ಮೋರ್ನಿ
ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಮೊರ್ನಿ ಬೆಟ್ಟದಲ್ಲಿರುವ ಹಳ್ಳಿ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ ಮೋರ್ನಿ. ಇದು ಪಂಚಕುಲ ನಗರದಿಂದ ೩೫ ಕಿಲೋಮೀಟರ್ ದೂರದಲ್ಲಿದೆ. ಇದು ಹಿಮಾಲಯದ ನೋಟಗಳು, ಸಸ್ಯಗಳು ಮತ್ತು ಸರೋವರಗಳಿಗೆ ಹೆಸರುವಾಸಿಯಾಗಿದೆ.
ಪ್ರವಾಸೋದ್ಯಮ
ಕೋಟೆಗಳು
ಮೋರ್ನಿ ಕೋಟೆಯ ವಸ್ತುಸಂಗ್ರಹಾಲಯ
ಮೊರ್ನಿ ಪ್ರದೇಶದಲ್ಲಿ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಕೋಟೆ ಇದೆ. ಇದನ್ನು ರಾಣಿ ಮೊರ್ನಿ ನಿರ್ಮಿಸಿದ್ದಾಳೆ. ಗುಡ್ಡಗಳು ಪೈನ್ ಮರಗಳಿಂದ ಆವೃತವಾಗಿವೆ ಮತ್ತು ಜನಪ್ರಿಯ ಚಾರಣ ಸ್ಥಳಗಳಾಗಿವೆ. ಈ ಕೋಟೆಯಲ್ಲಿ 2017-18ರಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಿದೆ.[೧]
ಗರ್ಹಿ ಕೋಟಾಹಾ ಕೋಟೆ
ಗರ್ಹಿ ಕೋಟಾಹಾ ಕೋಟೆಯು ರಾ.ಹೆ. ೧ ರಲ್ಲಿದೆ. ಇದನ್ನು ಬ್ರಿಟಿಷ್ ರಾಜ್ ಭಾಗಶಃ ಕೆಡವಿದ್ದರಿಂದ ಈಗ ಹಾಳುಬಿದ್ದಿದೆ.[೨]
ಮಾಸೂಮ್‍ಪುರ್ ಕೋಟೆ
ಮಸೂಮ್‍ಪೂರ್ ಕೋಟೆಯು ಒಂದು ಸಣ್ಣ ಹೊರಠಾಣೆ ಕೋಟೆಯಾಗಿದ್ದು ಮಣ್ಣಿನ ಗುಡ್ಡದ ಮೇಲಿದ್ದು ದಪ್ಪ ಕಲ್ಲು-ಇಟ್ಟಿಗೆ ಗೋಡೆಗಳನ್ನು ಹೊಂದಿದೆ. ಈಶಾನ್ಯ ದಿಕ್ಕಿನಲ್ಲಿರುವ ಸಮಲೋಥಾ ದೇವಸ್ಥಾನದ ಪ್ರವೇಶ ಮಾರ್ಗವನ್ನು ನಿಯಂತ್ರಿಸಲು ಇದನ್ನು ನಿರ್ಮಿಸಲಾಯಿತು.
ಟಿಕ್ಕರ್ ತಾಲ್‍ನ ಅವಳಿ ಸರೋವರಗಳು: ಭೀಮ್ ತಾಲ್ ಮತ್ತು ದ್ರೌಪದಿ ತಾಲ್
ಒಂದು ಬೆಟ್ಟವು ಎರಡೂ ಸರೋವರಗಳನ್ನು ವಿಭಜಿಸುತ್ತದೆ. ದೊಡ್ಡದನ್ನು ಭೀಮ್ ತಾಲ್ ಅಥವಾ ಕೇವಲ ಟಿಕ್ಕರ್ ತಾಲ್ ಎಂದು ಕರೆಯಲಾಗುತ್ತದೆ, ಇದು 550 ಮೀಟರ್ ಅಗಲ ಮತ್ತು 460 ಮೀಟರ್ ಉದ್ದವಿದೆ.[೩][೪] ಚಿಕ್ಕದನ್ನು ದ್ರೌಪದಿ ತಾಲ್ ಅಥವಾ ಛೋಟಾ ಟಿಕ್ಕರ್ ತಾಲ್ ಎಂದು ಕರೆಯಲಾಗುತ್ತದೆ. ಇದು 365 ಮೀಟರ್ ಅಗಲ ಮತ್ತು ಉದ್ದವಾಗಿದೆ.
ಮೋರ್ನಿ ಗುಡ್ಡದ ಜಲಪಾತ
ಕಾಡಿನ ಹಾದಿಯ ಮೂಲಕ ತಲುಪಬಹುದಾದ ಜಲಪಾತವಿದ್ದು ಮಳೆಗಾಲದಲ್ಲಿ ಸಕ್ರಿಯವಾಗಿರುತ್ತದೆ.[೩][೫]
ಮೊರ್ನಿ ಫೆಸೆಂಟ್ ಸಂತಾನೋತ್ಪತ್ತಿ ಕೇಂದ್ರ
ಮೊರ್ನಿ ಫೆಸೆಂಟ್ ಸಂತಾನೋತ್ಪತ್ತಿ ಕೇಂದ್ರವು ಕೆಂಪು ಕಾಡೂಕೋಳಿಗಳು ಮತ್ತು ಕಾಲಿಜ್ ಫೆಸೆಂಟ್‌ಗಳ ಸಂತಾನೋತ್ಪತ್ತಿಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸೆರೆಯಲ್ಲಿ ಬೆಳೆಸಿದ ಪಕ್ಷಿಗಳನ್ನು ನಿಯಮಿತವಾಗಿ ಕಾಡಿಗೆ ಬಿಡುಗಡೆ ಮಾಡುತ್ತದೆ.
ಮೋರ್ನಿ ಗುಡ್ಡದ ಪುರಾತತ್ವ ದೇವಾಲಯ ತಾಣ
ಟಿಕ್ಕರ್ ತಾಲ್‍ನ ತೀರದಲ್ಲಿರುವ ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಠಾಕೂರ್ ದ್ವಾರ್ ದೇವಾಲಯವನ್ನು[೬] 10 ನೇ ಶತಮಾನದ ದೇವಾಲಯ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಜಾನಪದ ದೇವತೆ ಬೂರಿ ಸಿಂಗ್‌ಗೆ ಸಮರ್ಪಿತವಾಗಿರುವ ಭೂರಿ ಸಿಂಗ್ ದೇವತಾ ದೇವಸ್ಥಾನವು 1870 ಮೀಟರ್ ಎತ್ತರದಲ್ಲಿನ ಪೆಜರ್ಲಿ ಗ್ರಾಮದಲ್ಲಿರುವ ಬಂಡೆ-ದೇವಾಲಯವಾಗಿದೆ.
ಮೂಲಿಕೆ ಕಾಡು
2018 ರಲ್ಲಿ, ಹರಿಯಾಣ ಸರ್ಕಾರವು ಸಮುದಾಯ ಸ್ವ-ಸಹಾಯ ಗುಂಪುಗಳ ಸಹಾಯದಿಂದ 50,000 ಹೆಕ್ಟೇರ್ ಗಿಡಮೂಲಿಕೆ ಅರಣ್ಯವನ್ನು ಸ್ಥಾಪಿಸಲು ಪ್ರಾರಂಭಿಸಿತು.
ಛಾಯಾಂಕಣ
-
ಟಿಕ್ಕರ್ ತಾಲ್ಗೆ ಒರಟಾಗಿ ಜೋಡಿಸಿದ ಕಲ್ಲುಗಳ ಮಾರ್ಗ
-
ಟಿಕ್ಕರ್ ತಾಲ್‍ನ ಜಲಸಂಗ್ರಹ
-
ಶಿಬಿರ ಮತ್ತು ಪಿಕ್ನಿಕ್ ಮೈದಾನವಿರುವ ಟಿಕ್ಕರ್ ತಾಲ್
-
ಪಿಕ್ನಿಕ್ ಮೈದಾನದಲ್ಲಿ ದಂಪತಿಗಳಿಗೆ ಸುಂದರವಾದ ಬೆಂಚ್
-
ಹರಿಯಾಣ ಪ್ರವಾಸೋದ್ಯಮದ ಮೌಂಟೇನ್ ಕ್ವಿಲ್ ಪ್ರವಾಸಿ ರೆಸಾರ್ಟ್
-
ಪಿಕ್ನಿಕ್ ಮೈದಾನವನ್ನು ಹೊಂದಿರುವ ಮೌಂಟೇನ್ ಕ್ವಿಲ್ ಪ್ರವಾಸಿ ರೆಸಾರ್ಟ್
-
ಮೌಂಟೇನ್ ಕ್ವಿಲ್ ಟೂರಿಸ್ಟ್ ರೆಸಾರ್ಟ್ನ ಸಮೀಪ ದರ್ಶನ
-
ಪ್ರಾಚೀನ ಹಿಂದೂ ದೇವಾಲಯ
ಉಲ್ಲೇಖಗಳು
ಹೊರಗಿನ ಕೊಂಡಿಗಳು
- ಮೊರ್ನಿ ಹಿಲ್ಸ್ ವ್ಯೂ Archived 2018-02-01 ವೇಬ್ಯಾಕ್ ಮೆಷಿನ್ ನಲ್ಲಿ.
- ಚಂಡೀಗ Chandigarh ದಿಂದ ಮೊರ್ನಿ ಬೆಟ್ಟಕ್ಕೆ
ಆಧಾರಗಳು
- Morni Hills View Archived 2017-09-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://haryana.punjabkesari.in/hisar/news/cm-has-done-inspection-of-herbal-forests-734137 CM has done inspection of herbal forests, Punjab Kesari, 8 Jan 2018.
- ↑ Masoompur fort ruins Archived 2021-01-16 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ೩.೦ ೩.೧ http://tourism.webindia123.com/tourism/hillstations/Morni/index.htm Morni Hills
- ↑ Taals of Morni hill Archived 2021-01-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "Tikker lake". Archived from the original on 2017-05-17. Retrieved 2021-02-07.
- ↑ William Wilson Hunter, 1885, The Imperial Gazetteer of India.
- http://pradhanmantrivikasyojana.in
- http://onlineapplyform.com/ Archived 2021-01-28 ವೇಬ್ಯಾಕ್ ಮೆಷಿನ್ ನಲ್ಲಿ.
- http://railwaysignallingconcepts.in
- http://vacancyrecruitment.com Archived 2021-01-16 ವೇಬ್ಯಾಕ್ ಮೆಷಿನ್ ನಲ್ಲಿ.