ವಿಷಯಕ್ಕೆ ಹೋಗು

ಪೆಪ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pepsi
The current Pepsi logo (2023-).
ಪ್ರಕಾರCola
ManufacturerPepsiCo.
ಮೂಲ ದೇಶUnited States
ಪರಿಚಯಿಸಿದ್ದು1898 (as Brad's Drink)
June 16, 1903 (as Pepsi-Cola)
1961 (as Pepsi)
Related productsCoca-Cola
Fanta
Dr Pepper
Sprite (soft drink)
Irn Bru
Cola Turka
Big Cola
Websitehttp://pepsi.com/

ಪೆಪ್ಸಿ ಒಂದು ಕಾರ್ಬನೇಟು ಇರುವ ಮೃದು ಪಾನೀಯವಾಗಿದ್ದು, ಪೆಪ್ಸಿಕೊ ಕಂಪೆನಿಯು ಇದನ್ನು ಉತ್ಪಾದಿಸಿ ಮತ್ತು ತಯಾರಿಸುತ್ತಿದೆ. 1890ರಲ್ಲಿ ನ್ಯೂಬರ್ನ್‌, ಉತ್ತರ ಕೆರೊಲಿನಾದಲ್ಲಿ ಔಷಧಿ ತಯಾರಕ ಕಾಲೆಬ್ ಬ್ರಧಾಮ್‌ ಅವರು ಈ ಪಾನೀಯವನ್ನು ಮೊದಲು ತಯಾರಿಸಿದರು. ಜೂನ್ 16, 1903ರಂದು ಈ ಬ್ರಾಂಡ್‌ಗೆ ಟ್ರೇಡ್‌ಮಾರ್ಕ್ ಹಾಕಲಾಯಿತು. 1898ರಿಂದೀಚೆಗಿನ ವರ್ಷಗಳಲ್ಲಿ ವಿವಿಧ ಬಗೆಯ ಪೆಪ್ಸಿ ಉತ್ಪನ್ನಗಳು ಹೊರಬಂದಿವೆ.

ಮ‌ೂಲಗಳು

[ಬದಲಾಯಿಸಿ]
  • 1898ರಲ್ಲಿ ಕರೋಲಿನಾದ ನ್ಯೂ ಬರ್ನ್‌ನಲ್ಲಿ ಕಾಲೆಬ್ ಬ್ರಧಾಮ್ ಇದನ್ನು "ಬ್ರಾಡ್ಸ್ ಡ್ರಿಂಕ್" ಎಂದು ಮೊದಲು ಪರಿಚಯಿಸಿದರು, ಆರಂಭದಲ್ಲಿ ಕಾಲೆಬ್ ಅವರ ಔಷಧಾಲಯದಲ್ಲೇ ಇದನ್ನು ಮಾರಲಾಯಿತು. ಆನಂತರ ಇದನ್ನು ಪೆಪ್ಸಿ ಕೋಲಾ ಎಂದು ಹೆಸರಿಸಲಾಯಿತು. ಬಹುಶ: ಇದರ ತಯಾರಿಕೆಯಲ್ಲಿ ಜೀರ್ಣ ರಸಗಳಾದ ಪೆಪ್ಸಿನ್ ಮತ್ತು ಕೋಲಾ ನಟ್ಸ್‌ಗಳನ್ನು ಉಪಯೋಗಿಸಿರುವುದು ಈ ಹೆಸರಿಡಲು ಕಾರಣವಿರಬಹುದು.[] ಜೀರ್ಣ ಕ್ರಿಯೆಗೆ ಸಹಕರಿಯಾದ, ರುಚಿಕರವಾದ ಮತ್ತು ಶಕ್ತಿವರ್ಧನೆ ಮಾಡುವ ಚಿಮ್ಮುವ ರೀತಿಯ ಪಾನೀಯವನ್ನು ಸೃಷ್ಟಿಸಬೇಕೆಂದು ಬ್ರಧಾಂ ಬಯಸಿದ್ದರು.[]
  • 1903ರಲ್ಲಿ ಬ್ರಧಾಮ್‌ ಪೆಪ್ಸಿ ಕೋಲಾ ಬಾಟಲಿ ನಿರ್ಮಾಣ ಕಾರ್ಯವನ್ನು ತಮ್ಮ ಔಷಧಾಲಯದಿಂದ ಬಾಡಿಗೆಗೆ ಪಡೆದ ಉಗ್ರಾಣಕ್ಕೆ ವರ್ಗಾಯಿಸಿದರು. ಆ ವರ್ಷ ಬ್ರಧಾಮ್‌ 7,968 ಗ್ಯಾಲನ್‌ಗಳ ಸಿರಪ್ ಅನ್ನು ಮಾರಿದರು. ನಂತರದ ವರ್ಷ ಪೆಪ್ಸಿಯನ್ನು ಆರು ಔನ್ಸ್‌ಗಳ ಬಾಟಲಿಗಳಲ್ಲಿ ತುಂಬಿದ ಕಾರಣ 19,848 ಗ್ಯಾಲನ್‌ನಷ್ಟು ಹೆಚ್ಚು ಮಾರಾಟವಾಯಿತು. 1909ರಲ್ಲಿ ಮೋಟಾರು ಗಾಡಿಗಳ ಹೆಸರಾಂತ ಪ್ರವರ್ತಕ ಬಾರ್ನಿ ಓಲ್ಡ್‌ಫೀಲ್ಡ್‌ , "ಜಬರುದಸ್ತು ಪಾನೀಯ...ಉಲ್ಲಾಸಕರ, ಉತ್ತೇಜಕ, ಓಟದ ಸ್ಪರ್ಧೆಯ ಮೊದಲು ಉತ್ತಮ ಉತ್ತೇಜಕ" ಎಂದು ವರ್ಣಿಸಿ ಪೆಪ್ಸಿಯ ಮೊದಲ ಜಾಹೀರಾತಿನಲ್ಲಿ ಕಾಣಿಸಿಕೊಂಡರು.[]
  • ಇದರ "ರುಚಿದಾಯಕ ಮತ್ತು ಆರೋಗ್ಯದಾಯಕ" ಎಂಬ ಜಾಹೀರಾತು ನಂತರ ಎರಡು ದಶಕಗಳವರೆಗೂ ಮುಂದುವರಿಯಿತು. ಪೆಪ್ಸಿಯ 1905ರಲ್ಲಿದ್ದ ಮ‌ೂಲ ಲೋಗೊವನ್ನು 1926ರಲ್ಲಿ ಮೊದಲ ಬಾರಿಗೆ ಪುನರ್ ವಿನ್ಯಾಸಗೊಳಿಸಲಾಯಿತು. 1929ರಲ್ಲಿ ಮತ್ತೆ ಅದರ ಲೋಗೊವನ್ನು ಬದಲಾಯಿಸಲಾಯಿತು. 1931ರಲ್ಲಿ ಮಹಾ ಕುಸಿತ(ಡಿಪ್ರೆಷನ್) ತೀವ್ರವಾಗಿದ್ದಾಗ ಪೆಪ್ಸಿ-ಕೋಲಾ ಕಂಪೆನಿ ದಿವಾಳಿ ಎದ್ದು ಹೋಯಿತು. ಬಹುತೇಕವಾಗಿ ವಿಶ್ವ ಸಮರ Iರ ಪ್ರಭಾವದಿಂದ ಸಕ್ಕರೆ ಬೆಲೆಯಲ್ಲಿ ಆದ ಏರು-ಪೇರಿನಿಂದಾಗಿ ಕಂಪೆನಿಗೆ ಆರ್ಥಿಕ ಮುಗ್ಗಟ್ಟುಂಟಾಯಿತು. *ಕಂಪನಿಯ ಆಸ್ತಿಗಳನ್ನು ಮಾರಲಾಯಿತು ಮತ್ತು ರಾಯ್ ಸಿ ಮೆಗಾರ್ಗೆಲ್‌‌ ಪೆಪ್ಸಿಯ ಟ್ರೇಡ್ ಮಾರ್ಕ್[] ಅದನ್ನು ಕೊಂಡುಕೊಂಡರು. ಎಂಟು ವರ್ಷಗಳ ಬಳಿಕ ಪೆಪ್ಸಿ ಕಂಪೆನಿಯು ಮತ್ತೆ ದಿವಾಳಿಯೆದ್ದು ಹೋಯಿತು. ಪೆಪ್ಸಿಯ ಆಸ್ತಿಗಳನ್ನು ಲೊಫ್ತ್ ಇನ್ ಕಾರ್ಪ��ರೇಷನ್ನಿನ ಅಧ್ಯಕ್ಷ ಚಾರ್ಲ್ಸ್ ಗುತ್ ಖರೀದಿಸಿದರು.
  • ಲೊಫ್ತ್ ಕಂಪೆನಿಯವರು ಸೋಡಾ ಫೌಂಟೇನ್‌(ಚಿಮ್ಮುವ)ಗಳನ್ನು ಹೊಂದಿರುವ ಚಿಲ್ಲರೆ ಅಂಗಡಿಯಿದ್ದ, ಕ್ಯಾಂಡಿ ತಯಾರಕರಾಗಿದ್ದರು. ಕೋಕ್‌ನವರು ರಿಯಾಯಿತಿ ದರದಲ್ಲಿ ಸಿರಪ್‌ ಕೊಡಲು ಒಪ್ಪದ ಕಾರಣ ಗುತ್ ತನ್ನ ಉಗ್ರಾಣದಲ್ಲಿ ಕೊಕೊ-ಕೋಲಾವನ್ನು ಬದಲಾಯಿಸಲು ಬಯಸಿದರು. ಲೋಫ್ಟ್‌ನ ರಾಸಾಯನಿಕ ತಜ್ಞರ ನೆರವನ್ನು ಪಡೆದ ಗುತ್, ಪೆಪ್ಸಿ-ಕೋಲಾವನ್ನು ಬೇರೆ ರೀತಿಯಲ್ಲಿ ಪುನಃ ಕ್ರಮ ಬದ್ಧಗೊಳಿಸಿದರು.

ಏರಿಕೆ

[ಬದಲಾಯಿಸಿ]
  • 1936ರ ಮಹಾ ಕುಸಿತದ ಅವಧಿಯಲ್ಲಿ ಪೆಪ್ಸಿಯು 12 ಔನ್ಸ್ ಬಾಟಲಿಯನ್ನು ಪರಿಚಯಿಸಿ ಜನಪ್ರಿಯತೆ ಗಳಿಸಿತು. ಆರಂಭಲ್ಲಿ 10 ಸೆಂಟ್‌‌(ಅಮೆರಿಕದಲ್ಲಿ ಬಳಕೆಯಲ್ಲಿರುವ ನಾಣ್ಯ)ಗಳ ಬೆಲೆ ನಿಗದಿಪಡಿಸಿದಾಗ ಮಾರಾಟ ನಿಧಾನವಾಗಿ ಸಾಗಿತ್ತು, ಆದರೆ ಬೆಲೆಯನ್ನು ಐದು ಸೆಂಟ್‌ಗಳಿಗೆ ಇಳಿಸಿದಾಗ ಮಾರಾಟವು ದೃಢವಾಗಿ ಏರಿಕೆ ಕಂಡಿತು. ರೇಡಿಯೋ ಜಾಹೀರಾತಿನಲ್ಲಿ ಗ್ರಾಹಕರ ಆಕರ್ಷಣೆಗಾಗಿ ಝಲಕ ಪದ್ಯವನ್ನು ರೂಪಿಸಲಾಯಿತು;
  • "ಪೆಪ್ಸಿ-ಕೋಲಾ ಹಿಟ್ಸ್ ಸ್ಪಾಟ್/ಟುವೆಲ್ವ್ ಫುಲ್ ಔನ್ಸಸ್, ದಾಟ್ಸ್ ಎ ಲಾಟ್/ಟ್ವೈಸ್ ಆಸ್ ಮಚ್ ಫಾರ್ ಎ ನಿಕ್ಕಲ್, ಟೂ/ಪೆಪ್ಸಿ-ಕೋಲಾ ಈಸ್ ದಿ ಡ್ರಿಂಕ್ ಫಾರ್ ಯ‌ೂ" ಎಂಬ ಪೆಪ್ಸಿ-ಕೋಲಾ ಹಾಡು ಜಾಹೀರಾತಿನ ಪ್ರಚಾರದ ವೇಳೆ ಕೊನೆಗೊಳ್ಳದ ರೀತಿಯಲ್ಲಿ ರೂಪಿಸಲಾಯಿತು. ಕೊಕೊ-ಕೋಲಾ ಆರು ಔನ್ಸ್‌ ಪ್ರತಿ ಬಾಟಲಿಗೆ ಐದು ಸೆಂಟ್(ಒಂದು ನಿಕ್ಕಲ್) ದರ ನಿಗದಿಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಪೆಪ್ಸಿಯು ತನ್ನ ದರವನ್ನು ಗಮನಿಸುತ್ತಿರುವ ಗ್ರಾಹಕರನ್ನು ಪ್ರೋತ್ಸಾಹಿಸಲು 12 ಔನ್ಸ್‌ಗಳ ಪೆಪ್ಸಿಯನ್ನು ಅದೇ ಬೆಲೆಗೆ ಮಾರಾಟ ಮಾಡಿತು.[]
  • ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಹೀರಾತಿನ ಪ್ರಚಾರ ಯಶಸ್ವಿಗೊಂಡು ಪೆಪ್ಸಿಯ ಮಾನ್ಯತೆ ಹೆಚ್ಚಿತು. 1937ರಲ್ಲಿ 500,000,000 ಬಾಟಲಿ ಪೆಪ್ಸಿ ಮಾರಾಟವಾಯಿತು. 1936ನಿಂದ 1938ರವರೆಗೆ ಪೆಪ್ಸಿ-ಕೋಲಾದ ಲಾಭ ದ್ವಿಗುಣಗೊಂಡಿತು.[]
  • ಕ್ಯಾಂಡಿ ವ್ಯಾಪಾರ ತತ್ತರಿಸುತ್ತಿದ್ದಾಗ ಗುತ್ ನೇತೃತ್ವದಲ್ಲಿ ಪೆಪ್ಸಿಯು ಯಶಸ್ಸನ್ನು ಕಂಡಿತು. ಪೆಪ್ಸಿಯಲ್ಲಿ ಯಶಸ್ಸನ್ನು ಪಡೆಯಲು ಗುತ್ ಆರಂಭದಲ್ಲಿ ಲೊಫ್ಟ್‌ ಕಂಪೆನಿಯವರ ಹಣಕಾಸು ಮತ್ತು ಸೌಲಭ್ಯಗಳನ್ನು ಬಳಸಿದ್ದರಿಂದ, ಆರ್ಥಿಕ ದಿವಾಳಿಯತ್ತ ವಾಲಿದ್ದ ಲೋಫ್ಟ್ ಕಂಪೆನಿ ಪೆಪ್ಸಿ ಕಂಪನಿಯ ಸ್ವಾಮ್ಯಕ್ಕಾಗಿ ಗುತ್ ವಿರುದ್ಧ ಮೊಕದಮ್ಮೆಯನ್ನು ಹೂಡಿತು. ಗುತ್ ಮತ್ತು ಲೋಫ್ಟ್ ನಡುವಿನ ದೀರ್ಘ ಕಾನೂನು ಸಮರ ದೆಲಾವೇರ್‌ನ ಸರ್ವೋನ್ನತ ನ್ಯಾಯಾಲಯದ ಮೆಟ್ಟಿಲು ಹತ್ತಿ, ಅಂತಿಮವಾಗಿ ಗುತ್‌ಗೆ ನಷ್ಟವುಂಟಾಯಿತು.

ಸ್ಥಾಪಿತ ಮಾರಾಟಗಾರಿಕೆ

[ಬದಲಾಯಿಸಿ]
  • ಪೆಪ್ಸಿ-ಕೋಲಾದ ಹೊಸ ಅಧ್ಯಕ್ಷರನ್ನಾಗಿ ವಾಲ್ಟರ್ ಮ್ಯಾಕ್ ಅವರನ್ನು ನೇಮಿಸಲಾಯಿತು ಮತ್ತು 1940ರ ನಂತರದ ವರ್ಷಗಳುದ್ದಕ್ಕೂ ಅವರು ಕಂಪೆನಿಗೆ ಮಾರ್ಗದರ್ಶನ ಮಾಡಿದರು. ಮ್ಯಾಕ್ ಪ್ರಗತಿಪರ ವಿಷಯಗಳನ್ನು ಬೆಂಬಲಿಸುತ್ತಿದ್ದರು, ಮತ್ತು ಕಂಪೆನಿಯ ಜಾಹೀರಾತಿ ನಲ್ಲಿ ಆಫ್ರಿಕನ್-ಅಮೇರಿಕನರ ನಿರ್ಲಕ್ಷ ಅಥವಾ ಕಪ್ಪು ಜನಾಂಗದವರನ್ನು ರೂಢಿ ಮಾದರಿಯಲ್ಲೇ ಚಿತ್ರಿಸುತ್ತಿರುವುದನ್ನು ಗಮನಿಸಿದರು. ಆಫ್ರಿಕನ್-ಅಮೇರಿಕನ್ನರದ್ದು ಸ್ಥಾಪಿತಗೊಳ್ಳದ ಮಾರುಕಟ್ಟೆಯಾಗಿತ್ತು, ಮತ್ತು ಜಾಹೀರಾತಿನಲ್ಲಿ ಅವರನ್ನು ನೇರ ಗುರಿಯನ್ನಾಗಿಸಿದಾಗ ಪೆಪ್ಸಿಯ ಮಾರುಕಟ್ಟೆ ಪಾಲು ಲಾಭದಾಯಕವಾಗಿಯೇ ಇತ್ತು ಎಂಬುದು ಮ್ಯಾಕ್‌ಗೆ ಅರಿವಾಯಿತು.[] ಇದನ್ನು ಕೊನೆಗಾಣಿಸಲು ಮ್ಯಾಕ್, ಕರಿಯ ಜನಾಂಗದ ಮಾರಾಟ ತಂಡದ ನೇತೃತ್ವವಹಿಸಲು "ಫ್ರಮ್ ದಿ ನೀಗ್ರೋ ನ್ಯೂಸ್ ಪೇಪರ್ ಫೀಲ್ಡ್‌"[] ನ ಜಾಹೀರಾತು ನಿರ್ವಾಹಕ ಹೆನೆನ್ ಸ್ಮಿತ್ ಅವರನ್ನು ನೇಮಿಸಿದರು.
  • ಆದರೆ ವಿಶ್ವ ಸಮರ II ಇನ್ನೇನು ಸನ್ನಿಹಿತವಾಗಿದ್ದರಿಂದ ಈ ನೇಮಕಾತಿ ರದ್ದಾಯಿತು. 1947ರಲ್ಲಿ ಮ್ಯಾಕ್ ಮತ್ತೆ ತಮ್ಮ ಯತ್ನವನ್ನು ಪುನರಾರಂಭಿಸಿದರು. [[ಹನ್ನೆರಡು ಜನರ ತಂಡವನ್ನು ಮುನ್ನಡೆಸಲು ಎಡ್ವರ್ಡ್ ಎಫ್.ಬಾಯ್ಡ್|ಹನ್ನೆರಡು ಜನರ ತಂಡವನ್ನು ಮುನ್ನಡೆಸಲು ಎಡ್ವರ್ಡ್ ಎಫ್.ಬಾಯ್ಡ್]] ಅವರನ್ನು ನೇಮಿಸಿದರು. ಅವರು ಅಮೆರಿಕಾದ ಕರಿಯರನ್ನು ಧನಾತ್ಮಕವಾಗಿ ಚಿತ್ರಿಸಿದರು. ಅಂತಹ ಜಾಹೀರಾತೊಂದರಲ್ಲಿ ನಗು ಮೊಗದ ತಾಯಿಯೊಬ್ಬರು ಆರು ಪ್ಯಾಕ್‌ಗಳ ಪೆಪ್ಸಿಯನ್ನು ಹಿಡಿದುಕೊಂಡಿರುವಂತೆ ಚಿತ್ರಿಸಿದ್ದರು.
  • ಜಾಹೀರಾತಿನಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡವರ ಮಗ (ರಾನ್ ಬ್ರೌನ್ ಅತ್ಯುನ್ನತ ಸ್ಥಾನ "ಸೆಕ್ರೆಟರಿ ಆಫ್ ಕಾಮರ್ಸ್"[] ವರೆಗೂ) ಉನ್ನತ ಸ್ಥಾನಕ್ಕೇರಿದನು.[]
  • "ಲೀಡರ್ಸ್ ಇನ್ ದೆಯರ್ ಫೀಲ್ಡ್ಸ್" ಎಂಬ ಶಿರೋನಾಮೆಯ ಇನ್ನೊಂದು ಜಾಹೀರಾತು ಪ್ರಚಾರದಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಪಡೆದ ರಾಲ್ಫ್ ಬಂಚ್ ಮತ್ತು ಛಾಯಾಗ್ರಾಹಕ ಗಾರ್ಡನ್ ಪಾರ್ಕ್ಸ್ ಅವರನ್ನೊಳಗೊಂಡ ಇಪ್ಪತ್ತು ಪ್ರಖ್ಯಾತ ಆಫ್ರಿಕನ್-ಅಮೇರಿಕ ನ್ನರನ್ನು ಬಳಸಿಕೊಳ್ಳಲಾಯಿತು. ಬಾಯ್ಡ್ ಸಹ ರಾಷ್ಟ್ರಾದ್ಯಂತ ಪೆಪ್ಸಿಯ ಮಾರಾಟವನ್ನು ಪ್ರವರ್ತಿಸಲು ಕರಿಯ ಜನಾಂಗದವರೇ ತುಂಬಿದ ಇಪ್ಪತ್ತು ಮಂದಿಯ ತಂಡವನ್ನು ರಚಿಸಿದರು. U.S.ನಾದ್ಯಂತ ವರ್ಣಭೇಧ ಮತ್ತು ಜಿಮ್ ಕ್ರೋ ನಿಯಮಗಳು ಇದುದ್ದರಿಂದ ಬಾಯ್ಡ್ ತಂಡ ಪಕ್ಷಪಾತ ಎದುರಿಸಬೇಕಾಯಿತು,[] ಅದು ಎಷ್ಟರಮಟ್ಟಿಗೆ ಇತ್ತೆಂದರೆ ಪೆಪ್ಸಿಯ ಸಹ-ನೌಕರರು ಕ್ಲು ಕ್ಲುಕ್ಸ್ ಕ್ಲಾನ್‌‌[] ನಿಂದ ಅವಮಾನಕ್ಕೊಳಗಾದರಲ್ಲದೆ, ಬೆದರಿಕೆಯನ್ನೂ ಎದುರಿಸಿದರು.
  • ಇನ್ನೊಂದು ಕಡೆ ಅವರು ವರ್ಣಭೇಧವನ್ನು ಮಾರಾಟದ ಒಂದಂಶವನ್ನಾಗಿಯೂ ಉಪಯೋಗಿಸುತ್ತಿದ್ದರು. ಕೋಕ್‌ನವರು ಕರಿಯರನ್ನು ನೌಕರಿಗೆ ತೆಗೆದುಕೊಳ್ಳದಿರುವುದನ್ನು ಮತ್ತು ಕೋಕ್ ಅಧ್ಯಕ್ಷರು ಪ್ರತ್ಯೇಕತವಾದಿ ಜಾರ್ಜಿಯಾದ ಗವರ್ನರ್ ಹರ್ಮನ್ ಟಾಲೆಡ್ಜ್, ಬೆಂಬಲಿಸುವುದನ್ನು ತೀವ್ರವಾಗಿ ಟೀಕಿಸುತ್ತಿದ್ದರು.[] ಇದರ ಫಲಶೃತಿಯಾಗಿ, ಪೆಪ್ಸಿಯ ಮಾರುಕಟ್ಟೆಯ ಷೇರುಗಳು ಕೋಕ್‌‌ಗೆ ಹೋಲಿಸಿದಲ್ಲಿ ನಾಟಕೀಯವಾಗಿ ಮೇಲೇರಿತು. ಪೆಪ್ಸಿಯ ಮಾರಾಟ ತಂಡ ಚಿಕಾಗೋಗೆ ಭೇಟಿ ಕೊಟ್ಟ ನಂತರ, ಚಿಕಾಗೋದಲ್ಲಿ ಪೆಪ್ಸಿಯ ಷೇರುಗಳು ಮೊದಲ ಬಾರಿಗೆ ಕೋಕ್‌ನವರಿಗಿಂತ ಮುಂದಿತ್ತು.[]
  • ಕರಿಯರ ಮಾರುಕಟ್ಟೆ ಮೇಲೆಯೇ ವಿಶೇಷ ಗಮನಹರಿಸಿದ್ದರಿಂದ, ಕಂಪೆನಿಯ ಒಳಗಡೆ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ತಲ್ಲಣವುಂಟಾಯಿತು. ಕರಿಯರ ಮೇಲೆ ಮಾತ್ರ ದೃಷ್ಟಿಯನ್ನಿಟ್ಟಲ್ಲಿ ಬಿಳಿರನ್ನು [] ಆಚೆಗೆ ತಳ್ಳಿದಂತಾಗಬಹುದು ಎಂದು ಅವರು ಆತಂಕಗೊಂಡರು. ವಾಲ್ಡೋರ್ಫ್-ಅಸ್ಟೋರಿಯಾ ಹೋಟೆಲ್ಲಿನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ 500 ಬಾಟ್ಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮ್ಯಾಕ್, "ಪೆಪ್ಸಿ ನೀಗ್ರೋಗಳ ಪಾನೀಯ ಎಂದು ಕರೆಸಿಕೊಳ್ಳುವುದು ನಮಗೆ ಬೇಡ"[೧೦] ಎಂದು ಹೇಳಿದ್ದೇ ಅಲ್ಲದೆ, ಕೀಳು ಅಭಿರುಚಿಗೆ ಉತ್ತೇಜನ ಕೊಡದಂತೆ ಸಲಹೆಯಿತ್ತು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. 1950ರಲ್ಲಿ ಕಂಪೆನಿಯನ್ನು ಮ್ಯಾಕ್ ತ್ಯಜಿಸಿದಾಗ ಕರಿಯರ ಮಾರಾಟದ ತಂಡಕ್ಕೆ ಬೆಂಬಲವಿಲ್ಲದೆ ಕಳೆಗುಂದಿ ಅದು ನಿಂತು ಹೋಯಿತು.

ಮಾರಾಟ ವ್ಯವಸ್ಥೆ

[ಬದಲಾಯಿಸಿ]
  • 1975ರಲ್ಲಿ ಪೆಪ್ಸಿಯು ಪೆಪ್ಸಿ ಚಾಲೆಂಜ್ ಎಂಬ ಹೊಸ ಮಾರಾಟ ತಂತ್ರವನ್ನು ಪರಿಚಯಿಸಿತು, ಅದು ಹೇಗಿತ್ತೆಂದರೆ, ವ್ಯಕ್ತಿಯೊಬ್ಬನು ಕಣ್ಮುಚ್ಚಿ ಪೆಪ್ಸಿ-ಕೋಲಾ ಮತ್ತು ಅದರ ಪ್ರತಿ ಸ್ಫರ್ಧಿ ಕೋಕಾ-ಕೋಲಾವನ್ನು ಕುಡಿದು ಅದರ ರುಚಿ ಹೇಳಬೇಕಿತ್ತು. ಈ ಸಂದರ್ಭದಲ್ಲಿ ಬಹುತೇಕರು ಎರಡು ಸೌಮ್ಯ ಪಾನೀಯಗಳಲ್ಲಿ ಪೆಪ್ಸಿಯನ್ನು ಉತ್ತಮವೆಂದು ಆಯ್ಕೆ ಮಾಡಿಕೊಂಡರು. ಪೆಪ್ಸಿಕೊ ಸಂಸ್ಥೆಯು ಇದರ ಫಲಿತಾಂಶಗಳನ್ನು ಟಿವಿ ದೂರದರ್ಶನದ ಜಾಹೀರಾತುಗಳಲ್ಲಿ ಸಾರ್ವಜನಿಕವಾಗಿ [೧೧]
  • ವರದಿ ಮಾಡುವ ಮ‌ೂಲಕ ಪ್ರಚಾರದ ಭಾರಿ ಲಾಭವನ್ನು ಪಡೆದುಕೊಂಡಿತು. 1976ರಲ್ಲಿ ಪೆಪ್ಸಿಯು, ಟೊಲೆಡೋದ RKO ಬಾಟ್ಲರ್ಸ್‌ನವರು, ಓಹಿಯೋ ಮೊದಲ ಬಾರಿಗೆ ಡೆನಿಸ್ ಮಕ್‌ ಮಹಿಳಾ ಮಾರಾಟಗಾರ್ತಿಯನ್ನು ನೇಮಿಸಿಕೊಂಡಿತು, ಯುನೈಟೆಡ್ ಸ್ಟೇಟ್ಸ್‌ನ ಇನ್ನೂರು ವರ್ಷದ ಆಚರಣೆ ಪ್ರಯುಕ್ತ ಈ ನೇಮಕಾತಿ ನಡೆದಿತ್ತು. 1996ರಲ್ಲಿ ಪೆಪ್ಸಿಕೋದವರು ಅತ್ಯಂತ ಯಶಸ್ವಿ ಪೆಪ್ಸಿ ಸ್ಟಫ್ ಎನ್ನುವ ವ್ಯಾಪಾರದ ತಂತ್ರವನ್ನು ಜಾರಿಗೆ ತಂದರು. 2002ರ ಹೊತ್ತಿಗೆ ಪ್ರೋಮೋ ಮ್ಯಾಗಜೀನ್‌ನವರು, ಈ ಹೊಸ ವ್ಯಾಪಾರ ತಂತ್ರ ವ್ಯಾಪಾರವನ್ನು ಉತ್ತೇಜಿಸುವಲ್ಲಿ ಹೊಸ ವ್ಯಾಖ್ಯಾನ ಬರೆದಿದೆ ಎಂದು ವರ್ಣಿಸುತ್ತಾ, 16 "ಏಜ್ ಲೆಸ್ ವಂಡರ್ಸ್" ಗಳಲ್ಲಿ ಇದೂ ಒಂದು ಉದ್ಘರಿಸಿದರು.[೧೨]
  • 2007ರಲ್ಲಿ ಪೆಪ್ಸಿಕೋದವರು ತಮ್ಮ ಕ್ಯಾನನ್ನು ಹದಿನಾಲ್ಕನೆಯ ಬಾರಿಗೆ ಪುನರ್‌ವಿನ್ಯಾಸ ಮಾಡಿದರು, ಮತ್ತು ಅದೇ ಮೊದಲ ಬಾರಿಗೆ ಪ್ರತಿ ಕ್ಯಾನಿನ ಮ‌ೂವತ್ತು ವಿವಿಧ ಬಗೆಯ ಹಿನ್ನೆಲೆಯನ್ನು ಸೇರಿಸಿಕೊಂಡರು, ಅಲ್ಲದೆ ಪ್ರತಿ ಮ‌ೂರು ವಾರಕ್ಕೊಮ್ಮೆ ಹೊಸ ಹಿನ್ನೆಲೆ ಚಿತ್ರವುಳ್ಳ ಕ್ಯಾನನ್ನು ಪರಿಚಯಿಸಿದರು.[೧೩] ಅವರ ಹಿನ್ನೆಲೆ ವಿನ್ಯಾಸವೊಂದು 73774 ಪುನರಾವರ್ತಿತ ಸಂಖ್ಯೆಗಳ ಸರಣಿಯನ್ನು ಒಳಗೊಂಡಿದೆ. ಇದು ದೂರವಾಣಿ ಕೀಪ್ಯಾಡ್‌ನ "ಪೆಪ್ಸಿ" ಶಬ್ದದ ಸಂಖ್ಯಾ ಸೂಚಕವಾಗಿದೆ.
  • 2008ರ ಕೊನೆಯಲ್ಲಿ, ಪೆಪ್ಸಿ ಕಂಪೆನಿಯು ತನ್ನ ಎಲ್ಲಾ ಬ್ರಾಂಡ್‌ಗಳನ್ನು ಕೂಲಂಕುಷ ಪರೀಕ್ಷೆಗೆ ಒಳಪಡಿಸಿದ್ದೇ ಅಲ್ಲದೆ, ಏಕಕಾಲಕ್ಕೆ ಹೊಸ ಲೋಗೊ ಮತ್ತು ಕನಿಷ್ಠ ಗುರುತಿನ ವಿನ್ಯಾಸವನ್ನು ಪರಿಚಯಿಸಿತು. ಈ ಪುನರ್‌ವಿನ್ಯಾಸವನ್ನು ಕೊಕೊ-ಕೋಲಾದ ಹಿಂದಿನ ಸರಳೀಕೃತ ಕ್ಯಾನ್ ಮತ್ತು ಬಾಟಲ್ ವಿನ್ಯಾಸಗಳಿಗೆ ಹೋಲಿಸಬಹುದಾಗಿತ್ತು. 2008ರ 4ನೇಯ ತ್ರೈಮಾಸಿಕದಲ್ಲಿ ಪೆಪ್ಸಿಯು, ಗೂಗಲ್ ಮತ್ತು ಯು ಟ್ಯೂಬ್ ಜೊತೆಗೂಡಿ ಯುಟ್ಯೂಬ್, ಪಾಪ್‌ಟಬ್‌ನಲ್ಲಿ ಮೊದಲ ದೈನಿಕ ಮನರಂಜನೆ ಕಾರ್ಯಕ್ರಮವನ್ನು ಆರಂಭಿಸಿತು. ಈ ದೈನಿಕ ಪ್ರದರ್ಶನವು ಪಾಪ್ ಸಂಸ್ಕೃತಿ, ಇಂಟರ್ನೆಟ್ ವೈರಸ್ ಕುರಿತ ವೀಡಿಯೋಗಳು ಮತ್ತು ಪ್ರಖ್ಯಾತರ ಬಗ್ಗೆಗಿನ ಗಾಸಿಪ್ ‌ಅನ್ನು ಬಿತ್ತರಿಸುತ್ತದೆ. ಪೆಪ್��ಿ ಪ್ರತಿದಿನವೂ ಪಾಪ್‌ಟಬ್‌ನಲ್ಲಿ ಹೊಸ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ.
  • 2007ರಿಂದ ಪೆಪ್ಸಿ, ಲೇಸ್ ಮತ್ತು ಗ್ಯಾಟೋರೇಡ್ ಕಂಪೆನಿಗಳು ಕೆನಡಾದ ಅತೀ ಹೆಚ್ಚಿನ ಹಾಕಿ ಅಭಿಮಾನಿಗಳಿಗಾಗಿ, "ಬ್ರಿಂಗ್ ಹೋಂ ದಿ ಕಪ್," ಸ್ಪರ್ಧೆಯನ್ನು ಏರ್ಪಡಿಸಿದವು. ಸ್ಟಾನ್ಲಿ ಕಪ್ ಮತ್ತು ಮಾರ್ಕ್ ಮೆಸೈರ್‌ನೊಡನೆ ತಮ್ಮ ತವರು ಪಟ್ಟಣದಲ್ಲಿ ಪಾರ್ಟಿಯನ್ನು ಗೆಲ್ಲುವ ಅವಕಾಶಕ್ಕಾಗಿ ವೀಡಿಯೋಗಳು, ಭಾವಚಿತ್ರಗಳು, ಅಥವಾ ಪ್ರಬಂಧಗಳನ್ನು ಕಳುಹಿಸುವಂತೆ ಹಾಕಿ ಅಭಿಮಾನಿಗಳಿಗೆ ಸೂಚಿಸಲಾಯಿತು. "ಬ್ರಿಂಗ್ ಹೋಂ ದ ಕಪ್," 2009ರಲ್ಲಿ "ಟೀಂ ಅಪ್ ಆಂಡ್ ಬ್ರಿಂಗ್ ಹೋಂ ದ ಕಪ್" ಎಂದು ಬದಲಾಯಿತು.
  • ಮಾರಾಟ ತಂತ್ರದಲ್ಲೂ ಹೊಸತೊಂದನ್ನು ಪರಿಚಯಿಸಲಾಯಿತು; ಒಟ್ಟು ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ತಂಡದ ಪರವಾಗಿ ವೀಡಿಯೋ, ಭಾವಚಿತ್ರ ಇತ್ಯಾದಿಗಳನ್ನು ಕಳುಹಿಸುವಂತೆ ಅಭಿಮಾನಿಗಳಲ್ಲಿ ತಂಡ ಕೇಳಿಕೊಂಡಲ್ಲಿ ಮಾರ್ಕ್ ಮೆಸೈರ್‌‌ ತಾನಾಗಿಯೇ ಸ್ಟಾನ್ಲಿ ಕಪ್ಅನ್ನು ತಂಡದ ತವರು ಪಟ್ಟಣಕ್ಕೆ ತಂದುಕೊಡುತ್ತಾನೆ ಎಂದು ಪ್ರಚಾರ ತಂತ್ರ ಹೇಳುತ್ತದೆ. ಪೆಪ್ಸಿ ಕಂಪೆನಿಯು ಉತ್ತರ ಅಮೆರಿಕಾದ ನಾಲ್ಕು ಪ್ರಧಾನ ವೃತ್ತಿಪರ ಕ್ರೀಡಾ ಲೀಗ್‌ಗಳೊಂದಿಗೆ ಅಧಿಕೃತ ಪ್ರಾಯೋಜಕತ್ವ ಹೊಂದಿದೆ;
  • ರಾಷ್ಟೀಯ ಫುಟ್‌ಬಾಲ್ ಲೀಗ್,ರಾಷ್ಟೀಯ ಹಾಕಿ ಲೀಗ್ ಮತ್ತು ಮೇಜರ್ ಲೀಗ್ ಬೇಸ್‌ಬಾಲ್ ಎಂಬ ಮ‌ೂರು ಕ್ರೀಡಾ ಲೀಗ್‌ಗಳಿಗೆ ಅಧಿಕೃತ ಪ್ರಾಯೋಜಕರಾಗಿದ್ದಾರೆ. ಪೆಪ್ಸಿಯು ಮೇಜರ್ ಲೀಗ್ ಸಾಸರ್ ಅನ್ನು ಕೂಡ ಪ್ರಾಯೋಜಿಸುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳ ಜೊತೆಗೂ ಪೆಪ್ಸಿಯು ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡಿಕೊಂಡಿದೆ. ಪೆಪ್ಸಿ ಬ್ರಾಂಡ್ ಪ್ರಾಯೋಜಿಸುವ ಅನೇಕ ತಂಡಗಳ ಪೈಕಿ ಪಾಕಿಸ್ತಾನದ ಕ್ರಿಕೆಟ್ ತಂಡವೂ ಒಂದು. ತಂಡದ ಸದಸ್ಯರು ಆಡುವಾಗ ಅವರು ಧರಿಸಿದ ಬಟ್ಟೆಗಳ ಮುಂಭಾಗದಲ್ಲಿ ಪೆಪ್ಸಿ ಲೋಗೋ ಮುದ್ರಿಸಿರುವುದನ್ನು ಕಾಣಬಹುದು. ಜುಲೈ 6, 2009ರಂದು ಪೆಪ್ಸಿಯು, ರಷ್ಯಾದಲ್ಲಿ ಮುಂದಿನ ಮ‌ೂರು ವರ್ಷಗಳಲ್ಲಿ $1 ಬಿಲಿಯನ್‌ ಬಂಡವಾಳ ಹೂಡಿ, ರಷ್ಯಾದಲ್ಲಿ ತನ್ನ ಒಟ್ಟು ಬಂಡವಾಳವನ್ನು $4 ಬಿಲ್ಲಿಯನ್‌‌‌ಗೆ ಏರಿಸುವುದಾಗಿ ಘೋಷಿಸಿತು.[೧೪]
  • ಜುಲೈ 2009ರಲ್ಲಿ, ಆರ್ಜೆಂಟೀನಾದಲ್ಲಿ ಪೆಪ್ಸಿಯು ತನ್ನನ್ನು ತಾನು ಪೆಕ್ಸಿ ಎಂದು ಕರೆದುಕೊಂಡು ಮಾರಾಟ ಮಾಡಿತು. ಆರ್ಜೆಂಟೀನಾದ 25%ರಷ್ಟು ಜನ ಸಂಖ್ಯೆ ತಪ್ಪಾಗಿ ಆ ರೀತಿ ಉಚ್ಚರಿಸುತ್ತಿದುದ್ದರಿಂದ ಅದಕ್ಕೆ ಸ್ಪಂದಿಸಿ ಮಿಕ್ಕೆಲ್ಲರೂ ಅದೇ ರೀತಿ ಉಚ್ಚರಿಸಲೆಂದು ಪೆಕ್ಸಿ ಎಂದು ತನ್ನನ್ನು ಕರೆದುಕೊಂಡಿತು.[೧೫]
  • ಅಕ್ಟೋಬರ್ 2008ರಲ್ಲಿ ಪೆಪ್ಸಿಯು, ತನ್ನ ಲೋಗೊವನ್ನು ಪುನರ್ ವಿನ್ಯಾಸಗೊಳಿಸುವುದಾಗಿ ಮತ್ತು ತನ್ನ ಬಹುತೇಕ ಉತ್ಪನ್ನಗಳನ್ನು 2009ರ ಆದಿಯಲ್ಲಿ ಮರು ಬ್ರಾಂಡ್ ಮಾಡುವುದಾಗಿ ಘೋಷಿಸಿತು. 2009ರಲ್ಲಿ ಪೆಪ್ಸಿ,ಡೈಯಟ್ ಪೆಪ್ಸಿ ಮತ್ತು ಪೆಪ್ಸಿ ಮ್ಯಾಕ್ಸ್ ಎಂಬ ಬ್ರಾಂಡ್‌ ಹೆಸರುಗಳಲ್ಲಿ ಎಲ್ಲಾ ಸಣ್ಣ ಅಕ್ಷರಗಳ ಫಾಂಟ್‌ಗಳನ್ನು ಬಳಸಿತು. ಡೈಯಟ್ ಪೆಪ್ಸಿ ಮ್ಯಾಕ್ಸ್‌ಅನ್ನು ಪೆಪ್ಸಿ ಮ್ಯಾಕ್ಸ್ ಎಂದು ಪುನಃ ಬ್ರಾಂಡ್ ಮಾಡಲಾಯಿತು. ಉತ್ಪನ್ನಕ್ಕೆ ತಕ್ಕಂತೆ ವಿವಿಧ ಕೋನಗಳಿಗೆ ಬಾಗಿಕೊಂಡಿರುವ ನಡುವಿನ ಬಿಳಿಯ ಪಟ್ಟಿಯೊಂದಿಗೆ, ಬ್ರಾಂಡ್‌ಗಳ ನೀಲಿ ಮತ್ತು ಕೆಂಪು ಗೋಳದ ಟ್ರೇಡ್ ಮಾರ್ಕ್‌ಗಳು "ಸ್ಮೈಲ್ಸ್"ಗಳ ಸರಣಿಗಳಾಗಿ ಪರಿವರ್ತನೆಯಾದವು.
  • U.S.,ಕೆನಡಾ,ಬ್ರೆಜಿಲ್,ಬೋಲಿವಿಯಾ,ಗ್ವಾಟೆಮಾಲಾ,ನಿಕರಾಗುವಾ,ಹೊಂಡುರಸ್,El ಸಾಲ್ವೆಡಾರ್,ಕೊಲಂಬಿಯಾ,ಆರ್ಜೆಂಟೀನಾ,ಪ್ಯುರ್ಟೊ ರಿಕೊ,ಕೋಸ್ಟ್ ರಿಕಾ,ಪನಾಮಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ "ಸ್ಮೈಲ್" ಲೋಗೊದೊಂದಿಗೆ ಪೆಪ್ಸಿಯನ್ನು ಮಾರಾಟ ಮಾಡಲಾಗುತ್ತಿದ್ದರೆ, ಇನ್ನುಳಿದ ರಾಷ್ಟ್ರಗಳಲ್ಲಿ ಎಲ್ಲ ತೆರನಾದ ಪ್ಯಾಕಿಂಗ್ ಮಾಡುವಾಗಲೂ ಹಳೆಯ ವಿನ್ಯಾಸ ಬಳಸುವುದನ್ನೇ ಮುಂದುವರಿಸಲಾಗಿದೆ. ಆಸ್ಟ್ರೇಲಿಯಾದಲ್ಲಿನ ಪೆಪ್ಸಿ ಹಾಗೂ ಪೆಪ್ಸಿ ಮ್ಯಾಕ್ಸ್ ಕ್ಯಾನ್‌ಗಳು ಮತ್ತು ಬಾಟಲಿಗಳು ಸ್ಥಳೀಯ ಮಾದರಿಯ ಹೊಸ ಪೆಪ್ಸಿ ಲೋಗೊವನ್ನು ಬಳಸುತ್ತಿವೆ. ಪೆಪ್ಸಿ ಪದ ಮತ್ತು ಲೋಗೊ ಹೊಸ ಶೈಲಿಯಲ್ಲಿದೆ, ಆದರೆ "ಮ್ಯಾಕ್ಸ್" ಪದ ಇನ್ನೂ ಹಿಂದಿನ ಶೈಲಿಯಲ್ಲೇ ಇದೆ. 2009ರ ನವಂಬರ್ ತಿಂಗಳು ಕಳೆದರೂ, ಪೆಪ್ಸಿ ವೈಲ್ಡ್ ಚೆರ್ರಿಯ ಬಾಟಲಿಗಳು ಮತ್ತು ಕ್ಯಾನ್‌ಗಳು 2003ರ ಪೆಪ್ಸಿ ವಿನ್ಯಾಸವನ್ನೇ ಹೊತ್ತಿವೆ.

ಕೋಕಾ-ಕೋಲಾದೊಂದಿಗೆ ಪೈಪೋಟಿ

[ಬದಲಾಯಿಸಿ]
  • ಗ್ರಾಹಕ ವರದಿಯ ಪ್ರಕಾರ, 1970ರಲ್ಲಿ ಮಾರುಕಟ್ಟೆಯಲ್ಲಿ ಪೆಪ್ಸಿ ಮತ್ತು ಕೋಕಾ-ಕೋಲಾ ಪೈಪೋಟಿ ತೀವ್ರವಾಗಿಯೇ ಮುಂದುವರಿದಿತ್ತು. ಬ್ಲೈಂಡ್ ಟೇಸ್ಟ್ ಪರೀಕ್ಷೆಗಳನ್ನು ಪೆಪ್ಸಿಯು ಅಂಗಡಿಗಳಲ್ಲಿ ನಡೆಸಿತು, ಅದನ್ನು "ಪೆಪ್ಸಿ ಚಾಲೆಂಜ್"ಎಂದು ಕರೆಯಲಾಯಿತು. ಹೆಚ್ಚಿನ ಗ್ರಾಹಕರು ಕೋಲಾ ಬದಲು ಪೆಪ್ಸಿಯ ರುಚಿಗೆ ಆದ್ಯತೆ ನೀಡಿದ್ದಾರೆ ಎಂಬುದು ಈ ಪರೀಕ್ಷೆಗಳಿಂದ ತಿಳಿದು ಬಂತು (ಅದರಲ್ಲಿ ಹೆಚ್ಚು ನಿಂಬೆಎಣ್ಣೆ, ಕಡಿಮೆ ಕಿತ್ತಳೆಎಣ್ಣೆ ಮತ್ತು ವೆನಿಲ್ಲಾ ಬದಲಾಗಿ ವೆನಿಲಿನ್ಅನ್ನು ಉಪಯೋಗಿಸಲಾಗಿದೆ).
  • ಹೀಗಾಗಿ, ಪೆಪ್ಸಿಯ ಮಾರಾಟ ಏರಲು ಶುರುವಾಯಿತು ಮತ್ತು ಪೆಪ್ಸಿ "ಚಾಲೆಂಜ್" ಸ್ಪರ್ಧೆಯನ್ನು ದೇಶದಾದ್ಯಂತ ಚುರುಕುಗೊಳಿಸಲಾಯಿತು. ಇದನ್ನು "ಕೋಲಾ ಸಮರ" ಎಂದು ಕರೆಯಲಾಯಿತು. 1985ರಲ್ಲಿ ದಿ ಕೋಕಾ-ಕೋಲಾ ಕಂಪೆನಿಯು ಸಾಕಷ್ಟು ಪ್ರಚಾರದ ನಡುವೆ ತನ್ನ ಪಾಕ ಸೂತ್ರವನ್ನು ಬದಲಿಸಿತು. ಪೆಪ್ಸಿ ಚಾಲೆಂಜ್‌ಗೆ ಪ್ರತಿಯಾಗಿ ಹೊಸ ಸೂತ್ರದೊಂದಿಗೆ ತಯಾರಿಸಲಾದ ನ್ಯೂ ಕೋಕ್ ಬಂದಿದೆ ಎಂಬ ಸಿದ್ಧಾಂತವನ್ನು ಮುಂದಿಟ್ಟು ಪ್ರಚಾರ ಮಾಡಲಾಯಿತು.
  • ಗ್ರಾಹಕರ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಕೋಕಾ-ಕೋಲಾ ತನ್ನ ಮ‌ೂಲ ಪಾಕ ಸೂತ್ರವನ್ನು ಕೂಡಲೇ ನವೀಕರಿಸಿದಾಗ ಅದು ಕೋಕ್‌ "ಕ್ಲಾಸಿಕ್" ಆಯಿತು. ಇದಲ್ಲಿ ದುಬಾರಿ ಹೈಟಿಯನ್ ನಿಂಬೆ ಎಣ್ಣೆಗೆ ಬದಲಾಗಿ ಸಿಹಿಯಾದ ಜೋಳದ ರಸವನ್ನು ಅದು ಬಳಸಿಕೊಂಡಿತು.ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್,(ಸಿಎಸ್‌ಡಿ) ಅಂದರೆ ಕಾರ್ಬನಿಕಾಮ್ಲಗೊಂಡ ಮೃದು ಪಾನೀಯಗಳ ಬಗ್ಗೆ 2008ರಲ್ಲಿ ಬಿವರೇಜ್ ಡೈಜೆಸ್ಟ್ ನೀಡಿರುವ ವರದಿ ಯಂತೆ, ಪೆಪ್ಸಿಕೋದವರ U.S. ಮಾರುಕಟ್ಟೆಯ ಷೇರು ಪಾಲು ಶೇಕಡ 30.8 ಇದ್ದರೆ, ಕೋಕಾ-ಕೋಲಾ ಕಂಪೆನಿಯವರ ಪಾಲು ಶೇಕಡ 42.7 ಇದೆ.[೧೬] U.S.ನ ಮಧ್ಯ ಅಪ್ಪಳಾಚಿಯಾ, ಉತ್ತರ ಡಕೋಟ ಮತ್ತು ಉತಾಹ್‌ ಬಿಟ್ಟರೆ ಬಹುತೇಕ ಕಡೆಗಳಲ್ಲಿ ಕೋಕಾ-ಕೋಲಾ ಪೆಪ್ಸಿಗಿಂತ ಹೆಚ್ಚು ಮಾರಾಟವಾಗಿದೆ. ನ್ಯೂಯಾರ್ಕ್‌ನ ಬಫೆಲ್ಲೋ ನಗರದಲ್ಲಿ ಪೆಪ್ಸಿಯು ಕೋಕಾ-ಕೋಲಾಗಿಂತ ಹೆಚ್ಚು ಅಂದರೆ ಒಂದಕ್ಕೆ ಎರಡರಷ್ಟು ಮಾರಾಟವಾಗುತ್ತದೆ.[೧೭]
  • ಒಟ್ಟಾರೆಯಾಗಿ, ಕೋಕಾ-ಕೋಲಾ ಪಾನೀಯ ಪೆಪ್ಸಿಗಿಂತ ಹೆಚ್ಚು ಮಾರಾಟವಾಗುತ್ತಿರುವುದು ವಿಶ್ವದ ಹೆಚ್ಚಿನ ಭಾಗಗಳಲ್ಲಿ ಹಾಗೆಯೇ ಮುಂದುವರಿದಿದೆ. ಆದಾಗ್ಯೂ, ಇದು ಭಾರತ; ಸೌದಿ ಅರೇಬಿಯಾ;ಪಾಕಿಸ್ಥಾನ(1990ರಿಂದ ಪೆಪ್ಸಿ ಕಂಪೆನಿಯು ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕ); ಡಾಮಿನಿಕನ್ ರಿಪಬ್ಲಿಕ್; ಗ್ವಾಟೆಮಾಲ,ಕೆನಡಾದ ಪ್ರಾಂತಗಳುಕ್ಯುಬೆಕ್‌,ನ್ಯೂ ಫೌಂಡ್ ಲ್ಯಾಂಡ್ ಮತ್ತು ಲಾಬ್ರಾಡರ್,ನೋವಾ ಸ್ಕೋಟಿಯಾ,ಮತ್ತು ಪ್ರಿನ್ಸ್ ಎಡ್ವರ್ಡ್ ಐಲೆಂಡ್ ಮತ್ತು ಉತ್ತರ ಒಂಟಾರಿ ಯಾ ದೇಶಗಳನ್ನು ಹೊರತುಪಡಿಸಿದೆ.[೧೮].
  • ಪೆಪ್ಸಿಯು ದೀರ್ಘಕಾಲದಿಂದ ಕೆನಡಾದ ಫ್ರಾಂಕೋಫೋನ್‌ಗಳ ಪಾನೀಯವಾಗಿದ್ದು, ಅದು ತನ್ನ ಉತ್ಪನ್ನಗಳ ಮಾರಾಟದ ಪ್ರಾಬಲ್ಯವನ್ನು ಮುಂದುವರೆಸುವ ಸಲುವಾಗಿ ಸ್ಥಳೀಯ ಪ್ರಖ್ಯಾತ ಕ್ಯುಬಿಕಾಯ್ಸ್‌ಗಳನ್ನು ಅವಲಂಬಿಸಿದೆ.(ವಿಶೇಷವಾಗಿ ಲಾ ಪೆಟೈಟ್‌ ವೈ ‌ನ ಕ್ಲಾಡ್ ಮಿಯುನಿಯರ್)[೧೯] ಕೋಕಾ-ಕೋಲಾದ ಜಾಹೀರಾತು "ಎರ್ವಿವೆರ್ ಇನ್ ದಿ ವರ್ಲ್ಡ್, ಇಟ್ಸ್ ಕೋಕ್" (ಪಾರ್ಟ್ ಔಟ್ ಡಾನ್ಸ್ ಲಿ ಮೋಂಡ್,ಸಿ’ಎಸ್ಟ್ ಕೋಕ್)ಗೆ ಪ್ರತಿಯಾಗಿ ಪೆಪ್ಸಿಕೋದವರು "ಹೀಯರ್, ಇಟ್ಸ್ ಪೆಪ್ಸಿ" (ಐಸಿ,ಸಿ’ಎಸ್ಟ್ ಪೆಪ್ಸಿ) ಎನ್ನುವ ಘೋಷಣೆಯನ್ನು ಬಳಸಿದ್ದಾರೆ.
  • ಯಾವುದೇ ರೀತಿಯ ಲೆಕ್ಕ ತೆಗೆದುಕೊಂಡರೂ, 1977ರವರೆಗೂ ಕೋಕಾ-ಕೋಲಾ ಭಾರತದ ಮೃದು ಪಾನೀಯಗಳ ನೇತಾರನಾಗಿತ್ತು, ಆದರೆ ಹೊಸ ಸರ್ಕಾರ ಕೋಕಿನ ತಯಾರಿಕೆಯಲ್ಲಿನ ರಹಸ್ಯ ಸೂತ್ರವನ್ನು ಬಹಿರಂಗಪಡಿಸಬೇಕು ಮತ್ತು ವಿದೇಶ ವಿನಿಮಯ ನಿಯಂತ್ರಣ ಕಾಯಿದೆ(ಫೆರಾ) ಪ್ರಕಾರ ಅದು ಭಾರತದ ಘಟಕದಲ್ಲಿ ತನ್ನ ಷೇರುಗಳನ್ನು ಕಡಿಮೆಗೊಳಿಸುವಂತೆ ಆದೇಶಿಸಿದ ಕಾರಣ, ಅದು ಭಾರತವನ್ನು ತೊರೆಯಿತು. 1988ರಲ್ಲಿ ಪೆಪ್ಸಿಕೋ ಪಂಜಾಬ್ ಸರ್ಕಾರ ಮಾಲೀಕತ್ವದ ಪಂಜಾಬ್ ಆಗ್ರೊ ಇಂಡಸ್ಟ್ರಿಯಲ್ ಕಾರ್ಪೊರೇಷನ್ (PAIC) ಮತ್ತು ವೋಲ್ಟಾಸ್ ಭಾರತ ಲಿಮಿಟೆಡ್ ಜೊತೆಗೆ ಜಂಟಿ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಪ್ರವೇಶ ಪಡೆಯಿತು.
  • ವಿದೇಶಿ ಬ್ರಾಂಡ್‌ಗಳನ್ನು ಮಾರಾಟ ಮಾಡಲು 1991ರವರೆಗೆ ಅನುಮತಿ ಇರುವವರೆಗೂ, ಈ ಜಂಟಿ ಬಂಡವಾಳ ಹೂಡಿಕೆದಾರರು ಲೆಹರ್ ಪೆಪ್ಸಿಯನ್ನು ಮಾರಾಟ ಮಾಡಿದರು; ಪೆಪ್ಸಿಕೋದವರು ತಮ್ಮ ಪಾಲುದಾರರನ್ನು ಹೊರಗೆ ತಳ್ಳಿ, 1994ರಲ್ಲಿ ಜಂಟಿ ಒಪ್ಪಂದಕ್ಕೆ ಅಂತ್ಯ ಹಾಡಿದರು. 1993ರಲ್ಲಿ ಭಾರತದ ಉದಾರೀಕರಣದ ನೀತಿಯಿಂದಾಗಿ ಕೋಕಾ-ಕೋಲಾ ಕಂಪೆನಿ ಭಾರತಕ್ಕೆ ಹಿಂದಿರುಗಿತು.[೨೦] 2005ರಲ್ಲಿ ಕೋಕಾ-ಕೋಲಾ ಕಂಪೆನಿ ಮತ್ತು ಪೆಪ್ಸಿಕೋ ಜೊತೆಯಾಗಿ ಭಾರತದ ಒಟ್ಟು ಮೃದು ಪಾನೀಯ ಮಾರಾಟದಲ್ಲಿ 95% ರಷ್ಟು ಪಾಲನ್ನು ಹೊಂದಿತ್ತು.
  • ಕೋಕಾ-ಕೋಲಾದ ಭಾರತದ ಮಾರುಕಟ್ಟೆ ಷೇರು 52.5%ನಷ್ಟಿತ್ತು.[೨೧] ರಷ್ಯಾದಲ್ಲಿ ಪೆಪ್ಸಿಯು ಆರಂಭದಲ್ಲಿ ಕೋಕ್‌ಗಿಂತ ದೊಡ್ದ ಪ್ರಮಾಣದಲ್ಲಿ ಮಾರಾಟದ ಪಾಲು ಹೊಂದಿತ್ತು, ಆದರೆ ಶೀತಲ ಸಮರ ಮುಗಿಯುತ್ತಿದ್ದಂತೆ ಮಾರುಕಟ್ಟೆ ಪಾಲಿನಲ್ಲಿ ಕಡಿತವಾಯಿತು. 1972ರಲ್ಲಿ ಪೆಪ್ಸಿಕೋ ಕಂಪೆನಿಯು(ಬಾರ್ಟರ್ ವ್ಯವಸ್ಥೆ) ವಸ್ತುಗಳ ಬದಲಿಗೆ ವಸ್ತುವನ್ನು ವಿನಿಮಯ ವ್ಯವಸ್ಥೆಯ ಒಪ್ಪಂದವನ್ನು ಅಂದಿನ ಸೋವಿಯಟ್ ಒಕ್ಕೂಟದ ಸರಕಾರದೊಡನೆ ಮಾಡಿಕೊಂಡಿತು.
  • ಅದರಂತೆ ಪೆಪ್ಸಿಕೋಲಾ ಆಮದು ಮತ್ತು ಸೋವಿಯತ್‌ನಲ್ಲಿ ಮಾರುಕಟ್ಟೆ ಬದಲಿಗೆ, ಪೆಪ್ಸಿಕೋ ಸಂಸ್ಥೆಗೆ ಪಾಶ್ಚಿಮಾತ್ಯ ಮಾರುಕಟ್ಟೆಗೆ ಸ್ಟೋಲಿಚ್ನಾಯ ವೋಡ್ಕವನ್ನು ರಫ್ತು ಮಾಡುವ ಹಕ್ಕುಗಳನ್ನು ನೀಡಲಾಯಿತು.[೨೨]

[೨೩] ಈ ವಿನಿಮಯದಿಂದಾಗಿ ಪೆಪ್ಸಿಕೋಲಾ U.S.S.Rನಲ್ಲಿ ಮಾರಾಟಗೊಂಡ ಮೊದಲ ವಿದೇಶಿ ಉತ್ಪನ್ನವಾಯಿತು.[೨೪]

  • ��್ಮರಣಶೀಲವಾಗಿ ಕೋಕಾ-ಕೋಲಾ ಸಾಂಸ್ಕೃತಿಕ ಪ್ರತಿಮೆಯಾಯಿತು ಮತ್ತು "ಕೋಕಾ ಕೊಲೊನೈಜೇಶನ್" ವಾಕ್ಯಗಳು ಪ್ರಪಂಚಾದ್ಯಂತ ತತ್ತಿಯಂತೆ ಹರಡಿತು, ಜೊತೆಗೆ ಸೋವಿಯತ್ ವ್ಯವಸ್ಥೆಯೊಂದಿಗೆ ಪೆಪ್ಸಿ-ಕೋಲಾ ಮತ್ತು ಅದರ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. 1990ರ ಆರಂಭದಲ್ಲಿ "ಪೆಪ್ಸಿ-ಸ್ಟ್ರೋಯ್ಕ" ಪದವು ಮೈಕಲ್ ಗೊರ್ಬಚೇವ್‌ರ ಸೋವಿಯತ್ ಒಕ್ಕೂಟದ ಸುಧಾರಣಾ ನಿಯಮ "ಪೆರೆಸ್ತ್ರೋಯ್ಕಾ"ಗೆ ಶ್ಲೇಷೆಯಾಗಿ ಕಂಡು ಬರುತ್ತಿತ್ತು, ಈ ಸುಧಾರಣಾ ನೀತಿಯಿಂದ ಸಡಗರಪಡುವುದರಲ್ಲಿ ಅರ್ಥವಿಲ್ಲ ಮತ್ತು ದೇಶೀಯ ಶ್ರೀಮಂತ ಪಾನೀಯಗಳಿಗೆ ಪ್ರತಿಯಾಗಿ ಪಾಶ್ಚಿಮಾತ್ಯ ಉತ್ಪನ್ನಗಳನ್ನು ಸೆಳೆಯುವ ಪ್ರಯತ್ನ ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು.
  • ಪೆಪ್ಸಿಯು ಸೋವಿಯತ್ ಒಕ್ಕೂಟ ಪ್ರವೇಶಿಸಿದ ಅಮೆರಿಕದ ಮೊದಲ ಉತ್ಪನ್ನಗಳಲ್ಲೊಂದಾಗಿದೆ. ಅದು ಕ್ರಮೇಣ ಸೋವಿಯತ್ ನೀತಿಯಲ್ಲಿ ಹಾಸುಹೊಕ್ಕಾಯಿತಲ್ಲದೆ, ಉಭಯಗ ಬಣಗಳ ಸಂಬಂಧದ ಕುರುಹಾಯಿತು.[೨೫] ಇದು ರಷ್ಯಾದ ಲೇಖಕ ವಿಕ್ಟರ್ ಪೆಲಿವಿನ್‌ರವರ ಪುಸ್ತಕ "ಜನರೇಶನ್ ಪಿ"ಯಲ್ಲೂ ಪ್ರತಿಫಲನಗೊಂಡಿತು.
  • 1989ರಲ್ಲಿ ಬಿಲ್ಲಿ ಜೋಯಲ್ ಅವರು ಎರಡು ಕಂಪೆನಿಗಳ ಪೈಪೋಟಿಯನ್ನು "ವಿ ಡೋಂಟ್ ಸ್ಟಾರ್ಟ್ ದಿ ಫೈರ್" ಎಂಬ ತಮ್ಮ ಹಾಡಿನಲ್ಲಿ ಪ್ರಸ್ತಾಪಿಸುತ್ತಾರೆ. ಅನೇಕ ಸಂಗೀತಗಾರರು ತಮ್ಮ ಜಾಹೀರಾತು ಪ್ರಚಾರದಲ್ಲಿ "ರಾಕ್ ಆಂಡ್ ರೋಲ್ ಆಂಡ್ ಕೋಲಾ ವಾರ್ಸ್" ಎಂಬ ಸಾಲನ್ನು ಪೆಪ್ಸಿ ಮತ್ತು ಕೋಕ್‌ಗೆ ಅನ್ವಯಿಸುವಂತೆ ಬಳಸಿದ್ದಾರೆ. ಕೋಕ್‌ ಪೌಲಾ ಅಬ್ದುಲ್ ಅನ್ನು ಬಳಸಿದರೆ, ಪೆಪ್ಸಿ ಮೈಕಲ್ ಜಾಕ್ಸನ್‌‌ನ ಹೆಸರನ್ನು ಬಳಸಿದ್ದಾರೆ. ಈ ಕಂಪೆನಿಗಳು ತಮ್ಮ ಪಾನೀಯಗಳನ್ನು ಜಾಹೀರಾತು ಮಾಡಲು ಬೇರೆ ಸಂಗೀತಗಾರರನ್ನು ಬಳಸಿಕೊಳ್ಳುವುದನ್ನು ಮುಂದುವರೆಸಿದವು.
  • 1992ರಲ್ಲಿ ಸೋವಿಯತ್ ಕುಸಿತದಿಂದಾಗಿ ಕೋಕಾ-ಕೋಲಾವನ್ನು ರಷ್ಯಾದ ಮಾರುಕಟ್ಟೆಗೆ ಪರಿಚಯಿಸಲಾಯಿತು. ಹೊಸ ವ್ಯವಸ್ಥೆಯ ಜೊತೆ ಅದು ಸೇರಿಕೊಂಡದ್ದರಿಂದ, ಮತ್ತು ಪೆಪ್ಸಿ ಆದಾಗಲೇ ಹಳತಾಗಿದ್ದುದರಿಂದ ಕೋಕಾ-ಕೋಲಾ ತ್ವರಿತವಾಗಿ ಮಾರುಕಟ್ಟೆ ಪಾಲನ್ನು ಗಣನೀಯವಾಗಿ ವಶಪಡಿಸಿಕೊಂಡಿತು. ಇಲ್ಲದಿದ್ದರೆ ಅಷ್ಟನ್ನು ಸಾಧಿಸಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಜುಲೈ 2005ರಷ್ಟು ಹೊತ್ತಿಗೆ ಕೋಕಾ-ಕೋಲಾ 19.4 ಶೇಕಡ ಮಾರುಕಟ್ಟೆಯ ಪಾಲನ್ನು ಸಂಭ್ರಮಿಸುತ್ತಿದ್ದರೆ, ಪೆಪ್ಸಿಯ ಮಾರುಕಟ್ಟೆಯ ಪಾಲು ಕೇವಲ 13 ಶೇಕಡ ಇತ್ತು.[೨೬]
  • 1992ರವರೆಗೂ ಪೆಪ್ಸಿಯು ತನ್ನ ಮೃದು ಪಾನೀಯವನ್ನು ಇಸ್ರೇಲಿನಲ್ಲಿ ಮಾರಾಟ ಮಾಡಲಿಲ್ಲ. ಅರಬ್ಬರು ಈ ಹಿಂದೆ ಪೆಪ್ಸಿಯನ್ನು ಬಹಿಷ್ಕರಿಸಿದ್ದಾಗ ಅವರ ಜೊತೆ ಸೆಣಸಾಡಲು ಹಿಂಜರಿದಿದ್ದ ಪೆಪ್ಸಿಯು ಅನೇಕ ಇಸ್ರೇಲಿಗಳು ಮತ್ತು ಅಮೆರಿಕಾದ ಕೆಲವು ಯಹೂದಿ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಅರಬ್ ಪ್ರಪಂಚದಲ್ಲಿ ದೊಡ್ದ ಮಟ್ಟದಲ್ಲಿ ಲಾಭದಾಯಕ ವ್ಯಾಪಾರ ಮಾಡುತ್ತಿದ್ದ ಪೆಪ್ಸಿ ಇದನ್ನು ಅಲ್ಲಗಳೆಯಿತು. ಪೆಪ್ಸಿ ಇಸ್ರೇಲ್‌ನಿಂದ ಹೊರಗುಳಿಯಲು ರಾಜಕೀಯ ಕಾರಣವಾಯಿತೇ ಹೊರತು, ಆರ್ಥಿಕ ಕಾರಣಗಳಲ್ಲ.[೨೭]

ಘೋಷಣೆಗಳು

[ಬದಲಾಯಿಸಿ]
  • 1939–1950: "ಟ್ವೈಸ್ ಆಸ್ ಮಚ್ ಫಾರ್ ಎ ನಿಕ್ಕಲ್"
  • 1950: "ಮೋರ್ ಬೌನ್ಸ್ ಟು ದಿ ಔನ್ಸ್"
  • 1950–1957: "ಎನಿ ವೆದರ್ ಇಸ್ ಎ ಪೆಪ್ಸಿ ವೆದರ್"
  • 1957–1958: "ಸೇ ಪೆಪ್ಸಿ, ಪ್ಲೀಸ್"
  • 1958–1961: "ಬಿ ಸೋಶಿಯಬಲ್,ಹ್ಯಾವ್ ಎ ಪೆಪ್ಸಿ"
  • 1961-1963: "ನೌ ಇಟ್ಸ್ ಪೆಪ್ಸಿ ಫಾರ್ ದೋಸ್ ಹೂ ಥಿಂಕ್ ಯಂಗ್" (ಜಿಂಗಲ್ ಸಂಗ ಬೈ ಜೋಯ್ನಿ ಸೋಮರ್ಸ್)
  • 1963–1967: "ಕಂ ಅಲೈವ್, ಯೂ ಆರ್ ಇನ್ ದಿ ಪೆಪ್ಸಿ ಜನರೇಶನ್" (ಜಿಂಗಲ್ ಸಂಗ್ ಬೈ ಜೋಯ್ನಿ ಸೋಮರ್ಸ್)
  • 1967–1969: "(ಟೇಸ್ಟ್ ದಟ್ ಬೀಟ್ಸ್ ದಿ ಅದರ್ಸ್ ಕೋಲ್ಡ್) ಪೆಪ್ಸಿ ಪೋರ್ಸ್ ಇಟ್ ಆನ್".
  • 1969–1975: "ಯು ಹ್ಯಾವ್ ಗಾಟ್ ಎ ಲಾಟ್ ಟು ಲಿವ್,ಆಂಡ್ ಪೆಪ್ಸಿ‌ ಹ್ಯಾಸ್ ಗಾಟ್ ಎ ಲಾಟ್ ಟು ಗಿವ್"
  • 1975–1977: "ಹ್ಯಾವ್ ಎ ಪೆಪ್ಸಿ ಡೇ"
  • 1977–1980: "ಜಾಯ್ನ್ ದ ಪೆಪ್ಸಿ ಪೀಪಲ್ (ಫೀಲಿಂಗ್ ಫ್ರೀ)"
  • 1980–1981: "ಕ್ಯಾಚ್ ದಟ್ ಪೆಪ್ಸಿ ಸ್ಪಿರಿಟ್" [ಡೇವಿಡ್ ಲ್ಯೂಕಸ್, ಕಂಪೋಸರ್]
  • 1981–1983: "ಪೆಪ್ಸಿ‌ ಹ್ಯಾಸ್‌ ಗಾಟ್ ಯುವರ್ ಟೇಸ್ಟ್ ಫಾರ್ ಲೈಫ್"
  • 1983: "ಇಟ್ಸ್ ಚೀಪರ್ ದ್ಯಾನ್ ಕೋಕ್!"
  • 1983–1984: "ಪೆಪ್ಸಿ ನೌ! ಟೇಕ್ ದಿ ಚಾಲೆಂಜ್!"
  • 1984–1991: "ಪೆಪ್ಸಿ. ದಿ ಚಾಯ್ಸ್ ಆಫ್ ಎ ನ್ಯೂ ಜನರೇಶನ್" (ಕಮರ್ಶಿಯಲ್ ವಿಥ್ ಮೈಕಲ್ ಜಾಕ್ಸ್‌ನ್ ಆಂಡ್ ದಿ ಜಾಕ್ಸನ್ಸ್, ಬಿಲ್ಲಿ ಜೀನ್‌ನ ಪೆಪ್ಸಿ ಆವೃತ್ತಿಯಲ್ಲಿ.
  • 1986–1987: "ವೀ ಹ್ಯಾವ್ ಗಾಟ್ ದಿ ಟೇಸ್ಟ್" (ಕಮರ್ಶಿಯಲ್ ವಿಥ್ ಟೀನಾ ಟರ್ನರ್)
  • 1987–1990: "ಪೆಸ್ಪಿ‌ಸ್ ಕೂಲ್" (ಕಮರ್ಶಿಯಲ್ ವಿಥ್ ಮೈಕಲ್ ಜಾಕ್ಸ್‌‌ನ್, ಬ್ಯಾಡ್‌)ನ ಪೆಪ್ಸಿ ಆವೃತ್ತಿಯಲ್ಲಿ.
  • 1990–1991: "ಯು ಗಾಟ್ ದ ರೈಟ್ ಒನ್ ಬೇಬಿ UH HUH"(ಸಂಗ್ ಬೈ ರೇ ಚಾರ್ಲ್ಸ್ ಫಾರ್ ಡೈಯಟ್ ಪೆಪ್ಸಿ)
  • 1990–1991: "ಯೆಹಿ ಹೈ ರೈಟ್ ಚಾಯ್ಸ್ ಬೇಬಿ UH HUH" (ಹಿಂದಿ - ಮೀನಿಂಗ್ "ದಿಸ್ ಇಸ್ ದಿ ರೈಟ್ ಚಾಯ್ಸ್ ಬೇಬಿ UH HUH") (ಭಾರತ)
  • 1991–1992: "ಗಾಟಾ ಹ್ಯಾವ್ ಇಟ್"/"ಚಿಲ್ ಔಟ್"
  • 1992–1993: "ಬಿ ಯಂಗ್, ಹ್ಯಾವ್ ಫನ್, ಡ್ರಿಂಕ್ ಪೆಪ್ಸಿ"
  • 1993–1994: "ರೈಟ್ ನೌ" ಕ್ರಿಸ್ಟಲ್ ಪೆಪ್ಸಿ ಜಾಹೀರಾತಿಗಾಗಿ ವ್ಯಾನ್ ಹ್ಯಾಲೆನ್ ಹಾಡು.
  • 1994–1995: "ಡಬಲ್ ಡಚ್ ಬಸ್" (ಬ್ರಾಡ್ ಬೆನ್ಟ್ಜ್ ಪೆಪ್ಸಿ ಹಾಡನ್ನು ಹಾಡಿದರು)
  • 1995: "ನಥಿಂಗ್ ಎಲ್ಸ್ ಇಸ್ ಎ ಪೆಪ್ಸಿ"
  • 1995–1996: "ಡ್ರಿಂಕ್ ಪೆಪ್ಸಿ. ಗೆಟ್ ಸ್ಟಫ್." ಪೆಪ್ಸಿ ಸ್ಟಫ್ ಚಳವಳಿ.
  • 1996–1997: "ಪೆಪ್ಸಿ: ದೇರ್ ಈಸ್ ನಥಿಂಗ್ ಅಫೀಷಿಯಲ್ ಅಬೌಟ್ ಇಟ್" (ಭಾರತ/ಪಾಕಿಸ್ತಾನ/ಶ್ರೀಲಂಕಾದಲ್ಲಿ ನಡೆದ ವಿಲ್ಸ್ ವಿಶ್ವಕಪ್ (ಕ್ರಿಕೆಟ್)
  • 1997–1998: "ಜನರೇಶನ್ ನೆಕ್ಸ್ಟ್" - ವಿಥ್ ದಿಸ್ಪೈಸ್ ಗರ್ಲ್ಸ್.
  • 1998–1999: "ಇಟ್ಸ್ ದಿ ಕೋಲಾ" (100ನೆ ವಾರ್ಷಿಕ ವಾಣೀಜ್ಯ ಜಾಹೀರಾತು)
  • 1999–2000: "ಫಾರ್ ದೋಸ್ ಹೂ ಥಿಂಕ್ ಯಂಗ್"/"ದಿ ಜಾಯ್ ಆಫ್ ಪೆಪ್ಸಿ-ಕೋಲಾ" (ಬ್ರಿಟ್ನಿ ಸ್ಪೀಯರ್ಸ್ ಜೊತೆ ಜಾಹೀರಾತು/ಮೇರಿ ಜೆ. ಬ್ಲಿಜ್) ಜೊತೆ ವಾಣಿಜ್ಯ ಜಾಹೀರಾತು.
  • 1999-2006: "ಯೇಹ್ ದಿಲ್ ಮಾಂಗೆ ಮೋರ್" (ಹಿಂದಿ - ಮೀನಿಂಗ್ "ದಿಸ್ ಹಾರ್ಟ್ ಆಸ್ಕ್ಸ್ ಫಾರ್ ಮೋರ್") (ಭಾರತ).
  • 2003: "ಇಟ್ಸ್ ದಿ ಕೋಲಾ"/"ಡೇರ್ ಫಾರ್ ಮೋರ್" (ಪೆಪ್ಸಿ ಜಾಹೀರಾತು)
  • 2005–2006: "ಏನ್ ಐಸ್ ಕೋಲ್ಡ್ ಪೆಪ್ಸಿ. ಇದು ಲೈಂಗಿಕತೆಗಿಂತಲೂ ಉತ್ತಮ.!" (ಲ್ಯಾರಿ ಸೈಪೋಲ್ಟ್)
  • 2006–2007: "ವೈ ಯು ಡಾಗ್ಗಿನ್' ಮೀ"/"ಟೇಸ್ಟ್ ದಿ ಒನ್ ದಟ್ಸ್ ಫಾರ್ ಎವರ್ ಯಂಗ್" ಮೇರಿ ಜೆ. ಬ್ಲಿಜ್‌ನ ವಾಣಿಜ್ಯ ಜಾಹೀರಾತು.
  • 2007–2008: "ಮೋರ್ ಹ್ಯಾಪಿ"/"ಟೇಸ್ಟ್ ದಿ ಒನ್ಸ್ ದಟ್ಸ್ ಫಾರ್ ಎವರ್ ಯಂಗ್" (ಮೈಕಲ್ ಅಲೆಕ್ಸಾಂಡರ್)
  • 2008: "ಪೆಪ್ಸಿ ಸ್ಟಫ್" ಸೂಪರ್ ಬೌಲ್ ಕಮರ್ಶಿಯಲ್(ಜಸ್ಟ್ ಇನ್ ಟಿಂಬರ್‌ಲೇಕ್)
  • 2008: "ಪೆಪ್ಸಿ ಇಸ್ #1" ಟಿವಿ ಕಮರ್ಶಿಯಲ್(ಲೂಕ್ ರೋಸಿನ್)
  • 2008–: "ಸಮ್‌ಥಿಂಗ್ ಫಾರ್ ಎವರಿ ಒನ್."
  • 2009–ಈವರೆಗೆ: "ರಿಫ್ರೆಷ್ ಎವರಿಥಿಂಗ್"/"ಎವರಿ ಜನರೇಶನ್ ರೆಫ್ರೆಶ್ ದಿ ವರ್ಲ್ಡ್"‌‌
  • 2009-ಈವರೆಗೆ: "ಯೇಹ್ ಹೈ ಯಂಗಿಸ್ತಾನ್ ಮೇರಿ ಜಾನ್" (ಹಿಂದಿ -ಮೀನಿಂಗ್ "ದಿಸ್ ಇಸ್ ಔರ್ ಯಂಗ್ ಕಂಟ್ರಿ ಮೈ ಬೇಬಿ") (ಭಾರತ)
  • 2009-ಈವರೆಗೆ: "ಮೈ ಪೆಪ್ಸಿ ಮೈ ವೇ"(ಭಾರತ)

ಪೆಪ್ಸಿಮ್ಯಾನ್

[ಬದಲಾಯಿಸಿ]
  • ಪೆಪ್ಸಿಮ್ಯಾನ್ ಪೆಪ್ಸಿಯ ಅಧಿಕೃತ ಮಾಸ್ಕಾಟ್(ಶುಭಕಾರಿ) ಆಗಿದ್ದು, ಇದು ಪೆಪ್ಸಿಯ ಜಪಾನಿನ ಕಾರ್ಪೊರೇಟ್ ಶಾಖೆಯಿಂದ ಬಂದಿದೆ. ಸರಿ ಸುಮಾರು 1990ರ ಮಧ್ಯ ಭಾಗದಲ್ಲಿ ರಚಿಸಲಾದ ಪೆಪ್ಸಿಮ್ಯಾನ್ ಪಾತ್ರ ವಿನ್ಯಾಸವು ಕೆನಡಾದ ಕಾಮಿಕ್ ಪುಸ್ತಕ ಕಲಾವಿದ ಟ್ರಾವಿಸ್ ಚಾರೆಸ್ಟ್‌‌ ಗೆ ಸೇರಿದ್ದಾಗಿದೆ. ಮ‌ೂರು ವಿವಿಧ ರೀತಿಯ ಉಡುಗೆಯಲ್ಲಿ ಪೆಪ್ಸಿಮ್ಯಾನ್ ಅನ್ನು ಕಾಣಿಸಲಾಯಿತು, ಈ ಪೈಕಿ ಪ್ರತಿಯೊಂದೂ ಸಧ್ಯ ಹಂಚಿಕೆಯಾಗುತ್ತಿರುವ ಪೆಪ್ಸಿ ಕ್ಯಾನಿನ ಶೈಲಿಯನ್ನು ಪ್ರತಿನಿಧಿಸುತ್ತದೆ.
  • ಮಾಸ್ಕಾಟ್ ಪಾತ್ರವನ್ನು ಮ‌ೂಲವಾಗಿಟ್ಟುಕೊಂಡು, ಹನ್ನೆರಡು ಬಗೆಯ ಜಾಹೀರಾತುಗಳನ್ನು ನಿರ್ಮಿಸಲಾಯಿತು. ಬಾಯಾರಿದ ಜನರಿಗೆ ಅಥವಾ ಸೋಡಕ್ಕಾಗಿ ಹಾತೊರೆಯುವ ಜನರಿಗಾಗಿ ಪೆಪ್ಸಿಯೊಡನೆ ಪ್ರತ್ಯಕ್ಷವಾಗುವುದು ಅವನ ಪಾತ್ರವಾಗಿತ್ತು. ಪೆಪ್ಸಿಮ್ಯಾನ್ ಸರಿಯಾದ ಸೂಕ್ತವಾದ ಸಮಯದಲ್ಲಿ ಉತ್ಪನ್ನದೊಡನೆ ಪ್ರತ್ಯಕ್ಷವಾಗಬೇಕಾಗಿತ್ತು. ಪಾನೀಯವನ್ನು ವಿತರಿಸಿದ ನಂತರ ಪೆಪ್ಸಿಮ್ಯಾನ್‌ ಕೆಲವೊಮ್ಮೆ ಕಷ್ಟಸಾಧ್ಯ ಮತ್ತು ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗ ಗಾಯಗೊಳ್ಳುತ್ತಿದ್ದನು.
  • ಪೆಪ್ಸಿ‌ಮ್ಯಾನ್ ಅನ್ನು ಜಪಾನೀಗಳ ವಿಶಿಷ್ಟ ಟ್ರಾನ್ಸ್‌ಫಾರ್ಮರ್‌ಗಳ ಆಟಿಕೆ "ಪೆಪ್ಸಿ ಕಾನ್ವಾಯ್," ಎಂದು G1 ಆಪ್ಟಿಮಸ್ ಪ್ರೈಮ್‌‌ನ ಆಧಾರದಲ್ಲಿ ರೂಪಿಸಲಾಯಿತು. 1996ರಲ್ಲಿ ಸೆಗಾ-AM2 ಸೆಗಾ ಸಟರ್ನ್‌ ಆವೃತ್ತಿಯ ಆರ್ಕೇಡ್ ಫೈಟಿಂಗ್ ಆಟ ಫೈಟಿಂಗ್ ವೈಪರ್ಸ್ ಅನ್ನು ಬಿಡುಗಡೆಗೊಳಿಸಿತು. ಈ ಆಟದಲ್ಲಿ ಪೆಪ್ಸಿ‌ಮ್ಯಾನ್ ಅನ್ನು ವಿಶೇಷ ಪಾತ್ರವಾಗಿ ಸೇರಿಸಲಾಗಿದ್ದು, "ಒಬ್ಬರ ದಾಹ ತಣಿಸುವ" ಸಾಮರ್ಥ್ಯ ಈತನಿಗಿದೆ ಎನ್ನಲಾಯಿತು. ಈತನು ಆಟದ ಮತ್ತ್ಯಾವುದೇ ಆವೃತ್ತಿಯಲ್ಲಾಗಲಿ ಅಥವಾ ಉತ್ತರ ಭಾಗದಲ್ಲಾಗಲಿ ಅವನು ಕಾಣಿಸುವುದಿಲ್ಲ.
  • 1999ರಲ್ಲಿ KID ಸಂಸ್ಥೆಯು ಪ್ಲೇ ಸ್ಟೇಷನ್‌ ಗಾಗಿ ಪೆಪ್ಸಿಮ್ಯಾನ್ ಶೀರ್ಷಿಕೆಯಡಿ ವಿಡಿಯೋ ಆಟವನ್ನು ಅಭಿವೃದ್ಧಿ ಪಡಿಸಿತು. ಇದರಲ್ಲಿ ಆಟಗಾರ ಪೆಪ್ಸಿ‌ಮ್ಯಾನ್‌ನಂತೆ ಓಡುತ್ತಾನೆ, ಜಾರು ಹಲಗೆಯ ಮೇಲೆ ಜಾರುತ್ತಾನೆ, ಉರ��ಳುತ್ತಾನೆ ಮತ್ತು ಅನೇಕ ಸ್ಥಳಗಳಲ್ಲಿ ಮುಗ್ಗರಿಸುತ್ತಾನೆ, ಆಪತ್ತುಗಳನ್ನು ತಪ್ಪಿಸಿಕೊಳ್ಳುತ್ತ ಪೆಪ್ಸಿಯ ಕ್ಯಾನುಗಳನ್ನು ಸಂಗ್ರಹಿಸುತ್ತಾನೆ, ವಾಣಿಜ್ಯ ಜಾಹೀರಾತಿನಲ್ಲಿ ದಾಹಗೊಂಡವರ ಬಳಿ ಧಾವಿಸುವಂತೆ.

ಕೋಲಾಸ್

[ಬದಲಾಯಿಸಿ]
  • ಪೆಪ್ಸಿ'ಎಡ್ಜ್’ ': ಪೆಪ್ಸಿಕೋದವರ ಹೊಸ ಪಾನೀಯ(ವೆನಿಲಾ ಸವಿಯ.)
  • ಪೆಪ್ಸಿ : ಪೆಪ್ಸಿಕೋಸ್ ಸಿಗ್ನೇಚರ್ ಕೋಲಾ ಫ್ಲೇವರ್ ಮತ್ತು ಅದರ ನಾಮಕಾವಸ್ಥೆಯ ಕೋಲಾ.
  • ಡೈಯಟ್ ಪೆಪ್ಸಿ : ಕೃತಕ-ಸಿಹಿಕಾರಿ ರೂಪಾಂತರ.
  • ಪೆಪ್ಸಿ ಫ್ರೀ : ಮೊದಲ ಪ್ರಮುಖ ಬ್ರಾಂಡ್ ಕೆಫಿನ್- ರಹಿತ ಕೋಲಾವನ್ನು 1982ರಲ್ಲಿ ಪರಿಚಯಿಸಲಾಯಿತು. ಈಗ ಕೆಫಿನ್-ರಹಿತ ಪೆಪ್ಸಿ ಮತ್ತು ಕೆಫಿನ್ ರಹಿತ ಡೈಯಟ್ ಪೆಪ್ಸಿ ಎಂದು ಮಾರಾಟ ಮಾಡಲಾಗುತ್ತಿದೆ.
  • ಪೆಪ್ಸಿ ಮ್ಯಾಕ್ಸ್ : ಕಡಿಮೆ-ಕ್ಯಾಲೋರಿ, ಸಕ್ಕರೆ-ರಹಿತ ಪೆಪ್ಸಿ.
  • ಕ್ರಿಸ್ಟಲ್ ಪೆಪ್ಸಿ : ಶುಭ್ರ ಕೋಲಾವನ್ನು 1992–1993ರವರೆಗೂ ಮಾರಾಟ ಮಾಡಲಾಯಿತು.
  • ಕ್ರಿಸ್ಟಲ್ ಫ್ರಮ್ ಪೆಪ್ಸಿ : ಸಿಟ್ರಸ್ ಪರಿಮಳದ ಪುನರ್ ಪಾಕ ಸೂತ್ರದ ಶುಭ್ರ ಪೆಪ್ಸಿ.
  • ಪೆಪ್ಸಿ ಕ್ಲೀಯರ್ : 2005ರಲ್ಲಿ ಕ್ರಿಸ್ಮಸ್ ವೇಳೆ ಮೆಕ್ಸಿಕೊದಲ್ಲಿ ಬಿಡುಗಡೆಯಾದ ಸೀಮಿತವಾಗಿ ಲಭ್ಯವಿರುವ ಶುಭ್ರ ಸೋಡ, ಮೆಕ್ಸಿಕನ್ ಸಮಾನದ ಶುಭ್ರ ಪೆಪ್ಸಿ.
  • ಪೆಪ್ಸಿ AM : ವೃದ್ಧಿಗೊಂಡ ಕೆಫಿನ್: ಮುಂಜಾನೆಯ ಪಾನೀಯ ಎಂದು ಮಾರಾಟ ಮಾಡಲಾಗಿದೆ. 1989–1990ವರೆಗೆ ಮಾರಲಾಗಿದೆ.
  • ಪೆಪ್ಸಿ ಬೂಂ : ಕೆಫಿನ್,ಸಕ್ಕರೆ ಮತ್ತು ಕೃತಕ ಸಿಹಿ ರಹಿತ. ಜರ್ಮನಿ,ಇಟೆಲಿ ಮತ್ತು ಸ್ಪೇನ್‌ನಲ್ಲಿ ಮಾರಲಾಗಿದೆ.
  • ಪೆಪ್ಸಿ ಫ್ರೆಶ್ : 2007ರ ಬೇಸಗೆಯಲ್ಲಿ ಪರಿಚಯಿಸಲಾಗಿದೆ.
  • ಪೆಪ್ಸಿ ನ್ಯಾಚುರಲ್ (ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪೆಪ್ಸಿ ಕಚ್ಛಾ ವಸ್ತು) : "ನೈಸರ್ಗಿಕ ಅಂಶಗಳು" ಮಾತ್ರ ಒಳಗೊಂಡಿರುವುದು. 2009ರಲ್ಲಿ U.S. ಮತ್ತು ಮೆಕ್ಸಿಕೋದ ಆಯ್ದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.
  • ಪೆಪ್ಸಿಶೊಸೋ : 2009ರ ಬೇಸಗೆಯಲ್ಲಿ ಜಪಾನಿನಲ್ಲಿ ಮಾತ್ರ ಸೀಮಿತವಾಗಿ ಪರಿಚಯಿಸಲಾಯಿತು, ಅದರ ಪಾರದರ್ಶಕ ಹಸಿರಿನಂತಿತ್ತು ಗಾತ್ರ: 147ml ಕ್ಯಾನ್, ಬೆಲೆ: 147 ಯೆನ್. 500ml ಪ್ಲಾಸ್ಟಿಕ್ ಬಾಟಲಿಗಳಲ್ಲಿಯೂ ದೊರಕುವಂತೆ ಮಾಡಲಾಯಿತು. ಇಂಗ್ಲಿಷಿನಲ್ಲಿ ಶಿಸೋ ಅಂದರೆ "ಲ್ಯಾಬೈಯೇಟ್" ಅಥವಾ "ಪೆರಿಲ್ಲಾ".
  • ಪೆಪ್ಸಿ NEX : ಶೂನ್ಯ ಕ್ಯಾಲೋರಿಗಳು. ಸಂಟರಿಯಿಂದ ಹಂಚಿಕೆಯಾದದ್ದು.
  • ಪೆಪ್ಸಿ ಬ್ಲೂ : ನೀಲಿ-ಬಣ್ಣದ ಬೆರ್ರಿ-ಸೋಡ ರುಚಿಯದ್ದು. 2002–2004ರಲ್ಲಿ U.S.ನಲ್ಲಿ ದೊರಕುತ್ತದೆ; ಉಳಿದವುಗಳು ಬೇರೆ ದೇಶದಲ್ಲಿ ದೊರಕುತ್ತದೆ.
  • ಪೆಪ್ಸಿ ಬ್ಲೂ ಹವಾಯೀ : ನೀಲಿ-ಬಣ್ಣದ, ಅನನಾಸು ಮತ್ತು ನಿಂಬೆ ಸವಿಯದು. ಜಪಾನಿನಲ್ಲಿ ಬಿಡುಗಡೆಗೊಳ್ಳಲಾಯಿತು.
  • ಪೆಪ್ಸಿ ಕಾರ್ನಿವಲ್ : ಪೆಪ್ಸಿಯನ್ನು 2006 ಬೇಸಗೆಯಲ್ಲಿ ಸೀಮಿತ ಪರಿಚಯಿಸಲಾಯಿತು. ಆನಂತರ 2007ರಲ್ಲಿ U.S.ನಲ್ಲಿ ಪೆಪ್ಸಿ ಸಮ್ಮರ್ ಮಿಕ್ಸ್ ಬಿಡುಗಡೆಗೊಳಿಸಲಾಯಿತು.
  • ಪೆಪ್ಸಿ ಫೈರ್‌ : ಲವಂಗ ಸವಿಯ ಪೆಪ್ಸಿಯನ್ನು ಸೀಮಿತವಾಗಿ ಬಿಡುಗಡೆಗೊಳಿಸಲಾಯಿತು. ಗುವಾಮ್,ಸಾಯಿಪಾನ್,ಥೈಲ್ಯಾಂಡ್,ಮೆಕ್ಸಿಕೋ,ಮಲ್ಲಷಿಯಾ,ಸಿಂಗಾಪೊರ್ ಮತ್ತು ದಿ ಫಿಲ್ಲಿಪೀನ್ಸ್‌ನಲ್ಲಿ ಮಾರಲಾಯಿತು.
  • ಪೆಪ್ಸಿ ಗೋಲ್ಡ್ : 2006 FIFA ವಿಶ್ವ ಕಪ್ ಮತ್ತು ICC ಕ್ರಿಕೆಟ್ ವಿಶ್ವ ಕಪ್ 2007 ಪ್ರೋತ್ಸಾಹಕವಾಗಿ ಚಿನ್ನದ ಬಣ್ಣದ, ಶುಂಠಿ ಸವಿ ವೈವಿಧ್ಯಗಳ ಪೆಪ್ಸಿಗಳು ಲಭ್ಯವಿದ್ದವು. ಆಗ್ನೇಯ ಏಶಿಯಾ, ಮಧ್ಯ ಯುರೋಪ್ ಮತ್ತು ರಷ್ಯಾದಲ್ಲಿ ಮಾರಲಾಯಿತು.
  • ಪೆಪ್ಸಿ ಗ್ರೀನ್ :2009ರ ಆರಂಭದಲ್ಲಿ ಬ್ರೈಟ್-ಗ್ರೀನ್ ವೈವಿಧ್ಯದ ಪೆಪ್ಸಿಯನ್ನು ಥಾಯ್ ಲ್ಯಾಂಡ್‌ನಲ್ಲಿ ಪರಿಚಯಿಸಲಾಯಿತು.
  • ಪೆಪ್ಸಿ ಹಾಲಿಡೇ ಸ್ಪೈಸ್ : ಋತು ಯೋಗ್ಯ, ಲವಂಗ ಸವಿಯ ವೈವಿಧ್ಯದ ಪೆಪ್ಸಿಯು 2004 ಮತ್ತು 2006ರಲ್ಲಿ U.S.ಮತ್ತು ಕೆನಡಾದಲ್ಲಿ ಲಭ್ಯವಿತ್ತು.
  • ಕ್ರಿಸ್‌ಮಸ್ ಪೆಪ್ಸಿ : ಇದು ಹಾಲಿಡೆ ಸ್ಪೈಸ್‌ಅನ್ನು ಹೋಲುತ್ತದೆ. ಇದರಲ್ಲಿ ಜಾಯಿಕಾಯಿ ಮತ್ತು ಕೊಕೊವನ್ನು ಸೇರಿಸಲಾಗಿದೆ. 2007–2008 ರಜೆಯ ಕಾಲದಲ್ಲಿ ಲಭ್ಯವಿತ್ತು.
  • ಪೆಪ್ಸಿ ಐಸ್ : ಪುದೀನಾ ರುಚಿಯ ತಣ್ಣಗಿದ್ದು. ಗುವಾಮ್,ಥೈಲ್ಯಾಂಡ್,ಮಲೇಷಿಯಾ,ಸಿಂಗಾಪುರ್ ಮತ್ತು ದಿ ಫಿಲ್ಲಿಪೀನ್ಸ್‌ನಲ್ಲಿ ಮಾರಲಾಯಿತು. 2007ರ ಬೇಸಗೆಯಲ್ಲಿ, ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಸೇಬಿನ ಸವಿಯಿದ್ದ ಸೀಮಿತ ಕೋಲಾಗಳಿಗೆ ಪೆಪ್ಸಿ ಐಸ್ ಎನ್ನುವ ಹೆಸರನ್ನು ಪೆಪ್ಸಿ ಬಳಸಿತು.
  • ಪೆಪ್ಸಿ ಐಸ್ ಕುಕ್ಕುಂಬರ್ : ಹಸಿರಾಗಿರುವ ಸೌತೆಕಾಯಿ ಸವಿಯ ಪೆಪ್ಸಿಯನ್ನು ಜಪಾನಿನಲ್ಲಿ 2007ರ ಬೇಸಗೆಯಲ್ಲಿ ಮಾರಲಾಯಿತು.
  • ಪೆಪ್ಸಿ ಜಾಜ್ : ಕಪ್ಪು ಚೆರ್ರಿಯ ಜಾಜ್ ಮತ್ತು ಫ್ರೆಂಚ್ ವೆನ್ನಿಲಾ,ಸ್ಟ್ರಾಬೆರ್ರಿ ಮತ್ತು ಕ್ರೀಂ ಇರುವ ಜಾಜ್, ಮತ್ತು ಕಾರಾಮಲ್ ಕ್ರೀಂ ಅನ್ನು 2006ರಲ್ಲಿ ತಯಾರಿಸಲಾಯಿತು.
  • ಪೆಪ್ಸಿ ಕೋನ , ಕಾಫಿ ಸವಿಯ ಪೆಪ್ಸಿಯನ್ನು U.S.ನ ಪೂರ್ವ ಕರಾವಳಿಯಲ್ಲಿ ಪರೀಕ್ಷಾರ್ಥವಾಗಿ ಮಾರಲಾಯಿತು.
  • ಪೆಪ್ಸಿ ಕಿಕ್ , ಔಷಧೀಯ ಸಸ್ಯದೊಂದಿಗೆ, ಕ್ರಮಬದ್ಧ ಪಾಕ ಸೂತ್ರ. ಇತ್ತೀಚಿನ ಪೆಪ್ಸಿ ಲೋಗೊವನ್ನು ಬಳಸುತ್ತದೆ. ಮೆಕ್ಸಿಕೋದಲ್ಲಿ ಮಾತ್ರ ಮಾರಲಾಗಿದೆ.
  • ಲಿಂಬು ಪೆಪ್ಸಿ : ನಿಂಬೆ ಸವಿಯ, 2008 NFL ಸೀಸನ್‌ನ ಆರಂಭದ ಕಾಲದಲ್ಲಿ ಉತ್ತೇಜಕವಾಗಿ ಲಭ್ಯವಾಗಿತ್ತು.
  • ಪೆಪ್ಸಿ ಲೈಮ್ : ನಿಂಬೆ ಸವಿಯ ಪೆಪ್ಸಿಯನ್ನು 2005ರ ವಸಂತ ಋತುವಿನಲ್ಲಿ ಪರಿಚಯಿಸಲಾಯಿತು.
  • ಪೆಪ್ಸಿ ಲಿಮನ್ : ನಿಂಬೆ ಸವಿಯ ಪೆಪ್ಸಿಯನ್ನು, 2002ರಲ್ಲಿ ಮೆಕ್ಸಿಕೋದಲ್ಲಿ ಬಿಡುಗಡೆ ಮಾಡಲಾಯಿತು. ಮಾರಾಟ ನಿಂತಿದ್ದರಿಂದ 2004ರಲ್ಲಿ ಪೆಪ್ಸಿ ಟ್ವಿಸ್ಟ್ ಎಂದು ಪುನಃ ಪರಿಚಯಿಸಲಾಯಿತು.
  • ಪೆಪ್ಸಿ ಆ-ಹಾ : ನಿಂಬೆ ಸವಿಯ ಪೆಪ್ಸಿಯನ್ನು ಸವಿಯ ಭಾರತದಲ್ಲಿ ಮಾರಲಾಯಿತು.
  • ಪೆಪ್ಸಿ ಒನ್ : ಒಂದು-ಕ್ಯಾಲೋರಿ ಪೆಪ್ಸಿ. 1997ರಲ್ಲಿ ಪರಿಚಯಿಸಲಾಯಿತು.
  • ಪೆಪ್ಸಿ ರಾಗಿಂಗ್ ರಾಸ್‌ಬೆರ್ರಿ : ರಾಸ್‌‌ಬೆರಿ ಹಣ್ಣಿನ ಸವಿಯಿರುವ ಪೆಪ್ಸಿ 1991ರಲ್ಲಿ ಲಭ್ಯವಾಯಿತು.
  • ಪೆಪ್ಸಿ ರಾ : ಇದು ಬ್ರಿಟಿಷರು ಪೆಪ್ಸಿ ನೈಸರ್ಗಿಕ ಕ್ಕೆ ಇಟ್ಟಿರುವ ಹೆಸರು.
  • ಪೆಪ್ಸಿ ರೆಡ್ : ಮಸಾಲಾ ಮತ್ತು ಶುಂಠಿ ಸವಿಯದ್ದು. 2006ರಲ್ಲಿ ಜಪಾನಿನಲ್ಲಿ ಬಿಡುಗಡೆ ಮಾಡಲಾಯಿತು.
  • ಪೆಪ್ಸಿ ರೆಟ್ರೋ : "ನೈಸರ್ಗಿಕ" ಮಿಶ್ರಣ (ಕಬ್ಬು ಮತ್ತು ಕೋಲಾ ನಟ್‌ಗಳ ಸತ್ವ. ಫೆಬ್ರವರಿ 2008ರಲ್ಲಿ ಮೆಕ್ಸಿಕೋದಲ್ಲಿ ಬಿಡುಗಡೆ ಮಾಡಲಾಯಿತು, ಪೆಪ್ಸಿ ನ್ಯಾಚುರಲ್ ಎಂದು ಆಗಸ್ಟ್ 2009ರಲ್ಲಿ ಮತ್ತೆ ಮಾರಾಟ ಆರಂಭಿಸಲಾಯಿತು.
  • ಪೆಪ್ಸಿ ಸಾಂಬಾ : ಟ್ರಾಪಿಕಲ್-ಸವಿಯದ್ದು (ಮಾವು ಮತ್ತು ಹುಣಸೆ). 2005ರಲ್ಲಿ ಆಸ್ಟ್ರೇಲಿಯಾದಲ್ಲಿ ಪರಿಚಯಿಸಲಾಯಿತು.
  • ಪೆಪ್ಸಿ ಸೈ : ಲ್ಯಾಟಿನ್ ಅಮೆರಿಕಾದವರು ಅಥವಾ ಸ್ಪೇನ್ ಭಾಷೆ ಮಾತನಾಡುವ ಜನರು ಹೆಚ್ಚಾಗಿ ವಾಸಿಸುವ ಕ್ಷೇತ್ರಗಳಲ್ಲಿ ಮಾರಾಟ ಮಾಡಲಾಯಿತು.
  • ಪೆಪ್ಸಿ ಸ್ಟ್ರಾಬೆರ್ರಿ ಬರ್ಸ್ಟ್
  • ಪೆಪ್ಸಿ ಸಮ್ಮರ್ ಚಿಲ್ : ಸೇಬಿನ ಸವಿಯದ್ದು, 2007ರ ಬೇಸಗೆಯಲ್ಲಿ ಪೋಲ್ಯಾಂಡಿನಲ್ಲಿ ಮಾರಾಟ ಮಾಡಲಾಯಿತು. ಪೆಪ್ಸಿ ಐಸ್ ಎಂದು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಮಾರುಕಟ್ಟೆ ಮಾಡಲಾಯಿತು.
  • ಪೆಪ್ಸಿ ಸಮರ್ ಮಿಕ್ಸ್ : ಉಷ್ಣವಲಯದ ಹಣ್ಣುಗಳ ಸವಿಯುಳ್ಳ ಪೆಪ್ಸಿ. 2007ರಲ್ಲಿ ಸೀಮಿತ ಸ್ಥಳಗಳಲ್ಲಿ ಲಭ್ಯ.
  • ಪೆಪ್ಸಿ ಥ್ರೋಬ್ಯಾಕ್ : ಹೆಚ್ಚು ಸಕ್ಕರೆ ಕಾರ್ನ್ ಸಿರಪ್‌ಗಿಂತ ಮತ್ತು ರೆಟ್ರೋ ಶೈಲಿಯ ಪ್ಯಾಕ್‌ಗಳಿಗಿಂತ ಸಕ್ಕರೆಯಿಂದ ಸಿಹಿ ಸ್ವಾದ ಕೊಡಲಾಗಿದೆ.
  • ಪೆಪ್ಸಿ ಟ್ರಾಪಿಕಲ್ ಚಿಲ್
  • ಪೆಪ್ಸಿ ಟ್ರಾಪಿಕಲ್ : ಟ್ರಾಪಿಕಲ್ ಸವಿಯದ್ದು, U.S., U.K. ಮತ್ತು ಜಪಾನ್‌ನಲ್ಲಿ 1994ರ ನಂತರ ಲಭ್ಯವಿತ್ತು.
  • ಪೆಪ್ಸಿ ಟ್ವಿಸ್ಟ್ : ನಿಂಬೆ ಸವಿಯದ್ದು.
  • ಪೆಪ್ಸಿ ಟ್ವಿಸ್ಟ್ ಮೊಜಿಟೋ : ಮೊಜಿಟೋ ಮತ್ತು ನಿಂಬೆ ಸವಿಯದ್ದು. ಆಲ್ಕೋಹಾಲಿಕ್ ರಹಿತವಾದದ್ದು. ಇಟೆಲಿಯಲ್ಲಿ ಮಾರಲಾಯಿತು.
  • ಪೆಪ್ಸಿ ಟ್ವಿಸ್ಟಾವೊ : ಬಲವಾದ ನಿಂಬೆಯ ಸ್ವಾದ, ಬೇಸ���ೆಯಲ್ಲಿ ಬ್ರೆಜಿಲ್‌ನಲ್ಲಿ ಮಾರಲಾಯಿತು. ಪೋರ್ಚುಗೀಸ್‌ನಲ್ಲಿ "ಟ್ವಿಸ್ಟಾವೋ" ಎನ್ನುವುದು "ಟ್ಟ್ವಿಸ್ಟ್‌"ನ್ನು ಅಧಿಕಗೊಳಿಸಿರುವುದು.
  • ಪೆಪ್ಸಿ ವೆನಿಲ್ಲಾ : ವೆನಿಲ್ಲಾ ಕೋಕ್‌‌ಗೆ ಪ್ರತಿಯಾಗಿ ವೆನಿಲ್ಲಾ ಸವಿಯನ್ನು 2003ರಲ್ಲಿ ಕೆನಡಾ ಮತ್ತು U.S.ನಲ್ಲಿ ಬಿಡುಗಡೆ ಮಾಡಲಾಯಿತು. ಪೆಪ್ಸಿ ಐಸ್ ಕ್ರೀಂ ಎಂದು ರಷ್ಯಾದಲ್ಲಿ ಮಾರಲಾಯಿತು.
  • ಪೆಪ್ಸಿ ವೈಟ್ : ಯಾಗರ್ಟ್ ಸವಿಯದ್ದು, ಜಪಾನಿನಲ್ಲಿ ಲಭ್ಯವಿದೆ.
  • ಪೆಪ್ಸಿ ವೈಲ್ಡ್ ಚೆರ್ರಿ : ಚೆರ್ರಿ ಸವಿಯದ್ದು, 1988ರಲ್ಲಿ "ವೈಲ್ಡ್ ಚೆರ್ರಿ ಪೆಪ್ಸಿ" ಎಂದು ಪರಿಚಯಿಸಲಾಯಿತು. 2005ರಲ್ಲಿ ಹೆಸರು ಮತ್ತು ಪಾಕ ಸೂತ್ರವನ್ನು ಬದಲಾಯಿಸಲಾಯಿತು. ಸೆಪ್ಟೆಂಬರ್ 2009ರ ಈ ಹೊತ್ತಿನಲ್ಲೂ 2003ರ ಹಳೇ ಪೆಪ್ಸಿ ವಿನ್ಯಾಸವನ್ನೇ ಬಳಸಲಾಗುತ್ತಿದೆ.
  • ಪೆಪ್ಸಿ X ಎನರ್ಜಿ ಕೋಲಾ : ಗ್ವಾರಾನಾ ಮತ್ತು ಕೆಫಿನ್ ಅಂಶ ಹೆಚ್ಚಿದೆ. ಕೆಂಪನೆಯ ಬಣ್ಣ. ಅನೇಕ ರಾಷ್ಟಗಳಲ್ಲಿ ಲಭ್ಯವಿದೆ.
  • ಪೆಪ್ಸಿ 100 : 1998ರ ಪಾನೀಯ ವಾರ್ಷಿಕೋತ್ಸವಕ್ಕಾಗಿ ಲಭ್ಯ ಮತ್ತು 2003ರಲ್ಲಿ "ಪೆಪ್ಸಿ" ಹೆಸರಿನ ವಾರ್ಷಿಕೋತ್ಸವಕ್ಕಾಗಿ ಲಭ್ಯ.
  • ಪೆಪ್ಸಿ ಕಿಕ್ : ಇದು ಪೆಪ್ಸಿ X ಎನರ್ಜಿ ಕೋಲಾದ ಅವಳಿ ಸಹೋದರ, ಈ ಪಾನೀಯಲ್ಲಿ ಹೆಚ್ಚಿನ ಮೊತ್ತದ ಕೆಫಿನ್ ಮತ್ತು ಔಷಧೀಯ ಗುಣ ಇರುತ್ತದೆ. 2009ರಿಂದೀಚೆಗೆ ಲಭ್ಯವಿರುತ್ತದೆ, ಗ್ವಾಟೇಮಾಲಾದ ಉದ್ಘಾಟನಾ ಸಂದರ್ಭದಲ್ಲಿ ಈ ಪೆಪ್ಸಿ ಕಿಕ್ ಅನ್ನು ಲ್ಯಾಟಿನ್ ಅಮೆರಿಕಾದಲ್ಲಿ ಪ್ರಾರಂಭಿಸಲಾಯಿತು.

ಘಟಕಾಂಶಗಳು

[ಬದಲಾಯಿಸಿ]

ಕಾರ್ಬನೇಟು ನೀರು, ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್, ಕ್ಯಾರೆಮಲ್ ಬಣ್ಣ, ಸಕ್ಕರೆ, ರಂಜಕಾಮ್ಲ,ಕೆಫಿನ್, ಸಿಟ್ರಿಕ್ ಆಮ್ಲ ಮತ್ತು ನೈಸರ್ಗಿಕ ಸವಿಗಳಿಂದ ಪೆಪ್ಸಿ ಪಾನೀಯವನ್ನು ತಯಾರಿಸಲಾಗುತ್ತದೆ. ಒಂದು ಕ್ಯಾನ್ ಪೆಪ್ಸಿಯು (12 fl ಔನ್ಸ್‌‌) 41 ಗ್ರಾಂ ಕಾರ್ಬೋಹೈಡ್ರೇಟ್ಸ್‌ಗಳು(ಎಲ್ಲವೂ ಸಕ್ಕರೆಯಿಂದ), 30 mg ಸೋಡಿಯಂ,0 ಗ್ರಾಂ ಕೊಬ್ಬಿನಾಂಶ,0 ಗ್ರಾಮಿನಷ್ಟು ಪ್ರೋಟೀನ್,38 mg ಕೆಫಿನ್ ಮತ್ತು 150 ಕ್ಯಾಲೋರೀಸ್‌ಗಳನ್ನು ಹೊಂದಿರುತ್ತದೆ.[೨೮][೨೯] ಕೆಫಿನ್ ರಹಿತ ಪೆಪ್ಸಿ-ಕೋಲಾದಲ್ಲಿ ಇತರೆಲ್ಲಾ ಪದಾರ್ಥಗಳಿದ್ದರೂ ಕೆಫಿನ್ ಮಾತ್ರ ಇರುವುದಿಲ್ಲ. 1929ರಲ್ಲಿ ಪೆಪ್ಸಿ-ಕೋಲಾ ಕಂಪೆನಿಯು ದಿವಾಳಿ ಎದ್ದಾಗ ನ್ಯಾಯಾಲಯಕ್ಕೆ ಒದಗಿಸಿದ ದಾಖಲೆಗಳಲ್ಲಿ ಅದರ ಮ‌ೂಲ ಪಾಕ ಸೂತ್ರವು ಲಭ್ಯವಾಯಿತು. ಮ‌ೂಲ ಪಾಕ ಸೂತ್ರದಲ್ಲಿ ಕೋಲಾ ಆಗಲಿ ಕೆಫಿನ್ ಆಗಲಿ ಇರಲಿಲ್ಲ.

ಪ್ರತಿಸ್ಪರ್ಧಿಗಳು

[ಬದಲಾಯಿಸಿ]

ಇದನ್ನೂ ನೋಡಿರಿ

[ಬದಲಾಯಿಸಿ]

ಸ್ಕಾಚ್ ವಿಸ್ಕಿ(ಒಗರು ರುಚಿಯ ವಿಸ್ಕಿ ಮದ್ಯ)

ಟಿಪ್ಪಣಿಗಳು

[ಬದಲಾಯಿಸಿ]
  1. "ಬ್ರಾಡ್ಸ್ ಡ್ರಿಂಕ್", ಎಂಬುದು "ಪೆಪ್ಸಿ ಕೋಲಾ" Archived 2014-03-01 ವೇಬ್ಯಾಕ್ ಮೆಷಿನ್ ನಲ್ಲಿ. ಆಗುತ್ತದೆ.
  2. "ಪೆಪ್ಸಿ-ಕೋಲಾದ ಜನ್ಮಸ್ಥಳದ ಇತಿಹಾಸ". Archived from the original on 2018-10-04. Retrieved 2009-12-22.
  3. "Pepsi - FAQs". PepsiCo. Archived from the original on 10 ಫೆಬ್ರವರಿ 2012. Retrieved 12 October 2009. 1909: Automobile racing pioneer Barney Oldfield becomes the first celebrity to endorse Pepsi when he appears in newspaper ads describing Pepsi: "A bully drink…refreshing, invigorating, a fine bracer before a race." The theme "Delicious and Healthful" appears and will be used intermittently over the next two decades.
  4. "ಪೆಪ್ಸಿ-ಕೋಲಾದ ಇತಿಹಾಸ" Archived 2008-02-12 ವೇಬ್ಯಾಕ್ ಮೆಷಿನ್ ನಲ್ಲಿ.,sodamuseum.bigstep.com ಪ್ಯಾರಾ 8
  5. "1939 ರೇಡಿಯೋ ವಾಣಿಜ್ಯ ಜಾಹೀರಾತು(ಟ್ವೈಸ್ ಆಸ್ ಮಚ್ ಫಾರ್ ಎ ನಿಕ್ಕಲ್)". Archived from the original on 2007-06-15. Retrieved 2021-09-22.
  6. ಜೋನ್ಸ್, ಎಲ್ಲಿಯಾನೋರ್ ಮತ್ತು ರಿತ್ಸ್‌ಮನ್, ಫ್ಲೋರಿಯನ್. "ಕೋಕಾ-ಕೋಲಾ ಆಟ್ ಹೋಂ" Archived 2021-06-15 ವೇಬ್ಯಾಕ್ ಮೆಷಿನ್ ನಲ್ಲಿ.. June 17, 2006ರಲ್ಲಿ ಮರು ಸಂಪಾದಿತ
  7. ೭.೦ ೭.೧ ೭.೨ ೭.೩ Martin, Douglas (May 6, 2007). obituaries &oref= slogin "Edward F. Boyd Dies at 92; Marketed Pepsi to Blacks". ದ ನ್ಯೂ ಯಾರ್ಕ್ ಟೈಮ್ಸ್. Retrieved 2007-05-05. {{cite news}}: Check |url= value (help)
  8. ೮.೦ ೮.೧ Archer, Michelle (January 22, 2007). "Pepsi's challenge in 1940s: Color barrier". USA Today. {{cite news}}: |access-date= requires |url= (help); Unknown parameter |sandy url= ignored (help)
  9. ೯.೦ ೯.೧ ೯.೨ Stewart, Jocelyn Y (May 5, 2007). "Edward Boyd, 92; Pepsi ad man broke color barriers". Los Angeles Times. Retrieved 2007-05-05.
  10. Tavis, Smiley (February 27, 2007). "Edward Boyd". PBS. Archived from [http: //www.pbs.org/kcet/tavissmiley/archive/200702/20070227_boyd.html the original] (interview) on 2007-09-29. Retrieved 2007-05-04. {{cite web}}: Check |url= value (help)
  11. SODAmuseum.com "ದಿ ಹಿಸ್ಟರಿ ಆಫ್ ಪೆಪ್ಸಿ-ಕೋಲಾ" Archived 2008-02-12 ವೇಬ್ಯಾಕ್ ಮೆಷಿನ್ ನಲ್ಲಿ., sodamuseum.bigstep.com ,ಪ್ಯಾರಾ 31
  12. ಪೆಪ್ಸಿಕೋ-ಕಂಪೆನಿ- ಗೌರವ (2002), ಪ್ರೋಮೋ ಮ್ಯಾಗಜೀನ್,2002.
  13. "ಪೆಪ್ಸಿ ಕ್ಯಾನ್ ಛಾಯಾಂಕಣ". Archived from the original on 2007-02-06. Retrieved 2009-12-22.
  14. {1Business2Press.com"$1B ರಷ್ಯಾ $1B ಬಂಡವಾಳ ಹೂಡಿಕೆಯನ್ನು ಪೆಪ್ಸಿ ಘೋಷಿಸಿತು."{/1}
  15. Vescovi, Valentina (July 15, 2009). "In Argentina, Pepsi Becomes 'Pecsi'". AdAge.com.
  16. "ವಿಶೇಷ ಸಂಚಿಕೆ: ಟಾಪ್-10 ಸಿಎಸ್‌ಡಿ 2008ರ ಫಲಿತಾಂಶಗಳು" Archived 2009-04-19 ವೇಬ್ಯಾಕ್ ಮೆಷಿನ್ ನಲ್ಲಿ., ಬಿವರೇಜ್ ಡೈಜೆಸ್ಟ್,ಮಾರ್ಚ್30, 2009 (ಪಿಡಿಎಫ್)
  17. "ಆರ್ಕೈವ್ ನಕಲು". Archived from the original on 2011-11-27. Retrieved 2009-12-22.
  18. " ವೈವಾ ಲಾ ಡಿಫರೆನ್ಸ್. 'ಹಾಗಾದೆ ನನಗೊಂದು ಪ್ರತ್ಯೇಖ ಪ್ರಚಾರವಿದೆ ಎಂದು ಅರ್ಥವೇ?" Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.,ಸ್ಟ್ರಾಟಜಿ ಮ್ಯಾಗಜೀನ್ , ಅಕ್ಟೋಬರ್ 2004
  19. "The Pepsi 'Meunier' Campaign" (PDF). Canadian Advertising Success Stories (Cassies) Case Library. Archived from the original (PDF) on 2007-09-26. Retrieved 2007-08-21.
  20. "ಭಾರತ:ಸಾಫ್ಟ್ ಡ್ರಿಂಕ್ಸ್,ಹಾರ್ಡ್ ಕೇಸಸ್" Archived 2006-02-03 ವೇಬ್ಯಾಕ್ ಮೆಷಿನ್ ನಲ್ಲಿ., ದಿ ವಾಟರ್ ಡೋಸಿಯರ್ , ಮಾರ್ಚ್ 14, 2005
  21. "ಫಿಜ್ಜಿಕಲ್ ಫ್ಯಾಕ್ಟ್ಸ್: ಕೋಕ್ ಕ್ಲೇಮ್ಸ್ 60% ಮಾರ್ಕೆಟ್ ಷೇರ್ ಇನ್ ಭಾರತ", ಟೈಂಸ್ ನ್ಯೂಸ್ ನೆಟ್‌ವರ್ಕ್ ,ಆಗಸ್ಟ್ 5, 2005
  22. Robert Laing (2006-03-28). "Pepsi's comeback, Part II". Mail & Guardian online. Retrieved 2007-07-21. {{cite web}}: External link in |publisher= (help)
  23. "ಫ್ರೀ-ಎಸ್ಸೇಸ್.ಯುಎಸ್ - ಕೋಕ್ Vs.ಪೆಪ್ಸಿ". Archived from the original on 2006-01-03. Retrieved 2009-12-22.
  24. "PepsiCo Company History (1972)". PepsiCo, Inc. Retrieved 2007-07-21.
  25. ಹಾರ್ವರ್ಡ್ ವಿಶ್ವವಿದ್ಯಾನಿಲಯದಿ ಲಾ ಸ್ಕೂಲ್ ಗ್ರಂಥಾಲ ಯದ ಪ್ರದರ್ಶಿತವೊಂದರಲ್ಲಿ, ಡಿಸೆಂಬರ್ 1990ರಿಂದ ಫೆಬ್ರವರಿ 1991ರವರೆಗೂ ಶಬ್ದ ಮೊದಲು ಕಾಣಿಸಿಕೊಂಡಿತು, ಆನಂತರ ಮಾನವ ಶಾಸ್ತ್ರಜ್ಞ, ಡೇವಿಡ್ ಲೆಂಪರ್ಟ್ ಅವರ ಅನೇಕ ಲೇಖನಗಳಲ್ಲಿ ಮತ್ತು ಪುಸ್ತಕಗಳಲ್ಲಿ ಇದನ್ನು ಅಭಿವ್ಯಕ್ತಗೊಳಿಸಲಾಗಿದೆ.
    • ಅತ್ಯಂತ ಗಮನಾರ್ಹವೆಂದರೆ ಮ‌ೂರನೆ ಪುಸ್ತಕದ ಎರಡು ಸಂಪುಟದ ಸೆಟ್‌ನ,"ಪೆಪ್ಸಿ-ಸ್ಟ್ರೋಯ್ಕ" ಇನ್ ಡೈಲಿ ಲೈಫ್ ಇನ್ ಎ ಕ್ರಂಬ್ಲಿಂಗ್ ಎಂಪೈರ್: ದಿ ಅಬ್ಸಾರ್ಪ್ಶನ್ ಆಫ್ ರಶಿಯಾ ಇನ್‌ಟು ದಿ ವರ್ಳ್ಡ್ ಎಕಾನಮಿ, ಕೊಲಂಬಿಯಾ ಯುನಿವರ್ಸಿಟಿ ಪ್ರೆಸ್/ಈಸ್ಟರ್ನ್ ಯೂರೋಪಿಯನ್ ಮೊನೋಗ್ರಾಫ್ಸ್,1996.
  26. "ಕೋಕ್ ವರ್ಸಸ್ ಪೆಪ್ಸಿ,ಸ್ಯಾಂಟಾ ವರ್ಸಸ್ ಮೊರೊಜ್", ದಿ ಮಾಸ್ಕೋ ಟೈಮ್ಸ್ , ಡಿಸೆಂಬರ್ 30,2005.
  27. ಇಸ್ರೇಲ್ ಬ್ರೇಸಸ್ ಫಾರ್ ನ್ಯೂ ಕಾನ್‌ಫ್ಲಿಕ್ಟ್:ದಿ ಸೋಡಾ ವಾರ್;ಚಿಕಾಗೋ ಟ್ರಿಬ್ಯೂನ್, ಮೇ 19,1992.
  28. http://www.thedailyplate.com/nutrition-calories/food/pepsi/12-oz-can Archived 2008-04-08 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಡೈಲಿ ಪ್ಲೇಟ್,ಪೆಪ್ಸಿ ಪೌಷ್ಠಿಕ ಮಾಹಿತಿ.
  29. http://www.pepsiproductfacts.com/infobyproduct.php Archived 2009-05-26 ವೇಬ್ಯಾಕ್ ಮೆಷಿನ್ ನಲ್ಲಿ. ಪೆಪ್ಸಿ ಪ್ರಾಡಕ್ಟ್ ಫ್ಯಾಕ್ಟ್.


ಉಲ್ಲೇಖಗಳು

[ಬದಲಾಯಿಸಿ]
  • ಬೆವರೇಜ್ ವರ್ಲ್ಡ್ ಮ್ಯಾಗಜೀನ್ ,ಜನವರಿ 1998, "ಸೆಲಬ್ರೇಟಿಂಗ್ ಎ ಸೆಂಚ್ಯೂರಿ ಆಫ್ ರಿಫ್ರೆಶ್‌ಮೆಂಟ್:ಪೆಪ್ಸಿ-ದ ಫರ್ಸ್ಟ್ 100 ಇಯರ್ಸ್"
  • ಸ್ಟಾಡರ್ಡ್, ಬಾಬ್ ಪೆಪಿ-ಕೋಲಾ- 100 ವರ್ಷ (1997),ಜನರಲ್ ಪಬ್ಲಿಶಿಂಗ್ ಗ್ರೂಪ್, ಲಾಸ್ ಏಂಜಲೀಸ್, CA, USA
  • "ಹಿಸ್ಟರಿ ಮತ್ತು ಮೈಲ್‌ಸ್ಟೋನ್ಸ್ " (1996),ಪೆಪ್ಸಿ ಪ್ಯಾಕೆಟ್
  • ಲ್ಯೂಯಿಸ್, J.C.ಮತ್ತು ಯಾಸಿಜಿಯಾನ್,ಹಾರ್ವೇ Z."ದಿ ಕೋಲಾ ವಾರ್ಸ್" (1980),ಎವರೆಸ್ಟ್ ಹೌಸ್, ಪಬ್ಲಿಶರ್ಸ್,ನ್ಯೂಯಾರ್ಕ್, NY,USA

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಪೆಪ್ಸಿ&oldid=1233116" ಇಂದ ಪಡೆಯಲ್ಪಟ್ಟಿದೆ