ಇಯನ್ ಮುರ್ಡಾಕ್
ಈ ಲೇಖನವು ಇತ್ತೀಚೆಗೆ ತೀರಿಕೊಂಡ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ. ಈ ವ್ಯಕ್ತಿಯ ಸಾವು ಮತ್ತು ಅದರ ಸುತ್ತಲಿನ ಘಟನೆಗಳ ಬಗ್ಗೆ ಮಾಹಿತಿ ದೊರತಂತೆಲ್ಲಾ, ಕೆಲವೊಂದು ವಿಚಾರಗಳು ಬದಲಾಗಬಹುದು. |
ಇಯನ್ ಮುರ್ಡಾಕ್ | |
---|---|
ಜನನ | |
ಮರಣ | 28 December 2015 | (aged 42)
ಶಿಕ್ಷಣ ಸಂಸ್ಥೆ | ಪುರ್ಡ್ಯು ವಿಶ್ವವಿದ್ಯಾನಿಲಯ |
ವೃತ್ತಿ | ಪ್ರೋಗ್ರಾಮರ್ |
ಉದ್ಯೋಗದಾತ | ಡಾಕರ್ |
ಗಮನಾರ್ಹ ಕೆಲಸಗಳು | ಡೆಬಿಯನ್ ಗ್ನು/ಲಿನಕ್ಸ್ |
ಇಯನ್ ಮುರ್ಡಾಕ್ (28 ಏಪ್ರಿಲ್ 1973 – 28 ಡಿಸೆಂಬರ್ 2015[೧][೨]) ಅಮೇರಿಕದ ತಂತ್ರಾಂಶ ಎಂಜಿನಿಯರ್ ಆಗಿದ್ದು, ಡೆಬಿಯನ್ ಯೋಜನೆ ಮತ್ತು ಪ್ರೊಜೆನಿ ಲಿನಕ್ಸ್ ಸಿಸ್ಟಂಸ್ ಎಂಬ ವಾಣಿಜ್ಯ ಸಂಸ್ಥೆಯ ಸ್ಥಾಪಕರೆಂದೇ ಪ್ರಸಿದ್ಧರಾಗಿದ್ದರು.
ಜೀವನ ಮತ್ತು ವೃತ್ತಿ
[ಬದಲಾಯಿಸಿ]ಇಯನ್ ಆಶ್ಲೆ ಮುರ್ಡಾಕ್ ಕಾನ್ಸ್ಟಾಂಜ್, ಪಶ್ಚಿಮ ಜರ್ಮನಿಯಲ್ಲಿ 28 ಏಪ್ರಿಲ್ 1973 ರಂದು ಹುಟ್ಟಿದರು. ಅವರು ಡೆಬಿಯನ್ ಮ್ಯಾನಿಫೆಸ್ಟೋವನ್ನು ಪುರ್ಡ್ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಬರೆದರು, ಇಲ್ಲಿ ಅವರು ತಮ್ಮ ಕಂಪ್ಯೂಟರ್ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ೧೯೯೬ರಲ್ಲಿ ಪಡೆದರು. ಅವರು ಡೆಬಿಯನ್ಗೆ ತಮ್ಮ ಗೆಳತಿ ಡೆಬ್ರಾ ಲಿನ್ ಮತ್ತು ತನ್ನ ಹೆಸರನ್ನು ಜೋಡಿಸಿ ಹೆಸರಿಟ್ಟಿದ್ದರು (ಡೆಬ್ ಮತ್ತು ಇಯನ್).[೩] ಇವರಿಬ್ಬರು ನಂತರ ಮದುವೆಯಾಗಿ (೧೯೯೩ ಮತ್ತು ೧೯೯೬ರ ನಡುವೆ), 10 ಆಗಸ್ಟ್ 2007 ರಂದು ವಿಚ್ಛೇಧನಕ್ಕೆ ಅರ್ಜಿ ಹಾಕಿದರು,[೪] ಮತ್ತು ಅವರ ವಿಚ್ಛೇಧನವನ್ನು ಜನವರಿ ೨೦೦೮ರಲ್ಲಿ ನೀಡಲಾಯಿತು.[೫] ಜನವರಿ ೨೦೦೬ರಲ್ಲಿ, ಮುರ್ಡಾಕ್ ಫ್ರೀ ಸ್ಟಾಂಡರ್ಡ್ಸ್ ಗ್ರೂಪ್ನ ಮುಖ್ಯ ತಂತ್ರಜ್ಞಾನ ಮುಖ್ಯಸ್ಥರಾಗಿ ಆಯ್ಕೆಗೊಂಡರು ಮತ್ತು ಅವರನ್ನು ಲಿನಕ್ಸ್ ಸ್ಟಾಂಡರ್ಡ್ ಬೇಸ್ ಕಾರ್ಯತಂಡದ ಮುಖ್ಯಸ್ಥರನ್ನಾಗಿಯೂ ಚುನಾಯಿಸಲಾಯಿತು.[೬] ಅವರು ಫ್ರೀ ಸ್ಟಾಂಡರ್ಡ್ಸ್ ಗ್ರೂಪ್ ಮತ್ತು ಓಪನ್ ಸೋರ್ಸ್ ಡೆವೆಲಪ್ಮೆಂಟ್ ಲ್ಯಾಬ್ಸ್ ವಿಲೀನಗೊಂಡಾಗ ಸೃಷ್ಟಿಸಲಾದ ಲಿನಕ್ಸ್ ಫೌಂಡೇಷನ್ನ ಸಿಟಿಓ ಆಗಿ ಮುಂದುವರೆದರು. ಮುರ್ಡಾಕ್ ಲಿನಕ್ಸ್ ಫೌಂಡೇಷನ್ ಅನ್ನು ಬಿಟ್ಟು ಸನ್ ಮೈಕ್ರೋಸಿಸ್ಟಮ್ಸ್ ಅನ್ನು ಮಾರ್ಚ್ ೨೦೦೭ರಲ್ಲಿ [೭] ಪ್ರಾಜೆಕ್ಟ್ ಇಂಡಿಯಾನ ಮುಂದಾಳತ್ವ ವಹಿಸಲು ಸೇರಿದರು, ಇದನ್ನು ಅವರು "taking the lesson that Linux has brought to the operating system and providing that for Solaris" ಎಂದು ವಿವರಿಸುತ್ತಾರೆ, ಸಂಪೂರ್ಣ OpenSolaris ಬಿಡುಗಡೆಯನ್ನು GNOME ಮತ್ತು userland ಸಲಕರಣೆಗಳೊಂದಿಗೆ GNU ಮತ್ತು ನೆಟ್ವರ್ಕ್-ಆಧಾರಿತ ಪ್ಯಾಕೇಜ್ ಮ್ಯಾನೇಜ್ಮೆಂಟ್ ಸಿಸ್ಟಂಗಳ ಜೊತೆಗೆ ಸೃಷ್ಟಿವುದು ಇದರ ಉದ್ದೇಶವಾಗಿರುತ್ತದೆ.[೮] ಮಾರ್ಚ್ ೨೦೦೭ ರಿಂದ ಫೆಬ್ರವರಿ ೨೦೧೦ ರವರೆಗೆ, ಅವರು ಸನ್ ಮೈಕ್ರೋಸಿಸ್ಟಂಸ್ನಲ್ಲಿ ಎಮೆರ್ಜಿಂಗ್ ಪ್ಲಾಟ್ಫಾರ್ಮ್ಸ್ನ ಉಪಾಧ್ಯಕ್ಷರಾಗಿದ್ದರು,[೯] ಆರೆಕಲ್ನೊಂದಿಗೆ ಕಂಪೆನಿ ವಿಲೀನವಾಗುವವರೆಗೂ ಮತ್ತು ನಂತರ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ೨೦೧೧ ರಿಂದ ೨೦೧೫ ರ ವರೆಗೆ ಮುರ್ಡಾಕ್ ಇಂಡಿಯಾನಫೋಲೀಸ್ನ ಸೇಲ್ಸ್ಫೋರ್ಸ್ ಮಾರ್ಕೆಟಿಂಗ್ ಕ್ಲೌಡ್ನ ಪ್ಲಾಟ್ಫಾರ್ಮ್ ಮತ್ತು ಡೆವೆಲಪರ್ ಸಮುದಾಯದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು .[೧೦][೧೧] ನವೆಂಬರ್ ೨೦೧೫ರಿಂದ ತನ್ನ ಮರಣದವರೆಗೂ ಮರ್ಡಾಕ್ ಡಾಕರ್, ಇಂಕ್ಗಾಗಿ ಕಾರ್ಯನಿರ್ವಹಿಸುತ್ತಿದ್ದರು.[೧೦] ಡಿಸೆಂಬರ್ ೨೮, ೨೦೧೫ ರಂದು ತಿಳಿದ ಇವರ ಮರಣದ ಸುತ್ತಲಿನ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ. [೨] ಆದರೆ, ಅವರ ಕೊನೆಯ ಟ್ವೀಟ್ನಲ್ಲಿ ಆತ್ಮಹತ್ಯೆಯ ಇಂಗಿತವನ್ನೂ, ಮತ್ತು ಪೋಲೀಸರೊಟ್ಟಿಗಿನ ಹಿಂಸಾತ್ಮಕ ಮುಖಾಮುಖಿಗಳ ಬಗ್ಗೆ ತಿಳಿಸಿದ್ದಾರೆ.[೧೨][೧೩][೧೪] ಇವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ತಮ್ಮ ವಾಸಸ್ಥಾನದಲ್ಲಿ ಮರಣ ಹೊಂದಿದರು.[೧೫]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Golub, Ben (30 December 2015). "In Memoriam: Ian Murdock". Docker Blog. Retrieved 30 December 2015.
- ↑ ೨.೦ ೨.೧ Guerrero Lopez, Ana; Norwood, Donald; Tagliamonte, Paul (30 December 2015). "Debian mourns the passing of Ian Murdock". Bits from Debian. Retrieved 30 December 2015.
- ↑ Nixon, Robin (2010). Ubuntu: Up and Running. O'Reilly Media. p. 3. ISBN 978-0-596-80484-8.
- ↑ "Fort Wayne News-Sentinel". 5 September 2007. Archived from the original on 18 ಅಕ್ಟೋಬರ್ 2014. Retrieved 9 ಆಗಸ್ಟ್ 2021.
- ↑ "Fort Wayne News-Sentinel". 6 February 2008. Archived from the original on 1 ನವೆಂಬರ್ 2014. Retrieved 9 ಆಗಸ್ಟ್ 2021.
- ↑ "DEBIAN FOUNDER IAN MURDOCK APPOINTED CHIEF TECHNOLOGY OFFICER OF THE FREE STANDARDS GROUP AND LINUX STANDARD BASE WORKGROUP CHAIR". Free Standards Group. 31 January 2006. Archived from the original on 24 September 2006. Retrieved 31 December 2015.
- ↑ Murdock, Ian. "Joining Sun". ianmurdock.com. Archived from the original on 29 ಡಿಸೆಂಬರ್ 2015. Retrieved 31 December 2015.
- ↑ "Q and A: Sun's Top Operating System Brass Talk OS Strategy", The Unix Guardian, IT Jungle, archived from the original on 2013-03-04, retrieved 2015-12-31
- ↑ "Executive Bio". Sun Microsystems. Archived from the original on 30 April 2008.
{{cite web}}
: Unknown parameter|deadurl=
ignored (help) - ↑ ೧೦.೦ ೧೦.೧ Gallagher, Sean (30 December 2015). "Ian Murdock, father of Debian, dead at 42". Ars Technica. Retrieved 30 December 2015.
- ↑ About me « Ian Murdock’s Weblog, 22 July 2014, archived from the original on 9 ಅಕ್ಟೋಬರ್ 2014, retrieved 31 ಡಿಸೆಂಬರ್ 2015
- ↑ Ian Murdock Tweets Archived 2015-12-31 ವೇಬ್ಯಾಕ್ ಮೆಷಿನ್ ನಲ್ಲಿ., pastebin, 2016-12-29.
- ↑ "ಆರ್ಕೈವ್ ನಕಲು". Archived from the original on 2015-12-29. Retrieved 2015-12-29.
- ↑ Biggs, John (30 December 2015). "Debian Creator Ian Murdock Dead At 42". Tech Crunch.
- ↑ Williams, Chris (30 December 2015). "Debian Linux founder Ian Murdock dead at 42". The Register.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- "Debian", LinuxJournal, 1994.
- "Interview (starts 22:20)" (MP3), tlltsarchive.org, The Linux Link Tech Show, 11 May 2005[permanent dead link]
- "Interview (starts 48:04)" (MP3), jeffratliff.org, The Linux Link Tech Show, 4 July 2006
This Linux-related article is a stub. You can help Wikipedia by expanding it. |
This biographical article relating to a computer specialist is a stub. You can help Wikipedia by expanding it. |
- Pages using the JsonConfig extension
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Recent deaths
- Pages using infobox person with unknown parameters
- Articles with hCards
- All articles with dead external links
- Articles with dead external links from ಆಗಸ್ಟ್ 2021
- Articles with permanently dead external links