ವಿಷಯಕ್ಕೆ ಹೋಗು

5 ಎಸ್ ತಂತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
5S ಶಿಷ್ಟಾಚಾರದ ಪ್ರಕಾರ ಜೋಡಿಸಿರುವ ಸಲಕರಣೆಗಳ ಪೆಟ್ಟಿಗೆ

5S ಎನ್ನುವುದು ಕೆಲಸದ ಜಾಗವನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ಒಂದು ವಿಧಾನ. seiri, seiton, seiso, seiketsu, ಮತ್ತು shitsuke ಎಂಬ ಜಪಾನಿ ಭಾಷೆಯ ಐದು ಪದಗಳನ್ನು S ಅಕ್ಷರದಿಂದ ಶುರುವಾಗುವ ಐದು ಇಂಗ್ಲೀಷಿನ ಪದಗಳಿಗೆ ಅನುವಾದಿಸಲಾಗಿದೆ.[] ಪರಿಣಾಮಕಾರಿ ಹಾಗೂ ಸಮರ್ಥ ಕೆಲಸಕ್ಕಾಗಿ ಕೆಲಸದ ಜಾಗವನ್ನು ಹೇಗೆ ವ್ಯವಸ್ಥಿತವಾಗಿಟ್ಟುಕೊಳ್ಳಬೇಕು ಎಂಬುದನ್ನು ಈ ಪಟ್ಟಿ ಸೂಚಿಸುತ್ತದೆ. ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು, ಕೆಲಸದ ಜಾಗವನ್ನು ಮತ್ತು ವಸ್ತುಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಇದು ಹೇಳುತ್ತದೆ.[] ಈ ಶಿಷ್ಟೀಕರಣದ (standardization) ಬಗ್ಗೆ ಪರಸ್ಪರ ಚರ್ಚೆ ಮಾಡುವುದರ ಮೂಲಕ ಇದು ತೀರ್ಮಾನಗೊಳ್ಳುವುದರಿಂದ ಇದು ಉದ್ಯೋಗಿಗಳ ನಡುವೆ ಪರಸ್ಪರ ಸಂಬಂಧ ಹಾಗೂ ಹೇಗೆ ಕೆಲಸ ಮಾಡಬೇಕು ಎಂಬುದರ ತಿಳಿವಳಿಕೆ ನಿರ್ಮಾಣವಾಗುತ್ತದೆ.

ಮೂಲ ಜಪಾನಿ ಭಾಷೆಯಿಂದ ಇಂಗ್ಲೀಷಿಗೆ ಅನುವಾದಿಸಿದ 5S ಪದಗಳು ಹೀಗಿವೆ. "sort", "straighten", "shine", "standardise", and "sustain". ಬೇರೆ ಅನುವಾದಗಳೂ ಸಾಧ್ಯ ಇದೆ.

  • ವಸ್ತುಗಳನ್ನು (ಸರಿಯಾಗಿ) ಇಟ್ಟುಕೊಳ್ಳುವುದು.
  • ಬೇಡದಿರುವ ವಸ್ತುಗಳನ್ನು ತೆಗೆದು ಸರಿಯಾಗಿ ವಿಲೇವಾರಿ ಮಾಡುವುದು.
  • ತಡೆಗಳನ್ನು ತೆಗೆದುಹಾಕಿ ಕೆಲಸವನ್ನು ಸುಲಭಗೊಳಿಸುವುದು.
  • ಅನಗತ್ಯ ವಸ್ತುಗಳಿಂದ ಆಗುವ ತೊಂದರೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುವುದು.
  • ಅನಗತ್ಯ ವಸ್ತುಗಳ ಶೇಖರಣೆಯನ್ನು ತಡೆಯುವುದು.
  • ಅಗತ್ಯ ವಸ್ತುಗಳನ್ನು ಬೆಲೆ ಮತ್ತು ಇತರ ಅಂಶಗಳಿಗೆ ಅನುಗುಣವಾಗಿ ಮೌಲ್ಯವನ್ನು ನಿರ್ಧರಿಸುವುದು.
  • ಬಳಕೆಯಲ್ಲಿಲ್ಲದ ಎಲ್ಲಾ ಭಾಗಗಳನ್ನು ತೆಗೆದುಹಾಕುವುದು.
  • ಅನಗತ್ಯವಾದ ವಸ್ತುಗಳನ್ನು ಕೆಲಸದ ಜಾಗದಿಂದ ವಿಂಗಡಿಸುವುದು ಬೇರ್ಪಡಿಸುವುದು.
  • ನಿಯತವಾಗಿ ಪರಿಶೀಲನೆ ನಡೆಸಲು ಮೇಲ್ವಿಚಾರಕರ ಅಗತ್ಯ.
  • ಕೆಲಸದ ಜಾಗದಲ್ಲಿ ಅನಗತ್ಯ ವಸ್ತುಗಳನ್ನು ಹಾಕದಿರುವುದು ಮತ್ತು ಅಂತಹ ಅನಗತ್ಯ ವಸ್ತುಗಳನ್ನು ಹಾಕಲು ಒಂದು ಕೆಂಪುಗುರುತಿನ ಜಾಗವನ್ನು ಮಾಡಿಕೊಳ್ಳುವುದು.
  • ನಿರುಪಯುಕ್ತ ವಸ್ತುಗಳ ನಿವಾರಣೆ.
  • "set in order", "straighten", ಅಥವಾ "streamline" ಎಂದೂ ಇದನ್ನು ಭಾಷಾಂತರಿಸಬಹುದು.
  • ಬಳಕೆಗೆ ಸುಲಭವಾಗಿ ಎಟುಕುವಂತೆ ಅಗತ್ಯ ವಸ್ತುಗಳನ್ನು ಜೋಡಿಸಿಕೊಳ್ಳುವುದು.
  • ಸಮಯ ಪೋಲಾಗುವುದನ್ನು ತಡೆಯುವುದು.
  • ಅಗತ್ಯ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಕೊಳ್ಳಲು ಸುಲಭ ಮಾಡಿಕೊಳ್ಳುವುದು.
  • ಮೊದಲು ಬಂದದ್ದಕ್ಕೆ ಮೊದಲ ಆದ್ಯತೆ ಎಂಬುದರ ಪಾಲನೆ (first-come-first-served).
  • ಕೆಲಸದ ಹರಿವನ್ನು (Workflow) ಸರಾಗ ಮತ್ತು ಸುಲಭಗೊಳಿಸುವುದು.
  • ಈ ಮೇಲಿನ ಎಲ್ಲಾ ಕೆಲಸಗಳನ್ನು ನಿಯತವಾಗಿ ಮಾಡುವುದು.

清掃 (Shine)

[ಬದಲಾಯಿಸಿ]
  • "sweep", "sanitize", ಅಥವಾ "scrub" ಎಂದೂ ಇದನ್ನು ಭಾಷಾಂತರಿಸಬಹುದು.
  • ಕೆಲಸದ ಜಾಗವನ್ನು ಸ್ವಚ್ಛಮಾಡಿಕೊಳ್ಳುವುದು.
  • ಯಂತ್ರ ಮತ್ತು ಉಪಕರಣಗಳ ಹದಗೆಡುವಿಕೆಯನ್ನು ತಡೆಯುವುದು.
  • ಕೆಲಸದ ಜಾಗವನ್ನು ಸುರಕ್ಷಿತವಾಗಿ ಮತ್ತು ಕೆಲಸಕ್ಕೆ ಸುಲಭವಾಗುವಂತೆ ಇರಿಸಿಕೊಳ್ಳುವುದು.
  • ಕೆಲಸದ ಜಾಗವನ್ನು ಸ್ವಚ್ಛ ಮತ್ತು ಆಹ್ಲಾದಕರವಾಗಿ ಇರಿಸಿಕೊಳ್ಳುವುದು.
  • ಏನಾದರೂ ಸಮಸ್ಯೆ ಇದ್ದಲ್ಲಿ ಆ ಜಾಗದ ಪರಿಚಯ ಇಲ್ಲದಿರುವ ಯಾರಾದರೂ ಐವತ್ತು ಅಡಿ ಒಳಗಿನಲ್ಲಿ ಐದೇ ಸೆಕೆಂಡುಗಳಲ್ಲಿ ಪತ್ತೆಹಚ್ಚುವಂತೆ ಇರುವುದು.

清潔 (Standardize)

[ಬದಲಾಯಿಸಿ]
  • ಕೆಲಸದ ಜಾಗದಲ್ಲಿ ಉತ್ತಮ ಕೆಲಸದ ವಿಧಾನಗಳನ್ನು ಶಿಷ್ಟೀಕರಣಗೊಳಿಸುವುದು (Standardize)
  • ಎಲ್ಲಾ ಸಮಯದಲ್ಲೂ ಉತ್ತಮ ಗುಣಮಟ್ಟದ ಮನೆವಾರ್ತೆ(housekeeping) ಹಾಗೂ ಕೆಲಸದ ಜಾಗದ ವ್ಯವಸ್ಥಿತ ನಿರ್ವಹಣೆ.
  • ಎಲ್ಲವನ್ನೂ ಕ್ರಮವಾಗಿ ಮತ್ತು ಶಿಷ್ಟೀಯತೆಯ ಪ್ರಕಾರ ನಿರ್ವಹಿಸಿಟ್ಟುಕೊಳ್ಳುವಿಕೆ.
  • ಎಲ್ಲವನ್ನೂ ಸರಿಯಾದ ಜಾಗದಲ್ಲಿಡುವುದು.
  • ಎಲ್ಲಾ ಪ್ರಕ್ರಿಯೆಗಳಲ್ಲೂ ಶಿಷ್ಟತೆಯ (standard) ಪಾಲನೆ.
  • ಕೆಲಸದ ಕ್ರಮದಲ್ಲಿ ಇಟ್ಟುಕೊಳ್ಳುವುದು (working order).
  • ಇದಕ್ಕೆ "do without being told" (ಹೇಳಿಸಿಕೊಳ್ಳದೇ ಮಾಡುವುದು) ಎಂಬ ಅರ್ಥ ಬರುತ್ತದೆ.
  • ನಿಯತವಾದ ಲೆಕ್ಕಪರಿಶೋಧನೆ (regular audits).
  • ತರಬೇತಿ ಹಾಗೂ ಶಿಸ್ತುಗಾರಿಕೆ

ಹೆಚ್ಚುವರಿ 5S

[ಬದಲಾಯಿಸಿ]

safety, security, satisfaction ಎಂಬ ಪದಗಳನ್ನೂ (ಅಂಶಗಳನ್ನೂ) ಸಹ ಇದರಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇದು ಸಾಂಪ್ರದಾಯಿಕ 5S ಗಣದಲ್ಲಿ ಬರುವುದಿಲ್ಲವಾದರೂ ಹೆಚ್ಚಿನ ಸ್ಪಷ್���ತೆಗೆ ಸಹಾಯಕಾರಿ.

ಕೆಲವೊಮ್ಮೆ "Safety" (ಸುರಕ್ಷತೆ) ಅಂಶ ಸೇರಿಸಲ್ಪಡುತ್ತದೆ.[] ಈ ಅಂಶವನ್ನು ಸೇರಿಸುವುದು ಸುರಕ್ಷತೆಗೆ ಪ್ರೋತ್ಸಾಹಕವಾಗುತ್ತದೆಯೇ ಎಂಬುದು ಚರ್ಚೆಯಲ್ಲಿದೆ.

"Security" (ಭದ್ರತೆ) ಅಂಶವನ್ನೂ ಕೂಡ ಸೇರಿಸಬಹುದಾಗಿದೆ.[ಸೂಕ್ತ ಉಲ್ಲೇಖನ ಬೇಕು]

5S ಮೂಲ/ಹುಟ್ಟು

[ಬದಲಾಯಿಸಿ]

5S ಜಪಾನ್ ದೇಶದಲ್ಲಿ ಅಭಿವೃದ್ಧಿಗೊಂಡಿತು ಹಾಗೂ ಉತ್ಪಾದನೆಗೆ ಸಹಾಯವಾದ ಒಂದು ತಂತ್ರವೆಂದು ಗುರುತಿಸಲ್ಪಟ್ಟಿತು. Just in Time ಉತ್ಪಾದನೆ[] 5S ತಂತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಅನ್ವಯಿಸಲು ಎರಡು ಪ್ರಮುಖ ವಿಧಾನಗಳು ರೂಪುಗೊಂಡಿವೆ. ಒಂದು Osadaರಿಂದ ಪ್ರಸ್ತಾಪಿಸಲ್ಪಟ್ಟಿದ್ದು ಹಾಗೂ ಮತ್ತೊಂದು Hirano ಅವರಿಂದ ಪ್ರಸ್ತಾಪಿಸಲ್ಪಟ್ಟಿದ್ದು.[][]

5S ಅನ್ವಯಿಸುವ ವಿಧಗಳು

[ಬದಲಾಯಿಸಿ]

5S ಹಲವಾರು ವಿಧದ ಕಾರ್ಯರಂಗಗಳಲ್ಲಿ ಅನ್ವಯಿಸಲ್ಪಡುತ್ತಿದೆ. ಉತ್ಪಾದನಾ ಕ್ಷೇತ್ರದಿಂದ ಇದು ಆರೋಗ್ಯ, ಶಿಕ್ಷಣ, ಆಡಳಿತ ಮತ್ತು ಇತರ ಕಾರ್ಯಕ್ಷೇತ್ರಗಳಿಗೂ ವಿಸ್ತರಿಸಲ್ಪಟ್ಟಿದೆ.[] 5S ತಂತ್ರದ ಮೂಲ ಉತ್ಪಾದನಾ ಕ್ಷೇತ್ರದಲ್ಲಿದ್ದರೂ ಸಹ, ಇದು knowledge-economy ಕೆಲಸಕ್ಕೆ, ಮಾಹಿತಿ, ತಂತ್ರಾಂಶ ಅಥವಾ ಮೀಡಿಯಾ ಕ್ಷೇತ್ರಗಳಿಗೂ ಅನ್ವಯಿಸಲ್ಪಡುತ್ತಿದೆ.[] 5S ತಂತ್ರವನ್ನು ಅಳವಡಿಸಿಕೊಂಡು ಬಳಸುತ್ತಿರುವ ಕೆಲವು ಸಂಸ್ಥೆಗಳೆಂದರೆ Infineon Technologies ಮತ್ತು Nonin Medical.[]

ಇವನ್ನೂ ನೋಡಿ

[ಬದಲಾಯಿಸಿ]

Seiri

ವಿಕಿಪೀಡಿಯ ಕನ್ನಡ ಲೇಖನಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "What Is 5S? - Sort, Set In Order, Shine, Standardize, Sustain".
  2. ೨.೦ ೨.೧ "5S Comprehensive Education and Resource Center".
  3. "Lean and Environment Training Modules" (PDF). United States Government, Green Supply Network. Archived from the original (PDF) on 16 ಜನವರಿ 2014. Retrieved 12 July 2012.
  4. Womack, James; Jones, Daniel; Roos, Daniel (1991). Machine That Changed The World. Productivity Press. ISBN 978-1-84737-055-6.
  5. Hirano, Hiroyuki (1995). 5 Pillars of the Visual Workplace. Cambridge, MA: Productivity Press. ISBN 978-1-56327-047-5.
  6. Osada, Takashi (1995). The 5S’s: Five keys to a Total Quality Environment. US: Asian Productivity Organization. ISBN 9283311167.
  7. "CEITON – Profile".
  8. "Manufacturing Storage Case Studies | Lista". www.listaintl.com. Retrieved 2015-09-27.

ಹೊರಕೊಂಡಿಗಳು

[ಬದಲಾಯಿಸಿ]