ಅಂತರರಾಷ್ಟ್ರೀಯ ವ್ಯಾಪಾರ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕಿಕರಣದ ಅಗತ್ಯವಿದೆ. (ನವೆಂಬರ್ ೨೦೧೭) |
ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರ. ಇಧನ್ನು ವಿದೇಶಿ ವ್ಯಾಪಾರವೆಂದು ಕರೆಯುತ್ತಾರೆ. ಅಂತರರಾಷ್ಟ್ರೀಯ ಅಥವಾ ವಿದೇಶಿ ವ್ಯಾಪಾರವೆಂದರೆ ಅಗತ್ಯವಾದ ವಸ್ತುಗಳನ್ನು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದು ಅಥವಾ ನಮ್ಮಲ್ಲಿರುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ರಫ್ತುಮಾಡುವುದು. ಅಂದರೆ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದೊಂದಿಗೆ ವಸ್ತುಗಳನ್ನು ಕೊಳ್ಳುವ ಹಾಗೂ ಮಾರಾಟ ಮಾರಾಟ ಒಂದು ವ್ಯವಹಾಅರವೇ ಅಂ���ರರಾಷ್ಟ್ರೀಯ ವ್ಯಾಪಾರ. ಈ ಬಗೆಯ ವ್ಯಾಪಾರದಲ್ಲಿ ಹಾಗೂ ಸೇವೆಗಳ ವಿನಿಮಯವು ವಿಶ್ವದ ಎರಡು ಅಥವಾ ಹೆಚ್ಚು ರಾಷ್ಟ್ರಗಳೊಂದಿಗೆ ನಡೆಯುತ್ತದೆ. ಉದಾ : ಜಪಾನ್ ಹಾಗೂ ಅಮೆರಿಕಾ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವು ಅಂತರರಾಷ್ಟ್ರೀಯ ವ್ಯಾಪಾರವಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಜೀವನ ಸೌಲಭ್ಯಗಳಿಗೆ ಬೇಕಾದ ಹಲವಾರು ಬಗೆಯ ಪದಾರ್ಥಗಳನ್ನು ಒಂದಲ್ಲ ಒಂದು ಬಗೆಯಲ್ಲಿ ಪೂರೈಸುತ್ತಿರುವುದನ್ನು ನಾವು ಕಾಣಬಹುದು. ಇದೇ ರೀತಿ ನಮ್ಮ ದೇಶವೂ ಈ ರಾಷ್ಟ್ರಗಳಿಗೆ ಎಣ್ಣೆಕಾಳುಗಳು, ಮ್ಯಾಂಗ್ನೀಸ್, ಕಬ್ಬಿಣದ ಅದಿರು, ಸೆಣಬಿನ ವಸ್ತುಗಳು ಇತ್ಯಾದಿ ರಫ್ತುಮಾಡುತ್ತದೆ. ಈ ರೀತಿ ಬೇರೆ ಬೇರೆ ರಾಷ್ಟ್ರಗಳು ಸರಕುಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯವನ್ನು ಅಂತರರಾಷ್ಟ್ರಿಯ ಅಥವಾ ವಿದೇಶಿ ವ್ಯಾಪಾರ ��ನ್ನುತ್ತೇವೆ. ಅಂತರರಾಷ್ಟ್ರೀಯ ವ್ಯಾಪಾರವು ಭೌಗೋಲಿಕ ಶ್ರಮವಿಭಜನೆಯಿಂದ ಉಂಟಾಗುತ್ತದೆ.
ಅಂತರರಾಷ್ಟ್ರೀಯ ವ್ಯಾಪಾರದ ಅವಶ್ಯಕತೆ
[ಬದಲಾಯಿಸಿ]ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದ ಆರ್ಥಿಕೋನ್ನತಿಯ ಒಂದು ಮುಖ್ಯ ಸಾಧನವಾಗಿದೆ. ಜೊತೆಗೆ ನವನಾಗರಿಕತೆಯ ಮುಖ್ಯತಳಹದಿಯ ಸೋಪಾನವೂ ಆಗಿದೆ. ಈ ಬಗೆಯ ವ್ಯಾಪಾರ ಹೊಸದೇನೂ ಅಲ್ಲ. ಪುರಾತನ ಕಾಲದಿಂದಲೂ ವಿವಿಧ ರಾಷ್ಟ್ರಗಳ ನಡುವಣ ವ್ಯಾಪಾರ ಸಂಬಂಧಗಳ ಬೆಳೆದುಕೊಂಡ ಬಂದಿರುವುದನ್ನು ಇತಿಹಾಸದಿಂದ ತಿಳಿಯಬಹುದು. ಆದಾಗ್ಯೂ ಕೈಗಾರಿಕಾ ಕ್ರಾಂತಿಯ ಕಾಲದಿಂದ ಅಂತರರಾಷ್ಟ್ರೀಯ ವ್ಯಾಪಾರದ ಬೆಳವಣಿಗೆಯು ತೀವ್ರಗೊಂಡಿತು ಎನ್ನಬಹುದು. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯುವ ಮುನ್ನ ಅದು ಇತರ ರಾಷ್ಟ್ರಗಳೊಡನೆ ನಡೆಸುತ್ತಿದ್ದ ವ್ಯಾಪಾರವೆಲ್ಲವನ್ನೂ ಅಂತರರಾಷ್ಟ್ರೀಯ ವ್ಯಾಪಾರವೆಂದೇ ಪರಿಗಣಿಸಲ್ಪಟ್ಟತ್ತು. ಇತ್ತೀಚೆಗೆ ಈ ಬಗೆಯ ವ್ಯಾಪಾರವು ಹೆಚ್ಚು ವೈವಿಧ್ಯಮಯವಾಗಿ ಬೆಳೆಯುತ್ತಿರುವುದಲ್ಲದೆ ಅದರ ಪ್ರಮಾಣವೂ ಹೆಚ್ಚುತ್ತಿದೆ. ದಿನೇ ದಿನೇ ಅದರೈ ಪ್ರಾಮುಖ್ಯತೆಯು ಏರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕಾಭಿವೃದ್ಧಿಯನ್ನು ಶೀಘ್ರವೇಗದಲ್ಲಿ ಪಡೆಯಲು ಹಾತೊರೆಯುತ್ತಿರುವುದು ಹಾಗೂ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ರಾಷ್ಟ್ರೀಯ ಉತ್ಪನ್ನ ಉನ್ನತಮಟ್ಟವನ್ನು ತಲುಸಿರುವುದು. ಅಂತರರಾಷ್ಟ್ರೀಯ ವ್ಯಾಪಾರದ ನಾಗಾ ಲೋಟದ ಬೆಳವಣಿಗೆಗೆ ತಕ್ಕಂತೆ ಇತ್ತೀಚೆಗೆ ರಾಷ್ಟ್ರಗಳ ರೀತಿನೀತಿಗಳಲ್ಲಿ ಮತ್ತು ವ್ಯವಸ್ಥಿತ ಕ್ರಮಗಳಲ್ಲಿ ಬದಲಾವಣೆಗಳಾಗುತ್ತದೆ.
ಅಂತರಾಷ್ಟ್ರೀಯ ವ್ಯಪಾರದ ಬೆಳವನಣಿಗೆಗೆ ಸಾರಿಗೆ ಸಂಪರ್ಕಗಳು ಅಭಿವ್ವ್ರದ್ದಿಯು ಬಹಳಮಟ್ಟಿಗೆ ಸಹಾಯಕವಾಗಿದೆ ಎನ್ನಬಹುದು. ಎದರಿಂದಾಗಿ ಇಂದು ಜಗತ್ತು ಬಹಲ ಕಿರಿದಾಗಿ ಕಾಣಿಸುತ್ತಿದೆ ಅಂತರಾಷ್ಟ್ರೀಯ ವ್ಯಪಾರದಿಂದಾಗಿ ಭೌಗೂಳಿಕವಾಗಿ ದೂರವಾಗಿದ್ದ ರಾಷ್ಟ್ರಗಳು ಪರಸ್ವರ ಹತ್ತಿರವಾಗುತ್ತಿತ್ತಿವೆ . ಆಮದು ಹಾಗು ರಫ್ತು ವ್ಯಪಾರಿಗಳು ಇಂದು ವಿದೀಶಿ ವಿನಿಮಯ ಬ್ಯಾಂಕುಗಳ ನೆರವಿನಿಂದ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಅತೀ ಸುಲಭವಾಗಿ ನದೆಸಿಕೊಲ್ಲಬಹುದುದಾಗಿದೆ. ಈ ಬಗೆಯ ವ್ಯಪಾರದಲ್ಲಿ ನಷ್ಟ ಉಂಟಾದಲ್ಲಿ ಅದನು ನಿವಾರಿಸಲು ವಿಮಾ ಕಂಪನಿ ಕಂಪನಿಗಳಿರುವುದರಿಂದ ವ್ಯಪಾರಿಗಲುಗಳಿಗೆ ವಷ್ಟ ಭರಿಸುವ ಭಯವು ಇಲ್ಲ . ಅಲ್ಲದೆ ಈ ಬಗೆಯ ವ್ಯಾಪಾರದಲ್ಲಿ ದುರ್ವ್ಯವಹಾರಗಲು ನಡೆಸಲು ಆಸ್ಫ್ದದವಿರದೆ ಸರಿಯಾದ ತೂಕ,ಅಲತೆಗಲಿರುವುದರಿಂದ ಪರಸ್ವರ ವಿಶ್ವಾರ ,ಸೌಹಾರ್ದತೆಗಳು ಏರ್ಪಡಲು ಸಹಾಯಕವಾಗಿದೆ. ಈ ಬಗೆಯಲ್ಲಿ ಇಂದು ಅಂತರಾಷ್ರ್ಟಿಯ ವ್ಯಾಪಾರದ ಮಹತ್ವವು ದಿನೇ ದಿನೇ ಹೆಚ್ಚುತ್ತಿದೆ. ಇಂದು ಯಾವ ರಾಷ್ಟ್ರೀವೂ ಒಂಟಿಯಾಗಿ ತನ್ನ ಕಾಲ ಮೇಲೆ ತಾನು ನಿಂತು ಬಾಳಲು ಸಾಧ್ಯವಿಲ್ಲ. ಪ್ರತಿಯೊಂದು ರಾಷ್ಟ್ರವೂ ಒಂದಲ್ಲ ಒಂದು ಬಗೆಯಲ್ಲಿ ಬೇರೆ ರಾಷ್ಟ್ರಗಳನ್ನು ಅವಂಲಬಿಸಬೇಕಾಗುತ್ತದೆ. ಒಂದು ರಾಷ್ಟಕ್ಕೆ ಅತಿ ಅಗತ್ಯವಾಗಿ ಬೇಕಾಗಿರುವ ವಸ್ತುವು ಅಲ್ಲಿ ದೊರೆಯುದೆ ಬೇರೆ ರಾಷ್ಟ್ರದಲ್ಲಿ ದೊರೆಯುವಂತಿರಬಹುದು. ಅಗ ಆ ವಸ್ತುವಿಗಾಗಿ ಆ ರಾಷ್ಟ್ರವನ್ನು ಅವಲಂಬಿಸಲೇಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ನೈಸರ್ಗಿಕ ಸಂವತ್ತು ಎಲ್ಲಾ ರಾಷ್ಟ್ರಗಳಲ್ಲೊ ಒಂದೇ ಸಮನಾಗಿ ಹಂಚಲ್ಪಟ್ಟಲ್ಲ ಎನ್ನುವುದು. ಒಂದು ರಾಷ್ಟ್ರದಲ್ಲಿ ಕಾಣಬರುವ ನೈಸರ್ಗಿಕ ಸಂಪತ್ತು ಮತ್ತೊಂದು ರಾಷ್ಟ್ರದಲ್ಲಿ ಕಾನದಿರಬಹುದು. ಅಂದರೆ ಅಲ್ಲಿ ಬೇರೆ ಬಗೆಯ ನೈಸರ್ಗಿಕ ಸಂಪತ್ತಿರಬಹುದು. ಉದಾಹರಣೆಗೆ, ಇಂಗ್ಲೆಂಡಿನಲ್ಲಿ ಕಬ್ಬಿಣ, ಕಲ್ಲಿದ್ದಲು ಹೆಚ್ಚಾಗಿ ದೊರೆಯುತ್ತದೆ. ಭಾರತದಲ್ಲಿ ಟೀ, ಸೆಣಬು, ಎಣ್ಣೆ ಕಾಳುಗಳು, ಮ್ಯಾಂಗನೀಸ್ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಈ ಕಾರಣದಿಂದಾಗಿ ಪ್ರತಿಯೊಂದು ರಾಷ್ಟ್ರವೂ ಆಹಾರ ಪದಾರ್ಥಗಳಿಗಾಗಲಿ, ಕಚ್ಚಾ ಪದಾರ್ಥಗಳಿಗಾಗಲಿ, ಸಿದ್ಧ ವಸ್ತುಗಳಿಗಾಗಲಿ ಬೇರೆ ರಾಷ್ಟ್ರ ಅಥವಾ ರಾಷ್ಟ್ರಗಳ ಮೊರೆ ಹೋಗಬೇಕಾಗುತ್ತದೆ. ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಹೆಚ್ಚಾಗಿ ದೊರೆಯುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ಮಾರಿ, ಅಲ್ಲಿಂದ ತನಗೆ ಬೇಕಾಗಿರುವ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತದೆ. ಈ ರೀತಿ ಅಂತರರಾಷ್ಟ್ರೀಯ ವ್ಯಾಪಾರವೂ ರಾಷ್ಟ್ರಗಳ ನಡುವೆ ಅನಿವಾರ್ಯವಾಗಿದೆ.[೧] ಅಂತರರಾಷ್ಟ್ರೀಯ ವ್ಯಾಪಾರವು ಮತ್ತೊಂದು ರೀತಿಯಿಂದಲೂ ಅಗತ್ಯವಾಗಿದೆ. ಭೂ ಹಾಗೂ ನಾಯು ಗುಣಗಳ ವ್ಯತ್ಯಾಸದಿಂದ ಬೇರೆ ಬೇರೆ ರಾಷ್ಟ್ರಗಳ ಜನರ ಬುದ್ಧಿಶಕ್ತಿಯಲ್ಲಿ ತಾರತಮ್ಯವಿರುತ್ತದೆ. ಒಂದು ರಾಷ್ಟ್ರದ ಜನರು ವಿಜ್ಞಾನದಲ್ಲಿ ನಿಪುಣರಾಗಿದ್ದರೆ, ಮತ್ತೊಂದು ರಾಷ್ಟ್ರದ ಜನರು ವ್ಯಾಪಾರ ವ್ಯವಹಾರಗಳಲ್ಲಿ ಕುಶಲತೆಯನ್ನು ಪಡೆದಿರಬಹುದು. ಈ ಸಂದರ್ಭಗಳಲ್ಲಿ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಜನರ ಸೇವೆಯ ಉಪಯೋಗವನ್ನು ಪಡೆಯಬಹುದು. ಅಂತರರಾಷ್ಟ್ರೀಯ ವ್ಯಾಪಾರದಿಂದಾಗಿ ವಸ್ತುಗಳ ಉತ್ಪಾದನಾ ವೆಚ್ಚವು ತಗ್ಗುವುದಲ್ಲವೆ ಉತ್ತಮ ವಸ್ತುಗಳು ಕದಿಮೆ ಬೆಲೆಗೆ ದೊರೆಯುತ್ತವೆ. ಈ ಬಗೆಯ ವ್ಯಾಪಾರದಿಂದ ಜನರ ಜೀವನ ಮಟ್ಟವೂ ಸುಧಾರಿಸುತ್ತದೆ. ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದಲ್ಲಿ ಶ್ರಮದ ಹಂಚಿಕೆ ಸಿದ್ಧಾಂತದ ಅನುಸರಣೆಯ ಮುನ್ನಡೆಯನ್ನು ಸೂಚಿಸುತ್ತದೆ. ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಲಭ್ಯವಿರುವ ನೈಸರ್ಗಿಕ ಸಾಧನಗಳ ಶಕ್ತಿಯನ್ನು ಬಳಸಿಕೊಳ್ಳುವುದರ ಮೂಲಕ ಆರ್ಥಿಕ ಉತ್ಪನ್ನವನ್ನು ರೂಢಿಸಿಕೊಂಡು ಸರಕುಗಳ ಆಂತರಿಕ ಬೇಡಿಕೆಗಳನ್ನು ಪೂರೈಸಿಕೊಳ್ಳುವುದರೊಂದಿಗೆ ಬೇರೆ ರಾಷ್ಟ್ರಗಳ ಬೇಡಿಕೆಗಳನ್ನೂ ಈಡೇರಿಸುವಂತಾದಾಗ ಮಾತ್ರ ವಿವಿಧ ರಾಷ್ಟ್ರಗಳ ನಡುವೆ ವಿಶ್ವಾಸ, ಪರಸ್ಪರ ಅವಲಂಬನೆ,ಸೌಹಾರ್ದತೆಗಳು ಹೆಚ್ಚಲು ಸಾಧ್ಯ. ಅಲ್ಲದೆ ಇದರಿಂದ ಶ್ರಮ ಹಂಚಿಕೆಯ ಫಲವೂ ಇಡೀ ವಿಶ್ವಕ್ಕೆ ಲಭಿಸುವಂತಾಗುತ್ತದೆ. ಈ ಕಾರಣದಿಂದಾಗಿಯೇ ಅಂತರರಾಷ್ಟ್ರೀಯ ವ್ಯಾಪಾರವು ಇಂದು ಹೆಚ್ಚಿನ ಮಾನ್ಯತೆಯನ್ನು ಪಡೆದಿದೆ ಎನ್ನಬಹುದು. ಇದರಿಂದಾಗಿಯೇ ದಿನೇ ದಿನೇ ಅಂತರರಾಷ್ಟ್ರೀಯ ವ್ಯಾಪಾರದ ಅವಶ್ಯಕತೆ ಹೆಚ್ಚುತ್ತಿದೆ ಎನ್ನಬಹುದು.[೨]
ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಮೂಲ ಕಾರಣ ಪ್ರಾದೇಶಿಕ ಶ್ರಮ ವಿಭಜನೆ. ಹೇಗೆಂದರೆ ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲವು ವಸ್ತುಗಳನ್ನು ಉತ್ಪಾದಿಸುತ್ತದೆ. ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಮಾರಾಟ ಮಾಡಿ ತನಗೆ ಬೇಕಾದ ವಸ್ತುಗಳನ್ನು ಪಡೆಯಲು ಇತರ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಪರ್ಕವನ್ನು ಹೊಂದಿರಬೇಕು. ವ್ಯಾಪಾರದ ಸಂಪರ್ಕ ಹೊಂದಿದ್ದರೆ ತನ್ನಲ್ಲಿ ಲಭ್ಯವಿರುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ಮಾರಿ ತನಗೆ ಬೇಕಾದ ವಸ್ತುಗಳನ್ನು ಪಡೆಯಬಹುದು. ಉದಾಹರಣೆಗೆ- ನಮ್ಮ ದೇಶದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯಲು ನೈಸರ್ಗಿಕ ಸಂಪತ್ತು ಅನುಕೂಲವಾಗಿರುವುದರಿಂದ ಅದನ್ನು ಇತರ ರಾಷ್ಟ್ರಗಳಿಗೆ ಮಾರಿ ಆ ರಾಷ್ಟ್ರಗಳಿಂದ ನಮಗೆ ಬೇಕಾದ ಆಹಾರ ಧಾನ್ಯಗಳನ್ನು, ಯಂತ್ರಗಳನ್ನು ಪಡೆಯುತ್ತೇವೆ. ಹಾಗೆಯೇ ಸ್ವಿಡ್ಜರ್ ಲೆಂಡಿನಲ್ಲಿ ಒಳ್ಳೆಯ ಗಡಿಯಾರಗಳು ತಯಾರಾಗಿ ಇತರ ರಾಷ್ಟ್ರಗಳಲ್ಲಿ ಮಾರಾಟ ಮಾಡಲ್ಪಡುತ್ತವೆ. ಹಾಗೆಯೇ ಆಂತರಿಕ ವ್ಯಾಪಾರದಲ್ಲೂ ಕೆಲವು ಪ್ರದೇಶಗಳು ಕೆಲವು ವಸ್ತುಗಳನ್ನು ಉತ್ಪಾದಿಸುವಲ್ಲಿ ಪರಿಣತಿ ಪಡೆದಿರುತ್ತವೆ. ಭಾರತವನ್ನೇ ಉದಾಹರಣೆಗೆ ತೆಗೆದುಕೊಂಡರೆ ಆಸಾಂನಲ್ಲಿ ಟೀಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಂಗಾಳದಲ್ಲಿ ಸೆಣಬನ್ನು, ವಿಶೇಷವಾಗೆ ಬೆಳೆಯುತ್ತಾರೆ. ಆದ್ದರಿಂದ ಆಂತರಿಕ ವ್ಯಾಪಾರವೂ ಅಂತರರಾಷ್ಟ್ರೀಯ ವ್ಯಾಪಾರದಂತೆಯೇ ಶ್ರಮ ವಿಭಜನೆಯ ತಳಹದಿಯ ಮೇಲೆ ರೂಪಿತವಾಗಿರುತ್ತದೆ. ಈ ರೀತಿ ಮೇಲ್ಮುಖವಾಗಿ ಗಮನಿಸಿ ನೋಡಿದಲ್ಲಿ ಆಂತರಿಕ ಮತ್ತು ಅಂತರರಾಷ್ಟ್ರೀಯ ವ್ಯಾಪಾರಗಳ ನಡುವೆ ಯಾವ ವ್ಯತ್ಯಾಸವು ಕಾಣುವುದಿಲ್ಲ. ಆದಾಗ್ಯೂ ಆಂತರಿಕ ಹಾಗೂ ರಾಷ್ಟ್ರೀಯ ವ್ಯಾಪಾರಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ.
೧. ರಾಷ್ಟ್ರದ ಒಳಗೆ ಶ್ರಮ ಮತ್ತು ಬಂಡವಾಳವಳು ೨. ನೈಸರ್ಗಿಕ ಸಾಧನ ಸಂಪನ್ಮೂಲಗಳಲ್ಲಿನ ವ್ಯತ್ಯಾಸ ೩. ಆರ್ಥಿಕ ನೀತಿಯಲ್ಲಿನ ವ್ಯತ್ಯಾಸಗಳು ೪. ರಾಷ್ಟೀಯ ನಾಣ್ಯಗಳ ವಿನಿಮಯ
ಟೀಕೆಗಳು
[ಬದಲಾಯಿಸಿ]೧. ಈ ಸಿದ್ಧಾಂತವು ಶ್ರಮದ ಮೌಲ್ಯದ ಮೇಲೆ ಅವಲಂಬಿತವಾಗಿದೆ. ಆದರೆ ಈ ಟೀಕೆಯನ್ನು ಉದಾಸೀನ ಮಾಡಬಹುದು. ಏಕೆಂದರೆ ಸಾಪೇಕ್ಷಿತ ಉತ್ಪಾದನಾ ವೆಚ್ಚವನ್ನು ಹಣದಲ್ಲೂ ವ್ಯಕ್ತಪಡಿಸಬಹುದು. ೨.ಉತ್ಸದನಾ ವೆಚ್ಚ ಸಮನಾಗುರಯತ್ತದೆಂದು ಈ ಸಿದ್ಧಾಂತವು ಕಲ್ಪಸಿಕೊಂಡಿದೆ. ಈ ವಾದವನ್ನೂ ಸಹ ಉದಾಸೀನ ಮಾಡಬಹುದು. ಏಕೆಂದರೆ ಪ್ರಾಚೀನ ಅರ್ಥಶಾಸ್ತ್ರಜ್ಞರು ತಮ್ಮ ಸಿದ್ಧಾಂತವನ್ನು ಸರಳವಾಗಿ ರೂಪಿಸಲು ಸಮನಾದ ಉತ್ಪಾದನಾ ವೆಚ್ಚವನ್ನು ಗಣನೆಗೆ ತಗೆದಕೊಡಿದ್ದರು.ಆದರೆ ಆಧುನಿಕ ಅರ್ಥಶಾಸ್ತ್ರಜ್ಞರು ಈ ಸಿದ್ಧಾಂವು ಏರಿಕೆಯ ಪ್ರತಿಫಲದಲ್ಲಿ ವಸ್ತುಗಳನ್ನು ಉತ್ಪಾದಿಸಿದಾಗ ಈ ನಿಯಮ ಅನ್ವಯಿಸುವುದೆಂದು ಪ್ರತಿಸಾದಿಸಿದ್ದಾರೆ. ೩.ಈ ಸಿದ್ಧಾಂವು ವ್ಯಾಪಾರದಲ್ಲಿ ನಿರತವಾಗುವ ಪ್ರತಿಯೊಂದು ರಾಷ್ಟ್ರರವೂ ನಿರ್ದಿಷ್ಟವಾದ ಪ್ರಮಾಣದಲ್ಲಿ ಸಂಸನ್ಮೂ ಲಗಳನ್ನು ಹೊಂದಿರುವುದೆಂದು ಭಾವಿಸಿತ್ತು. ಆದರೆ ಈ ಸಿದ್ಧಾಂತ ರಾಷ್ಟ್ರದ ಆರ್ಥಿಕಾಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ೪.ಈ ಸಿದ್ಧಾಂತ ಸಾರಿಗೆಯ ವೆಚ್ಚವನ್ನು ಗಣನೆಗೆ ತೆಗೆದುಕೊಂಡಿಲ್ಲ.ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ವಸ್ತುವನ್ನು ಕಳಿಸುವಾಗ ಸಾರಿಗೆಯ ವೆಚ್ಚವು ಉತ್ಪಾದನೆಯ ವೆಚ್ಚದ ಒಂದು ಭಾಗವಾಗಿರುತ್ತದೆ. ಕೆಲವು ಸಾರಿ ವಸ್ತುವಿನ ಉತ್ಪಾದನೆಯ ವೆಚ್ಚಕ್ಕಿಂತ ಸಾರಿಗೆಯ ವೆಚ್ಚವೇ ಹೆಚ್ಚಾಗಿರುತ್ತದೆ. ಉತ್ಪಾದನೆಯ ವೆಚ್ಚ ಕಡಮೆ ಇದ್ದು, ಸಾರಿಗೆಯ ವೆಚ್ಚ ಹೆಚ್ಚಿದಲ್ಲಿ ವಸ್ತುಗಳನ್ನು ಆವುದು ಮಾಡಿಕೊಳ್ಳುವಲ್ಲಿ ಯಾವ ಲಾಭವು ಇರುವುದಿಲ್ಲ. ೫.ಒಂದು ರಾಷ್ಟ್ರದ ಒಳಗೆ ಶ್ರಮ ಮತ್ತು ಬಂಡಗಳು ಸುಲಭವಾಗಿ ಚಲಿಸುತ್ತವೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ವಿಶಾಲವಾದ ಒಂದು ರಾಷ್ಟ್ರದಲ್ಲಿ ಒಂದು ಪ್ರದೇಶದ ಭಾಷೆ,ಹನುಗುಣ ಪದ್ಧತಿಗಳಲ್ಲಿ ಎಷ್ಟೋ ವ್ಯತ್ಯಾಸಗಳಿರುತ್ತವೆ. ಆದ್ದರಿಂದ ರಾಷ್ಟ್ರದ ಒಳಗೂ ಶ್ರಮದ ಚಲನೆ ಹೆಚ್ಚಾಗಿಲ್ಲದಿರಬಹುದು.[೩]
ಅಂತರಾಷ್ಟ್ರೀಯ ವ್ಯವಹಾರ
[ಬದಲಾಯಿಸಿ]ಅಂತರಾಷ್ಟ್ರೀಯ ವ್ಯವಹಾರವು ಎರಡು ಅಥವಾ ಹಲವು ದೇಶಗಳ ನಡುವೆ ನಡೆಯುವ ವ್ಯವಹಾರವಾಗಿದೆ. ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳು ಅಂತರಾಷ್ಟ್ರೀಯ ವ್ಯವಹಾರವನ್ನು ರಾಜಕೀಯ ಹಾಗು ಲಾಭಗಳಿಗಾಗಿ ಮಾಡುತ್ತವೆ.[೪]
ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣಗಳು
[ಬದಲಾಯಿಸಿ]ಅಂತರಾಷ್ಟ್ರೀಯ ವ್ಯವಹಾರವು ಅಭಿವೃದ್ಧಿ ಹೊಂದಲು ಅನೇಕ ಕಾರಣಗಳಿವೆ ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ[೫] - ೧. ನೈಸರ್ಗಿಕ ಸಂಪನ್ಮೂಲಗಳ ಕೊರತೆ. ೨. ನೈಸರ್ಗಿಕ ಸಂಪನ್ಮೂಲಗಳು ವೈವಿಧ್ಯತೆಯಿಂದ ಕೂಡಿರುವುದು. ೩. ಎಲ್ಲಾ ವಿಧದ ಸಂಪನ್ಮೂಲಗಳ ಕೊರತೆ ಅಂತ���ಾಷ್ಟ್ರೀಯ ವ್ಯವಹಾರಗಳ ಬೆಳವಣಿಗೆಗೆ ಪ್ರಮುಖವಾಗಿದೆ. ಎಲ್ಲಾ ನೈಸರ್ಗಿಕ ಸಂಪನ್ಮೂಲಗಳು ಯಾವುದೇ ದೇಶದಲ್ಲಿ ಪರಿಪೂರ್ಣವಾಗಿ ಲಭಿಸದ ಕಾರಣ ಯಾವುದೇ ದೇಶವೂ ಸ್ವಾವಲಂಬಿಯಾಗಿಲ್ಲ. ೪. ಭೌಗೋಳಿಕ ವಿಶೇಷತೆ ಮತ್ತು ಕ್ರಮ ವಿಭಜನೆ - ಎಲ್ಲಾ ದೇಶಗಳು ಒಂದೇ ರೀತಿಯ ಹವಗುಣ ಮತ್ತು ವಾಯುಗುಣ ಹೊಂದಿರುವುದಿಲ್ಲ. ಅಲ್ಲದೆ ಪ್ರತಿಯೊಂದು ದೇಶವು ಕೆಲವೇ ವಸ್ತುಗಳನ್ನು ಉತ್ಪಾದಿಸುವಲ್ಲಿ ವಿಶೇಷತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಅಂತಹ ಸರಕುಗಳು ಹೊರದೇಶಗಳಿಗೂ ಅವಶ್ಯಕವಿರುತ್ತವೆ. ೫. ಉತ್ಪಾದನೆ ಮತ್ತು ವೆಚ್ಚ : ಈ ಅಂಶವೂ ಕೂಡ ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣವಾಗಿದೆ. ಕೆಲವೊಂದು ವಸ್ತುಗಳನ್ನು ಉತ್ಪಾದಿಸಲು ಅಧಿಕ ವೆಚ್ಚ ತಗಲುತ್ತದೆ. ಆದರೆ ಅದೇ ವಸ್ತು ಮಾರುಕಟ್ಟೆಗಳಲ್ಲಿ ಅಗ್ಗದ ದರದಲ್ಲಿ ಲಭಿಸುತ್ತದೆ. ಅಂತಹ ಸನ್ನಿವೇಶಗಳಲ್ಲಿ ಉತ್ಪಾದನೆ ದುಬಾರಿಯಾಗುತ್ತದೆ. ೬. ಅನುಕರಣೆ ಮತ್ತು ತಂತ್ರಜ್ಙಾನದಲ್ಲಿ ಬದಲಾವಣೆ - ಇತ್ತೀಚಿನ ದಿನಗಳಲ್ಲಿ ವೇಷಭೂಷಣಗಳಲ್ಲಿ, ನಾಗರೀಕತೆಯಲ್ಲಿ, ಬದಲಾವಣೆಗಳಾಗಿವೆ. ಇವುಗಳು ಬೇರೆ ದೇಶದಿಂದ ಅನುಕರಣೆಯಾಗುತ್ತಿದೆ. ಇದರಿಂದಾಗಿ ಪಾಶ್ಚಿಮಾತ್ಯ ವಸ್ತುಗಳ ವ್ಯಾಮೋಹ ಹೆಚ್ಚಾಗಿದೆ. ತಂತ್ರಜ್ಞಾನದಲ್ಲೂ ಕೂಡ ಹಲವಾರು ಬದಲಾವಣೆಗಳಾಗುತ್ತಿವೆ. ವಸ್ತುಗಳ ವಿನ್ಯಾಸ, ಆಕಾರ ಮತ್ತು ಗಾತ್ರಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಆವಿಸ್ಕಾರಗಳು ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ವಿದೇಶಿ ವ್ಯವಹಾರ ಬೆಳವಣಿಗೆಗೆ ಕಾರಣವಾಗಿದೆ. ಈ ಮೇಲ್ಕಂಡ ಅಂಶಗಳಿಂದ ತಿಳಿದು ಬರುವುದೇನೆಂದರೆ ಪ್ರಪಂಚದ ಯಾವುದೇ ದೇಶವು ಸಂಪೂರ್ಣವಾಗಿ ಸ್ವಾವಲಂಬಿಯಾಗಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಅವಲಂಬಿತವಾಗಿದೆ.
ಅಂತರಾಷ್ಟ್ರೀಯ ವ್ಯವಹಾರ ಮತ್ತು ದೇಶೀಯ ವ್ಯವಹಾರ ನಡುವಿನ ವ್ಯತ್ಯಾಸಗಳು
[ಬದಲಾಯಿಸಿ]ಈ ಎರಡೂ ವ್ಯವಹಾರಗಳ ನಡುವೆ ಅನೇಕ ವಿಷಯಗಳಲ್ಲಿ ವ್ಯತ್ಯಾಸಗಳಿವೆ. ಆದ್ದರಿಂದ ಈ ಎರಡರ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು ಸೂಕ್ತವಾಗಿದೆ.[೬] ಸಾಮಾನ್ಯವಾಗಿ ಈ ಕೆಳಕಂಡ ವ್ಯತ್ಯಾಸಗಳನ್ನು ಕಾಣ ಬಹುದಾಗಿದೆ.
ಕ್ರಮ ಸಂಖ್ಯೆ | ಅಂತರಾಷ್ಟ್ರೀಯ ವ್ಯವಹಾರ | ದೇಶೀಯ ವ್ಯವಹಾರ |
---|---|---|
೧ | ದೇಶದ ಗಡಿಯೊಳಗಿನ ವ್ಯಾಪಾರವಾಗಿದೆ | ಗಡಿಯಾಚೆಗಿನ ವ್ಯಾಪಾರವಾಗಿದೆ. |
೨ | ವ್ಯವಹಾರದ ಗಾತ್ರ ದೊಡ್ಡದಾಗಿರುತ್ತದೆ. ಒಟ್ಟು ವ್ಯಾಪಾರದಲ್ಲಿ ಶೇ.೯೦ ರಿಂದ ೯೫ ರಷ್ಟು ಇರುತ್ತದೆ. | ವ್ಯವಹಾರದ ಗಾತ್ರ ಸಣ್ಣದಾಗಿರುತ್ತದೆ. ಒಟ್ಟು ವ್ಯವಹಾರದಲ್ಲಿ ಶೇ.೫ ರಿಂದ ೧೦ ರಷ್ಟು ಇರುತ್ತದೆ. |
೩ | ಒಂದೇ ದೇಶದ ನೀತಿ ನಿಯಮಗಳಿಗೆ ಒಳಪಟ್ಟಿರುತ್ತದೆ. | ಹಲವಾರು ದೇಶಗಳ ನೀತಿನಿಯಮಗಳನ್ನು ಒಳಗೊಂಡಿರುತ್ತದೆ. |
೪ | ಈ ವ್ಯಾಪಾರವು ಮುಕ್ತವಾಗಿರುತ್ತದೆ. | ಈ ವ್ಯಾಪಾರವು ಅನೇಕ ನೀತಿ ನಿಯಮಗಳಿಂದ ಕೂಡಿರುತ್ತದೆ. |
೫ | ಕಡಿಮೆ ದಾಖಲೆ ಪತ್ರಗಳನ್ನು ಒಳಗೊಂಡಿರುತ್ತದೆ. | ಅನೇಕ ದಾಖಲೆ ಪತ್ರಗಳನ್ನು ಒಳಗೊಂಡಿರುತ್ತದೆ. |
೬ | ಸಾರಿಗೆ ವೆಚ್ಚ ಕಡಿಮೆ | ಸಾರಿಗೆ ವೆಚ್ಚ ದುಬಾರಿಯಾಗಿರುತ್ತದೆ |
೭ | ಸರಕುಗಳು ವಿಮೆಗೆ ಒಳಪಟ್ಟಿರಬಹುದು ಅಥವಾ ಇಲ್ಲದಿರಬಹುದು | ಸರಕುಗಳನ್ನು ವಿಮೆಗೆ ಒಳಪಡಿಸಲೇಬೇಕಾಗುತ್ತದೆ. |
೮ | ಒಂದೇ ದೇಶದ ನಾಣ್ಯಗಳು ಚಲಾವಣೆಯಲ್ಲಿರುತ್ತದೆ. | ವಿವಿಧ ದೇಶಗಳ ನಾಣ್ಯಗಳು ಚಲಾವಣೆಯಲ್ಲಿರುತ್ತವೆ. |
೯ | ದೇಶೀಯ ನಾಣ್ಯವನ್ನು ವಿದೇಶಿ ನಾಣ್ಯಗಳಿಗೆ ಪರಿವರ್ತಿಸುವ ಅಗತ್ಯವಿಲ್ಲ | ದೇಶೀಯ ನಾಣ್ಯವನ್ನು ವಿದೇಶಿ ನಾಣ್ಯಗಳಿಗೆ ಪರಿವರ್ತಿಸುವ ಅಗತ್ಯವಿದೆ. |
೧೦ | ಹೆಚ್ಚು ಕಡಿಮೆ ಏಕ ರೂಪ ಮಾರುಕಟ್ಟೆಗಳನ್ನು ಕಾಣಬಹುದು | ಏಕ ರೂಪ ಮಾರುಕಟ್ಟೆಗಳನ್ನು ಕಾಣಲಾಗುವುದಿಲ್ಲ. |
೧೧ | ಒಂದೇ ರೀತಿಯ ವ್ಯಾಪಾರ ನಿಯಮಗಳನ್ನು ಹೊಂದಿರುತ್ತದೆ. | ಏಕ ರೂಪ ವ್ಯಾಪಾರ ನಿಯಮಗಳನ್ನು ಹೊಂದಿರುವುದಿಲ್ಲ. |
೧೨ | ಸರಕುಗಳನ್ನು ಪರೀಕ್ಷಿಸಲು ಅವಕಾಶವಿರುತ್ತದೆ. | ಸರಕುಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. |
೧೩ | ಎಲ್ಲಾ ರೀತಿಯ ಸರಕುಗಳಿಗೆ ಇದು ಯೋಗ್ಯವಾಗಿದೆ. | ಇದು ಕೇವಲ ದೀರ್ಘ ಬಾಳಿಕೆಯ ಸರಕುಗಳಿಗೆ ಸೂಕ್ತವಾಗಿದೆ. |
೧೪ | ಕ್ರಯ- ವಿಕ್ರಯಗಾರರು ಒಂದೇ ದೇಶಕ್ಕೆ ಸೇರಿರುತ್ತಾರೆ. | ಕ್ರಯ - ವಿಕ್ರಯಗಾರರು ವಿವಿಧ ದೇಶಗಳಿಗೆ ಸೇರಿದವರಾಗಿರುತ್ತಾರೆ. |
ಅಂತರಾಷ್ಟ್ರೀಯ ವ್ಯವಹಾರದ ಪ್ರಯೋಜನಗಳು
[ಬದಲಾಯಿಸಿ]ವಿದೇಶಿ ವ್ಯವಹಾರವು ಅನೇಕ ತೊಂದರೆ ಮತ್ತು ವಿವಿದ ನೀತಿನಿಯಮಗಳಿಂದ ಕೂಡಿದ್ದರೂ ಕೂಡ ಇದು ರಾಷ್ಟ್ರಕ್ಕೆ ಮತ್ತು ವ್ಯವಹಾರಿಕ ಸಂಸ್ಥೆಗಳಿಗೆ ಅನೇಕ ರೀತಿಯಲ್ಲಿ ಲಾಭದಾಯಕವಾಗಿದೆ. ಇದರಿಂದಾಗಿ ಅಂತರಾಷ್ಟ್ರೀಯ ವ್ಯವಹಾರವು ಬಹಳ ಪ್ರಾಮುಖ್ಯವಾಗಿದೆ. ಇದರಿಂದ ಎರಡು ರೀತಿಯ ಲಾಭಗಳುಂಟು.[೭]
೧.ರಾಷ್ಟ್ರಕ್ಕೆ ಆಗುವ ಲಾಭಗಳು
[ಬದಲಾಯಿಸಿ]೧. ವಿದೇಶಿ ವಿನಿಯಮಗಳಿಕೆ - ಅಂತರಾಷ್ಟ್ರೀಯ ವ್ಯವಹಾರವು ವಿದೇಶಿ ವಿನಿಯಮಗಳಿಸಲು ಸಹಾಯವಾಗುತ್ತದೆ. ಇದರಿಂದಾಗಿ ಬಂಡವಾಳ, ಸರಕುಗಳು, ತಂತ್ರಜ್ಞಾನ, ಪೆಟ್ರೋಲಿಯಂ ಉತ್ಪನ್ನ ಮತ್ತು ಇತರೆ ಕೊರತೆ ಸರಕುಗಳನ್ನು ಆಮದು ಮಾಡಿಕೊಳ್ಳಲು ಸಹಾಯವಾಗುತ್ತದೆ. ೨. ಸಂಪನ್ಮೂಲಗಳ ಸದ್ಭಳಕೆ - ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಅಪವ್ಯಯ ಮಾಡದಂತೆ ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ. ೩. ಭೌಗೋಳಿಕ ವೈಶಿಷ್ಟ್ಯತೆ - ಈ ವ್ಯವಹಾರವು ಶ್ರಮವಿಭಜನೆಯಲ್ಲಿ ವೈಶಿಷ್ಟ್ಯತೆ ಮೂಡಿಸುತ್ತದೆ. ಇದರಿಂದಾಗಿ ವಿಶಿಷ್ಟವಾದ ಸರಕುಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸಬಹುದು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಪರಿಚಯಿಸಬಹುದು. ೪. ಮಾರುಕಟ್ಟೆ ವಿಸ್ತರಣೆ - ಈ ವ್ಯವಹಾರವು ಮಾರುಕಟ್ಟೆಗಳನ್ನು ವಿಸ್ತರಿಸುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದನಾ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು. ಅಲ್ಲದೆ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. ೫. ಉತ್ತಮ ಸಂಬಂಧ - ಅಕ್ಕ ಪಕ್ಕದ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಬಹುದು. ಇದರಿಂದ ಯುದ್ಧಗಳು ಕಡಿಮೆಯಾಗಿ ಶಾಂತಿನೆಮ್ಮದಿ ನೆಲಸುತ್ತದೆ. ೬. ಉದ್ಯೋಗವಕಾಶ - ಅಂತರಾಷ್ಟ್ರೀಯ ವ್ಯವಹಾರದಿಂದ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ೭. ಜೀವನ ಮಟ್ಟ ಹೆಚ್ಚಳ - ಜನ ಜೀವನ ಮಟ್ಟ ಅಂತರಾಷ್ಟ್ರೀಯ ವ್ಯವಹಾರದಿಂದ ಹೆಚ್ಚಾಗುತ್ತದೆ. ವಿವಿಧ ಬಗೆಯ ಸರಕುಸೇವೆಗಳ ಬಳಕೆ, ಉದ್ಯೋಗವಕಾಶಗಳು ಮತ್ತು ಇನ್ನಿತರೆ ಸೌಲಭ್ಯಗಳು ಲಭಿಸುವುದರಿಂದ ಜೀವನದ ಮಟ್ಟ ಹೆಚ್ಚಾಗುತ್ತದೆ. ೮.ಬಂಡವಾಳ ಸರಕುಗಳಿಂದ ರಾಷ್ಟ್ರಗಳ ಅಭಿವೃದ್ಧಿ - ಬಂಡವಾಳ ಸರಕುಗಳಾದ ಯಂತ್ರೋಪಕರಣ, ಸ್ಥಾವರ ಮತ್ತು ಆಧುನಿಕ ತಂತ್ರಜ್ಞಾನವನ್ನು ತರಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದಾಗಿ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಯಾಗುತ್ತದೆ.
೨.ವ್ಯವಹಾರ ಸಂಸ್ಥೆಗಳಿಗೆ ಆಗುವ ಲಾಭಗಳು
[ಬದಲಾಯಿಸಿ]೧. ಅಧಿಕಲಾಭಗಳಿಕೆ : ಅಂತರಾಷ್ಟ್ರೀಯ ವ್ಯವಹಾರದಿಂದ ಅಧಿಕ ಲಾಭಗಳಿಸುವ ಅವಕಾಶಗಳು ದೊರೆಯುತ್ತವೆ. ಏಕೆಂದರೆ ಸ್ಥಳಿಯ / ದೇಶಿಯ ಬೆಲೆಗಳಿಗಿಂತ ವಿದೇಶಿ ಬೆಲೆಗಳು ಹೆಚ್ಚಿರುತ್ತವೆ. ಹೆಚ್ಚು ಬೆಲೆಗಳು ಎಲ್ಲಿ ದೊರೆಯುತ್ತವೆಯೋ ಆ ದೇಶಗಳಲ್ಲಿ ಮಾರಾಟ ಮಾಡಬಹುದು. ೨. ಉತ್ಪಾದನಾ ಸಾಮರ್ಥ್ಯ ಹೆಚ್ಚಳ - ಲಭ್ಯವಿರುವ ಉತ್ಪಾದನಾ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಇದರಿಂದ ಅಧಿಕ ಸರಕುಗಳನ್ನು ಉತ್ಪಾದಿಸಿ ಲಾಭಗಳಿಸಬಹುದು. ೩. ದೇಶೀಯ ಸಂಸ್ಥೆಗಳ ಬೆಳವಣಿಗೆ - ವಿದೇಶಿ ಮಾರುಕಟ್ಟೆಗಳಲ್ಲಿ ಸರಕುಗಳಿಗೆ ಬೇಡಿಕೆ ಸೃಷ್ಟಿಸಿ ಸಂಸ್ಥೆಗಳು ಬೆಳೆವಣಿಗೆಯಾಗುತ್ತವೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಕಡಿಮೆ ಅವಕಾಶಗಳು ಸಿಗುವುದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ವಿದೇಶೀ ಮಾರುಕಟ್ಟೆಗಳಲ್ಲಿ ವಿಪುಲ ಅವಕಾಶಗಳಿರುವುದರಿಂದ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಶ್ರೀರ್ಘವಾಗಿ ಬೆಳವಣಿಗೆ ಹೊಂದಬಹುದು. ೪. ಕಾರ್ಯಕ್ಷೇತ್ರ ವಿಸ್ತರಣೆ - ವ್ಯವಹಾರ ಸಂಸ್ಥೆಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಶಾಲಗೊಳಿಸಿಕೊಂಡು ತಮ್ಮ ದೃಷ್ಟಿಯನ್ನು ವಿದೇಶಿ ವ್ಯವಹಾರಗಳಿಗೆ ಕೇಂದ್ರೀಕರಿಸಬಹುದು. ಅಂತರಾಷ್ಟ್ರೀಯ ವ್ಯವಹಾರಗಳ ಅಗತ್ಯತೆಗಳನುಸಾರ ಉತ್ಪಾದನೆ ಮತ್ತು ಮಾರುಕಟ್ಟೆಗಳನ್ನು ಕಂಡುಕೊಳ್ಳಬಹುದು. ೫. ಹೊಸ ಸಂಸ್ಥೆಗಳ ಸ್ಥಾಪನೆಗೆ ಅವಕಾಶ - ದೇಶೀಯ ಕಂಪನಿಗಳು ವಿದೇಶಿ ಮಾರುಕಟ್ಟೆಗಳಲ್ಲಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದಾಗಿ ಯುವಕರು, ಬಂಡವಾಳಶಾಯಿಗಳು, ಬುದ್ಧಿವಂತರು, ಹೊಸ ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಾಗುತ್ತದೆ.
ಅಂತರಾಷ್ಟ್ರೀಯ ವ್ಯವಹಾರದಲ್ಲಿನ ಸಮಸ್ಯೆಗಳು
[ಬದಲಾಯಿಸಿ]ವಿದೇಶಿ ವ್ಯವಹಾರದಲ್ಲಿ ಅನೇಕ ರೀತಿಯ ಸಮಸ್ಯೆಗಳು ತಲೆದೋರುತ್ತವೆ. ಪ್ರಮುಖವಾದವುಗಳು ಈ ಕೆಳಕಂಡಂತಿವೆ.[೮] ೧. ಅವಶ್ಯಕ ಸರಕುಗಳಿಗೂ ದೇಶವನ್ನು ಪರಾವಲಂಬಿಯಾಗಿಸುತ್ತದೆ. ಇಂತಹ ಪರಾವಲಂಬನೆ ವಿಶೇಷವಾಗಿ ಯುದ್ಧ ಸಮಯದಲ್ಲಿ ಒಳಿತಲ್ಲ. ಇದರಿಂದಾಗಿ ದೇಶ ಸಂಕಷ್ಟ ಎದುರಿಸಬೇಕಾಗುತ್ತದೆ. ೨. ರಾಷ್ಟ್ರೀಯ ಸಂಪನ್ಮೂಲಗಳ ದುರ್ಬಳಕೆ ಹೆಚ್ಚಿ ಸಂಪನ್ಮೂಲಗಳು ಬರಿದಾಗುತ್ತವೆ. ೩. ವಿದೇಶಿ ವ್ಯವಹಾರವು ತೀವ್ರ ಪೈಪೋಟಿ ಸೃಷ್ಟಿಸುತ್ತದೆ. ಇದರಿಂದಾಗಿ ದೇಶೀಯ ಮತ್ತು ಸಣ್ಣ ಉದ್ಯಮಗಳು ಅವನತಿಹೊಂದುತ್ತವೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತದೆ. ೪. ಅಂತರಾಷ್ಟ್ರಿಯ ವ್ಯವಹಾರವು ಐಶಾರಾಮಿ ಸರಕುಗಳನ್ನು ಖರೀದಿಸುವಂತೆ ಪ್ರೆರೇಪಿಸುತ್ತದೆ. ಆದರೆ ಬಹುಪಾಲು ಜನರು ಇವುಗಳನ್ನು ಇಚ್ಚಿಸುವುದಿಲ್ಲ. ಕಚ್ಚಾ ಪದಾರ್ಥಗಳನ್ನು ರಫ್ತು ಮಾಡುವ ದೇಶವು ಸಂಪೂರ್ಣವಾಗಿ ಬರಿದಾಗುತ್ತದೆ. ಮತ್ತು ಆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ೫. ಅಂತರಾಷ್ಟ್ರೀಯ ವ್ಯಾಪಾರವು ಕೇವಲ ಏಕಮುಖ ಅಭಿವೃದ್ಧಿಯನ್ನು ಸಾಧಿಸುತ್ತದೆಯೇ ಹೊರತು ಸರ್ವಗುಣ ಅಭಿವೃದ್ಧಿಯಾಗದು. ಯಾವ ಕ್ಷೇತ್ರದಲ್ಲಿ ವಿಶೇಷತೆ ಮತ್ತು ನೈಪುಣ್ಯತೆ ಹೊಂದಿರುತ್ತದೆಯೋ ಆ ಕ್ಷೇತ್ರಕ್ಕೆ ಆದ್ಯತೆ ನೀಡಿ, ಉಳಿದ ಕ್ಷೇತ್ರಗಳನ್ನು ನಿರ್ಲಕ್ಷಿಸುತ್ತದೆ. ೬. ಇದು ಅನೇಕ ಕಾನೂನಿನ ಅಡಚಣೆಗಳಿಂದ ಕೂಡಿದೆ. ಆದುದರಿಂದ ಇದರಲ್ಲಿ ಪಾಲ್ಗೋಳ್ಳಲು ಹಿಂಜರಿಯುತ್ತಾರೆ. ೭. ಇದು ಬೇಗನೆ ಕೆಡುವ ಸರಕುಗಳಿಗೆ ಯೋಗ್ಯವಾಗಿಲ್ಲ. ೮. ಸರಕುಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಕೇವಲ ವಿವರಣೆಯ ಆಧಾರದ ಮೇಲೆ ಸರಕುಗಳನ್ನು ಖರೀದಿಸಬೇಕು, ಸರಿಹೊಂದುತ್ತದೆಯೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಭೀತಿ ಇರುತ್ತದೆ. ೯. ಸರಕು ���ಡೆಯಲು ದೀರ್ಘಕಾಲ ಬೇಕು. ಅಂದರೆ ಬೇಕೆನಿಸಿದಾಗ ಸರಕುಗಳು ಲಭಿಸುವುದಿಲ್ಲ. ೧೦. ವಿದೇಶಿ ವಿನಿಮಯ ದೊರಕಿಸುವುದು ಕಷ್ಟಕರ. ೧೧. ಈ ವ್ಯವಹಾರ ಶಿಕ್ಷಣ ವಂತರಿಗೆ ಮಾತ್ರ ಸಾಧ್ಯ ಅವಿಧ್ಯಾವಂತರಿಗೆ ಇದು ಸೂಕ್ತವಲ್ಲ.
ಅಂತರಾಷ್ಟ್ರೀಯ ವ್ಯವಹಾರದ ವ್ಯಾಪ್ತಿ
[ಬದಲಾಯಿಸಿ]ಈಗಾಗಲೇ ನಮಗೆ ತಿಳಿದಿರುವಂತೆ ಇದರ ವ್ಯಾಪ್ತಿ ಬಹಳ ವಿಶಾಲವಾಗಿದೆ. ಅಂತರಾಷ್ಟ್ರೀಯ ವ್ಯವಹಾರವು ಅಂತರಾಷ್ಟ್ರೀಯ ವ್ಯಾಪಾರಕ್ಕಿಂತ ವಿಶಾಲವಾಗಿದೆ. ಅಂತರಾಷ್ಟ್ರೀಯ ವ್ಯಾಪಾರವು ಕೇವಲ ಸರಕುಗಳ ಕ್ರಯ - ವಿಕ್ರಯಕ್ಕೆ ಸಂಬಂಧಿಸಿದೆ. ಆದರೆ ಅಂತರಾಷ್ಟ್ರೀಯ ವ್ಯವಹಾರವು ಸರಕುಗಳ ಜೊತೆಗೆ ಸೇವೆಗಳ ಕ್ರಯ ವಿಕ್ರಯಗಳಿಗೂ ಸಂಬಂಧಿಸಿದೆ. ಇದರ ವ್ಯಾಪ್ತಿಯನ್ನು ಈ ಕೆಳಕಂಡ ಅಂಶಗಳಿಂದ ತಿಳಿಯಬಹುದಾಗಿದೆ. ೧. ಸರಕುಗಳ ಆಮದು ರಫ್ತು : ವಿದೇಶಿ ವ್ಯವಹಾರವು ಗೋಚರ ಸರಕುಗಳ ಕ್ರಯ ವಿಕ್ರಯಗಳಿಗೆ ಸಂಬಂಧಿಸಿದೆ. ೨. ಸೇವೆಗಳ ಆಮದು ರಫ್ತು :ಅಗೋಚರ ಸೇವೆಗಳಿಗೆ ಸಂಬಂಧಿಸಿದೆ. ಇದನ್ನು ಸೇವೆಗಳ ವ್ಯವಹಾರ ಎಂದೂ ಕರೆಯುತ್ತಾರೆ. ಪ್ರವಾಸೋದ್ಯಮ, ಊಟ ಮತ್ತು ವಸತಿ, ಮನರಂಜನೆ, ಸುಸಜ್ಜಿತ ಸಾರಿಗೆ, ಸಂವಹನ (ಅಂಚೆ, ತಂತಿ,ದೂರವಾಣಿ, ಫ್ಯಾಕ್ಸ್ ಕೊರಿಯರ್ ಸೇವೆ ಇತ್ಯಾದಿ) ನಿರ್ಮಾಣ ಮತ್ತು ಇಂಜಿನಿಯರಿಂಗ್ ಸೇವೆ , ವೃತ್ತಿಪರ ಸೇವೆಗಳು ಮಾರಾಟ ಪ್ರಕ್ರಿಯೆ (ಠೋಕ ವ್ಯಾಪಾರ, ಚಿಲ್ಲರೆ ವ್ಯಾಪಾರ, ಸಂಶೋಧನೆ, ಜಾಹೀರಾತು) ಶಿಕ್ಷಣ ಮತ್ತು ಹಣಕಾಸು ಸೇವೆಗಳು. ೩. ಅನುಮತಿ ಮತ್ತು ಗುತ್ತಿಗೆ : ಅನುಮತಿ ನೀಡಿಕೆ ಎಂದರೆ " ನಮ್ಮ ಹಕ್ಕು ಅಥವಾ ವ್ಯಾಪಾರ ರಹಸ್ಯಗಳನ್ನು ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿದೇಶಿಯರು ಸರಕುಗಳನ್ನು ಉತ್ಪಾದಿಸುವುದು ಎಂದರ್ಥ " ಇದಕ್ಕಾಗಿ ಅವರು ನಮಗೆ ನಿರ್ದಿಷ್ಠ ಶುಲ್ಕ ಅಥವಾ ಹಣವನ್ನು ನೀಡುತ್ತಾರೆ. ಹೊರಗುತ್ತಿಗೆ ವ್ಯವಹಾರವು ಅನುಮತಿ ನೀಡಿಕೆಗೆ ಸರಿಸಮಾನವಾದುದು. ಅನುಮತಿ ನೀಡಿಕೆಯು ಸರಕುಗಳಿಗೆ ಸಂಭಂದಿಸಿರುತ್ತದೆ. ಆದರೆ ಹೊರಗುತ್ತಿಗೆಯು ಸೇವೆಗಳಿಗೆ ಸಂಬಂಧಿಸಿರುತ್ತದೆ. ಇದು ಅಂತರಾಷ್ಟ್ರೀಯ ವ್ಯವಹಾರದಲ್ಲಿ ಭಾಗವಹಿಸುವ ಒಂದು ವಿಧಾನವಾಗಿದೆ. ೪. ವಿದೇಶಿ ಹೊಡಿಕೆ : ಇದೂ ಕೂಡ ವಿದೇಶಿ ವ್ಯವಹಾರದ ಒಂದು ರೂಪವಾಗಿದೆ. ಹಣಕಾಸಿನ ಪ್ರತಿಫಲಕ್ಕಾಗಿ ವಿದೇಶಗಳಲ್ಲಿ ಬಂಡವಾಳವನ್ನು ಹೊಸುವುದಕ್ಕೆ ವಿದೇಶಿ ಹೂಡಿಕೆ ಎನ್ನುವರು. ಇದರಲ್ಲಿ ಎರಡು ವಿಧಗಳು. ಅವುಗಳೆಂದರೆ :
- ನೇರ / ಪ್ರತ್ಯಕ್ಷ ಹೂಡಿಕೆ
ನೇರ / ಪ್ರತ್ಯಕ್ಷ ಹೂಡಿಕೆ ಎಂದರೆ ವಿದೇಶಗಳಲ್ಲಿ ಉತ್ಪಾದನೆ ಮತ್ತು ಮಾರಾಟ ಕ್ಷೇತ್ರಗಳಲ್ಲಿ ಬಂಡವಾಳವನ್ನು ತೊಡಗಿಸುವುದು. ಇದನ್ನು ವಿದೇಶಿ ನೇರ ಬಂಡವಾಳ ಹೂಡಿಕೆ ಎಂದೂ ಕರೆಯುತ್ತಾರೆ. ವ್ಯವಹಾರವನ್ನು ನಿಯಂತ್ರಿಸುವ ಹಕ್ಕು ಇದಾಗಿರುತ್ತದೆ.
- ಪರೋಕ್ಷ ಹೂಡಿಕೆ
ಪರೋಕ್ಷ ಹೊಡಿಕೆ : ಎಂದರೆ ವಿದೇಶಿ ಕಂಪನಿಗಳ ಶೇರುಗಳ ಮೇಲೆ ಬಂಡವಾಳವನ್ನು ತೊಡಗಿಸುವುದು ಮತ್ತು ವಿದೇಶಿಕಂಪನಿಗಳಿಗೆ ಸಾಲ ನೀಡುವುದಾಗಿದೆ. ಇದರಿಂದ ನಿಯಮಿತವಾಗಿ ಲಾಭಾಂಶ ಮತ್ತು ಬಡ್ಡಿ ಪಡೆಯಬಹುದು.
ಇವುಗಳನ್ನು ನೋಡಿ
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ https://www.wto.org/english/res_e/statis_e/statis_e.htm
- ↑ https://books.google.co.in/books?id=PDvGO8k2JrsC&printsec=frontcover&dq=international+trade&hl=en&sa=X&ved=0ahUKEwjj4a_ow57JAhUOA44KHb83BCIQ6AEIIDAB#v=onepage&q=international%20trade&f=false
- ↑ http://indianexpress.com/article/lifestyle/international-trade-fair-2015-a-grand-spectacle/
- ↑ Joshi, Rakesh Mohan, (2009) International Business, Oxford University Press, ISBN 0-19-568909-7
- ↑ http://www.scribd.com/doc/26824877/Reasons-to-Enter-International-Business#scribd
- ↑ http://www.projects4mba.com/main-difference-between-domestic-and-international-business/131
- ↑ http://smallbusiness.chron.com/advantages-global-companies-57127.html
- ↑ http://www.scribd.com/doc/126534952/Advantage-and-Disadvantage-of-International-Business#scribd