ವಿಷಯಕ್ಕೆ ಹೋಗು

ಫ್ರಾಂಕೋಯಿಸ್ ಹಾಲೆಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೪:೦೮, ೧೮ ಮಾರ್ಚ್ ೨೦೨೨ ರಂತೆ Siro bileveli Boris (ಚರ್ಚೆ | ಕಾಣಿಕೆಗಳು) ಇವರಿಂದ (Year)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಫ್ರಾಂಕೋಯಿಸ್ ಹಾಲೆಂಡ್ (2015)

ಫ್ರಾಂಕೋಯಿಸ್ ಗೆರಾರ್ಡ್ ಜಾರ್ಜ್ ಹಾಲೆಂಡ್(ಹುಟ್ಟಿದ್ದು : ೧೨ನೇ ಆಗಸ್ಟ್ ೧೯೫೪) ಫ್ರಾನ್ಸ್ ದೇಶದ ಒಬ್ಬ ರಾಜಕಾರಣಿ ಹಾಗೂ ಫ್ರಾನ್ಸ್ ದೇಶದ ಆಯ್ದ ಅಧ್ಯಕ್ಷ. ಇವರು ೬ ಮೇ ೨೦೧೨ರಂದು ನಿಕೋಲಸ್ ಸರ್ಕೊಜಿರವರನ್ನು ಅಧ್ಯಕ್ಷೀಯ ಚುಣಾವಣೆಯಲ್ಲಿ ಪರಾಭವಗೊಳಿಸಿ ಫ್ರಾನ್ಸ್ ದೇಶದ ೨೪ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ೧೯೯೭ ರಿಂದ ೨೦೦೮ ರ ವರೆಗೆ ಮೊದಲನೇ ಶೊಷಲಿಸ್ಟ್ ಪಕ್ಷದ ಮೊದಲನೇ ಕಾರ್ಯದರ್ಶಿಯಾಗಿದ್ದರು. ೧೯೯೭ರಿಂದ ಫ್ರಾನ್ಸ್ ದೇಶದ ನ್ಯಾಷಲಿಸ್ಟ್ ಅಸೆಂಬ್ಲಿಯ ಉಪ ನಾಯಕರಾಗಿದ್ದರು. ಇವರು ಕೋಯರ್ಜ಼್ ಮೊದಲನೇ ಕ್ಷೇತ್ರವನ್ನು ೧೯೮೮ ರಿಂದ ೧೯೯೩ ಹಾಗು ೧೯೯೭ ರಿಂದ ಪ್ರತಿನಿಸಿದ್ದರು. ೨೦೦೧ ರಿಂದ ೨೦೦೮ ರವರೆಗೆ ಟುಲ್ಲೆಯ ಮೇಯರ್ ಆಗಿದ್ದರು. ಆ ನಂತರ ೨೦೦೮ ರಿಂದ ೨೦೧೨ ರ ವರೆಗೆ ಕೋಯರ್ಜ಼್ ಜನರಲ್ ಕೌನ್ಸಿಲ್ ನ ಅಧ್ಯ್ಕಕ್ಷರಾಗಿದ್ದರು.