ವಿಷಯಕ್ಕೆ ಹೋಗು

ಗೇಟ್‍ವೇ ಆಫ್ ಇಂಡಿಯ, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೇಟ್ವೇ ಆಫ್ ಇಂಡಿಯಾ
ಭಾರತದ ಗೇಟ್ವೇ
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿಇಂಡೋ-ಸಾರ್ಸೆನಿಕ್
ಸ್ಥಳಮುಂಬೈ, ಮಹಾರಾಷ್ಟ್ರ
ನಿರ್ದೇಶಾಂಕ18°55′19″N 72°50′05″E / 18.9219°N 72.8346°E / 18.9219; 72.8346
ನಿರ್ಮಾಣ ಪ್ರಾರಂಭವಾದ ದಿನಾಂಕ31 ಮಾರ್ಚ್ 1913
ಪೂರ್ಣಗೊಂಡಿದೆ1924
ಉದ್ಘಾಟನೆ4 ಡಿಸೆಂಬರ್ 1924
ಬೆಲೆ 2.1 million (1913)
ಮಾಲೀಕಭಾರತೀಯ ಪುರಾತತ್ವ ಇಲಾಖೆ
ಎತ್ತರ26 m (85 ft)
Dimensions
ವ್ಯಾಸ15 metres (49 feet)
Design and construction
ವಾಸ್ತುಶಿಲ್ಪಿಜಾರ್ಜ್ ವಿಟ್ಟೇಟ್
ವಾಸ್ತುಶಿಲ್ಪ ಸಂಸ್ಥೆಗ್ಯಾಮನ್ ಇಂಡಿಯಾ
Renovating team
ವಾಸ್ತುಶಿಲ್ಪಿGeorge Wittet

ಗೇಟ್‌ವೇ ಆಫ್ ಇಂಡಿಯಾ ಭಾರತದ ಮುಂಬಯಿ ನಗರದಲ್ಲಿರುವ ಬ್ರಿಟಿಷ್ ಆಡಳಿತವನ್ನು ನೆನಪಿಗೆ ತರುವ ಸ್ಮಾರಕಗಳಲ್ಲೊಂದು. ಡಿಸೆಂಬರ್ ೧೯೧೧ ರಲ್ಲಿ ಇಂಗ್ಲೆಂಡಿನ ರಾಜ, ಕಿಂಗ್ ಜಾರ್ಜ್-೫ ಮತ್ತು ಕ್ವೀನ್ ಮೇರಿ, ದೆಹಲಿ ದರ್ಬಾರ್ ನಲ್ಲಿ ಭಾಗವಹಿಸಲು ಹಡಗಿನಲ್ಲಿ ಮುಂಬಯಿಗೆ ಬಂದಿಳಿದು ಬೊಂಬಾಯಿನ 'ಬ್ರಿಟಿಷ್ ಗವರ್ನರ್' ಹಾಗೂ ಸಂಬಂಧಿತ ಅಧಿಕಾರಿಗಳನ್ನು ಭೇಟಿಮಾಡಿದ ಸ್ಮರಣಾರ್ಥವಾಗಿ ಇದನ್ನು ಕಟ್ಟಲಾಯಿತು. [೧]

'೫ ನೇ ಕಿಂಗ್ ಜಾರ್ಜ್,' 'ಗೇಟ್ ವೇ ಆಫ್ ಇಂಡಿಯ'ದಲ್ಲಿ ಬಂದಿಳಿದಿದ್ದರು

[ಬದಲಾಯಿಸಿ]

'ವಿಕ್ಟೋರಿಯಾ ಮಹಾರಾಣಿಯ ಮೊಮ್ಮಗ,' 'ಗ್ರೇಟ್ ಬ್ರಿಟನ್ ನ ಸಾಮ್ರಾಟ', ೫ ನೇ ಕಿಂಗ್ ಜಾರ್ಜ್, ಹಾಗೂ, 'ಕ್ವೀನ್ ಮೇರಿ', ಈ ದ್ವಾರದಿಂದಲೇ ಬೊಂಬಾಯಿಗೆ ಬಂದಿಳಿದರು.' [] ದೆಹಲಿ ದರ್ಬಾರ್' ಗೆ ೧೮೭೭ (ವಿಕ್ಟೋರಿಯ ಮಹಾರಾಣಿಯವರು ಭಾರತಕ್ಕೂ ��ಕ್ರವರ್ತಿನಿಯಾದರೆಂಧು ಘೋಷಿಸಿದಾಗ), ೧೯೦೩(ಕಿಂಗ್ ಎಡ್ವರ್ಡ್-೭, ಪಟ್ಟಾಭಿಷಿಕ್ತನಾದಾಗ) ಮತ್ತು ೧೯೧೧ ರಲ್ಲಿ(ಕಿಂಗ್ ಜಾರ್ಜ್-೫ ಅಧಿಕಾರಕ್ಕೆ ಬಂದ ಸಮಯದಲ್ಲಿ) ಇಂಗ್ಲೆಂಡ್ ನ ರಾಜ ಮನೆತನಕ್ಕೆ ಭಾರತ ಆಹ್ವಾನವನ್ನು ಕಳಿಸಿತ್ತು.

ಆದರೆ ಇಂಗ್ಲೆಂಡ್ ನ ರಾಣಿ, ವಿಕ್ಟೋರಿಯರವರು, ತಮ್ಮ ಪತಿಯ ವಿಯೋಗದಿಂದ ಶೋಕತಪ್ತರಾಗಿ, ಆಸಕ್ತಿಯನ್ನು ಕಳೆದುಕೊಂಡಿದ್ದರು. ಆದರೆ, ಕಿಂಗ್ ಎಡ್ವರ್ಡ್-೭ ರವರು, ಬಹಳ ಹಿಂದೆ, ಅಂದರೆ, ಸನ್, ೧೮೭೫ ರಲ್ಲಿ ಇನ್ನೂ ಪ್ರಿನ್ಸ್ ಆಫ್ ವೇಲ್ಸ್ ಪದವಿಯಲ್ಲಿದ್ದಾಗ, ಅವರ ತಾಯಿ, ವಿಕ್ಟೋರಿಯ ಮಹಾರಾಣಿಯವರು, ಭಾರತ ಉಪಖಂಡವನ್ನು ಸುತ್ತಿಬರಲು ಅವರನ್ನು ಕಳಿಸಿಕೊಟ್ಟಿದ್ದರು. ಕಿಂಗ್ ಎಡ್ವರ್ಡ್-೭ ರವರ ಪುತ್ರ 'ಕಿಂಗ್ ಜಾರ್ಜ್-೫,ರೇ ಮುಂದೆ ಅವರ ಬಳಿಕ ಬ್ರಿಟನ್ ನ ಚಕ್ರವರ್ತಿಯಾಗಿ ಸಿಂಹಾಸನವನ್ನೇರಿದರು. ಕಿಂಗ್ ಜಾರ್ಜ್-೫ ರವರು ೧೯೦೫ ರಲ್ಲಿ, ಇನ್ನೂ ಪ್ರಿನ್ಸ್ ಆಫ್ ವೇಲ್ಸ್ ಆಗಿದ್ದಾಗಲೇ ಭಾರತಕ್ಕೆ ಭೇಟಿಕೊಟ್ಟಸಮಯದಲ್ಲಿ ಬೊಂಬಾಯಿಗೂ ಬಂದಿದ್ದರು.'indoexpedition.com', 'ATTRACTIONS of GATE WAY OF INDIA' Archived 2014-03-29 ವೇಬ್ಯಾಕ್ ಮೆಷಿನ್ ನಲ್ಲಿ.

ಕಿಂಗ್ ಜಾರ್ಜ್-೫ ರವರು ಶಿಲಾನ್ಯಾಸ ಮಾಡಿದ್ದರು

[ಬದಲಾಯಿಸಿ]

ಗೇಟ್ ವೇ ಆಫ್ ಇಂಡಿಯ ಕಟ್ಟಡಕ್ಕೆ ಸಮೀಪದಲ್ಲಿರುವ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ(ಈಗಿನ ಹೆಸರು,ಛತ್ರಪತಿ ಶಿವಾಜಿಮಹಾರಾಜ್ ವಸ್ತುಸಂಗ್ರಹಾಲಯ)ದ ಶಿಲಾನ್ಯಾಸ ಮಾಡಿ ತೆರಳಿದ್ದರು. ಆಗಿನ ಕಾಲದ ವಿಖ್ಯಾತ ಬ್ರಿಟಿಷ್ ಕಟ್ಟಡ ನಿರ್ಮಾಪಕ,'ಜಾರ್ಜ್ ವಿಟೆಟ್ ' ರವರು, ಸಿದ್ಧಪಡಿಸಿ ಒಪ್ಪಿಸಿದ ಹಲವಾರು 'ನೀಲನಕ್ಷೆ' ಗಳಲ್ಲಿ ಕೊನೆಯ ನಕ್ಷೆಗೆ, ಆಗಸ್ಟ್ ೧೯೧೪ ರಂದು ಒಪ್ಪಿಗೆ ಕೊಡಲಾಯಿತು. ೧೯೧೫ ಮತ್ತು ೧೯೧೯ರ ಮಧ್ಯೆ ಗೇಟ್ ವೇ ಆಫ್ ಇಂಡಿಯ ಕಟ್ಟಡದ ಕೆಲಸ ಶುರುವಾಯಿತು. ಇದಕ್ಕೆ ಪೂರ್ವ ಸಿದ್ಧತೆ ಯಾಗಿ, ಮೊದಲು ಇದರ ಶಿಲಾನ್ಯಾಸವನ್ನು ಮಾರ್ಚ್ ೩೧, ೧೯೧೧ ಕ್ಕೆ, ಆಗಿನ ಬೊಂಬಾಯಿನ ಗವರ್ನರ್, ಸರ್ ಜಾರ್ಜ್ ಸಿಢ್ ನಮ್ ಕ್ಲಾರ್ಕ್ ರವರ ಹಸ್ತದಿಂದ ಮಾಡಲಾಗಿತ್ತು.

ಅಧಿಕಾರಿಗಳು 'ಆಪ್ಪೊಲೊ ಪಿಯರ್' ನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಆ ಜಾಗದ ಮೇಲೆ, ಸಮುದ್ರಕ್ಕೆ ಹೊಸದಾದ ಹಾಗೂ ಭದ್ರವಾದ ತಳಪಾಯದ ಗೋಡೆಯನ್ನು, ನಿರ್ಮಿಸಲಾಯಿತು. ಅದರಮೇಲೆ ಕಟ್ಟಡವೂ ನಿರ್ಮಾಣವಾಯಿತು. ಭಾರತದಲ್ಲಿ ವಿಕ್ಟೋರಿಯ ಮಹಾರಾಣಿ ಯ ತರುವಾಯ ಬ್ರಿಟಿಷ್ ಸಾಮ್ರಾಜ್ಯದ ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ನವದೆಹಲಿಗೆ ಬದಲಾಯಿಸಿ, ಅಲ್ಲಿ ಒಂದು ಸುಂದರವಾದ ಭವನವನ್ನು ನಿರ್ಮಿಸಲು ೧೫, ಡಿಸೆಂಬರ್, ೧೯೧೧ ರಂದು ದೆಹಲಿ ದರ್ಬಾರ್ ಸಮಾರಂಭದ ಸಮಯದಲ್ಲಿ ರಾಜಾಜ್ಞೆಯನ್ನು ಕಿಂಗ್ ಜಾರ್ಜ್-೫ ಎಲ್ಲರ ಮುಂದೆ, ಘೋಷಿಸಿದರು. ಹೀಗೆ ಭಾರತದಲ್ಲಿ ಇಂಗ್ಲೀಷರು ಪ್ರಬಲರಾಗಿ ಬೆಳೆದರು.[]

ಚಿತ್ರ:H 068.JPG
'ಅರಬ್ಬಿ ಸಮುದ್ರದಮೇಲೆ ನಾವೆಯಲ್ಲಿ ಬರುವಾಗ ಮುಂಬಯಿನ ಗೇಟ್ವೇ ಇಂಡಿಯದ ದೃಶ್ಯ

ಇದೇ ದ್ವಾರ, ಮುಂದೆ, ಬ್ರಿಟಿಷರ ನಿರ್ಗಮದ ದ್ವಾರವಾಯಿತು

[ಬದಲಾಯಿಸಿ]

ಸನ್ ೧೯೪೮ ರ, ೨೮ ನೇ ಫೆಬ್ರವರಿ, ಅವರಿಗಾಗಿ ಆಯೋಜಿಸಿದ್ದ ಕೊನೆಯ ವಿದಾಯ ಸಮಾರಂಭ ಜರುಗಿದ ಬಳಿಕ, 'ಬ್ರಿಟಿಷ್ ಸೈನ್ಯದ ಅಂತಿಮ ಟುಕಡಿ,' ಈ ದ್ವಾರದಿಂದಲೇ ಸಾಗಿ, ಹಡಗಿನಲ್ಲಿ ಕುಳಿತು ಭಾರತವನ್ನು ಬಿಟ್ಟುಹೋಯಿತು.[೨]

ಕಟ್ಟಡ ನಿರ್ಮಾಣ

[ಬದಲಾಯಿಸಿ]

೧೯೨೦ ರ ಹೊತ್ತಿಗೆ ಕಟ್ಟಡಕ್ಕೆ ಅಗತ್ಯವಾಗಿದ್ದ ೩೭ ಅಡಿ ಎತ್ತರದ ಆರ್.ಸಿ.ಸಿ ಯಲ್ಲಿ ಕಟ್ಟಿದ ಭಾರೀ ಗೋಡೆಯನ್ನು ಸಮುದ್ರದಲ್ಲಿ ಮುಳುಗಿಸಿ, ಒಂದು ಗಟ್ಟಿ ತಳಪಾಯವನ್ನು ಸಿದ್ಧ ಮಾಡಲಾಯಿತು. ಕಟ್ಟಡಕ್ಕೆ ಹಳದಿ ಬಣ್ಣದ 'ಖೊರಾಡಿ ಬಾಸಾಲ್ಟ್' ಕಲ್ಲನ್ನು ಉಪಯೋಗಿಸಿ ಕೊಂಡು, ಆರ್.ಸಿ.ಸಿಯ ಜೊತೆಗೆ ಸೇರಿಸಿಕೊಂಡು ಕಟ್ಟಿದ್ದಾರೆ. ಆರ್.ಸಿ.ಸಿಯ ಉಪಯೋಗದ ಅರಿವು ಹೆಚ್ಚಾದಂತೆ, ಕಟ್ಟಡ ನಿರ್ಮಾಣಕಾರ್ಯ ಸುಗಮವಾಯಿತು. 'ಇಂಡೊ ಸರಸೆನಿಕ್' ಶೈಲಿಯಲ್ಲಿ ನಿರ್ಮಿಸಿದ, ಕಲ್ಲಿನ ಕಟ್ಟಡದ ಮಧ್ಯದ ಗೋಳಾಕೃತಿಯ ವರ್ತುಲ, ೪೮ ಅಡಿ ವ್ಯಾಸವಿದೆ. ಭೂಮಿಯಿಂದ, ಕಲಶದ ತುದಿಯವರೆಗೆ ೮೩ ಅಡಿ ಎತ್ತರವಿದೆ. ಇದಕ್ಕೆ ತಗುಲಿದ, ೨೧ ಲಕ್ಷ ರೂಪಾಯಿಗಳ ಖರ್ಚನ್ನು ಬ್ರಿಟಿಷ್ ಸರ್ಕಾರ ವಹಿಸಿಕೊಂಡಿತು.

ಹಣದ ಮುಗ್ಗಟ್ಟಿನಿಂದಾಗಿ, ಈ ಭವ್ಯ ಕಟ್ಟಡಕ್ಕೆ ಹೊಂದುವಂತಹ ತಕ್ಕ 'ರಸ್ತೆಯ ನಿರ್ಮಾಣ,' ಮಾಡಲಾಗಲಿಲ್ಲ. ಅದೂ ಅಲ್ಲದೆ, ಈಗಿನ ರಸ್ತೆಯೂ ನೇರವಾಗಿ, ಅದಕ್ಕೆ ಶೋಭೆಕೊಡುವಂತೆ ರಚನೆಯಾಗಿಲ್ಲವೆಂಬುದು ತಜ್ಞರ ಅಭಿಪ್ರಾಯ. ೧೯೨೪,ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಗಿಯಿತು. ಕಟ್ಟಡದ 'ಉದ್ಘಾಟನಾ ಸಮಾರಂಭ,' ವನ್ನು ಡಿಸೆಂಬ���್ ೪, ೧೯೨೪ ರಂದು, ಅಂದಿನ ವೈಸ್ರಾಯ್ ಆಗಿದ್ದ, 'Rufus Daniel Isaacs' '(ಮುಂದೆ Rufus Isaacs),' 'ಆರ್ಲ್ ಆಫ್ ರೀಡಿಂಗ್', ರವರ ಹಸ್ತದಿಂದ ನೆರವೇರಿಸಲಾಯಿತು. ಇದಕ್ಕೆ ಮೊದಲು ಹಿಂದಿನದಿನ, ವೈಸ್ರಾಯ್ ರವರು, ಬೊಂಬಾಯಿನ ಮಾಟುಂಗಾ, ಪ್ರದೇಶದಲ್ಲಿ ಕಟ್ಟಲಾಗಿದ್ದ, 'ಹತ್ತಿ ಸಂಶೋಧನಾಲಯ,' '(Technological Laboratory)' ದ ಶುಭಾರಂಭವನ್ನು ಡಿಸೆಂಬರ್, ೩ ನೆಯತಾರೀಖು ಮಾಡಿದ್ದರು.

ಎಲಿಫೆಂಟಾ ಗುಹೆಗಳಿಗೆ ಇಲ್ಲಿಂದಲೇ ಹೋಗಬಹುದು

[ಬದಲಾಯಿಸಿ]

'ಗೇಟ್ ವೇ ಆಫ್ ಇಂಡಿಯ' ದಿಂದ 'ಬೋಟ್' ಅಥವಾ 'ಫೆರ್ರಿ'ಗಳಲ್ಲಿ ಕುಳಿತು ಸಮುದ್ರಯಾನ ಮಾಡಿ ಎಲಿಫೆಂಟಾ ಗುಹೆಗಳನ್ನು ನೋಡಿ ಬರಬಹುದು. 'ಹಳೆತಾಜ್ ಮಹಲ್' ಮತ್ತು 'ಹೊಸ ಬಹುಮಹಡಿ ತಾಜ್ ಮಹಲ್,' ಕಟ್ಟಡ ಗಳ ಎದುರಿಗೇ 'ಛತ್ರಪತಿ ಶಿವಾಜಿ ಮಹಾರಾಜ'ರು ಕುದುರೆಯ ಮೇಲೆ ಕುಳಿತ ಪುತ್ಥಳಿಯಿದೆ.

ಚಿತ್ರ ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Narrative of the visit to India of their mejesties King George v. and Queen Mary and of the coronation durbar helt at Delhi, Dec, 1911
  2. "ಆರ್ಕೈವ್ ನಕಲು". Archived from the original on 2014-03-29. Retrieved 2014-02-03.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]