ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ) , ಭಾರತೀಯ ಜನತಾ ಪಕ್ಷ (ಬಿಜೆಪಿ), ಜನತಾ ದಳ (ಸೆಕ್ಯುಲರ್) (ಜೆಡಿ (ಎಸ್)), ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮತ್ತು ಬಿ ಶ್ರೀರಾಮುಲುಅವರ, 'ಬಡವರ ಶ್ರಮಿಕರ ರೈತರ ಕಾಂಗ್ರೆಸ್'(BSRCP). : ಈ ಐದು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಂಡವು. ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು. [2]
ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಬಹುಮತಕ್ಕೆ ಬೇಕಾದ 113. [1] [3] ಕ್ಕೂ ಹೆಚ್ಚಾಗಿ 9 ಹೆಚ್ಚು ಮತಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು. [4]5]
ಪರಿಷ್ಕೃತ : ಬಿಆರ್ ಎಸ್ ಕಾಂಗ್ರೆಸ್ಸ್ 4 ಸದಸ್ಯರು ; ಕರ್ನಾಟಕ ಮಕ್ಕಳ ಪಕ್ಷ 1; ಕರ್ನಾಟಕ ಪಕ್ಷ 1 ; ಸ್ಮಾಜವಾದಿ ಪಾರ್ಟಿ 1 ; ಪಕ್ಷೇತರು 9 ;
ಕಾಂ = 122 ; + ಬಿ ಜೆ ಪಿ =40; + ಜೆ ಡಿ (ಎಸ್)= 40; + ಕ ಜ ಪಾ = 6 ;+ ಇತರರು = 16 (17?) ; 224 (225 ?)
2014 ರ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ 21-8-2014ರಂದು ಚುನಾವಣೆ ನೆಡೆದು 25-8-2014ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟವಾಯಿತು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ವಿರುದ್ಧ 33,104ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಎನ್.ವೈ. ಗೋಪಾಲಕೃಷ್ಣ ಅವರು 83899 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರು 50795 ಮತ ಗಳಿಸಿದ್ದಾರೆ.ಶೇ. 73.31 ರಷ್ಟು ಮತದಾನವಾಗಿತ್ತು.(ಬಿಜೆಪಿಯ ಶ್ರೀರಾಮುಲು ಯಿಂದ ತೆರವಾದ ಸ್ಥಾನ)
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡ ವಿರುದ್ಧ 6430 ಮತಗಳ ಕಡಿಮೆ ಅಂತರದ ಪ್ರಯಾಸದ ಗೆಲುವು ಪಡೆದಿದ್ದಾರೆ.ಬಿ.ವೈರಾಘವೇಂದ್ರ ಅವರು 71547 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಚ್. ಎಸ್. ಶಾಂತವೀರಪ್ಪ ಗೌಡ ಅವರು 65117 ಮತಗಳಿಸಿದ್ದಾರೆಶೇ. 78.26 ರಷ್ಟು ಮತದಾನವಾಗಿತ್ತು. (ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನ)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು 31820 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಪ್ರಕಾಶ ಹುಕ್ಕೇರಿ ಅವರು 94636 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು 62816 ಮತ ಗಳಿಸಿದ್ದಾರೆ.ಶೇ. 85.5 ರಷ್ಟು ದಾಖಲೆಯ ಮತದಾನವಾಗಿತ್ತು. (ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಯಿಂದ ತೆರವಾದ ಸ್ಥಾನ)
6. ಕುರುಬ: -ಬಿ.ಬಿ.ಚಿಮ್ಮನ್ ಕತ್ತಿ ಕತ್ತಿ; ಎಚ್.ವೈ.ಮೇಟಿ; ಎಂಟಿವಿ ನಾಗರಾಜ್; ಸಿ ಎಸ್ ಶಿವಳ್ಳಿ;ಬೈರತಿ ಬಸವರಾಜ; ಕೆ.ರಾಘವೇಂದ್ರ ಹಿತ್ನಾಳ್; ಜಿ ಎಚ್ ಶ್ರೀನಿವಾಸ್; ಎಂ ಕೆ ಸೋಮಶೇಖರ್;
6 ಗಂಗಾ ಮತ: -. ಪ್ರಮೋದ ಮಧ್ವ ರಾಜ್; ಬಾಬುರಾವ್ ಚಿಂಚನನೂರ;
2016 ಫೆಬ್ರುವರಿ 13ರಂದು ರಾಜ್ಯದ ಹೆಬ್ಬಾಳ, ದೇವದುರ್ಗ. ಬೀದರ ಈ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ. ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಬೀದರ್ನಲ್ಲಿ ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. 2016 ಫೆಬ್ರುವರಿ 13ರಂದು ಉಪ ಚುನಾವಣೆ ನಡೆದಿದ್ದು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಂಗಳವಾರ 16-02-2016 ಮತ ಎಣಿಕೆ ನಡೆಯಿತು.
ಈ ಚುನಾವಣೆಯಿಂದ ಪಕ್ಷಗಳ ಬಲಾಬಲ ಬದಲಾಗಿಲ್ಲ.
ಮುಖ್ಯ ಅಭ್ಯರ್ಥೀಗಳು :
1.ಹೆಬ್ಬಾಳದಲ್ಲಿ ಕಾಂಗ್ರೆಸ್‌ನಿಂದ ರೆಹಮಾನ್ ಷರೀಫ್, ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್, ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ.
ಉಭಯ ಕ್ಷೇತ್ರಗಳಲ್ಲಿ ಮಾರ್ಚ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮಾರ್ಚ್ 21ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 22 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮಾರ್ಚ್ 24 ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಆಗಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪ ಚುನಾವಣೆ,ಮತದಾನ
ಉಭಯ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ.[೨]
2017 ಏಪ್ರಿಲ್ 9 ನಂಜನಗೂಡಿನಲ್ಲಿ ದಾಖಲೆಯ ಶೇ 77.56, ಗುಂಡ್ಲುಪೇಟೆಯಲ್ಲಿ ಶೇ 87.10ರಷ್ಟು ಮತ ಚಲಾವಣೆ ಆಗಿದೆ.[೩]
ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.[೪]
12 Feb, 2017;
೧.ನಂಜನಗೂಡಿನಿಂದ ಆರಿಸಲ್ಪಟ್ಟಿದ್ದ ಶ್ರೀನಿವಾಸ ಪ್ರಸಾದ್ ಕಾಂ,ಕಮದಾಯ ಸಚವರಾಗಿದ್ದವರು- ಮಂತ್ರಿಮಂಡಲ ಪನರ್ರಚನೆಯಲ್ಲ ಕೈಬಿಟ್ಟಿದ್ದರಿಂದ, ಪ್ಷಕ್ಕೂ ಶಾಸನಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರಿಂದ "ನಂಜನಗೂಡು ಕ್ಷೇತ್ರಕ್ಕೆ ಉಪಚುನಾವಣೆ:ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧೆ.
೨. ಎಚ್.ಎಸ್. ಮಹದೇವಪ್ರಸಾದ್ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಎಚ್.ಎಸ್. ಮಹದೇವಪ್ರಸಾದ್ ಅವರ ಪತ್ನಿ ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್) ಅವರೇ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
ಮಹದೇವಪ್ರಸಾದ್ ವಿರುದ್ಧ 2 ಬಾರಿ ಸ್ಪರ್ಧಿಸಿ ಸೋತಿರುವ ಸಿ.ಎಸ್. ನಿರಂಜನ್‌ಕುಮಾರ್ ಅವರೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.[೫]
ದಿ.೨೦ ಸೋಮವಾರ ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕಳಲೆ ಎನ್.ಕೇಶವಮೂರ್ತಿ ಹಾಗೂ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ವೇಗ ಪಡೆದಿದೆ. ಜೆಡಿಎಸ್ ಸ್ಪರ್ಧಿಸುತ್ತಿಲ್ಲ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಎಸ್.ಮಹದೇವಪ್ರಸಾದ್ ಪತ್ನಿ ಎಂ.ಸಿ.ಮೋಹನ್ ಕುಮಾರಿ (ಗೀತಾ ಮಹದೇವಪ್ರಸಾದ್), ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಸ್.ನಿರಂಜನ್ ಕುಮಾರ್ ನಾಮಪತ್ರ ಸಲ್ಲಿಸ��ದರು.
1952ರಲ್ಲಿ ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿ (ಎಚ್.ಡಿ.ಕೋಟೆ ಒಳಗೊಂಡಂತೆ) ಅಸ್ತಿತ್ವಕ್ಕೆ ಬಂದಿತು. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಜನತಾದಳ, ಜೆಡಿಯು, ಜೆಡಿಎಸ್ ತಲಾ ಒಂದು ಬಾರಿ ಗೆದ್ದಿವೆ. 4 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್ ಗೆದ್ದಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ.ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಬಲಗೈ’ ಸಮುದಾಯದವರು ಹೆಚ್ಚಿದ್ದಾರೆ.
ಎಚ್.ಎಸ್.ಮಹದೇವಪ್ರಸಾದ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನ್‌ಕುಮಾರಿ
2 ಬಾರಿ ಮಹದೇವಪ್ರಸಾದ್ ವಿರುದ್ಧವೇ ಸೋತಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್‌ಕುಮಾರ್
ಪ್ರಸ್ತುತ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಮಹದೇವಪ್ರಸಾದ್ ಅವರು 5 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.
ಒಟ್ಟು ಮತದಾರರು ಎರಡು ಲಕ್ಷ (2,00,862);ಪುರುಷರು ಒಂದು ಲಕ್ಷ (1,00,144); ಮಹಿಳೆಯರು ಒಂದು ಲಕ್ಷ (1,00,701); ತೃತೀಯರು-17 ;;ಮತಗಟ್ಟೆ 250[೬]
ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳಲೆ ಎನ್.ಕೇಶವಮೂರ್ತಿ ಅವರ ಬಳಿ ಪಾನ್ ಕಾರ್ಡ್ ಇಲ್ಲ. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಆದರೆ, ಇವರ ಬಳಿ ರೂ.34.31 ಲಕ್ಷ ಚರಾಸ್ತಿ ಹಾಗೂ ರೂ.90 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ವಿವಿಧ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ರೂ. 12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ.
ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ರೂ. 3.33 ಕೋಟಿ ಹಾಗೂ ಪತ್ನಿಯ ಬಳಿ ರೂ. 10.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪ್ರಸಾದ್ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ವೃತ್ತಿ ವ್ಯವಸಾಯವಾದರೆ, ಶ್ರೀನಿವಾಸಪ್ರಸಾದ್ ಅವರು ಅಡುಗೆ ಅನಿಲ ವಿತರಕರಾಗಿದ್ದಾರೆ.
ಮತದಾರರ ವಿವರ:
ಒಟ್ಟು ಮತದಾರರು: 2,01,818 ; ಪುರುಷರು : 1,01,930; ಮಹಿಳಯರು: 99,888; ತೃತೀಯ ಲಿಂಗಿಗಳು:08
ಆಭ್ಯರ್ಥಿಗಳು : ಒಟ್ಟು 11 ; ಒಟ್ಟು ಮತಗಟ್ಟೆ 236 ; ಸೂಕ್ಷ್ಮ 124 ; ಅತಿ ಸೂಕ್ಷ್ಮ 72;ಸಾಮಾನ್ಯ : 40;[೭]
ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್) - ಗೀತಾ ಅವರಿಗೆ 56 ವರ್ಷ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನೋವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪಡೆದಿದ್ದಾರೆ. 43 ವರ್ಷದ ನಿರಂಜನ್‌ಕುಮಾರ್ ಬಿ.ಕಾಂ ಪದವೀಧರ.
ಗೀತಾ ವೃತ್ತಿಯಲ್ಲಿ ಕೃಷಿಕರು. ಒಟ್ಟು ರೂ. 1.53 ಕೋಟಿ ಆಸ್ತಿ ಹೊಂದಿದ್ದಾರೆ. ನಿರಂಜನ್‌ಕುಮಾರ್ ವ್ಯವಸಾಯ ಮಾಡುತ್ತಿದ್ದು, ರೂ. 2.86 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.[೯]
೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2015 ಅಕ್ಟೋಬರ್ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಸಂಪುಟ ಸೇರಿದರು.
ಸಂಪುಟ ಸೇರಿದ ಪರಮೇಶ್ವರ ಅವರು 2013ರ ವಿಧಾನಸಭೆ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದ್ದರು. 2014ರ ಜುಲೈ 1ರಂದು ಪರಮೇಶ್ವರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಪರಮೇಶ್ವರ ಅವರು ಅಕ್ಟೋಬರ್ 29ರ ಗುರುವಾರ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅಂದೇ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು.ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆ ಕೊಡಲಾಗಿದೆ.
ದಿ.18/07/2016:ಸೋಮವಾರ:ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಜೆ.ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಾರ್ಜ್ ರಾಜೀನಾಮೆ ಪತ್ರ ಸಲ್ಲಿಸಿದರು.ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಕೆ.ಜೆ.ಜಾರ್ಜ್, ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಐಜಿಪಿ ಪ್ರಣವ್ ಮೊಹಾಂತಿ ಅವರು ಕಾರಣ ಎಂದು ಆರೋಪ ಮಾಡಿದ್ದರು.
ಜಾರ್ಜ್ ಬಳಿ ಇದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮು.ಮಂ.ಯವರೇ ಇಟ್ಟುಕೊಂಡಿದ್ದಾರೆ.
ಈ ಸಂಬಂಧ ಗಣಪತಿ ಅವರ ಪುತ್ರ ನೇಹಾಲ್ ದಾಖಲಿಸಿದ್ದ ಖಾಸಗಿ ದೂರನ್ನು ಸೋಮವಾರ ವಿಚಾರಣೆ ನಡೆಸಿದ ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ, ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಕಡ್ಡಾಯ ರಜೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸುಗಮ ತನಿಖೆಗೆ ರಾಜೀನಾಮೆ: ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ತನಿಖೆ ಸುಗಮವಾಗಿ ನಡೆಯಲು ರಾಜೀನಾಮೆ ನೀಡಿದ್ದೇನೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಕೆ. ಗಣಪತಿ, ಜುಲೈ 7 ರಂದು ಒಂದು ಲಾಡ್ಜ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಜಾರ್ಜ್ ಹಾಗೂ ಎರಡು ಐಪಿಎಸ್ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾಗಿ ಹೇಳಿದ್ದರು. ಇದರಿಂದ ಕಾಂಗ್ರೆಸ್ ಆಳ್ವಿಕೆ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಯಿತು.
ಸೆಪ್ಟೆಂಬರ್, 05,2016: ಗಣೇಶ ಹಬ್ಬದ ದಿನದಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ನೂತನ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣಪ್ಪ ಪ್ರಮಾಣ ವಚನ ತೆಗೆದುಕೊಂಡರು. ಎಂ. ಕೃಷ್ಣಪ್ಪ ಅವರನ್ನು ಒಕ್ಕಲಿಗ ಕೋಟಾದಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು ವಸತಿ ಖಾತೆಯ ಜವಾಬ್ದಾರಿ ವಹಿಸುವ ಸಾಧ್ಯತೆ ಹೆಚ್ಚಿದೆ
ಪಶು ಸಂಗೋಪನಾ ಖಾತೆ ಸಚಿವ ಅರಕಲಗೂಡು ಮಂಜು ಹಾಗೂ ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬಡ್ತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರಿಂದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಾಗಿ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಖಾಲಿ ಉಳಿದಿದ್ದವು. ಎರಡೂ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗದ ಸಿದ್ದರಾಮಯ್ಯ, ಒಂದನ್ನು ಖಾಲಿ ಉಳಿಸಿಕೊಂಡಿದ್ದಾರೆ.
ದಿ.26-9-2016ಸೋಮವಾರ ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜು.೧೮ ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.[೨೦]