ವಿಷಯಕ್ಕೆ ಹೋಗು

ಚಿತ್ಪಾವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ಪಾವನ/ಕೊಂಕಣಸ್ಥ ಬ್ರಾಹ್ಮಣರು
Classification ಬ್ರಾಹ್ಮಣ
Religions ಹಿಂದೂ
Languages ಮರಾಠಿ, Chitpavani (a dialect of Konkani)[]
Populated States ಮಹಾರಾಷ್ಟ್ರ, Konkan (Goa and coastal Karnataka); some parts of Madhya Pradesh, Gujarat

ಚಿತ್ಪಾವನ

[ಬದಲಾಯಿಸಿ]

ಚಿತ್ಪಾವನರು ಅಥವಾ ಕೋಕಣಸ್ಥರು ಎನ್ನುವುದು ಸ್ಮಾರ್ತ ಬ್ರಾಹ್ಮಣರ ಒಂದು ಸಮುದಾಯ. ಇವರು ಹೆಚ್ಚಾಗಿ ಪಶ್ಚಿಮ ಭಾರತದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ಚಿತ್ಪಾವನ ಸಮುದಾಯದ ಪೌರಾಣಿಕ ಮೂಲವನ್ನು ಸ್ಕಂದ ಪುರಾಣದ ಸಹ್ಯಾದ್ರಿಕಾ೦ಡದಲ್ಲಿ ಪರಶುರಾಮರ ಕಥೆಯನ್ನು ಉಲ್ಲೇಖಿಸುತ್ತಾ ವಿವರಿಸಲಾಗಿದೆ. ಇವರು ಶಾತವಾಹನರ ಕಾಲದಲ್ಲಿ ರೂಪಗೊ೦ಡ ಪ೦ಗಡವೆ೦ದೂ ಹೇಳಲಾಗುತ್ತದೆ. ಅಲ್ಲದೆ, ಪ್ರಾಕೃತ ಮರಾಠಿಯಲ್ಲಿ ಬರೆಯಲಾದ ಚಿತ್ಪಾವನರ ಉಪನಾಮವಾದ ಘೈಸಾಸ್ ನ ಉಲ್ಲೆಖ ಕೋಕಣದ (ಮಹಾರಾಷ್ಟ್ರ) ದಿವೆಯಾಗರ್ ನಲ್ಲಿ ಸಿಕ್ಕ ತಾಮ್ರಪತ್ರವೊ೦ದರಲ್ಲಿ ಇದೆ. ಈ ತಾಮ್ರಪತ್ರವು ೧೦೬೦ ನೇ ವರ್ಷದಲ್ಲಿ ರಾಜ್ಯವಾಳಿದ್ದ ಶಿಲಾಹರ ರಾಜ್ಯದ ರಾಜ ಮುರುನಿಯ ಕಾಲದ್ದು.

ಆದಾಗ್ಯೂ , ಚಿತ್ಪಾವನರ ದಾಖಲಿತ ಇತಿಹಾಸವು 18 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಛತ್ರಪತಿ ಶಾಹು ತನ್ನ ಐದನೇ ಮುಖ್ಯಮಂತ್ರಿಯಾಗಿ (ಪೇಶ್ವೆ) ಚಿತ್ಪಾವನರಲ್ಲಿ ಒಬ್ಬನಾದ ಬಾಲಾಜಿ ವಿಶ್ವನಾಥ ಭಟ್ ನನ್ನು ನೇಮಕ ಮಾಡಿದ ನಂತರ ಚಿತ್ಪಾವನರು ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಪಡೆದುಕೊ೦ಡರು. ತಮ್ಮ ಸತತ ಆಳ್ವಿಕೆಯ ಕಾಲದಲ್ಲಿ ಇವರಲ್ಲಿ ಕೆಲವರು ಉತ್ತಮ ಪ್ರಮುಖ ಪದವಿಗಳನ್ನು ಗಳಿಸಿದರು. ಪೇಶ್ವೆಯವರ ಆಳ್ವಿಕೆಯ ಕಾಲದಲ್ಲಿ ಇವರು ಬೇರೆ ಬೇರೆ ಪ್ರಾ೦ತ್ಯಗಳಲ್ಲಿ ನೆಲೆಗೊಂಡರು. ಚಿತ್ಪಾವನರು ಮಹಾರಾಷ್ಟ್ರ ಮೂಲದವರಾದರೂ ಭಾರತದಾದ್ಯ೦ತ ಹಾಗೂ ಅಮೆರಿಕ. ಯೂರೋಪ್ ಗಳಲ್ಲಿ ಕೂಡ ಹರಡಿಕೊ೦ಡಿದ್ದಾರೆ.

ಮಹಾರಾಷ್ತ್ರದ ಕೊಂಕಣ ತೀರದ ಊರುಗಳು ಮತ್ತು ಗೋವಾದ ಊರುಗಳಿಂದ ಸುಮಾರು ೫೦೦ ವರ್ಷಗಳ ಹಿಂದೆ (ಅಂದಾಜು) ವಲಸೆ ಬಂದು ಕರ್ನಾಟಕದ ಕರಾವಳಿಯ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರಿನ ಕಳಸ,ಶೃಂಗೇರಿಯಂತಹಾ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ನಿಂತ ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಒಂದು ವಿಶಿಷ್ಟವಾದ ಭಾಷೆಯನ್ನು ಮಾತಾನಾಡುತ್ತಾರೆ. ಅದರ ಹೆಸರು "ಆಮ್ಚಿ ಭಾಸ" ಅಥವಾ "ಚಿತ್ಪಾವನೀ ಕೊಂಕಣಿ" ಮಹಾರಾಷ್ಟ್ರದಲ್ಲಿ ಅವರು ಅನುಸರಿಸುತ್ತಿದ್ದ ಸಂಸ್ಕೃತಿ, ಸಂಪ್ರದಾಯ, ಆಚರಿಸುತ್ತಿದ್ದ ಹಬ್ಬ ಹರಿದಿನ, ಬೊಡ್ಡಣ, ಮದುವೆ, ಉಪನಯನಗಳು ಇಂದಿಗೂ ಇಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂಬುದು ಒಂದು ಆಶ್ಚರ್ಯದ, ಹೆಮ್ಮೆಯ ವಿಚಾರ.

ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆ��ಗಾವಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕಾರ್ಕಳ ಈ ಊರುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಾಸಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವಂತಹ ದ.ರಾ.ಬೇಂದ್ರೆ ಯವರು ಸಹ ಚಿತ್ಪಾವನ ಕುಲದವರು.

ಚಿತ್ವಾವನರು ಭಾರತದ ಸ್ವಾತಂತ್ಯ ಸ೦ಗ್ರಾಮದಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಇವುಗಳಲ್ಲಿ ಪ್ರಮುಖರಾದವರು ವಾಸುದೇವ ಬಲವಂತ ಫಡ್ಕೆ, ವಿನಾಯಕ ದಾಮೋದರ ಸಾವರ್ಕರ್, ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲ ಗಂಗಾಧರ ತಿಲಕ್.

ಅನನ್ಯವಾದ ಚಿತ್ಪಾವನೀ ಭಾಷಾ ಪದ ಪರಿಚಯ (ಕರ್ನಾಟಕ ಶೈಲಿ)

[ಬದಲಾಯಿಸಿ]
Chitpavani Roman Transliteration English Meaning Kannada Meaning
चे़ंडि chedi girl ಹುಡುಗಿ
बोड्यो boDyo boy ಹುಡುಗ
कें ke(n) where ಎಲ್ಲಿ
कितंs kita(n) what ಏನು
छ़ं/थ्सं thsa(n) am (I) ಆಗಿರುವೆ
में me(n) I ನಾನು
विळ्च़ां viLchaa(n) just before sunset ಸಾಯಂಕಾಲ
नंइ nayi river ಹೊಳೆ
ठेइलं Theylaa(n) kept/ placed (past tense) ಇಟ್ಟೆ
घेव्नी ghevnee (after) taking ಕೊಂಡು
येंछ़ं - yethsaa(n coming ಬರುತ್ತೇನೆ
हाडि haaDi bring ತಾ
ओक्खतs okkhata medicine ಔಷಧಿ/ ಮದ್ದು
च़ोक्खट chokkhaTa good ಒಳ್ಳೆಯ
पेख pekha stay ಇರು
आन्तूघरs aantuughara kitchen ಅಡುಗೆಮನೆ
नाकां naakaa(n) don't want ಬೇಡ
एठा eThaa here ಇಲ್ಲಿ
कई kaee when ಎಂದು
बोल्लसे bollase speaks ಮಾತಾಡುತ್ತಾನೆ/ಳೆ
अव्वलs avvala very good ಉತ್ಕೃಷ್ಟ/ಚೆನ್ನಾದ

ಚಿತ್ಪಾವನೀ ಕ್ರಿಯಾಪದಗಳು

[ಬದಲಾಯಿಸಿ]

ಉದಾಹರಣೆಗಾಗಿ ಕೆಲವು ಕ್ರಿಯಾ ಪದಗಳು ಮತ್ತು ಅವುಗಳ ಕನ್ನಡ, ಇಂಗ್ಲಿಷ್ ಮತ್ತು ಮರಾಠೀ ಭಾಷೆಗಳ ಸಮಾನ ಅರ್ಥಗಳು:

Chitpavani Roman Transliteration English Meaning Kannada Meaning
आइ aai thread (tag) ಪೋಣಿಸು
आव aava wash hands ಕೈತೊಳೆ
कूदs kooda stamp ತುಳಿ
धावs dhaava run ಓಡು
पोहारि pohaari kick ಒದೆ
मड्पि maDpi fold ಮಡಸು
आंबडि ambaDi chase ದನಗಳನ್ನು ಅಟ್ಟು

ಚಿತ್ಪಾವನೀ  ವಾಕ್ಯಗಳ ಪರಿಚಯ

[ಬದಲಾಯಿಸಿ]

ಉದಾಹರಣೆಗಾಗಿ ಕೆಲವು ವಾಕ್ಯಗಳು ಮತ್ತು ಅವುಗಳ ಕನ್ನಡ, ಇಂಗ್ಲಿಷ್ ಮತ್ತು ಮರಾಠೀ ಅನುವಾದ: (ಅನುನಾಸಿಕದಲ್ಲಿ ಹೇಳಬೇಕಾದಲ್ಲಿ, ಈ ^ ಚಿಹ್ನೆಯಿದೆ | ^ - अनुनासिकांत उच्चार करा)

Kannada Meaning Chitpavani (in Kannada script) Chitpavani (in Marathi script) Marathi Meaning English Meaning
ನಾನು ಯಶವಂತ ಮೆ^ ಯಶವಂತು मे^यशवंतु मी यशवंत आहे. I am Yashavant.
ಇವರು ಯಾರು? ಹೆ ಕೋಣ್ಹಿ? हे कोण्हि? हे कोण? Who is this (respectful male/ plural)
ಇವರು ಪುರೋಹಿತರು ಹೆ ಪುರೋಹಿತ हे पुरोहित हे पुरोहित आहेत. He is a priest.
ಇವರ ಹೆಸರೇನು? ಹೆಂಚ^ ನಾವ ಕಿತ? हेंच^ नाव कित? यांचे नाव काय? What's his name? (respectful male)
ಇವರ ಹೆಸರು ಸತೀಶ ಹೆಂಚ^ ನಾವ ಸತೀಶು ಮ್ಹಣಿ हेंच^ नाव सतीशु म्हणि यांचे नाव सतीश आहे. His name is Sateesh (respectful male)
ಅವರು ಯಾರು? ತೆ ಕೋಣ್ಹಿ? ते कोण्हि? ते कोण आहेत? Who are they?
ಇವನು ಯಾರು? ಹೊ ಕೋಣ್ಹಿ? हो कोण्हि? हा कोण आहे? Who is this? (male)
ಇವನು ವ್ಯಾಪಾರಿ ಹೊ ವ್ಯಾಪಾರಿ हो व्यापारि हा व्यापारी आहे. He is a Vendor.
ಅವನು ಯಾರು? ತೊ ಕೋಣ್ಹಿ? तो कोण्हि? तो कोण आहे? Who is he?
ಇವರು ಯಾರು? ಹೆ ಕೋಣ್ಹಿ? हे कोण्हि? हे कोण आहेत? who are these (men)?
ಅವರು ಯಾರು? ತೆ ಕೋಣ್ಹಿ? ते कोण्हि? ते कोण आहेत. Who are they?
ನೀನು ಯಾರು? ತು ಕೋಣ್ಹಿ? तु कोण्हि? तू कोण आहेस? Who are you?
ನಾನು ಗುಮಾಸ್ತ ಮೆ^ ಗುಮಾಸ್ತು मे^ गुमास्तु मी कारकून आहे. I am a clerk.
ನೀವು ಯಾರು? ತುಮ್ಹಿ ಕೋಣ್ಹಿ? तुम्हि कोण्हि? हे कोण आहेत? Who are you, guys? (plural)
ನಾನು ಅಧ್ಯಾಪಕ ಮೆ^ ಅಧ್ಯಾಪೋಕು मे^ अध्यापोकु मी शिक्षक आहे. I am a teacher.
ಅವರು ವೈದ್ಯ ತೊ ಡಾಕ್ಟೋರು तो डाक्टोरु ते डाक्टर आहेत. He is a doctor.
ಆ ಹುಡುಗಿ ಯಾರು ? ಅವಳು ನಿನ್ನ ತಂಗಿನಾ? ತಿ ಚೇಢಿ ಕೋಣ್ಹಿ^? ತಿ ತುಜ್ಝಿ ಬೆಹೆಣಿಶಿಕಾ? ति चेढि कोण्हि^? ति तुज्झि बेहेणिशि का? ती मुलगी कोण? ती तुझि लहान बहिण काय (का)? Who is that girl? Is she your sister?
ಅವಳ ಹೆಸರು ಏನು? ತ್ಯಾಚ^ ನಾವ ಕಿತ^? त्याच^ नाव कित^? तिचे नाव काय(का). What is her name?
ಅಲ್ಲ, ಅದು ನನ್ನ ಪುಸ್ತಕವಲ್ಲ, ಅದು ನನ್ನ ಮಿತ್ರ ಅಶೋಕನ ಪುಸ್ತಕ ನೋಹೆ^, ತ^ ಪುಸ್ತಕ ಮಾಜ್ಜ್ಹ^ ನೋಹೆ^. ತ^ ಮಾಜ್ಜ್ಹೊ ದೋಸ್ತು ಅಶೋಕಾಚ ಪುಸ್ತಕ त^ पुस्तक माज्झ^ नोहे. त^ माज्जो दोस्तु अशोकाच^ पुस्तक नाही, हे माझे पुस्तक नाही. माझे मित्र अशोक यांचे पुस्तक आहे. No, its not my book. It is my friend Ashok's book
ಅವಳ ಹೆಸರು ರಾಧಾ ತ್ಯಾಚ^ ನಾವ ರಾಧಾ ಮ್ಹಣಿ? त्याच^ नाव राधा म्हणि? तिचा नाव राधा आहे. Her name is Radhaa.
ಇವಳು ಯಾರು, ನಿನ್ನ ಅಕ್ಕನಾ? ಹಿ ಕೋಣ್ಹಿ^, ತುಜ್ಝಿ ಆಕ್ಕಾಶಿಕಾ? हि कोण्हि^, तुज्झि आक्काशि का ? ही कोण, मोठि बहिण आहे का. Who is this (girl), is she your elder sister?
ಹೌದು, ಅವಳು ನನ್ನ ಅಕ್ಕ? ಹಯಿ, ತಿ ಮಾಜ್ಝಿ ಆಕ್ಕಾಶಿ हयि, ति माज्झि आल्काशि होय, ही माझी मोठा बहिण आहे. Yes, she is my elder sister.
ಇವಳು ಒಬ್ಬ ನಟಿ ಹೀ ಎಕ್ಕಲಿ ನಟಿ/ಅಭಿನೇತ್ರೀ/ಆಕ್ಟರಿಣಿ ही एक्कलि नटि/अभिनेत्री/ऍक्टरिणी ही एक अभिनेत्री आहे. She is an actress.
ಅವರು ದಿನಕರ, ನನ್ನ ಸ್ನೇಹಿತ ತೊ ದಿನಕೋರು, ಮಾಜ್ಝೊ ಸ್ನೇಹಿತು तो दिनकोरु, माज्जो स्नेहितु ते दिनकर, माझे मित्र आहे He is Dinakar, my friend.
ನಮಸ್ಕಾರ, ನೀವು ಯಾರು? ನಮಸ್ಕಾರು, ತುಮ್ಹಿ ಕೋಣ್ಹಿ? नमस्कारु, तुम्हि कोण्हि? नमस्ते, आपण कोण? Namaskaar, who a`re you? (respectful)
ನಿನ್ನ ರಾಜ್ಯ ಯಾವುದು? ತುಜ್ಝ^ ರಾಜ್ಯ ಕೋಣ್ತ^? तुज्झ^ राज्य कोण्त^? आपले राज्य कोणते? Which is your State?
ನನ್ನ ರಾಜ್ಯ ಕರ್ನಾಟಕ ಮಾಜ್ಝ^ ರಾಜ್ಯ ಕರ್ನಾಟಕ माज्झ^ राज्ज कर्नाटक माझे राज्य कर्नाटक आहे My state is Karnataka.
ನಿಮ್ಮ ಮಾತೃಭಾಷೆ ಯಾವುದು? ತುಮ್ಚಿ ಮಾತೃಭಾಷಾ ಕೋಣ್ತಿ? तुम्चि मातृ भाषा कोण्ति? आपली मातृभाषा कोणती? What is your Mother tongue?
ನನ್ನ ಮಾತೃಭಾಷೆ ಕನ್ನಡ ಮಾಜ್ಝಿ ಮಾತೃ ಭಾಸ ಚಿತ್ಪಾವನಿ माज्झिमातृभाषा चित्पावनि माझी मातृभाषा मराठी आहे. My mother tongue is Chitpavani.
ನಿನ್ನ ಹೆಸರೇನು? ತುಜ್ಝ^ ನಾವ ಕಿತ^? तुज्झ^ नाव कित^? तुझा नाव काय? What is your name?
ನನ್ನ ಹೆಸರು ಮೋಹನ ಮಾಜ್ಝ^ ನಾವ ಮೋಹೊನು ಮ್ಹಣಿ माज्झ^ नाव मोहोनु म्हणि माझे नाव मोहन आहे. My name is Mohan
ಇವನ ಹೆಸರೇನು? ಹೆಚ^ ನಾವ ಕಿತ^? हेच^ नाव कित ? याचे नाव काय? What is this guy's name?/ What is its name?
ಇವನ ಹೆಸರು ಸುರೇಶ ಹೆಚ^ ನಾವ ಸುರೇಶು? हेच^ नाव सुरेशु? याचे नाव सुरेश आहे. This guy's name is Suresh.
ಅವನ ಹೆಸರೇನು? ತೇಚ^ ನಾವ ಕಿತ^? तेच^ नाव कित^? त्याचे नाव काय? What is his name?/ What is its name?
ಅವನು ನನ್ನ ಸ್ನೇಹಿತ, ಅವನ ಹೆಸರು ರಾಜು ತೋ ಮಾಜ್ಝೊ ದೋಸ್ತು. ತೇಚ^ ನಾವ ರಾಜು तो माज्झो दोस्तु, तेच^ नाव राजु म्हणि तो माझा मित्र आहे. त्याचे नाव राजु आहे. He is my friend, his name is Raju.
ನೀನು ಯಾರು? ತು ಕೋಣ್ಹಿ ? तु कोण्हि ? तु कोण आहेस? Who are you?
ನಾನು ಶಂಕರ ಅವರ ಮಗ ಮೆ^ ಶಂಕರಾಚೊ ಬೋಡ್ಯೊ मे^शंकराचो बोड्यो मी शंकर यांचा मुलगा आहे. I am Shankar's son.
ಇದು ನಿನ್ನ ಪುಸ್ತಕವೆ? ಹೆ^ ತುಜ್ಝ^ ಪುಸ್ತಕ ಕಾ? हे^ तुज्झ^ पुस्तक का? हे तुझे पुस्तक आहे काय? Is this your book?
ಇದು ಯಾವ ಪುಸ್ತಕ? ಹೆ^ ಕೋಣ್ತ^ ಪುಸ್ತಕ? हे^ कोण्त^ पुस्तक ? हे कोणते पुस्तक आहे? Which book is this?
ಇದು ಕಾದಂಬರಿ ಹೆ^ ಕಾದಂಬರಿ ಪುಸ್ತಕ हे^ कादंबरि पुस्तक ही कादंबरी पुस्तक आहे. This is a Novel.
ಈ ಪುಸ್ತಕದ ಹೆಸರು ಏನು? ಹೆ ಪುಸ್ತಕಾಚ^ ನಾವ ಕಿತ? हे पुस्तकाच^ नाव कित^? हिचे नाव काय? What is this girl's name?
ಇದರ ಹೆಸರು ಕಥಾಮಂಜರಿ ಹೆಚ^ ನಾವ ಕಥಾಮಂಜರಿ ಮ್ಹಣಿ हेच^ नाव कथामंजरि हिचे नाव कथामंजरि Its name is Kathaamanjari
ಇದು ಯಾರ ಕಾದಂಬರಿ? ಹಿ ಕೋಣ್ಹಾಚಿ ಕಾದಂಬರಿ? हि कोण्हाचि कादंबरि? हि कादंबरी कोणाचि आहे? Whose novel is this?
ಇದು ನಿರಂಜನ ಅವರ ಕಾದಂಬರಿ ಹಿ ನಿರಂಜನಾಚಿ ಕಾದಂಬರಿ हि निरंजनाचि कादंबरि हि निरंजन यांची कादंबरी आहे. This is Niranjan's novel.
ಅದು ಯಾರ ಪೆನ್ನು? ತ^ ತುಜ್ಜ್ಹ^ ಪೆನ್ನಕಾ? त^ कोण्हाच^ पेन्न ? त^ तुज्झ^ पेन्नका? ते पेन कोणाचे? तुझे आहे का? Whose pen is this?
ಇವನು ಯಾರು? ನಿನ್ನ ತಮ್ಮನಾ? ಹೊ ಕೋಣ್ಹಿ? ತುಜ್ಝೊ ಭಾವುಶಿಕಾ? हो कोण्हि? तुज्झो भावुशिका? हे कोण? तुझा लहान भावु काय (का)? Who is this (guy)? Your younger brother?
ಅಲ್ಲಾ, ಇವನು ನನ್ನ ತಮ್ಮನಲ್ಲಾ. ಇವನು ನನ್ನ ಅಣ್ಣ ನೋಹೆ^, ಹೊ ಮಾಜ್ಝೊ ಭಾವುಶಿ ನೋಹೆ^. ಹೊ ಮಾಜ್ಝೊ ಆಣ್ಣಾಶಿ नोहे^, हो माज्झो भावुशि नोहे^, हो माज्झो आण्णशि नाही, हा माझा लहान भावु नाहि. हा माझा मोठा भाऊ आहे. No, he is not my younger brother. He is my elder brother.

ಚಿತ್ಪಾವನೀ ಪದ ಪರಿಚಯ (ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ಶೈಲಿ)

[ಬದಲಾಯಿಸಿ]
Chitpavani Roman Transliteration English Meaning
चेड ched girl
बोड्यो boDyo boy
कें ke(n) where
कितां kitaa(n) what
सां saa(n) am (I)
में me(n) I
विन्चां vilchaa(n) just before sunset
नय nay river
थेयलां theyalaa(n) put (past tense)
घेव्नी ghevnee (after) taking
येचां- yechaa(n coming
हाड haaD bring
ओखद okhad medicine
चखोट chakhoT good
पेख pekh stop
आत्वार aatvaar kitchen
नाकां naakaa(n) don't want
यठां yaaThaa(n) here
कई kaee when
बोलसें bolase(n) speaks
आडस aadas very good


ಗಮನಿಸಿ:
[ಬದಲಾಯಿಸಿ]
  • ಇಲ್ಲಿ ಮೇಲ್ಕಾಣುವ ಚಿತ್ಪಾವನೀ ವಾಕ್ಯಗಳನ್ನು http://www.karnatakachithpavans.org/chitpavani_bhashe/4/ [4] ಎಂಬ ಜಾಲತಾಣದ ಚಿತ್ಪಾವನೀ ಭಾಷೆಯ ಪುಟದಿಂದ ಎರವಲು ಪಡೆದು ಉಲ್ಲೇಖಿಸಲಾಗಿದೆ. ದಯವಿಟ್ಟು ಶ್ರೀಯುತ ಎಂ. ದಿವಾಕರ ಡೋಂಗ್ರೆಯವರು ಪ್ರಾರಂಭಿಸಿ ಮುನ್ನಡೆಸುತ್ತಿರುವ "www.ಕರ್ನಾಟಕಚಿತ್ಪಾವನ್ಸ್.ಓಆರ್ಜಿ" ಜಾಲತಾಣವಕ್ಕೆ ಭೇಟಿ ಕೊಟ್ಟು ಚಿತ್ಪಾವನರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆದುಕೊಳ್ಳಬೇಕಾಗಿ ವಿನಂತಿ.
  • ಈ ವಿಕೀ ಕನ್ನಡ ಪುಟವನ್ನು ಮರುಪರಿಶೀಲಿಸಿ, ಹೆಚ್ಚಿನ ಮಾಹಿತಿಗಳನ್ನು ಸೇರಿಸಿದವರು ಅಮರನಾಥ್ ಸುಬ್ರಮಣ್ಯ ದೇವಧರ್, ಬೆಂಗಳೂರು, ಇವರು. ನಿಮ್ಮ ಅನಿಸಿಕೆ ಅಭಿಪ್ರಾಯಗಳಿದ್ದಲ್ಲಿ ಅವುಗಳನ್ನು ದೇವಧರಸ್@ಜೀಮೈಲ್. ಕಾಂ ಗೆ ಕಳುಹಿಸಿರಿ.

ಉಲ್ಲೇಖಗಳು:

[ಬದಲಾಯಿಸಿ]
  • Hammarström, Harald; Forkel, Robert; Haspelmath, Martin, eds. (2017). "Goan Konkani".
  • Glottolog 3.0. Jena, Germany: Max Planck Institute for the Science of Human History.
  • Hammarström, Harald; Forkel, Robert; Haspelmath, Martin, eds. (2017). "Maharashtrian Konkani".
  • Glottolog 3.0. Jena, Germany: Max Planck Institute for the Science of Human History. Gazetteer of the Bombay Presidency- Ratnagiri and Sawantwadi Districts, 1880
  • http://www.karnatakachithpavans.org/chitpavani_bhashe

Devanagari and Kannada has been promulgated as the official script. Roman script is not mandated as an official script by law.

   The use of Kannada script is not mandated by any law or ordinance. However, in the state of Karnataka, Chitpavani/ Aamchi Bhasa is used in the Kannada script instead of the Devanagari script.
External links:
[ಬದಲಾಯಿಸಿ]
   http://konkanionline.blogspot.com/
   https://web.archive.org/web/20120327201033/http://chitpavani.webs.com/
   http://www.karnatakachithpavans.org/

Categories:

   KonkaniKonkani languages