (1983). Profit Theory and Capitalism. University of Pennsylvania Press. p. 1. Archived from the original on 2011-11-11. Retrieved 2009-12-11.
- ವೋಲ್ಫ್, ಎರಿಕ್ (1982) ಯೂರೋಪ್ ಆಂಡ್ ದಿ ಪೀಪಲ್ ವಿದೌಟ್ ಹಿಸ್ಟರಿ
- ವುಡ್, ಎಲೆನ್ ಮೀಕ್ಸಿನ್ಸ್ (2002) ದಿ ಒರಿಜಿನ್ಸ್ ಆಫ್ ಕ್ಯಾಪಿಟಲಿಸಮ್: ಎ ಲಾಂಗರ್ ವ್ಯೂ ಲಂಡನ್: ವರ್ಸೊ
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Ackerman, Frank (August 24, 2005). Priceless: On Knowing the Price of Everything and the Value of Nothing. New Press. p. 277. ISBN 1565849817.
{{cite book}}
: Unknown parameter|coauthors=
ignored (|author=
suggested) (help) - Buchanan, James M. Politics Without Romance.
- Braudel, Fernand. Civilization and Capitalism: 15th - 18 Century.
- Bottomore, Tom (1985). Theories of Modern Capitalism.
- H. Doucouliagos and M. Ulubasoglu (2006). "Democracy and Economic Growth: A meta-analysis". School of Accounting, Economics and Finance Deakin University Australia.
- Coase, Ronald (1974). The Lighthouse in Economics.
- Demsetz, Harold (1969). Information and Efficiency.
- Fulcher, James (2004). Capitalism.
- Friedman, Milton (1952). Capitalism and Freedom.
- Galbraith, J.K. (1952). American Capitalism.
- Böhm-Bawerk, Eugen von (1890). Capital and Interest: A Critical History of Economical Theory. London: Macmillan and Co.
- Harvey, David (1990). The Political-Economic Transformation of Late Twentieth Century Capitalism. Cambridge, MA: Blackwell Publishers. ISBN 0-631-16294-1.
- Hayek, Friedrich A. (1975). The Pure Theory of Capital. Chicago: University of Chicago Press. ISBN 0-226-32081-2.
- Hayek, Friedrich A. (1963). Capitalism and the Historians. Chicago: University of Chicago Press.
- Heilbroner, Robert L. (1966). The Limits of American Capitalism.
- Heilbroner, Robert L. (1985). The Nature and Logic of Capitalism.
- Heilbroner, Robert L. (1987). Economics Explained.
- Cryan, Dan (2009). Capitalism: A Graphic Guide.
- ಜೋಸೆಫ್ಸನ್, ಮ್ಯಾಥೀವ್, ದಿ ಮನಿ ಲಾರ್ಡ್ಸ್; ದಿ ಗ್ರೇಟ್ ಫೈನಾನ್ಸ್ ಕ್ಯಾಪಿಟಲಿಸ್ಟ್ಸ್, 1925-1950 , ನ್ಯೂಯಾರ್ಕ್, ವೇಬ್ರೈಟ್ ಮತ್ತು ಟ್ಯಾಲಿ, 1972.
- Luxemburg, Rosa (1913). The Accumulation of Capital.
- Marx, Karl (1886). Capital: A Critical Analysis of Capitalist Production.
- Mises, Ludwig von (1998). Human Action: A Treatise on Economics. Scholars Edition.
- Rand, Ayn (1986). Capitalism: The Unknown Ideal. Signet.
- Reisman, George (1996). Capitalism: A Treatise on Economics. Ottawa, Illinois: Jameson Books. ISBN 0-915463-73-3.
- Resnick, Stephen (1987). Knowledge & Class: a Marxian critique of political economy. Chicago: University of Chicago Press.
- Rostow, W. W. (1960). The Stages of Economic Growth: A Non-Communist Manifesto. Cambridge: Cambridge University Press.
- Schumpeter, J. A. (1983). Capitalism, Socialism, and Democracy.
- Scott, Bruce (2009). The Concept of Capitalism. Springer. p. 76. ISBN 3642031099.
{{cite book}}
: Cite has empty unknown parameter:|coauthors=
(help) - Scott, John (1997). Corporate Business and Capitalist Classes.
- Seldon, Arthur (2007). Capitalism: A Condensed Version. London: Institute of Economic Affairs.
- Sennett, Richard (2006). The Culture of the New Capitalism.
- Smith, Adam (1776). An Inquiry into the Nature and Causes of the Wealth of Nations.
- De Soto, Hernando (2000). The Mystery of Capital: Why Capitalism Triumphs in the West and Fails Everywhere Else. New York: Basic Books. ISBN 0-465-01614-6.
- Strange, Susan (1986). Casino Capitalism.
- Wallerstein, Immanuel. The Modern World System.
- Weber, Max (1926). The Protestant Ethic and the Spirit of Capitalism.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages with reference errors
- CS1 errors: empty unknown parameters
- Articles containing German-language text
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: ISSN
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: unsupported parameter
- CS1 errors: dates
- Pages using ISBN magic links
- Articles with unsourced statements from October 2009
- Articles with invalid date parameter in template
- Wikipedia articles needing page number citations
- Articles with hatnote templates targeting a nonexistent page
- Articles with unsourced statements from May 2008
- ಬಂಡವಾಳಶಾಹಿ
- ಬಂಡವಾಳಗಾರ ಪದ್ಧತಿಗಳು
- ಆರ್ಥಿಕ ವ್ಯವಸ್ಥೆಗಳು
- ಆರ್ಥಿಕ ಸಿದ್ಧಾಂತಗಳು
- ಅರ್ಥಶಾಸ್ತ್ರ
- ಆರ್ಥಿಕ ಉದಾರೀಕರಣ
- ಸಿದ್ಧಾಂತಗಳು
- ಸಾಮಾಜಿಕ ತತ್ವಗಳು
- ರಾಜಕೀಯ ಅರ್ಥವ್ಯವಸ್ಥೆ
- ಮಾರ್ಕ್ಸ್‌ವಾದಿ ಪರಿಭಾಷೆ
- ವ್ಯಕ್ತಿವಾದ
- ಹಣಕಾಸು