ಫೈಟ್ ಕ್ಲಬ್ (ಚಲನಚಿತ್ರ)
ಫ಼ೈಟ್ ಕ್ಲಬ್ | |
---|---|
ನಿರ್ದೇಶನ | ಡೇವಿಡ್ ಫ಼ಿಂಚರ್ |
ನಿರ್ಮಾಪಕ |
|
ಚಿತ್ರಕಥೆ | ಜಿಮ್ ಅಲ್ಸ್ |
ಆಧಾರ | ಚಕ್ ಪೌಲಾನಿಕ್‍ರ ಇದೇ ಹೆಸರಿನ ಕಾದಂಬರಿ ಮೇಲೆ ಆಧಾರಿತ |
ಪಾತ್ರವರ್ಗ |
|
ಸಂಗೀತ | ದ ಡಸ್ಟ್ ಬ್ರದರ್ಸ್ |
ಛಾಯಾಗ್ರಹಣ | ಜೆಫ಼್ ಕ್ರಾನೆನ್‍ವೆತ್ |
ಸಂಕಲನ | ಜೇಮ್ಸ್ ಹೇಗುಡ್ |
ಸ್ಟುಡಿಯೋ |
|
ವಿತರಕರು | ಟ್ವೆಂಟಿಯತ್ ಸೆಂಚುರಿ ಫ಼ಾಕ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೯".
|
ಅವಧಿ | 139 ನಿಮಿಷಗಳು[೧] |
ದೇಶ | ಅಮೇರಿಕ[೨][೩] |
ಭಾಷೆ | ಇಂಗ್ಲಿಷ್ |
ಬಂಡವಾಳ | $63 ಮಿಲಿಯನ್[೧] |
ಬಾಕ್ಸ್ ಆಫೀಸ್ | $100.9 ಮಿಲಿಯನ್[೧] |
ಫೈಟ್ ಕ್ಲಬ್ ಡೇವಿಡ್ ಫ಼ಿಂಚರ್ ನಿರ್ದೇಶಿಸಿದ ೧೯೯೯ರ ಒಂದು ಅಮೇರಿಕನ್ ಚಲನಚಿತ್ರ. ಮುಖ್ಯ ಪಾತ್ರಗಳಲ್ಲಿ ಬ್ರ್ಯಾಡ್ ಪಿಟ್, ಎಡ್ವರ್ಡ್ ನಾರ್ಟನ್ ಮತ್ತು ಹೆಲೆನಾ ಬಾನಮ್ ಕಾರ್ಟರ್ ನಟಿಸಿದ್ದಾರೆ. ಇದು ಚಕ್ ಪೌಲಾನಿಕ್‍ರ ಇದೇ ಹೆಸರಿನ ೧೯೯೬ರ ಕಾದಂಬರಿಯ ಮೇಲೆ ಆಧಾರಿತವಾಗಿದೆ. ನಾರ್ಟನ್ ತನ್ನ ದೈಹಿಕ ಶ್ರಮವಿಲ್ಲದ ಕೆಲಸದಿಂದ ಅತೃಪ್ತನಾದ, ಹೆಸರಿಲ್ಲದ ನಿರೂಪಕನ ಪಾತ್ರವಹಿಸಿದ್ದಾರೆ. ಅವನು ಸಾಬೂನು ಮಾರಾಟಗಾರ ಟೈಲರ್ ಡರ್ಡನ್‍ನ ಜೊತೆ ಒಂದು ಕದನದ ಸಂಘವನ್ನು ರಚಿಸುತ್ತಾನೆ, ಮತ್ತು ಅವನೊಂದಿಗೆ ಹಾಗೂ ಒಬ್ಬ ದಿಕ್ಕಿಲ್ಲದ ಮಹಿಳೆ ಮಾರ್ಲಾ ಸಿಂಗರ್‌ಳೊಂದಿಗೆ (ಬಾನಮ್ ಕಾರ್ಟರ್) ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾನೆ.
ಫ಼ಾಕ್ಸ್ ಪಿಕ್ಚರ್ಸ್‌ನ ನಿರ್ಮಾಪಕಿ ಲೌರಾ ಜ಼ಿಸ್ಕಿನ್ ಪೌಲಾನಿಕ್‍ರ ಕಾದಂಬರಿಗೆ ಕರಾರು ಮಾಡಿಕೊಂಡರು ಮತ್ತು ಚಲನಚಿತ್ರ ರೂಪಾಂತರವನ್ನು ಬರೆಯಲು ಜಿಮ್ ಅಲ್ಸ್‌ರನ್ನು ನೇಮಕ ಮಾಡಿದರು. ಕಥೆಯ ಬಗೆಗಿನ ಅವರ ಉತ್ಸಾಹದ ಕಾರಣದಿಂದ ಫ಼ಿಂಚರ್‌ರನ್ನು ಆಯ್ಕೆಮಾಡಲಾಯಿತು. ಅವರು ಅಲ್ಸ್‌ರೊಂದಿಗೆ ಕಥೆಯನ್ನು ಅಭಿವೃದ್ಧಿಪಡಿಸಿದರು ಮತ್ತು ಪಾತ್ರವರ್ಗ ಹಾಗೂ ಚಿತ್ರೋದ್ಯಮದಲ್ಲಿನ ಇತರರಿಂದ ಚಿತ್ರಕಥಾ ಸಲಹೆಯನ್ನು ಕೇಳಿದರು. ಹೊಸ ಪೀಳಿಗೆ ಮತ್ತು ಜಾಹೀರಾತಿನ ಮೌಲ್ಯ ವ್ಯವಸ್ಥೆಯ ನಡುವಿನ ಸಂಘರ್ಷ ಈ ಚಿತ್ರದ ವಿಷಯವಾಗಿದೆ.[೪][೫] ಪ್ರೇಕ್ಷಕರನ್ನು ಅಹಿತ��ರಗೊಳಿಸಲು ಮತ್ತು ಅನಿರೀಕ್ಷಿತ ಅಂತ್ಯವನ್ನು ನಿರೀಕ್ಷಿಸಲಾಗದಂತೆ ಮಾಡಲು, ಫ಼ಿಂಚರ್ ಪೌಲಾನಿಕ್‍ರ ಕಾದಂಬರಿಯ ಸಲಿಂಗಕಾಮಿ ಸೂಚ್ಯಾರ್ಥಗಳನ್ನು ಬಳಸಿದರು.[೬]
ನಿರ್ಮಾಣಶಾಲೆಯ ಮುಖ್ಯಸ್ಥರು ಚಿತ್ರವನ್ನು ಇಷ್ಟಪಡಲಿಲ್ಲ ಮತ್ತು ನಿರೀಕ್ಷಿತ ನಷ್ಟಗಳನ್ನು ಕಡಿಮೆಮಾಡಲು ಪ್ರಯತ್ನಿಸುವ ಸಲುವಾಗಿ ಫ಼ಿಂಚರ್‌ರ ಉದ್ದೇಶಿತ ಮಾರಾಟಗಾರಿಕಾ ಪ್ರಚಾರವನ್ನು ಪುನರ್ರಚಿಸಿದರು. ಫ಼ೈಟ್ ಕ್ಲಬ್ ಬಾಕ್ಸ್ ಆಫ಼ಿಸ್‍ನಲ್ಲಿ ನಿರ್ಮಾಣಶಾಲೆಯ ಅಪೇಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು, ಮತ್ತು ವಿಮರ್ಶಕರಿಂದ ಧ್ರುವೀಕೃತ ಪ್ರತಿಕ್ರಿಯೆಗಳನ್ನು ಪಡೆಯಿತು. ಇದನ್ನು ೧೯೯೯ರ ಅತ್ಯಂತ ವಿವಾದಾತ್ಮಕ ಮತ್ತು ಚರ್ಚಿಸಲಾದ ಚಲನಚಿತ್ರಗಳಲ್ಲಿ ಒಂದು ಎಂದು ಉಲ್ಲೇಖಿಸಲಾಯಿತು. ದ ಗಾರ್ಡಿಯನ್ ಇದನ್ನು ಅಮೇರಿಕದ ರಾಜಕೀಯ ಜೀವನದಲ್ಲಿ ಬದಲಾವಣೆಗಾಗಿ ಶಕುನವೆಂದು ಕಂಡಿತು, ಮತ್ತು ಇದರ ದೃಶ್ಯ ಶೈಲಿಯನ್ನು ಹೊಸತನದ್ದೆಂದು ವರ್ಣಿಸಿತು. ನಂತರ, ಡಿವಿಡಿ ಬಿಡುಗಡೆಯೊಂದಿಗೆ ಈ ಚಿತ್ರವು ವಾಣಿಜ್ಯಿಕ ಯಶಸ್ಸನ್ನು ಪಡೆದುಕೊಂಡಿತು, ಮತ್ತು ಫ಼ೈಟ್ ಕ್ಲಬ್ ಅಭಿಮಾನಿಗಳ ಶ್ರೇಷ್ಠ ಚಿತ್ರವಾಗಿ ಪ್ರತಿಷ್ಠಾಪಿತವಾಯಿತು, ಮತ್ತು ಮಾಧ್ಯಮದವರು ಚಿತ್ರವನ್ನು ಮರುಪರಿಗಣಿಸುವಂತೆ ಮಾಡಿತು. ಚಿತ್ರದ ಬಿಡುಗಡೆಯ ಹತ್ತನೇ ವಾರ್ಷಿಕೋತ್ಸವದಂದು, ದ ನ್ಯೂ ಯಾರ್ಕ್ ಟೈಮ್ಸ್ ಇದನ್ನು ನಮ್ಮ ಕಾಲದ ಐತಿಹಾಸಿಕ ಛಾಪಿನ ನಿರ್ಧಾರಕ ಚಿತ್ರವೆಂದು ಹೆಸರಿಸಿತು.[೭]
ಕಥಾವಸ್ತು
[ಬದಲಾಯಿಸಿ]ಹೆಸರಿಲ್ಲದ ನಿರೂಪಕನು ತನ್ನ ವೃತ್ತಿಯಾದ ವಾಹನ ವಾಪಸಾತಿ ತಜ್ಞನ ಕೆಲಸ ಮತ್ತು ಸ್ವತ್ತುಗಳಿಂದ ಅತೃಪ್ತನಾಗಿರುತ್ತಾನೆ. ಅವನು ಬೆಂಬಲ ಗುಂಪುಗಳಲ್ಲಿ ವೃಷಣದ ಕ್ಯಾನ್ಸರ್ ಮತ್ತು ಇತರ ರೋಗಗಳಿಂದ ಬಳಲುತ್ತಿರುವವನಾಗಿ ನಡೆದುಕೊಳ್ಳುವಲ್ಲಿ ಬಿಡುಗಡೆಯನ್ನು ಕಂಡುಕೊಳ್ಳುತ್ತಾನೆ, ಮತ್ತು ತನ್ನ ನಿದ್ರಾಹೀನತೆಯಿಂದ ಗುಣವಾಗುತ್ತಾನೆ. ಅವನ ಆನಂದವನ್ನು ಮತ್ತೊಬ್ಬ ಸೋಗುಗಾರ್ತಿಯಾದ ಮಾರ್ಲಾ ಸಿಂಗರ್ ಕಲಕುತ್ತಾಳೆ. ಇಬ್ಬರೂ ತಾವು ಯಾವ ಗುಂಪುಗಳಿಗೆ ಹೋಗಬೇಕೆಂಬುದನ್ನು ವಿಭಜಿಸಲು ಒಪ್ಪಿಕೊಳ್ಳುತ್ತಾರೆ.
ವ್ಯವಹಾರದ ಪ್ರವಾಸದಿಂದ ಮನೆಗೆ ವಾಪಸಾಗುತ್ತಿರುವ ವಿಮಾನದಲ್ಲಿ, ನಿರೂಪಕನು ಸಾಬೂನು ಮಾರಾಟಗಾರನಾದ ಟೈಲರ್ ಡರ್ಡನ್‍ನನ್ನು ಭೇಟಿಯಾಗುತ್ತಾನೆ. ನಿರೂಪಕನು ಮನೆಗೆ ವಾಪಸಾದಾಗ ತನ್ನ ಅಪಾರ್ಟ್‌ಮಂಟ್ ಮತ್ತು ಎಲ್ಲ ವಸ್ತುಗಳು ಒಂದು ಸ್ಫೋಟದಲ್ಲಿ ನಾಶವಾಗಿವೆ ಎಂದು ಕಂಡುಕೊಳ್ಳುತ್ತಾನೆ. ಅವನು ತನ್ನ ಪ್ರಾಪಂಚಿಕ ವಸ್ತುಗಳ ನಷ್ಟದಿಂದ ನಿರಾಶನಾಗುತ್ತಾನೆ. ಸಹಾಯಕ್ಕಾಗಿ ಮಾರ್ಲಾಳನ್ನು ಕೇಳಬಾರದೆಂದು ನಿರ್ಧರಿಸಿ, ಅವನು ಟೈಲರ್‌ಗೆ ಕರೆಮಾಡಿ ಅವರಿಬ್ಬರು ಒಂದು ಬಾರ್‌ನಲ್ಲಿ ಭೇಟಿಯಾಗುತ್ತಾರೆ. ನಿರೂಪಕನು ಕೊಳ್ಳುಬಾಕತನಕ್ಕೆ ಋಣಿಯಾಗಿದ್ದಾನೆ ಎಂದು ಟೈಲರ್ ಹೇಳುತ್ತಾನೆ. ವಾಹನ ನಿಲ್ದಾಣದಲ್ಲಿ ತನಗೆ ಹೊಡೆಯುವಂತೆ ಅವನು ನಿರೂಪಕನಿಗೆ ಹೇಳುತ್ತಾನೆ, ಮತ್ತು ಅವರಿಬ್ಬರು ಮುಷ್ಟಿ ಹೋರಾಟವನ್ನು ಆರಂಭಿಸುತ್ತಾರೆ.
ನಿರೂಪಕನು ಒಂದು ಕೈಗಾರಿಕಾ ಪ್ರದೇಶದಲ್ಲಿರುವ ದೊಡ್ಡ, ಜೀರ್ಣವಾದ, ಟೈಲರ್‌ನ ಮನೆಗೆ ಸ್ಥಳಾಂತರವಾಗುತ್ತಾನೆ. ಅವರು ಬಾರ್‌ನ ಹೊರಗೆ ಮತ್ತಷ್ಟು ಹೊಡೆದಾಟಗಳನ್ನು ನಡೆಸುತ್ತಾರೆ. ಇದು ಪುರುಷರ ಹೆಚ್ಚುತ್ತಿರುವ ಗುಂಪುಗಳನ್ನು ಆಕರ್ಷಿಸುತ್ತದೆ. ಹೊಡೆದಾಟಗಳು ಬಾರ್‌ನ ನೆಲಮನೆಗೆ ಸ್ಥಳಾಂತರವಾಗಿ ಅವರೆಲ್ಲರೂ ಕದನ ಸಂಘವನ್ನು ರಚಿಸುತ್ತಾರೆ. ಸದಸ್ಯರು ಮನರಂಜನೆಗಾಗಿ ಹೊಡೆದಾಡಲು ಈ ಗುಂಪು ಆಗಾಗ್ಗೆ ಭೇಟಿಯಾಗುತ್ತಿರುತ್ತದೆ.
ಮಾರ್ಲಾ ಅತಿಯಾಗಿ ಔಷಧಿಗಳನ್ನು ಸೇವಿಸಿ ಸಹಾಯಕ್ಕಾಗಿ ನಿರೂಪಕನಿಗೆ ದೂರವಾಣಿ ಕರೆ ಮಾಡುತ್ತಾಳೆ; ಅವನು ಅವಳನ್ನು ನಿರ್ಲಕ್ಷಿಸುತ್ತಾನೆ, ಆದರೆ ಅವಳನ್ನು ಕಾಪಾಡಲು ಟೈಲರ್ ಅವಳ ಅಪಾರ್ಟ್‌ಮಂಟ್‍ಗೆ ಹೋಗುತ್ತಾನೆ. ಟೈಲರ್ ಮತ್ತು ಮಾರ್ಲಾ ಲೈಂಗಿಕ ಸಂಬಂಧವನ್ನು ಆರಂಭಿಸುತ್ತಾರೆ. ಇದು ನಿರೂಪಕನಿಗೆ ಕಿರಿಕಿರಿ ಉಂಟುಮಾಡುತ್ತದೆ. ತನ್ನ ಬಗ್ಗೆ ಮಾರ್ಲಾಳೊಂದಿಗೆ ಎಂದೂ ಮಾತನಾಡಬಾರದೆಂದು ಟೈಲರ್ ನಿರೂಪಕನಿಗೆ ಎಚ್ಚರಿಕೆ ನೀಡುತ್ತಾನೆ. ಕದನ ಸಂಘಕ್ಕೆ ಆಧಾರವಾಗಲು ತನ್ನ ಕಂಪನಿಯ ಸ್ವತ್ತುಗಳಿಗಾಗಿ ನಿರೂಪಕನು ತನ್ನ ಮೇಲಧಿಕಾರಿಯನ್ನು ಬೆದರಿಸಿ ತನ್ನ ಕೆಲಸವನ್ನು ಬಿಡುತ್ತಾನೆ.
ಬೇಗನೇ, ದೇಶದಾದ್ಯಂತ ಕದನ ಸಂಘಗಳು ರೂಪಗೊಳ್ಳಲು ಶುರುವಾಗುತ್ತವೆ. ಒಂದು ಬೆಂಬಲ ಗುಂಪಿನಲ್ಲಿ ನಿರೂಪಕನು ಹಿಂದೆ ಭೇಟಿಯಾಗಿದ್ದ, ವೃಷಣದ ಕ್ಯಾನ್ಸರ್ ಇರುವ ಒಬ್ಬ ವ್ಯಕ್ತಿಯಾದ ರಾಬರ್ಟ್ ಪಾಲ್ಸನ್ ಸೇರಿದಂತೆ, ಹೊಸ ಸದಸ್ಯರು ಸಾಮೂಹಿಕವಾಗಿ ಸೇರಲು ಶುರುಮಾಡುತ್ತಾರೆ. ಟೈಲರ್ ಅವುಗಳ ಸದಸ್ಯರನ್ನು ನಿರೂಪಕನ ಒಳಗೊಳ್ಳುವಿಕೆ ಇಲ್ಲದೆಯೇ ಒಂದು ಹೊಸ ಭೌತಿಕತೆ ವಿರೋಧಿ ಹಾಗೂ ನಿಗಮ ವಿರೋಧಿ ಸಂಸ್ಥೆಯಾದ ಪ್ರಾಜೆಕ್ಟ್ ಮೇಹೆಮ್‍ಗೆ ನೇಮಿಸಿಕೊಳ್ಳುತ್ತಾನೆ. ಆ ಗುಂಪು ವಿಧ್ವಂಸಕತೆ ಮತ್ತು ಹಿಂಸಾಚಾರದ ಕೃತ್ಯಗಳಲ್ಲಿ ತೊಡಗುತ್ತದೆ. ಇದು ನಿರೂಪಕನನ್ನು ಹೆಚ್ಚೆಚ್ಚು ಬಾಧಿಸುತ್ತದೆ. ಟೈಲರ್ ತನ್ನನ್ನು ಹೊರಗಿಟ್ಟಿದ್ದಾನೆಂದು ನಿರೂಪಕನು ದೂರಿದಾಗ, ಟೈಲರ್ ಮನೆ ಬಿಡುತ್ತಾನೆ. ತನ್ನ ಅಪಾರ್ಟ್‌ಮಂಟ್‍ನಲ್ಲಿ ಟೈಲರ್ ಸ್ಫೋಟ ಉಂಟುಮಾಡಿದನೆಂದು ನಿರೂಪಕನಿಗೆ ಅರಿವಾಗುತ್ತದೆ.
ಒಡ್ಡೊಡ್ಡಾದ ವಿಧ್ವಂಸಕ ಕಾರ್ಯದ ವೇಳೆ ಪೋಲಿಸರು ಪಾಲ್ಸನ್‍ನನ್ನು ಸಾಯಿಸಿದಾಗ, ಯೋಜನೆಯನ್ನು ನಿಲ್ಲಿಸಲು ನಿರೂಪಕನು ಪ್ರಯತ್ನಿಸುತ್ತಾನೆ. ಅವನು ಟೈಲರ್ ಭೇಟಿಕೊಟ್ಟ ನಗರಗಳನ್ನು ದಾಖಲೆಗಳ ಮೂಲಕ ಅನುಸರಿಸುತ್ತಾನೆ. ಒಂದು ನಗರದಲ್ಲಿ, ಪ್ರಾಜೆಕ್ಟ್ ಮೇಹೆಮ್‍ನ ಒಬ್ಬ ಸದಸ್ಯನು ನಿರೂಪಕನನ್ನು "ಮಿ. ಡರ್ಡನ್" ಎಂದು ಸಂಬೋಧಿಸುತ್ತಾನೆ. ಗೊಂದಲಗೊಂಡು, ನಿರೂಪಕನು ಮಾರ್ಲಾಗೆ ಕರೆಮಾಡಿದಾಗ ಅವಳೂ ಅವನು ಟೈಲರ್ ಎಂದು ನಂಬಿದ್ದಾಳೆಂದು ಅರಿತುಕೊಳ್ಳುತ್ತಾನೆ. ಟೈಲರ್ ಅವನ ಹೋಟೆಲ್ ಕೋಣೆಯೊಳಗೆ ಕಾಣಿಸಿಕೊಂಡು ತಾವು ಒಂದೇ ದೇಹದಲ್ಲಿರುವ ಬೇರ್ಪಟ್ಟಿರುವ ವ್ಯಕ್ತಿತ್ವಗಳೆಂದು ಬಹಿರಂಗಪಡಿಸುತ್ತಾನೆ; ತಾನು ಮಲಗಿದ್ದೇನೆ ಎಂದು ತಾನು ನಂಬಿದ್ದಾಗ ನಿರೂಪಕನು ಟೈಲರ್‌ನ ವ್ಯಕ್ತಿತ್ವವನ್ನು ತಳೆದಿರುತ್ತಾನೆ.
ನಿರೂಪಕನು ಮೂರ್ಛೆ ಹೋಗುತ್ತಾನೆ. ಮನೆಗೆ ಮರಳಿದಾಗ, ಅವನು ಋಣವನ್ನು ಅಳಿಸಿಹಾಕಲು ಕ್ರೆಡಿಟ್ ಕಾರ್ಡ್ ದಾಖಲೆಗಳನ್ನು ಹೊಂದಿರುವ ಕಟ್ಟಡಗಳನ್ನು ನಾಶಮಾಡುವ ಟೈಲರ್‌ನ ಯೋಜನೆಗಳನ್ನು ಪತ್ತೆಹಚ್ಚುತ್ತಾನೆ. ಅವನು ಮಾರ್ಲಾಳ ಕ್ಷಮೆಬೇಡಿ ಅವಳು ಅಪಾಯದಲ್ಲಿದ್ದಾಳೆ ಎಂದು ಎಚ್ಚರಿಸುತ್ತಾನೆ. ಆದರೆ ಅವಳು ಅವನ ವಿರೋಧಾತ್ಮಕ ವರ್ತನೆಯಿಂದ ಕಿರಿಕಿರಿಗೊಂಡು ಕೇಳಲು ನಿರಾಕರಿಸುತ್ತಾಳೆ. ಅವನು ಪೋಲೀಸರನ್ನು ಎಚ್ಚರಿಸಲು ಪ್ರಯತ್ನಿಸುತ್ತಾನೆ, ಆದರೆ ಅಧಿಕಾರಿಗಳು ಆ ಯೋಜನೆಯ ಸದಸ್ಯರಾಗಿರುತ್ತಾರೆ. ಅವನು ಒಂದು ಕಟ್ಟಡಲ್ಲಿನ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಟೈಲರ್ ಅದನ್ನು ತಡೆಯುತ್ತಾನೆ. ಮೇಲಿನ ಅಂತಸ್ತಿನಲ್ಲಿ ಟೈಲರ್ ಅವನಿಗೆ ಬಂದೂಕು ತೋರಿಸಿ ಬೆದರಿಸಿದಾಗ, ತಾನು ಮತ್ತು ಟೈಲರ್ ಒಬ್ಬನೇ ವ್ಯಕ್ತಿಯೆಂದು ನಿರೂಪಕನಿಗೆ ಅರಿವಾಗಿ ತಾನೇ ಬಂದೂಕು ಹಿಡಿದಿದ್ದೇನೆ ಎಂದು ಗೊತ್ತಾಗುತ್ತದೆ. ಅವನು ತನ್ನದೇ ಬಾಯಿಯಲ್ಲಿ ಗಲ್ಲದ ಮೂಲಕ ಗುಂಡು ಹೊಡೆದುಕೊಳ್ಳುತ್ತಾನೆ. ಇದರಿಂದ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಭಾವಿಸಿ ಟೈಲರ್ ಕೆಳಬೀಳುತ್ತಾನೆ; ನಿರೂಪಕನು ಟೈಲರ್‌ನ ಮಾನಸಿಕ ಕಲ್ಪನೆಯನ್ನು ನಿಲ್ಲಿಸುತ್ತಾನೆ. ಪ್ರಾಜೆಕ್ಟ್ ಮೇಹೆಮ್‌ನ ಸದಸ್ಯರು ಅಪಹರಿಸಿದ ಮಾರ್ಲಾಳನ್ನು ಕಟ್ಟಡಕ್ಕೆ ಕರೆತರುತ್ತಾರೆ. ಸ್ಫೋಟಕಗಳು ಸ್ಫೋಟಗೊಂಡು ತಮ್ಮ ಸುತ್ತಲಿನ ಕಟ್ಟಡಗಳನ್ನು ಉರುಳಿಸುತ್ತಿರುವುದನ್ನು ಕೈಗಳನ್ನು ಹಿಡಿದುಕೊಂಡು ನಿರೂಪಕ ಮತ್ತು ಮಾರ್ಲಾ ನೋಡುತ್ತಾರೆ.
ಪಾತ್ರವರ್ಗ
[ಬದಲಾಯಿಸಿ]- ನಿರೂಪಕನಾಗಿ ಎಡ್ವರ್ಡ್ ನಾರ್ಟನ್
- ಟೈಲರ್ ಡರ್ಡನ್ ಆಗಿ ಬ್ರ್ಯಾಡ್ ಪಿಟ್
- ಮಾರ್ಲಾ ಸಿಂಗರ್ ಆಗಿ ಹೆಲೆನಾ ಬಾನಮ್ ಕಾರ್ಟರ್
- ರಾಬರ್ಟ್ "ಬಾಬ್" ಪಾಲ್ಸನ್ ಆಗಿ ಮೀಟ್ ಲೋಫ಼್
- ಏಂಜಲ್ ಫ಼ೇಸ್ ಆಗಿ ಜ್ಯಾರೆಡ್ ಲೆಟೊ
- ರಿಚರ್ಡ್ ಚೆಸ್ಲರ್ ಆಗಿ ಜ಼್ಯಾಕ್ ಗ್ರೆನಿಯರ್
ವಿಷಯಗಳು
[ಬದಲಾಯಿಸಿ]ಫ಼ೈಟ್ ಕ್ಲಬ್ ಪ್ರೌಢತ್ವಕ್ಕೆ ಬರುವ ಚಲನಚಿತ್ರವಾಗಿದೆ ಎಂದು ಡೇವಿಡ್ ಫ಼ಿಂಚರ್ ಹೇಳಿದರು.
ನಿರೂಪಕನು ಗೊಂದಲಗೊಂಡ ಮತ್ತು ಕೋಪವಿರುವ ವ್ಯಕ್ತಿಯಾಗಿರುತ್ತಾನೆ. ಹಾಗಾಗಿ ಅವನು ತನ್ನ ಮನಸ್ಸಿನಲ್ಲಿ, ನೀಚ್‍ವಾದಿ ಏಬರ್‌ಮೆಂಚ್ ಆದ, ಟೈಲರ್ ಡರ್ಡನ್‍ನನ್ನು ಸೃಷ್ಟಿಸುವ ಮೂಲಕ ತನ್ನ ಪರಿಸರಕ್ಕೆ ಪ್ರತಿಕ್ರಿಯಿಸುತ್ತಾನೆ. ಟೈಲರ್ ನಿರೂಪಕನು ಬಯಸಿದ ಎಲ್ಲವೂ ಆಗಿದ್ದರೂ, ಅವನು ಅನುಭೂತಿಯುಳ್ಳವನಲ್ಲ ಮತ್ತು ನಿರೂಪಕನಿಗೆ ಅವನ ಜೀವನದಲ್ಲಿನ ಸಂಕೀರ್ಣವಾದ ಮತ್ತು ನೈತಿಕ ಸೂಚ್ಯಾರ್ಥಗಳನ್ನು ಹೊಂದಿರುವ ನಿರ್ಧಾರಗಳನ್ನು ಎದುರಿಸಲು ನೆರವಾಗುವುದಿಲ್ಲ. ನಿರ್ಮಾಣಶಾಲೆಯ ಮುಖ್ಯಸ್ಥರು ಫ಼ೈಟ್ ಕ್ಲಬ್ ಅಶುಭ ಮತ್ತು ರಾಷ್ಟ್ರದ್ರೋಹಕರವಾಗಲಿದೆಯೆಂದು ಚಿಂತಿಸಿದರಾದರೂ, ಅಶುಭಕರ ಅಂಶವನ್ನು ಮೃದುಗೊಳಿಸಲು ಹಾಸ್ಯವನ್ನು ಸೇರಿಸುವ ಮೂಲಕ, ಫ಼ಿಂಚರ್ ಅದನ್ನು ಹಾಸ್ಯಮಯ ಮತ್ತು ರಾಷ್ಟ್ರದ್ರೋಹಕರವಾಗಿಸಲು ಪ್ರಯತ್ನಿಸಿದರು.
ಚಿತ್ರಕಥೆಗಾರ ಅಲ್ಸ್ ಈ ಚಲನಚಿತ್ರವನ್ನು ಪ್ರಣಯಪ್ರಧಾನ ಹಾಸ್ಯವೆಂದು ವರ್ಣಿಸಿದರು. ನಿರೂಪಕನು ಲೈಂಗಿಕ ಸಂಬಂಧವನ್ನು ಬಯಸುತ್ತಾನೆ, ಆದರೆ ಅದನ್ನು ಮಾರ್ಲಾ ಸಿಂಗರ್‌ಳೊಂದಿಗೆ ತಪ್ಪಿಸುತ್ತಾನೆ, ಏಕೆಂದರೆ ಅವಳಲ್ಲಿ ತನ್ನನ್ನು ಬಹಳವಾಗಿ ಕಾಣುತ್ತಾನೆ. ಮಾರ್ಲಾ ನಿರೂಪಕನಿಗೆ ವ್ಯಾಮೋಹಕ ಹಾಗೂ ನಕಾರಾತ್ಮಕವಾದಿ ಸಂಭವವಾಗಿರುತ್ತಾಳೆ, ಆದರೆ ನಿರೂಪಕನು ಟೈಲರ್‌ನೊಂದಿಗೆ ಸ್ನೇಹಬೆಳೆಸಿದರೆ ಬರುವ ಹೊಸತನ ಮತ್ತು ಪ್ರಚೋದನವನ್ನು ಆಲಿಂಗಿಸಿಕೊಳ್ಳುತ್ತಾನೆ.
ತಾನು ಮನಸ್ಸಿನಲ್ಲಿ ಟೈಲರ್‌ನನ್ನು ಕಲ್ಪಿಸುತ್ತಿದ್ದೇನೆಂದು ನಿರೂಪಕನಿಗೆ ತಕ್ಷಣ ಅರಿವಾಗುವುದಿಲ್ಲ. ತಾನು ಶಕ್ತಿಯುತವೆನಿಸಬೇಕೆಂಬ ದಾರಿಯಾಗಿ ಕದನ ಸಂಘಗಳನ್ನು ತಪ್ಪಾಗಿ ಪ್ರಚಾರಮಾಡುತ್ತಾನೆ.[೮] ಆದರೆ ನಿರೂಪಕನ ದೈಹಿಕ ಸ್ಥಿತಿಯು ಹದಗೆಡುತ್ತದೆ ಮತ್ತು ಟೈಲರ್ ಡರ್ಡನ್‍ನ ರೂಪವು ಸುಧಾರಿಸುತ್ತದೆ. ಆರಂಭದಲ್ಲಿ ನಿರೂಪಕನಂತೆ ಟೈಲರ್ ವಾಸ್ತವದ ಹೊಡೆದಾಟಗಳ ನೈಜ ಅನುಭವಗಳನ್ನು ಬಯಸುತ್ತಾನಾದರೂ,[೯] ಅವನು ಸಂಸ್ಥೆಗಳು ಮತ್ತು ಮೌಲ್ಯ ವ್ಯವಸ್ಥೆಗಳನ್ನು ನಿರಾಕರಿಸಿ ನಾಶಮಾಡುವ ನಿರಾಕರಣವಾದಿ ಮನೋಭಾವವನ್ನು ಪ್ರದರ್ಶಿಸುತ್ತಾನೆ. ಪ್ರಾಕೃತ ಪ್ರವೃತ್ತಿಯನ್ನು ಚಿತ್ರಿಸುವ ಅವನ ಹಠಾತ್ ಸ್ವಭಾವವು ನಿರೂಪಕನಿಗೆ ಮತ್ತು ಮೇಹೆಮ್ ಯೋಜನೆಯ ಸದಸ್ಯರಿಗೆ ವ್ಯಾಮೋಹಕ ಮತ್ತು ವಿಮೋಚನಾತ್ಮಕವೆನಿಸುತ್ತವೆ. ಟೈಲರ್‌ನ ಉಪಕ್ರಮಗಳು ಮತ್ತು ವಿಧಾನಗಳು ಅಮಾನವೀಯವಾಗುತ್ತವೆ. ನಿರೂಪಕನು ಟೈಲರ್‌ನಿಂದ ದೂರ ಸರಿಯುತ್ತಾನೆ ಮತ್ತು ತನ್ನ ಸಂಘರ್ಷದ ತನ್ನತನಗಳ ನಡುವಿನ ರಾಜಿಸ್ಥಿತಿಗೆ ಬರುತ್ತಾನೆ.[೧೦]
ಫ಼ೈಟ್ ಕ್ಲಬ್ "ಇತಿಹಾಸದ ನಡುವಿನ ಮಕ್ಕಳಾಗಿ" ಹೊಸ ಪೀಳಿಗೆಯ ತಲ್ಲಣವನ್ನು ಶೋಧಿಸುತ್ತದೆ.[೫]
ಜಾಹೀರಾತಿನ ಸಂಸ್ಕೃತಿಯು ಸಮಾಜದ "ಸಂತೋಷದ ಬಾಹ್ಯ ಸೂಚಕ"ಗಳನ್ನು ವ್ಯಾಖ್ಯಾನಿಸುತ್ತದೆ, ಮತ್ತು ಹೆಚ್ಚು ಅತ್ಯಗತ್ಯ ಅನುಸರಣೆಯಾದ ಆಧ್ಯಾತ್ಮಿಕ ಸಂತೋಷದ ಬದಲು ಭೌತಿಕ ಸರಕುಗಳಿಗಾಗಿ ಅನಗತ್ಯ ಬೇಟೆಯನ್ನು ಉಂಟುಮಾಡುತ್ತದೆ. ಚಿತ್ರವು ಗೂಚಿ, ಕ್ಯಾಲ್ವಿನ್ ಕ್ಲೈನ್ ಮತ್ತು ವೋಕ್ಸ್‌ವಾಗನ್ ನ್ಯೂ ಬೀಟಲ್‍ನಂತಹ ಗ್ರಾಹಕ ಉತ್ಪನ್ನಗಳನ್ನು ಉಲ್ಲೇಖಿಸುತ್ತದೆ.
ಕದನ ಸಂಘಗಳ ಹಿಂಸಾಚಾರವು ಹೊಡೆದಾಟವನ್ನು ಪ್ರಚಾರಮಾಡುವ ಅಥವಾ ವೈಭವೀಕರಿಸುವ ಕಾರ್ಯಮಾಡುವುದಿಲ್ಲ, ಬದಲಾಗಿ ತಾವು ಬೇರೆ ರೀತಿಗಳಲ್ಲಿ ಜಡವಾಗಿರುವ ಸಮಾಜದಲ್ಲಿ ಭಾಗಿಗಳು ಅನಿಸಿಕೆಯನ್ನು ಅನುಭವಿಸುವ ಕಾರ್ಯಮಾಡುತ್ತದೆ.[೧೧] ಹೊಡೆದಾಟಗಳು ಸಮಾಜದಲ್ಲಿ ಹುದುಗಿಕೊಂಡಿರುವ ಪ್ರಚೋದನೆಗೆ ಪ್ರತಿರೋಧವನ್ನು ಪ್ರತಿನಿಧಿಸುತ್ತವೆ.[೧೨] ಹೊಡೆದಾಟಗಳು ಕ್ರಾಂತಿಕಾರಿ ಹಿಂಸೆಯಾಗಿ ವಿಕಸನವಾದಾಗ, ಚಿತ್ರವು ಟೈಲರ್ ಡರ್ಡನ್‍ನ ಕ್ರಾಂತಿಕಾರಿ ತರ್ಕವನ್ನು ಬರಿ ಅರ್ಧ ಒಪ್ಪುತ್ತದೆ; ನಿರೂಪಕನು ದೂರ ಸರಿದು ಡರ್ಡನ್‍ನ ವಿಚಾರಗಳನ್ನು ನಿರಾಕರಿಸುತ್ತಾನೆ.[೧೦] ಫ಼ೈಟ್ ಕ್ಲಬ್ ಉದ್ದೇಶಪೂರ್ವಕವಾಗಿ ದ್ವಂದ್ವಾರ್ಥದ ಸಂದೇಶವನ್ನು ರೂಪಿಸಿ ಅದರ ವ್ಯಾಖ್ಯಾನವನ್ನು ಪ್ರೇಕ್ಷಕರಿಗೆ ಬಿಡುತ್ತದೆ.
ತಯಾರಿಕೆ
[ಬದಲಾಯಿಸಿ]ಬೆಳವಣಿಗೆ
[ಬದಲಾಯಿಸಿ]ಚಕ್ ಪೌಲಾನಿಕ್‍ರ ಫ಼ೈಟ್ ಕ್ಲಬ್ ಕಾದಂಬರಿಯು ೧೯೯೬ರಲ್ಲಿ ಪ್ರಕಾಶನವಾಯಿತು. ಪ್ರಕಾಶನದ ಮೊದಲು ಅದರ ಕರಡಚ್ಚು ಪ್ರತಿಯನ್ನು ಸೃಜನಾತ್ಮಕ ಮುಖ್ಯಸ್ಥರಿಗೆ ಕಳಿಸಲಾಯಿತು. ನಿರ್ಮಾಣಶಾಲೆಯ ಓದುಗರು ಮತ್ತು ನಿರ್ಮಾಪಕರು ಆ ಕರಡಚ್ಚು ಪ್ರತಿಯನ್ನು ಓದಿ ತಿರಸ್ಕರಿಸಿದರು. ಆದರೆ ಇತರ ನಿರ್ಮಾಪಕರು ಸಾಮರ್ಥ್ಯವನ್ನು ಕಂಡು ಆಸಕ್ತಿ ವ್ಯಕ್ತಪಡಿಸಿದರು. ನಟರೊಂದಿಗೆ ಸಂಬಳವಿಲ್ಲದ ತೆರೆ ಪಠನಗಳನ್ನು ಏರ್ಪಡಿಸಲಾಯಿತು. ಚಿತ್ರದ ಅವಧಿಯನ್ನು ಕಡಿಮೆಮಾಡಲು ವಿಭಾಗಗಳನ್ನು ಕತ್ತರಿಸಲಾಯಿತು ಮತ್ತು ಹೆಚ್ಚು ಮೊಟಕಾದ ಕಥೆಯನ್ನು ಬಳಸಿ ಸಂಭಾಷಣೆಯನ್ನು ಮುದ್ರಿಸಿಕೊಳ್ಳಲಾಯಿತು. ಫ಼ಾಕ್ಸ್ ೨೦೦೦ ವಿಭಾಗದ ಮುಖ್ಯಸ್ಥೆ ಲಾರಾ ಜ಼ಿಸ್ಕಿನ್ ಧ್ವನಿಮುದ್ರಣವನ್ನು ಕೇಳಿ ಪೌಲಾನಿಕ್‍ರಿಂದ ಫ಼ೈಟ್ ಕ್ಲಬ್‍ನ ಹಕ್ಕುಗಳನ್ನು $10,000ಗೆ ಖರೀದಿಸಿದರು.
ರೂಪಾಂತರವನ್ನು ಬರೆಯಲು ಜಿಮ್ ಅಲ್ಸ್ ನಿರ್ಮಾಪಕರ ಮೇಲೆ ಪ್ರಭಾವ ಬೀರಿದಾಗ, ನಿರ್ಮಾಪಕರು ಅಲ್ಸ್‌ರನ್ನು ಆಯ್ಕೆಮಾಡಿದರು. ಚಿತ್ರವನ್ನು ನಿರ್ದೇಶಿಸಲು ನಾಲ್ಕು ನಿರ್ದೇಶಕರನ್ನು ಸಂಪರ್ಕಿಸಲಾಯಿತು. ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಡೇವಿಡ್ ಫ಼ಿಂಚರ್ ಜ಼ಿಸ್ಕಿನ್‍ರೊಂದಿಗೆ ಮಾತಾಡಿದರು. ಈ ನಿರ್ಮಾಣಶಾಲೆಯೊಂದಿಗೆ ತಮಗಾದ ಅಹಿತಕರ ಅನುಭವದಿಂದಾಗಿ ಮೊದಲು ಕೆಲಸವನ್ನು ಒಪ್ಪಿಕೊಳ್ಳಲು ಹಿಂಜರಿದರು. ಆದರೆ ಮಾತುಕತೆಯಾದ ಮೇಲೆ, ಆಗಸ್ಟ್ ೧೯೯೭ರಲ್ಲಿ ಫ಼ಿಂಚರ್ ಫ಼ೈಟ್ ಕ್ಲಬ್‍ನ್ನು ನಿರ್ದೇಶಿಸುವರೆಂದು ಘೋಷಿಸಲಾಯಿತು.
ಪಾತ್ರ ನಿರ್ಧಾರಣ
[ಬದಲಾಯಿಸಿ]ನಿರ್ಮಾಪಕರು ಟೈಲರ್ ಡರ್ಡನ್‍ನ ಪಾತ್ರಕ್ಕೆ ರಸೆಲ್ ಕ್ರೋವ್ ಹಾಗೂ ಪಿಟ್‍ರನ್ನು ಭೇಟಿಯಾದರು. ಅಂತಿಮವಾಗಿ ನಿರ್ಮಾಣಶಾಲೆಯು ಪಿಟ್‍ರಿಗೆ ಪಾತ್ರವನ್ನು ನೀಡಿತು. ಪಿಟ್ ಅಮೇರಿಕನ್$17.5 ಮಿಲಿಯನ್ ಸಂಭಾವನೆಗೆ ನಟಿಸಲು ಒಪ್ಪಿಕೊಂಡರು.
ಹೆಸರಿಲ್ಲದ ನಿರೂಪಕನ ಪಾತ್ರಕ್ಕೆ ನಿರ್ಮಾಣಶಾಲೆಯು ಅನೇಕ ನಟರನ್ನು ಪರಿಗಣಿಸಿತು. ಫ಼ಿಂಚರ್ ನಾರ್ಟನ್‍ರನ್ನು ಪರಿಗಣಿಸಿದರು. ಆದರೆ ಅವರು ಬೇರೆ ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದರಿಂದ ತಕ್ಷಣ ಒಪ್ಪಿಕೊಳ್ಳಲು ಆಗಲಿಲ್ಲ.
ಜನವರಿ ೧೯೯೮ರಲ್ಲಿ, ಪಿಟ್ ಮತ್ತು ನಾರ್ಟನ್ ಚಿತ್ರದಲ್ಲಿ ನಟಿಸುತ್ತಿದ್ದಾರೆಂದು ಟ್ವೆಂಟಿಯತ್ ಸೆಂಚುರಿ ಫ಼ಾಕ್ಸ್ ಘೋಷಿಸಿತು. ಬಾಕ್ಸಿಂಗ್, ಟೇಕ್ವಾಂಡೋ, ಗ್ರ್ಯಾಪ್ಲಿಂಗ್ ಮತ್ತು ಸಾಬೂನು ತಯಾರಿಕೆ ಬಗ್ಗೆ ಪಾಠ ಕಲಿಯುವ ಮೂಲಕ ನಟರು ಚಿತ್ರಕ್ಕೆ ತಯಾರಾದರು. ತಮ್ಮ ಪಾತ್ರವು ಪರಿಪೂರ್ಣ ಹಲ್ಲುಗಳನ್ನು ಹೊಂದಿರಬಾರದೆಂದು ಮುಂದಿನ ಹಲ್ಲುಗಳ ಕೆಲ ತುಂಡುಗಳನ್ನು ತೆಗಿಸಲು ಪಿಟ್ ದಂತವೈದ್ಯರ ಬಳಿ ಹೋದರು. ಚಿತ್ರೀಕರಣ ಮುಗಿದ ಮೇಲೆ ತುಂಡುಗಳನ್ನು ಮರುಸ್ಥಾಪಿಸಲಾಯಿತು.[೧೩]
ಮಾರ್ಲಾ ಸಿಂಗರ್‌ಳ ಪಾತ್ರಕ್ಕೆ ಒಬ್ಬ ಬೇರೆ ನಟಿ ಫ಼ಿಂಚರ್‌ರ ಮೊದಲ ಆಯ್ಕೆಯಾಗಿದ್ದರು.[೧೪] ಚಿತ್ರತಯಾರಕರು ಇತರ ನಟಿಯರನ್ನು ಪಾತ್ರಕ್ಕಾಗಿ ಪರಿಗಣಿಸಿದರು. ಅಂತಿಮವಾಗಿ ಬಾನಮ್ ಕಾರ್ಟರ್‌ಗೆ ಪಾತ್ರ ನೀಡಲಾಯಿತು.
ಬರವಣಿಗೆ
[ಬದಲಾಯಿಸಿ]ಅಲ್ಸ್ ರೂಪಾಂತರಿತ ಚಿತ್ರಕಥೆಯ ಕರಡನ್ನು ಬರೆಯಲು ಆರಂಭಿಸಿದಾಗ ಅಶರೀರವಾಣಿ ಇರಲಿಲ್ಲ. ಫ಼ಿಂಚರ್ ಚಿತ್ರಕ್ಕೆ ಸೇರಿಕೊಂಡಾಗ, ಚಿತ್ರದ ಹಾಸ್ಯವು ನಿರೂಪಕನ ಧ್ವನಿಯಿಂದ ಬರುತ್ತದೆ ಎಂದು ನಂಬಿ ಚಿತ್ರಕ್ಕೆ ಅಶರೀರವಾಣಿ ಇರಬೇಕೆಂದು ಭಾವಿಸಿದರು. ಫ಼ಿಂಚರ್ ಕಥೆಯನ್ನು ಆರು ಏಳು ತಿಂಗಳವರೆಗೆ ಪರಿಷ್ಕರಿಸಿದರು ಮತ್ತು ೧೯೯೭ರ ವೇಳೆಗೆ ಹಲವಾರು ಪ್ರಧಾನ ಅಂಶಗಳನ್ನು ಬಿಟ್ಟಿದ್ದ ಮೂರನೇ ಕರಡು ಸಿದ್ಧವಾಗಿತ್ತು. ಪಿಟ್ ತಮ್ಮ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಫ಼ಿಂಚರ್ ಆ ಪಾತ್ರಕ್ಕೆ ಹೆಚ್ಚು ಅಸ್ಪಷ್ಟತೆಯನ್ನು ನೀಡಲು ನಿರ್ದೇಶಕ ಕ್ರೋವ್ ಮತ್ತು ಒಬ್ಬ ಚಿತ್ರಕಥೆಗಾರನ ನೆರವು ಪಡೆದರು. ಕಥೆಯನ್ನು ಪರಿಷ್ಕರಿಸಲು ನೆರವಾಗಲು ಪಿಟ್ ಮತ್ತು ನಾರ್ಟನ್‍ರನ್ನು ಆಹ್ವಾನಿಸಲಾಯಿತು, ಮತ್ತು ಈ ಗುಂಪು ಒಂದು ವರ್ಷದ ಅವಧಿಯಲ್ಲಿ ಐದು ಪರಿಷ್ಕರಣೆಗಳನ್ನು ಸಿದ್ಧಪಡಿಸಿತು.
ತಮ್ಮ ಕಾದಂಬರಿಯ ಯಥಾವತ್ತಾದ ಚಿತ್ರ ರೂಪಾಂತರವನ್ನು ಪೌಲಾನಿಕ್ ಪ್ರಶಂಸಿಸಿದರು.
ಚಿತ್ರೀಕರಣ
[ಬದಲಾಯಿಸಿ]ನಿರ್ಮಾಣದ ಆರಂಭದ ವೇಳೆ ಚಿತ್ರದ ಬಂಡವಾಳವು $೫೦ ಮಿಲಿಯನ್‍ನಷ್ಟು ಇರುವುದು ಎಂದು ನಿರ್ಧರಿಸಲಾಯಿತು. ಚಿತ್ರೀಕರಣದ ವೇಳೆ, ಯೋಜಿತ ಬಂಡವಾಳವು ಅಮೇರಿಕನ್$67 ಮಿಲಿಯನ್‍ಗೆ ಏರಿತು. ಅಂತಿಮ ನಿರ್ಮಾಣ ಬಂಡವಾಳವು $63 ಮಿಲಿಯನ್‍ನಷ್ಟಾಗಿತ್ತು.
ಹೊಡೆದಾಟದ ದೃಶ್ಯಗಳನ್ನು ಬಹಳವಾಗಿ ಯೋಜಿಸಿ ನಿಯಂತ್ರಿಸಲಾಗಿತ್ತು. ಆದರೆ ವಾಸ್ತವಿಕ ಪರಿಣಾಮಗಳನ್ನು ಸೆರೆಹಿಡಿಯಲು ನಟರಿಗೆ ಸಂಪೂರ್ಣವಾಗಿ ಪ್ರಯತ್ನಿಸುವಂತೆ ಹೇಳಲಾಗಿತ್ತು.[೧೫] ಮೇಕಪ್ ಕಲಾವಿದೆ ಪಿಯರ್ಸ್ ಹೊಡೆದಾಡುವವರನ್ನು ನಿಖರವಾಗಿ ಚಿತ್ರಿಸಲು ಸಮರ ಕಲೆಗಳು ಮತ್ತು ಬಾಕ್ಸಿಂಗ್‍ನ್ನು ಅಧ್ಯಯನ ಮಾಡಿದರು.
ಚಿತ್ರೀಕರಣವು ೧೩೮ ದಿನಗಳು ನಡೆಯಿತು. ಚಿತ್ರೀಕರಣದ ಸ್ಥಳಗಳು ಲಾಸ ಏಂಜಲೀಸ್‍ನಲ್ಲಿ ಮತ್ತು ಅದರ ಸುತ್ತಮುತ್ತ ಇದ್ದವು. ೭೦ಕ್ಕೂ ಹೆಚ್ಚು ಸೆಟ್‍ಗಳನ್ನು ನಿರ್ಮಿಸಲಾಯಿತು. ಒಟ್ಟಾರೆ ನಿರ್ಮಾಣವು ೩೦೦ ದೃಶ್ಯಗಳು ಮತ್ತು ೨೦೦ ಸ್ಥಳಗಳನ್ನು ಒಳಗೊಂಡಿತ್ತು.
ಬಿಡುಗಡೆ
[ಬದಲಾಯಿಸಿ]ಮಾರಾಟಗಾರಿಕೆ
[ಬದಲಾಯಿಸಿ]ಚಿತ್ರೀಕರಣವು ಡಿಸೆಂಬರ್ ೧೯೯೮ರಲ್ಲಿ ಮುಗಿಯಿತು. ಹಿರಿಯ ಮುಖ್ಯಸ್ಥರಿಗೆ ಚಿತ್ರವನ್ನು ಫ಼ಿಂಚರ್ ತೋರಿಸಿದಾಗ ಅವರು ಅದನ್ನು ಇಷ್ಟಪಡಲಿಲ್ಲ ಮತ್ತು ಚಿತ್ರಕ್ಕೆ ಪ್ರೇಕ್ಷಕರಿರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಫ಼ಾಕ್ಸ್ ಸರ್ಚ್‌ಲೈಟ್ ಪಿಕ್ಚರ್ಸ್‌ನ ಮಾರಾಟಗಾರಿಕಾ ಮುಖ್ಯಸ್ಥರು ಫ಼ೈಟ್ ಕ್ಲಬ್‍ನ್ನು ಮಾರಾಟಮಾಡುವಲ್ಲಿ ಕಷ್ಟಗಳನ್ನು ಎದುರಿಸಿದರು ಮತ್ತು ಒಂದು ಹಂತದಲ್ಲಿ ಇದನ್ನು ಒಂದು ಕಲಾತ್ಮಕ ಚಲನಚಿತ್ರವಾಗಿ ಮಾರಾಟಮಾಡಲು ಪರಿಗಣಿಸಿದರು. ಅದರ ಹಿಂಸಾಚಾರದ ಕಾರಣದಿಂದ ಚಿತ್ರವು ಮುಖ್ಯವಾಗಿ ಪುರುಷ ಪ್ರೇಕ್ಷಕರಿಗೆ ಇಷ್ಟವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಪರಿಗಣಿಸಿದರು. ಚಿತ್ರವು ಹದಿಹರೆಯದವರಿಗೆ ಇಷ್ಟವಾಯಿತೆಂದು ಸಂಶೋಧಾನ ಪರೀಕ್ಷೆಯು ತೋರಿಸಿಕೊಟ್ಟಿತು. ನಿರ್ಮಾಣಶಾಲೆಯು ಫ಼ೈಟ್ ಕ್ಲಬ್‍ನ್ನು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಪ್ರಸಾರಗಳ ವೇಳೆ ಕೇಬಲ್ ಟಿವಿಯಲ್ಲಿ ಪ್ರಚಾರಮಾಡಿತು, ಆದರೆ ಫ಼ಿಂಚರ್ ಇದನ್ನು ಪ್ರತಿಭಟಿಸಿದರು. ಈ ರೀತಿಯ ಏಕ ಆಯಾಮದ ಮಾರಾಟಗಾರಿಕೆಯು ಅಮೇರಿಕದಲ್ಲಿ ಫ಼ೈಟ್ ಕ್ಲಬ್ ಬಾಕ್ಸ್ ಆಫ಼ಿಸ್‍ನಲ್ಲಿ ಉತ್ಸಾಹವಿಲ್ಲದ ಪ್ರದರ್ಶನ ನೀಡಿದ್ದಕ್ಕೆ ಬಹಳವಾಗಿ ಕೊಡುಗೆ ನೀಡಿತು.
ಚಿತ್ರಮಂದಿರ ಪ್ರದರ್ಶನ ಅವಧಿ
[ಬದಲಾಯಿಸಿ]ಫ಼ೈಟ್ ಕ್ಲಬ್‍ನ ಪ್ರಥಮ ವಿಶ್ವ ಪ್ರದರ್ಶನವು ೫೬ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೆಪ್ಟೆಂಬರ್ ೧೦, ೧೯೯೯ರಂದು ನಡೆಯಿತು.[೧೬][೧೭] ಫ಼ೈಟ್ ಕ್ಲಬ್ ಅಮೇರಿಕ ಮತ್ತು ಕೆನಡಾದಲ್ಲಿ ವಾಣಿಜ್ಯಿಕವಾಗಿ ಅಕ್ಟೋಬರ್ ೧೫, ೧೯೯೯ರಂದು ತೆರೆಕಂಡಿತು. ಇದರ ನಿರ್ಮಾಣ ಬಂಡವಾಳವು ಅಮೇರಿಕನ್ ೬೩ ಮಿಲಿಯನ್ ಡಾಲರ್ ಆಗಿತ್ತು. ಅಮೇರಿಕ ಮತ್ತು ಕೆನಡಾದಲ್ಲಿ ಚಿತ್ರಮಂದಿರ ಪ್ರದರ್ಶನಗಳಿಂದ ಈ ಚಿತ್ರವು ಅಮೇರಿಕನ್ ೩೭ ಮಿಲಿಯನ್ ಡಾಲರ್‌ನಷ್ಟು ಗಳಿಸಿತು ಮತ್ತು ವಿಶ್ವಾದ್ಯಂತ ಅಮೇರಿಕನ್ ೧೦೦.೯ ಮಿಲಿಯನ್ ಡಾಲರ್ ಗಳಿಸಿತು.
ಫ಼ೈಟ್ ಕ್ಲಬ್ ಯುನೈಟಡ್ ಕಿಂಗ್ಡಮ್‍ನಲ್ಲಿ ನವೆಂಬರ್ ೧೨, ೧೯೯೯ರಂದು ಬಿಡುಗಡೆಯಾಯಿತು.
ಗೃಹ ಮಾಧ್ಯಮ
[ಬದಲಾಯಿಸಿ]ಚಲನಚಿತ್ರವನ್ನು ಎರಡು ಡಿವಿಡಿ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಯಿತು. ಚಲನಚಿತ್ರಕ್ಕಾಗಿ ತಮ್ಮ ಕಲ್ಪನೆಯನ್ನು ಅಂತ್ಯಗೊಳಿಸುವ ಮಾರ್ಗವಾಗಿ ಫ಼ಿಂಚರ್ ಡಿವ��ಡಿ ಮೇಲೆ ಕೆಲಸಮಾಡಿದರು.
ಈ ಚಿತ್ರದ ಎರಡು ಮುದ್ರಿಕೆಯ ಆವೃತ್ತಿಯು ಬಹಳವಾಗಿ ಮಾರಾಟವಾಯಿತು. ಎರಡು ಮುದ್ರಿಕೆಗಳ ಆವೃತ್ತಿಯ ಪ್ರತಿಗಳು ಅಲಭ್ಯವಾದಾಗ, ಅಭಿಮಾನಿಗಳ ವಿನಂತಿಗಳ ಕಾರಣದಿಂದ ನಿರ್ಮಾಣಶಾಲೆಯು ೨೦೦೪ರಲ್ಲಿ ಇದನ್ನು ಪುನಃ ಬಿಡುಗಡೆ ಮಾಡಿತು.[೧೮] ಮೊದಲ ಹತ್ತು ವರ್ಷದೊಳಗೆ ಈ ಚಿತ್ರದ ಡಿವಿಡಿ ಮತ್ತು ವೀಡಿಯೊದ ೬ ಮಿಲಿಯನ್ ಪ್ರತಿಗಳಿಂತ ಹೆಚ್ಚು ಮಾರಾಟವಾದವು.[೧೯] ಜೊತೆಗೆ ವೀಡಿಯೊ ಮತ್ತು ಡಿವಿಡಿ ಬಾಡಿಗೆಯಲ್ಲಿ $55 ಮಿಲಿಯನ್‍ಗಿಂತ ಹೆಚ್ಚು ಹಣಗಳಿಸಿತು.ಅಮೇರಿಕ ಮತ್ತು ಕೆನಡಾದಲ್ಲಿ ದುರ್ಬಲ ಬಾಕ್ಸ್ ಆಫ಼ಿಸ್ ಸಾಧನೆಯ ಹೊರತಾಗಿಯೂ, ಇತರ ಪ್ರಾಂತ್ಯಗಳಲ್ಲಿ ಹೆಚ್ಚು ಉತ್ತಮ ಸಾಧನೆ ಮತ್ತು ಬಹಳ ಯಶಸ್ವಿ ಡಿವಿಡಿ ಬಿಡುಗಡೆಯ ನೆರವಿನಿಂದ, ಫ಼ೈಟ್ ಕ್ಲಬ್ ನಿರ್ಮಾಣಶಾಲೆಗೆ ಅಮೇರಿಕನ್$10 ಮಿಲಿಯನ್ ಲಾಭ ತಂದುಕೊಟ್ಟಿತು.
ಫ಼ೈಟ್ ಕ್ಲಬ್‍ನ್ನು ಬ್ಲೂ-ರೇ ಮುದ್ರಿಕೆ ವಿನ್ಯಾಸದಲ್ಲಿ ಅಮೇರಿದಲ್ಲಿ ನವೆಂಬರ್ ೧೭, ೨೦೦೯ರಂದು ಬಿಡುಗಡೆ ಮಾಡಲಾಯಿತು.[೨೦]
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]೫೬ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫ಼ೈಟ್ ಕ್ಲಬ್‍ನ ಪ್ರಥಮ ಪ್ರದರ್ಶನವಾದಾಗ, ಆ ಚಿತ್ರವನ್ನು ವಿಮರ್ಶಕರು ಉಗ್ರವಾಗಿ ಚರ್ಚಿಸಿದರು. ಈ ಚಿತ್ರವು ಅಂಧಾನುಕರಣೆಯ ವರ್ತನೆಯನ್ನು ಪ್ರಚೋದಿಸುವುದು ಎಂದು ಕೆಲವು ವಿಮರ್ಶಕರು ಕಳವಳ ವ್ಯಕ್ತಪಡಿಸಿದರು. ಈ ಚಿತ್ರದ ತಯಾರಕರು ಫ಼ೈಟ್ ಕ್ಲಬ್‍ನ್ನು ೧೯೯೦ರ ದಶಕದಲ್ಲಿನ ಪುರುಷರ ನಿಖರವಾದ ಚಿತ್ರಣವೆಂದು ಕರೆದರಾದರೂ, ಕೆಲವು ವಿಮರ್ಶಕರು ಇದನ್ನು ಬೇಜವಾಬ್ದಾರಿಯುಳ್ಳ ಮತ್ತು ಭಯಪಡಿಸುವಂಥದ್ದು ಎಂದು ಕರೆದರು.
ಫ಼ೈಟ್ ಕ್ಲಬ್ ಅಕ್ಯಾಡೆಮಿ ಅತ್ಯುತ್ತಮ ಧ್ವನಿ ಸಂಕಲನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.[೨೧]
ಸಾಂಸ್ಕೃತಿಕ ಪ್ರಭಾವ
[ಬದಲಾಯಿಸಿ]೧೯೯೯ರ ಇತರ ಚಿತ್ರಗಳಂತೆ, ಫ಼ೈಟ್ ಕ್ಲಬ್‍ನ್ನು ಚಲನಚಿತ್ರ ರೂಪ ಮತ್ತು ಶೈಲಿಯಲ್ಲಿ ನವನಿರ್ಮಿತಿಕಾರನಾಗಿ ಗುರುತಿಸಲಾಯಿತು ಏಕೆಂದರೆ ಇದು ಚಿತ್ರ ತಯಾರಿಕಾ ತಂತ್ರಜ್ಞಾನದಲ್ಲಿನ ಹೊಸ ಬೆಳವಣಿಗೆಗಳನ್ನು ಬಳಸಿಕೊಂಡಿತು.[೨೨] ಫ಼ೈಟ್ ಕ್ಲಬ್‍ನ ಚಿತ್ರಮಂದಿರ ಬಿಡುಗಡೆಯ ನಂತರ ಇದು ಬಾಯಿಮಾತಿನಿಂದ ಹೆಚ್ಚು ಜನಪ್ರಿಯವಾಯಿತು.[೨೩] ಈ ಚಿತ್ರದ ಯಸಸ್ಸು ಪೌಲಾನಿಕ್‍ರ ವ್ಯಕ್ತಿಚಿತ್ರವನ್ನು ಕೂಡ ಜಾಗತಿಕ ಖ್ಯಾತಿಗೆ ಹೆಚ್ಚಿಸಿತು.[೨೪]
ಫ಼ೈಟ್ ಕ್ಲಬ್‍ನ ಬಿಡುಗಡೆಯ ನಂತರ, ಅಮೇರಿಕದಲ್ಲಿ ಹಲವಾರು ಕದನ ಸಂಘಗಳು ಆರಂಭವಾದವು ಎಂದು ವರದಿ ಮಾಡಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "Fight Club (1999)". Box Office Mojo. Retrieved November 11, 2019.
- ↑ "Fight Club (1999)". British Film Institute. Archived from the original on February 24, 2015. Retrieved February 16, 2015.
- ↑ "Fight Club – Detail view of Movies Page". American Film Institute. Archived from the original on February 16, 2015. Retrieved February 16, 2015.
- ↑ Sragow, Michael (April 19, 1999). "'Fight Club': 'A Weird Catcher in the Rye'". CNN. Archived from the original on December 6, 2016. Retrieved April 30, 2017.
- ↑ ೫.೦ ೫.೧ Laist, Randy (March 12, 2015). "Cinema of Simulation: Hyperreal Hollywood in the Long 1990s". Bloomsbury Publishing. Retrieved April 30, 2017.
- ↑ Hobson, Louis B. (October 10, 1999). "Fiction for real". Calgary Sun.
- ↑ Lim, Dennis (November 6, 2009). "Forget Rule No. 1: Still Talking About 'Fight Club'". The New York Times. Retrieved July 24, 2019.
- ↑ O'Connor, Robby (October 8, 1999). "Interview with Edward Norton". Yale Herald.
- ↑ Schaefer, Stephen (October 1999). "Brad Pitt & Edward Norton". MrShowbiz.com. ABC News Internet Ventures. Archived from the original on April 17, 2001. Retrieved March 26, 2007.
- ↑ ೧೦.೦ ೧೦.೧ Teasdall, Barbara (1999). "Edward Norton Fights His Way to the Top". Reel.com. Movie Gallery. Archived from the original on October 11, 2007. Retrieved March 24, 2007.
- ↑ Moses, Michael (1999). "Fighting Words: An interview with Fight Club director David Fincher". DrDrew.com. Dr. Drew. Archived from the original on December 11, 2007. Retrieved May 13, 2009.
- ↑ Hobson, Louis B. (October 10, 1999). "Get ready to rumble". Calgary Sun.
- ↑ Nashawaty, Chris (July 16, 1998). "Brad Pitt loses his teeth for a "Fight"". Entertainment Weekly. Archived from the original on October 14, 2007. Retrieved March 23, 2007.
- ↑ "The Story Behind Fight Club". Total Film. November 20, 2009. Archived from the original on February 20, 2010. Retrieved May 11, 2010.
The studio wanted Winona Ryder. Fincher wanted Garofalo, but she was "uncomfortable with the idea of all this sex".
- ↑ "'Club' fighting for a respectful place in life". Post-Tribune. March 15, 2001.
- ↑ "'Fight Club' gets Venice premiere". Associated Press via Lubbock Avalanche-Journal. September 11, 1999. Archived from the original on February 16, 2015. Retrieved February 16, 2015.
- ↑ Gristwood, Sarah (September 14, 1999). "Fury of fists". The Guardian. UK. Archived from the original on January 7, 2014. Retrieved July 15, 2009.
- ↑ Cole, Ron (February 14, 2004). "Don't let Kurt Russell classic escape you". Battle Creek Enquirer. Gannett Company.
- ↑ Lim, Dennis (November 6, 2009). "'Fight Club' Fight Goes On". The New York Times. The New York Times Company. Archived from the original on May 25, 2014. Retrieved April 1, 2013.
- ↑ Ault, Susanne (September 18, 2009). "PHYSICAL: Fox packaging reflects film's anti-establishment themes". Video Business. Archived from the original on September 25, 2009. Retrieved October 11, 2009.
- ↑ Hawker, Philippa (March 28, 2000). "Oscar 2000 – Shocking? Not!". The Age. Australia.
- ↑ Pulver, Andrew (November 27, 2004). "Personality crisis: David Fincher's Fight Club (1999)". The Guardian. UK. Archived from the original on May 7, 2014. Retrieved June 23, 2008.
- ↑ Wise, Damon (November 2, 2000). "Now you see it". The Guardian. UK. Archived from the original on May 9, 2014. Retrieved April 30, 2008.
- ↑ Flynn, Bob (March 29, 2007). "Fighting talk". The Independent. UK.
- Linson, Art (May 2002). "Fight Clubbed". What Just Happened? Bitter Hollywood Tales from the Front Line. Bloomsbury USA. pp. 141–156. ISBN 978-1-58234-240-5.
{{cite book}}
: Invalid|ref=harv
(help) - Probst, Christopher (November 1999). "Anarchy in the U.S.A". American Cinematographer. 80 (11): 42–44+. Archived from the original on May 24, 2009. Retrieved July 19, 2009.
{{cite journal}}
: Invalid|ref=harv
(help) - Smith, Gavin (Sep–Oct 1999). "Inside Out: Gavin Smith Goes One-on-One with David Fincher". Film Comment. 35 (5): 58–62, 65, 67–68. Archived from the original on June 21, 2015.
{{cite journal}}
: Invalid|ref=harv
(help) - Waxman, Sharon (December 2005). Rebels on the Backlot: Six Maverick Directors and How They Conquered the Hollywood Studio System. HarperEntertainment. ISBN 978-0-06-054017-3.
{{cite book}}
: Invalid|ref=harv
(help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official website ವೇಬ್ಯಾಕ್ ಮೆಷಿನ್ ನಲ್ಲಿ (archived October 16, 2004) (Requires Adobe Flash Player)
- Fight Club at IMDb
- Fight Club at AllMovie
- Fight Club at Rotten Tomatoes
- Fight Club at Metacritic
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ Fight Club
- Fight Club at Fox Movies