ವಿಷಯಕ್ಕೆ ಹೋಗು

ಜೈಪುರ

ನಿರ್ದೇಶಾಂಕಗಳು: 26°54′N 75°48′E / 26.9°N 75.8°E / 26.9; 75.8
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜೈಪುರ್ ಇಂದ ಪುನರ್ನಿರ್ದೇಶಿತ)
ಜೈಪುರ
Clockwise from top: Jal Mahal, Birla Mandir, Jaipur, Albert Hall Museum, Hawa Mahal, Jantar Mantar
Nickname(s): 
ಗುಲಾಬಿ ನಗರ
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Rajasthan" does not exist.
Coordinates: 26°54′N 75°48′E / 26.9°N 75.8°E / 26.9; 75.8
ದೇಶಭಾರತ ಭಾರತ
ರಾಜ್ಯರಾಜಸ್ತಾನ
ಜಿಲ್ಲೆಜೈಪುರ
Settled18 ನವಂಬರ್ 1727
ಸ್ಥಾಪಿಸಿದವರುಜೈ ಸಿಂಗ್ II
ಹೆಸರಿಡಲು ಕಾರಣJai Singh II
ಸರ್ಕಾರ
 • ಮಾದರಿMayor-council
 • ಮೇಯರ್ಅಶೋಕ್ ಲಾಹೋಟಿ
 • Police commissionerSanjay Agarwal
Area
 • Total೪೮೪.೬೪ km (೧೮೭.೧೨ sq mi)
Elevation
೪೩೧ m (೧,೪೧೪ ft)
Population
 (2011)[]
 • Total೩೦,೪೬,೧೮೯
 • ಶ್ರೇಣಿ10th India
 • ಸಾಂದ್ರತೆ೬,೩೦೦/km (೧೬,೦೦೦/sq mi)
Languages
 • OfficialHindi
 • RegionalHindi, Rajasthani, Punjabi
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
Pincode(s)
3020xx
Area code(s)+91-141
ವಾಹನ ನೋಂದಣಿRJ-14 (Jaipur South)
RJ-45 (Jaipur North)
RJ-52 (Shahpura)
RJ-41 (Chomu)
RJ-47 (Dudu)
RJ-32 (Kotputli)
ಜಾಲತಾಣwww.jaipur.rajasthan.gov.in
Jai Singh II, the founder of Jaipur

ಜೈಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ.ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನು. ವಾಸ್ತು ಶಾಸ್ತ್ರದ ಪ್ರಕಾರ ಭಾರತದಲ್ಲಿ ನಿರ್ಮಿಸಿದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ರಾಜ ಎರಡನೇ ಸವಾಯಿ ಜೈ ಸಿಂಗ್‌ಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಉತ್ತಮ ತಿಳುವಳಿಕೆಯಿತ್ತು ಮತ್ತು ಈತ 9ನೇ ಸಂಖ್ಯೆ ಮತ್ತು ಅದರ ಗುಣಾಕಾರವನ್ನು ಹೆಚ್ಚು ಬಳಸಿದ್ದ. ಇದು ನಗರ ರಚನೆಯಲ್ಲೂ ಕಂಡುಬರುತ್ತದೆ. 9ನೇ ಸಂಖ್ಯೆಯು 9 ಗ್ರಹಗಳನ್ನು ಸೂಚಿಸುತ್ತದೆ.ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.

ಭೌಗೋಳಿಕ ಸ್ಥಾನ

[ಬದಲಾಯಿಸಿ]

ಸಮುದ್ರಮಟ್ಟದಿಂದ 1.414 ಎತ್ತರದಲ್ಲಿರುವ ಜಯಪುರ ಭಾರತದ ಸುಂದರ ನಗರಗಳಲ್ಲಿ ಒಂದು. ರೈಲುಮಾರ್ಗದಲ್ಲಿ ಮುಂಬಯಿಯಿಂದ 696 ಮೈ. ಈಶಾನ್ಯಕ್ಕೆ, ದೆಹಲಿಯಿಂದ 191 ಮೈ. ನೈಋತ್ಯಕ್ಕೆ, ಇದೆ.

ಜನಸಂಖ್ಯೆ

[ಬದಲಾಯಿಸಿ]
Religion in Jaipur city (2011)
Religion Percent(%)
ಹಿಂದೂ ಧರ್ಮ
  
77.9%
Islam
  
18.6%
Jainism
  
2.4%
Other
  
1.2%

೨೦೧೧ರ ಜನಗಣತಿಯಂತೆ ಜೈಪುರದ ಜನಸಂಖ್ಯೆ 3,073,350.[] ಸಾಕ್ಷರತೆ:೭೬.೪೪ ಲಿಂಗಾನುಪಾತ:೧೦೦೦ ಪುರುಷರಿಗೆ ೮೯೮ ಮಹಿಳೆಯರು.

ವಾಸ್ತು ಶಿಲ್ಪ

[ಬದಲಾಯಿಸಿ]

ಇಲ್ಲಿಯ ಹಲವು ಕಟ್ಟಡಗಳ ಬಣ್ಣ ಪಾಟಲ. ಆದ್ದರಿಂದ ಇದು ಪಾಟಲ ನಗರವೆಂದು ಪ್ರಸಿದ್ಧವಾಗಿದೆ. 1727ರಲ್ಲಿ ಮಹಾರಾಜ ಸವಾಯಿ ಜಯಸಿಂಹನಿಂದ ಸ್ಥಾಪಿತವಾದ ಈ ನಗರದ ರಚನಾಕೌಶಲ ವಿಶಿಷ್ಟವಾದ್ದು. ನಗರವನ್ನು ಚತುರಸ್ರಾಕಾರದ ಆರು ವಿಭಾಗಗಳಾಗಿ ರಚಿಸಲಾಗಿದೆ. ಈ ವಿಭಾಗಗಳ ನಡುವೆ 111 ಅಗಲದ ರಸ್ತೆಗಳುಂಟು. ನಗರದ ಸುತ್ತ ಎಂಟು ದ್ವಾರಗಳಿಂದ 20 x 9ಗಳ ಕೋಟೆ ಇದೆ.

ಹಿಂದಿನ ಜಯಪುರ ಸಂಸ್ಥಾನದ ದೊರೆಗಳು ಕಟ್ಟಿಸಿದ ಹಲವಾರು ಕಟ್ಟಡಗಳು ಈ ನಗರದ ಸೌಂದರ್ಯದವನ್ನು ಹೆಚ್ಚಿಸಿವೆ. ಅವುಗಳಲ್ಲಿ ಜಯಪುರದ ಜಂತರ್ ಮಂತರ್ ಬಲು ಪ್ರಖ್ಯಾತವಾದ್ದು. ಇದು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲೊಂದು. 1718-1734ರಲ್ಲಿ ಇದನ್ನು ಕಟ್ಟಲಾಯಿತು. ಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ. ಪ್ರಮಾಣಬದ್ಧವಾಗಿ ಕಟ್ಟಿರುವ ದಿವಾನ್-ಇ-ಖಾಸ್, ಪೀತಮ್ ನಿವಾಸ್, ರಂಗಮಂದಿರ, ಶೋಭಾನಿವಾಸ-ಇವು ಈ ಅರಮನೆಯ ಮುಖ್ಯ ವಿಭಾಗಗಳು. 1616ರಲ್ಲಿ ಮೊಗಲ್ ದೊರೆ ಜಹಾಂಗೀರನೊಡನೆ ಪ್ರತಿನಿಧಿ ಸರ್ ಥಾಮಸ್ ರೋ ನಡೆಸಿದ ಮಾತುಕತೆಯ ಚಿತ್ರವೂ ಅಬುಲ್ ಫಜûಲನಿಂದ ಅನುವಾದಗೊಂಡ ಮಹಾಭಾರತದ ನಾಲ್ಕು ಹಸ್ತಪ್ರತಿಗಳೂ ಉಳ್ಳ ಈ ಗ್ರಂಥಾಲಯ ಇಲ್ಲಿದೆ. ಇದು ಹಿಂದಿನ ರಜಪೂತ ದೊರೆಗಳ ಸಾಹಿತ್ಯ ಮತ್ತು ಕಲಾ ವಿಭಾಗದ ಪ್ರತೀಕ. ಹಸಿರುಹುಲ್ಲಿನ ಹಾಸಿಗೆಗಳು. ಅಲ್ಲಲ್ಲಿ ತಿಳಿಗೊಳಗಳು, ನೀರುಬೀಳುಗಳು ಇರುವಂಥ ಉದ್ಯಾನದಿಂದ ಅರಮನೆಯ ಸೌಂದರ್ಯ ವರ್ಧಿಸಿದೆ. 1803ರಲ್ಲಿ ಪಟ್ಟಕ್ಕೆ ಬಂದ ರಾಜಾ ಜುಗ್ಗಲ್‍ಸಿಂಗ ಅರಮನೆಯ ಕಿಲಕಿಲಾಟದಿಂದ ದೂರವಿರ ಬೇಕೆಂದು ಬಯಸಿ ಈ ಉದ್ಯಾನವನದ ಜಲಾಶಯಗಳ ಪ್ರಶಾಂತ ವಾತಾವರಣದಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದನೆಂದೂ, ಅಲ್ಲಿಂದಲೇ ಅಂತಃಪುರದ ಏಕಾಂತದಲ್ಲಿದ್ದ ತನ್ನ ರಾಣಿಯರೊಡನೆ ತನ್ನ ನೆಚ್ಚಿನ ನಾಯಿಯೊಂದರ ಮುಖಾಂತರ ಪತ್ರ ವ್ಯವಹಾರ ಮಾಡುತ್ತಿದ್ದನೆಂದೂ ಪ್ರತೀತಿಯುಂಟು. ಅದರ ಪ್ರತೀಕವಾಗಿ ಉದ್ಯಾನವನದಲ್ಲಿ ಶಿಲಾಶ್ವಾನವೊಂದನ್ನು ನಿಲ್ಲಿಸಲಾಗಿದೆ. ಜಯಪುರದ ಅರಮನೆಯಲ್ಲಿ ಪಾರಿವಾಳಗಳ ಪಾಲನೆ-ಪೋಷಣೆಗಾಗಿ ಮಾಡಿದ್ದ ವ್ಯವಸ್ಥೆ ಪಾಶ್ಚಾತ್ಯ ಪ್ರವಾಸಿಗಳಿಗೆ ವೆನಿಸ್ ನಗರದ ಸೇಂಟ್ ಮಾಕ್ರ್ಸ್ ಚೌಕದ ನೆನಪು ಕೊಡುತ್ತದೆಂದು ಹೇಳಲಾಗಿದೆ.

Downtown Jaipur

ಮೊಸಳೆಗಳನ್ನು ಸಾಕಲು ಕಟ್ಟಿಸಿದ ಮೊಸಳೆ ಕೊಳ ಇನ್ನೊಂದು ವೈಶಿಷ್ಟ್ಯ. 1876ರಲ್ಲಿ ಸ್ವಿಂಟನ್ ಜೇಕಬ್ ರಚಿಸಿದ ಆಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಹಿಂದೂ-ಮುಸ್ಲಿಂ ಶಿಲ್ಪಶೈಲಿಗಳು ಸಂಗಮಿಸಿವೆ. ರಜಪೂತ ದೊರೆಗಳು ಬಳಸುತ್ತಿದ್ದ ಆಯುಧಗಳು ಮತ್ತು ವೇಷಭೂಷಣಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ವೈರಿಗಳ ಆಗಮನವನ್ನು ದೂರದಿಂದಲೇ ಗೊತ್ತು ಮಾಡಿಕೊಳ್ಳುವ ಹಂಚಿಕೆಗಾಗಿ ಮಹಾರಾಜ ಇತಾರೀ ಸಿಂಗ್ ಕಟ್ಟಿಸಿದ ಸ್ವರ್ಗಶೂಲಿ ಜಯಪುರದ ಮತ್ತೊಂದು ಮುಖ್ಯ ಅಕರ್ಷಣೆ. ಅಮರ ಮಹಲ್, ನಹರ್‍ಗಡ್, ಸಂಗಾನೇರ ಜೈನಮಂದಿರ-ಇವು ಇತರ ಕೆಲವು ಕಟ್ಟಡಗಳು. ನಗರದೊಳಗಿನ ಪ್ರಮುಖ ಸ್ಥಳಗಳಲ್ಲಿ ರಜಪೂತ ದೊರೆಗಳ ಶಿಲಾಪ್ರತಿಮೆಗಳು ಎದ್ದು ಕಾಣುತ್ತವೆ. ಜಯಪುರದ ಹತ್ತಿರದಲ್ಲಿರುವ ಅಂಬರ್ ಬೆಟ್ಟದಲ್ಲಿ ಪ್ರಾಚೀನ ರಾಜಧಾನಿಯ ಅವಶೇಷಗಳಿವೆ. ಜಯಪುರದಿಂದ ಪಶ್ಚಿಮಕ್ಕೆ 65 ಕಿಮೀ. ದೂರದಲ್ಲಿರುವ ಸಾಂಭಾರ್ ಸರೋವರ ರಮ್ಯವಾದ್ದು. ಜಯಪುರದಲ್ಲಿ 1947ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

ಹಬ್ಬಗಳು ಮತ್ತು ಮೇಳಗಳು

[ಬದಲಾಯಿಸಿ]

ಅರಮನೆಗಳು ಮತ್ತು ಕೋಟೆಗಳ ಹೊರತಾಗಿ ಜೈಪುರದ��್ಲಿನ ಹಬ್ಬಗಳು ಮತ್ತು ಮೇಳಗಳೂ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ಮೇಳಗಳಲ್ಲಿ ಒಂದೆಂದರೆ ಜೈಪುರ ವಿಂಟೇಜ್ ಕಾರ್ ರ್ಯಾಲಿ. ಇದನ್ನು ಜನವರಿಯಲ್ಲಿ ನಡೆಸಲಾಗುತ್ತದೆ. ಇತ್ತೀಚೆಗೆ ಈ ಮೇಳವು ತುಂಬಾ ಜನಪ್ರಿಯವಾಗುತ್ತಿದೆ. ಕಾರು ಪ್ರಿಯರು ಮರ್ಸಿಡಿಸ್‌, ಆಸ್ಟಿನ್‌ ಮತ್ತು ಫಿಯೆಟ್‌ನ ವಿವಿಧ ಮಾದರಿಯ ಕಾರುಗಳನ್ನು ನೋಡಬಹುದು. ಇಲ್ಲಿನ ಕೆಲವು ಕಾರುಗಳು 1900ರದ್ದಾಗಿರುವುದು ಗಮನಾರ್ಹ.ಇನ್ನೊಂದು ಜನಪ್ರಿಯ ಮೇಳವೆಂದರೆ ಆನೆ ಉತ್ಸವ. ಹೋಳಿ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆನೆಯ ವಿವಿಧ ಆಟಗಳನ್ನೂ ನೋಡಬಹುದು. ಇದರ ಜೊತೆಗೆ, ಗಂಗಾರ್ ಹಬ್ಬ ಕೂಡಾ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ. ಗನ್‌ ಎಂದರೆ ಶೀವ, ಗೌರ್ ಎಂದರೆ ಶಿವನ ಪತ್ನಿ ಪಾರ್ವತಿ. ಈ ಹಬ್ಬವು ಮದುವೆಯ ಬಂಧದ ಬಗ್ಗೆ. ಇನ್ನೂ ಕೆಲವು ಜನಪ್ರಿಯ ಹಬ್ಬಗಳು ಮತ್ತು ಮೇಳಗಳೆಂದರೆ ಭಂಗಾಂಗ ಮೇಳ, ತೀಜ್‌, ಹೋಳಿ ಮತ್ತು ಚಕ್ಸು ಮೇಳ. ಅವಕಾಶಗಳುಸಾಹಸೀ ಪ್ರವೃತ್ತಿಯವರು ಒಂಟೆ ಸವಾರಿ, ಬಿಸಿ ಗಾಳಿ ಬಲೂನಿಂಗ್‌, ಪ್ಯಾರಾಗ್ಲೈಡಿಂಗ್‌ ಮತ್ತು ರಾಕ್‌ ಕ್ಲೈಂಬಿಂಗ್‌ನ್ನು ಮಾಡಬಹುದು. ಕರೌಲಿ ಮತ್ತು ರಣಥಂಬೋರ್ ನ್ಯಾಷನಲ್‌ ಪಾರ್ಕ್‌ಗೆ ಉತ್ಸಾಹಿಗಳು ಪ್ರವಾಸ ಕೈಗೊಳ್ಳಬಹುದು.ಪ್ರವಾಸಿಗರು ಜೈಪುರದಲ್ಲಿ ಶಾಪಿಂಗ್‌ ಮಾಡುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಆಭರಣಗಳು, ಕಾರ್ಪೆಟ್‌ಗಳು, ಮಡಿಕೆಗಳು ಮತ್ತು ಹರಳುಗಳ ಮಾರುಕಟ್ಟೆ ಹೆಚ್ಚು ಪ್ರಚಲಿತವಾಗಿದೆ. ಪ್ರವಾಸಿಗರು ಕರಕುಶಲ ಸಾಮಗ್ರಿಗಳನ್ನು, ಕಲಾಕೃತಿಗಳನ್ನು, ಅಪ್ಯಾರೆಲ್‌ಗಳನ್ನು ಮತ್ತು ಬ್ರಾಂಡೆಡ್‌ ಬಟ್ಟೆಗಳನ್ನು ಎಮ್‌ಐ ರಸ್ತೆಯಲ್ಲಿ ಖರೀದಿಸಬಹುದು. ಜೈಪುರದ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಸಂದಭದಲ್ಲಿ ಬಾರ್ಗೇನ್‌ ಮಾಡುವುದು ಅತ್ಯಗತ್ಯ. ಆಹಾರಗಳು

ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ತಿಂಡಿಗಳಿಗೆ ಈ ನಗರ ಜನಪ್ರಿಯವಾಗಿದೆ. ದಾಲ್‌ ಬಾತಿ-ಕೂರ್ಮಾ, ಪ್ಯಾಜ್‌ ಕಿ ಕಚೋರಿ, ಕಬಾಬ್‌, ಮುರ್ಗ್‌ ಕೋ ಖಾತೋ ಮತ್ತು ಅಚಾರಿ ಮುರ್ಗ್‌ ಮುಂತಾದವುಗಳು ಇಲ್ಲಿನ ಕೆಲವು ಪ್ರಸಿದ್ಧ ತಿನಿಸುಗಳು. ನೆಹ್ರು ಬಜಾರ್ ಮತ್ತು ಜೋಹಾರಿ ಬಜಾರಿನಲ್ಲಿ ಆಹಾರ ಪ್ರಿಯರು ಈ ತಿನಿಸಉಗಳನ್ನು ಸವಿಯಬಹುದು. ಇಲ್ಲಿನ ರಸ್ತೆಗಳು, ರಸ್ತೆಬದಿಯ ಆಹಾರಕ್ಕೆ ಹೆಚ್ಚು ಜನಪ್ರಿಯವಾಗಿದೆ. ಘೇವಾರ್, ಮಿಶ್ರಿ ಮಾವಾ ಮತ್ತು ಮವಾ ಕಚೋರಿಯಂತ ಸ್ಥಳೀಯ ಸಿಹಿ ತಿನಿಸುಗಳೂ ಕೂಡಾ ಭಾರತದಲ್ಲೇ ಪ್ರಸಿದ್ಧವಾದದ್ದು. ಜೈಪುರಕ್ಕೆ ಹೋಗುವುದು

ಸಂಪರ್ಕ

[ಬದಲಾಯಿಸಿ]
Jaipur BRTS
Jaipur Metro
Jaipur International Airport

ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಭಾರತದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಸಂಗಾನೇರ್ ವಿಮಾನ ನಿಲ್ದಾಣವಿದೆ. ಇದನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣವು ಮುಂಬಯಿ ಚಂಡೀಗಢ, ದೆಹಲಿ ಮತ್ತು ಹೈದರಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ. ಜೈಪುರ ರೈಲ್ವೇ ನಿಲ್ದಾಣವು ಭಾರತದ ಬಹುತೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಿಗೆ ಪ್ರವಾಸಿಗರು ರಾಜಸ್ಥಾನ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನಿಂದ ಬಸ್‌ಗಳನ್ನು ಪಡೆಯಬಹುದು. ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ನಗರದಲ್ಲಿ ಪ್ರವಾಸಿಗರು ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್‌ ಲಿಮಿಟೆಡ್‌ನ ಸಾರಿಗೆ ಬಸ್‌ಗಳನ್ನು ಪ್ರಯಾಣಕ್ಕೆ ಅವಲಂಬಿಸಬಹುದು.

ಹವಾಮಾನ

[ಬದಲಾಯಿಸಿ]

ವರ್ಷಂಪ್ರತಿ ಈ ಪ್ರದೇಶವು ಅತಿ ಉಷ್ಣ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಎಷ್ಟು ಉಷ್ಣತೆಯಿರುತ್ತದೆಯೋ ಅಷ್ಟೇ ತಂಪು ವಾತಾವರಣ ಚಳಿಗಾಲದಲ್ಲಿರುತ್ತದೆ. ಪ್ರವಾಸಿಗರು ಬೇಸಿಗೆಕಾಲದಲ್ಲಿ ಜೈಪುರಕ್ಕೆ ಭೇಟಿ ನೀಡುವುದಾದರೆ ಬಟ್ಟೆಗಳು, ಟೊಪ್ಪಿಗಳು ಮತ್ತು ಸನ್‌ಸ್ಕ್ರೀನ್‌ಗಳನ್ನು ತರಬೇಕಾಗಿರುವುದು ಅಗತ್ಯ. ಮಾರ್ಚ್‌ ನಿಂದ ಅಕ್ಟೋಬರಿನ ಅವಧಿಯು ಪಿಂಕ್‌ ಸಿಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ.

ಜೈಪುರ (Jaipur Airport)ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 31.7
(89.1)
36.7
(98.1)
42.8
(109)
44.9
(112.8)
48.5
(119.3)
47.2
(117)
46.7
(116.1)
41.7
(107.1)
41.7
(107.1)
40.0
(104)
36.1
(97)
31.3
(88.3)
48.5
(119.3)
ಅಧಿಕ ಸರಾಸರಿ °C (°F) 22.4
(72.3)
25.0
(77)
31.0
(87.8)
37.1
(98.8)
40.3
(104.5)
39.3
(102.7)
34.1
(93.4)
32.4
(90.3)
33.8
(92.8)
33.6
(92.5)
29.2
(84.6)
24.4
(75.9)
31.9
(89.4)
ಕಡಮೆ ಸರಾಸರಿ °C (°F) 8.4
(47.1)
10.8
(51.4)
16.0
(60.8)
21.8
(71.2)
25.9
(78.6)
27.4
(81.3)
25.8
(78.4)
24.7
(76.5)
23.2
(73.8)
19.4
(66.9)
13.8
(56.8)
9.2
(48.6)
18.8
(65.8)
Record low °C (°F) −2.2
(28)
−2.2
(28)
3.3
(37.9)
9.4
(48.9)
15.6
(60.1)
19.1
(66.4)
20.6
(69.1)
18.9
(66)
15.0
(59)
11.1
(52)
3.3
(37.9)
0.0
(32)
−2.2
(28)
Average precipitation mm (inches) 7.0
(0.276)
10.6
(0.417)
3.1
(0.122)
4.9
(0.193)
17.9
(0.705)
63.4
(2.496)
223.3
(8.791)
205.9
(8.106)
66.3
(2.61)
25.0
(0.984)
3.9
(0.154)
4.2
(0.165)
635.4
(25.016)
Average rainy days 0.6 1.0 0.4 0.7 1.4 3.9 11.2 10.0 3.8 1.3 0.4 0.4 35.2
Source: India Meteorological Department (record high and low up to 2010)[][]

ವಾಣಿಜ್ಯ

[ಬದಲಾಯಿಸಿ]

ಜಯಪುರದ ಗುಡಿಗಾರಿಕೆ ಮತ್ತು ಇತರ ಕೈಕಸಬುಗಳು ಪ್ರಸಿದ್ಧವಾಗಿವೆ. ಬಾಂಧನೀ ಸೀರೆಗಳ ತಯಾರಿಕೆ, ಬಟ್ಟೆಗಳ ಮೇಲೆ ಚಿನ್ನದ ಅಚ್ಚು ಹಾಕುವುದು. ಎನಾಮೆಲ್ ಕೆಲಸ, ಕುಂದಣಗೆಲಸ, ಹರಳುಗಳ ತಯಾರಿಕೆ, ಕಬ್ಬಿಣ ಉಕ್ಕು ಹಿತ್ತಾಳೆ ಮತ್ತು ತಾಮ್ರ ವಸ್ತುಗಳ ಮೇಲೆ ಚಿಕನ್, ಮರೋರಿ ಮತ್ತು ಬೀಚಿ ಚಿತ್ರ ಕೊರೆತ, ಕತ್ತಿ-ಕಠಾರಿಗಳ ತಯಾರಿಕೆ-ಇವು ಮುಖ್ಯ ಕೈಕಸಬುಗಳು. ರಜಪೂತ ಶೈಲಿಯ ಬಳೆಗಳು, ಪಾದರಕ್ಷೆಗಳು, ಮಡಕೆಗಳು, ದಂತದ ಮತ್ತು ಶ್ವೇತ ಶಿಲೆಯ ಆಟಿಗೆ ಮತ್ತು ಮೂರ್ತಿಗಳು ಜಯಪುರದ ಮನೆಮನೆಯಲ್ಲೂ ಕಾಣಸಿಗುತ್ತಿವೆ. ಇವಕ್ಕೆ ದೇಶದ ವಿವಿಧ ಭಾಗಗಳಲ್ಲಿ ಬೇಡಿಕೆಯುಂಟು. ರಾಜಸ್ಥಾನದ ಇತರ ಭಾಗಗಳಿಂದಲೂ ದಿಲ್ಲಿ-ವಾರಾಣಸಿಗಳಿಂದಲೂ ಕಸುಬುದಾರರು ಬಂದು ಜಯಪುರದಲ್ಲಿ ನೆಲೆಸಿದ್ದಾರೆ.

ಜಯಪುರ ಜಿಲ್ಲೆ

[ಬದಲಾಯಿಸಿ]

ಜಯಪುರ ಜಿಲ್ಲೆ ಉ.ಆ. 26023-27051 ಮತ್ತು ಪೂ.ರೇ. 74055-76050 ನಡುವೆ ಇದೆ. ಈ ಜಿಲ್ಲೆಯ ಉತ್ತರಕ್ಕೆ ರಾಜಸ್ಥಾನದ ಶಿಕಾರ್ ಜಿಲ್ಲೆ ಮತ್ತು ಹರಿಯಾಣ, ದಕ್ಷಿಣಕ್ಕೆ ರಾಜಸ್ಥಾನದ ಟೋಂಕ್ ಜಿಲ್ಲೆ, ಪೂರ್ವಕ್ಕೆ ಆಳ್ವಾರ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳು, ಪಶ್ಚಿಮಕ್ಕೆ ನಾಗೌರ್ ಮತ್ತು ಅಜ್ಮೀರ್ ಜಿಲ್ಲೆಗಳು ಇದರ ಮೇರೆಗಳು. ಇಡೀ ರಾಜ್ಯದ 4.1% ರಷ್ಟು ಕ್ಷೇತ್ರ ಆವರಿಸಿರುವ ಈ ಜಿಲ್ಲೆಯ ವಿಸ್ತೀರ್ಣ 5,393 ಚ.ಮೈ.; ಜನಸಂಖ್ಯೆ 24,82,385 (1971). ಜಿಲ್ಲೆಯ ನೆಲ ಕಂದು ಮತ್ತು ಬೂದಿಬಣ್ಣದ ಉಸುಕು ಮಣ್ಣಿನಿಂದ ಕೂಡಿ ಫಲವತ್ತಾಗಿದೆ. ಬಂಗಾಂಗಾ, ಧೂಂಡ್, ಮೊರೆಲ್, ಮಾಸಿ ಮುಂತಾದ ನದಿಗಳ ನೀರಿನ ಆಸರೆ ಉಂಟು. ವರ್ಷಕ್ಕೆ ಸರಾಸರಿ 25-50 ಸೆಂಮೀ. ಮಳೆ ಆಗುತ್ತದೆ. ಇಲ್ಲಿಯ ಕನಿಷ್ಠ ಸರಾಸರಿ ಉಷ್ಣತೆ 15.00-17.50 ಸೆಂ., ಗರಿಷ್ಠ ಸರಾಸರಿ ಉಷ್ಣತೆ 30.00-32.50 ಸೆಂ. ಅರಾವಲೀ ಬೆಟ್ಟದ ಕೆಲವು ಭಾಗಗಳು ಈ ಜಿಲ್ಲೆಯಲ್ಲಿ ಜಾಚಿವೆ. ಬೆಲೆಬಾಳುವ ಹರಳುಗಳು, ಸುಣ್ಣಕಲ್ಲು, ಕಬ್ಬಿಣ ಅದುರು, ಗಾಜು ತಯಾರಿಕೆಗೆ ಉಪಯುಕ್ತವಾದ ಮರಳು ಈ ಜಿಲ್ಲೆಯಲ್ಲಿ ವಿಪುಲವಾಗಿ ದೊರೆಯುತ್ತವೆ; ಬೆಟ್ಟಗಳನ್ನು ಆವರಿಸಿರುವ ಕಾಡಿನ ಮರಗಳು ಸೌದೆಗೆ ಮಾತ್ರ ಉಪಯುಕ್ತ. ಸಾಂಭಾರ್ ಸರೋವರದಲ್ಲಿ ಉಪ್ಪು ತಯಾರಾಗುತ್ತದೆ. ನಕ್ಕಿ ಬಟ್ಟೆ, ಬಾಂಧನೀ ಸೀರೆಗಳು, ದಂತದ ಆಟಿಗೆಗಳು, ಶ್ವೇತ ಶಿಲಾಮೂರ್ತಿಗಳು ಹಿತ್ತಾಳೆಯ ಪಾತ್ರೆಗಳು ಈ ಜಿಲ್ಲೆಯಲ್ಲಿ ಉತ್ಪಾದನೆಯಾಗುವ, ಇಲ್ಲಿಂದ ರಫ್ತಾಗುವ ಸರಕುಗಳು.

ಇತಿಹಾಸ

[ಬದಲಾಯಿಸಿ]

ಜಯಪುರವನ್ನು ಮೊದಲು ಕಛವಾ ವಂಶದ ರಜಪೂತ ದೊರೆಗಳು ಆಳುತ್ತಿದ್ದರು. 1857ರ ಬಂಡಾಯದ ಸಮಯದಲ್ಲಿ ಜಯಪುರ ಸಂಸ್ಥಾನದ ದೊರೆ ಬ್ರಿಟಿಷರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಅವನ ಸಂಸ್ಥಾನಕ್ಕೆ ಹೆಚ್ಚಿನ ಪ್ರದೇಶಗಳು ಸೇರಿದುವು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಯಪುರವನ್ನಾಳುತ್ತಿದ್ದವರು ಮಹಾರಾಜ ಸವಾಯ್ ಮಾನ್‍ಸಿಂಗ್. 1949ರ ಮಾರ್ಚ್ 30ರಂದು ಜಯಪುರ ಸಂಸ್ಥಾನ ರಾಜಸ್ಥಾನದಲ್ಲಿ ವಿಲೀನಗೊಂಡಿತು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "District Census Handbook - Jaipur" (PDF). Census of India. p. 30.
  2. "Provisional Population Totals, Census of India 2011; Cities having population 1 lakh and above" (PDF). Office of the Registrar General & Census Commissioner, India.
  3. "Jaipur Climatological Table Period: 1971–2000". India Meteorological Department. Archived from the original on 2015-04-02. Retrieved 2017-03-19.
  4. "Ever recorded Maximum and minimum temperatures up to 2010" (PDF). India Meteorological Department. Archived (PDF) from the original on 21 ಮೇ 2013. Retrieved 19 ಮಾರ್ಚ್ 2017. {{cite web}}: Unknown parameter |deadurl= ignored (help)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೈಪುರ&oldid=1234939" ಇಂದ ಪಡೆಯಲ್ಪಟ್ಟಿದೆ