ವಿಷಯಕ್ಕೆ ಹೋಗು

ಅದಿತಿ ಪಂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕ���ಶ
ಅದಿತಿ ಪಂತ್
ರಾಷ್ಟ್ರೀಯತೆಭಾರತ
ಕಾರ್ಯಕ್ಷೇತ್ರಸಮುದ್ರಶಾಸ್ತ್ರ
ಸಂಸ್ಥೆಗಳುರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ, ಭಾರತ
ಅಭ್ಯಸಿಸಿದ ವಿದ್ಯಾಪೀಠಪುಣೆ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ ಪದವಿ,ವೆಸ್ಟ್ ಫೀಲ್ಡ್ ಕಾಲೇಜಿನಿಂದ ಪಿಎಚ್.ಡಿ ಪದವಿ

ಅದಿತಿ ಪಂತ್ ಒಬ್ಬ ಭಾರತೀಯ ಸಮುದ್ರಶಾಸ್ತ್ರಜ್ಞೆ. ೧೯೮೩ರಲ್ಲಿ ಭಾರತೀಯ ಅಂಟಾರ್ಕ್ಟಿಕ ಕಾರ್ಯಕ್ರಮದ ಅಂಗವಾಗಿ ಭೂವಿಜ್ಞಾನಿ ಸುದೀಪ್ತಾ ಸೆಂಗುಪ್ತ ಜೊತೆಯಲ್ಲಿ ಅಂಟಾರ್ಕ್ಟಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. ಇವರು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ, ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ, ಪುಣೆ ವಿಶ್ವವಿದ್ಯಾಲಯ, ಮಹಾರಾಷ್ಟ್ರ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ.[][]

ವಿದ್ಯಾಭ್ಯಾಸ

[ಬದಲಾಯಿಸಿ]

ಅದಿತಿ ಪಂತ್ ರವರು ನಾಗಪುರದಲ್ಲಿ ಜನಿಸಿದರು. ಪುಣೆ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ ಪದವಿಯನ್ನು ಪೂರ್ಣಗೊಳಿಸಿದರು. ಅಲಿಸ್ಟರ್ ಹಾರ್ಡಿಯವರ ದಿ ಓಪನ್ ಸೀ ಪುಸ್ತಕವು ಅವರಿಗೆ ಸಮುದ್ರಶಾಸ್ತ್ರವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಸ್ಫೂರ್ತಿ ನೀಡಿತು. ಹವಾಯಿ ವಿಶ್ವವಿದ್ಯಾಲಯದಿಂದ ಮೆರೈನ್ ಸೈನ್ಸ್ ನಲ್ಲಿ ಮಾಸ್ಟರ್ಸ್ ಪಡೆದುಕೊಳ್ಳಲು ಯು.ಎಸ್. ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಅವರಿಗೆ ನೀಡಲಾಯಿತು. ನಂತರ ಅವರು ಸಮುದ್ರ ಪಾಚಿಯ ಶರೀರ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆಯಲು ಲಂಡನ್ ವಿಶ್ವವಿದ್ಯಾಲಯದ ವೆಸ್ಟ್ ಫೀಲ್ಡ್ ಕಾಲೇಜಿಗೆ ತೆರಳಿದರು.[][]

ಆರಂಭಿಕ ಜೀವನ

[ಬದಲಾಯಿಸಿ]

ತನ್ನ ಅಧ್ಯಯನಗಳು ಮುಗಿದ ನಂತರ ಅದಿತಿ ಅವರು ಭಾರತಕ್ಕೆ ಹಿಂದಿರುಗಿದರು. ಗೋವಾದ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯ ಸಂಸ್ಥಾಪಕರಾದ ಎನ್.ಕೆ.ಪಣಕ್ಕರ್ ರವರಿಂದ ಸ್ಫೂರ್ತಿ ಪಡೆದು ನಂತರ ಅದೇ ಸಂಸ್ಥೆಗೆ ಕೆಲಸಕ್ಕೆ ಸೇರಿದರು. []

ಅಂಟಾರ್ಕ್ಟಿಕ ದಂಡಯಾತ್ರೆ

[ಬದಲಾಯಿಸಿ]

ಡಿಸೆಂಬರ್ ೧೯೮೩ ಮತ್ತು ಮಾರ್ಚ್ ೧೯೮೪ ರವರೆಗೆ ಅದಿತಿ ಅವರು ಅಂಟಾರ್ಕ್ಟಿಕಕ್ಕೆ ದಂಡಯಾತ್ರೆ ನಡೆಸಿದರು. ಈ ದಂಡಯಾತ್ರೆಯು ಅಂಟಾರ್ಕ್ಟಿಕ್ ಸಾಗರದ ಆಹಾರ ಸರಪಳಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಉದ್ದೇಶಿಸಿತ್ತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಭಾರತೀಯ ವೈಜ್ಞಾನಿಕ ಸಂಶೋಧನಾ ಕೇಂದ್ರವಾಗಿದ್ದ ದಕ್ಷಿಣ ಗಂಗೋತ್ರಿಯನ್ನು (ದಕ್ಷಿಣ ಧ್ರುವದಿಂದ ೨೫೦೦ ಕಿ.ಮೀ.ದೂರದಲ್ಲಿದೆ) ಅಂಟಾರ್ಕ್ಟಿಕದಲ್ಲಿ ನಿರ್ಮಿಸಿದರು. ೧೯೯೦ರಲ್ಲಿ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯೊಂದಿಗೆ ೧೭ ವರ್ಷಗಳ ಕಾಲ ಕೆಲಸ ಮಾಡಿದ ನಂತರ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಲು ಪುಣೆಗೆ ತೆರಳಿದರು.[][]

ಪ್ರಶಸ್ತಿಗಳು

[ಬದಲಾಯಿಸಿ]

ಅಂಟಾರ್ಕ್ಟಿಕ ದಂಡಯಾತ್ರೆಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ಅವರಿಗೆ ಅಂಟಾರ್ಕ್ಟಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಗೌರವವನ್ನು ಅವರು ಡಾ.ಜಯಾ ನೈಥನಿ ಮತ್ತು ಡಾ.ಕನ್ವಾಲ್ ವಿಲ್ಕುರವರೊಂದಿಗೆ ಹಂಚಿಕೊಂಡಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2019-09-08. Retrieved 2019-03-27.
  2. https://www.ias.ac.in/public/Resources/Initiatives/Women_in_Science/Contributors/aditipant.pdf
  3. https://www.revolvy.com/page/Aditi-Pant
  4. "ಆರ್ಕೈವ್ ನಕಲು" (PDF). Archived from the original (PDF) on 2016-12-15. Retrieved 2019-03-27.
  5. "ಆರ್ಕೈವ್ ನಕಲು". Archived from the original on 2019-02-15. Retrieved 2019-03-27.
  6. "ಆರ್ಕೈವ್ ನಕಲು". Archived from the original on 2021-06-16. Retrieved 2019-03-27.
  7. https://theinterviewportal.com/2017/05/06/the-antartic-oceanographer/
  8. https://www.facebook.com/NDLIndia/posts/aditi-pant-is-an-indian-oceanographer-she-was-a-part-of-the-indian-expedition-to/859752094174317/