ವಿಷಯಕ್ಕೆ ಹೋಗು

ದೂರ್ವಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಕುಂತಳೆಯನ್ನು ಶಪಿಸುತ್ತಿರುವ ದೂರ್ವಾಸ

ದೂರ್ವಾಸ ಅತ್ರಿ ಮುನಿ ಮತ್ತು ಅನಸೂಯ ದಂಪತಿಗಳ ಮಗ.ಇವನು ತನ್ನ ಮುಂಗೋಪಕ್ಕೆ ಹಸರುವಾಸಿ. ಇದರಿಂದಾಗಿ ಮಾನವರಿಂದ ಹಾಗೂ ದೇವತೆಗಳಿಂದ ಅತ್ಯಂತ ಹೆಚ್ಚು ಗೌರವ ಪಡೆಯುತ್ತಿದ್ದನು.ಮಹಾಭಾರತ ದಲ್ಲಿ, ರಾಜಕುಮಾರಿ ಕುಂತಿಯು, ದೂರ್ವಾಸ ಮುನಿಯವರಿಂದ ಮಂತ್ರದ ವರವನ್ನು ಪಡೆದಿದ್ದು,ತಾನು ಇಷ್ಟ ಪಟ್ಟ ಯಾವುದೇ ದೇವರನ್ನು ನೆನೆದು ಮಂತ್ರವನ್ನು ಜಪಿಸಿದಲ್ಲಿ ,ಅಂತಹವರಿಂದ ಮಗುವನ್ನು ಪಡೆಯಲು ಶಕ್ತಳಾಗಿದ್ದಳು.. ಅಂತಹ ಮಂತ್ರದ 'ಅದ್ಭುತ' ಶಕ್ತಿಯನ್ನು , ಕುಂತಿಯು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ , ಸೂರ್ಯ ಪ್ರತ್ಯಕ್ಷನಾಗಿದ್ದನ್ನು ಕಂಡು ಹೆದರಿದವಳಾದಳು ಮತ್ತು ಹಿಂತಿರುಗಿ ಹೋಗಲು ಬೇಡಿಕೊಂಡಳು. ಆದರೆ , ಸೂರ್ಯನು ಹೋಗುವ ಮುನ್ನ ಮಂತ್ರದ ಫಲವನ್ನು ನೀಡಿಯೇ /ಪೂರೈಸಿಯೇ ಹೋಗಬೇಕಾಗುತ್ತದೆ. ಸೂರ್ಯನು ತನ್ನ ಮಾಯಾ ಶಕ್ತಿಯಿಂದ 'ಕುಂತಿ' ಗೆ ಮಗುವೊಂದನ್ನು ದಯಪಾಲಿಸಿ,ಆಕೆಯ ಶೀಲವನ್ನೂ ಸಹ ಉಳಿಸಿ ಹೋಗುತ್ತಾನೆ.ಇದರಿಂದಾಗಿ ಮದುವೆಯಾಗದ ರಾಜಕುಮಾರಿಗೆ 'ಮಗು' ಹೇಗಾದೀತು? ಎಂಬ ಮುಜುಗರದಿಂದ ಪಾರು ಮಾಡುತ್ತಾನೆ ಅಥವಾ ಸಮಾಜದ ಪ್ರಶ್ನೆಗಳಿಗೆ ಆಸ್ಪದ ಇಲ್ಲದಂತೆ ಮಾಡುತ್ತಾನೆ. ಕುಂತಿಯು ಮಗುವನ್ನು ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಕುರುಕ್ಷೇತ್ರ ದ ಮಹಾಯುದ್ಧದಲ್ಲಿ , ಕರ್ಣ ನು ಒಂದು 'ಕೇಂದ್ರೀಯ' ಮಹಾಪಾತ್ರವನ್ನು ಹೊಂದಿ ಬೆಳೆಯುತ್ತಾನೆ. ವೃತ್ತಿಯಲ್ಲಿ ಚಮ್ಮಾರ ರಾಗಿದ್ದರು.

"https://kn.wikipedia.org/w/index.php?title=ದೂರ್ವಾಸ&oldid=810813" ಇಂದ ಪಡೆಯಲ್ಪಟ್ಟಿದೆ