ವಿಷಯಕ್ಕೆ ಹೋಗು

ಭಾರತದ ಸೈನಿಕ ಶಿಕ್ಷಣಸಂಸ್ಥೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ರಕ್ಷಣಾ ಸೇವೆಗಳ ಇಲಾಖೆ ಯು ನವೀನ ತಲೆಮಾರಿನ ಸೈನಿಕ ವಿಜ್ಞಾನಶಾಸ್ತ್ರ, ಸಮರಾಂಗಣ ಕೌಶಲ್ಯ ಮತ್ತು ವ್ಯೂಹರಚನಾ ಕೌಶಲ್ಯ ಮತ್ತು ಅವುಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ವೃತ್ತಿಪರ ಯೋಧರಿಗೆ ತರಬೇತಿ ನೀಡುವ ಉದ್ದೇಶದಿಂದ ಅನೇಕ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬ್ಬಂದಿ ಮಹಾವಿದ್ಯಾಲಯಗಳನ್ನು ಭಾರತದಾದ್ಯಂತ ಸ್ಥಾಪಿಸಿದೆ.

ಶಿಕ್ಷಣ ಮತ್ತು ತರಬೇತಿ

[ಬದಲಾಯಿಸಿ]

ರಾಷ್ಟ್ರೀಯ ಭಾರತೀಯ ಸೈನಿಕರ ಮಹಾವಿದ್ಯಾಲಯ  : ಡೆಹ್ರಾಡೂನ್‌‌ನಲ್ಲಿರುವ ರಾಷ್ಟ್ರೀಯ ಭಾರತೀಯ ಸೈನಿಕರ ಮಹಾವಿದ್ಯಾಲಯವನ್ನು (RIMC), ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ ಭಾರತೀಯರಿಗೆ ಅಗತ್ಯವಾದ ಪೂರ್ವಭಾವಿ ತರಬೇತಿಯನ್ನು ನೀಡುವ ಉದ್ದೇಶದೊಂದಿಗೆ 13 ಮಾರ್ಚ್‌ 1922ರಂದು ಸ್ಥಾಪಿಸಲಾಯಿತು. ಈ ವಿದ್ಯಾಸಂಸ್ಥೆಯು ಖಡಕ್‌ವಾಸ್ಲಾ (ಪುಣೆ)ದಲ್ಲಿರುವ ರಾಷ್ಟ್ರೀಯ ರಕ್ಷಣಾಪಡೆ/ಭದ್ರತಾಪಡೆಗಳ ಶಿಕ್ಷಣಶಾಲೆಗೆ ಪ್ರಸ್ತುತ ಒದಗಣೆ ವಿದ್ಯಾಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಭೂಸೇನಾಪಡೆ, ನೌಕಾಪಡೆ ಹಾಗೂ ವಾಯುಪಡೆಗಳ ಸೈನಿಕ ವಿದ್ಯಾರ್ಥಿಗಳು ತಮ್ಮ ಆರಂಭಿಕ ತರಬೇತಿಯನ್ನು ಪಡೆಯುತ್ತಾರೆ.

ಸೈನಿಕ ಶಾಲೆಗಳು  : ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯು ನೇಮಕಾತಿ ನೆಲೆಗಳನ್ನು ವಿಸ್ತರಿಸಲು ಹಾಗೂ ರಕ್ಷಣಾ ಪಡೆಗಳ ಅಧಿಕಾರಿಗಳ ಕೇಡರ್‌ನಲ್ಲಿ ಎದ್ದು ಕಾಣಿಸುತ್ತಿದ್ದ ಪ್ರಾಂತೀಯ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ 1961ರಲ್ಲಿ ಕಾರ್ಯಾರಂಭ ಮಾಡಿತು. ಸೈನಿಕ ಶಾಲೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒಳಗೊಂಡ ಜಂಟಿ ಉದ್ಯಮವಾಗಿವೆ. ಪ್ರಸ್ತುತವಾಗಿ 18 ಸೈನಿಕ ಶಾಲೆಗಳು ಸೈನಿಕ ಶಾಲೆಗಳ ಸಂಘಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿವೆ. ಈ ಶಾಲೆಗಳು ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌/ಮಾಧ್ಯಮಿಕ ಶಿಕ್ಷಣದ ಕೇಂದ್ರ ಮಂಡಳಿಯಿಂದ ಅಂಗೀಕೃತಗೊಂಡಿವೆ.

ಸೇನಾಪಡೆಯ ಶಾಲೆಗಳು  : ಅಜ್ಮೇರ್‌‌, ಬೆಂಗಳೂರು, ಬೆಳಗಾವಿ, ಛೈಲ್‌/ಚೈಲ್‌‌ ಮತ್ತು ಧೋಲ್‌ಪುರ್‌‌ಗಳಲ್ಲಿ ಬ್ರಿಟಿಷರ ಕಾಲದಲ್ಲಿ ಅವುಗಳನ್ನು ಅಳವಡಿಸಲಾಗಿದ್ದು ಅವುಗಳಿಗೆ ಕಿಂಗ್‌ ಜಾರ್ಜ್‌ರ ಸೇನಾಪಡೆಯ ಶಾಲೆಗಳು ಎಂದು ಕರೆಯಲಾಗುತ್ತಿತ್ತು.

  • ಛೈಲ್‌/ಚೈಲ್‌‌ ಸೇನಾಪಡೆಯ ಶಾಲೆ ಛೈಲ್‌/ಚೈಲ್‌‌ (ಅತ್ಯಂತ ಹಳೆಯದು) ನಗರ (ಈ ಹಿಂದೆ ಕಿಂಗ್‌ ಜಾರ್ಜ್‌ ರಾಯಲ್‌ ಭಾರತೀಯ ಸೈನಿಕ ಮಹಾವಿದ್ಯಾಲಯ ಎಂದು ಕರೆಯಲಾಗುತ್ತಿತ್ತು) ಶಿಮ್ಲಾ.
  • ಅಜ್ಮೇರ್‌‌ ಸೇನಾಪಡೆಯ ಶಾಲೆ.
  • ಬೆಂಗಳೂರು ಸೇನಾಪಡೆಯ ಶಾಲೆ.
  • ಬೆಳಗಾವಿ ಸೇನಾಪಡೆಯ ಶಾಲೆ.
  • ಧೋಲ್‌ಪುರ್‌‌ ಸೇನಾಪಡೆಯ ಶಾಲೆ.

ಭಾರತೀಯ ಸೇನೆ

[ಬದಲಾಯಿಸಿ]

ಭಾರತೀಯ ಸೇನಾಪಡೆಯ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರಧಾನ ಶಿಕ್ಷಣಸಂಸ್ಥೆಗಳಲ್ಲಿ ಈ ಕೆಳಕಂಡವು ಸೇರಿವೆ :

  • ಸೇನಾಪಡೆಯ ಸಮರ ಮಹಾವಿದ್ಯಾಲಯ : ಸೇನಾಧಿಕಾರಿಗಳಿಗೆ ಎಲ್ಲಾ ಅಂಗಸಂಸ್ಥೆಗಳ ಪ್ರಧಾನ ಸಮರೋಪಾಯ ತರಬೇತಿ ಸಂಸ್ಥೆಯಾಗಿದ್ದು ಸಮರತಂತ್ರಗಳು ಹಾಗೂ ಕಾರ್ಯಾಚರಣಾ ಸೈನ್ಯ ವ್ಯವಸ್ಥಾಪನ ತಂತ್ರಗಳ ಕ್ಷೇತ್ರಗಳಲ್ಲಿ ಪರಿಕಲ್ಪನೆ ಹಾಗೂ ಸಿದ್ಧಾಂತಗಳ ಮೌಲ್ಯಮಾಪನ ಮಾಡುವಂತಹಾ ಪ್ರಮುಖ ಕಾರ್ಯಭಾರವನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯನ್ನು ಹಿಂದೆ ಮ್ಹೋ ನಗರದ ಯುದ್ಧ ಮಹಾವಿದ್ಯಾಲಯ ಎಂದು ಕರೆಯಲಾಗುತ್ತಿತ್ತು , ಹಾಗೂ 1 ಜನವರಿ 2003ರಿಂದ 'ಮ್ಹೋ ನಗರದ ಸೇನಾಪಡೆಯ ಸಮರ ಮಹಾವಿದ್ಯಾಲಯ ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಯಿತು.
  • ಪದಾತಿದಳ ಶಾಲೆ  : ಇಂದೋರ್‌‌ dist. ನ ಮ್ಹೋ ನಗರದ],  : ಪದಾತಿದಳ ಶಾಲೆಯು, MP] [[ಭಾರತೀಯ ಸೇನಾಪಡೆಯ ಅತ್ಯಂತ ದೊಡ್ಡದಾದ ಹಾಗೂ ಹಳೆಯದಾದ ಸೈನಿಕಪಡೆ ತರಬೇತಿ ಕೇಂದ್ರವಾಗಿದೆ. ಈ ಶಿಕ್ಷಣಸಂಸ್ಥೆಯು ವ್ಯತ್ಯಾಸಗೊಳ್ಳಬಹುದಾದ ಭೂಪ್ರದೇಶ ಹಾಗೂ ವಾತಾವರಣದಲ್ಲಿ ಕಾರ್ಯಾಚರಿಸಬೇಕಾದ ಪದಾತಿದಳಕ್ಕೆ ಸಂಬಂಧಿಸಿದ ಸಮರೋಪಾಯಗಳ ಕವಾಯತುಗಳು ಹಾಗೂ ಪರಿಕಲ್ಪನೆಗಳ ಸಂಪೂರ್ಣ ಶ್ರೇಣಿಯನ್ನು ಅಭಿವೃದ್ಧಿಪಡಿಸುವ ಹಾಗೂ ಅದನ್ನು ಕಾಲಕಾಲಕ್ಕೆ ಪರಿಚಯಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಈ ಶಿಕ್ಷಣಸಂಸ್ಥೆಯು ಸೇನಾಪಡೆಯ ಗುರಿಕಾರತ್ವ ಘಟಕ/ಆರ್ಮಿ ಮಾರ್ಕ್ಸ್‌ಮನ್‌ಷಿಪ್‌ ಯೂನಿಟ್‌ (AMU)ನ ಆಶ್ರಯದಲ್ಲಿ ಪದಾತಿದಳ ಶಾಲೆಯ ಭಾಗವಾದ ರಾಷ್ಟ್ರೀಯ ಬಂದೂಕುಗಾರಿಕೆ ತಂಡಕ್ಕೆ ಕೂಡಾ ���ರಬೇತಿ ನೀಡುತ್ತದೆ.
  • ಕಿರಿಯ ನಾಯಕರ ಸೈನಿಕ ವಿಭಾಗ : ಬೆಳಗಾವಿಯ ಕಿರಿಯ ನಾಯಕರ ಸೈನಿಕ ವಿಭಾಗವು ಮ್ಹೋ ��ಟ್ಟಣದ ಪದಾತಿದಳ ಶಾಲೆಯ ಭಾಗವಾಗಿದ್ದು ಕಿರಿಯ ಅಧಿಕಾರಿಗಳು ಹಾಗೂ ಕಿರಿಯ ನಾಯಕರನ್ನು ಉಪಘಟಕಗಳ ಮಟ್ಟದಲ್ಲಿ ಸಮರತಂತ್ರೀಯ ಹಾಗೂ ವಿಶೇಷ ಕಾರ್ಯಾಚರಣೆಯ ತಂತ್ರಗಳಿಗೆ ಸಂಬಂಧಪಟ್ಟ ಹಾಗೆ ತರಬೇತಿಗಳನ್ನು ನೀಡಿ ಅವರು ತಮಗೆ ನಿರ್ವಹಿಸಲಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮಾಡಲಾಗುತ್ತದೆ.
  • ಭಾರತೀಯ ಸೈನಿಕ ಶಿಕ್ಷಣಶಾಲೆ : ಡೆಹ್ರಾಡೂನ್‌‌ನ ಭಾರತೀಯ ಸೈನಿಕ ಶಿಕ್ಷಣಶಾಲೆಗೆ (IMA), ಉತ್ತಮ ಮಟ್ಟದ ಶಿಸ್ತನ್ನು ರೂಢಿಸಿಕೊಂಡಿದ್ದ ಸಾದ್ಯಂತವಾಗಿ ಕಾರ್ಯಾಸಕ್ತರಾಗಿದ್ದ ಹಾಗೂ ರಾಷ್ಟ್ರದ ಸೇವೆಯನ್ನು ಘನತೆ ಹಾಗೂ ಗೌರವಗಳಿಂದ ಕೈಗೊಳ್ಳುವ ಸಮರ್ಪಕ ಬದ್ಧತೆಯನ್ನು ಹೊಂದಿದ್ದ ಹಲವು ಶ್ರೇಷ್ಠ ಅಧಿಕಾರಿಗಳನ್ನು ನೀಡಿದ ಖ್ಯಾತಿಯನ್ನು ಪಡೆದಿದೆ. ಈ ಶಿಕ್ಷಣಶಾಲೆಯ ಬೀಳ್ಕೊಡುಗೆಯು ಅದರ ಹಳೆಯ ವಿದ್ಯಾರ್ಥಿಗಳು ಬಿಕ್ಕಟಿನ ಸಮಯದಲ್ಲಿ ತೋರಿದ ಶೌರ್ಯ, ಪರಾಕ್ರಮ ಹಾಗೂ ಬಲಿದಾನಗಳ ಹೇರಳ ವೀರಗಾಥೆಗಳಿಂದ ಕೂಡಿರುತ್ತದೆ.
  • ಅಧಿಕಾರಿಗಳ ತರಬೇತಿ ಶಿಕ್ಷಣಶಾಲೆ : ಅಧಿಕಾರಿಗಳ ತರಬೇತಿ ಶಿಕ್ಷಣಶಾಲೆಯು ಯುವಕರು ಹಾಗೂ ಯುವತಿಯರಿಗೆ ಅವರು ಯುಕ್ತವಾಗಿಯೇ ಭಾರತೀಯ ಸೇನಾಪಡೆಯಲ್ಲಿ ಅಧಿಕಾರಿಗಳಾಗಿ ತಮ್ಮ ಸ್ಥಾನಗಳನ್ನು ಪಡೆದುಕೊಳ್ಳುವಂತೆ ತರಬೇತಿಯನ್ನು ನೀಡಲಾಗಿರುತ್ತದೆ.,ಚೆನ್ನೈ
  • ಎತ್ತರ ಪ್ರದೇಶದ ಸಮರ ಶಿಕ್ಷಣಶಾಲೆ  : ಗುಲ್‌ಮಾರ್ಗ್‌‌ ನಗರದ ಎತ್ತರ ಪ್ರದೇಶದ ಸಮರ ಶಿಕ್ಷಣ ಶಾಲೆಯು (HAWS) ಭಾರತೀಯ ಸೇನಾಪಡೆಯ ಸಿಬ್ಬಂದಿಗೆ ಪರ್ವತಪ್ರದೇಶದ ವಿಶೇಷಜ್ಞ ಸಮರ ಮತ್ತು ಚಳಿಗಾಲದ ಸಮರಾಂಗಣದ ತರಬೇತಿಯನ್ನು ನೀಡುವ ಒಂದು ತರಬೇತಿ ಸಂಸ್ಥೆಯಾಗಿದೆ.
  • ಕವಚಸಜ್ಜಿತ ವಾಹನಪಡೆಗಳ ಕೇಂದ್ರ ಹಾಗೂ ಶಿಕ್ಷಣ ಶಾಲೆ  : ಅಹ್ಮದ್‌ ನಗರದ ಕವಚಸಜ್ಜಿತ ವಾಹನಪಡೆಗಳ ಕೇಂದ್ರ ಹಾಗೂ ಶಿಕ್ಷಣ ಶಾಲೆಯು (ACCS), ಸೇನಾಪಡೆಯ ಒಂದು ಪ್ರಧಾನ ಶಿಕ್ಷಣಸಂಸ್ಥೆಯಾಗಿದೆ. ಯುದ್ಧಗಳಲ್ಲಿನ ಯಾಂತ್ರಿಕ ಪಡೆಗಳ ಬಳಕೆಗೆ ಹಾಗೂ ಭವಿಷ್ಯದ ಯುದ್ಧಗಳಿಗೆ ಬೇಕಾಗಬಹುದಾದ ಆಧುನಿಕ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸುವಿಕೆಗೆ ಸಂಬಂಧಿಸಿದ ತರಬೇತಿಯನ್ನು ನೀಡುತ್ತದೆ.
  • ಫಿರಂಗಿ ದಳದ ಶಿಕ್ಷಣಶಾಲೆ  : ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಡಿಯೋಲಾಲಿ ನಗರದ ಫಿರಂಗಿ ದಳದ ಶಿಕ್ಷಣಶಾಲೆಯು, ಸೇನಾಪಡೆಯ ಒಂದು ಪ್ರಧಾನ ಶಿಕ್ಷಣಸಂಸ್ಥೆಯಾಗಿದ್ದು ಪ್ರಯೋಜನೀಯ ತರಬೇತಿ ಸೇರ್ಪಡೆಯಾಗಬೇಕಿರುವ ಹೊಸ ಉಪಕರಣಗಳ ಮೌಲ್ಯಮಾಪನ ಹಾಗೂ ಫಿರಂಗಿ ದಳದ ಅನ್ವಯಿಕೆಗಳಿಗೆ ಸಂಬಂಧಿಸಿದ ನವೀನ ಪರಿಕಲ್ಪನೆಗಳು/ಸಿದ್ಧಾಂತಗಳ ಅಭಿವೃದ್ಧಿಪಡಿಕೆಗಳ ಸೇವೆಯನ್ನು ನೀಡುತ್ತದೆ.
  • ಸೇನಾಪಡೆಯ ವಾಯುರಕ್ಷಣಾದಳದ ಮಹಾವಿದ್ಯಾಲಯ  : ಗೋಪಾಲಪುರದ ಸೇನಾಪಡೆಯ ವಾಯುರಕ್ಷಣಾದಳದ ಮಹಾವಿದ್ಯಾಲಯವು (AADC), ಪರಿಣಾಮಕಾರಿ ವಾಯುರಕ್ಷಣೆ ಫಿರಂಗಿ ದಳಗಳ ರಕ್ಷಣೆಯ ಸೌಲಭ್ಯಗಳನ್ನು ಪದಾತಿದಳಗಳಿಗೆ/ಭೂಸೇನೆಗೆ ಶತೃಗಳಿಂದ ಬರಬಹುದಾದ ದೂರದ ಹಾಗೂ ಮಧ್ಯಮ ಎತ್ತರದ ವಾಯುದಾಳಿಗಳಿಂದ ಹಾಗೂ ವೈರಿಗಳ ವಾಯುದಾಳಿಗಳಿಂದ ಸೂಚಿತ ಸಮರತಂತ್ರೀಯ ಹಾಗೂ ವ್ಯೂಹರಚನೆಗೆ ಸಂಬಂಧಿಸಿದ ಮಹತ್ವದ ನೆಲೆಗಳು ಹಾಗೂ ನಿರ್ಣಾಯಕ ಕ್ಷೇತ್ರಗಳನ್ನು ಕ್ಲಿಷ್ಟಕರ ಅಪಾಯಗಳು ಮತ್ತು ನಾಶಗೊಳಿಸುವಿಕೆಗಳ ವಿರುದ್ಧ ನೀಡುವ ಬಗ್ಗೆ ತರಬೇತಿ ನೀಡುತ್ತದೆ.
  • ಸೈನಿಕ ತಾಂತ್ರಿಕ ಶಿಕ್ಷಣದ ಮಹಾವಿದ್ಯಾಲಯ  : ಪುಣೆಯ ಸೈನಿಕ ತಾಂತ್ರಿಕ ಶಿಕ್ಷಣದ ಮಹಾವಿದ್ಯಾಲಯವು (CME), i.e., ತರಬೇತಿ, ಸಲಹಾಮಂಡಳಿ, ಯೋಜನಾ ಸಂಶೋಧನೆ ಹಾಗೂ ಪ್ರಯೋಗ ಪರೀಕ್ಷೆ ಎಂಬ ಮೂರು ಅಂಶಗಳ ಜವಾಬ್ದಾರಿಯನ್ನು ಹೊತ್ತಿದೆ.
  • ದೂರಸಂಪರ್ಕ ತಾಂತ್ರಿಕಶಿಕ್ಷಣದ ಸೈನಿಕಮಹಾವಿದ್ಯಾಲಯ  : ಮ್ಹೋ ಪಟ್ಟಣದ ದೂರಸಂಪರ್ಕ ತಾಂತ್ರಿಕಶಿಕ್ಷಣದ ಸೈನಿಕಮಹಾವಿದ್ಯಾಲಯವು (MCTE), ದೂರಸಂಪರ್ಕ ಪಡೆ/ಕಾರ್ಪ್ಸ್‌ ಆಫ್‌ ಸಿಗ್ನಲ್ಸ್‌ನ ಒಂದು ಪ್ರಧಾನ ತರಬೇತಿ ಶಿಕ್ಷಣಸಂಸ್ಥೆಯಾಗಿದೆ. ಭಾರತೀಯ ಸೇನಾಪಡೆಯ ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಕ್ಷೇತ್ರಗಳ ತರಬೇತಿ ಅಗತ್ಯಗಳನ್ನು ಪೂರೈಸುವ ಹಲವು ವೈವಿಧ್ಯಮಯ ಕೋರ್ಸ್‌ಗಳನ್ನು MCTEನಲ್ಲಿ ನಡೆಸಲಾಗುತ್ತದೆ.
  • ಬಂಡಾಯನಿಗ್ರಹ ದಳ ಹಾಗೂ ಅರಣ್ಯ ಸಮರ(CIJW) ಶಾಲೆ  : (ಮಿಜೋರಾಮ್‌ನ) ವೈರೆಂಗ್ಟೆ ನಗರದ CIJW ಶಾಲೆ ಎಂದೇ ಜನಜನಿತವಾಗಿರುವ ಈ ಶಿಕ್ಷಣಸಂಸ್ಥೆಯು ಗೆರಿಲ್ಲಾ-ಹೋರಾಟವಿರೋಧಿ ತರಬೇತಿಗೆ ಮೀಸಲಾಗಿದೆ. ಈ ಶಿಕ್ಷಣಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಿ ಇತರೆ ಶಾಖೆಗಳಿಗೆ ಬಂಡಾಯನಿಗ್ರಹದಳ ಬೇಕಾದ ತರಬೇತಿಯನ್ನು ನೀಡುವ ಪ್ರಧಾನ ನಿಯೋಗಿ ಸಂಸ್ಥೆಯನ್ನಾಗಿ ಮಾಡಲಾಗಿದೆ.
  • ಕಿರಿಯ ನಾಯಕರ ಶಿಕ್ಷಣಶಾಲೆ (JLA) , ಬರೇಲಿ ಹಾಗೂ ರಾಮ್‌ಘಢ : ಬರೇಲಿ ಹಾಗೂ ರಾಮ್‌ಘಢಗಳಲ್ಲಿರುವ ಕಿರಿಯ ನಾಯಕರ ಶಿಕ್ಷಣಶಾಲೆಯು (JLA), ಕಿರಿಯ ನಿಯೋಜಿತ ಸೇನಾಧಿಕಾರಿಗಳು ಹಾಗೂ ಕಿರಿಯ ನಿಯೋಜಿತರಲ್ಲದ ಸೇನಾಧಿಕಾರಿಗಳ ಹುದ್ದೆಯಲ್ಲಿರುವ ಕಿರಿಯ ನಾಯಕರಿಗೆ ಸಾಂಸ್ಥಿಕ ಸ್ವರೂಪದ ನಾಯಕತ್ವ ತರಬೇತಿಯನ್ನು ನೀಡುತ್ತದೆ.
  • ಸೇನಾಪಡೆಯ ಸರಬರಾಜು ದಳದ (ASC) ಕೇಂದ್ರ ಹಾಗೂ ಮಹಾವಿದ್ಯಾಲಯ  : ಬೆಂಗಳೂರಿನಲ್ಲಿರುವ ASC ಕೇಂದ್ರ ಮತ್ತು ಮಹಾವಿದ್ಯಾಲಯವು, ವಿದೇಶಗಳಿಂದ ಬಂದ ಸರಬರಾಜುದಾರರ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಇಂಧನ, ತೈಲ ಹಾಗೂ ಕೀಲೆಣ್ಣೆಗಳು, ಯಾಂತ್ರಿಕ ಸಾಗಣೆ, ಪ್ರಾಣಿಗಳ ರವಾನೆ ಹಾಗೂ ವಿಮಾನದ ಮೂಲಕ ರವಾನೆಯ ಸೇವೆಗಳ ಬಗ್ಗೆ ಅಧಿಕಾರಿಗಳು, ಸೇನಾಪಡೆಯ ಸೇವಾದಳದ ಹಾಗೂ ಇತರೆ ವಿಭಾಗಗಳು ಹಾಗೂ ಸೇವಾವಿಭಾಗಗಳ ಅಧಿಕಾರಿಗಳಿಗಿಂತ ಕೆಳಗಿನ ದರ್ಜೆಯ ಸಿಬ್ಬಂದಿಗೆ ನೀಡುತ್ತದೆ. ಈ ಕೇಂದ್ರವು ಸೇನಾಪಡೆಯ ಸೇವಾದಳಕ್ಕೆ ನೇಮಕಾತಿಗೊಂಡವರನ್ನು ಸೇವೆಗೆ ಸೇರ್ಪಡೆಗೊಳಿಸಲು ತರಬೇತಿಯನ್ನು ಕೂಡಾ ನೀಡುತ್ತದೆ.
  • ಸೇನಾಪಡೆಯ ವೈದ್ಯಕೀಯ ದಳದ (AMC) ಕೇಂದ್ರ ಮತ್ತು ಶಾಲೆ  : ಲಕ್ನೌ ನಗರದ AMC ಕೇಂದ್ರ ಮತ್ತು ಶಿಕ್ಷಣಶಾಲೆಯು, ಸೇನಾಪಡೆಯ ವೈದ್ಯಕೀಯ ದಳದ ಹಾಗೂ ಸೈನಿಕ ಶುಶ್ರೂಷಾ ಸೇವೆಯ ಅಧಿಕಾರಿಗಳಿಗೆ ಅಗತ್ಯವಾದ ಮೂಲಭೂತದಿಂದ ಅತ್ಯಾಧುನಿಕ ಕೋರ್ಸ್‌‌ಗಳವರೆಗೆ ತರಬೇತಿಯನ್ನು ನೀಡುತ್ತದೆ. ಈ ತರಬೇತಿ ಕೇಂದ್ರವು ಸೇನಾಪಡೆಯ ವೈದ್ಯಕೀಯ ದಳಕ್ಕೆ ನೇಮಕಗೊಳ್ಳುವವರಿಗೆ ಸೇವೆಗೆ ಸೇರ್ಪಡೆಗೊಳಿಸಲು ತರಬೇತಿಯನ್ನು ಕೂಡಾ ನೀಡುತ್ತದೆ.
  • ಸಾಮಗ್ರಿ ನಿರ್ವಹಣೆಯ ಮಹಾವಿದ್ಯಾಲಯ (CMM), ಜಬಲ್‌‌ಪುರ  : ಜಬಲ್‌‌ಪುರದ ಸಾಮಗ್ರಿ ನಿರ್ವಹಣೆಯ ಮಹಾವಿದ್ಯಾಲಯವು (CMM) ಸೇನಾಪಡೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸೈನ್ಯ ವ್ಯವಸ್ಥಾಪನ ತಂತ್ರಗಳ ಕೋರ್ಸ್‌ಗಳ ತರಬೇತಿ ನೀಡುವ ಪ್ರಧಾನ ಕೇಂದ್ರವಾಗಿದೆ. ಈ ಕೇಂದ್ರವು ಉನ್ನತ ಮಟ್ಟದ ಸಾಮಗ್ರಿ ನಿರ್ವಹಣೆ, ಅಧಿಕ ಯುದ್ಧಸಾಮಗ್ರಿ ನಿರ್ವಹಣೆ ಹಾಗೂ ಕ್ವಾರ್ಟರ್‌ ಮಾಸ್ಟರ್‌ ಕೋರ್ಸ್‌ಗಳನ್ನು ಅಧಿಕಾರಿಗಳು, JCOಗಳು ಮತ್ತು NCOಗಳಿಗೆ ನಡೆಸುತ್ತದೆ. ಇದು ತಾಂತ್ರಿಕ ಗುಮಾಸ್ತರಿಗೆ ಮೂಲಭೂತ ತರಬೇತಿಯನ್ನು ಕೂಡಾ ನೀಡುತ್ತದೆ.
  • ವಿದ್ಯುನ್ಮಾನ ಹಾಗೂ ಯಂತ್ರ ತಾಂತ್ರಿಕ ಶಿಕ್ಷಣದ ಸೈನಿಕ ಮಹಾವಿದ್ಯಾಲಯ  : ಸಿಕಂದರಾಬಾದ್‌‌ (ಆಂಧ್ರಪ್ರದೇಶ)ನಲ್ಲಿರುವ ವಿದ್ಯುನ್ಮಾನ ಹಾಗೂ ಯಂತ್ರ ತಾಂತ್ರಿಕ ಶಿಕ್ಷಣದ ಸೈನಿಕ ಮಹಾವಿದ್ಯಾಲಯವು (MCEME), ಸೇನಾಪಡೆಯಲ್ಲಿನ ಒಂದು ತಾಂತ್ರಿಕ ಶಿಕ್ಷಣ ನೀಡುವ ಶಿಕ್ಷಣಸಂಸ್ಥೆಯಾಗಿದೆ. ಸ್ವರ್ಣಮಯ ನವಿಲು/ಗೋಲ್ಡನ್‌ ಪೀಕಾಕ್‌‌ ರಾಷ್ಟ್ರೀಯ ತರಬೇತಿ ಪ್ರಶಸ್ತಿಯನ್ನು (1997) ಹಾಗೂ ಅಷ್ಟೇ ಅಲ್ಲದೇ ಸ್ವರ್ಣಮಯ ನವಿಲು/ಗೋಲ್ಡನ್‌ ಪೀಕಾಕ್‌‌ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿಗಳನ್ನು ಈ ಮಹಾವಿದ್ಯಾಲಯಕ್ಕೆ ನೀಡಲಾಗಿದೆ .
  • ಕುದುರೆಸವಾರಿ ಹಾಗೂ ಪಶುವೈದ್ಯ ದಳದ (RVC) ಕೇಂದ್ರ ಹಾಗೂ ಶಿಕ್ಷಣಶಾಲೆ  : ಮೀರತ್‌‌ನ ದಂಡುಪ್ರದೇಶದಲ್ಲಿರುವ RVC ಕೇಂದ್ರ ಹಾಗೂ ಶಿಕ್ಷಣಶಾಲೆಯು ಯುವ ಪಶುವೈದ್ಯ ಪದವೀಧರರಿಗೆ ನಿಯೋಜನೆಯ ಬಗ್ಗೆ ಹಾಗೂ ಸಜ್ಜುಗಾರರು, ಸವಾರರು, ಫೆರ್ರೀಯೆರ್‌ಗಳು , ಸೇನಾನಾಯಿಗಳ ತರಬೇತುದಾರರು ಹಾಗೂ ಪ್ರಯೋಗಾಲಯ ಸಹಾಯಕರುಗಳಂತಹಾ ಸೇನಾದಳದ ವಿವಿಧ ತಾಂತ್ರಿಕ ಕುಶಲಕರ್ಮಿಗಳಿಗೆ ಮೂಲಭೂತ ಸೈನಿಕ ಹಾಗೂ ತಾಂತ್ರಿಕ ತರಬೇತಿಯನ್ನು ನೀಡುತ್ತದೆ. ಈ ಕೇಂದ್ರವು ಕುದುರೆಸವಾರಿ ಹಾಗೂ ಪಶುವೈದ್ಯ ದಳದ (RVC) ಕೇಂದ್ರ ಹಾಗೂ ಶಿಕ್ಷಣಶಾಲೆಗೆ ನೇಮಕಗೊಳ್ಳುವವರಿಗೆ ಕೂಡಾ ಸೇರ್ಪಡೆಗೆ ತರಬೇತಿಯನ್ನು ನೀಡುತ್ತದೆ.
  • ಸೇನಾಪಡೆಯ ಶೈಕ್ಷಣಿಕ ದಳ (AEC) ತರಬೇತಿ ಮಹಾವಿದ್ಯಾಲಯ ಹಾಗೂ ಕೇಂದ್ರ  : ಪಚ್‌ಮರ್ಹಿಯಲ್ಲಿರುವ AEC ತರಬೇತಿ ಮಹಾವಿದ್ಯಾಲಯ ಹಾಗೂ ಕೇಂದ್ರವು, 'A' ದರ್ಜೆಯ ಸಂಸ್ಥೆಯಾಗಿದ್ದು, AEC ಸಿಬ್ಬಂದಿಗಳಿಗೆ ತುಕಡಿಗಳ ತರಬೇತಿ ಕೇಂದ್ರ ಹಾಗೂ ಭೋಪಾಲ್‌ನ ಬರ್ಕತುಲ್ಲಾ ವಿಶ್ವವಿದ್ಯಾಲಯದ ಅಂಗೀಕೃತವಾದ ಸ್ವಯಮಾಧಿಕಾರದ ಮಹಾವಿದ್ಯಾಲಯವಾಗಿದೆ.
  • ಸೈನಿಕ ಆರಕ್ಷಕ ದಳದ (CMP) ಕೇಂದ್ರ ಮತ್ತು ಶಾಲೆ  : ಬೆಂಗಳೂರಿನಲ್ಲಿರುವ CMP ಕೇಂದ್ರ ಮತ್ತು ಶಿಕ್ಷಣಶಾಲೆಯು ಮೂಲಭೂತ ಸೈನಿಕಪಡೆ ತರಬೇತಿಯನ್ನು ಸೈನಿಕ ಆರಕ್ಷಕ ದಳಕ್ಕೆ ನೊಂದಾಯಿತರಾದ ಎಲ್ಲಾ ಸಿಬ್ಬಂದಿಗಳಿಗೂ ನೀಡುತ್ತದೆ ಹಾಗೂ ವಿವಿಧ ದಳಗಳಿಂದ ಇಲ್ಲಿಗೆ ಬಂದ ಅಧಿಕಾರಿಗಳಿಗೆ ಕೂಡಾ ಕೋರ್ಸ್‌ಗಳನ್ನು ನಡೆಸುತ್ತದೆ.
  • ದೈಹಿಕಶಿಕ್ಷಣ ತರಬೇತಿಯ ಸೇನಾಪಡೆಯ ಶಾಲೆ  : ಪುಣೆಯಲ್ಲಿರುವ ದೈಹಿಕಶಿಕ್ಷಣ ತರಬೇತಿಯ ಸೇನಾಪಡೆಯ ಶಾಲೆಯು (ASPT), ಸೇನಾಪಡೆಯ ಸಿಬ್ಬಂದಿಗಳಿಗೆ, ಕೇಂದ್ರ ಆರಕ್ಷಕದಳ ಸಂಸ್ಥೆ ಹಾಗೂ ಅರೆಸೈನಿಕ ಪಡೆಗಳಿಗೆ ಸೂಕ್ತವಾದ ದರ್ಜೆಗಳಲ್ಲಿ ದೈಹಿಕ ಶಿಕ್ಷಣ ತರಬೇತಿ ಹಾಗೂ ಕ್ರೀಡಾ ತರಬೇತಿ ನೀಡಲು ಸಾಧ್ಯವಾಗುವಂತೆ ತರಬೇತುದಾರರಿಗೆ ಕ್ರೀಡಾಸಂಬಂಧಿ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತದೆ.
  • ಸೇನಾಪಡೆಯ ವಾಯುಗಾಮಿ ತರಬೇತಿ ಶಾಲೆ  : ಆಗ್ರಾದಲ್ಲಿರುವ ಸೇನಾಪಡೆಯ ವಾಯುಗಾಮಿ ತರಬೇತಿ ಶಾಲೆಯು (AATS), ಸಿಬ್ಬಂದಿ ಹಾಗೂ ಸಾಮಗ್ರಿಗಳ ವಾಯುಗಾಮಿ ಬಟವಾಡೆ ಹಾಗೂ ವಾಯು ಸಾಗಣೆಗೆ ಸಂಬಂಧಿಸಿದಂತೆ ತರಬೇತಿ ನೀಡುತ್ತದೆ. ಈ ಸಂಸ್ಥೆಯು ಎಲ್ಲಾ ವಿಧಗಳ ಉಪಕರಣಗಳ ವಾಯುಗಾಮಿ ಸುವಾಹ್ಯತೆ ಹಾಗೂ ವಿಮಾನದಿಂದ ಮೇಲಿನಿಂದಲೇ ಸುರಕ್ಷಿತವಾಗಿ ಕೆಳಗೆ ಹಾಕಬಲ್ಲ ಬಗ್ಗೆ ಸಂಶೋಧನೆ ಹಾಗೂ ಪ್ರಯೋಗಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಕೂಡಾ ಹೊಂದಿದೆ.
  • ರಾಷ್ಟ್ರೀಯ ಏಕತೆ/ಐಕ್ಯತೆಯ ಶಿಕ್ಷಣಸಂಸ್ಥೆ : ಪುಣೆಯಲ್ಲಿರುವ ರಾಷ್ಟ್ರೀಯ ಏಕತೆ/ಐಕ್ಯತೆಯ ಶಿಕ್ಷಣಸಂಸ್ಥೆಯು (INI), ಅಧಿಕಾರಿಗಳು, ಅಧಿಕಾರಿಗಳಿಗಿಂತ ಕೆಳಗಿನ ದರ್ಜೆಯ ಸಿಬ್ಬಂದಿ ಹಾಗೂ ಧಾರ್ಮಿಕ ಬೋಧಕರಿಗೆ ತರಬೇತಿಯನ್ನು ನೀಡುತ್ತದೆ. ಈ ಸಂಸ್ಥೆಯ ಪ್ರಧಾನ ಆಶಯವು ದಳಗಳಲ್ಲಿರುವ ಅಧಿಕಾರಿಗಳಲ್ಲಿ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಐಕ್ಯತೆಯ ಭಾವವನ್ನು ಉದ್ದೀಪಿಸುವುದಾಗಿರುತ್ತದೆ.
  • ಸೈನಿಕ ಕಾನೂನುಗಳ ಶಿಕ್ಷಣಸಂಸ್ಥೆ  : ಕಂಪ್ಟೀ ಪಟ್ಟಣದಲ್ಲಿರುವ ಸೈನಿಕ ಕಾನೂನುಗಳ ಶಿಕ್ಷಣಸಂಸ್ಥೆಯು (IML), ಸೇನಾಪಡೆಗಳ ನ್ಯಾಯಸ್ಥಾನಗಳ ಪ್ರಧಾನ ನ್ಯಾಯಾಲಯದ ಅಧಿಕಾರಿಗಳು ಹಾಗೂ ಇತರೆ ಸೈನಿಕಪಡೆ ಮತ್ತು ಸಂಬಂಧಿತ ಕಾನೂನು ಸಂಸ್ಥೆಗಳ ಅಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತದೆ.
  • ಸೇನಾಪಡೆಯ ಕ್ರೀಡಾ ತರಬೇತಿಸಂಸ್ಥೆ  : ಪುಣೆಯಲ್ಲಿನ ಸೇನಾಪಡೆಯ ಕ್ರೀಡಾ ತರಬೇತಿಸಂಸ್ಥೆ (ASI) ಹಾಗೂ ಸೇನಾಪಡೆಯ ಕ್ರೀಡಾ ಘಟಕಗಳ ಸಂಸ್ಥೆಯು ಒಂದು ಸಾರ್ವಜನಿಕ ಸಂಪರ್ಕದ ಕ್ರೀಡಾ ಕೇಂದ್ರವಾಗಿದ್ದು ಸಾರ್ವಜನಿಕರ ಮುಂದೆ ಸೇನಾಪಡೆಯನ್ನು ಧನಾತ್ಮಕವಾಗಿ ಬಿಂಬಿಸುವ ಉದ್ದೇಶದಿಂದ ಕೂಡಿದೆ. ವಿದೇಶಿ ತರಬೇತುದಾರರ ಕೆಳಗೆ ತರಬೇತಿ ಪಡೆಯುವುದಕ್ಕೆ ಬೇಕಾದ ಕಟ್ಟಡಗಳು ಹಾಗೂ ಉಪಕರಣಗಳು, ಆಹಾರ ಸುವ್ಯವಸ್ಥೆ, ಜಾಹೀರಾತು ಹಾಗೂ ಇತರೆ ವ್ಯವಸ್ಥೆಗಳಿಗೆ ಅಗತ್ಯವಾದಷ್ಟು ಹಣವನ್ನು ಮೀಸಲಿಡಲಾಗಿದೆ.
  • ಸೇನಾಪಡೆಯ ಸೈನಿಕವಿದ್ಯಾರ್ಥಿ ಮಹಾವಿದ್ಯಾಲಯ  : ಡೆಹ್ರಾಡೂನ್‌‌ನಲ್ಲಿರುವ ಸೇನಾಪಡೆಯ ಸೈನಿಕವಿದ್ಯಾರ್ಥಿ ಮಹಾವಿದ್ಯಾಲಯವು (ACC), IMAಯ ಅಂಗಸಂಸ್ಥೆಯಾಗಿದ್ದು ನಿಯೋಜನೆಗೆ ಆಯ್ಕೆಯಾದ ಸೇವಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ. ಇಲ್ಲಿಯ ಕೋರ್ಸ್‌ಅನ್ನು ಮುಗಿಸಿದ ನಂತರ, ಈ ಸೈನಿಕವಿದ್ಯಾರ್ಥಿಗಳು ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದಿಂದ ಅಂಗೀಕೃತವಾದ B.A. ಅಥವಾ B.Sc. ಪದವಿಗೂ ಅರ್ಹರಾಗಿರುತ್ತಾರೆ.
  • ಸೇನಾಪಡೆಯ ವಾಯುಸಮರ ತರಬೇತಿ ಶಾಲೆ (CAATS) : CAATS ಸಂಸ್ಥೆಯು ಸೇನಾ ವಾಯುಗಾಮಿ ದಳ ಎಂಬ ಸೇನಾಪಡೆಯ ವಾಯುಗಾಮಿ ಅಂಗಸಂಸ್ಥೆಯ ವಾಯುಯಾನಿಗಳಿಗೆ ಪ್ರಧಾನ ತರಬೇತಿ ಕೋರ್ಸ್‌ಅನ್ನು ನಡೆಸುತ್ತದೆ. ಇದರ ಕಚೇರಿಯು ನಾಸಿಕ್‌ ರಸ್ತೆಯಲ್ಲಿರುವ ಸೇನಾಪಡೆಯ ವಾಯುಗಾಮಿ ನೆಲೆಯಲ್ಲಿದೆ. ಸೇನಾಪಡೆಯ ವಾಯುಯಾನಿಗಳಿಗೆ ಪ್ರಧಾನ ತರಬೇತಿ ಶಾಲೆಯಾಗಿದ್ದ ಹೆಲಿಕಾಪ್ಟರ್‌ ತರಬೇತಿ ಶಾಲೆಯ(HTS) ಬದಲಿಯಾಗಿ ಭಾರತೀಯ ವಾಯುಪಡೆಯ ಶಿಕ್ಷಣಸಂಸ್ಥೆಯಾಗಿದೆ. ಇದು ಪ್ರಮುಖವಾಗಿ ಚೀತಾ ಪಡೆಗಳನ್ನು ಹಾಗೂ ಚೇತಕ್‌ ಪಡೆಗಳನ್ನು ನಿರ್ವಹಿಸುತ್ತದಲ್ಲದೇ ಹಲವು ಸಿಮ್ಯುಲೇಟರ್‌/ಅನುಕರಣ ಸಾಧನಗಳನ್ನು ಕೂಡಾ ಹೊಂದಿದೆ.

ಇತರೆ ಶಿಕ್ಷಣಸಂಸ್ಥೆಗಳಲ್ಲಿ ಕೆಳಕಂಡವು ಸೇರಿವೆ:

  • ಸೇನಾಪಡೆಯ ಗುಮಾಸ್ತರ ತರಬೇತಿ ಶಾಲೆ, ಔರಂಗಾಬಾದ್‌.
  • ಯಾಂತ್ರಿಕ ಸಾಗಣೆಯ ಸೇನಾ ಶಿಕ್ಷಣ ಶಾಲೆ, ಬೆಂಗಳೂರು.
  • ಸೇನಾಪಡೆ/ವಾಯುಪಡೆಯ ಸಾಗಣೆಯ ಪೋಷಕ ಶಾಲೆ, ಆಗ್ರಾ
  • EME ಶಾಲೆ, ವಡೋದರ.
  • ಸೈನಿಕ ಬೇಹುಗಾರಿಕೆ ತರಬೇತಿ ಶಾಲೆ ಹಾಗೂ ಸೇನಾಠಾಣೆ (MITSD), ಪುಣೆ
  • ಸೈನಿಕ ಸಂಗೀತ ಶಾಲೆ - ಪಚಮರ್ಹಿ

ಭಾರತೀಯ ನೌಕಾಪಡೆ

[ಬದಲಾಯಿಸಿ]

ಭಾರತೀಯ ನೌಕಾಪಡೆಯು ವಿವಿಧ ನಗರಗಳಲ್ಲಿ ತನ್ನ ಹಲವು ತರಬೇತಿ ಕೇಂದ್ರಗಳನ್ನು ಹೊಂದಿದೆ. ಭಾರತೀಯ ನೌಕಾಪಡೆಯ ಶಿಕ್ಷಣಸಂಸ್ಥೆಯು ಪ್ರಸ್ತುತ ಕೇರಳ ರಾಜ್ಯದ ಕಣ್ಣೂರಿನ ಬಳಿಯಿರುವ ಎಳಿಮಲಾದಲ್ಲಿದೆ.

  • ಭಾರತೀಯ ನೌಕಾಪಡೆಯ ಶಿಕ್ಷಣಶಾಲೆ - ಎಳಿಮಲಾ
  • INS ವೆಂಡುರ್ತಿ - ಕೊಚ್ಚಿ/ಕೊಚ್ಚಿನ್‌ ನಗರ
  • INS ಶಿವಾಜಿ - ಲೋನಾವಾಲಾ
  • INS ವಲ್ಸುರಾ - ಜಾಮ್‌ನಗರ
  • INS ಶಾತವಾಹನ - ವಿಶಾಖಪಟ್ಟಣಂ
  • INS ಚಿಲ್ಕಾ -ಭುವನೇಶ್ವರ
  • INS ಹಮ್ಲಾ - ಮುಂಬಯಿ
  • INS ಅಗ್ರಣಿ - ಕೊಯಮತ್ತೂರು
  • INS ಗೋಮಾಂತಕ - ಮೊರ್ಮುಗಾವೊ
  • INS ಜರಾವಾ - ಪೋರ್ಟ್‌ ಬ್ಲೇರ್‌
  • ನೌಕಾದಳೀಯ ಫಿರಂಗಿ ದಳ ಶಾಲೆ - ಕೊಚ್ಚಿ/ಕೊಚ್ಚಿನ್‌ ನಗರ
  • ಟಾರ್ಪಿಡೋ/ನೌಕಾಸ್ಫೋಟಕ/ಜಲಾಂತರ್ಗಾಮಿ ನಿರೋಧಕ ತರಬೇತಿಶಾಲೆ - ಕೊಚ್ಚಿ/ಕೊಚ್ಚಿನ್‌ ನಗರ
  • ಜಲಸಂಚಾರ ದಿಕ್ಪಥ ಶಾಲೆ

ಭಾರತೀಯ ವಾಯು ಪಡೆ

[ಬದಲಾಯಿಸಿ]

ಭಾರತೀಯ ವಾಯು ಪಡೆಯು ಒಂದು ತರಬೇತಿ ತುಕಡಿಯನ್ನು ಹಾಗೂ ಹಲವು ತರಬೇತಿ ಕೇಂದ್ರಗಳನ್ನು ಹೊಂದಿದೆ. ತಾಂತ್ರಿಕ ಹಾಗೂ ಇತರೆ ಸಹಾಯಕ ಸಿಬ್ಬಂದಿಗಳಿಗೆ ವಿವಿಧ ಭೂನೆಲೆಗಳಲ್ಲಿನ ತರಬೇತಿ ಶಾಲೆಗಳಲ್ಲಿ ತರಬೇತಿಯನ್ನು ನೀಡಲಾದರೆ ಪೈಲಟ್‌ಗಳಿಗೆ ಆಂಧ್ರಪ್ರದೇಶಹೈದರಾಬಾದ್‌ನ ಸಮೀಪದ ದುಂಡಿಗಲ್‌ನಲ್ಲಿರುವ ವಾಯುಪಡೆಯ ಶಿಕ್ಷಣಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ.

  • ಪೈಲಟ್‌ ತರಬೇತಿ ಕೇಂದ್ರ - ಅಲಹಾಬಾದ್‌
  • ವಾಯುಪಡೆಯ ಆಡಳಿತಾತ್ಮಕ ಮಹಾವಿದ್ಯಾಲಯ - ಕೊಯಮತ್ತೂರು
  • ವಾಯುಯಾನ ಸಂಬಂಧಿ ವೈದ್ಯಕೀಯ ಶಾಲೆ - ಬೆಂಗಳೂರು
  • ವಾಯುಪಡೆಯ ತಾಂತ್ರಿಕ ತರಬೇತಿ ಮಹಾವಿದ್ಯಾಲಯ - ಬೆಂಗಳೂರು ಸಮೀಪದ ಜಾಲಹಳ್ಳಿ
  • ಪ್ಯಾರಾಟ್ರೂಪರ್‌ಗಳ ತರಬೇತಿ ಶಾಲೆ - ಆಗ್ರಾ

ಮೂರೂ-ದಳಗಳಿಗೆ ಸೇವೆ ನೀಡುವ ಶೈಕ್ಷಣಿಕ ಸಂಸ್ಥೆಗಳು

[ಬದಲಾಯಿಸಿ]
  • ರಾಷ್ಟ್ರೀಯ ರಕ್ಷಣಾ ಮಹಾವಿದ್ಯಾಲಯ  : ರಾಷ್ಟ್ರೀಯ ರಕ್ಷಣಾ ಮಹಾವಿದ್ಯಾಲಯವನ್ನು (NDC) ರಾಷ್ಟ್ರೀಯ ಸುರಕ್ಷತೆ ಹಾಗೂ ಸೈನ್ಯನಿಯೋಜನೆಯ ಎಲ್ಲಾ ವಿಭಾಗಗಳ ಬಗ್ಗೆ ಮಾಹಿತಿಯನ್ನು ಕಲಿಸಿಕೊಡುವ ರಾಷ್ಟ್ರದಲ್ಲಿನ ಏಕೈಕ ಶಿಕ್ಷಣಸಂಸ್ಥೆಯಾಗಿ 27 ಏಪ್ರಿಲ್‌ 1960ರಂದು ಉದ್ಘಾಟಿಸಲಾಯಿತು. ರಾಷ್ಟ್ರೀಯ ಸುರಕ್ಷತೆ ಹಾಗೂ ಸೈನ್ಯನಿಯೋಜನೆಯ ಬಗ್ಗೆ ನಡೆದ 47-ವಾರಗಳ ವ್ಯಾಪಕ ಕಾರ್ಯಾಗಾರದಲ್ಲಿ ಹಿರಿಯ ರಕ್ಷಣಾಪಡೆಯ ಹಾಗೂ ನಾಗರಿಕ ಸೇವೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
  • ರಕ್ಷಣಾಪಡೆ ನಿರ್ವಹಣೆಯ ಮಹಾವಿದ್ಯಾಲಯ  : ಸಿಕಂದರಾಬಾದ್‌‌ನಲ್ಲಿರುವ ರಕ್ಷಣಾಪಡೆ ನಿರ್ವಹಣೆಯ ಶಿಕ್ಷಣಸಂಸ್ಥೆಯನ್ನು (IDM), ಸೇನಾಪಡೆಯ ಅಧಿಕಾರಿಗಳಿಗೆ ಆಧುನಿಕ, ವೈಜ್ಞಾನಿಕ ನಿರ್ವಹಣಾ ತರಬೇತಿಯನ್ನು ನೀಡಲು ಜೂನ್‌‌ 1970ರಲ್ಲಿ ಸ್ಥಾಪಿಸಲಾಯಿತು. IDM ಸಂಸ್ಥೆಯನ್ನು ರಕ್ಷಣಾಪಡೆ ನಿರ್ವಹಣೆಯ ಮಹಾವಿದ್ಯಾಲಯ (CDM) ಎಂದು 1980ರಲ್ಲಿ ಮರುನಾಮಕರಣ ಮಾಡಲಾಯಿತು. ಈ ಮಹಾವಿದ್ಯಾಲಯವು ಮೇಜರ್‌ ದರ್ಜೆಯಿಂದ ಹಿಡಿದು ಮೇಜರ್‌ ಜನರಲ್‌ ದರ್ಜೆಗಳವರೆಗಿನ 5,000ಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಹಾಗೂ ಮೂರೂ ಸೇನಾಪಡೆಗಳ ಸಮಾನದರ್ಜೆಯ ಅಧಿಕಾರಿಗಳಿಗೆ ತನ್ನ ಮಹಾವಿದ್ಯಾಲಯಗಳಲ್ಲಿಯೇ ನಡೆಸಲಾಗುವ ಕಾರ್ಯಾಗಾರಗಳ ಮೂಲಕ ತರಬೇತಿ ನೀಡುತ್ತದೆ. ರಕ್ಷಣಾ ಪಡೆಗಳ ನಿರ್ವಹಣೆಗಳಿಗೆ ಸಂಬಂಧಿಸಿದ ಸಂಪೂರ್ಣ ತರಬೇತಿಯನ್ನು ಅಪಾರ ಸಂಖ್ಯೆಯ ಅಧಿಕಾರಿಗಳಿಗೆ ಬಾಹ್ಯ ಕೇಂದ್ರಗಳ ಮೂಲಕ ನೀಡಲಾಗುತ್ತದೆ. ಅರೆ-ಸೈನಿಕ ಪಡೆ, ರಕ್ಷಣಾ ಇಲಾಖೆ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ ಸ್ನೇಹಪರ ವಿದೇಶಗಳ ಹಲವು ಅಧಿಕಾರಿಗಳು ಕೂಡಾ ಇಂತಹಾ ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ.
  • ರಕ್ಷಣಾಪಡೆಯ ಸೇವಾಸಿಬ್ಬಂದಿ ಮಹಾವಿದ್ಯಾಲಯ  : ವೆಲ್ಲಿಂಗ್‌ಟನ್‌‌ನಲ್ಲಿರುವ ರಕ್ಷಣಾಪಡೆಯ ಸೇವಾಸಿಬ್ಬಂದಿ ಮಹಾವಿದ್ಯಾಲಯವು (DSSC), ಮೂರೂ ಪಡೆಗಳಿಗೆ ಸಂಬಂಧಿಸಿದ ಪ್ರಧಾನ ತರಬೇತಿ ಕೇಂದ್ರವಾಗಿದ್ದು ಭಾರತೀಯ ಸೇನಾಪಡೆಯ ಮೂರೂ ವಿಭಾಗಗಳ ಮಧ್ಯಮ ಹಂತದ ಅಧಿಕಾರಿಗಳು (ಮೇಜರ್‌ಗಳು ಹಾಗೂ ಸಮಾನಮಟ್ಟದ ಇತರರು) ಸ್ನೇಹಪರ ವಿದೇಶಗಳ ಹಾಗೂ ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ. DSSC ಸಂಸ್ಥೆಯು ತಮಿಳುನಾಡು ರಾಜ್ಯದ ನಯನಮನೋಹರ ನೀಲಗಿರಿ ಪರ್ವತ ಶ್ರೇಣಿಯ ಕೂನೂರಿನ ಬಳಿಯಿರುವ ವೆಲ್ಲಿಂಗ್‌ಟನ್‌‌ನಲ್ಲಿದೆ.
  • ರಾಷ್ಟ್ರೀಯ ರಕ್ಷಣಾಪಡೆ/ಭದ್ರತಾಪಡೆಗಳ ಶಿಕ್ಷಣಶಾಲೆ  : ಖಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾಪಡೆ/ಭದ್ರತಾಪಡೆಗಳ ಶಿಕ್ಷಣಶಾಲೆಯು (NDA), ಸೇನಾಪಡೆಗಳ ಭಾವೀ ಅಧಿಕಾರಿಗಳು ತರಬೇತಿ ಪಡೆಯುವ ಪ್ರಧಾನ ಅಂತರ-ಸೇವಾವಿಭಾಗ ತರಬೇತಿ ಶಿಕ್ಷಣಸಂಸ್ಥೆಯಾಗಿದೆ. ಈ ತರಬೇತಿಯಲ್ಲಿ ಅನುಕ್ರಮವಾಗಿ ತಮ್ಮ ಮೂರು ಸೇವಾ ಶಿಕ್ಷಣಸಂಸ್ಥೆಗಳಿಗೆ ಅಂದರೆ viz., ಭಾರತೀಯ ಸೈನಿಕ ಶಿಕ್ಷಣಶಾಲೆ, ನೌಕಾದಳೀಯ ಶಿಕ್ಷಣಶಾಲೆ ಹಾಗೂ ವಾಯುಪಡೆಯ ಶಿಕ್ಷಣಶಾಲೆಗಳಿಗೆ ಸೈನಿಕ ವಿದ್ಯಾರ್ಥಿಗಳು ಸೇರುವ ಮುಂಚಿನ ಮೂರು ವರ್ಷಗಳ ಕಾಲದ ಕಠಿಣ ತರಬೇತಿಯನ್ನು ಒಳಗೊಂಡಿರುತ್ತದೆ.

ವೈದ್ಯಕೀಯ ಸಿಬ್ಬಂದಿ

[ಬದಲಾಯಿಸಿ]
  • ಸೇನಾಪಡೆಗಳ ವೈದ್ಯಕೀಯ ಮಹಾವಿದ್ಯಾಲಯ (AFMC)

AFMC ಸಂಸ್ಥೆಯು ಮಹಾರಾಷ್ಟ್ರ ರಾಜ್ಯದ ಮುಂಬಯಿ ಬಳಿಯ ಪುಣೆಯಲ್ಲಿದೆ. ಇದೊಂದು ಅಂತರ-ಸೇವಾವಿಭಾಗ ಶಿಕ್ಷಣಸಂಸ್ಥೆಯಾಗಿದೆ. AFMC ಸಂಸ್ಥೆಯು ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಪ್ರಮುಖವಾಗಿ ವೈದ್ಯಕೀಯ ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವೀಧರರು, ದಂತ ವೈದ್ಯಕೀಯ ಸ್ನಾತಕೋತ್ತರ ಪದವೀಧರರು, ಶುಶ್ರೂಷಾ ಸೈನಿಕವಿದ್ಯಾರ್ಥಿಗಳು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳಿಗೆ ತರಬೇತಿ ನೀಡುವುದು ಸೇರಿರುತ್ತದೆ. ರೋಗಿಗಳ ಶುಶ್ರೂಷೆಯು ಇಲ್ಲಿನ ತರಬೇತಿ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿದ್ದು AFMCಯಲ್ಲಿ ಸಿಗುವ ತಜ್ಞವೈದ್ಯರ ಅನುಕೂಲತೆಯನ್ನು ಲಗತ್ತಾದಂತಿರುವ ಆಸ್ಪತ್ರೆಯು ಪಡೆದುಕೊಳ್ಳುತ್ತದೆ. ಈ ಶಿಕ್ಷಣಸಂಸ್ಥೆಯು ಅಗತ್ಯ ಸೇವಾ ತರಬೇತಿಗಳನ್ನು ನೀಡುವ ಮೂಲಕ ಸೇನಾಪಡೆಗಳಿಗೆ ಬೇಕಾದ ತಜ್ಞವೈದ್ಯರು ಹಾಗೂ ವಿಶೇಷಜ್ಞ ತಜ್ಞವೈದ್ಯರುಗಳ ಸಂಪೂರ್ಣ ತಂಡವನ್ನೇ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದೆ .

AFMC ಸಂಸ್ಥೆಯು ಭಾರತದಲ್ಲಿನ ಸುಪ್ರಸಿದ್ಧವಾದ ಪ್ರಮುಖ ವೈದ್ಯಕೀಯ ಶಿಕ್ಷಣಸಂಸ್ಥೆಗಳಲ್ಲಿ ಒಂದಾಗಿದ್ದು ಅದರ ಪ್ರವೇಶ ಪರೀಕ್ಷೆಯನ್ನು ಭಾರತದಾದ್ಯಂತ ಸಾವಿರಾರು ಪ್ರೌಢಶಾಲಾ ವಿದ್ಯಾರ್ಥಿಗಳು (ಬಾಲಕ ಬಾಲಕಿಯರಿಬ್ಬರೂ) ಬರೆಯುತ್ತಾರೆ, ಇದರ ಮೂಲಕ ಸುಮಾರು 130 ಪ್ರವೇಶಗಳನ್ನು ಪಡೆಯಬಹುದಾಗಿರುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮತ್ತೊಂದು ವೈದ್ಯಕೀಯ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಆಫೀಸರ್‌ ಸೈನಿಕವಿದ್ಯಾರ್ಥಿಗಳಿಗೆ ಸಮಾನ ಮಟ್ಟದಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ. ಈ 5 ವರ್ಷಗಳ ಅವಧಿಯ ಕೋರ್ಸ್‌ನಲ್ಲಿ ಸೇನಾಪಡೆಗಳ ಇತರೆ ಎಲ್ಲಾ ಶಿಕ್ಷಣಸಂಸ್ಥೆಗಳ ಎಲ್ಲಾ ಅಧಿಕಾರಿ ಮಟ್ಟದ ಸೈನಿಕವಿದ್ಯಾರ್ಥಿಗಳು ಪಡೆಯುವ ತರಬೇತಿಗೆ ಸಮಾನವಾದ ಮೂಲಭೂತ ಸೈನಿಕಪಡೆ ತರಬೇತಿ ಹಾಗೂ ಯುದ್ಧಭೂಮಿಯ ವೈದ್ಯಕೀಯ ಶುಶ್ರೂಷೆಗಳಿಗೆ ಸಂಬಂಧಪಟ್ಟ ತರಬೇತಿಯನ್ನು ಪಡೆಯುತ್ತಾರೆ. ಪದವಿ ಶಿಕ್ಷಣದ ನಂತರ, ಸೈನಿಕವಿದ್ಯಾರ್ಥಿಗಳು ಭಾರತೀಯ ಸೇನಾಪಡೆಯಲ್ಲಿ ಕನಿಷ್ಟ ಏಳುವರ್ಷಗಳ ಕಾಲ ಕಡ್ಡಾಯವಾಗಿ ಸೇವೆ ನೀಡಬೇಕಾಗಿದ್ದು ಅದಾದ ನಂತರ ಅವರು ನಿಯೋಜಿತ ವೈದ್ಯಕೀಯ ಅಧಿಕಾರಿಗಳಾಗಿ ಮುಂದುವರಿಯಬಹುದು ಇಲ್ಲವೇ ಅದರಿಂದ ಹೊರಬರುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.