ಇಕೆಬಾನ
ಇಕೆಬಾನ ((生け花?, "arranging flowers") ಎನ್ನುವುದು ಹೂವುಗಳನ್ನು ಜೋಡಿಸಿ ವಿನ್ಯಾಸಗೊಳಿಸುವ ಒಂದು ಜಪಾನಿ ಕಲೆ[೧]. ಇದಕ್ಕೆ ಕಡೊ (華道?, the "way of flowers") ಎಂದೂ ಹೇಳುತ್ತಾರೆ. ಈ ಕಲೆಯು ಪ್ರಾರಂಭ ೭ನೇ ಶತಮಾನದಲ್ಲಿಯೇ ಆಯಿತು. ಇದು ಬೌದ್ಧ ಗುರುಗಳ ಪ್ರಭಾವದಿಂದ ೧೬ನೆಯ ಶತಮಾನದಲ್ಲಿ ಪರಾಕಾಷ್ಠೆ ತಲುಪಿತು. ನೂರಾರು ವರ್ಷಗಳಿಂದ ಈ ಕಲೆಯು ಬೆಳೆದು ಬಂದಿದ್ದು ಜಪಾನ್ ಮತ್ತು ವಿಶ್ವದ ಹಲವು ಕಡೆಗಲಲ್ಲಿ ಸಾವಿರಕ್ಕೂ ಹೆಚ್ಚು ಇಕೆಬಾನ ಶಾಲೆಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುವೆಂದರೆ ಇಕೆನೊಬೊ, ಒಹರ-ರ್ಯು ಮತ್ತು ಸೊಗೆಟ್ಸು-ರ್ಯು.
ಪದೋತ್ಪತ್ತಿ
[ಬದಲಾಯಿಸಿ]'ಇಕೆರು'(生ける?) ಮತ್ತು 'ಹಾನ'(花?) ಎಂಬ ಜಪಾನಿ ಪದಗಳಿಂದ 'ಇಕೆಬಾನ' ಹುಟ್ಟಿದೆ. ಅದರಲ್ಲಿ 'ಇಕೆರು' ಎಂದರೆ 'ಜೀವಂತವಾಗಿಡು', 'ಜೋಡಿಸು', 'ಜೀವನ' ಎಂದರ್ಥ ಮತ್ತು 'ಹಾನ' ಅಂದರೆ ಹೂವು. ಇಕೆಬಾನದ ಭಾವಾರ್ಥ ಹೂವುಗಳಿಗೆ ಜೀವ ಕೊಡುವುದು ಅಥವಾ ಹೂವುಗಳ ಜೋಡಣೆ ಎಂದು ಆಗುತ್ತದೆ.[೨]
ವಿಧಾನ
[ಬದಲಾಯಿಸಿ]ಇಕೆಬಾನ ಎನ್ನುವುದು ಕೇವಲ ಹೂವುಗಳನ್ನು ಹೂದಾನಿಯಲ್ಲಿ ಹಾಕಿಡುವುದಕ್ಕಿಂತ ಹೆಚ್ಚಾಗಿ, ನಿಸರ್ಗ ಮತ್ತು ಮಾನವೀಯತೆಯನ್ನು ಒಟ್ಟುಸೇರಿಸುವ ಒಂದು ಶಿಸ್ತಿನ ಕಲೆ ಎಂದು ಹೇಳಲಾಗುತ್ತದೆ. ಈ ಕಲೆಯು ಕೇವಲ ವಿವಿಧಬಣ್ಣಗಳ ಹೂವುಗಳ ಜೋಡಣೆಯಾಗಿರದೇ ಗಿಡಗಳ ಇತರ ಭಾಗಗಳಾದ ಕಾಂಡ, ಎಲೆಗಳನ್ನೂ ಒಳಗೊಂಡಿದ್ದು ಆಕಾರ, ಸಾಲು ಮತ್ತು ಸ್ವರೂಪಗಳ ವಿನ್ಯಾಸಕ್ಕೂ ಒತ್ತುಕೊಡುತ್ತದೆ.
ಇತಿಹಾಸ
[ಬದಲಾಯಿಸಿ]ಇತ್ತೀಚಿನ ಇತಿಹಾಸ ಸಂಶೋಧನಾ ವರದಿಗಳ ಪ್ರಕಾರ 'ತತೆಬಾನ'(ನಿಂತಿರುವ ಹೂವುಗಳು) ಕಲೆಯು ಬೌದ್ಧ ಮತ್ತು ಶಿಂಟೋ ನಂಬಿಕೆಗಳ ಮಿಳಿತವಾಗಿದೆ. ಇದು ಈ ಇಕೆಬಾನ ಕಲೆಗೆ ಮೂಲವಾಗಿರಬಹುದೆಂದು ಹೇಳಲಾಗಿದೆ. ಹಳೆಯಕಾಲದಲ್ಲಿ ಬುದ್ಧ ಆರಾಧನೆಯ ಸಮಯದಲ್ಲಿ ಪೂಜಾ ವೇದಿಕೆಯ ಮೇಲೆ ಹೂವುಗಳನ್ನಿಡುವುದು ಸಂಪ್ರದಾಯವಾಗಿತ್ತು. ಇಕೆಬಾನವು ಈ ಬೌದ್ಧ ಪೂಜಾಪದ್ದತಿ ಮತ್ತು 'ಕಾಮಿ'ಗಳನ್ನು ನಿತ್ಯಹರಿದ್ವರ್ಣ ವಸ್ತುಗಳಿಂದ ಆಕರ್ಷಿಸುವ ಶಿಂಟೋ ಯೊರಿಶಿರೋ ನಂಬಿಕೆಯಿಂದ ವಿಕಾಸಹೊಂದಿರಬಹುದು. ಇವೆರಡೂ ಸೇರಿ ಈಗಿನ ಜಪಾನಿ ಕಲೆ ಇಕೆಬಾನಕ್ಕೆ ಮೂಲವಾಗಿವೆ. ಮೊದಲ ವ್ಯವಸ್ಥಿತ ಶಾಸ್ತ್ರೀಯ ಶೈಲಿಯ ಇಕೆಬಾನವು ಹದಿನೈದನೇ ಶತಮಾನದ ನಡುವಿನಲ್ಲಿ ಆರಂಭವಾಯಿತು. ಇಕೆನೊಬೊ[೩] ಬೌದ್ಧ ಬಿಕ್ಕುಗಳು ಮತ್ತು ಬೌದ್ಧ ಸಮುದಾಯದ ಸದಸ್ಯರು ಇದರ ವಿದ್ಯಾರ್ಥಿಗಳಾಗಿದ್ದರು. ಕಾಲಕಳೆದಂತೆ ಇತರ ಶಾಲೆಗಳು ಹುಟ್ಟಿದವು, ವಿನ್ಯಾಸಗಳು ಶೈಲಿಗಳು ಬದಲಾದವು. ತದನಂತರ ಇಡೀ ಜಪಾನಿ ಸಮಾಜದಲ್ಲಿ ಈ ಕಲೆಯು ಒಂದು ಸಂಪ್ರದಾಯವಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ What is Ikebana? Archived 2014-07-12 ವೇಬ್ಯಾಕ್ ಮೆಷಿನ್ ನಲ್ಲಿ., Ikebanahq.org
- ↑ The Modern Reader's Japanese-English Character Dictionary, Charles E. Tuttle Company, ISBN 0-8048-0408-7
- ↑ Ikenobo
ಹೊರಕೊಂಡಿಗಳು
[ಬದಲಾಯಿಸಿ]���ಿತ್ರಸಂಪುಟ
[ಬದಲಾಯಿಸಿ]-
Free style
-
Free style
-
Upright Moribana
-
Upright Moribana
-
Slanting Moribana arrangement
-
Ikebana exhibition
-
Ikebana exhibition at University of Dhaka