ನಾಲತವಾಡದ ಶರಣ ವೀರೇಶ್ವರರು
ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೂಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವತೆ, ಸಹಕಾರ, ಜಾತಿ ಭೇದ ಭಾವಗಳನ್ನು ತೊಲಗಿಸಿ ಪ್ರಾಣಿ ಬಲಿಗೆ ಕಡಿವಾಣ ಹಾಕುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದ ನಾಲತವಾಡದ ಶರಣ ವೀರೇಶ್ವರರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸಿದವರು.
ಬಾಲ್ಯ
[ಬದಲಾಯಿಸಿ]ಕಂಠಿಮಠದ ದೊಡ್ಡಾರ್ಯ ಹಾಗೂ ರುದ್ರಾಂಬೆ ತಾಯಿಯವರ ಉದರಲ್ಲಿ 1848ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಜನಿಸಿದರು. ಪಟ್ಟಣದ ಹಿರೇಮಠದ ರಾಮಗಿರಿ ನಾಥರನ್ನು ವೀರೇಶ್ವರ���ು ಗುರುವಾಗಿ ಸ್ವೀಕರಿಸಿ, ಚಿಕ್ಕಂದಿನಿಂದಲೇ ಮನೆ ಸಂಸ್ಕಾರದಂತೆ ಗುರುಸೇವೆ ಲಿಂಗಪೂಜೆ ಜಂಗಮ ಪೂಜೆಯೊಂದಿಗೆ ಅಂದಿನ ಮುಲ್ಕಿ ಪರೀಕ್ಷೆ ಪಾಸಾದರು. ನಂತರ ಪಕ್ಕದ ಸಿದ್ದಾಪುರ ಗ್ರಾಮದ ಗಾಂವಠಿ ಶಾಲೆಯಲ್ಲಿ ದುಡಿಯುತ್ತ ಬಿದರಕುಂದಿಯ ಗುರುದೇವಿ ತಾಯಿಯವರನ್ನು ಮದುವೆಯಾದರು. ನಂತರ ವೃತ್ತಿ ಬಿಟ್ಟ ಶರಣರು, ಭಿಕ್ಷಾಟನೆ ಮೂಲಕ ದಿನಕ್ಕೆ 5 ಮನೆಗಳಿಗೆ ಹೋಗಿ ಭಿಕ್ಷೆ ಮಾಡುವ ಕಾಯಕ ಶುರು ಮಾಡಿ, ಬೇಕು ಬೇಡ ಎಂಬಂತೆ ಜಂಗಮಗೆ ಬದುಕು ನಡೆಸಿದರು. ಬದುಕಿನಲ್ಲಿ ಹೆಚ್ಚಿದ ಸಂಕಷ್ಟಗಳಿಗೆ ನೊಂದ ಶರಣರು, ಸಂಸಾರದ ಸುಗಮಕ್ಕೆ ನೇಗಿಲು ಹಿಡಿದರು.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಪವಾಡ
[ಬದಲಾಯಿಸಿ]ಸಂಸಾರದ ನಡೆಸುತ್ತಲೇ ಗ್ರಾಮದಲ್ಲಿ ಪ್ಲೇಗ್ ರೋಗ ಹರಡಿದ್ದ ವೇಳೆ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವತೆಗೆ ಕೋಣ ಬಲಿಗೆ ಮುಂದಾಗಿದ್ದರು. ಇದನ್ನರಿತ ಶರಣ ವೀರೇಶ್ವರರು, ಕೋಣ ಬಲಿ ತಡೆಗೆ ಯತ್ನಿಸಿದರು. ಆದರೆ ಅದು ಫಲ ನೀಡದ ಕಾರಣ ಮನನೊಂದು ಪತ್ನಿಯೊಂದಿಗೆ ಗ್ರಾಮವನ್ನು ತೊರೆದು ಸೊಲ್ಲಾಪುರಕ್ಕೆ ಹೋದರು. ಅಲ್ಲಿಯೂ ಸಹ ಜನರಿಂದ ಅನೇಕ ಬಾರಿ ಹೊಡೆತಗಳಿಂದ ಸಂಕಷ್ಟಕ್ಕಿಡಾದರು. ಅಪಮಾನ ನಿಂದನೆಗೆ ಒಳಗಾದ ಇವರು ಅಲ್ಲಿಯ ವಾರದ ಮಲ್ಲಪ್ಪ ಎಂಬುವರಿಗೆ ಸಂತಾನ ಭಾಗ್ಯ ನೀಡುವುದರ ಮೂಲಕ ಪವಾಡ ಮಾಡಿದರು.
ಲಿಂಗೈಕ್ಯ
[ಬದಲಾಯಿಸಿ]ನಂತರ ಕೊಡೆಕಲ್ ಗ್ರಾಮದ ಶಿವಯೋಗಿಗಳ ಅಪ್ಪಣೆಯಂತೆ ಪತ್ನಿ ಸಂಗ ತೊರೆದು ಪರಮಾರ್ಥ ಜೀವನ ಪ್ರಾರಂಭಿಸಿದರು. ಇಡೀ ಜೀವನವನ್ನೇ ಸಮಾಜದ ತಿದ್ದುಪಡಿಗಾಗಿ, ಮೂಢನಂಬಿಕೆ ತಡೆಯುವಲ್ಲಿ ನಿರತರಾದ ಶರಣರು 1920ರಲ್ಲಿ ದೇಹ ತೊರೆಯುವ ಮುನ್ನ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನಕ್ಕೆ ಆಸೆ ಹೊಂದಿದರು. ವಿಷಯ ತಿಳಿದ ಹಾನಗಲ್ ಶ್ರೀಗಳು ಎಂದೂ ವಾಹನಗಳಲ್ಲಿ ಪ್ರಯಾಣ ಮಾಡದ ಅವರು ವೀರೇಶ್ವರರನ್ನು ಕಾಣಲು ರೈಲ್ವೆ ಮೂಲಕ ಬಂದು ವೀರೇಶ್ವರರನ್ನು ಕಂಡರು. ನಂತರ 72 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿದ ವೀರೇಶ್ವರ ಶರಣರು ಇಂದಿಗೂ ಸಹ ಹೊರ ರಾಜ್ಯ ಮಹಾರಷ್ಟ್ರದಲ್ಲೂ ಸಹ ಅಲ್ಲಿನ ಜನರು ಇವರನ್ನು ಆರಾಧಿಸುತ್ತಿದ್ದಾರೆ.
ಮಹಾಮನೆ
[ಬದಲಾಯಿಸಿ]ಪಟ್ಟಣದಲ್ಲಿರುವ ಶರಣ ದಂಪತಿಗಳ ದೇವಸ್ಥಾನವನ್ನು ಹಿರಿಯರ ಸಹಾಯದಿಂದ ಹಾಗೂ ವೀರೇಶ್ವರರ ಮಹಾಮನೆಯನ್ನು ಅದ್ಭುತ ರೀತಿಯಲ್ಲಿ ನಿರ್ಮಿಸಲಾಗಿದೆ. ಶರಣರ ದೇವಸ್ಥಾನದ ಗೋಪುರವು ಅನುಭವ ಮಂಟಪದಲ್ಲಿ 120ಕ್ಕೂ ಹೆಚ್ಚು ಶರಣರ ಮೂರ್ತಿಗಳನ್ನು ಕೆತ್ತಲಾಗಿದೆ. ವಿವಿಧ ದಾರ್ಶನಿಕ ಶರಣ ಮೂರ್ತಿಗಳಿಂದ ನಿರ್ಮಾಣಗೊಂಡ ಮಹಾಮನೆ ನೋಡಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿರವುದಕ್ಕೆ ನಿಜಕ್ಕೂ ಶರಣರ 40 ಪವಾಡಗಳೇ ಕಾರಣ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಂದಿನ ಲಿಲಾವತಿ ಪಟ್ಟಣ ಎಂದು ಕರೆಸಿಕೊಂಡ ಗ್ರಾಮವು ವೀರೇಶ್ವರರ ಸುಮಾರು 40 ಪವಾಡಗಳಿಂದ ನಲವತ್ತವಾಡ ಎಂದು ಕರೆಸಿಕೊಂಡಿತು.[೧]
ಉಲ್ಲೇಕಗಳು
[ಬದಲಾಯಿಸಿ]