ಜೆಂಘಿಸ್ ಖಾನ್
ಗೆಂಘಿಸ್ ಖಾನ್ (pronounced /ˈdʒɛŋɡɪs ˈkɑːn/ ಅಥವಾ/ˈɡɛŋɡɪs ˈkɑːn/[೧]; ಮಂಗೋಲಿಯನ್:Чингис Хаан ಅಥವಾ ಟೆಂಗಿಸ್ (ಸಾಗರ, ಸಮುದ್ರ), Chinggis Khaan , ಅಥವಾ [Činggis Qaγan] Error: {{Lang}}: Non-latn text (pos 11)/Latn script subtag mismatch (help) ), ಟೆಂಪ್ಲೇಟು:IPA2;c. ೧೧೬೨[೨]–೧೨೨೭), ಹುಟ್ಟು (ಅರ್ಥ "ironworker"[೩]), ಖಾನ್ (ಆಡಳಿತಗಾರ) ಮತ್ತು ಖಗನ್ (ಚಕ್ರವರ್ತಿ) ಇತಿಹಾಸದ ಅತಿ ದೊಡ್ಡ ನಿರಂತರ ಸಾಮ್ರಾಜ್ಯ ಮಂಗೋಲ್ ಚಕ್ರಾಧಿಪತ್ಯದ ಸ್ಥಾಪಕ ಚಕ್ರವರ್ತಿ , .
Genghis Khan | |
---|---|
Khagan of the Mongol Empire | |
ರಾಜ್ಯಭಾರ | 1206–1227 |
ಪಟ್ಟಧಾರಣೆ | 1206 in khurultai at the Onon River, Mongolia |
ಪೂರ್ಣ ಹೆಸರು | Genghis Khan (birth name: Temüjin) Mongolian script at right. |
ಬಿರುದುಗಳು | Khan, Khagan |
ಹುಟ್ಟು | c. ೧೧೬೨ |
ಹುಟ್ಟುಸ್ಥಳ | Khentii Mountains, Mongolia |
ಸಾವು | ೧೨೨೭ (aged ೬೫) |
ಉತ್ತರಾಧಿಕಾರಿ | Ögedei Khan |
Consort | Börte Ujin Kulan Yisugen Yisui others |
ಸಂತತಿ | Jochi Chagatai Ögedei Tolui others |
ಸಂತತಿ | Borjigin |
ತಂದೆ | Yesükhei |
ತಾಯಿ | Ho'elun |
ಈಶಾನ್ಯ ಏಷಿಯಾದ ಅನೇಕ ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿ ಅವನು ಅಧಿಕಾರದ ಗದ್ದುಗೆ ಏರಿದನು . ಮಂಗೋಲ್ ಚಕ್ರಾಧಿಪತ್ಯದ ಸ್ಥಾಪನೆಯ ನಂತರ "ಗೆಂಘಿಸ್ ಖಾನ್" ಎಂಬುದಾಗಿ ಘೋಷಿಸಿಕೊಂಡ ನಂತರ ಆತ ಕರಾ-ಖೇತಾನ್ ಖನಾಟೆ, ಕಾಕಾಸಸ್, ಖ್ವಾರೆಝ್‌ಮಿದ್ ಚಕ್ರಾಧಿಪತ್ಯ, ಪಶ್ಚಿಮ ಕ್ಸಿಯಾ ಮತ್ತು ಜಿನ್ ರಾಜವಂಶಸ್ಥರು ಮುಂತಾದ ಮಂಗೋಲ್ ಪ್ರದೇಶಗಳ ಮೇಲೆ ದಂಡೆತ್ತಿ ಬಂದು ದಾಳಿಗಳಾನ್ನು ನಡೆಸಿದೆ. ಆತನ ಜೀವನದ ಕೊನೆಯ ವೇಳೆಗೆ ಮಂಂಗೋಲ್ ಚದ್ರಾಧಿಪತ್ಯ ಮಧ್ಯ ಏಷಿಯಾದ ಬಹಳಷ್ಟು ಭಾಗಗಳು ಮತ್ತು ಚೀನಾ ದೇಶವನ್ನು ಆಕ್ರಮಿಸಿಕೊಂಡಿತ್ತು.
ಗೆಂಘಿಸ್ ಖಾನ್ ಸಾಯುವುದಕ್ಕೆ ಮೊದಲು ಒಗೆದೇಯ್ ಖಾನ್‌ನನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಚಕ್ರಾಧಿಪತ್ಯದ ಖಾನ್ ರಾಜ್ಯಗಳನ್ನು ತನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಭಾಗ ಮಾಡಿದ. ತಾಂಗೂಟರನ್ನು ಸೋಲಿಸಿದ ನಂತರ ೧೨೨೭ರಲ್ಲಿ ಆತ ಮರಣ ಹೊಂದಿದ. ಮಂಗೋಲಿಯಾದ ಗೊತ್ತಿಲ್ಲದ ಸ್ಥಳದಲ್ಲಿ ಆತನನ್ನು ಗುರುತು ಇಲ್ಲದೆ ಸಮಾಧಿಮಾಡಲಾಯಿತು. ಆತನ ವಂಶಸ್ಥರು ಯೂರೇಷಿಯಾದ ಬಹಳಷ್ಟು ಭೂಪ್ರದೇಶಗಳು ಆಧುನಿ ಚೀನಾ, ಕೊರಿಯಾ, ಕಾಕಸಸ್, ಮಧ್ಯ ಏಷಿಯಾದ ದೇಶಗಳು , ಪೂರ್ವ ಯೂರೋಪಿನ ಬಹಳಷ್ಟು ಪ್ರದೇಶಗಳು ಮತ್ತು ಮಧ್ಯ ಪ್ರಾಚ್ಯದ ಪ್ರದೇಶಗಳಾನ್ನು ಆಕ್ರಮಿಸಿಕೊಳ್ಳುತ್ತಾ ಅಥವಾ ಹಿಡುವಳಿ ರಾಜ್ಯಗಳನ್ನು ಸೃಷ್ಟಿಸುತ್ತಾ ಮಂಗೋಲ್ ಚಕ್ರಾಧಿಪತ್ಯದ ವಿಸ್ತರಣೆಯನ್ನು ಮುಂದುವರೆಸಿಕೊಂಡು ಹೋದರು.
ತನ್ನ ಸೇನಾಪಡೆಗಳ ಸಾಧನೆಗೂ ಮಿಗಿಲಾಗಿ ಗೆಂಘಿಸ್ ಖಾನ್ ಮಂಗೋಲ್ ಚಕ್ರಾಧಿಪತ್ಯವನ್ನು ಬೇರೊಂದು ಬಗೆಯಲ್ಲಿ ಮುನ್ನಡೆಸಿದ. ಉಯ್‌ಘರ್ ಲಿಪಿಯನ್ನು ಮಂಗೋಲ್ ಚಕ್ರಾಧ��ಪತ್ಯದ ಬರವಣಿಗೆ ಪದ್ಧತಿಯಾಗಿ ಸಾರಿದ. ಮಂಗೋಲ್ ಚಕ್ರಾಧಿಪತ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಉತ್ತೇಜಿಸಿದ ಮತ್ತು ಈಶಾನ್ಯ ಏಷಿಯಾದ ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿ ಅಖಂಡ ಚಕ್ರಾಧಿಪತ್ಯವನ್ನು ರೂಪಿಸಿದ. ಇಂದಿನ ಮಂಗೋಲಿಯಾ ಆತನನ್ನು ಮಂಗೋಲ್ ಚಕ್ರಾಧಿಪತ್ಯದ ಪಿತಾಮಹನೆಂದು ಗೌರವಿಸುತ್ತದೆ.[೪]
ಆರಂಭಿಕ ಜೀವನ
ಬದಲಾಯಿಸಿವಂಶ/ಮನೆತನ
ಬದಲಾಯಿಸಿತೆಜುಮಿನ್ ಆತನ ತಂದೆಯ ಕಡೆಯಿಂದ ಮಂಗೋಲ್ ಒಕ್ಕೂಟದ ಮುಖ್ಯಸ್ಥರಾಗಿದ್ದ ಖಾಬುಲ್ ಖಾನ್, ಅಂಬಾಘೈ ಮತ್ತು ಖುತುಲ್ಲಾ ಖಾನ್‌ಗೆ ಸಂಬಂಧಿಕರು. ೧೧೬೧ರಲ್ಲಿ ಚೀನಾದ ಜಿನ್ ವಂಶಸ್ಥರು ತಮ್ಮ ಬೆಂಬಲವನ್ನು ಮಂಗೋಲರಿಂದ ತತಾರವೆಗೆ ಬದಲಿಸಿದಾಗ ಅವನು ಖಾಬುಲ್‌ಖಾನ್‌ನನ್ನು ನಾಶಪಡಿಸಿದರು.[೫] ಗೆಂಘಿಸ್‌ನ ತಂದೆ ಯೆಸುಘೈ (ಬೊರ್ಜಿಗಿನ್‌ನ ನಾಯಕ ಮತ್ತು ಅಂಬಾಘೈ ಮತ್ತು ಖುತುಲ್ಲಾ ಖಾನ್‌ನ ಸೋದರ ಸಂಬಂಧಿಕ) ಮಂಗೋಲ್‌ನ ಆಡಳಿತ ವಂಶಸ್ಥರ ಮುಖ್ಯಸ್ಥನಾದ, ಅದರೆ ತನ್ನ ವಿರೋಧಿ ತಾಯ್‌ಜೀ ವಂಶಸ್ಥರು ಈ ಸ್ಥಾನಕ್ಕೆ ಪ್ರತಿಸ್ಪರ್ಧಿಗಳಾಗಿದ್ದರು; ಇವರು ಅಂಬಾಘಾಯ್‌ನ ನೇರ ವಂಶಸ್ಥರು. ೧೧೬೧ರ ನಂತರ ತತಾರರು ತುಂಬಾ ಪ್ರಬಲರಾದ ಮೇಲೆ ಜಿನ್ ವಂಶಸ್ಥರು ತಮ್ಮ ಬೆಂಬಲವನ್ನು ತತಾರರಿಂದ ಕೆರಾಯಿಟರಿಗೆ ಬದಲಿಸಿದರು.
ಜನನ
ಬದಲಾಯಿಸಿಸಮಕಾಲೀನ ಲಿಖಿತ ದಾಖಲೆಗಳ ಕೊರತೆಯ ಕಾರಣದಿಂದ ತೆಮುಜಿನ್‌ನ ಬಗೆಗೆ ಸಿಗುವ ವಾಸ್ತವಿಕ ಮಾಹಿತಿ ಸ್ವಲ್ಪ ಮಾತ್ರ. ಈ ಅವಧಿಯ ಕುರಿತು ಒಳನೋಟಗಳನ್ನು ಒದಗಿಸುವ ಕೆಲವು ಮೂಲಗಳು ಅನೇಕ ಸಲ ಪರಸ್ಪರ ವಿರೋಧಾತ್ಮಕವಾಗಿ ಕಾಣಿಸುತ್ತವೆ.
ತೆಮುಜಿನ್ ೧೧೬೨ರಲ್ಲಿ[೨] ಆಧುನಿಕ ಮಂಗೋಲ್‌ನ ಬುರ್ಖಾನ್ ಖಾಲ್ದುನ್ ಪರ್ವತ, ಒನೋನ್ ಮತ್ತು ಖೆರ್ಲೆನ್ ನದಿ ಹತ್ತಿರದ ಮಂಗೋಲ್ ಬುಡಕಟ್ಟು ಜನಾಂಗವೊಂದರಲ್ಲಿ ಹುಟ್ಟಿದ; ಇದು ಇಂದಿನ ಮಂಗೋಲಿಯಾದ ರಾಜಧಾನಿ ಉಲಾನ್‌ಬತಾರ್‌ನಿಂದ ಅಷ್ಟೇನು ದೂರವಿಲ್ಲ. ಮಂಗೋಲ್ ಗುಪ್ತ ಚರಿತ್ರೆಯೊಂದರ ಪ್ರಕಾರ ತೆಮುಜಿನ್ ಹುಟ್ಟಿದಾಗ ಆತನ ಮುಂಗೈಯಲ್ಲಿ ರಕ್ತ ಹೆಪ್ಪುಗಟ್ಟಿದ ಕಲೆಯಿತ್ತು, ಇದು ಆತ ಮುಂದೆ ಮಹಾನಾಯಕನಾಗಲಿರುವ ಸೂಚನೆಯಾಗಿತ್ತು. ಅವನು ಕಿಯಾದ್‌ನ ಕಿರುಬುಡಕಟ್ಟು ನಾಯಕನಾಗಿದ್ದ ಮತ್ತು ಕೆರಾಯಿತ್ ಬುಡಕಟ್ಟಿನ[೬] ಒಂಗ್ ಖಾನ್ ಹಾಗೂ ಸಹಚರನಾಗಿದ್ದ ಯೆಸುಖೈನ ಮೂರನೆಯ ಮಗ ಮತ್ತು ತನ್ನ ತಾಯಿ ಹೋಲನ್‌ಳ ಹಿರಿಮಗ. ಗುಪ್ತ ಚರಿತ್ರೆಯ ಪ್ರಕಾರ ಆತನ ತಂದೆ ಆಗ ತಾನೇ ಸೆರೆಹಿಡಿದಿದ್ದ ತತಾರ್ ನಾಯಕನ ಹೆಸರನ್ನು ತೆಮುಜಿನ್‌ಗೆ ಇಡಲಾಗಿತ್ತು. ಈತನ ಹೆಸರು, ಅವರು ಕಮ್ಮಾರರ ವಂಶಸ್ಥರಾಗಿರಬಹುದು ಎಂಬುದನ್ನು ಕೂಡ ಸುಉಚಿಸುತ್ತದೆ ( ಕೆಳಗಿನ ಭಾಗದಲ್ಲಿರುವ ಹೆಸರು ಮತ್ತು ಶೀರ್ಷಿಕೆ ನೋಡಿ).
ಯೆಸುಕೈನ ವಂಶಸ್ಥರನ್ನು ಬೋರ್ಜಿಗಿನ್ ಎಂದು ಕರೆಯಲಾಗುತ್ತಿತ್ತು ಮತ್ತು ಹೋಲನ್ ಒಂಗಿರಾತ್ ಬುಡಕಟ್ಟಿನ ಉಪಸಾಲಿಗೆ ಸೇರಿದವಳಾಗಿದ್ದು ಒಲ್ಖನಟ್ ಪ್ರದೇಶದವಳು.[೭][೮] ಇತರೆ ಬುಡಕಟ್ಟು ಜನಾಂಗಗಳಂತೆ ಅವರು ಕೂಡ ಅಲೆಮಾರಿಗಳು. ತನ್ನ ಪೂರ್ವಿಕರಂತೆ ತಂದೆ ಕೂಡ ಮುಖ್ಯಸ್ಥ, ಹೀಗಾಗಿ ತೆಮುಜಿನ್‌ನದು ಘನತೆಯ ಹಿನ್ನೆಲೆ. ಈ ಮಹತ್ತರವಾದ ಸಾಮಾಜಿಕ ಸ್ಥಾನಮಾನದಿಂದ ಆತನಿಗೆ ಇತರೆ ಮಂಗೋಲ್ ಬುಡಕಟ್ಟು ಜನಾಂಗಗಳಿಂದ ನೆರವು ಪಡೆದು ಕೊಳ್ಳಲು ಮತ್ತು ಅವರನ್ನು ಒಂದುಗೂಡಿಸಲು ಸಾಧ್ಯವಾಯಿತು.[ಸೂಕ್ತ ಉಲ್ಲೇಖನ ಬೇಕು]
ಗೆಂಘಿಸ್‌ನ ಯಾವುದೇ ನಿಖರ ಭಾವಚಿತ್ರಗಳು ಇಂದು ಅಸ್ತಿತ್ವದಲ್ಲಿಲ್ಲ, ಆತನ ಯಾವುದಾದರೂ ಚಿತ್ರಣ ಉಳಿದಿದ್ದರೆ ಅವುಗಳನ್ನು ಕಲಾತ್ಮಕ ಚಿತ್ರಣಗಳೆಂದು ಪರಿಗಣಿಸಲಾಗುತ್ತದೆ. ಪರ್ಷಿಯನ್ ಚರಿತ್ರಕಾರ ರಶೀದ್-ಆಲ್-ದಿನ್ ತನ್ನ "ಕಥಾನಕ "ದಲ್ಲಿ ಧಾಖಲಿಸಿರುವಂಗೆ ಗೆಂಘಿಸ್‌ನ "ಹೊಳೆಯುವ" ಪೂರ್ವಿಕರು ಎತ್ತರದ ನೀಳಗಡ್ಡದ ಕೆಂಪುಕೂದಲು ಮತ್ತು ಹಸಿರು ಕಣ್ಣಿನ ಮನುಷ್ಯ. ಗೆಂಘಿಸ್ ಮತ್ತು ಕುಬ್ಲಾ ಖಾನ್‌ನ ಮೊದಲ ಭೇಟಿಯನ್ನು ರಶೀದ್-ಅಲ್-ದಿನ್ ವರ್ಣಿಸಿರುವಂತೆ ಕುಬ್ಲಾಖಾನ್ ತನ್ನ ಅನುವಂಶಿಕ ಕೆಂಪುಕೂದಲನ್ನು ಉಳಿಸಿಕೊಳ್ಳದಿರುವುದನ್ನು ಕಂಡು ಗೆಂಘಿಸ್ ಬೆಚ್ಚುತ್ತಾನೆ.[೯] ಅಲ್-ದಿನ್‌ನ ಪ್ರಕಾರ ಗೆಂಘಿಸನ ಬೋರ್ಜಿಗಿಡ್ ಬುಡಕಟ್ಟು ವಂಶದ ಮೂಲದ ಬಗ್ಗೆ ದಂತಕತೆಯೊಂದಿದೆ, ಅದು ಆರಂಭಗೊಂಡಿದ್ದು ಅಲನ್‌ಕೊ ಮತ್ತು ಅವಳ ಭೂಮಿಗೆ ಅಪರಿಚಿತನಾದ ಕೆಂಪು ಕೂದಲಿನ ಮತ್ತು ನೀಲಿ- ಹಸಿರು ಕಣ್ಣಿನ ಮನುಷ್ಯನ ನಡುವಿನ ಸಂಬಂಧದಿಂದ. ಆಧುನಿಕ ಚರಿತ್ರಕಾರ ಪಾಲ್ ರಾಚ್‌ನೆವ್‌ಸ್ಕಿ , ಗೆಂಘೀಸ್‌ನ ಜೀವನಚರಿತ್ರೆಯಲ್ಲಿ ಆ ’ಹೊಳೆಯುವ ಮನುಷ್ಯ" ಚಾರಿತ್ರಿಕವಾಗಿ ಇದೇ ಚಹರೆಗಳನ್ನು ಹೊಂದಿರುವ ಕಿರ್ಗಿಝ್ ಜನಾಂಗದಿಂದ ಬಂದಿರಬಹುದೆಂದು ಅಭಿಪ್ರಾಯಪಟ್ಟಿದ್ದಾನೆ. ವಿವಾದಗಳೇನೇ ಇರಲಿ ಬಹಳಷ್ಟು ಚರಿತ್ರಕಾರರು ಒಪ್ಪಿಕೊಳ್ಳುವ ಅತಿ ಸಮೀಪದ ಚಿತ್ರಣವೆಂದರೆ ತೈವಾನಿನ ತಾಯ್‌ಪೆಯ್ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿರುವ ಭಾವಚಿತ್ರಣ. (ಮೇಲಿನ ಚಿತ್ರವನ್ನು ನೋಡಿ).
ಆರಂಭಿಕ ಜೀವನ ಮತ್ತು ಕುಟುಂಬ
ಬದಲಾಯಿಸಿತೆಮುಜಿನ್ಗೆ ಖಾಸಾರ್, ಖಾಜಿಯುನ್ ಮತ್ತು ತೆಮುಗಿ ಎಂಬ ಮೂವರು ಸಹೋದರರು ಮತ್ತು ತೆಮುಲೆನ್ ಎಂಬ ಸಹೋದರಿ ಇದ್ದರು, ಜೊತೆಗೆ ಬೆಖ್ತರ್ ಮತ್ತು ಬೆಲ್ಗುತೈ ಎಂಬ ಇಬ್ಬರು ಅರೆ-ಸಹೋದರರಿದ್ದರು. ಮಂಗೋಲಿಯಾದ ಅನೇಕ ಅಲೆಮಾರಿಗಳಾಂತೆ ತೆಮುಜಿನ್‌ನ ಆರಂಭಿಕ ಜೀವ ಕಷ್ಟ ಕಾರ್ಪಣ್ಯಗಳಿಂದ ಕೂಡಿತ್ತು. ಆತನ ೯ನೆಯ ವಯಸ್ಸಿನಲ್ಲಿ ತಂದೆ ಆತನಿಗೆ ಮದುವೆ ಏರ್ಪಾಡು ಮಾಡಿದರು, ತನ್ನ ತಾಯಿಯದೇ ಬುಡಕಟ್ಟಿಗೆ ಸೇರಿದ, ಮುಂದೆ ತನ್ನ ಹೆಂಡತಿಯಾಗಬೇಕಾಗಿದ್ದ ಬೊರ್ತೆಯ ಮನೆಗೆ ತಂದೆ ಕರೆತಂದರು. ತೆಮುಜಿನ್ ತನ್ನ ಮದುವೆಯಾಗಬಲ್ಲ 12ನೆಯ ವಯಸ್ಸು ತುಂಬುವ ತನಕ ಅಲ್ಲೇ ಇದ್ದು ಮನೆಯ ಯಜಮಾನ ಸನ್ಸರ್‌ನ ಸೇವೆ ಮಾಡಬೇಕಾಗಿತ್ತು. ಮನೆಗೆ ಹಿಂತಿರುಗುವಾಗ ಆತನ ತಂದೆ ತುಂಬಾ ಕಾಲದಿಂದ ಮಂಗೋಲ್‌ನ ಶತ್ರುಗಳಾಗಿದ್ದ ನೆರೆಯ ತತಾರ್ ಪ್ರದೇಶಕ್ಕೆ ನುಗ್ಗಿದ, ನಂತರ ಅವರು ಕೊಟ್ಟ ವಿಷಾಹಾರದಿಂದ ಮೃತನಾದ. ಇದನ್ನು ತಿಳಿದ ತೆಮುಜಿನ್ ಬುಡಕಟ್ಟಿನಲ್ಲಿ ತಂದೆಗಿದ್ಧ ಖಾನ್ ಪದವಿಯನ್ನು ಪಡೆದುಕೊಳ್ಳಲು ಮನೆಗೆ ಹಿಂದಿರುಗಿದ, ಆದರೆ ಅಷ್ಟು ಚಿಕ್ಕ ಹುಡುಗ ತಮ್ಮ ನಾಯಕನಾಗುವುದನ್ನು ಆತನ ತಂದೆಯ ಬುಡಕಟ್ಟು ತಿರಸ್ಕರಿಸಿತು. ಅವನು ಹೋಲನ್ ಮತ್ತು ಅವಳ ಮಕ್ಕಳನ್ನು ಯಾವುದೇ ರಕ್ಷಣೆ ಇಲ್ಲದಂತೆ ದೂರ ಮಾಡಿದರು.
ಮುಂದೆ ಅನೇಕ ವರ್ಷಗಳ ಕಾಲ ಹೋಲನ್ ಮತ್ತು ಅವಳ ಮಕ್ಕಳು ಬಡತನದ ಬಾಳು ನಡೆಸಿದರು, ಕಾಡಿನ ಹಣ್ಣು ಹಂಪಲು, ಮರ್ಮೋಟ್‌ಗಳು ತೆಮುಜಿನ್ ಮತ್ತು ಸಹೋದರರು ತರುತ್ತಿದ್ದ ಸಣ್ಣಪುಟ್ಟ ಬೇಟೆಯಿಂದ ಅವರು ಬದುಕುಳಿದರು. ಇಂತಹ ಒಂದು ಬೇಟೆ ಪ್ರವಾಸದಲ್ಲಿ ೧೩ವರ್ಷ ವಹಸ್ಸಿನ ತೆಮುಜಿನ್, ಬೇಟೆ ವಿಷಯದಲ್ಲಿ ಕಾಣಿಸಿಕೊಂಡ ಜಗಳದಲ್ಲಿ ತನ್ನ ಅರೆ-ಸಹೋದರ ಬೆಖ್ತರ್‌ನನ್ನು ಕೊಂದನು.[೧೦] ಈ ಘಟನೆ ಆತನಿಗೆ ಕುಟುಂಭದ ಮುಖ್ಯಸ್ಥನ ಸ್ಥಾನವನ್ನು ಖಚಿತಗೊಳಿಸಿತು.
೧೧೮೨ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ತನ್ನ ತಂದೆಯ ಮಾಜಿ ಸಹಚರನಾಗಿದ್ದ ಬ್ಜಾರ್ತ್‌ಸ್ಕುಲರ್ ("ತೋಳಗಳು") ಧಾಳಿ ನಡೆಸಿ ಆತನನ್ನು ಸೆರೆಹಿಡಿದ.
ಬ್ಜಾರ್ತ್‌ಸ್ಕುಲರ್ ತೆಂಜಿಮಿನ್‌ನನ್ನು ಗುಲಾಮನನ್ನಾಗಿ ಮಾಡಿಕೊಂಡ (cangue ನಿಂದ ತಿಳಿದುಬಂದಿರುವಂತೆ), ಆದರೆ ಇದನ್ನು ಶಾನುಭೂತಿಯಿಂದ ಗಮನಿಸುತ್ತಿದ್ದ ಕಾವಲುಗಾರ, ಚೆಲಾನ್‌ನ ತಂದೆ (ಮುಂದೆ ಈತ ಗೆಂಘಿಸ್‌ಖಾನ್‌ನ ಸೇನಾಧಿಕಾರಿಯಾದ)ಯ ನೆರವಿನಿಂದ ಆತ ನಡುರಾತ್ರಿಯಲ್ಲಿ ನದಿಯೊಂದರ ಕಂದರದಲ್ಲಿ ಬಚ್ಚಿಟ್ಟುಕೊಂಡು ಗೆರ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಮುಂದೆ ಗೆಂಘಿಸ್‌ಖಾನ್‌ನ ಸೇನಾಧಿಕಾರಿಗಳಾದ ಜೆಲ್ಮ್ ಮತ್ತುಅರ್ಸ್ಲಾನ್ ಆತನ ಜೊತೆಗೂಡಿದ್ದು ಇದೇ ಸಮಯದಲ್ಲಿ. ಆತನ ಸಹೋದರರ ಜೊತೆಗೆ ಬಿರುಸಿನ ವಿಸ್ತರಣೆಗೆ ಅವಶ್ಯಕವಾಗಿದ ಮನುಷ್ಯಶಕ್ತಿಯನ್ನು ಅವರು ಒದಗಿಸಿದರು . ಬ್ಜಾರ್ತ್‌ಸ್ಕುಲರ್‌ನಿಂದ ತಪ್ಪಿಸಿಕೊಂಡು ಬಂದ ನಂತರ ತೆಮುಜಿನ್‌ನ ಕೀರ್ತಿ ಎಲ್ಲ ಕಡೆಗೆ ಹರಡತೊಡಗಿತು.
ಈ ಕಾಲಕ್ಕೆ ಮಂಗೋಲಿಯಾದ ಯಾವುದೇ ಬುಡಕಟ್ಟು ಒಕ್ಕೂಟಗಳು ರಾಜಕೀಯವಾಗಿ ಒಂದುಗೂಡಿರಲಿಲ್ಲ ಮತ್ತು ಸಾಂಪ್ರದಾಯಿಕ ಮದುವೆಗಳನ್ನು ತಾತ್ಕಾಲಿಕ ಬಾಂಧವ್ಯ ವೃದ್ಢಿಗಾಗಿ ಬಳಸಿಕೊಳ್ಳುತ್ತಿದ್ದರು. ಬುಡಕಟ್ಟು ಯುದ್ಧಗಳು, ಕಳ್ಳತನ, ದಾಳಿ, ಭ್ರಷ್ಟಾಚಾರ, ಒಕ್ಕೂಟಗಳ ನಡುವಿನ ಮುಂದುವರೆದ ಸೇಡಿನ ನಡವಳಿಕೆ ದಕ್ಷಿಣದಲ್ಲಿ ಚೀನಾದ ವಂಶಾಡಳಿತಗಾರರ ಹಸ್ತಕ್ಷೇಪ ಇವುಗಳಿಂದ ಜಟಿಲವಾಗುತ್ತಿದ್ದ ಮಂಗೋಲಿಯಾದ ಕ್ಲಿಷ್ಟ ರಾಜಕೀಯ ವಾತಾವರಣವನ್ನು ಗಮನಿಸುತ್ತ ತೆಮುಜಿನ್ ಬೆಳೆದ. ತೆಮುಜಿನ್‌ನ ತಾಯಿ ಹೋಲನ್ ಮಂಗೋಲಿಯಾದ ಅಸ್ಥಿರ ರಾಜಕೀಯ ವಾತಾವರಣ, ವಿಶೇಷವಾಗಿ ಭಾಂಧವ್ಯಕಾಗಿ ಒಪ್ಪಂದಗಳ ಅವಶ್ಯಕತೆ ಬಗ್ಗೆ ಆತನಿಗೆ ಅನೇಕ ಪಾಠಗಳನ್ನು ಹೇಳಿಕೊಟ್ಟಳು.
ಈ ಹಿಂದೆ ತನ್ನ ತಂದೆ ಏರ್ಪಡಿಸಿದ ಹಾಗೆ ಬುಡಕಟ್ಟುಗಳಾ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಆತ ತನ್ನ ೧೬ನೆಯ ವಯಸ್ಸಿನಲ್ಲಿ ಒಲ್ಕುಟ್‌ಹನ್ ಬುಡಕಟ್ಟಿನ ಬೋರ್ತೆಯನ್ನು ವಿವಾಹ ಮಾಡಿಕೊಂಡ. ಬೋರ್ತೆಗೆ ನಾಲ್ಕು ಜನ ಗಂಡು ಮಕ್ಕಳು, ಜೋಚಿ (೧೧೮೫–೧೨೨೬), ಚಗತಾಯ್ (೧೧೮೭—೧೨೪೧), ಒಗೆಡೈ (೧೧೮೯—೧೨೪೧), ಮತ್ತು ತೋಲುಯ್ (೧೧೯೦–೧೨೩೨). ಗೆಂಘಿಸ್ ಖಾನ್‌ಗೆ ಇತರೆ ಹೆಂಡತಿಯರಿಂದ ಹಲವಾರು ಮಕ್ಕಳಿದ್ದರು, ಆದರೆ ಅವರನ್ನು ಅಧಿಕಾರದಿಂದ ಹೊರತುಪಡಿಸಲಾಗಿತ್ತು ಮತ್ತು ಆತನ ಹೆಣ್ಣು ಮಕ್ಕಳ ಬಗ್ಗೆ ಯಾವುದೇ ದಾಖಲೆಗಳು ಅಸ್ತಿತ್ವದಲ್ಲಿಲ್ಲ. ಬೊರ್ತೆ ಜೊತೆಯಲ್ಲಿ ಮದುವೆಯಾದ ತಕ್ಷಣವೇ ಮೆರ್ಕಿಟರು ಅವಳನ್ನು ಅಪಹರಿಸಿ ಹೆಂಡತಿ ಮಾಡಿಕೊಂಡರು. ಮುಂದೆ ತನಗೆ ಎದುರಾಳಿಯಾದ ಜಮುಕ ಮತ್ತು ಅವನ ರಕ್ಷಕ ಕೆರಾಯಿತ್ ಬುಡಕಟ್ಟಿನ ಒಂಗ್‌ಖಾನ್‌ನ ನೆರವಿನಿಂದ ಅವಳನ್ನು ಪಾರುಮಾಡಿ ಕರೆತಂದ. ಅವಳು ಬಂಡ ಒಂಭತ್ತು ತಿಂಗಳ ನಂತರ ಜೋಚಿಗೆ ಜನ್ಮಕೊಟ್ಟಳು. ಇದರಿಂದ ಅವನ ಪಿತೃತ್ವದ ಮೇಲೆ ಮೋಡ ಕವಿದಂತಾಯಿತು. ಜೋಚಿಯ ಜನ್ಮ ರಹಸ್ಯದ ಬಗ್ಗೆ ಊಹಾಪೋಹಗಳಿದ್ದರೂ ಸಂಪ್ರದಾಯದ ಪ್ರಕಾರ ತೆಮುಜಿನ್ ತನ್ನ ವರ್ಗಕ್ಕಿಂತ ಕೆಳ ಮಟ್ಟದ ವರ್ಗದ ಅನೇಕ ಹೆಂಡತಿಯರನ್ನು ಹೊಂದಿದ್ದರೂ ಬೋರ್ತೆಯೊಬ್ಬಳೇ ಮಹಾರಾಣಿಯಾಗಿ ಮುಂದುವರೆದಳು.[೧೧]
ಧರ್ಮ
ಬದಲಾಯಿಸಿಗೆಂಘಿಸ್ಖಾನ್ನ ಧರ್ಮ ಬಹಳ ವಿಸ್ತೃತವಾಗಿ ಊಹಿಸಿರುವಂತೆ, ಮಧ್ಯ ಏಷಿಯಾದ ಮಂಗೋಲ್ ಮತ್ತು ಟರ್ಕಿಕ್ ಬುಡಕಟ್ಟು ಜನಾಂಗಗಳ ವಾಡಿಕೆಯ ಧರ್ಮಗಳಾಗಿದ್ದ ಶಾಮಾನಿಸಂ ಅಥವಾ ಟೆಂಗ್ರಿಯಿಸಂ ಆದರೆ ಅವನು ಧಾರ್ಮಿಕ ಸಹಿಷ್ಣು ಮತ್ತು ಇತರೆ ಧರ್ಮಗಳಿಂದ ತತ್ವಶಾಸ್ತ್ರ ಮತ್ತು ನೀತಿಪಾಠಗಳನ್ನು ಕಲಿಯಲು ಆಸಕ್ತಿ ಹೊಂದಿದ್ದ. ಹಾಗೆ ಮಾಡಲು ಅವನು ಕ್ರೈಸ್ತ ಮಿಷನರಿಗಳು, ಮುಸ್ಲಿಂ ವರ್ತಕರು ಮತ್ತು ತಾವೋ ಭಿಕ್ಷು ಕಿಯೂ ಚುಜಿ ಇವರುಗಳ ಜೊತೆ ಸಮಾಲೋಚನೆ ನಡೆಸಿದ.
ಒಕ್ಕೂಟಗಳ ಏಕೀಕರಣ
ಬದಲಾಯಿಸಿಮಧ್ಯ ಏಷಿಯಾ ಪ್ರಸ್ಥಭೂಮಿ (ಚೀನಾದ ಉತ್ತರ ಭಾಗ) ತೆಮುಜಿನ್‌ನ ಕಾಲದಲ್ಲಿ (೧೨೦೦ರ ಆರಂಭ) ಅನೇಕ ಬುಡಕಟ್ಟುಗಳಾಗಿ ಅಥವಾ ಬುಡಕಟ್ಟು ಒಕ್ಕೂಟಗಳಾಗಿ ಚದುರಿ ಹೋಗಿತ್ತು, ಅವುಗಳ ಪೈಕಿ ನಾಯ್‌ಮನ್ನರು , ಮರ್ಕಿಟರು , ಉಯ್‌ಘುರರು ,ತತಾರರು, ಮಂಗೋಲರು ಮತ್ತು ಕೆರಾಯಿಟರು ತಮ್ಮದೇ ಆದ ರೀತಿಯಲ್ಲಿ ಉತ್ತಮಿಕೆಯುಳ್ಳವರು ಮತ್ತು ಅವರು ಸುಖಾಸುಮ್ಮನೆ ನಡೆಸುತ್ತಿದ್ದ ಹಠಾತ್ ದಾಳಿ ಪ್ರತೀಕಾರ ಮತ್ತು ಸುಲಿಗೆಗಳು ತೋರುವಂತೆ ಅನೇ ಸಂದರ್ಭಗಳಲ್ಲಿ ಪರಸ್ಪರ ವಿರೋಧಿಗಳು.
ಇತರೆ ಬುಡಕಟ್ಟು ಮತ್ತು ಒಕ್ಕೂಟಗಳ ಬೆಂಬಲಿಗನಾಗುವ ಸೂಚನೆಗಳನ್ನು ಕೊಡುತ್ತಾ ತೆಮುಜಿನ್ ನಿಧಾನ ಗತಿಯಲ್ಲಿ ಅಧಿಕಾರ ಆರಂಭಿಸಿದ, ( ಬೇರೆ ಮೂಲಗಳ ಪ್ರಕಾರ ಒಬ್ಬ ಹಿಡುವಳಿದಾರ ಕೆರಾಯಿಟರ ಖಾನ್ ಆಗಿದ್ದ ತನ್ನ ತಂದೆಯ ಅಂಡಾ (ಪ್ರಮಾಣಿತ ಸಹೋದರ ಅಥವಾ ರಕ್ತಸಂಬಂಧಿ ಸಹೋದರ) ತೊಘ್ರುಲ್ , ಚೀನೀ ಹೆಸರುಗಳ ಪ್ರಕಾರ ಪ್ರಸಿದ್ಧನಾಗಿದ್ದ ಒಂಗ್‌ಖಾನ್ ಅಥಾವಾ ವಾಂಗ್‌ಖಾನ್ , ಜಿನ್ ಚಕ್ರಾಧಿಪತ್ಯ ೧೧೯೭ರಲ್ಲಿ ಅವನಿಗೆ ಈ ಪದವಿ ನೀಡಿತ್ತು .
ಮರ್ಕಿಟರು ಬೋರ್ತೆಯನ್ನು ಅಪಹರಿಸಿದಾಗ ಈ ಸಂಬಂಧ ಮೊದಲಿಗೆ ಗಟ್ಟಿ ಗೊಂಡಿತು, ಇದಕ್ಕೆ ಪ್ರತಿಕ್ರಿಯೆಯಾಗಿ ತೆಮುಜಿನ್ ತೊಘ್ರುಲ್‌ನ ನೆರವು ಯಾಚಿಸಿದ. ತೊಘ್ರುಲ್ ತನ್ನ ಹಿಡುವಳಿ ಪ್ರದೇಶದ ೨೦,೦೦೦ ಕೆರಾಯಿಟ್ ಸೈನ್ಯವನ್ನು ಕೊಟ್ಟು ಇದಕ್ಕಾಗಿ ತನ್ನ ಬಾಲ್ಯದ ಗೆಳೆಯನಾಗಿದ್ದ, ತನ್ನ ಜಾದರನ್ ಬುಡಕಟ್ಟಿನ ಖಾನ್ (ಆಡಳಿತಗಾರ) ಆಗಿದ್ದ ಜಮುಕನನ್ನು ಇದರಲ್ಲಿ ಭಾಗೀದಾರನನ್ನಗಿ ಮಾಡಿಕೊಳ್ಳುವಂತೆ ಸಲಹೆ ಕೊಟ್ಟ.[೧೨] ಈ ಕದನ ಯಶಸ್ವಿಯಾಗಿ ಮರ್ಕಿಟರನ್ನು ಹೀನಾಯವಾಗಿ ಸೋಲಿಸಿ ಬೋರ್ತೆಯನ್ನು ಮರಳಿ ಕರೆತರಲಾಯಿತಾದರೂ ಅದು ಬಾಲ್ಯಕಾಲದ ಗೆಳೆಯರ ನಡುವಿನ ಬಿರುಕಿಗೆ ದಾರಿ ಮಾಡಿಕೊಟ್ಟಿತು. ತೆಮುಜಿನ್ ಮತ್ತು ಜಮುಕ ರಕ್ತಸಂಬಂಧಿ ಸಹೋದರ (ಅಂಡ ) ಅವರು ಎಂದೆಂದಿಗೂ ನಿಷ್ಠರಾಗಿರುವ ಪಣ ತೊಟ್ಟರು.
೧೨೦೦ರ ಆಜುಬಾಜಿನಲ್ಲಿ ಮಂಗೋಲ್ ಒಕ್ಕೂಟ ( ಪಾರಂಪರಿಕವಾಗಿ "ಮಂಗೋಲರು")ದ ಪ್ರಮುಖ ವಿರೋಧಿಗಳೇಂದರೆ ಪಶ್ಚಿಮದಲ್ಲಿ ನಾಯಮನ್ನರು, ಉತ್ತರಾರ್ಧದಲ್ಲಿ ಮರ್ಕಿಟರು, ದಕ್ಷಿಣದಲ್ಲಿ ತಂಗೂಟರು ಮತ್ತು ಪೂರ್ವದಲ್ಲಿ ಜಿನ್ ಹಾಗೂ ತತಾರದವರು. ೧೧೯೦ ರ ವೇಳೆಗೆ ತೆಮುಜಿನ್, ಅವನ ಹಿಂಬಾಲಕರು ಮತ್ತು ಸಲಹೆಗಾರರು ಏಕೀಕರಣಗೊಳಿಸಿದ್ದು ಚಿಕ್ಕ ಮಂಗೋಲ್ ಒಕ್ಕೂಟವನ್ನು ಮಾತ್ರ. ವಿರೋಧಿ ಬುಡಕಟ್ಟಿನ ವಶ ಮತ್ತು ತನ್ನ ಆಡಳಿತದಲ್ಲಿ ತೆಮುಜಿನ್ ಕೆಲವು ನಿರ್ಣಾಯಕ ರೀತಿಗಳಲ್ಲಿ ಮಂಗೋಲ್ ಪರಂಪರೆಯಿಂದ ದೂರ ಸರಿದ. ಕೌಟುಂಬಿಕ ಸಂಬಂಧಿಗಳ ಬದಲು ಅರ್ಹತೆ ಮತ್ತು ನಿಷ್ಠೆಯ ಆಧಾರದ ಮೇಲೆ ಅಧಿಕಾರಗಳನ್ನು ಹಂಚಿದ. ಸಂಪೂರ್ಣ ನಿಷ್ಠೆ ಮತ್ತು ಪರಿಪಾಲನೆಗೆ ನ್ಯಾಯ ಒದಗಿಸಿ, ಯಸ್ಸಾ ಎಂಬ ಕೋಡ್ ಒಂದನ್ನು ಅವರಿಗೆ ಕೊಟ್ಟ ಹಾಗೂ ನ್ಯಾಯ ಸಂಹಿತೆಯನ್ನು ಹಿಂಬಾಲಿಸಿದ ನಾಗರೀಕರು ಮತ್ತು ಸೈನಿಕರಿಗೆ ಭವಿಷ್ಯತ್ತಿನ ಯುದ್ಧಗಳಿಂದ ಸಂಪತ್ತಿನ ಭರವಸೆ ಕೊಟ್ಟ. ಎದುರಾಳಿ ಬುಡಕಟ್ಟುಗಳನ್ನು ಸೋಲಿಸುತ್ತಿದ್ದಂತೆ ಶತ್ರು ಸೈನಿಕರು ಓಡಿಸಿ ಉಳಿದವರನ್ನು ಹಾಗೇ ಬಿಡಲಿಲ್ಲ , ಬದಲಾಗಿ ವಶಪಡಿಸಿಕೊಂಡ ಬುಡಕಟ್ಟಾನ್ನು ತನ್ನ ರಕ್ಷಣೆ ಒದಗಿಸಿ ಅದರ ಸದಸ್ಯ್ರನ್ನು ತನ್ನ ಬುಡಕಟ್ಟಿಗೆ ಜೋಡಣೆ ಮಾಡಿಕೊಂಡ. ವಶಪಡಿಸಿಕೊಂಡ ಬುಡಕಟ್ಟಿನ ಅನಾಥರನ್ನು ತನ್ನ ತಾಯಿ ದಟ್ಟಾಕ ತೆಗೆದುಕೊಳ್ಳುವಂತೆ ಕೂಡಾ ಮುತುವರ್ಜಿ ವಹಿಸಿದ, ಅವರನ್ನು ತನ್ನ ಕುಟುಂಬದ ಸಮ್ಗ್ರ ಭಾಗವಾಗಿರುವಂತೆ ನೋಡಿಕೊಂಡ. ಈ ರಾಜಕೀಯ ಅವಿಷ್ಕಾರಗಳು ವಶಕ್ಕೊಳಗಾದ ಬುಡಕಟ್ಟುಗಳಲ್ಲಿ ಅಪಾರ ನಿಷ್ಠೆಯನ್ನು ಉತ್ತೇಜಿಸಿ ಪ್ರತಿ ವಿಜಯಗಳು ತೆಮುಜಿನ್‌ನನ್ನು ಬಲಿಷ್ಠನನ್ನಾಗಿ ಮಾಡುತ್ತಾ ಹೋದವು.[೧೩]
ತೊಘ್ರುಲ್ (ವಾಂಗ್ ಖಾನ್)ನ ಮಗ ಸೆಂಗುಮ್‌ಗೆ ತೆಮುಜಿನ್‌ನ ಬೆಳೆಯತೊಡಗಿದ ಅಧಿಕಾರ ಮತ್ತು ತನ್ನ ತಂದೆಯೊಂದಿಗಿನ ಸಖ್ಯದ ಬಗ್ಗೆ ಮತ್ಸರವಿತ್ತು.
ಆಪಾದಿಸಲಾಗಿರುವಂತೆ ಅವನು ತೆಮುಜಿನ್‌ನನ್ನು ಹತ್ಯೆ ಮಾಡುವ ಹುನ್ನಾರ ನಡೆಸಿದ್ದ, ಅನೇಕ ಸಂದರ್ಭಗಳಲ್ಲಿ ತೆಮುಜಿನ್, ತೊಘ್ರುರ್‌ನನ್ನು ರಕ್ಷಿಸಿದನೆಂದು ಹೇಳಲಾಗುತ್ತದೆಯಾದರೀ ಕ್ರಮೇಣ ಮಗನ ಮಾತಿಗೆ ಕಿವಿಗೊಟ್ಟೂ ತೆಮುಜಿನ್‌ಗೆ ಅಸಹಕಾರ ತೋರತೊಡಗಿದ, ಸೆಂಗುಮ್ಮನ ಉದ್ದೇಶಗಳನ್ನು ಅರಿತ ತೆಮುಜಿನ್ ಮುಂದೆ ಅವರು ಅವನ ನಿಷ್ಠರನ್ನು ಸೋಲಿಸಿದ. ಮುಂದೆ ತೊಘ್ರುಲ್ ತೆಂಜುಮಿನ್‌ನ ಹಿರಿಮಗ ಚೋಜಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ತಿರಸ್ಕರಿಸಿದ್ದು ತೊಘ್ರುಲ್ ಮತ್ತು ತೆಂಜುಮನ್ ನಡುವಿನ ಸಂಬಂಧ ಹದಗೆಡಾಲು ಕಾರಣವಾಯಿತು, ಇದು ಮಂಗೋಲಿಯನ್ ಸಂಸ್ಕೃತಿಯಲ್ಲಿ ಅಗೌರವದ ಸೂಚಕ. ಇದು ಎರಡು ಬಣಗಳ ನಡುವಿನ ಬಿರುಕು ಮತ್ತು ಯುದ್ಧಕ್ಕೆ ಮುನ್ನುಡಿಯಾಯಿತು. ತೊಘ್ರುಲ್ ಈಗಾಗಲೆ ತೆಮುಜಿನ್‌ನ ಸೈನ್ಯವನ್ನು ವಿರೋಧಿಸುತ್ತಿದ್ದ ಜಮುಕನೊಂದಿಗೆ ಸೇರಿಕೊಂಡ, ಆದರೂ ತೊಘ್ರುಲ್ ಮತ್ತು ಜಮುಕನ ನಡುವಿನ ಆಂತರಿಕ ವಿವಾದದ ಜೊತೆಗೆ ಅನೇಕ ಸಹವರ್ತಿಗಳು ಅವರನ್ನು ಬಿಟ್ಟು ತೆಮುಜಿನ್‌ನ ಜೊತೆ ಸೇರಿದ್ದು ತೊಘ್ರುಲ್‌ನ ಸೋಲಿಗೆ ದಾರಿ ಮಾಡಿಕೊಟ್ಟಿತು. ಜಮುಕ ಕದನದ ಸಮಯದಲ್ಲಿ ತಲೆತಪ್ಪ್ಪಿಸಿಕೊಂಡ. ಈ ಸೋಲು ಕೆರಾಯಿಟ್ ಬುಡಕಟ್ಟಿನ ಪತನ ಮತ್ತು ವಿಸರ್ಜನೆಗೆ ವೇಗವರ್ಧಿಯಾಯಿತು.
ಮುಂದೆ ತೆಮುಜಿನ್‌ಗೆ ನೇರ ಬೆದರಿಕೆ ಇದ್ದದ್ದು, ಜಮುಕ ಮತ್ತು ಅವನ ಹಿಂಬಾಲಕರು ಆಶ್ರಯ ಪಡೆದಿದ್ದ ನಾಯಮನ್ (ನಾಯಮನ್ ಮಂಗೋಲರು)ರಿಂದ ಸಾಕಷ್ಟು ಬಣಗಳು ತಾವೇ ತಾವಾಗಿ ಸಹವರ್ತಿಗಳಾದರೂ ನಾಯಮನ್ನರು ಶರಣಾಗಲಿಲ್ಲ. ೧೨೦೧ರಲ್ಲಿ ಒಬ್ಬ ಕುರುಲ್ತಾಯ್ ಜಮುಕನನ್ನು ಗುರ್ ಖಾನ್ "ವಿಶ್ವಾತ್ಮಕ ಆಡಳಿತಗಾರ"ನನ್ನಾಗಿ ಆಯ್ಕೆ ಮಾಡಿದ, ಇದು ಕಾರಾ ಖೇತಾನ್ ಖನಾಟಿಯ ಆಡಳಿತಗಾರರು ಬಳಸುತ್ತಿದ್ದ ಪದವಿ. ಜಮುಕ ಪದವಿಗೇರಿದ್ದು ತೆಮುಜಿನ್‌ನ ಜೊತೆಗಾದ ಅಂತಿಮ ಬಿರುಕು, ಅವನನ್ನು ವಿರೋಧಿಸಲು ಬುಡಕಟ್ಟು ಒಕ್ಕೂಟವನ್ನು ರೂಪಿಸಿದ. ಆದರೂ ಕದನಕ್ಕೂ ಮೊದಲೇ ಜೆಲ್ಮೆಯ ಪ್ರಸಿದ್ಧ ಕಿರು ಸಹೀದರ ಸುಬುತಾಯ್ ಸೇರಿದಂತೆ ಅನೇಕ ಸೇನಾಧಿಕಾರಿಗಳು ಜಮುಕನನ್ನು ತೊರೆದರು ಅನೇಕ ಕದನಗಳ ನಂತರ ೧೨೦೬ರಲ್ಲಿ ಜಮುಕನ ಬಣದ ಜನರೇ ಅವನನ್ನು ತೆಮುಜಿನ್‌ಗೆ ವಹಿಸಿಕೊಟ್ಟರು.
ಗುಪ್ತ ಚರಿತ್ರೆ ಯ ಪ್ರಕಾರ ತೆಮುಜಿನ್ ಮತ್ತೆ ತನ್ನ ಬಣಕ್ಕೆ ಹಿಂತಿರುಗುವಂತೆ ಮತ್ತೆ ಸ್ನೇಹಹಸ್ತ ಚಾಚಿದ ನಿಷ್ಠರಲ್ಲದವರು ಇರಕೂಡದೆಂದು ಹೇಳಿ ಜಮುಕನನ್ನು ವಂಚಿಸಿದವರನ್ನು ತೆಮುಜಿನ್ ಕೊಲ್ಲಿಸಿದ. ಆಕಾಶದಲ್ಲಿ ಒಬ್ಬನೇ ಸೂರ್ಯನಿರಲು ಸಾಧ್ಯವೆಂದು ಹೇಳಿದ ಜಮುಕ ತೆಮುಜಿನ್‌ನ ಸ್ನೇಹವನ್ನು ತಿರಸ್ಕರಿಸಿ ವೀರಮರಣವನ್ನು ಕೋರಿದ. ರಕ್ತ ಚೆಲ್ಲದೇ ಸಾಯುವುದು ಸಂಪ್ರದಾಯ, ಬೆನ್ನು ಮುರಿಯುವ ಮೂಲಕ ಇದನ್ನು ದಯಪಾಲಿಸಲಾಗುತ್ತದೆ. ಈ ಹಿಂದೆ ತನ್ನ ವಿರೋಧಿಗಳ ಸೇನಾಧಿಕಾರಿಗಳನ್ನು ಜೀವಂತವಾಗಿ ಬೇಯಿಸಿ ಕುಪ್ರಸಿದ್ಧನಾಗಿದ್ದರೂ ಜಮುಕ ಈ ರೀತಿಯ ಸಾವು ಬಯಸಿದ. ನಾಯಮನ್ನರ ಬಣದಲ್ಲಿದ್ದ್ದ ಉಳಿದ ಮರ್ಕಿಟ್ ವಂಶಸ್ಥರನ್ನು ಈಗ ತೆಮುಜಿನ್‌ನ ಖಾಸಗಿ ರಕ್ಷಕನಾಗಿದ್ದ ಸುಬುತಾಯ್ ಸೋಲಿಸಿದ, ಮುಂದೆ ಇವನು ಗೆಂಘಿಸ್‌ಖಾನ್‌ನ ಯಶಸ್ವಿ ದಂಡನಾಯಕನಾದ. ನಾಯಮನ್ನರ ಸೋಲು ಗೆಂಘಿಸ್‌ಖಾನ್‌ನನ್ನು ಮಂಗೋಲ್ ಪ್ರಸ್ಥಭೂಮಿಯ ಏಕೈಕ ಆಡಳಿತಗಾರನನ್ನಗಿ ಮಾಡಿತು ಅಂದರೆ ಪ್ರಮುಖ ಒಕ್ಕೂಟಗಳು ತೆಂಜುಮಿನ್‌ನ ಒಕ್ಕೂಟಕ್ಕೆ ಸೇರಿಕೊಂಡವು ಅಥವಾ ಒಟ್ಟುಗೂಡಿಕೊಂಡರು.
ಗೆಂಘಿಸ್ ಖಾನ್‌ನ ಜೀವನ ಸರಣಿ ವಂಚನೆ ಮತ್ತು ಪಿತೂರಿಗಳಿಂದ ಕೂಡಿದೆ. ಇದು ತನ್ನ ಹಿಂದಿನ ಸಹವರ್ತಿಗಳಾಗಿದ್ದ ಜಮುಕ (ಮಂಗೋಲ್ ಬುಡಕಟ್ಟುಗಳ ಆಡಳಿತಗಾರನಾಗಬಯಸಿದ್ದ) ಮತ್ತು ವ್ಯಾಂಗ್ ಖಾನ್ , ಅವನ ಮಗ ಜೋಚಿ, ಗೆಂಘಿಸ್‌ಖಾನ್‌ನ ನಿಷ್ಠಾವಂತನಾಗಿದ್ದ ಸಹೋದರ ಖಾಸರ್‌ನನ್ನು ತನ್ನಿಂದ ದೂರಮಾಡ ಬಯಸಿದ್ದ ತುಂಬಾ ಪ್ರಮುಖ ಷಮಾನ್ ನೊಂದಿಗಿನ ಸಮಸ್ಯೆಗಳನ್ನು ಒಳಗೊಂಡಿದೆ. ಆತನ ಸೇನಾತಂತ್ರಗಾರಿಕೆಗಳು ತನ್ನ ಎದುರಾಳಿಗಳ ಉದ್ದೇಶ, ತನ್ನ ವಿಸ್ತೃತ ಗೂಢಚರ್ಯೆ ಪಡೆ ಮತ್ತು ಯಾಮ್ ರೂಟ್ ವ್ಯವಸ್ಥೆ ಬಗೆಗೆ ತೀವ್ರ ಆಸಕ್ತಿ ಹುಟ್ಟಿಸುತ್ತವೆ.
ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ತನಗೆ ಎದುರಾದ ಚೀನಿಯರ ಸುತ್ತುಗಟ್ಟುವ ಯುದ್ಧವಿಧೆಯನ್ನು ಕರಗತ ಮಾಡಿಕೊಳ್ಳುವಲ್ಲಿ ಅವನು ಚುರುಕಾದ ವಿಧ್ಯಾರ್ಥಿಯಂತೆ ಕಾಣಿಸುತ್ತಾನೆ.
ಇದೆಲ್ಲದರ ಫಲಿತಾಂಶವೆಂದರೆ ೧೨೦೬ರ ವೇಳೆಗೆ ಮರ್ಕಿಟರು , ನಾಯಮನ್ನರು, ಮಂಗೋಲರು, ಕೆರಾಯಟರು, ತತಾರರು, ಉಯ್‌ಘುರ್‌ರು ಮತ್ತು ಇತರೆ ಹತಾಷ ಸಣ್ಣ ಪುಟ್ಟ ಬುಡಕಟ್ಟುಗಳ ನಡುವೆ ಶಾಂತಿ ಸ್ಥಾಪನೆಯಾಯಿತು. ಅದು "ಮಂಗೋಲರ" ಅತ್ಯಂತ ಸ್ಮರಣೀಯ ಹೆಜ್ಜೆ ಗುರುತು. (ಅವರನ್ನು ಸಾಮೂಹಿಕವಾಗಿ ಗುರುತಿಸಲಾಯಿತು) ಮಂಗೋಲ್ ಪ್ರಮುಖರ ಪರಿಷತ್ತಾದ ಕುರುಲ್ತಾಯ್‌ನಲ್ಲಿ ಅವನನ್ನು ಒಟ್ಟುಗೂಡಿದ ಬುಡಕಟ್ಟುಗಳ "ಖಾನ್"ನನ್ನಾಗಿ ಒಪ್ಪಿಕೊಳ್ಳಲಾಯಿತು ಮತ್ತು ಅವನು "ಗೆಂಘಿಸ್‌ಖಾನ್" ಇಂಬ ಹೊಸ ಹೆಸರು ಪಡೆದು ಕೊಂಡ. ಗೆಂಘಿಸ್ ಸತ್ತ ನಂತರ ಕೂಡ ಆತನಿಗೆ ಖಗನ್ ಎಂಬ ಪದವಿಯನ್ನು ಕೊಟ್ಟಿರಲಿಲ್ಲ, ಅವನ ಮಗ ಮತ್ತು ಉತ್ತರಾಧಿಕಾರಿ ಆ ಪದವಿಯನ್ನು ತಾನೇ ತೆಗೆದುಕೊಂಡು ಅದನ್ನ ಮರಣೋತ್ತರವಾಗಿ ತನ್ನ ತಂದೆಗೂ ವಿಸ್ತರಿಸಿದ ( ಅವನನ್ನು ಮರಣೋತ್ತರವಾಗಿ ಯಾನ್ ವಂಶಸ್ಥರ ಸ್ತಾಪಕನೆಂದು ಕೂಡಾ ಘೋಷಿಸಲಾಯಿತು) ಗೆಂಘಿಸ್ ಖಾನ್ ಎಲ್ಲ ಒಕ್ಕೂಟಗಳನ್ನು ಏಕೀಕರಣಗೊಳಿಸಿ ತನ್ನ ಸೇನಾಧಿಕಾರವನ್ನು ಈಕರಾಜಕೀಯ ಶಕ್ತಿಯಡಿ ತಂದಾಗ ಈ ಹಿಂದೆ ಯುದ್ಧ ನಿರತವಾಗಿದ್ದ ಬುಡಕಟ್ಟುಗಳ ನಡುವೆ ಶಾಂತಿ ಸ್ಥಾಪನೆಯಾಯಿತು.
ಸೇನಾ ಕಾರ್ಯಾಚರಣೆಗಳು
ಬದಲಾಯಿಸಿಪಶ್ಚಿಮದ ಗ್ಸಿಯಾ ವಂಶಸ್ಥರು
ಬದಲಾಯಿಸಿ೧೨೦೬ರಲ್ಲಿ ಗೆಂಘಿಸ್‌ಖಾನ್‌ನ ರಾಜಕೀಯ ಉದ್ಭವ ಮತ್ತು ಅವನು ರೂಪಿಸಿದ ಮಂಗೋಲ್ ಚಕ್ರಾಧಿಪತ್ಯ ಮತ್ತು ಅವನ ಭಾಗೀದಾರರಿಗೆ ಪೂರ್ವದಲ್ಲಿ ತಾಂಗೂಟರು ಮತ್ತು ಪಶ್ಚಿಮದಲ್ಲಿ ಗ್ಸಿಯಾ ವಂಶಸ್ಥರು ನೆರೆಹೊರೆಯಾಗಿದ್ದರು. ಅದರ ಪೂರ್ವ ಮತ್ತು ದಕ್ಷಿಣದಲ್ಲಿ ಮಂಚೂರಿಯಾದ ಜುರ್ಚೆನ್ನರು ಸ್ಥಾಪಿಸಿದ ಜಿನ್ ವಂಶಸ್ಥರಿದ್ದರು, ಅವರು ಉತ್ತರ ಚೀನಾ ದೇಶವನ್ನು ಆಳಿದವರು ಮತ್ತು ಅನೇಕ ಶತಮಾನಗಳ ಕಾಲ ಮಂಗೋಲಿಯಾದ ಬುಡಕಟ್ಟುಗಳ ಪಾರಂಪರಿಕ ಪ್ರಭುಗಳಾಗಿದ್ದರು.
ಮಂಗೋಲಿಯನ್ ಭೂಪ್ರದೇಶಗಳಿಗೆ ಹತ್ತಿರದಲ್ಲಿದ್ದ ಪಶ್ಚಿಮ ಗ್ಸಿಯಾ ಅಥವಾ ಗ್ಸಿ ಗ್ಸಿಯಾದೊಂದಿಗೆ ಗೆಂಘಿಸ್ ಖಾನ್ ಮೊದಲು ಯುದ್ಧಕ್ಕೆ ಸಜ್ಜುಗೊಳಿಸಲು ತನ್ನ ಪ್ರಜೆಗಳು, ಸೈನ್ಯ ಮತ್ತು ಪ್ರಭುತ್ವವನ್ನು ಸಂಘಟಿಸಿದೆ. ತುಂಬಾ ಬಲಿಷ್ಠರಾದ ಜಿನ್ ವಂಶಸ್ಥರ ಯುವ ಆಡಳಿತಗಾರರು ಗ್ಸಿ ಗ್ಸಿಯ���ದ ನೆರವಿಗೆ ಬರಲಾರರು ಎಂಬ ಸರಿಯಾದ ನಂಬಿಕೆ ಗೆಂಘೀಸ್ ಖಾನ್‌ಗಿತ್ತು. ತಾಂಗೂಟರು ಜಿನ್ ವಂಶಸ್ಥರ ನೆರವು ಕೋರಿದಾಗ ಅವರು ಅದನ್ನು ಖಂಡಿತವಾಗಿ ನಿರಾಕರಿಸಿದರು.[೧೪] ಉತ್ತಮ ರಕ್ಷಣಾ ವ್ಯವಸ್ಥೆ ಹೊಂದಿದ್ದ ಅದರ ನಗರಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಕವಾಗಿ ಕಷ್ಟಗಳು ಎದುರಾದರೂ , ೧೨೦೯ರ ವೇಳೆಗೆ ಪಶ್ಚಿಮ ಗ್ಸಿಯಾ ಶರಣಾಗಬೇಕೆಂದು ಗೆಂಘಿಸ್ ಖಾನ್ ಒತ್ತಾಯಿಸಿದ.
ಜಿನ್ ವಂಶಸ್ಥರು
ಬದಲಾಯಿಸಿ೧೨೧೧ರಲ್ಲಿ ಪಶ್ಚಿಮ ಗ್ಸಿಯಾವನ್ನು ಆಕ್ರಮಿಸಿಕೊಂಡ ನಂತರ ಗೆಂಘಿಸ್ ಖಾನ್ ಜಿನ್ ವಂಶಸ್ಥರನ್ನು ವಶಪಡಿಸಿಕೊಳ್ಳಲು ಮತ್ತೆ ಯೋಜನೆ ರೂಪಿಸಿದ. ಜಿನ್ ವಂಶಸ್ಥರ ದಂಡನಾಯಕ ಮೊದಲನೆ ಅವಕಾಶದಲ್ಲಿ ಮಂಗೋಲರ ಮೇಲೆ ದಾಳಿ ಮಾಡದೆ ತಪ್ಪು ಮಾಡಿದ. ಬದಲಾಗಿ ಜಿನ್ ವಂಶಸ್ಥರ ದಂಡನಾಯಕ ಮಂಗೋಲರ ಸೇನೆಗೆ ಮಿಂಗ್-ತಾನ್ ಎಂಬ ಗುರಿಕಾರನನ್ನು ಕಳುಹಿಸಿಕೊಟ್ಟ, ಈ ಬಾರಿ ಗುರಿಕಾರ ಪಕ್ಷಾಂತರಮಾಡಿ ರಸ್ತೆಯ ಇನ್ನೊಂದು ಬದಿಯಲ್ಲಿ ಜಿನ್ ವಂಶಸ್ಥರ ಸೇನೆ ಕಾದು ಕುಳಿತಿದೆಯೆಂದು ಮಂಗೋಲರಿಗೆ ತಿಳಿಸಿದ. ಬ್ಯಾಡ್ಜರ್ ಪಾಸ್‌ನ ಹತ್ತಿರ ನಡೆದ ಕಾಳಗದಲ್ಲಿ ಮಂಗೋಲರು ಸಾವಿರಾರು ಜಿನ್ ಪಡೆಗಳನ್ನು ಹತ್ಯೆ ಮಾಡಿದರು. ೧೨೧೫ರಲ್ಲಿ ಗೆಂಘಿಸ್ ಖಾನ್ ಜಿನ್ ವಂಶಸ್ಥರ ರಾಜಧಾನಿ ಬೀಜಿಂಗ್ ನಗರವನ್ನು ಸುತ್ತುಗಟ್ಟಿ ರಾಜಧಾನಿಯನ್ನೇ ವಜಾ ಮಾಡಿದ ( ಮುಂದೆ ಇದು ಬೀಜಿಂಗ್ ಎಂದಾಯಿತು). ಇದು ಚಕ್ರವರ್ತಿ ಗ್ಸುವಾನ್‌ಝೋಗ್ ತನ್ನ ರಾಜ್ಯದ ಉತ್ತರದ ಅರ್ಧಬಾಗವನ್ನು ಮಂಗೋಲರಿಗೆ ಬಿಟ್ಟು ತನ್ನ ರಾಜಧಾನಿಯನ್ನು ದಕ್ಷಿಣದ ಕೈಫೆಂಗ್‌ಗೆ ಸಾಗಿಸಿದ.
ಕಾರ-ಖೇತಾನ್ ಖನಾಟೆ
ಬದಲಾಯಿಸಿತೆಮುಜಿನ್ ನಾಯಮನ್ ಒಕ್ಕೂಟದ ಪದಚ್ಯುತ ಖಾನ್ ಕುಚ್‌ಲುಗ್‌ನನ್ನು ಸೋಲಿಸಿ ಅದನ್ನು ಮಂಗೋಲ್ ರಾಷ್ಟ್ರಕ್ಕೆ ಜೋಡಿಸಿಕೊಂಡ ನಂತರ ಅವನು ಪಶ್ಚಿಮಕ್ಕೆ ಸಾಗಿ ಕಾರಾ-ಖೇತಾನಿನ ಖನಾಟೆ (ಕಾರಾ-ಕಿತಾಯ್ ಎಂದು ಕೂಡಾ ಹೆಸರಾಗಿದೆ)ಯನ್ನು ನೆಲೆಮಾಡಿಕೊಂಡ. ಗೆಂಘಿಸ್ ಖಾನ್ ಕಾರಾ ಖೇತಾನ್ ಖನಾಟೆಯನ್ನು ವಶಮಾಡಿಕೊಂಡು ಕುಚ್‌ಲುಗ್‌ನನ್ನು ಸೋಲಿಸಲು, ಬಹುಶಃ ಅವನನ್ನು ಅಧಿಕಾರದಿಂದ ಕೆಳಗಿಳಿಸಲು ನಿರ್ಧರಿಸಿದ. ಈ ವೇಳೆಗೆ ಚೀನಾದಲ್ಲಿ ಪಶ್ಚಿಮ ಗ್ಸಿಯಾ ಮತ್ತು ಜಿನ್ ವಂಶಸ್ಥರ ಮೇಲೆ ನಿರಂತ ಹತ್ತು ವರ್ಷಗಳ ಸೇನಾ ಕಾರ್ಯಾಚರಣೆ ನಡೆಸಿದ್ದ ಮಂಗೋಲ್ ಸೇನಾಪಡೆ ದಣಿದಿತ್ತು. ಆದ್ದರಿಂದ ಗೆಂಘಿಸ್ ಖಾನ್ ತನ್ನ ಯುವ ಸೇನಾನಾಯಕ "ಬಾಣ" ಎಂದು ಹೆಸರುವಾಸಿಯಾಗಿದ್ದ ಜೆಬೆಯ ನಾಯಕತ್ವದಲ್ಲಿ ಕೇವಲ ಎರಡು ತುಮೆನ್ (೨೦,೦೦೦ ಸೈನಿಕರು)ಗಳನ್ನು ಕುಚ್‌ಲುಗ್‌ನ ಮೇಲೆ ದಂಡೆತ್ತಲು ಕಳುಹಿಸಿದ.
ಅಷ್ಟು ಸಣ್ಣ ಪ್ರಮಾಣದ ಸೈನಿಕರಿದ್ದ ಮಂಗೋಲ್ ದಾಳಿಕೋರರು ತಮ್ಮ ತಂತ್ರೋಪಾಯಗಳನ್ನು ಬದಲಾಯಿಸಿಕೊಂಡು ಕುಚ್‌ಲುಗ್‌ನ ಬೆಂಬಲಿಗರ ನಡುವೆ ಆಂತರಿಕ ದಂಗೆಯ ಕಿಡಿಉ ಹೊತ್ತಿಸ ತೊಡಗಿದರು, ಇದರಿಂದ ಕಾರಾ ಖೇತಾನ್ ಖವಾಟಿ ಮಂಗೋಲರ ಆಕ್ರಮಣಕ್ಕೆ ಈಡಾಗತೊಡಗಿತ್ತು, ಇದರಿಂದ ಕಷ್ಗರ್ ಪಶ್ಚಿಮವನ್ನು ಕುಚ್‌ಲುಗ್ ಸೈನಿಕರು ಸೋತರು. ಕುಚ್‌ಲುಗ್ ಮತ್ತೆ ತಪ್ಪಿಸಿಕೊಂಡ, ಆದರೆ ಜೆಬ್‌ನ ಸೈನ್ಯ ಅವನನ್ನು ಹಿಡಿದು ಹತ್ಯೆ ಮಾಡಿತು. ಕಾರಾ-ಖೇತಾನ್ ಖನಾಟಿಯ ಸೋಲಿನ ಫಲಿತಾಂಶದಿಂದ ೧೨೧೮ರ ವೇಳೆಗೆ ಮಂಗೋಲ್ ಚಕ್ರಾಧಿಪತ್ಯ ಮತ್ತು ಅದರ ಹಿಡಿತ ಪಶ್ಚಿಮದಲ್ಲಿ ಬಹುದೂರದ ಬಲ್ಖಾಶ್ ಸರೋವರದ ತನಕ, ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರ ಮತ್ತು ಪರ್ಷಿಯಾದ ಕೊಲ್ಲಿಯನ್ನು ತಾಕುತ್ತಿದ್ದ ಖ್ವಾರೆಝ್ಮಿಯಾ (ಖ್ವಾರೆಝ್ಮಿದ್ ಚಕ್ರಾಧಿಪತ್ಯ) ಎಂಬ ಮುಸ್ಲಿಮ್ ರಾಜ್ಯ ಮತ್ತು ದಕ್ಷಿಣದಲ್ಲಿ ಅರೇಬಿಯನ್ ಸಮುದ್ರದ ತನಕ ವಿಸ್ತರಿಸಿಕೊಂಡಿತ್ತು.
ಖ್ವಾರೆಝ್ಮಿಯನ್ ಚಕ್ರಾಧಿಪತ್ಯ
ಬದಲಾಯಿಸಿ೧೨೦೦ರ ಪ್ರಾರಂಭದಲ್ಲಿ ಖ್ವಾರೆಝ್ಮಿಯನ್ ಪ್ರಭುತ್ವವನ್ನು ಅಲ ಅದ್-ದಿನ್ ಮುಹಮ್ಮದ್ ಎಂಬ ಷಾ ಆಳುತ್ತಿದ್ದ. ರೇಷ್ಮೆ ಮಾರ್ಗವನ್ನು ಬಳಸಿಕೊಂಡು ಖ್ವಾರೆಝ್ಮಿಯಾದೊಂದಿಗೆ ವ್ಯಾಪಾರ ವಾಣಿಜ್ಯ ನಡೆಸುವ ಸಾಧ್ಯತೆಗಳನ್ನು ಮನಗಂಡ ಗೆಂಘೀಸ್ ಖಾನ್ ಚಕ್ರಾಧಿಪತ್ಯದೊಂದಿಗೆ ಅಧಿಕೃತ ವಾಣಿಜ್ಯ ಒಪ್ಪಂದಗಳನ್ನು ರೂಢಿಸಿಕೊಳ್ಳಲು ಮೊದಲು ೫೦೦ ಜನರ ಕಾರವಾನ್ ಕಳುಹಿಸಿಕೊಟ್ಟ. ಆದರೂ ಕಾರವಾನ್ ಗೂಢಚಾರಿಗಳಿದ್ದಾರೆ, ಇದು ಖ್ವಾರೆಝ್ಮಿಯಾನ್ ವಿರುದ್ಧ ನಡೆದಿರುವ ಪಿತೂರಿಯೆಂದು ಆರೋಪಿಸಿದ ಒಟ್ರಾರ್‌ನ ಖ್ವಾರೆಝ್ವಿಯಾನ್ ನಗರದ ರಾಜ್ಯಪಾಲ ಇನಾಲ್‌ಚುಕ್ ಮಂಗೋಲಿಯಾದಿಂದ ಬಂದ ಕಾರವಾನಿನ ಮೇಲೆ ದಾಳಿ ನಡೆಸಿದ. ನಂತರ ಕಾರವಾನಿನ ಮೇಲೆ ನಡೆಸಿದ ದಾಳಿಗೆ ಪರಿಹಾರ ಕೊಡಲು ನಿರಾಕರಿಸಿ ಅದರಲ್ಲಿದ್ದ ಅಪರಾಧಿಗಳನ್ನು ಹಿಂದಿರುಗಿಸಲು ಒಪ್ಪದಿದ್ದಾಗ ಪರಿಸ್ಥಿತಿ ಮತ್ತಷ್ಟು ಜಟಿಲವಾಯಿತು. ನಂತರ ಗೆಂಘಿಸ್ ಖಾನ್ ಮೂರು ಜನ ರಾಯಭಾರಿಗಳ (ಇಬ್ಬರು ಮಂಗೋಲರು ಮತ್ತು ಒಬ್ಬ ಮುಸ್ಲಿಂ)ನ್ನು ಒಳಗೊಂಡ ಎರಡನೆ ಗುಂಪನ್ನು ರಾಜ್ಯಪಾಲ ಇವಾಲ್‌ಚುಕ್‌ನ ಬದಲು ಷಾನನ್ನೇ ಭೇಟಿ ಮಾಡಲು ಕಳುಹಿಸಿಕೊಟ್ಟ. ಷಾ ಎಲ್ಲ ರಾಯಭಾರಿಗಳ ತಲೆ ಬೋಳಿಸಿ, ಮುಸ್ಲಿಮನ ತಲೆ ಕತ್ತರಿಸಿ ಅವನ ತಲೆಯನ್ನು ಉಳಿದ ರಾಯಭಾರಿಗಳ ಕೈಯಲ್ಲಿ ಹಿಂತಿರುಗಿಸಿದ. ಇದನ್ನ ಮುಖಾಮುಖಿ ಗೆಂಘಿಸ್ ಖಾನ್‌ಗೆ ಆದ ಅಪಮಾನವೆಂದು ಪರಿಗಣಿಸಲಾಯಿತು . ಸಿಟ್ಟಿಗೆದ್ದ ಗೆಂಘಿಸ್ ಖಾನ್ ೨೦೦,೦೦೦ ಸೈನಿಕರ (೨೦ ತುಮೆನ್‌ಗಳು) ತನ್ನ ಸಮರ್ಥ ಸೇನಾ ನಾಯಕರು ಮತ್ತು ಮಕ್ಕಳನ್ನು ಒಳಗೊಂದ ತುಂಬಾ ದೊಡ್ಡ ದಾಳಿ ಮತ್ತು ಸೇನಾ ಕಾರ್ಯಾಚರಣೆಯನ್ನು ಯೋಜಿಸಿದ. ಒಬ್ಬ ದಂಡನಾಯಕ ಮತ್ತು ಕೆಲವು ಸೇನಾ ತುಕಡಿಗಳಾನ್ನು ಚೀನಾದಲ್ಲಿ ಬಿಟ್ಟು ಕುಟುಂಭದ ಸದಸ್ಯರನ್ನು ತನ್ನ ಉತ್ತರಾಧಿಕಾರಿಗಳನ್ನಗಿ ನೇಮಕ ಮಾಡಿ ಒಗೆದೇಯ್‌ನನ್ನು ತನ್ನ ತತ್‌ಕ್ಷಣದ ಉತ್ತರಾಧಿಕಾರಿಯನ್ನಗಿ ನೇಮಿಸಿ ಖ್ವಾರೆಝ್ಮಿಯಾ ಕಡೆ ದಂಡಯಾತ್ರೆ ಕೈಗೊಂಡ.
ದಂಡ ನಾಯಕರು ಮತ್ತು ಮಕ್ಕಳಿದ್ದ ನಾಯಕತ್ವದ ಮಂಗೋಲ್ ಸೇನಾ ಪಡೆ ಖ್ವಾರೆಝ್ಮಿಯನ್ ಚಕ್ರಾಧಿಪತ್ಯದ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಪ್ರವೇಶಿಸಿ ತೈಯನ್ ಶಾನ್ ಪರ್ವತವನ್ನು ದಾಟಿತು. ಅನೇಕ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ಗೆಂಘಿಸ್ ಖಾನ್ ಎಚ್ಚರದಿಂದ ತನ್ನ ಸೇನಾಪಡೆಯನ್ನು ಸಜ್ಜುಗೊಳಿಸಿ ಅದನ್ನು ಮೂರು ತುಕಡಿಗಳಾಗಿ ಭಾಗ ಮಾಡಿದ. ಮೊದಲ ತುಕಡಿಯನ್ನು ಅವನ ಮಗ ಜೋಚಿ ಖ್ವಾರೆಝ್ಮಿಯಾದ ಈಶಾನ್ಯಕ್ಕೆ ಮುನ್ನಡೆಸಿದ. ಜೆಬ್‌ನ ಮುಂದಾಳತ್ವದ ಎರಡನೇ ತುಕಡಿ ಖ್ವಾರೆಝ್ಮಿಯಾ ದ ನೈರುತ್ಯಕ್ಕೆ ಗುಟ್ಟಾಗಿ ನುಗ್ಗಿ ಮೊದಲನೆ ತುಕಡಿಯ ಜೊತೆಗೂಡಿ ಸಮರಕಂಡದ ಮೇಲೆ ಪಿನ್ಸರ್ ದಾಳಿ ನಡೆಸುವುದಾಗಿತ್ತು. ಗೆಂಘಿಸ್ ಖಾನ್ ಮತ್ತು ತೊಲೂಯಿ ನಾಯಕತ್ವದ ಮೂರನೆಯ ತುಕಡಿ ವಾಯುವ್ಯಕ್ಕೆ ಮುನ್ನಡೆದು ಆ ದಿಕ್ಕಿನಿಂದ ಖ್ವಾರೆಝ್ಮಿಯಾ ಮೇಲೆ ದಾಳಿ ನಡೆಸಿದನು.
ವಿವಿಧ ಆಂತರಿಕ ಪರಿಶೀಲನೆ ಮತ್ತು ಸೇನೆಯನ್ನು ಸಣ್ಣ ತುಕಡಿಗಳಾಗಿ ಭಾಗಿಸುವ ಷಾನ ನಿರ್ಧಾರದಿಂದ ಸೇನೆ ವಿವಿಧ ನಗರಗಳಲ್ಲಿ ಕೇಂದ್ರೀಕೃತವಾಗಿತ್ತು. ಸೇನಾಪಡೆಯ ಈ ತುಕಡೀಕರಣ ಖ್ವಾರೆಝ್ಮಿಯಾದ ಸೋಲಿಗೆ ನಿರ್ಣಾಯಕವಾಯಿತು. ದೂರಪ್ರಯಾಣದಿಂದ ದಣಿದಿದ್ದರೂ ಏಕೀಕೃತ ಪ್ರತಿ ದಾಳಿಯನ್ನೇ ಕಾಣದೇ ಸಣ್ಣ ತುಕಡಿಗಳಾನ್ನು ತಕ್ಷಣವೇ ಸೋಲಿಸುವುದು ಮಂಗೋಲರಿಗೆ ಸಾಧ್ಯವಾಯಿತು. ಇನ್ನೂ ಹೆಚ್ಚಿನ ತಂತ್ರಗಾರಿಕೆ ಮತ್ತು ಉಪಾಯವನ್ನು ನೆಚ್ಚಿಕೊಂಡ ಮಂಗೋಲ್ ಸೇನೆ ಒತ್ರಾರ್ ನಗರವನ್ನು ಹಠಾತ್ತನೆ ಆಕ್ರಮಿಸಿಕೊಂಡಿತು. ಗೆಂಘಿಸ್ ಖಾನ್ ಹಲವಾರು ದೇಶವಾಸಿಗಳಾನ್ನು ನೇಣುಹಾಕಲು ಆದೇಶಿಸಿದ, ತನ್ನ ಕೃತ್ಯಗಳಿಗೆ ಪ್ರತಿದಂಡನೆಯಾಗಿ ಇನಾಲ್ಚುಖ್‌ನ ಕಿವಿ ಮತ್ತು ಕಣ್ಣುಗಳಿಗೆ ಕರಗಿದ ಬೆಳ್ಳಿ ಹಾಕಿ ಕೊಂದು ಹಾಕಿದ. ಕಾಳಗ ಮುಗಿಯುವ ವೇಳೆಗೆ ಷಾ ಶರಣಾಗುವ ಬದಲು ತಲೆಮರೆಸಿಕೊಂಡ. ಗೆಂಘಿಸ್ ಖಾನ್ ಎರಡು ವರ್ಷಗಳ ಕಾಲಾವಧಿ ಮತ್ತು ೨೦,೦೦೦ ಸೈನಿಕರನ್ನು ಒದಗಿಸಿ ಆತನನ್ನು ಭೇಟಿಮಾಡಿ ತರುವಂತೆ ಸುಬುತಾಯ್ ಮತ್ತು ಜೆಬ್‌ಗೆ ಆದೇಶಿಸಿದ. ತನ್ನದೇ ಚಕ್ರಾಧಿಪತ್ಯದ ಪುಟ್ಟ ದ್ವೀಪವೊಂದರಲ್ಲಿ ಷಾ ನಿಗೂಢವಾಗಿ ಸತ್ತುಹೋದ.
ಮಂಗೋಲರ ಈ ಆಕ್ರಮಣ ಅವರದೇ ಆದ ಮಾದರಿಗಳಿಂದ ನೋಡಿದರೂ ಅಮಾನುಷ. ರಾಜಧಾನಿ ಸಮರಕಂಡ್ ತಮ್ಮ ವಶವಾದ ನಂತರ ಅಳಿದುಳಿದ ಮನುಷ್ಯರೊಂದಿಗೆ ಅದನ್ನು ಬುಖಾರಾಗೆ ವರ್ಗಾಯಿಸಲಾಯಿತು. ಅಳಿದುಳಿದ ಖ್ವಾರೆಝ್ಮಿದ್ ಚಕ್ರಾಧಿಪತ್ಯವನ್ನು ಅದರ ಅದ್ಧೂರಿ ಕಟ್ಟಾಡಗಳಾಷ್ಟೇ ಅಲ್ಲ, ಸಮಸ್ತ ನಗರ ಮತ್ತು ವಿಶಾಲವಾದ ಹೊಲ ತೋಟಗಳನ್ನು ಸಂಪೂರ್ಣ ನಾಶಮಾಡುವಂತೆ ಗೆಂಘಿಸ್ ಖಾನ್ ತನ್ನಿಬ್ಬರು ದಂಡನಾಯಕರಿಗೆ ವಹಿಸಿಕೊಟ್ಟ. ಇರುವ ಕಥೆಗಳ ಪ್ರಕಾರ ಗೆಂಘಿಸ್ ಯಾವ ಮಟ್ಟಕ್ಕೆ ಹೋದನೆಂದರೆ ಖ್ವಾರೆಝ್ಮಿದ್ ಚಕ್ರವರ್ತಿಯ ಜನ್ಮಸ್ಥಳದ ಹತ್ತಿದ ಹರಿಯುತ್ತಿದ್ದ ನದಿಯನ್ನು ಬೇರೆಡೆಗೆ ತಿರುಗಿಸಿ ಅದನ್ನ ನಕಾಶೆಯಿಂದಲೇ ಅಳಿಸಿ ಹಾಕಿಬಿಟ್ಟ.
ಹತ್ತಿರದ ನಗರದ ಬೆಂಬಲದಿಂದ ಉತ್ತರಾಧಿಕಾರಿ ಷಾ ಜಲಾಲ್ ಅಲ್-ದಿನ್ ತನ್ನ ತಂದೆಯ ಸೇನೆಯೊಂದಿಗೆ ಮಂಗೋಲರೊಂದಿಗೆ ಅನೇಕ ಸಲ ಕಾದಾಡಿದ. ಏನೇ ಆದರೂ ಆಂತರಿಕ ವಿವಾದಗಳು ಸೇನಾದಳವನ್ನು ಒಡೆದು ಚೂರು ಮಾಡಿದವು, ಮತ್ತೊಂದು ವಿನಾಶಕಾರಿ ಸೋಲಿನ ನಂ��ರ ಬುಖಾರ ಬಿಟ್ಟು ತೆರಳುವಂತೆ ಅವರ ಮೇಲೆ ಒತ್ತಡವಿತ್ತು, ಇದು ಖ್ವಾರೆಝ್ಮಿದ್ ಚಕ್ರಾಧಿಪತ್ಯದ ಅಂತ್ಯ.
ಈ ವೇಳೆಗೆ ಗೆಂಘಿಸ್ ಖಾನ್ ತನ್ನ ಸೇನಾದಳ ಅಲಿಂದ ಹೊರಡುವ ಮೊದಲು ತನ್ನ ಮೂರನೆಯ ಮಗ ಒಗೆದೇಯ್‌ನನ್ನು ಉತ್ತರಾಧಿಕಾರಿಯಾಗಿ ನೇಮಕಮಾಡಿ ಮುಂದಿನ ಖಾನ್ ತನ್ನ ಉತ್ತರಾಧಿಕಾರಿಯಾಗಬೇಕೆಂದು ಸೂಚಿಸಿದ್ದ. ಗೆಂಘಿಸ್ ಖಾನ್ ಖ್ವಾರೆಝ್ಮಿದ್ ಚಕ್ರಾಧಿಪತ್ಯದ ಪಶ್ಚಿಮದಲ್ಲಿ ಯುದ್ಧ ಮಾಡುತ್ತಿದ್ದಾಗ ತನ್ನ ಅತಿ ಹೆಚ್ಚು ನಂಬಿಕಸ್ಥ ದಂಡನಾಯಕ ಮುಖಾಲಿಯನ್ನು ಜಿನ್ ಚೀನಾದಲ್ಲಿ ಮಂಗೋಲ್ ಸೈನಿಕ ಪಡೆಗಳ ಮಹಾದಂಡನಾಯಕನನ್ನಾಗಿ ನೇಮಿಸಿದ್ದ.
ಜಾರ್ಜಿಯಾ ಮತ್ತು ವೊಲ್ಗಾ ಬಲ್ಗೇರಿಯಾ
ಬದಲಾಯಿಸಿಮಂಗೋಲ್ ಆಕ್ರಮಣದ ಪರಿಣಾಮವಾಗಿ ಜಾರ್ಜಿಯಾ.Copyright©೨೦೦೪ ಆಂಡ್ರು ಆಂಡರ್ಸನ್]]
೧೨೨೦ರಲ್ಲಿ ಖ್ವಾರೆಝ್ಮಿಯನ್ ಚಕ್ರಾಧಿಪತ್ಯದ ಸೋಲಿನ ನಂತರ ಗೆಂಘಿಸ್ ಖಾನ್ ಮಂಗೋಲಿಯಾದ ಮೈದಾನಕ್ಕೆ ಮರಳಲು ತನ್ನ ಸೈನ್ಯವನ್ನು ಪರ್ಷಿಯಾ ಮತ್ತು ಆರ್ಮೇನಿಯಾದಲ್ಲಿ ಸೇರಿಸಿದ. ಸುಬುತಾಯ್‌ನ ಸಲಹೆಯ ಮೇರೆಗೆ ಮಂಗೋಲ್ ಸೈನ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಪ್ರಮುಖ ಸೇನಾದಳದ ನಾಯಕತ್ವ ವಹಿಸಿದ ಗೆಂಘಿಸ್ ಖಾನ್ ಮಂಗೋಲಿಯಾಗೆ ಪ್ರಯಾಣ ಬೆಳೆಸುತ್ತ ಅಪ್ಘಾನಿಸ್ತಾನ ಮತ್ತು ಉತ್ತರ ಭಾರತದ ಮೇಲೆ ದಾಳಿ ಮಾಡಿದರು, ೨೦,೦೦೦ (ಎರಡು ತುಮೆನ್)ಸೈನಿಕರ ಇನ್ನೊಂದು ತುಕಡಿ ಜೆಬ್ ಮತ್ತು ಸುಬುತಾಯ್‌ನ ದಂಡನಾಯಕತ್ವದಲ್ಲಿ ಕಾಕಸಸ್ ಮೇಲೆ ದಂಡೆತ್ತಿ ರಷಿಯಾ ಪ್ರವೇಶಿಸಿತು. ಅವರು ಆರ್ಮೇನಿಯಾ ಮತ್ತು ಅಝೆರ್ಬೈಜಾನ್‌ನ ಒಳಭಾಗಗಳನ್ನು ಹೊಕ್ಕರು. ಜಾರ್ಜಿಯಾವನ್ನು ನಾಶಪಡಿಸಿದ ಮಂಗೋಲರು ಕ್ರಿಮಿಯಾದಲ್ಲಿ ಕಾಫಾದ ಗಿನೋಯಿಸ್ ವಹಿವಾಟು ಕೋಟೆಯನ್ನು ಮುರಿದು ಹಾಕಿ ಕಪ್ಪು ಸಮುದ್ರದ ಹತ್ತಿರ ತೀವ್ರ ಚಳಿಗೆ ಎದುರಾದರು. ಹಿಂತಿರುಗುವ ದಾರಿಯಲ್ಲಿ ಸುಬುತಾಯ್‌ನ ಪಡೆಗಳು ಕಿಪ್ಚಕ್ ಮೇಲೆ ದಾಳಿ ಮಾಡಿದವು, ಈ ವೇಳೆಗೆ ತಮ್ಮ ಪ್ರದೇಶದಲ್ಲಿ ಮಂಗೋಲರ ಕಾರ್ಯಾಚರಣೆಯನ್ನು ತಡೆಯಲು ಹಾಲಿಚ್‌ನ ಧೈರ್ಯವಂತ ಮಸ್ತಿಸ್ಲಾವ್ ಮತ್ತು ಕೀವ್‌ನ ಮಸ್ತಿಸ್ಲಾವ್ III ಇವರ ನಾಯಕತ್ವದ ೮೦,೦೦೦ ಕೀವನ್ ರಸ್‌ರ ಪಡೆ ಎದುರಾಯಿತು, ಆದರೆ ಅದು ತುಂಬಾ ಕೆಟ್ಟದಾಗಿ ಸಂಯೋಜಿಸಿದ್ದ ಸೈನಿಕ ಪಡೆ. ಸುಬುತಾಯ್ ಸ್ಲಾವಿಕ್ ರಾಜಕುಮಾರನ ಹತ್ತಿರ ತನ್ನ ದೂತರನ್ನು ಕಳುಹಿಸಿ ಪ್ರತ್ಯೇಕ ಶಾಂತಿ ಒಪ್ಪಂದವನ್ನು ಕೋರಿದ, ಆದರೆ ಸುಬುತಾಯ್‌ನ ದೂತರನ್ನು ರಾಜಕುಮಾರ ಕೊಂದು ಹಾಕಿದ. ೧೨೨೩ರಲ್ಲಿ ಕಲ್ಕಾ ನದಿ ಹತ್ತಿರ ನಡೆದ ಕಾಳಗದಲ್ಲಿ ಸುಬುತಾಯ್‌ನ ಪಡೆ ಕೀವನ್‌ನ ದೊಡ್ಡಸೈನಿಕ ಪಡೆಗಳನ್ನು ಸೋಲಿಸಿತು, ಆದರೆ ನೆರೆಯ ವೊಲ್ಗಾ ಬಲ್ಗರ್ಸ್‌ನ ವಿರುದ್ಧ ನಡೆದ ಸಮರ ಬೆಂದ್‌ನ ಕಾಳಗದಲ್ಲಿ ಸೋತಿತು.[೧೫] ರಷಿಯಾದ ರಾಜಕುಮಾರ ಶಾಂತಿಗಾಗಿ ಪ್ರಾರ್ಥಿಸಿದ. ಸುಬುತಾಯ್ ಒಪ್ಪಿಕೊಂಡ ಆದರೆ ರಾಜಕುಮಾರನನ್ನು ಕ್ಷಮಿಸುವ ಮನಸ್ಸಿರಲಿಲ್ಲ. ಘನತೆಯ ಮಂಗೋಲ್ ಸಮಾಜದಲ್ಲಿ ಸಾಂಪ್ರದಾಯಿಕ, ಹೀಗಾಗಿ ರಷಿಯಾದ ರಾಜಕುಮಾರನಿಗೆ ರಕ್ತಪಾತರಹಿತ ಸಾವನ್ನು ದಯಪಾಲಿಸಲಾಯಿತು. ಸುಬುತಾಯ್ ತನ್ನ ಇತರೆ ದಂಡನಾಯಕರ ಜೊತೆ ಕುಳಿತು ಊಟ ಮಾಡಲು ಒಂದು ಮರದ ಜಗಲಿ ಮಾಡಿಕೊಂಡಿದ್ದ. ಕೀವ್‌ನ ಮಸ್ತಿಸ್ಲಾವ್ III ಸೇರಿದಂತೆ ಆರು ಜನ ರಷಿಯನ್ ರಾಜಕುಮಾರರನ್ನು ಈ ಜಗಲಿಯ ಕೆಳಗೆ ಹಾಕಿ ಒಸಕಿ ಸಾಯಿಸಲಾಯಿತು.
ಸೆರೆಹಿಡಿದವರಿಂದ ಮಂಗೋಲರು ಬಲ್ಗೇರಿಯಾದಾಚೆಗೆ ಇರುವ ವಿಸ್ತಾರವಾದ ಹಸಿರು ಹುಲ್ಲುಗಾವಲುಗಳು ಹಂಗೇರಿ ಮತ್ತು ಯೂರೋಪನ್ನು ಆಕ್ರಮಿಸಿಕೊಳ್ಳಲು ಅನುವಾಗುತ್ತವೆಂದು ತಿಳಿದರು. ಮಂಗೋಲಿಯಾಗೆ ಮರಳಿ ಬರಬೇಕೆಂದು ಗೆಂಘಿಸ್ ಖಾನ್ ಸುಬುತಾಯ್‌ಗೆ ಸುದ್ದಿ ಕಳುಹಿಸಿದ, ಸಮರ್‌ಕಂಡ್‌ಗೆ ಹಿಂತಿರುಗುವ ದಾರಿಯಲ್ಲಿ ಜೆಬ್ ಮರಣ ಹೊಂದಿದ. ವೊಲ್ಗಾ ಬಲ್ಗರ್ಸ್ ಹೊರತು ಪಡಿಸಿ ತಮ್ಮ ದಾರಿಯಲ್ಲಿ ಸಿಕ್ಕ ಎಲ್ಲಾ ಸೈನಿಕಪಡೆಗಳನ್ನು ಸೋಲಿಸಿ ಸಮಸ್ತ ಕ್ಯಾಸ್ಪಿಯನ್ ಸಮುದ್ರವನ್ನು ಸುತ್ತುಗಟ್ಟಿಕೊಂಡ ಸುಬುತಾಯ್ ಮತ್ತು ಜೆಬ್‌ನ ಈ ಪ್ರಸಿದ್ಧ ಅಶ್ವಸೈನ್ಯದ ದಂಡಯಾತ್ರೆ ಇಂದಿಗೂ ಅಸಾಮಾನ್ಯವಾಗೇ ಉಳಿದು ಬಂದಿದೆ, ಮಂಗೋಲರ ಈ ವಿಜಯ ಯಾತ್ರೆಯ ಸುದ್ಧಿ ಇದರೆ ದೇಶಗಳಿಗೆ ಅದರಲ್ಲೂ ನಿರ್ಧಿಷ್ಟವಾಗಿ ಯೂರೋಪಿಗೆ ಹರಡತೊಡಗಿತು. These two campaigns are generally regarded as reconnaissance campaigns that tried to get the feel of the political and cultural elements of the regions. ೧೨೨೫ ರಲ್ಲಿ ಎರಡೂ ತುಕಡಿಗಳು ಹಿಂತಿರುಗಿದವು. ಈ ದಂಡಯಾತ್ರೆ ದಾರಿಯಲ್ಲಿ ಎದುರಾದ ವಿರೋಧವನ್ನು ನಾಶಮಾಡಿ ಕಟ್ಟ ಕಡೆಯದಾಗಿ ಟ್ರಾನ್ಸೊಗ್ಸಿಯಾನ ಮತ್ತು ಪರ್ಷಿಯಾಗಳನ್ನು ಈಗಾಗಲೇ ದಿಗಿಲು ಹುಟ್ಟಿಸಿರುವ ಚಕ್ರಾಧಿಪತ್ಯಕ್ಕೆ ಸೇರಿಸಿಕೊಂಡಿತು. ಮುಂದೆ ೧೨೩೭ರಲ್ಲಿ ಗೆಂಘಿಸ್ ಖಾನ್‌ನ ಮೊಮ್ಮಗ ಬಾತು ಮತ್ತು ಗೋಲ್ಡನ್ ಹಾರ್ಡೆ ನಾಯಕತ್ವದಲ್ಲಿ ಮಂಗೋಲರು ವೊಲ್ಗಾ ಬಲ್ಗೇರಿಯಾ ಮತ್ತು ಕೀವನ್ ರಸ್‌ರನ್ನು ವಶಪಡಿಸಿಕೊಳ್ಳಾಲು ಹಿಂತಿರುಗಿ ಹೋದರು, ಈ ಸೈನಿಕ ಕಾರ್ಯಾಚರಣೆ ೧೨೪೦ರಲ್ಲಿ ಮುಕ್ತಾಯವಾಯಿತು.
ಪಶ್ಚಿಮ ಗ್ಸಿಯಾ ಮತ್ತು ಜಿನ್ ವಂಶಸ್ಥರು
ಬದಲಾಯಿಸಿಈ ಹಿಂದೆ ಗೆಂಘಿಸ್ ಖಾನ್ ಮತ್ತು ಪ್ರಮುಖ ಸೇನಾದಳ ಖ್ವಾರೆಝ್ಮಿಯನ್ ಮೇಲೆ ದಂಡಯಾತ್ರೆ ಹೊರಟಾಗ ಪಶ್ಚಿಮ ಗ್ಸಿಯಾದ ಟಾಂಗೂಟರ ಹಿಡುವಳಿ ಪ್ರದೇಶದ ಚಕ್ರವರ್ತಿ ಖ್ವಾರೆಝ್ಮಿಯನ್ ಮೇಲಿನ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದ್ದ. ಇದರ ಜೊತೆಗೆ ಪಶ್ಚಿಮ ಗ್ಸಿಯಾ ಮತ್ತು ಸೋತು ಹೋಗಿದ್ದ ಜಿನ್ ವಂಶಸ್ಥರ ಒಕ್ಕೂಟ ರೂಪಿಸಿಕೊಂಡು ಮಂಗೋಲರನ್ನು ಎದುರಿಸಲು ಅವರು ಖ್ವಾರೆಝ್ಮಿಯ ಕಾರ್ಯಾಚರಣೆಯಲ್ಲಿ ತಮ್ಮ ಸಾಮರ್ಥ್ಯ ಕಳೆದು ಕೊಳ್ಳುವುದನ್ನು ಲೆಕ್ಕ ಹಾಕುತ್ತ ಕುಳಿತಿದ್ದರು
೧೨೨೬ರಲ್ಲಿ ಪಶ್ಚಿಮದಿಂದ ಮರಳಿ ಬಂದ ತಕ್ಷಣ ಗೆಂಘೀಸ್ ಖಾನ್ ಟಾಂಗೂಟರ ಮೇಲೆ ಪ್ರತಿದಾಳಿ ಆರಂಭಿಸಿದ. ಅವನ ಸೇನಾಪಡೆಗಳು ಮಿಂಚಿನಂತೆ ಹೈಸೂಯಿ ಗನ್‌ಝಾ ಮತ್ತು ಸುಝೌ ( ಜಿಯಾಗ್ಸು ಪ್ರಾಂತ್ಯದ ಸುಝೌ ಅಲ್ಲ), ಪ್ರಾಂತಗಳನ್ನು ವಶಮಾಡಿಕೊಂಡವು ಮತ್ತು ಚಳಿಗಾಲದ ಸಮಯಕ್ಕೆ ಗ್ಸಿಲಿಯಾಂಗ್ -ಫು ಪ್ರಾಂತವನ್ನು ಗೆದ್ದುಕೊಂಡವು. ಟಾಂಗೂಟರ ದಂಡನಾಯಕನೊಬ್ಬ ಹೆಲಾನ್ಷಾನ್ ಹತ್ತಿರ ಮಂಗೋಲರಿಗೆ ಯುದ್ಧ ಸವಾಲು ಹಾಕಿದ ಆದರೆ ಸುಲಭವಾಗಿ ಸೋತು ಹೋದ. ನವೆಂಬರ್‌ನಲ್ಲಿ ಗೆಂಘಿಸ್ ಟಾಂಗೂಟರ ಲಿಂಗ್‌ಝಾ ನಗರವನ್ನು ದಿಗ್ಭಂಧಿಸಿ, ಟಾಂಗೂಟರ ಪರಿಹಾರ ಪಡೆಗಳನ್ನು ಸೋಲಿಸಿ ಹಳದಿ ನದಿಯನ್ನು ದಾಟಿದ. ದಂತಕಥೆಯೊಂದರ ಪ್ರಕಾರ ಐದು ನಕ್ಷತ್ರಗಳು ಸಾಲುಗಟ್ತಿಕೊಂಡಿರುವುದನ್ನು ಗೆಂಘಿಸ್ ಖಾನ್ ಕಂಡಿದ್ದು ಇಲ್ಲಿ, ಅವನು ಅದನ್ನು ತನ್ನ ವಿಜಯದ ಶಕುನ ಎಂದು ವ್ಯಾಖ್ಯಾನಿಸಿದ.
೧೨೨೭ರಲ್ಲಿ, ಗೆಂಘಿಸ್ ಖಾನ್‌ನ ಸೇನಾದಳ ಟಾಂಗೂಟರ ರಾಜಧಾನಿ ನಿಂಗ್ ಹಿಯಾದ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡಿದರು, ಮುಂದೆ ಲಿಂಟಿಯಾವೊ-ಫು, ಗ್ಸಿನಿಂಗ್ ಪ್ರಾಂತ್ಯಗಳನ್ನು ಧಿಗ್ಭಂದಿಸುತ್ತ ಚೈತ್ರದ ವೇಲೆಗೆ ಗ್ಸಿಂಡು-ಫು ಮತ್ತು ದೆಷುನ್ ಪ್ರಾಂತ್ಯಗಳನ್ನು ಬಹುಬೇಗ ಗೆದ್ದುಕೊಂಡರು. ದೆಷುನ್‌ನಲ್ಲಿ ಟಾಂಗೂಟರ ದಂಡನಾಯಕ ಮಾ ಜಿಯಾನ್ ಲಾಂಗ್ ಅನೇಕ ದಿನಗಳ ಕಾಲ ಪ್ರಬಲ ಪ್ರತಿರೋಧ ತೋರಿದ ಮತ್ತು ದಾಳಿಕೋರರ ವಿರುದ್ಧ ಕಾದಡಲು ತಾವೇ ಖುದ್ದಾಗಿ ನಗರದ ಹೆಬ್ಬಾಗಿಲ ಹತ್ತಿರ ಬಂದ. ಯುದ್ಧದಲ್ಲಿ ಚಿಮ್ಮಿ ಬಂದ ಬಾಣಗಳಿಂದ ಆದ ಗಾಯಗಳಿಂದ ಮಾ ಜಿಯಾನ್‌ಲಾಂಗ್ ಮೃತಪಟ್ಟ. ದೆಷುನ್ ವಶಪಡಿಸಿ ನಂತರ ಗೆಂಘಿಸ್ ಖಾನ್, ಬಿರುಬೇಸಗೆಯಿಂದ ತಪ್ಪಿಸಿಕೊಳ್ಳಲು ಗನ್ಸು ಪ್ರಾಂತ ಕಿಂಗ್ಷುಯಿ ಕೌಂಟಿಯ ಲಿಯೂಪಾನ್ಷಾನ್‌ಗೆ ಸಾಗಿದ. ಟಾಂಗೂಟರ ಹೊಸ ಚಕ್ರವರ್ತಿ ತಕ್ಷಣ ಮಂಗೋಲರಿಗೆ ಶರಣಾದ, ಇದಾದ ನಂತರ ಉಳಿದ ಟಾಂಗೂಟರು ಅಧಿಕೃತವಾಗಿ ಶರಣಾದರು. ಅವರ ಪ್ರತಿರೋಧ ಮತ್ತು ವಂಚನೆಯಿಂದ ಅಸಂತೋಷಿತನಾಗಿದ್ದ ಗೆಂಘೀಸ್ ಖಾನ್ ಇಡೀ ರಾಜಮನೆತನವನ್ನು ಸಾಯಿಸುವಂತೆ ಆದೇಶಿಸಿ ಟಾಂಗೂಟರ ರಾಜವಂಶವನ್ನೇ ಕೊನೆಗೊಳಿಸಿದ.
ಉತ್ತರಾಧಿಕಾರ
ಬದಲಾಯಿಸಿright|thumb|250px|ಗೆಂಘಿಸ್ ಖಾನ್ ಮತ್ತು ಅವನ ನಾಲ್ಕು ಮಕ್ಕಳಲ್ಲಿ ಮೂವರು.
ಗೆಂಘಿಸ್ ಖಾನ್‌ಗೆ ವಯಸ್ಸಾಗಿತ್ತು, ಅವನ ಆಡಳಿತದ ಮುಂದಿನ ವರ್ಷಗಳಲ್ಲಿ ಅವನ ಉತ್ತರಾಧಿಕಾರದ ವಿಷಯ ಚರ್ಚೆಯಾಗುತ್ತಿತ್ತು. ಗೆಂಘಿಸ್ ಖಾನ್‌ನ ಹಿರಿಯ ಮಗ ಜೋಚಿ ತನ್ನ ತಮ್ಮಂದಿರಲ್ಲಿ ಹಿರಿಯನಾಗಿದ್ದರಿಂದ ಮತ್ತು ಅವನ ಜನ್ಮ ರಹಸ್ಯವು ಆ ಕಾಲದ ವಿವದ ತೆರೆಯ ಹಿಂದಿನ ಬಿಸಿಬಿಸಿ ಚರ್ಚಾ ವಿಷಯವಾಗಿತ್ತು. ಪಾರಂಪರಿಕ, ಚಾರಿತ್ರಿಕ ದಾಖಲೆಗಳ ಪ್ರಕಾರ ಜೋಚಿಯ ಜನ್ಮರಹಸ್ಯ ಕುರಿತು ಗಟ್ಟಿ ಧ್ವನಿ ಎತ್ತಿದವನು ಚಗತಾಯ್. ಮಂಗೋಲರ ಗುಪ್ತ ಚರಿತ್ರೆಯ ಪ್ರಕಾರ ಖ್ವಾರೆಝ್ಮಿದ್ ಸಾಮ್ರಾಜ್ಯದ ದಂಡಯಾತ್ರೆಗೆ ಸ್ವಲ್ಪ ಮುಂಚಿತವಾಗಿ ಗೆಂಘಿಸ್ ಖಾನ್‌ನ ಉತ್ತರಾಧಿಕಾರಿಯಾಗಿ ಜೋಚಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲವೆಂದು ಚಗತಾಯ್ ತನ್ನ ತಂದೆ ಮತ್ತು ಸಹೋದರರ ಮುಂದೆ ಘೋಷಿಸಿದ. ಈ ಬಿಗುವಿಗೆ ಪ್ರತಿಕ್ರಿಯೆಯಾಗಿ ಮತ್ತು ಬೇರೆ[೧೬] ಕಾರಣಗಳಿಂದ ಒಗೆದೇಯ್‌ನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಯಿತು.
ಜೋಚಿ
ಬದಲಾಯಿಸಿಜೋಚಿ ೧೨೨೬ರಲ್ಲಿ ತಂದೆಯ ಜೀವಿತ ಕಾಲದಲ್ಲೇ ಸತ್ತು ಹೋದ. ಕೆಲವು ವಿಧ್ವಾಂಸರು, ಅದರಲ್ಲೂ ರಾಚ್ನೆವ್‌ಸ್ಕಿ, ಗೆಂಘಿಸ್ ಖಾನ್‌ನ ಆಜ್ಞೆಯ ಮೇರೆಗೆ ಜೋಚಿಗೆ ಗುಟ್ಟಾಗಿ ವಿಷ ಉಣಿಸಿರುವ ಸಾಧ್ಯತೆಗಳಾ ಕುರಿತು ಹೇಳಿದ್ದಾನೆ. ರಶೀದ್ ಅಲ್-ದಿನ್ ವರದಿ ಮಾಡಿರುವಂತೆ, ೧೨೨೩ರಲ್ಲಿ ಮಹಾನ್ ಖಾನ್ ತನ್ನ ಮಕ್ಕಳನ್ನು ದಂಡಯಾತ್ರೆಗೆ ಕಳುಹಿಸಿದ, ಎಲ್ಲ ಮಕ್ಕಳೂ ಆಜ್ಞೆಯನ್ನು ಪರಿಪಾಲಿಸಿದಾಗ ಜೋಚಿ ಖೊರಾಸಾನ್‌ನಲ್ಲೇ ಉಳಿದು ಕೊಂಡ. ಜುಝ್‌ಜಾನಿ ಹೇಳುವಂತೆ ಉರ್ಗೆಂಚ್ ಅನ್ನು ದಿಗ್ಭಂಧಿಸುವ ವಿಷಯದಲ್ಲಿ ಜೋಚಿ ಮತ್ತು ಸಹೋದರರ ನಡುವಿನ ಜಗಳದಲ್ಲಿ ಪರಸ್ಪರ ವಿರೋಧ ಕಾಣಿಸಿಕೊಂಡಿದೆ. ಉರ್ಗೆಂಚ್ ತನಗಾಗಿ ಬಿಟ್ಟುಕೊಟ್ಟಿರುವ ಪ್ರಾಂತ್ಯಕ್ಕೆ ಸೇರಿದ್ದು ಎಂಬಂತೆ ಜೋಚಿ ಅದನ್ನು ನಾಶದಿಂದ ತಡೆಗಟ್ಟಲು ಪ್ರಯತ್ನಿಸಿದ್ದಾನೆ. ಅವನ ಈ ಕತೆಯನ್ನು ಜೋಚಿಯ ಈ ಪ್ರಶ್ನಾತೀತ ಹೇಳಿಕೆಯೊಂದಿಗೆ ಮುಗಿಸುತ್ತಾನೆ: " ಇಷ್ಟೊಂದು ಜನರ ಹತ್ಯೆ ಮಾಡಿ, ಭೂ ಪ್ರದೇಶವನ್ನು ಹಾಳುಗೆಡವಲು ಗೆಂಘಿಸ್ ಖಾನ್‌ಗೆ ಹುಚ್ಚು ಹಿಡಿದಿದೆ, ಭೇಟಿಮಾಡುವಾಗ ನಾನು ನನ್ನ ತಂದೆಯನ್ನು ಕೊಂದರೆ ಅದೊಂದು ಸೇವೆ, ಮೊಹಮ್ಮದ್ ಈ ಭೂಮಿಗೆ ಜೀವ ತಂದ ಮತ್ತು ಮುಸ್ಲಿಮರಿಗೆ ಬೆಂಬಲ ಕೊಟ್ಟ" ಎಂದು ಹೇಳಿ ಸುಲ್ತಾನ್ ಮೊಹಮ್ಮದನೊಂದಿಗೆ ಬಾಂಧವ್ಯ ಬೆಳೆಸಿಕೊಂಡ. ಮಗನ ಈ ಹೇಳಿಕೆಗೆ ಪ್ರತಿಯಾಗಿ ಗೆಂಘಿಸ್ ಖಾನ್ aನಿಗೆ ಗುಟ್ಟಾಗಿ ವಿಷ ಉಣಿಸಲು ಆಜ್ಞಾಪಿಸಿದನು ಎಂದು ಜುಝ್ನಾನಿ ಹೇಳಿಕೊಳ್ಳುತ್ತಾನೆ. ಆದರೆ ಸುಲ್ತಾನ್ ಮೊಹಮದ್ ೧೨೨೩ರಲ್ಲೇ ಮೃತಪಟ್ಟಿದ್ದರಿಂದ ಈ ಕಥೆಯ ನಿಖರತೆ ಪ್ರಶ್ನಾರ್ಹ.[೧೭]
ತನ್ನ ಮರಣದ ನಂತರ ತನ್ನ ಮಕ್ಕಳ ನಡುವಿನ ಘರ್ಷಣೆ( ನಿರ್ಧಿಷ್ಟವಾಗಿ ಚಗತಾಯ್ ಮತ್ತು ಜೋಚಿ ನಡುವೆ)ಯ ಸಾಧ್ಯತೆಗಳ ಬಗ್ಗೆ ಚಿಂತಿತನಾಗಿದ್ದ ಗೆಂಘಿಸ್ ಖಾನ್ ತನ್ನ ಚಕ್ರಾಧಿಪತ್ಯವನ್ನು ಭಾಗಮಾಡಿಕೊಟ್ಟು ಅವರನ್ನೆಲ್ಲ ತಮ್ಮದೇ ಆದ ರೀತಿಯಲ್ಲಿ ಖಾನ್‌ಗಳನ್ನಾಗಿ ಮಾಡಿ ತನ್ನ ಉತ್ತರಾಧಿಕಾರಿಯಾಗಿ ಒಬ್ಬ ಮಗನನ್ನು ನೇಮಕ ಮಾಡುವುದೆಂದು ನಿರ್ಧರಿಸಿದ. ಜೋಚಿ ತನ್ನ ತಂದೆಯ ಉತ್ತರಾಧಿಕಾರಿಯಾದರೆ ಅವನನ್ನು ಹಿಂಬಾಲಿಸುವುದಿಲ್ಲ ಎಂಬ ಹೇಳಿಕೆಯ ಕಾರಣವಾಗಿ ಚಗತಾಯ್ ತನ್ನ ಸಿಟ್ಟು ಮತ್ತು ಒರಟು ವರ್ತನೆಯಿಂದ ದೃಢ ಮನಸ್ಕನಲ್ಲ ಎಂದು ಪರಿಗಣಿಸಲಾಗಿತ್ತು. ಕಿರಿಮಗ ತೊಲೂಯಿ ಖಂಡಿತವಾಗಿ ಗೆಂಘಿಸ್ ಖಾನನ ಉತ್ತರಾಧಿಕಾರಿಯಾಗಲು ಸಾಧ್ಯವಿರಲಿಲ್ಲ ಏಕೆಂದರೆ ಅವನು ತುಂಬಾ ಕಿರಿಯ ಮತ್ತು ಮಂಗೋಲ್ ಸಂಸ್ಕೃತಿಯಲ್ಲಿ ಅವರ ವಯಸ್ಸಿನ ಕಾರಣವಾಗಿ ಕಿರಿಮಕ್ಕಳಿಗೆ ಅಗಾಧ ಜವಾಬ್ಧಾರಿ ಕೊಡುವುದು ವಾಡಿಕೆಯಾಗಿರಲಿಲ್ಲ. ಜೋಚಿ ತನ್ನ ಉತ್ತರಾಧಿಕಾರಿಯಾದರೆ, ಚಗತಾಯ್ ಅವನ ಮೇಲೆ ಯುದ್ಧ ನಿರತವಾಗಿ ಚಕ್ರಾಧಿಪತ್ಯವನ್ನು ಉರುಳಿಸುವ ಸಾಧ್ಯತೆಗಳಿದ್ದವು. ಆದ್ದರಿಂದ ಪಟ್ಟವನ್ನು ಒಗೆದೆಯ್‌ಗೆ ಬಿಟ್ಟುಕೊಡಲು ಗೆಂಘಿಸ್ ಖಾನ್ ನಿರ್ಧರಿಸಿದನು. ಒಗೆದೆಯ್ ಗುಣದಲ್ಲಿ ನಂಬಲರ್ಹವಾದ, ಇದ್ದುದರಲ್ಲಿ ದೃಢಮನಸ್ಕನಾದ ಸರಳ ನಡವಳಿಕೆಯ ಸಹೋದರರ ನಡುವಿನ ಪರಿಸ್ಥಿತಿಯನ್ನು ನಿಭಾಯಿಸ ಬಲ್ಲ ತಟಸ್ಥ ಅಭ್ಯರ್ಥಿಯಾಗಿ ಗೆಂಘಿಸ್ ಖಾನ್‌ಗೆ ಕಾಣುತ್ತಿದ್ದ.
ಸಾವು ಮತ್ತು ಸಮಾಧಿ
ಬದಲಾಯಿಸಿ( ಮಂಗೋಲರ ಗುಪ್ತ ಚರಿತ್ರೆಯ ಪ್ರಕಾರ) ೧೨೨೭ರಲ್ಲಿ ಟಾಂಗೂಟರನ್ನು ಸೋಲಿಸಿದ ನಂತರ ಗೆಂಘಿಸ್ ಖಾನ್ ಮೃತಪಟ್ಟ. ಅವನ ಸಾವಿನ ಕಾರಣ ಅನಿಶ್ಚಿತವಾದದ್ದು ಮತ್ತು ಅದರ ಬಗ್ಗೆ ಅನೇಕ ಊಹಾಪೋಹಗಳಿವೆ. ಕೆಲವು ಚರಿತ್ರಕಾರರು ಹೇಳುವ ಪ್ರಕಾರ ಇಂದಿನ ಈಜಿಪ್ಟ್‌ನಲ್ಲಿ ಅವನು ಕುದುರೆ ಮೇಲೆ ಕುಳಿತು ಯುದ್ಧ ನಿರತನಾಗಿದ್ದಾಗ ಯುದ್ದದ ಗಾಯಗಳಿಂದ ಪ್ರಜ್ಞೆ ತಪ್ಪಿ ಬಿದ್ದು ಕೊನೆಗೆ ಸತ್ತು ಹೋದ.[೧೮]
ಇತರರು ಹೇಳುವ ಪ್ರಕಾರ ಅವನು ದೀರ್ಘಕಾಲದ ನ್ಯುಮೋನಿಯಾ ಖಾಯಿಲೆಯಿಂದ ಮೃತನಾದ. ಗಾಲಿಕನ್-ವಲ್ಹೀನಿಯನ್ ಕಥಾನಕದ ಪ್ರಕಾರ ಅವನನ್ನು ಯುದ್ಧದಲ್ಲಿ ಟಾಂಗೂಟರು ಕೊಂದು ಹಾಕಿದರು. ಮುಂದಿನ ಮಂಗೋಲಿಯ ಕಥಾನಕವೊಂದು ಗೆಂಘಿಸ್ ಖಾನೆನ ಸಾವನ್ನು ಯುದ್ಧದಲ್ಲಿ ಗೆದ್ದು ತಂದ ಟಾಂಗೂಟರ ಚೆಲುವೆಗೆ ತಳುಕು ಹಾಕುತ್ತದೆ. ೧೭ನೆಯ ಶತಮಾನದ ಪ್ರಾರಂಭಿಕ ಕಾಲದ ಕಥಾನಕವೊಂದು ರಾಣಿ ತನ್ನ ಯೋನಿಯಲ್ಲಿ ಅಡಗಿಸಿಟ್ಟಿದ್ದ ಪ್ಲೈಯರ್‌ಗಳಿಂದ ಈ ಮಹಾನ್ ವ್ಯಕ್ತಿ ಗಾಯಗೊಂಡು ಸತ್ತನೆಂದು ಹೇಳುತ್ತದೆ. ಈ ಕಥಾನಕವನ್ನು ಸಂದೇಹ ಪಟ್ಟಿರುವ ಕೆಲವು ಮಂಗೋಲ್ ಲೇಖಕರು ಇದು ವಿರೋಧಿ ಒಯಿರಾಡ್‌ಗಳು ಹುಟ್ಟು ಹಾಕಿರುವ ಕಥೆ ಎಂದು ಹೇಳುತ್ತಾರೆ.[೧೯]
ತನ್ನ ಬುಡಕಟ್ಟಿನ ಪದ್ಧತಿಗಳ ಪ್ರಕಾರ ತನ್ನನ್ನು ಯಾವುದೇ ಗುರುತು ಮಾಡದೇ ಸಮಾಧಿ ಮಾಡಬೇಕೆಂದು ಗೆಂಘಿಸ್ ಖಾನ್ ಇಚ್ಛಿಸಿದ್ದ. ಅವನು ಸತ್ತ ನಂತರ ಮೃತದೇಹವನ್ನು ಮಂಗೋಲಿಯಾಗೆ ಬಹುಶಃ ಅವನ ಜನ್ಮ ಸ್ಥಳವಾದ ಖೆಂಟಿ ���ಯ್‌ಮಾಗ್‌ಗೆ ಹಿಂತಿರುಗಿಸಲಾಯಿತು, ಕೆಲವರು ಊಹಿಸುವ ಪ್ರಕಾರ ಬುರ್ಖಾನ್ ಖಾಲ್‌ಮನ್ ಪರ್ವತ (ಕೆಂಟಿ ಪರ್ವತ ಸಾಲುಗಳ ಭಾಗ)ದ ಒನಾನ್ ನದಿಯ ಹತ್ತಿರ ಎಲ್ಲೋ ಅವನನ್ನು ಸಮಾಧಿ ಮಾಡಲಾಯಿತು. ದಂತಕಥೆಯೊಂದರ ಪ್ರಕಾರ ಅವನನ್ನು ಅಂತಿಮವಾಗಿ ಎಲ್ಲಿ ಸಮಾಧಿ ಮಾಡಲಾಯಿತು ಎಂಬುದನ್ನು ಮುಚ್ಚಿಡಲು ಶವ ಸಂಸ್ಕಾರದಳದವರು ದಾರಿಯಲ್ಲಿ ಯಾರೇ ಸಿಕ್ಕರೂ, ಏನೇ ಸಿಕ್ಕರೂ ಕೊಂದು ಹಾಕಿದರು. ಅವನು ಸತ್ತ ಅನೇಕ ವರ್ಷಗಳಾ ನಂತರ ಕಟ್ಟಿದ ಗೆಂಘಿಸ್ ಖಾನ್ ಸಮಾಧಿ, ಅವನ ಸ್ಮಾರಕವೇ ಹೊರತು ಸಮಾಧಿ ಮಾಡಿದ ಸ್ಥಳವಲ್ಲ.
೬ ಅಕ್ಟೋಬರ್, ೨೦೦೪ರಲ್ಲಿ ಜಪಾನ್ ಮತ್ತು ಮಂಗೋಲಿಯಾದ ಸಂಯುಕ್ತ ಪುರಾತತ್ವ ಉತ್ಖನನದಿಂದ ಹೊರತೆಯಲಾದದ್ದನ್ನು ಗೆಂಘಿಸ್ ಖಾನ್‌ನ ಮಂಗೋಲಿಯಾದ ಗ್ರಾಮೀಣ ಅರಮನೆಯೆಂದು ನಂಬಲಾಗಿದೆ, ಎದು ಈ ಚಕ್ರವರ್ತಿಯ ದೀರ್ಘಕಾಲದ ಸಮಾಧಿ ಸ್ಥಳವನ್ನು ಪತ್ತೆ ಹಚ್ಚುವ ಸಾಧ್ಯತೆಗಳಿಗೆ ಎಡೆ ಮಾಡಿಕೊಡುತ್ತದೆ.[೨೦] ಜನಪದದ ಪ್ರಕಾರ ಪತ್ತೆ ಹಚ್ಚಲು ಸಾಧ್ಯವಾಗದಿರುವಂತೆ ಅವನ ಸಮಾಧಿ ಮೇಲಕ್ಕೆ ನದಿಯೊಂದನ್ನು ದಿಕ್ಕು ತಪ್ಪಿಸಿ ಹರಿಸಲಾಯಿತು (ಸುಮೇರಿಯನ್ ರಾಜ ಉರುಕ್‌ನ ಗಿಲ್ಗಮೇಶ್ ಮತ್ತು ಹುಣ್‌ನ ಅತಿಲ್ಲಾ ಸಮಾಧಿ ಮೇಲೆ ಹರಿಸಿದಂತೆ). ಇತರೆ ಕಥೆಗಳು ಹೇಳುವ ಪ್ರಕಾರ ಅವನ ಸಮಾಧಿಯನ್ನು ಅನೇಕ ಕುದುರೆಗಳಿಂದ ತುಳಿಸಿದರು, ನಂತರ ಆ ಸ್ಥಳದ ಮೇಲೆ ಗಿಡಗಳನ್ನು ನೆಡಲಾಯಿತು, ಸಮಾಧಿ ಸ್ಥಳವನ್ನು ಮುಚ್ಚಿಹಾಕಲು ಹಿಮಗಡ್ಡೆಗಳು ತಮ್ಮ ಪಾತ್ರ ನಿರ್ವಹಿಸಿದವು.
ಗೆಂಘಿಸ್ ಖಾನ್ ತನ್ನ ಹಿಂದೆ ೧೨೯,೦೦೦ ಸೈನಿಕರ ಸೇನಾದಳವನ್ನು ಬಿಟ್ಟು ಹೋಗಿದ್ದ; ೨೮,೦೦೦ ಸೈನಿಕರನ್ನು ಅವನ ಅನೇಕ ಸಹೋದರರು ಮತ್ತು ಮಕ್ಕಳಿಗೆ ಕೊಡಲಾಯಿತು. ಅವನ ಅತ್ಯಂತ ಕಿರಿಮಗ ತೊಲೂಯಿ ೧೦೦,೦೦೦ ಕ್ಕಿಂತ ಹೆಚ್ಚು ಸೈನಿಕರನ್ನು ಪಡೆದುಕೊಂಡ. ಈ ಸೇನಾದಳ ಪ್ರತಿಷ್ಠಿತ ಮಂಗೋಲಿಯನ್ ಅಶ್ವಸೈನ್ಯವನ್ನು ಒಳಗೊಂಡಿತ್ತು. ಪರಂಪರೆ ಪ್ರಕಾರ ತಂದೆಯ ಆಸ್ತಿಪಾಸ್ತಿಗಳು ಕಿರಿಮಗನಿಗೆ ಸಲ್ಲುತ್ತವೆ. ಜೋಚಿ, ಚಗತಾಯ್, ಒಗೆದೆಯ್ ಖಾನ್, ಮತ್ತು ಕುಲಾನ್‌ನ ಮಗ ಗೆಲೆಜಿಯನ್ ತಲಾ ೪,೦೦೦ ಸೈನಿಕರನ್ನು ಪಡೆದುಕೊಂಡರು. ಆತನ ತಾಯಿ ಮತ್ತು ಸಹೋದರರ ವಂಶಸ್ಥರು ತಲಾ ೩,೦೦೦ ಸೈನಿಕರನ್ನು ಪಡೆದುಕೊಂಡರು.
ಮಂಗೋಲ್ ಸಾಮ್ರಾಜ್ಯ
ಬದಲಾಯಿಸಿರಾಜನೀತಿ ಮತ್ತು ಅರ್ಥಶಾಸ್ತ್ರ
ಬದಲಾಯಿಸಿಮಂಗೋಲ್ ಚಕ್ರಾಧಿಪತ್ಯದ ಆಡಳಿತ ನಾಗರೀಕರು, ಸೇನೆ ಮತ್ತು ಗೆಂಘಿಸ್ ಖಾನ್ ರೂಪಿಸಿದ ಯಸ್ಸಾ ಸಂಹಿತೆ ಮೂಲಕ ನಡೆಯುತ್ತಿತ್ತು .
ಮಂಗೋಲ್ ಚಕ್ರವರ್ತಿ ಆಡಳಿತ ವಲಯದಲ್ಲಿ ಬುಡಕಟ್ಟು ಮತ್ತು ಜನಾಂಗೀಯತೆಗಳ ಪ್ರಾಮುಖ್ಯತೆಗೆ ಒತ್ತು ಕೊಡಲಿಲ್ಲ, ಬದಲಾಗಿ ಯೋಗ್ಯತಾ ಶಾಹಿ ಸಮಾಜವನ್ನು ಅಳವಡಿಸಿಕೊಂಡ. ಗೆಂಘಿಸ್ ಖಾನ್ ಮತ್ತು ಅವನ ಕುಟುಂಬ ಇದಕ್ಕೆ ಹೊರತಾಗಿತ್ತು. ಮಂಗೋಲ್ ಚಕ್ರಾಧಿಪತ್ಯ ತನ್ನ ವಿಸ್ತಾರದ ಹಾಗೇ ಚರಿತ್ರೆಯಲ್ಲಿ ಜನಾಂಗೀಯ ಮಾತು ಸಾಂಸ್ದೃತಿಕ ವೈವಿಧ್ಯತೆಗಳನ್ನು ಒಳಗೊಂಡ ಚಕ್ರಾಧಿಪತ್ಯಗಳಲ್ಲಿ ಒಂದು. ಚಕ್ರಾಧಿಪತ್ಯದ ಅನೇಕ ಅಲೆಮಾರಿ ದೇಶವಾಸಿಗಳು, ಅಂದರೆ ಮಂಗೋಲರು , ಟರ್ಕರು ತಮ್ಮ ಸೇನಾ ಮತ್ತು ನಾಗರೀಕ ಜೀವನದಲ್ಲಿ ತಮ್ಮನ್ನು ಮಂಗೋಲರು ಎಂದೇ ಪರಿಗಣಿಸುತ್ತಿದ್ದರು. ಇತರರು ಅನೇಕ ಜನಾಂಗೀಯ ಹಿನ್ನೆಲೆಯ ವೈವಿಧ್ಯಮಯ ಖಾನ್‌ಗಳನ್ನು ಮಂಗೋಲ್ ಚಕ್ರಾಧಿಪತ್ಯದ ಭಾಗವೆಂದು ಭಾವಿಸಿದ್ದರು, ಉದಾಹರಣೆಗೆ ಮಹಮದ್ ಖಾನ್‌ನಂತಹ ಧಾರ್ಮಿಕ ವ್ಯಕ್ತಿಗಳಿಗೆ.
ಹಾಗೂ ಅಲ್ಲಿ ಕೆಲವು ಮಟ್ಟಿಗೆ ಶಿಕ್ಷಕರು ಮತ್ತು ವೈದ್ಯರುಗಳಿಗೆ ತೆರಿಗೆ ರಿಯಾಯಿತಿ ಇತ್ತು. ಮಂಗೋಲ್ ಚಕ್ರಾಧಿಪತ್ಯದಲ್ಲಿ ಬಹುತೇಕ ಮಟ್ಟಿಗೆ ಧಾರ್ಮಿಕ ಸಹಿಷ್ಣುತೆಯನ್ನು ರೂಢಿಸಿಕೊಂಡಿತ್ತು, ಏಕೆಂದರೆ ಮಂಗೋಲ್ ಪರಂಪರೆಯಲ್ಲಿ ಧಾರ್ಮಿಕತೆ ಖಾಸಗಿ ಪರಿಕಲ್ಪನೆ ಮತ್ತು ಅದು ನ್ಯಾಯಕ್ಕೆ ಅಥವಾ ಹಸ್ತಕ್ಷೇಪಕ್ಕೆ ಒಳಪಡುವುದಿಲ್ಲ ಎಂದು ಬಹುಕಾಲದಿಂದ ನಡೆದು ಬಂ���ಿತ್ತು.[ಸೂಕ್ತ ಉಲ್ಲೇಖನ ಬೇಕು] ಗೆಂಘಿಸ್ ಖಾನ್ ವಿರಾಜಮಾನವಾದ ಸ್ವಲ್ಪ ಮೊದಲು, ಅವನ ಪರಿಪಾಲಕನಾಗಿದ್ದು ಮುಂದೆ ಶತ್ರುವಾದನು ನೆಸ್ಟೋರಿಯನ್ ಕ್ರೈಸ್ತ ಧರ್ಮಕ್ಕೆ ಧರ್ಮಾಂತರಗೊಂಡಿದ್ದ. ವಿವಿಧ ಮಂಗೋಲ್ ಬುಡಕಟ್ಟುಗಳು ಬೌದ್ಧ, ಇಸ್ಲಾಂ, ಷಾಮಾನಿಸಂ ಅಥವಾ ಕ್ರೈಸ್ತ ಧರ್ಮೀಯರಾಗಿದ್ದರು. ಆದ್ದರಿಂದ ಏಷಿಯಾದ ನೆಲದಲ್ಲಿ ಧಾರ್ಮಿಕ ಸಹಿಷ್ಣುತೆ ಚೆನ್ನಾಗಿ ಬೇರೂರಿತ್ತು.
ಆಧುನಿಕ ಮಂಗೋಲಿಯನ್ ಚರಿತ್ರಕಾರರು ಹೇಳುವಂತೆ ತನ್ನ ಜೀವನದ ಅಂತ್ಯದ ವೇಳೆಗೆ ಗೆಂಘಿಸ್ ಖಾನ್, ಮಹಿಳೆಯರೂ ಸೇರಿದಂತೆ ಎಲ್ಲ ವ್ಯಕ್ತಿಗಳಿಗೆ ಕಾನುನು ರೀತಿಯಲ್ಲಿ ಸಮಾನತೆಯನ್ನು ಸ್ಥಾಪಿಸಬಲ್ಲ ಯಸ್ಸಾ ಸಂಹಿತೆಯಡಿ ನಾಗರೀಕ ಸರ್ಕಾರವನ್ನು ಸ್ಥಾಪಿಸಲು ಪ್ರಯತ್ನಪಟ್ಟಿದ್ದ.[೨೧] ಆದರೂ ಇದಕ್ಕೆ ಸಮಕಾಲೀನ ಸಾಕ್ಷಿಗಳಿಲ್ಲ. ಮಂಗೋಲ್ ಚಕ್ರಾಧಿಪತ್ಯ ಮತ್ತು ಕುಟುಂಬದಲ್ಲಿ ಮಹಿಳೆಯರು ಇದ್ದುದರಲ್ಲಿ ಮುಖ್ಯ ಪಾತ್ರ ವಹಿಸಿದರು, ಉದಾಹರಣೆಗೆ ಖಗನ್‌ನ ಆಯ್ಕೆಗೆ ಮೊದಲು ತೊರ್‌ಜಿನ್ ಖಾತುನ್ ಎಂಬ ಮಹಿಳೆ ಕೆಲಕಾಲ ಮಂಗೋಲ್ ಚಕ್ರಾಧಿಪತ್ಯದ ಉಸ್ತುವಾರಿ ಹೊತ್ತಿದ್ದಳು. ಆಧುನಿಕ ವಿಧ್ವಾಂಸರು ವ್ಯಾಪಾರ ವಹಿವಾಟು ಮತ್ತು ಸಂವಹನವನ್ನು ಶಾಂತಿಯ ಉತ್ತೇಜಕ ಎಂಬ ಆಪಾದಿತ ನೀತಿಯನ್ನು ೦}ಪ್ಯಾಕ್ಸ್ ಮಂಗೋಲಿಕಾ(ಮಂಗೋಲ್ ಶಾಂತಿ ) ಉದಾಹರಿಸುತ್ತಾರೆ.
ಗೆಂಘಿಸ್ ಖಾನ್ ತಾನು ವಶಪಡಿಸಿಕೊಂಡ ನಗರಗಳು ಮತ್ತು ರಾಜ್ಯಗಳ ಆಡಳಿತ ನಡೆಸಬಲ್ಲಂತ ವ್ಯಕ್ತಿಗಳು ಬೇಕೆಂದು ಅರಿತುಕೊಂಡ. ಇಂತಹ ಆಡಳಿತಗಾರರು ಮಂಗೋಲ್ ಬುಡಕಟ್ಟುಗಳ ಪೈಕಿ ಸಿಗುವುದಿಲ್ಲ, ಏಕೆಂದರೆ ಅವರು ಅಲೆಮಾರಿಗಳು, ನಗರಗಳ ಆಡಳಿತ ನಡೆಸುವ ಅನುಭವವಿಲ್ಲ ಎಂಬುದನ್ನು ಕೂಡಾ ಅವನು ಅರಿತುಕೊಂಡ. ಈ ಉದ್ದೇಶಕ್ಕಾಗಿ ಗೆಂಘಿಸ್ ಖಾನ್ ಖೈತಾನ್ ರಾಜಕುಮಾರ ಚುತ್ಸಾಯ್‌ನನ್ನು ಆಹ್ವಾನಿಸಿದ, ಹಿಂದೆ ಜಿನ್ ವಂಶಸ್ಥರು ಸೋತಾಗ ಮಂಗೋಲ್ ಸೇನೆ ಆತನನ್ನು ಸೆರೆ ಹಿಡಿದಿತ್ತು. ಖೈತಾನ್‌ನನ್ನು ಸ್ಥಳಾಂತರಿಸಿ ಜಿನ್ ಅಧಿಕಾರ ಗ್ರಹಣ ಮಾಡಿದ್ದ. ಖೈತಾನ್ ಆಡಳಿತಗಾರರ ನೇರ ವಂಶಜಸ್ಥನಾಗಿದ್ದ ಚುತ್ಸಾಯ್‌ಗೆ ಗೆಂಘಿಸ್ ಖಾನ್ ಆತನ ಪೂರ್ವಜರ ಬಗೆಗಿದ್ದ ಸಿಟ್ಟಿನ ಬಗ್ಗೆ ಹೇಳಿದ. ತನ್ನಂತೆ ತನ್ನ ತಂದೆ ಕೂಡಾ ಜಿನ್ ವಂಶಾಡಳಿತಗಾರರಿಗೆ ಪ್ರಮಾಣಿಕ ಸೇವೆ ಸಲ್ಲಿಸಿದ, ಸ್ವಂತ ತಂದೆಯನ್ನು ಶತ್ರುವೆಂದು ಪರಿಗಣಿಸಲಾಗುವುದಿಲ್ಲ ಆದ್ದರಿಂದ ಸೇಡಿನ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಚುತ್ಸಾಯ್ ಪ್ರತಿಕ್ರಯಿಸಿದ. ಈ ಉತ್ತರ ಗೆಂಘಿಸ್ ಖಾನ್ ಮೇಲೆ ತುಂಬಾ ಪ್ರಭಾವ ಬೀರಿತು. ಮಂಗೋಲ್ ಚಕ್ರಾಧಿಪತ್ಯದ ಕೆಲವು ಭಾಗಗಳ ಆಡಳಿತ ನಡೆಸಿದ ಚುತ್ಸಾಯ್ ಮುಂದಿನ ಮಂಗೋಲ್ ಖಾನ್‌ಗಳ ವಿಶ್ವಸನೀಯ ವ್ಯಕ್ತಿಯಾದ.
ಸೇನೆ
ಬದಲಾಯಿಸಿಗೆಂಘಿಸ್ ಖಾನ್ ತನ್ನ ದಂಡನಾಯಕರಾಗಿದ್ದ ಮುಖಾಲಿ, ಜೆಬ್, ಮತ್ತು ಸುಬುತಾಯ್‌ರಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಮತ್ತು ಅವರನ್ನು ಆಪ್ತ ಸಲಹೆಗಾರರೆಂದು ಗೌರವಿಸಿದ್ದ, ಅನೇಕ ಸಲ ತನ್ನ ಕುಟುಂಬದ ಸದಸ್ಯರಿಗೆ ಮೀಸಲಾಗಿದ್ದ ಸೌಕರ್ಯ ಮತ್ತು ನಂಬಿಕೆಗಳನ್ನು ಅವರಿಗೂ ವಿಸ್ತರಿಸಿದ್ದ. ಅವರು ಮಂಗೋಲ್ ಚಕ್ರಾಧಿಪತ್ಯದ ರಾಜಧಾನಿ ಕಾರಾಕೊರುಮ್‌ನಿಂದ ದೂರವಿದ್ದು ಸೇನಾ ಕಾರ್ಯಾಚರಣೆಗಳನ್ನು ಕೈಗೊಂಡಿರುವಾಗ ತಮ್ಮದೇ ನಿರ್ಧಾರಗಳನ್ನು ಮಾಡುವ ಅವಕಾಶ ಕೊಟ್ಟಿದ್ದ. ಗೆಂಘಿಸ್ ಖಾನ್ ತನ್ನ ದಂಡನಾಯಕರಿಂದ ಕದಲಿಸಲಾಗದಂತಹ ನಿಷ್ಠೆಯನ್ನು ನಿರೀಕ್ಷಿಸುತ್ತಿದ್ದ, ಮತ್ತು ಆಜ್ಞೆಗಳಿಗೆ ಸಂಬಂಧ ಪಟ್ಟ ನಿರ್ಧಾರ ಮಾಡುವುದಕ್ಕಿ ಪೂರ್ಣ ಪ್ರಮಾಣಾದ ಸ್ವಾಯತ್ತತೆಯನ್ನು ಕೊಟ್ಟಿದ್ದ. ಗೆಂಘಿಸ್ ಖಾನ್ ಮಧ್ಯ ಏಷಿಯಾದಲ್ಲಿ ಕಾಳಗ ನಿರತನಾಗಿದ್ದಗ ತನ್ನ ನಂಬಿಕಸ್ತ ದಂಡನಾಯಕ ಮುಖಾಲಿಗೆ ಜಿನ್ ವಂಶಸ್ಥರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಮಂಗೋಲ್ ಪಡೆಗಳ ನಾಯಕತ್ವ ಕೊಟ್ಟಿದ್ದ. ಸುಬುತಾಯ್ ಮತ್ತು ಜೆಬ್ ತಮ್ಮದೇ ಚಿಂತನೆಯಿಂದ ಖಾನ್ ಮುಂದಿಟ್ಟಾ ಉಪಾಯಗಳಿಂದ ಅವರನ್ನು ಕಾಕಸಸ್ ಮತ್ತು ಕೀವನ್ ರಸ್‌ರ ಮೇಲಿನ ಮಹಾದಂಡ ಯಾತ್ರೆಗೆ ಮುಂದುವರೆಸಲು ಬಿಟ್ಟ. ಮಂಗೋಲ್ ಸೇನೆ ಸುತ್ತುಗಟ್ಟಿದ ಯುದ್ಧ ವಿದ್ಯೆಯಲ್ಲಿ ಯಶಸ್ವಿಯಾಗಿತ್ತು, ನದಿಗಳನ್ನು ಬೇರೆಡೆಗೆ ತಿರುಗಿಸಿ ಪಟ್ಟಣಗಳು ಮತ್ತು ನಗರಗಳಿಗೆ ಸಂಪನ್ಮೂಲ ಕಡಿತ ಮಾಡುವುದು, ತಾವು ವಶಮಾಡಿಕೊಂಡ ಜನರಿಂದ ಹೊಸ ಉಪಾಯ ತಾಂತ್ರಿಕತೆ ಮತ್ತು ಸಲಕರಣೆಗಳ ಅಳವಡಿಕೆ, ನಿರ್ಧಿಷ್ಟವಾಗಿ ನಗರಗಳನ್ನು ಆಕ್ರಮಿಸಿಕೊಳ್ಳಲು ಮಂಗೋಲ್ ಅಶ್ವಸೈನ್ಯವನ್ನು ಸಜ್ಜುಗೊಳಿಸಲು ಮುಸ್ಲಿಂ ಮತ್ತು ಚೀನಿ ಧಿಗ್ಭಂಧನ ತಂತ್ರಜ್ಞರನ್ನು ನೇಮಿಸಿಕೊಳ್ಳುವಲ್ಲಿ ಅವರು ಪಾರಂಗತರಾಗಿದ್ದರು. ಇನ್ನೊಂದು ಮಂಗೋಲ ಸೇನೆಯ ಯುದ್ಡ ತಂತ್ರಗಳು ಸಾಮಾನ್ಯವಾಗಿ ಹಿಂದಿರುಗುವಂತೆ ನಟಿಸಿ ಶತ್ರುಗಳು ಒಗ್ಗೂಡುವುದನ್ನು ತಡೆಯುವುದು ಮತ್ತು ಸಣ್ಣ ಶತ್ರು ಪಡೆಗೆ ಆಮಿಷ ತೋರಿಸುವುದು ಮತ್ತು ಹೊಂಚು ದಾಳಿ ಮತ್ತು ಕೌಂಟರ್ ಅಟ್ಯಾಕ್ ನಡೆಸುವುದು.
ಗೆಂಘಿಸ್ ಖಾನ್‌ನ ಸೇನಾ ಸಂಘಟನೆಯ ಮತ್ತೊಂದು ಮುಖ್ಯ ರೂಪವೆಂದರೆ ಹಿಂದಿನ ಚೀನೀಯರಿಂದ ಅಳವಡಿಸಿಕೊಂಡ ಸಂವಹನಗಳು ಮತ್ತು ಸರಬರಾಜು ಮಾರ್ಗ ಅಥವಾ ಯಮ್ . ಗೆಂಘಿಸ್ ಖಾನ್ ಸೇನೆಯ ಗುಪ್ತದಳವನ್ನು ಹಾಗೂ ಆಡಳಿತದ ವಿಷಯಗಳನ್ನು ವೇಗವಾಗಿ ಒಗ್ಗೂಡಿಸಲು ವಿಶೇಷ ಗಮನಹರಿಸುತ್ತಿದ್ದ. ಇದರ ಕೊನೆಯಲ್ಲಿ ಯಮ್ ಮಾರ್ಗದ ಸ್ಥಳಗಳನ್ನು ಚಕ್ರಾಧಿಪತ್ಯದೆಲ್ಲೆಡೆ ಸ್ಥಾಪಿಸಲಾಯಿತು.
Khanates
ಬದಲಾಯಿಸಿಸಾಯುವುದಕ್ಕೆ ಮೊದಲು, ಗೆಂಘಿಸ್ ಖಾನ್ ತನ್ನ ಚಕ್ರಾಧಿಪತ್ಯವನ್ನು ತನ್ನ ಮಕ್ಕಳಾದ ಒಗೆದೇಯ್, ಚಗತಾಯ್, ತೋಲುಯ್, ಮತ್ತು ಜೋಚಿ (ಜೋಚಿಯ ಸಾವಿನ ಅನೇಕ ತಿಂಗಳುಗಳ ಹಿಂದೆ, ಅವನ ಭೂಮಿಯನ್ನು ಅವನ ಮಕ್ಕಳಾದ ಬಾತು ಮತ್ತು ಒರ್‌ದಾ ಇವರುಗಳಿಗೆ ಕೊಡಬೇಕೆಂದು ಗೆಂಘೀಸ್ ಖಾನ್‌ನ ಇಂಗಿತವಾಗಿತ್ತು) ಇವರುಗಳಿಗೆ ಉಪಪ್ರಾಂತಗಳಾಗಿ ರಚಿತಗೊಂಡ ಖನಾಟೆಗಳಾಗಿ ಭಾಗ ಮಾಡಿದ, ಇದರ ಖಾನ್‌ಗಳು ಮಹಾನ್ ಖಾನ್‌ನನ್ನು ಹಿಂಬಾಲಿಸಬೇಕು, ಮಹಾನ್ ಖಾನ್ ಒಗೆದೇಯ್.
ತನ್ನ ಸಾವಿನ ನಂತರ ಗೆಂಘಿಸ್ ಖಾನ್ ಹಂಚಿ ವಹಿಸಿಕೊಟ್ಟ ಖನಾಟೆಗಳು:
- ಮಹಾನ್ಖಾನ್ನ ಚಕ್ರಾಧಿಪತ್ಯ :ಮಹಾನ್ ಖಾನ್ ಆಗಿದ್ದ ಒಗೆದೆಯ್ ಖಾನ್, ಪೂರ್ವ ಏಷಿಯಾದ ಬಹಳಷ್ಟು ಪ್ರದೇಶಗಳೊಂದಿಗೆ ಚೀನಾವನ್ನು ತೆಗೆದುಕೊಂಡ, ಈ ಪ್ರಾಂತವು ಮುಂದೆ ಕುಬಿಲಾಯ್ ಖಾನ್ ನಾಯಕತ್ವದ ಯುವಾನ್ ವಂಶಸ್ಥರನ್ನು ಒಳಗೊಳ್ಳುತ್ತದೆ.
- ಮಂಗೋಲ್ ಮಾತೃಭೂಮಿ (ಕಾರಾಕೊರುಮ್ ಸೇರಿದಂತೆ ಇಂದಿನ ಮಂಗೋಲಿಯಾ), ತೊಲೂಯ್ ಖಾನ್ ಅತಿ ಕಿರಿಯ ಮಗನಾಗಿದ್ದು ಮಂಗೋಲ್ ಪದ್ಧತಿಯ ಪ್ರಕಾರ ಮಂಗೋಲ್ ಮಾತೃಭೂಮಿ ಹತ್ತಿರದ ಸಣ್ಣ ಪ್ರದೇಶವೊಂದನ್ನು ಪಡೆದುಕೊಂಡ.
- ಚಗತಾಯ್ ಖಾನಟೆ : ಚಗತಾಯ್ ಖಾನ್, ಗೆಂಘಿಸ್ ಖಾನ್‌ನ ಎರಡನೆಯ ಮಗನಾಗಿದ್ದು ಮಧ್ಯ ಏಷಿಯಾ ಮತ್ತು ಉತ್ತರ ಇರಾನ್ ಅನ್ನು ಪಡೆದುಕೊಂಡ.
- ಬ್ಲೂ ಹೊರ್ಡೆ ಯು ಬಾತುಖಾನ್ಗೆ, ಮತ್ತು ವೈಟ್ ಹೊರ್ಡೆ ಯು ಒರದಾ ಖಾನ್‌ಗೆ, ಮುಂದೆ ಈ ಎರಡೂ ಕಿಪ್ಚಕ್ ಖನಾಟೆ ಅಥವಾ ಖನಾಟೆ ಆಫ್ ಗೋಲ್ಡನ್ ಹೊರ್ಡೆ ಎಂಬುದಾಗಿ ಟೊಕ್ತಾಮಿಷ್ ನಾಯಕತ್ವದಲ್ಲಿ ಏಕೀಕರಣಗೊಂಡವು. ಗೆಂಘಿಸ್ ಖಾನ್‌ನ ಹಿರಿಯ ಮಗ ಜೋಚಿ ದೂರದ ರಷಿಯಾ ಮತ್ತು ರುಥೇನಿಯಾಗಳ ಬಹುಪಾಲನ್ನು ಪಡೆದುಕೊಂಡ.
ಜೋಚಿ, ಗೆಂಘಿಸ್ ಖಾನ್‌ಗಿಂತ ಮೊದಲೇ ಮೃತನಾದನಾದ್ದರಿಂದ ಅವನ ಪಾಲಿಗೆ ಬಂದ ಪ್ರಾಂತ ಅವನ ಮಕ್ಕಳ ನಡುವೆ ಮತ್ತೆ ಇಬ್ಬಾಗವಾಯಿತು. ಬಾತುಖಾನ್ ರಷಿಯಾ ಮೇಲೆ ದಾಳಿ ಮಾಡಿದ, ನಂತರ ಹಂಗೇರಿ ಮತ್ತು ಪೋಲೆಂಡ್‌ಗಳ ಮೇಲೆ ದಾಳಿ ಮಾಡಿ ಒಗೆದೆಯ್‌ನ್ ಸಾವಿನ ಸುದ್ದಿ ತಿಳಿದು ಹಿಂತಿರುಗುವ ಮೊದಲು ಅನೇಕ ಸೇನಾಪಡೆಗಳನ್ನು ಹೊಸಕಿ ಹಾಕಿದ.
ಖಾನ್‌ನ ನಂತರ
ಬದಲಾಯಿಸಿಇರುವ ಜನಪ್ರಿ�� ನಂಬಿಕೆಗೆ ವಿರೋಧವೆಂದರೆ ಗೆಂಘಿಸ್ ಕಹನ್ ಮಂಗೋಲ್ ಚಕ್ರಾಧಿಪತ್ಯದ ಎಲ್ಲ ಪ್ರದೇಶಗಳನ್ನು ವಶಪಡಿಸಿಕೊಂಡಿರಲಿಲ್ಲ. ಅವನ ಸಾವಿನ ವೇಳೆಗೆ ಮಂಗೋಲ್ ಚಕ್ರಾಧಿಪತ್ಯ ಕ್ಯಾಸ್ಪಿಯನ್ ಸಮುದ್ರದಿಂದ ಜಪಾನ್ ಸಮುದ್ರದ ತನಕ ವಿಸ್ತರಿಸಿಕೊಂಡಿತ್ತು. ೧೨೨೭ರಲ್ಲಿ ಗೆಂಘಿಸ್ ಖಾನ್‌ನ ಸಾವಿನ ನಂತರ ಚಕ್ರಾಧಿಪತ್ಯದ ವಿಸ್ತರಣೆಗೆ ಒಂದು ತಲೆಮಾರು ಅಥವಾ ಅದಕ್ಕೂ ಹೆಚ್ಚು ಮುಂದುವರೆದಿತ್ತು.
ಗೆಂಘಿಸ್‌ನ ಉತ್ತರಾಧಿಕಾರಿ ಒಗೆದೆಯ್ ಖಾನ್‌ನ ಆಡಳಿತದಲ್ಲಿ ವಿಸ್ತರಣೆಯ ವೇಗ ಉತ್ತುಂಗದಲ್ಲಿತ್ತು. ಪರ್ಷಿಯಾಗೆ ನುಗ್ಗಿದ ಮಂಗೋಲ್ ಸೇನಾಪಡೆ ಗ್ಸಿಗ್ಸಿಯಾ ಮತ್ತು ಅಳಿದುಳಿದ ಖ್ವಾರೆಝ್ಮಿದ್‌ಗಳನ್ನು ಮುಗಿಸಿದರು, ಮತ್ತು ಚೀನಾದ ಸಾಂಗ್ ವಂಶಸ್ಥರ ಜೊತೆ ಕಾಳಾಗಕ್ಕೆ ಬಂದರು, ಪ್ರಾರಂಭವಾದ ಯುದ್ಧ ೧೨೭೯ರ ತನಕ ನಡೆದು ಸಮಸ್ತ ಚೀನಾವನ್ನು ಮಂಗೋಲರು ತಮ್ಮ ಹತೋಟಿಗೆ ತೆಗೆದುಕೊಳ್ಳುವಲ್ಲಿ ಮುಕ್ತಾಯ ಕಂಡಿತು. ಅವರು ಮುಂದೆ ರಷಿಯಾ ಮತ್ತು ಪೂರ್ವ ಯೂರೋಪಿಗೆ ನುಗ್ಗಿದರು.
ಗ್ರಹಿಕೆಗಳು
ಬದಲಾಯಿಸಿಇತರೆ ಗಮನಾರ್ಹ ಆಕ್ರಮಣಾಕಾರರಂತೆ ಗೆಂಘಿಸ್ ಖಾನ್ ತಾನು ವಶಪಡಿಸಿಕೊಂಡವರು ಮತ್ತು ತನ್ನೊಡನೆ ವಶ ಪಡಿಸಿಕೊಂಡವರು, ಹೀಗೆ ಭಿನ್ನವಾಗಿ ಚಿತ್ರಿತನಾಗಿದ್ದಾನೆ. ವಿವಿಧ ಭೌಗೌಳಿದ ಪ್ರದೇಶಗಳ ವಿವಿಧ ಸಂಸ್ಕೃತಿಗಳ ಚರಿತ್ರೆಗಳಲ್ಲಿ ಗೆಂಘಿಸ್ ಖಾನ್‌ನ ಬಗೆಗಿನ ನಕಾರಾತ್ಮಕ ದೃಷ್ಟಿಗಳು ಚಾಲ್ತಿಯಲ್ಲಿವೆ. ಅವರು ಮಂಗೋಲ್ ಸೇನಾ ಪಡೆ ಎಸಗಿದ ವಿನಾಶ ಮತ್ತು ಕಾರ್ಯವನ್ನು ಉದಾಹರಿಸುತ್ತಾರೆ, ಇತರೆ ಲೇಖಕರು ಗೆಂಘಿಸ್ ಖಾನ್‌ನ ಆಕ್ರಮಣದ ಇತ್ಯಾತ್ಮಕ ಆಯಾಮಗಳನ್ನು ಉದಾಹರಿಸುತ್ತಾರೆ.
ಸಕಾರಾತ್ಮಕ
ಬದಲಾಯಿಸಿರೇಶ್ಮೆ ದಾರಿಯನು ಒಂದು ಸಮರ್ಪಕ ರಾಜಕೀಯ ಪರಿಸರದಡಿ ತಂದ ಕೀರ್ತಿ ಗೆಂಘಿಸ್ ಖಾನ್‌ಗೆ ಸಲ್ಲುತ್ತದೆ. ಇದು ಪಶ್ಚಿಮ, ಮಧ್ಯ ಪ್ರಾಚ್ಯ ಮತ್ತು ಏಷಿಯಾಗಳ ನಡುವೆ ಸಂವಹನ ಮತ್ತು ವ್ಯಾಪಾರದ ವಹಿವಾಟನ್ನು ಹೆಚ್ಚು ಮಾಡಿದ್ದರ ಜೊತೆಗೆ ಈ ಎಲ್ಲ ಮೂರು ಸಾಂಸ್ಕೃತಿಕ ಪ್ರದೇಶಗಳಾ ದಿಗಂತಗಳನ್ನು ವಿಸ್ತರಿಸಿದಂತಾಯಿತು. ಕೆಲವು ಚರಿತ್ರಕಾರರು ದಾಖಲಿಸಿರುವಂತೆ ಗೆಂಘಿಸ್ ಖಾನ್ ತನ್ನ ಆಡಳಿತದಲ್ಲಿ ಕೆಲವು ಮಟ್ಟದ ಯೋಗ್ಯತಾಶಾಹಿ ಸಮಾಜದ ಸೂತ್ರಗಳನ್ನು ರೂಪಿಸಿದ, ವಿವಿಧ ಧರ್ಮಗಳ ಬಗ್ಗೆ ಸಹಿಷ್ಣುವಾಗಿದ್ದ ಮತ್ತು ತನ್ನ ಎಲ್ಲ ಸೈನಿಕರಿಗೂ ತನ್ನ ನೀತಿಗಳನ್ನು ವಿವರಿಸಿ ಹೇಳುತ್ತಿದ್ದ.[೨೨] ಆಧುನಿಕ ಟರ್ಕಿ ಯಲ್ಲಿ ಗೆಂಘಿಸ್ ಖಾನನನ್ನು ಒಬ್ಬ ಮಹಾನ್ ಸೈನ್ಯದ ನಾಯಕ ಎಂದು ಪರಿಗಣಿಸಲಾಗುತ್ತಿತ್ತು, ಅವರ ಗಂಡು ಮಕ್ಕಳಿಗೆ ಆತನ ಹೆಸರನ್ನು ಇಡುವುದು ಕೂಡಾ ವಿಶೇಷವಾಗಿತ್ತು.[೨೩]
ಮಂಗೋಲಿಯಾದಲ್ಲಿ
ಬದಲಾಯಿಸಿಹಲವಾರು ಶತಮಾನಗಳ ಕಾಲ ಮಂಗೋಲರು ಪಾರಂಪರಿಕವಾಗಿ ಗೆಂಘಿಸ್ ಖಾನ್‌ನನ್ನು ಗೌರವಿಸುತ್ತಿದ್ದರು, ಮಂಗೋಲ್ ಪ್ರಭುತ್ವದ ಜೊತೆಗಿನ ಒಡನಾಟ, ರಾಜಕೀಯ ಮತ್ತು ಸೈನ್ಯ ಸಂಘಟನೆ ಮತ್ತು ಅವನ ಚಾರಿತ್ರಿಕ ಯುದ್ಧ ವಿಜಯಗಳಿಂದ ಇತರೆ ಜನಾಂಗಗಳು ಅಂದರೆ ಟರ್ಕರು ಕೂಡ ಅವನನ್ನು ಗೌರವಿಸುತ್ತಿದ್ದರು.{1/} ಮುಖ್ಯವಾಗಿ ಅವನು ಮಂಗೋಲರ ನಡುವೆ ಜೀವಕ್ಕಿಂತ ಹಿರಿದಾದ ಚಿತ್ರಣವಾಗಿ ರೂಪುಗೊಂಡ ಮತ್ತು ಈಗಲೂ ಅವನನ್ನು ಮಂಗೋಲಿಯನ್ ಸಂಸ್ಕೃತಿಯ ಸಂಕೇತವೆಂದು ಪರಿಗಣಿಸಿದ್ದಾರೆ.
ಕಮ್ಯುನಿಸ್ಟರ ಅವಧಿಯಲ್ಲಿ ಅನೇಕ ಭಾರಿ ಅವನನ್ನು ಪ್ರತಿಗಾಮಿ ಎಂಬುದಾಗಿ ವರ್ಣಿಸಲಾಗಿದೆ ಮತ್ತು ಅವನ ಬಗೆಗಿನ ಯಾವುದೇ ಇತ್ಯಾತ್ಮಕ ಹೇಳಿಕೆಗಳನ್ನು ಸಾಮಾನ್ಯವಾಗಿ ತಡೆಯಲಾಗಿದೆ.[೨೪] ೧೯೬೨ರಲ್ಲಿ ಅವನ ಜನ್ಮಸ್ಥಳದಲ್ಲಿ ಕಟ್ಟಿದ ಸ್ಮಾರಕ ಮತ್ತು ಅವನ ೮೦೦ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ನೆನಪಿನ ಅಧಿವೇಶನವನ್ನು ಸೋವಿಯತ್ ಒಕ್ಕೂಟ ಟೀಕಿಸಿತು. ಮತ್ತು ಮಂಗೋಲಿಯಾದಲ್ಲಿ ಆಡಳಿತ ನಡೆಸುತ್ತಿದ್ದ ಮಂಗೋಲಿಯನ್ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿಯ ಕೇಂದ್ರ ಸಮಿತಿಯ ಕಾರ್ಯದರ್ಶಿ ತೊಮೊಚಿಗರ್ ಅನ್ನು ಹುದ್ದೆಯಿಂದ ತೆಗೆದುಹಾಕಲಾಯಿತು. ೧೯೯೦ರ ಮೊದಲಭಾಗದಲ್ಲಿ ಮಂಗೋಲಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದಾಗ ಮಂಗೋಲಿಯನ್ ಪಾರಂಪರಿಕ ರಾಷ್ಟ್ರೀಯ ಚಹರೆಯೊಂದಿಗೆ ಗೆಂಘಿಸ್ ಖಾನ್‌ನ ನೆನಪುಗಳು ತುಂಬಾ ಪ್ರಬಲವಾಗಿ ಪುನರ್ ನವೀಕರಣಗೊಂಡವು. ಇದು ಭಾಗಷಃ ಏಕೆಂದರೆ ಮಂಗೋಲಿಯನ್ ಪೀಪಲ್ಸ್ ರಿಪಬ್ಲಿಕ್ ಅವಧಿಯ ಬಗೆಗಿನ ಅವನ ಗ್ರಹಿಕೆಯಿಂದ. ಗೆಂಘಿಸ್ ಖಾನ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದ ಕೇಂದ್ರಬಿಂದುವಾದ ವ್ಯಕ್ತಿಯಾಗಿದ್ದ ಮಂಗೋಲಿಯನ್ನರು ಆತನನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿದರು. ಅವನ ಹೆಸರು ಮತ್ತು ಇಷ್ಟಗಳನ್ನು ಉತ್ಪನ್ನಗಳನ್ನು ಅನುಮೋದಿಸಲು ಮತ್ತು ಬೀದಿಗಳು , ಕಟ್ಟಡಗಳು ಮತ್ತು ಇತರೆ ಸ್ಥಳಗಳಿಗೆ ಇಡಲಾಯಿತು. ಕುಡಿತದ ಬಾಟಲುಗಳಿಂದ ಆರಂಭಗೊಂಡು ೫೦೦, ೧೦೦೦, ೫೦೦೦ ಮತ್ತು ೧೦,೦೦೦ ಮೌಲ್ಯದ ಮಂಗೋಲಿಯನ್ ಟೊಗ್‌ರೊಗ್ (₮)ಗಳ ಮೇಲೆ ಅವನ ಮುಖ ಕಾಣಸಿಗುತ್ತದೆ. ಮಂಗೋಲಿಯಾದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಂಗೀಸ್ ಖಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಪುನರ್ ನಾಮಕರಣ ಮಾಡಲಾಗಿದೆ, ಮತ್ತು ಗೆಂಘಿಸ್ ಖಾನ್‌ನ ಎತ್ತರದ ಪ್ರತಿಮೆಗಳನ್ನು ಪಾರ್ಲಿಮೆಂಟ್ ಮುಂದೆ ಮತ್ತು ಉಲಾನ್ ಬತಾರ್ ಹತ್ತಿರ ಸ್ಥಾಪಿಸಲಾಗಿದೆ.[೨೫] ಅವನ ಹೆಸರು ಮತ್ತು ಚಿತ್ರಣವನ್ನು ನಿಯಂತ್ರಣದಲ್ಲಿಟ್ಟು ಆತನನ್ನು ಸಣ್ಣವನನ್ನಾಗಿ ಮಾಡುವುದನ್ನು ತಪ್ಪಿಸುವುದರ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇವೆ.[೨೬] ಮಂಗೋಲ್ ಚಕ್ರಾಧಿಪತ್ಯದ ಸ್ಥಾಪನೆ ಮತ್ತು ಇದು ಮಂಗೋಲಿಯಾ ದೇಶವಾಗಿ ರೂಪುಗೊಳ್ಳಲು ಹಾಕಿದ ತಳಹದಿ ಎಂದು ಭಾವಿಸುವ ಮಂಗೋಲರು ಅವನನ್ನು ಮಂಗೋಲಿಯಾ ಸ್ಥಾಪನೆಯ ಮೂಲಭೂತ ವ್ಯಕ್ತಿಯಾಗಿ ನೋಡುತ್ತಾರೆ ಎಂಬುದು ಇದರೆ ಸಾರಾಂಶ.
ಈಗ ಗೆಂಘಿಸ್ ಖಾನ್‌ನನ್ನು ಮಂಗೋಲಿಯಾದ ಪ್ರಮುಖ ನಾಯಕರ ಪೈಕಿ ಒಬ್ಬನನ್ನಾಗಿ ಗೌರವಿಸಲಾಗಿದೆ.[೨೭] ಮಂಗೋಲಿಯಾ ಒಂದು ರಾಜಕೀಯ ಮತ್ತು ಜನಾಂಗೀಯ ಚಹರೆಯಾಗಿ ರೂಪುಗೊಳ್ಳಲು ಅವನು ಕಾರಣ ಏಕೆಂದರೆ ಸಾಂಸ್ಕೃತಿಕ ಹೋಲಿಕೆಗಳಿದ್ದರೂ ಅನೇಕ ಬುಡಕಟ್ಟುಗಳ ನಡುವೆ ಏಕೀಕೃತ ಚಹರೆ ಇರಲಿಲ್ಲ. ಅನೇಕ ಬುಡಕಟ್ಟುಗಳ ನಡುವೆ ಸ್ಥಳೀಯವಾಗಿ ಯುದ್ಧಗಳು ಹುಟ್ಟಿಕೊಳ್ಳುವ ವೇಲೆಗೆ ಅವನು ಹಲವು ಮಂಗೋಲ್ ಪರಂಪರೆಗಳನ್ನು ಗಟ್ಟಿಗೊಳಿಸಿ ಅವರ ನಡುವೆ ಏಕತೆ ಮತ್ತು ಸುಭದ್ರತೆಯನ್ನು ಒದಗಿಸಿದೆ. ಮಂಗೋಲಿಯನ್ ಪಾರಂಪರಿಕ ಲಿಪಿಯನ್ನು ಪರಿಚಯಿಸಿದ ಕೀರ್ತಿ ಮತ್ತು ಮೊಟ್ಟಮೊದಲ ಮಂಗೋಲಿಯನ್ ಕಾನೂನು ಇಖ್ ಝಸಾಗ್ ಅನ್ನು ರೂಪಿಸಿದ ಕೀರ್ತಿ ಕೂಡಾ ಆತನಿಗೆ ಸಲ್ಲುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅವನ ಅಮಾನುಷ ಕ್ರೌರ್ಯದ ಬಗೆಗೆ ಒಂದು ಆಳವಾದ ಕಂದಕ ಇದೆ- ಮಂಗೋಲೇತರರು ಬರೆದಿರುವ ಚಾರಿತ್ರಿಕ ದಾಖಲೆಗಳು ಗೆಂಘಿಸ್ ಖಾನ್‌ನ ಬಗ್ಗೆ ಅನ್ಯಾಯದ ಪೂರ್ವಾಗ್ರಹ ಪೀಡಿದರಾಗಿದ್ದಾರೆ, ಅವನ ಕೊಲೆಗಡುಕತನವನ್ನು ಉತ್ಪ್ರೇಕ್ಷಿಸಲಾಗಿದೆ ಆದರೆ ಅವನು ವಹಿಸಿದ ಸಕಾರಾತ್ಮಕ ಪಾತ್ರವನ್ನು ಕಡೆಗಣಿಸಲಾಗಿದೆ ಎಂದು ಮಂಗೋಲಿಯನ್ನರು ಹೇಳಿಕೊಳ್ಳುತ್ತಾರೆ.[೨೮]
ತಟಸ್ಥನೀತಿ.
ಬದಲಾಯಿಸಿಚೈನಾದಲ್ಲಿ
ಬದಲಾಯಿಸಿ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ಗೆಂಘಿಸ್ ಖಾನ್ ಬಗ್ಗೆ ಪರಸ್ಪರ ವಿರೋಧಿ ದೃಷ್ಟಿಗಳಿವೆ. ಚೀನಾದಲ್ಲಿ ಮಂಗೋಲಿಯಾಗಿಂತ ಎರಡು ಪಟ್ಟು ಹೆಚ್ಚು, ೫ ಮಿಲಿಯನ್ ಮಂಗೋಲಿಯನ್ ಜನಸಂಖ್ಯೆ ಇದ್ದು ಇವರಲ್ಲಿ ಆಂತರಿಕವಾಗಿ ಅವನನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುತ್ತಾರೆ, ಈ ಪ್ರದೇಶಗಳಲ್ಲಿ ಅವನ ಹೆಸರಿನಲ್ಲಿ ಕಟ್ಟಡಗಳು ಮತ್ತು ಸ್ಮಾರಕಗಳು ಇವೆ. ಗೆಂಘಿಸ್ ಖಾನ್ ಸಮಸ್ತ ಚೀನಾವನ್ನು ವಶಪಡಿಸಿಕೊಳ್ಳಲಿಲ್ಲ. ಆದರೆ ಅವನ ಮೊಮ್ಮಗ ಕುಬ್ಲಾಯ್ ಖಾನ್ ಅದನ್ನು ಪೂರ್ಣಗೊಳಿಸಿ,[೨೯] ಮುಂದೆ ಚೀನಾವನ್ನು ಮರು ಏಕೀಕರಣಗೊಳಿಸಿದ ಕೀರ್ತಿಗೆ ಪಾತ್ರವಾದ ಯುವಾನ್ ಡಿನಾಸ್ಟಿಯನ್ನು ಸ್ಥಾಪಿಸಿದ. ಮಹಾನ್ ಸೇನಾನಾಯಕ ಮತ್ತು ರಾಜಕೀಯ ಚತುರ ಎಂದು ಗೆಂಘಿಸ್ ಖಾನ್‌ನನ್ನು ಹೊಗಳುವ ಕಲಾ ಮತ್ತು ಸಾಹಿತ್ಯ ಕೃತಿಗಳು ಹೇರಳವಾಗಿವೆ. ಮಂಗೋಲರಿಂದ ಸ್ಥಾಪಿತವಾದ ಯುವಾನ್ ಡೈನಾಸ್ಟಿಯ ಆಡಳಿತದ ವರ್ಷಗಳು ಚೀನಾದ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯಲ್ಲಿ ಮತ್ತು ಮುಂದಿನ ತಲೆಮಾರುಗಳ ಮೇಲೆ ಅಚ್ಚಳಿಯದ ಗುರುತುಗಳನ್ನು ಉಳಿಸಿತು. ಜಿನ್ ಡೈನಾಸ್ಟಿಯ ಕಾಲದ ಸಾಹಿತ್ಯ ತುಂಬಾ ಕಡಿಮೆ. ಒಟ್ಟಾರೆ ಗೆಂಘಿಸ್ ಖಾನ್ ಮತ್ತು ೬೫ವರ್ಷಗಳ ಸತತ ಹೋರಾಟದ ಮೂಲಕ ಚೀನಾದ ವಶೀಕರಣವನ್ನು ಪೂರ್ಣಗೊಳಿಸಿದ ಅವನ ಉತ್ತರಾಧಿಕಾರಿಗಳ ಆಸ್ತಿ ಇಂದಿಗೂ ಮಿಶ್ರವಿಷಯವಾಗಿ ಉಳಿದಿದೆ.
ನಕಾರಾತ್ಮಕತೆ
ಬದಲಾಯಿಸಿಇರಾಖ್ ಮತ್ತು ಇರಾನ್‌ನಲ್ಲಿ ಸಾಮಾನ್ಯವಾಗಿ ಅವನನ್ನು ವಿನಾಶಕಾರಿ ಮನುಷ್ಯ, ಈ ಪ್ರದೇಶಗಳ ಜನರ ಜೀವನದಲ್ಲಿ ಅಗಾಧ ಕಷ್ಟನಷ್ಟಗಳನ್ನು ಉಂಟು ಮಾಡಿದ ನರಮೇಧ ಸ್ವಭಾವದ ಯುದ್ಧದಾಹಿ ಪ್ರಭು ಎಂಬ ದೃಷ್ಟಿಯಲ್ಲಿ ನೋಡುತ್ತಾರೆ.[೩೦] ಇದೇ ರೀತಿ ಅಫಘಾನಿಸ್ತಾನ ( ಇತರೆ ಟರ್ಕೇತರ ಮುಸ್ಲಿಂ ದೇಶಗಳೂ ಸೇರಿದಂತೆ) ಅವನನ್ನು ವಿರೋಧಿ ಎಂಬ ದೃಷ್ಟಿಯಲ್ಲಿ ನೋಡುತ್ತಾರೆ, ಆದರೂ ಅಲ್ಲಿ ಬೀಡು ಬಿಟ್ಟಿದ್ದ ದೊಡ್ಡ ಮಂಗೋಲ್ ಗ್ಯಾರಿಸನ್‌ನ ವಂಶಸ್ಥರೆಂದು ನಂಬಲಾಗಿರುವ ಹಜಾರರೂ ಸೇರಿದಂತೆ ಹಲವು ಗುಂಪುಗಳು ಉಭಯಭಾವಗಳನ್ನು ಪ್ರದರ್ಶಿಸುತ್ತವೆ.[೩೧][೩೨] ನಡೆಸಿದ ದಾಳಿಗಳ ಪೈಕಿ ಬಾಗ್ದಾದ್, ಸಮರ್‌ಕಂಡ್, ಉಗೆಗಂಚ್, ಕೀವ್, ವ್ಲದಿಮೀರ್ ನಗರಗಳಲ್ಲಿ ದಕ್ಷಿಣ ಕುಜೆಸ್ಥಾನ್ ಅನ್ನು ಸಂಪೂರ್ಣ ನಾಶ ಮಾಡಿದಾಗ ಸಾಮೂಹಿಕ ಕಗ್ಗೊಲೆಗಳು ನಡೆದವು. ಅವನು ವಂಶಸ್ಥ ಹುಲಗು ಖಾನ್ ಇರಾನಿನ ಉತ್ತರ ಭಾಗದ ಬಹುಪಾಲನ್ನು ನಾಶಮಾಡಿದ. ಇರಾನಿನ ಜನ ಅವನನ್ನು ಅಲೆಗ್ಸಾಂಡರ್ ಮತ್ತು ತಾಮೇರ್ಲೇನ್ ಜೊತೆ ಇರಾನಿನ ಉಪೇಕ್ಷೆಗೊಳಗಾದ ವಿಜಯಶಾಲಿಗಳು ಎಂದು ಭಾವಿಸುತ್ತಾರೆ.[೩೩][೩೪] ರಷಿಯಾದ ಬಹಳಷ್ಟು ಪ್ರದೇಶಗಳು, ಮಧ್ಯಪ್ರಾಚ್ಯ, ಕೊರಿಯಾ, ಚೀನಾ, ಉಕ್ರೇನ್, ಪೋಲೆಂಡ್ ಮತ್ತು ಹಂಗೇರಿಯಲ್ಲಿ ಗೆಂಘಿಸ್ ಖಾನ್ ಮತ್ತು ಅವನ ಆಡಳಿತಕ್ಕೆ ಗಣಾನೀಯ ಪ್ರಮಾಣದ ನಷ್ಟ ಮತ್ತು ನಾಶದ ಕೀರ್ತಿ ಸಿಕ್ಕಿದೆ.
ವಂಶಾವಳಿ
ಬದಲಾಯಿಸಿಜೆರ್ಜಾಲ್ ಎಟ್ ಅಲ್. [2003][೩೫] ಗುರುತಿಸಿರುವಂತೆ ಏಷಿಯಾದ ದೊಡ್ಡ ಪ್ರಾಂತವೊಂದರಲ್ಲಿ ಶೇ ೮ರಷ್ಟು ಗಂಡಸರು Y-ಕ್ರೋಮೋಸೋಮಲ್ ಸಂತತಿ ಯವರಾಗಿದ್ದಾರೆ (ಪ್ರಪಂಚದ ಸುಮಾರು ೦.೫% ಜನ ಗಂಡಸರು ). ಸಂತತಿಯ ಒಳಗಿನ ಏರುಪೇರುಗಳ ವಿನ್ಯಾಸ ಒಂದೇ ತರಹ ಇದೆ ಎಂದು, ಅದು ೧೦೦೦ವರ್ಷಗಳ ಹಿಂದೆ ಮಂಗೋಲಿಯಾದಲ್ಲಿ ಕಾಣಿಸಿಕೊಂಡಿತ್ತು ಎಂಬ ಊಹಾ ಸಿದ್ಧಾಂತದೊಂದಿಗೆ ಈ ಲೇಖನ ಸೂಚಿಸುತ್ತದೆ. ಏಕೆಂದರೆ ವಂಶಾವಳಿಯ ಹರಡುವಿಕೆಯಿಂದ ಉಂಟಾಗುವ ಇಂತಹುವುದರ ಪ್ರಮಾಣ ಅಗಾಧವಾಗಿರುತ್ತದೆ, ಗೆಂಘಿಸ್ ಖಾನ್‌ನ ವಂಶದ ಪುರುಷರಿಗೆ ಈ ಸಂತತಿಯ ಲಕ್ಷಣಗಳು ಸಾಗಿಬಂದಿದೆ ಮತ್ತು ಇದು ಸಾಮಾಜಿಕವಾಗಿ ಹರಡಿಕೊಂಡಿದೆ ಎಂದು ಲೇಖಕರು ಸೂಚಿಸುತ್ತಾರೆ. ೨೦ನೆಯ ಶತಮಾನದವರೆಗಿನ ಮಂಗೋಲ್ ಉದಾತ್ತತೆಯ ಜೊತೆಗೆ ಮುಘಲ್ ಚಕ್ರವರ್ತಿ ಬಾಬರ್‌ನ ತಾಯಿ ಈ ವಂಶಕ್ಕೆ ಸೇರಿದವಳು. ತೈಮೂರ್ (ತಾಮರ್ಲೇನ್ ಎಂಬ ಹೆಸರೂ ಇದೆ), ತಾನು ಗೆಂಘಿಸ್ ಖಾನ್‌ನ ವಂಶಸ್ಥ ಎಂದು ಹೇಳಿಕೊಳ್ಳುತ್ತಿದ್ದ.
Depictions in modern culture
ಬದಲಾಯಿಸಿಮಂಗೋಲಿಯಾದ ಆಡಳಿತಗಾರನ ಬಗೆಗೆ ಹಲವಾರು, ಚಲನಚಿತ್ರಗಳು, ಕಾದಂಬರಿಗಳು ಮತ್ತು ಇತರೆ ಕಥೆ ಆಧರಿಸಿದ ಕಾರ್ಯಗಳು ಇವೆ.
ಚಲನಚಿತ್ರಗಳು
ಬದಲಾಯಿಸಿ- The Conqueror ಚಿತ್ರವು ೧೯೫೬ ನಲ್ಲಿ ಬಿಡುಗಡೆಗೊಂಡಿತು ಹಾಗು ಅದರಲ್ಲಿ ಜಾನ್ ವೇನ್ ತೆಮುಜಿನ್ ಮತ್ತು ಸುಸಾನ್ ಹೆವರ್ಡ್ ಬೋರ್ತೆಯ ಪಾತ್ರಗಳಲ್ಲಿ ನಟಿಸಿದರು.
- ಗೆಂಘಿಸ್ ಖಾನ್ ಚಿತ್ರವು ೧೯೬೫ರಲ್ಲಿ ಬಿಡುಗಡೆಗೊಂಡಿತು ಹಾಗು ಒಮಾರ್ ಶರೀಫ್ ಈ ಚಿತ್ರದಲ್ಲಿ ನಟಿಸಿದರು.
- ಗೆಂಘಿಸ್ ಖಾನ್ (1992ರ ಚಿತ್ರ) ನಲ್ಲಿ ರಿಚರ್ಡ್ ಟೈಸನ್, ಚಾರ್ಲ್ಟನ್ ಹೆಸ್ಟನ್ ಮತ್ತು ಪಾಟ್ ಮೊರಿಟ ನಟಿಸಿದ್ದಾರೆ.
- ಗೆಂಘಿಸ್ ಖಾನ್ - A Proud Son Of Heaven (1998 ಚಿತ್ರ) ಚಿತ್ರವನ್ನು ಇಂಗ್ಲಿಷ್ ಉಪಶೀರ್ಷಿಕೆಯೊಂದಿಗೆ ಮಂಗೋಲಿಯಾದಲ್ಲಿ ನಿರ್ಮಾಣ ಮಾಡಲಾಯಿತು.
- ಗೆಂಘಿಸ್ ಖಾನ್‌ನ ಜೀವನದ ಮೇಲೆ ಆಧಾರಿತವಾಗಿರುವ ಜಪಾನೀಯರ-ಮಂಗೋಲಿಯಾದ "The Descendant of Gray Wolf" ಎಂದೂ ಪ್ರಸಿದ್ದಿಯಾಗಿರುವ ಚಿತ್ರವು ೨೦೦೭ರಲ್ಲಿ ಬಿಡುಗಡೆಗೊಂಡಿತು.
- ಸರ್ಜಿ ಬೊಡ್ರೊವ್ನ ಚಲನಚಿತ್ರ Mongol ೨೦೦೭ರಲ್ಲಿ ಬಿಡುಗಡೆಗೊಂಡಿತು. (ಉತ್ತಮ ವಿದೇಶಿ ಭಾಷೆಯ ಚಲನಚಿತ್ರಕ್ಕಾಗಿ (ಅಕಾಡೆಮಿ ಅವಾರ್ಡ್ಗೆ ನಾಮನಿರ್ದೇಶನಗೊಂಡಿದೆ. )
| (TV ಸರಣಿ)
ಬದಲಾಯಿಸಿ- ಗೆಂಘಿಸ್ ಖಾನ್ : Hong Kongನ TVB ನಿರ್ಮಾಣದ ಈ ೧೦ ಕಂತಿನ ದೂರದರ್ಶನದ ಧಾರಾವಾಹಿಯಲ್ಲಿ ೧೯೮೭ರಲ್ಲಿ ಅಲೆಕ್ಸ್ ಮನ್ ಅವರು ಗೆಂಘಿಸ್ ಖಾನ್‌ನ ಪಾತ್ರದಲ್ಲಿ ನಟಿಸಿದ್ದಾರೆ.
- ಗೆಂಘಿಸ್ ಖಾನ್ Hong Kongನ ATV ನಿರ್ಮಾಣದ ೨೦ ಕಂತಿನ ದೂರದರ್ಶನದ ಧಾರಾವಾಹಿಯನ್ನು ೧೯೮೭ರಲ್ಲಿ , ಟೋನಿ ಲಿಯು ಅವರು ಗೆಂಘಿಸ್ ಖಾನ್‌ನ ಪಾತ್ರದಲ್ಲಿ ನಟಿಸಿದ್ದಾರೆ.
- ಗೆಂಘಿಸ್ ಖಾನ್ : ೨೦೦೪ರಲ್ಲಿ ನಿರ್ಮಿಸಿದ ಗೆಂಘಿಸ್ ಖಾನ್ ಜೀವನವನ್ನು ಬಿಂಬಿಸುವ ಚಾರಿತ್ರಿಕ ಮಹಾಕಾವ್ಯದ ದೂರದರ್ಶನ ಧಾರಾವಾಹಿಯಲ್ಲಿ, ಬ ಸೆನ್(巴森)ಅವರು ಗೆಂಘಿಸ್ ಖಾನ್‌ನ ಪಾತ್ರದಲ್ಲಿ ನಟಿಸಿದ್ದಾರೆ.
ಕಾದಂಬರಿಗಳು
ಬದಲಾಯಿಸಿ- ಕಾನ್ ಇಗ್ಗುಲ್ಡನ್ ಬರೆದ ಕಾದಂಬರಿಗಳ ಸರಣಿಗಳು The Conqueror
ಸಣ್ಣ ಕಥೆಗಳು
ಬದಲಾಯಿಸಿ- ಡಗ್ಲಸ್ ಅಡಮ್ಸ್ ಮತ್ತು ಗ್ರಹಮ್ ಚಾಪ್ಮನ್ ಇವರುಗಳು ರಚಿಸಿದ The Private Life of Genghis khan
ಹೆಸರು ಮತ್ತು ಶೀರ್ಷಿಕೆ
ಬದಲಾಯಿಸಿತೆಮುಜಿನ್ನ ಹೆಸರಿನ ಮೂಲಗಳ ಬಗೆಗೆ ಅನೇಕ ಸಿದ್ಧಾಂತಗಳಿವೆ. ಮುಂದೆ ಮಂಗೋಲ್ ದೇಶದ ಜನ ಹೆಸರನ್ನು ಚಿಂಗ್ (ಶಕ್ತಿಗೆ ಹೆಸರಾದ ಮಂಗೋಲಿಯನ್) ಜೊತೆ ಸೇರಿಸಿಕೊಂಡಿದ್ದರಿಂದ ಇದು ನಿರುಕ್ತಿಯನ್ನು ಅನುಸರಿಸದಿದ್ದರೂ ಇಂತಹ ಗೊಂದಲಗಳು ಅನಿವಾರ್ಯ.
ಈ ಹೆಸರು ಹುಟ್ಟಿಕೊಂಡದ್ದು ಮಂಗೋಲಿಯನ್ ಮತ್ತು ಟರ್ಕಿಕ್ ಶಬ್ಧಗಳಾದ ಟೆಂಗಿಸ್ , ಅಂದರೆ "ಸಾಗರ" , "ಸಾಗರಪರಿಣಾಮಿ" ಅಥವಾ "ವಿಶಾಲವಾಗಿ ಹರಡಿಕೊಳ್ಳುವಿಕೆ" ಮಂಗೋಲರು ಬೈಕಾಲ್ ಸರೋವರ ಮತ್ತು ಸಮುದ್ರವನ್ನು ಟೆಂಗಿಸ್ ಎಂದು ಕರೆಯುತ್ತಿದ್ದರು. ಏನೇ ಆದರೂ ಅವರು ಗೆಂಘಿಸ್ ಅಂದರೆ ಟೆಂಗಿಸ್ ಅರ್ಥದಲ್ಲಿ ಟೆಂಗಿಸ್ ಖಾನ್ ಎಂದು ಎಂದು ಕರೆಯಬಹುದಿತ್ತು (ಬರೆಯಬಹುದಿತ್ತು) ಎಂಬುದು ಅವರ ಇಂಗಿತವಾಗಿದ್ದಂತೆ ಕೋರುತ್ತದೆ, ಆದರೆ ಅವರು ಹಾಗೆ ಮಾಡಲಿಲ್ಲ. ಝೆಂಗ್ (ಚೈನೀಸ್:正) ಅಂದರೆ "ಸರಿ", "ನ್ಯಾಯ" ಅಥಾವ "ನಿಜ" ಎಂಬ ಶಬ್ಧ ಮಂಗೋಲಿಯಾದ ಗುಣವಾಚಕ -s ಸುಧಾರಣೆ ಪಡೆದುಕೊಂಡು "ಜೆಂಗಿಸ್ ಎಂಬ ಶಬ್ಧ ಸೃಷ್ಟಿಯಾಗಿರಬಹುದು ಮತ್ತು ಇದು ಮಧ್ಯಕಾಲೀನ ರೋಮನೀಕರಣದಿಂದ "ಗೆಂಘಿಸ್" ಎಂದು ಬರೆಯಲ್ಪಟ್ಟಿರಬಹುದು. [ಸೂಕ್ತ ಉಲ್ಲೇಖನ ಬೇಕು] ೧೩ನೆಯ ಶತಮಾನದ ಮಂಗೋಲ್ ಉಚ್ಚಾರಣೆ "ಚಿಂಗಿಸ್"ಗೆ ಸರಿ ಹೊಂದುವ ಸಾಧ್ಯತೆಗಳಿವೆ. ಹೆಚ್ಚಿನ ಓದಿಗಾಗಿ ಮುಂದೆ ಕೊಟ್ಟಿರುವ ಲಿಸ್ಟರ್ ಮತ್ತು ರಾಚ್ನೆವ್ನ್‌ಸ್ಕಿ ಆಕರಗಳನ್ನು ನೋಡಿ
"ಗೆಂಘಿಸ್" ನ ಇಂಗ್ಲಿಷ್ ಭಾಷಾ ಅಕ್ಷರಗಳದು ಅಸ್ಪಷ್ಟ ಮೂಲ, ಮೂಲ ಪರ್ಷಿಯನ್ ವರದಿಗಳಲ್ಲಿ ಬಳಸಿರುವ ಅಕ್ಷರಗಳಿಂದ ಇದು ಹುಟ್ಟಿಕೊಂಡಿರಬಹುದೆಂದು ವೆದರ್ಫೋರ್ಡ್ ಹೇಳಿಕೊಳ್ಳುತ್ತಾರೆ. ಆದರೂ ಚಾರಿತ್ರಿಕ ಪರ್ಷಿಯನ್ ಮೂಲಗಳ ಪರಾಮರ್ಶೆ ಇದನ್ನು ಖಚಿತಪಡಿಸುವುದಿಲ್ಲ.[೩೬]
ಮಂಗೋಲ್‌ನ ಗುಪ್ತ ಚರಿತ್ರೆಯ ಪ್ರಕಾರ ಆತನ ತಂದೆಯ ಯೆಸುಗಾಯ್ ಸೆರೆಹಿಡಿದ ತತಾರ್ ಬುಡಕಟ್ಟಿನ ಶಕ್ತಿಶಾಲಿ ಯುದ್ಧಾಳುವಿನ ಹೆಸರನ್ನು ತೆಮುಜಿನ್‌ಗೆ ಕಟ್ಟಲಾಗಿದೆ. ತೆಮುರ್ ಎಂದರೆ ಕಬ್ಬಿಣ (ಆಧುನಿಕ ಮಂಗೋಲಿಯನ್‌ನಲ್ಲಿтөмөр ತೊಮರ್ ) ಎಂಬ ಶಬ್ಧದಿಂದ "ತೆಮುಜಿನ್" ಎಂಬ ಶಬ್ಧ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಹೆಸರು ಕಮ್ಮಾರ ಕುಶಲತೆಯನ್ನು ಸೂಚಿಸುತ್ತದೆ.
ಗೆಂಘಿಸ್ ಖಾನ್‌ಗೆ ಕಮ್ಮಾರಿಕೆಯಲ್ಲಿ ಯಾವುದೇ ವಿಶೇಷ ತರಬೇತಿ ಅಥವಾ ಪ್ರಸಿದ್ಧಿ ಇರುವ ಕುರಿತಂತೆ ಯಾವುದೇ ಸಾಕ್ಷಿಗಳು ಉಳಿದಿಲ್ಲದಿರುವ ಸಾಧ್ಯತೆಗಳಿವೆ, ಒಂದು ಕಾಲದಲ್ಲಿ ಕಮ್ಮಾರರೆಂದು ಹೆಸರಾಗಿದ್ದ ಕುಟುಂಬದ, ಈ ಹೆಸರು ಸೂಚಿಸುತ್ತದೆ. ತೆಮುಲಿನ್ ಮತ್ತು ತೆಮೂಜ್ ಎಂಬ ಗೆಂಘಿಸ್‌ಖಾನ್‌ನ ತಮ್ಮಂದಿರ ಹೆಸರುಗಳು ಅದೇ ಶಬ್ದ ಮೂಲದಿಂದ ಹುಟ್ಟಿ ಕೊಂಡಿದ್ದು ಈ ವ್ಯಾಖ್ಯಾನವನ್ನು ಸಮರ್ಥಿಸುವಂತಿದೆ.
ಹೆಸರು ಮತ್ತು ಕಾಗುಣಿತದ ವ್ಯತ್ಯಾಸಗಳು
ಬದಲಾಯಿಸಿಗೆಂಘಿಸ್ ಖಾನ್‌ನ ಹೆಸರನ್ನು ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ,Chinese: 成吉思汗; pinyin: Chéngjísī Hán ಅವೆಂದರೆ, ಟರ್ಕಿಕ್: ಸೆಂಗಿಝ್ ಖಾನ್ , ಚೆಂಗೆಝ್ ಖಾನ್ ,ಚಿಂಗಿಸ್ ಖಾನ್ , ಚಿಂಗಿಸ್ ಗ್ಸಾನ್ , ಚಿಂಗಿಸ್ ಖಾನ್ , ಜೆಂಗಿಸ್ ಖಾನ್ , ಚಿಂಗಿಸ್ ಕಾನ್ , ಡ್ಜಿಂಗಿಸ್ ಖಾನ್ ಇತ್ಯಾದಿ. ತೆಮುಜಿನ್ ಅನ್ನು ಚೈನೀಸ್ ನಲ್ಲಿ ಬರೆಯುವುದುsimplified Chinese: 铁木真; traditional Chinese: 鐵木眞; pinyin: Tiěmùzhēn.
ಕುಬ್ಲಾಯ್ ಖಾನ್ ಯುವಾನ್ ಡಿನಾಸ್ಟಿಯನ್ನು ೧೨೭೧ರಲ್ಲಿ ಸ್ಥಾಪಿಸಿದಾಗ, ಆತ ತನ್ನ ಅಧಿಕೃತ ದಾಖಲೆಗಳಲ್ಲಿ ತನ್ನ ತಾತ ಗೆಂಘಿಸ್ ಖಾನ್‌ನನ್ನು ತನ್ನ ವಂಶಜ ಹಾಗೂ ತೈಝುನ ಸ್ಥಾಪಕನೆಂದು ನಮೂದಿಸಿದ್ದಾನೆ (Chinese: 太祖). ಹೀಗೆ, ಚೀನೀಯರ ಇತಿಹಾಸದಲ್ಲಿಯೂ ಯುವಾನ್ ತಾಯ್‌ಝು ಎಂದು ಗುರುತಿಸಲ್ಪಡುತ್ತಾನೆ.(Chinese: 元太祖) .
ಕಾಲದ ಪಂಕ್ತಿ
ಬದಲಾಯಿಸಿ- ಬಹುಶಃ ೧೧೫೫, ೧೧೬೨, or ೧೧೬೭: ತೆಮುಜಿನ್ ಖೆಂಟಿ ಪರ್ವತಗಳಲ್ಲಿ ಜನಿಸಿದನು.
ಒಂಭತ್ತು ವರ್ಷದವನಿದ್ದಾಗ, ತೆಮುಜಿನ್‌ನ ತಂದೆ ಯೆಸುಖೆಯ್‌ಗೆ ತತಾರರು ವಿಷ ಕೊಟ್ಟರು, ಅವನನ್ನು ಮತ್ತು ಕುಟುಂಬವನ್ನು ಅನಾಥರನ್ನಾಗಿ ಮಾಡಿ ತಂದೆ ವಿಧಿವಶರಾದರು.
- c. ೧೧೮೪: ತೆಮುಜಿನ್‌ನ ಹೆಂಡತಿ ಬೋರ್ತೆಯನ್ನು ಮರ್ಕಿಟರು ಅಪಹರಿಸಿದರು ; ಅವನು ತನ್ನ ರಕ್ತಸಂಬಂಧಿ ಸಹೋದರ ಜಮುಕ ಮತ್ತು ವಾಂಗ್ ಖಾನ್‌ನನ್ನು ಸಹಾಯಕ್ಕೆ ಕರೆದು, ಆಕೆಯನ್ನು ಬಿಡಿಸಿಕೊಂಡು ಕರೆತಂದರು.
- c. ೧೧೮೫: ಮೊದಲ ಮಗ ಜೋಚಿಯ ಜನ್ಮ ರಹಸ್ಯದ ಬಗ್ಗೆ ಅನುಮಾನ ಉಂಟಾಗಿತ್ತು, ಏಕೆಂದರೆ ಮರ್ಕಿಟರಿಂದ ಅಪಹರಣಕ್ಕೊಳಗಾದ ಬೋರ್ತೆ ಹಿಂತಿರುಗಿ ಕರೆತಂದ ಕೆಲವೇ ಸಮಯಕ್ಕೆ ಆಕೆ ಜೋಚಿಗೆ ಜನ್ಮ ನೀಡಿದ್ದು ಸಂಶಯಾಸ್ಪದವಾಗಿತ್ತು.
- ೧೧೯೦: ತೆಮುಜಿನ್ ಮಂಗೋಲ್ ಬುಡಕಟ್ಟುಗಳನ್ನು ಒಗ್ಗೂಡಿಸಿದ, ನಾಯಕನಾದ, ಮತ್ತು ಯಸ್ಸಾ ಕಾನೂನು ಸಂಹಿತೆಯನ್ನು ಜಾರಿಗೆ ತಂದ
- ೧೨೦೧: ಜದರನ್ನರ ಜಮುಕನ ಮೇಲೆ ವಿಜಯ ಸಾಧಿಸಿದನು.
- ೧೨೦೨: ತತಾರರ ಮೇಲೆ ದಂಡಯಾತ್ರೆ ನಡೆಸಿ ಯಶಸ್ವಿಯಾದ ನಂತರ ವಾಂಗ್ ಖಾನ್‌ನ ಉತ್ತರಾಧಿಕಾರಿಯನ್ನು ಸ್ವೀಕರಿಸಿದನು
- ೧೨೦೩: ಕೆರಾಯಟರ ವಾಂಗ್ ಖಾನ್‌ನ ಮೇಲೆ ವಿಜಯ ಸಾಧಿಸಿದ. ನಾಯಿಮನ್ನರಿಂದ ಅಪಘಾತದಲ್ಲಿ ವಾಂಗ್ ಖಾನ್ ತಾನೇ ಕೊಲೆಯಾದ.
- ೧೨೦೪: ನಾಯಿಮನ್ನರನ್ನು ಸೋಲಿಸಿದನು ( ಈ ಎಲ್ಲ ಸಮುದಾಯಗಳು ಒಟ್ಟಾಗಿ ಮಂಗೋಲರಾದರು).
- ೧೨೦೬: ಜಮುಕನು ಕೊಲೆಯಾದನು ಕುರುಲ್‌ತಾಯ್‌ನಲ್ಲಿ ಅವನ ಹಿಂಬಾಲಕರೆಲ್ಲ ಸೇರಿ ಆತನಿಗೆ ಗೆಂಘಿಸ್ ಖಾನ್ ಎಂಬ ಹೆಸರನ್ನು ಕೊಟ್ಟರು (ಆತನ ೪೦ನೆ ವಯಸ್ಸಿನಲ್ಲಿ).
- ೧೨೦೭–೧೨೧೦: ಗೆಂಘಿಸ್ ಪಶ್ಚಿಮ ಗ್ಸಿಯಾದ ಮೇಲೆ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದನು, ಅದು ವಾಯುವ್ಯ ಚೈನಾ ಮತ್ತು ಟಿಬೆಟ್‌ನ ಕೆಲವು ಭಾಗಗಳನ್ನೊಳಗೊಂಡಿತ್ತು. ಪಶ್ಚಿಮ ಗ್ಸಿಯಾದ ಆಡಳಿತಗಾರ ಗೆಂಘಿಸ್ ಖಾನ್‌ಗೆ ಒಪ್ಪಿಸಿದ. ಈ ಅವಧಿಯಲ್ಲಿ, ಉಯ್‌ಘುರರು ಸಹ ಶಾಂತಿಯುತವಾಗಿ ಮಂಗೋಲರಿಗೆ ಶರಣಾದರು ಮತ್ತು ಅವರ ಚಕ್ರಾಧಿಪತ್ಯದ ಉದ್ದಕ್ಕೂ ನಂಬಿಕಸ್ಥ ವ್ಯವಸ್ಥಾಪಕರಾಗಿ ಉಳಿದರು.
- ೧೨೧೧: ಕುರುಲ್ತಾಯ್‌ನ ನಂತರ, ಗೆಂಘಿಸ್ ಉತ್ತರ ಚೀನಾವನ್ನು ಆಳುತ್ತಿದ್ದ ಜಿನ್ ವಂಶಸ್ಥರ ವಿರುದ್ಧ ತನ್ನ ಸೈನ್ಯವನ್ನು ಕಳುಹಿಸಿ ವಶಪಡಿಸಿಕೊಂಡ.
- ೧೨೧೫: ಬೀಜಿಂಗ್ ನೆಲಕಚ್ಚಿದ್ದು; ಗೆಂಘಿಸ್ ಖಾನ್ ಪಶ್ಚಿಮದೆಡೆಗೆ ತಿರುಗಿದ ಮತ್ತು ಕಾರಾ-ಕೈತಾನ್ ಖಾನಟೆ.
- ೧೨೧೯–೧೨೨೨: ಖ್ವಾರೆಝ್ಮಿದ್ ಚಕ್ರಾದಿಪತ್ಯವನ್ನು ವಶಪಡಿಸಿಕೊಂಡಿದ್ದು.
- ೧೨೨೬: ಪಶ್ಚಿಮ ಗ್ಸಿಯಾದೊಂದಿಗೆ ದಂಡಯಾತ್ರೆ ಆರಂಭಿಸಿ ಮಂಗೋಲರ ವಿರುದ್ಧ ಒಕ್ಕೂಟ ಸ್ಥಾಪಿಸಿದ್ದು, ಪಶ್ಚಿಮ ಗ್ಸಿಯಾದೊಂದಿಗೆ ಎರಡನೇ ಕಾಳಗ.
- ೧೨೨೭: ತಾಂಗೂಟರನ್ನು ಸೋಲಿಸಿದ ನಂತರ ಗೆಂಘಿಸ್ ಖಾನ್ ಮೃತನಾದ ಆತನ ಸಾವಿಗೆ ಕಾರಣ ಖಚಿತವಾಗಿ ತಿಳಿದಿಲ್ಲ, ಆದರೂ ದಂತಕಥೆಗಳು ಹೇಳುವಂತೆ ಕಾಳಗದಲ್ಲಿ ಕುದುರೆಯಿಂದ ಎಸೆಯಲ್ಪಟ್ಟ ಮತ್ತು ಸಾಯುವಂತಹ ಜ್ವರಕ್ಕೆ ತುತ್ತಾಗಿ ಮರಣ ಹೊಂದಿದ.
ಇದನ್ನೂ ನೋಡಿ
ಟಿಪ್ಪಣಿಗಳು
ಬದಲಾಯಿಸಿ- ↑ [1] ^ ಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ಇಂಗ್ಲೀಷ್ ಭಾಷಾ ನಾಲ್ಕನೆಯ ಸಂಪುಟ
- ↑ ೨.೦ ೨.೧ Rashid al-Din asserts that ಗೆಂಘಿಸ್ ಖಾನ್ lived to the age of ೭೨, placing his year of birth at ೧೧೫೫. The Yuanshi (元史, History of the Yuan dynasty , not to be confused with the era name of the Han Dynasty), records his year of birth as ೧೧೬೫. According to Ratchnevsky, accepting a birth in ೧೧೫೫ would render ಗೆಂಘಿಸ್ ಖಾನ್ a father at the age of ೩೦ and would imply that he personally commanded the expedition against the Tanguts at the age of ೭೨. Also, according to the Altan Tobci , ಗೆಂಘಿಸ್ ಖಾನ್'s sister, Temülin, was nine years younger than he; but the Secret History relates that Temülin was an infant during the attack by the Merkits, during which ಗೆಂಘಿಸ್ ಖಾನ್ would have been ೧೮, had he been born in ೧೧೫೫. Zhao Hong reports in his travelogue that the Mongols he questioned did not know and had never known their ages.
- ↑ Bourgoin, Stella (2002). "The Life and Legacy of Chingis Khan". University of California, Berkeley. Archived from the original on 2008-01-15. Retrieved 2008-04-29.
{{cite web}}
: CS1 maint: bot: original URL status unknown (link) - ↑ "Genghis Khan". North Georgia College and State University. Archived from the original on 2010-03-06. Retrieved 2010-01-26.
- ↑ Ratchnevsky, Paul (1991). Genghis Khan: His Life and Legacy. Blackwell Publishing. pp. 9–10. ISBN 0-631-16785-4.
- ↑ Morgan, David (1990). The Mongols (Peoples of Europe). p. 58.
- ↑ Guida Myrl Jackson-Laufer, Guida M. Jackson-Encyclopedia of traditional epics,p. ೫೨೭
- ↑ Paul Kahn, Francis Woodman Cleaves-The secret history of the Mongols, p.೧೯೨
- ↑ "THE MONGOLS — PART I". Republican China. Retrieved 2008-05-20.
- ↑ "The Emperors of Emperors". California State University, Chico. Archived from the original on 2012-03-16. Retrieved 2008-05-20.
- ↑ "Genghis Khan Biography (1162/7–1227)". The Biography Channel. Retrieved 2008-05-20.
- ↑ Grousset, Rene (1944). Conqueror of the World: The Life of Chingis-khan. New York: Viking Press.
- ↑ Weatherford, Jack (2004). "2: Tale of Three Rivers". Genghis Khan and the Making of the Modern World. Three Rivers Press. p. 44. ISBN 0-609-80964-4.
{{cite book}}
: External link in
(help)|chapter=
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedresurrection
- ↑ De Hartog, Leo (1988). Genghis Khan: Conqueror of the World. ಲಂಡನ್, UK: I.B. Tauris. pp. 122–123.
- ↑ Ratchnevsky 1991, p. 126
- ↑ Ratchnevsky 1991, pp. 136–7
- ↑ Haenisch, Erich (1948). Die Geheime Geschichte der Mongolen. Leipzig. pp. 133, 136.
{{cite book}}
: CS1 maint: location missing publisher (link) - ↑ Heissig, Walther (1964). Die Mongolen. Ein Volk sucht seine Geschichte. Düsseldorf. p. 124.
{{cite book}}
: CS1 maint: location missing publisher (link) - ↑ "Palace of Genghis Khan unearthed". BBC. 2004-10-07. Retrieved 2008-05-20.
- ↑ Pocha, Jehangir S. (2005-05-10). "Mongolia sees Genghis Khan's good side". International Herald Tribune. Archived from the original on 2005-05-11. Retrieved 2008-05-20.
- ↑ Clive Foss, The Tyrants , page ೫೭, Quercus, London, ೨೦೦೭.
- ↑ "Ismi Didikle" (in Turkish). Ismi Didikle. Retrieved 2008-05-05.
{{cite web}}
: CS1 maint: unrecognized language (link) - ↑ Christopher Kaplonski: The case of the disappearing Chinggis Khaan .
- ↑ Once Shunned, ಗೆಂಘಿಸ್ ಖಾನ್ Conquers Mongolia Again.
- ↑ "Business | Genghis Khan may get protection". BBC News. 2006-10-06. Retrieved 2009-08-03.
- ↑ "ASIA-PACIFIC | Mongolia glorifies Genghis Khan". BBC News. 2002-05-03. Retrieved 2009-08-03.
- ↑ Griffiths, Daniel (2007-01-11). "Asia-Pacific | Post-communist Mongolia's struggle". BBC News. Retrieved 2009-08-03.
- ↑ Inner Mongolia Travel Guide Archived 2010-08-12 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "The Legacy of ಗೆಂಘಿಸ್ ಖಾನ್" at Los Angeles County Museum of Art--again Archived 2007-01-10 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Zerjal, et el. (2003). "The Genetic Legacy of the Mongols". The American Journal of Human Genetics. 72 (3): 717–721. doi:10.1086/367774. Retrieved 2007-12-28.
{{cite journal}}
: Cite has empty unknown parameter:|month=
(help) - ↑ Genetics: Analysis Of Genes And Genomes By Daniel L. Hartl, Elizabeth W. Jones, p. ೩೦೯.
- ↑ Phoenix From the Ashes: A Tale of the Book in Iran.
- ↑ Civilizations: How we see others, how others see us.
- ↑ Zerjal, et el. (2003). "The Genetic Legacy of the Mongols". The American Journal of Human Genetics. 72 (3): 717–721. doi:10.1086/367774. Retrieved 2007-12-28.
{{cite journal}}
: Cite has empty unknown parameter:|month=
(help) - ↑ Timothy May. "Book Review". North Georgia College and State University. Archived from the original on 2007-10-10. Retrieved 2008-02-20.
ಆಕರಗಳು
ಬದಲಾಯಿಸಿ- Ratchnevsky, Paul (1992, c1991). Genghis Khan: His Life and Legacy [Čingis-Khan: sein Leben und Wirken]. tr. & ed. Thomas Nivison Haining. Oxford, UK; Cambridge, Mass., USA: B. Blackwell. ISBN ISBN 0-631-16785-4.
{{cite book}}
: Check|isbn=
value: invalid character (help); Check date values in:|year=
(help)CS1 maint: year (link)
ಹೆಚ್ಚಿನ ಓದಿಗೆ
ಬದಲಾಯಿಸಿ- Brent, Peter (1976). The Mongol Empire: Genghis Khan: His Triumph and His Legacy. London: Weidenfeld & Nicholson. ISBN 029777137X.
- Bretschneider, Emilii (1888, repr. 2001). Mediæval Researches from Eastern Asiatic Sources; Fragments Towards the Knowledge of the Geography & History of Central & Western Asia. Trübner's Oriental Series. London: Kegan Paul, Trench, Trübner & Co (repr. Munshirm Manoharlal Pub Pvt Ltd). ISBN 81-215-1003-1.
{{cite book}}
: Check date values in:|year=
(help)CS1 maint: year (link) - Cable, Mildred (1943). The Gobi Desert. London: Landsborough Publications.
{{cite book}}
: Unknown parameter|coauthors=
ignored (|author=
suggested) (help) - Charney, Israel W. (ed.) (1994). Genocide: A Critical Bibliographic Review. New York: Facts on File Publications.
{{cite book}}
:|first=
has generic name (help) - De Hartog, Leo (1988). Genghis Khan: Conqueror of the World. London: I.B. Tauris & Co. Ltd.
- (French) Farale, Dominique (2002). De Gengis Khan à Qoubilaï Khan : la grande chevauchée mongole. Campagnes & stratégies. Paris: Economica. ISBN 2-7178-4537-2.
- (French) Farale, Dominique (2007). La Russie et les Turco-Mongols : 15 siècles de guerre. Paris: Economica. ISBN 978-2-7178-5429-9.
- "Genghis Khan". Funk & Wagnalls New Encyclopedia. World Almanac Education Group. 2005. Archived from the original on 2006-01-13. Retrieved 2008-05-22.
{{cite encyclopedia}}
: CS1 maint: bot: original URL status unknown (link) Via the Internet Archive's copy of the History Channel Web site. - Smitha, Frank E. "Genghis Khan and the Mongols". Macrohistory and World Report. Retrieved 2005-06-30.
- Kahn, Paul (adaptor) (1998). Secret History of the Mongols: The Origin of Chingis Khan (expanded edition): An Adaptation of the Yüan chʾao pi shih, Based Primarily on the English Translation by Francis Woodman Cleaves. Asian Culture Series. Boston: Cheng & Tsui Co. ISBN 0-88727-299-1.
- Kennedy, Hugh (2002). Mongols, Huns & Vikings. London: Cassell. ISBN ISBN 0-304-35292-6.
{{cite book}}
: Check|isbn=
value: invalid character (help) - Kradin, Nikolay (2006). Imperiia Chingis-khana (Chinggis Khan Empire). Moscow: Vostochnaia literatura. ISBN 5-02-018521-3.
{{cite book}}
: Unknown parameter|coauthors=
ignored (|author=
suggested) (help) (Russian) (summary in English) - Kradin, Nikolay (2006). "Why do we call Chinggis Khan's Polity 'an Empire'". Ab Imperio. 7 (1): 89–118. 5-89423-110-8.
{{cite journal}}
: Unknown parameter|coauthors=
ignored (|author=
suggested) (help) - Lamb, Harold (1927). Genghis Khan: The Emperor of All Men. New York: R. M. McBride & company.
{{cite book}}
: Cite has empty unknown parameter:|unused_data=
(help); Text "a" ignored (help) - Lister, R. P. (2000 [c1969]). Genghis Khan. Lanham, Maryland: Cooper Square Press. ISBN 0-8154-1052-2.
{{cite book}}
: Check date values in:|year=
(help)CS1 maint: year (link) - Man, John (2004). Genghis Khan: Life, Death and Resurrection. London; New York: Bantam Press. ISBN ISBN 0-593-05044-4.
{{cite book}}
: Check|isbn=
value: invalid character (help) - Man, John (1997, 1998, 1999). Gobi: Tracking the Desert. London; New Haven, Conn: Weidenfeld & Nicolson; Yale University Press. ISBN 0-7538-0161-2.
{{cite book}}
: Check date values in:|year=
(help)CS1 maint: year (link) - Martin, Henry Desmond (1950). The Rise of Chingis Khan and his Conquest of North China. Baltimore: Johns Hopkins Press.
- May, Timothy (2001). "Mongol Arms". Explorations in Empire: Pre-Modern Imperialism Tutorial: The Mongols. San Antonio College History Department. Archived from the original on 2008-05-18. Retrieved 2008-05-22.
- Morgan, David (1986). The Mongols. The Peoples of Europe. Blackwell Publishing. ISBN 0-631-17563-6.
- Saunders, J.J. (1972, repr. 2001). History of the Mongol Conquests. Philadelphia: University of Pennsylvania Press. ISBN 0812217667.
{{cite book}}
: Check date values in:|year=
(help)CS1 maint: year (link) - Stevens, Keith. "Heirs to Discord: The Supratribal Aspirations of Jamuka, Toghrul, and Temüjin" PDF (72.1 KB) Retrieved ೨೨ May ೨೦೦೮.
- Stewart, Stanley (2001). In the Empire of Genghis Khan: A Journey among Nomads. London: Harper Collins. ISBN ISBN 0-00-653027-3.
{{cite book}}
: Check|isbn=
value: invalid character (help) - Turnbull, Stephen (2003). Genghis Khan & the Mongol Conquests 1190-1400. Oxford: Osprey Publishing. ISBN 1-84176-523-6.
- Valentino, Benjamin A. (2004). Final Solutions: Mass Killing and Genocide in the Twentieth Century. Ithaca, N.Y.: Cornell University Press. ISBN 0801439655.
- Weatherford, Jack (2004). Genghis Khan and the Making of the Modern World (review). New York: Crown. ISBN 0-609-61062-7.
{{cite book}}
: External link in
(help)|title=
- Zerjal, Xue, Bertorelle, Wells, Bao, Zhu, Qamar, Ayub, Mohyuddin, Fu, Li, Yuldasheva, Ruzibakiev, Xu, Shu, Du, Yang, Hurles, Robinson, Gerelsaikhan, Dashnyam, Mehdi, Tyler-Smith (2003). "The Genetic Legacy of the Mongols" ( – Scholar search). The American Journal of Human Genetics. 72 (72): 717–721, . doi:10.1086/367774.
{{cite journal}}
: External link in
(help)CS1 maint: extra punctuation (link) CS1 maint: multiple names: authors list (link)|format=
ಪ್ರಾಥಮಿಕ ಮೂಲಗಳು
ಬದಲಾಯಿಸಿ- Juvaynī, Alā al-Dīn Atā Malik, 1226–1283 (1997). Genghis Khan: The History of the World-Conqueror [Tarīkh-i jahāngushā]. tr. John Andrew Boyle. Seattle: University of Washington Press. ISBN 0-295-97654-3.
{{cite book}}
: CS1 maint: multiple names: authors list (link) CS1 maint: numeric names: authors list (link) - Rashid al-Din Tabib (1995). A Compendium of Chronicles: Rashid al-Din's Illustrated History of the World Jami' al-Tawarikh. The Nasser D. Khalili Collection of Islamic Art, Vol. XXVII. Sheila S. Blair (ed.). Oxford: Oxford University Press. ISBN 0-19-727627-X.
- Rashid al-Din Tabib (1971). The Successors of Genghis Khan (extracts from Jami’ Al-Tawarikh). UNESCO Collection of Representative Works: Persian heritage series. tr. from the Persian by John Andrew Boyle. New York: Columbia University Press. ISBN 0-231-03351-6.
- The Secret History of the Mongols: A Mongolian Epic Chronicle of the Thirteenth Century [Yuan chao bi shi]. Brill's Inner Asian Library vol. 7. tr. Igor De Rachewiltz. Leiden; Boston: Brill. 2004. ISBN 90-04-13159-0.
{{cite book}}
: CS1 maint: others (link)
ಹೊರಗಿನ ಕೊಂಡಿಗಳು
ಬದಲಾಯಿಸಿFind more about ಜೆಂಘಿಸ್ ಖಾನ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- Book Review of ಗೆಂಘಿಸ್ ಖಾನ್ by Leo De Hartog
- ಗೆಂಘಿಸ್ ಖಾನ್ and the Mongols
- Welcome to The Realm of the Mongols
- Parts of this biography were taken from the Area Handbook series at the Library of Congress
- Coverage of Temüjin's Earlier Years Archived 2019-11-06 ವೇಬ್ಯಾಕ್ ಮೆಷಿನ್ ನಲ್ಲಿ.
- Estimates of Mongol warfare casualties
- ಗೆಂಘಿಸ್ ಖಾನ್ on the Web (directory of some ೨೫೦ resources)
- Mongol Arms Archived 2008-05-18 ವೇಬ್ಯಾಕ್ ಮೆಷಿನ್ ನಲ್ಲಿ.
- ಗೆಂಘಿಸ್ ಖಾನ್'s leadership approach - LeaderValues Archived 2012-01-12 ವೇಬ್ಯಾಕ್ ಮೆಷಿನ್ ನಲ್ಲಿ.
- BBC Radio 4 programme In Our Time , topic was ಗೆಂಘಿಸ್ ಖಾನ್ February ೨೦೦೭
- ‘Ala’ al-Din ‘Ata Malik Juvayni A History of the World-Conqueror Ghengis ಗೆಂಘಿಸ್ ಖಾನ್, Ata al-Mulk Juvayni and Rashid-al-Din Hamadani