ವಿಷಯಕ್ಕೆ ಹೋಗು

ಭರಮಸಾಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭರಮಸಾಗರ
ಭರಮಸಾಗರ
village
Population
 (2001)
 • Total೬,೨೪೪

ಭರಮಸಾಗರ ಕರ್ನಾಟಕ ರಾಜ್ಯದ ಒಂದು ಊರು.[][] ಅದು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನಲ್ಲಿದೆ. 2001 ನೇ ಇಸವಿಯ ಭಾರತದ ಜನಗಣತಿಯ (India census), ಲೆಖ್ಖದ ಪ್ರಕಾರ, ಒಟ್ಟು ಜನಸಂಖ್ಯೆ 6244 ಅದರಲ್ಲಿ 3196 ಪುರುಷರು ಮತ್ತು 3048 ಮಹಿಳೆಯರಿದ್ದರು.

ಭರಮಸಾಗರವು ಚಿತ್ರದುರ್ಗ -ದಾವಣಗೆರೆಗಳ ಮಧ್ಯೆ 30 ಕಿಲೋಮೀಟರುಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿದ್ದು, ನಾಗರಿಕ ಸೌಲಭ್ಯಗಳಿಂದ ಕೂಡಿದೆ. ಇದು ಹೋಬಳಿ ಕೇಂದ್ರವಾಗಿದೆ. ಈ ಗ್ರಾಮವು ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಗ್ರಾಮವಾಗಿದೆ. ಮೊದಲು ಈ ಗ್ರಾಮಕ್ಕೆ ಗುಡಿನಾಯಕನಹಳ್ಳಿ ಎಂದು ಹೆಸರಿದ್ದಿತಂತೆ. ಕ್ರಿ.ಶ.1695ರಲ್ಲಿ ಚಿತ್ರದುರ್ಗದ ಪಾಳೆಯಗಾರ ಬ���ಚ್ಚುಗತ್ತಿ ಭರಮಣ್ಣನಾಯಕನ ಹೆಸರಿನಲ್ಲಿ ಇಲ್ಲಿ ಜೋಡಿ ಕೆರೆಗಳನ್ನು ಕಟ್ಟಸಿದ್ದರಿಂದ ನಾಯಕನ ಹೆಸರಿನಲ್ಲಿ 'ಭರಮಸಾಗರ'ವೆಂದು ಕರೆದಿದ್ದಾರೆ. ಜೋಡಿ ಕೆರೆಗಳ ಕಾಮಗಾರಿ ಕೆಲಸವನ್ನು ದಂಡಿನ ದಳವಾಯಿ ಲಿಂಗಣ್ಣನು ನಿರ್ವಹಿಸಿದ್ದನು. ಕ್ರಿ.ಶ. 1690 ರಿಂದ 1695ರವರೆಗೆ ಕೆರೆಯ ನಿರ್ಮಾಣಕಾರ್ಯ ನಡೆದಿದೆ. ಇಲ್ಲಿ ದುರ್ಗಾಂಬಿಕ ದೇವಿಯ ಮಂದಿರವಿದೆ. ಈ ದೇವಿಗೆ ದಂಡಿನ ದುರ್ಗಿ ಎಂದು ಕರೆಯುತ್ತಾರೆ. ಬ್ರಿಟಿಷರು ಈ ದೇವಿಗೆ ಒಂದು ಬೆಳ್ಳಿಯ ಮುಖವಾಡ ಮಾಡಿಸಿ ಕೊಟ್ಟಿದ್ದಾರೆ. ಈಗ ಸಂತೆ ನೆರೆಯುವ ಸ್ಥಳದಲ್ಲಿ ಹಿಂದೆ ದಿವಾನ್ ಪೂರ್ಣಯ್ಯನವರು ಕಟ್ಟಿಸಿದ ಒಂದು ಛತ್ರವಿದ್ದಿತು ಎನ್ನುತ್ತಾರೆ. ಇತ್ತೀಚಿಗೆ ಭರಮಸಾಗರದ ಐತಿಹಾಸಿಕ ಕೆರೆಗೆ ಭರಮಣ್ಣನಾಯಕರ ಕೆರೆ ಎಂದು ನಾಮಕರಣ ಮಾಡಲಾಗಿದೆ. ಅ ರಾ ಸೇ ಎಂದು ನಾಡಿನಾದ್ಯಂತ ಪ್ರಸಿದ್ಧರಾಗಿದ್ದ , ಕೊರವಂಜಿ ಬಳಗದ ಪ್ರಮುಖ ಲೇಖಕರು ಹಾಗು ಸಾಹಿತಿಗಳಾಗಿದ್ದ ಅಣಜಿ ರಾಮಣ್ಣ ಸೇತುರಾಮರಾವ್ ರವರು ಭರಮಸಾಗರದವರು. ಸದ್ಯ ಇಲ್ಲಿ ಸುತ್ತಮುತ್ತಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಂಗವಾಗಿ ಕೆರೆಯ ಕಾಮಗಾರಿ ಪ್ರಗತಿಯಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Village code= 971900 "Census of India : Villages with population 5000 & above". Retrieved 2008-12-18. {{cite web}}: |first= missing |last= (help)CS1 maint: multiple names: authors list (link)
  2. "Yahoomaps India :". Retrieved 2008-12-18. Bharamasagara, Chitradurga, Karnataka


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಭರಮಸಾಗರ&oldid=1030485" ಇಂದ ಪಡೆಯಲ್ಪಟ್ಟಿದೆ