ಡ್ರೈ ಐಸ್ (ಘನೀಭವಿಸಿದ ಕಾರ್ಬನ್ ಡೈ ಆಕ್ಸೈಡ್)
This article's lead section may not adequately summarize key points of its contents. (September 2009) |
ಡ್ರೈ ಐಸ್ ಎಂಬುದು ಕಾರ್ಬನ್ ಡೈಆಕ್ಸೈಡ್‌ನ ಘನ ರೂಪ.
ಡ್ರೈ ಐಸನ್ನು ತಂಪುಗೊಳಿಸುವ ಒಂದು ಕಾರಕವಾಗಿ ಬಳಸಲಾಗುತ್ತದೆ ಏಕೆಂದರೆ ಇದು ಸಾಧಾರಣ ಸ್ಥಿತಿಯಲ್ಲಿ ಹೆಪ್ಪುಗಟ್ಟಿದ ನೀರಿಗಿಂತ 78.5 °C (78.5K)ರಷ್ಟು ತಣ್ಣಗಿರುವುದಲ್ಲದೆ, ಸಾಂದ್ರತೆಯಲ್ಲಿ ಕೇವಲ ಅರ್ಧದಷ್ಟಿರುತ್ತದೆ. ಅಲ್ಲದೆ ಕೆಲವು ಬಳಕೆಗಳಲ್ಲಿ, ಬೆಚ್ಚಗಿನ ನೀರು ಮಿಠಾಯಿಯು ಉಳಿಸುವ ದ್ರವೀಕರಣಗೊಂಡ ನೀರಿಗೆ ಪರ್ಯಾಯವಾಗಿ ಅದರ ಉತ್ಪತನವು "ತೆಳುವಾದ ಅನಿಲ"ವಾಗಿ ಉಪಯೋಗಕ್ಕೆ ಬರುತ್ತದೆ, ಇದು ಇತರ ವ್ಯಯಗಳನ್ನು ಮೀರಿಸುತ್ತದೆ.
ಗುಣಲಕ್ಷಣಗಳು
[ಬದಲಾಯಿಸಿ]ಡ್ರೈ ಐಸ್ ಎಂಬುದು ಕಾರ್ಬನ್ ಡೈಆಕ್ಸೈಡ್‌ನ ಘನ ರೂಪವಾಗಿದೆ (ರಾಸಾಯನಿಕ ಸೂತ್ರ:ಟೆಂಪ್ಲೇಟು:CO2). ಇದು ಒಂದು ಕಾರ್ಬನ್ ಅಣುವಿನ ಜೊತೆಗೆ ಬಂಧಕವಾದ ಆಮ್ಲಜನಕದ ಎರಡು ಅಣುಗಳಿಂದ ರಚಿತವಾಗಿರುತ್ತದೆ. ಇದು ಬಣ್ಣರಹಿತವಾಗಿ, ವಾಸನೆಯಿಲ್ಲದೆ, ಅದಾಹ್ಯವಾಗಿರುವುದರ ಜೊತೆಗೆ ಸ್ವಲ್ಪಮಟ್ಟಿಗೆ ಆಮ್ಲೀಯವಾಗಿರುತ್ತದೆ.[೧]
−56.4 °C (−69.5 °F)ಗಿಂತ ಹೆಚ್ಚಿನ ತಾಪಮಾನದಲ್ಲಿ ಹಾಗು 5.2 ಬಾರ್(ತ್ರಯ ಬಿಂದು)ಗಿಂತ ಕಡಿಮೆ ಒತ್ತಡದಲ್ಲಿ,ಟೆಂಪ್ಲೇಟು:Co2 ಇದು ಯಾವುದೇ ದ್ರವ ರೂಪದ ಮಧ್ಯ ಪ್ರವೇಶವಿಲ್ಲದೆ ಒಂದು ಘನ ರೂಪದಿಂದ ಅನಿಲ ರೂಪಕ್ಕೆ, ಉತ್ಪತನ ಎಂಬ ಪ್ರಕ್ರಿಯೆಯ ಮೂಲಕ ಮಾರ್ಪಾಡಾಗುತ್ತದೆ. ಇದರ ವಿರುದ್ಧವಾಗಿ ಕ್ರಿಯೆಯನ್ನು ನ್ಯಾಸವೆಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಡ್ರೈ ಐಸ್ ಅನಿಲ ರೂಪದಿಂದ ಘನ ಸ್ಥಿತಿಗೆ ಬದಲಾಗುತ್ತದೆ. ವಾಯುಮಂಡಲದ ಒತ್ತಡದಲ್ಲಿ, ಉತ್ಪತನ/ನ್ಯಾಸ ಪ್ರಕ್ರಿಯೆಯು −78.5 °C (−109.3 °F)ನಲ್ಲಿ ಸಂಭವಿಸುತ್ತದೆ.
ಡ್ರೈ ಐಸ್‌ನ ಸಾಂದ್ರತೆಯು ಭಿನ್ನವಾಗಿರುತ್ತದೆ, ಆದರೆ ಇದು ಸಾಮಾನ್ಯವಾಗಿ ಸುಮಾರು 1.4 ಹಾಗು 1.6 g/cm3 (87–100 lb/ft3) ನಡುವಿನ ವ್ಯಾಪ್ತಿಯೊಳಗಿರುತ್ತದೆ.[೨] ತಾಪಮಾನದಲ್ಲಿನ ಇಳಿಕೆ ಹಾಗು ಅನಿಲದ ಜೊತೆಗಿನ ನೇರ ಉತ್ಪತನವು, ಡ್ರೈ ಐಸ್‌ನ್ನು ಒಂದು ಪರಿಣಾಮಕಾರಿ ದ್ರವವನ್ನಾಗಿಸುತ್ತದೆ. ಇದು ನೀರು ಮಿಠಾಯಿಗಿಂತ ತಣ್ಣಗಿರುವ ಕಾರಣದಿಂದಾಗಿ ತನ್ನ ಸ್ಥಿತಿಯಿಂದ ಮಾರ್ಪಡುವಾಗ ಯಾವುದೇ ಶೇಷವನ್ನು ಉಳಿಸುವುದಿಲ್ಲ.[೩] ಇದರ ಉತ್ಪತನದ ಶಾಖಪ್ರಮಾಣವು 571 kJ/kg (25.2 kJ/mol)ನಷ್ಟಿರುತ್ತದೆ.
ಡ್ರೈ ಐಸ್ ಶೂನ್ಯ ಬಿಂದುವಿನ ದ್ವಿಧ್ರುವಿ ಅಳತೆಯೊಂದಿಗೆ ಧ್ರುವವನ್ನು ಹೊಂದಿರುವುದಿಲ್ಲ. ಹೀಗಾಗಿ ಆಕರ್ಷಣವಾಗಿ ಅಂತರಣ್ವಕ ವ್ಯಾನ್ ದೇರ್ ವಾಲ್ಸ್ ಚಾಲಕಶಕ್ತಿಗಳು ಕಾರ್ಯ ನಿರ್ವಹಿಸುತ್ತವೆ.[೪] ಈ ಸಂಯೋಜನೆಯಿಂದ ಕಡಿಮೆ ಶಾಖಾಧಾರಕ ಹಾಗು ವಿದ್ಯುತ್ ವಾಹಕತೆಯು ಉಂಟಾಗುತ್ತದೆ.[೫]
ಇತಿಹಾಸ
[ಬದಲಾಯಿಸಿ]ಡ್ರೈ ಐಸ್‌ನ ಬಗ್ಗೆ ಮೊದಲ ಬಾರಿಗೆ 1834ರಲ್ಲಿ ಫ್ರೆಂಚ್ ರಸಾಯನ ವಿಜ್ಞಾನಿ ಚಾರ್ಲ್ಸ್ ಥಿಲೋರಿಯೇರ್ ಅವಲೋಕಿಸಿದರೆಂದು ಸಾಮಾನ್ಯವಾಗಿ ಅಂಗೀಕರಿಸಲಾಗುತ್ತದೆ. ಅವರು ಈ ವಸ್ತುವಿನ ಬಗ್ಗೆ ಮೊದಲ ವಿವರಣೆಯನ್ನು ಪ್ರಕಟಿಸಿದರು.[೬][೭] ತನ್ನ ಪ್ರಯೋಗಗಳಲ್ಲಿ ಅವರು ದ್ರವ ರೂಪದ ಇಂಗಾಲದ ಡೈಆಕ್ಸೈಡ್ಅನ್ನು ಒಳಗೊಂಡ ಒಂದು ದೊಡ್ಡ ಸಿಲಿಂಡರ್‌ನ ಮುಚ್ಚಳವನ್ನು ತೆಗೆದಾಗ, ದ್ರವರೂಪದಲ್ಲಿದ್ದ ಹೆಚ್ಚಿನ CO2 ಬಹಳ ಬೇಗನೆ ಆವಿಯಾಗಿದ್ದನ್ನು ಗಮನಿಸಿದರು. ಇದರ ಪರಿಣಾಮವಾಗಿ ಧಾರಕದಲ್ಲಿ ಕೇವಲ ಘನ ರೂಪದ ಡ್ರೈ ಐಸ್ ಮಾತ್ರ ಉಳಿಯಿತು.[೬] ಕಳೆದ 1924ರಲ್ಲಿ, ಥಾಮಸ್ B. ಸ್ಲೇಟ್, ಡ್ರೈ ಐಸ್‌ನ್ನು ವ್ಯಾಪಾರ ಮಾಡಲು U.S.ನ ಪೇಟೆಂಟ್‌ಗೆ ಅರ್ಜಿ ಹಾಕಿದರು. ಬಳಿಕ ಡ್ರೈ ಐಸ್‌ನ್ನು ಯಶಸ್ವಿ ಉದ್ಯಮವನ್ನಾಗಿ ಮಾಡುವಲ್ಲಿ ಮೊದಲಿಗರಾದರು.[೮] ಕಳೆದ 1925ರಲ್ಲಿ, CO2ನ ಈ ಘನ ರೂಪವನ್ನು ಡ್ರೈ ಐಸ್ ಕಾರ್ಪೋರೇಶನ್ ಆಫ್ ಅಮೇರಿಕವು "ಡ್ರೈ ಐಸ್" ಎಂಬ ವ್ಯಾಪಾರ ಮುದ್ರೆಯನ್ನು ನೀಡಿತು. ಈ ರೀತಿಯಾಗಿ ಡ್ರೈ ಐಸ್ ಎಂಬ ಸಾಮಾನ್ಯ ಹೆಸರು ಹುಟ್ಟಿಕೊಂಡಿತು.[೯] ಅದೇ ವರ್ಷದಲ್ಲಿ DryIce Co. ಈ ವಸ್ತುವನ್ನು ಮೊದಲ ಬಾರಿಗೆ ಶೈತ್ಯೀಕರಣದ ಉದ್ದೇಶದೊಂದಿಗೆ ವ್ಯಾಣಿಜ್ಯವಾಗಿ ವ್ಯಾಪಾರ ಮಾಡಿತು.[೮]
ಇದರ ಪರ್ಯಾಯ ಹೆಸರಾದ "ಕಾರ್ಡೈಸ್" ಎಂಬುದು ಏರ್ ಲಿಕ್ವಿಡೆ UK ಲಿಮಿಟೆಡ್‌ನ ನೋಂದಾಯಿತ ವ್ಯಾಪಾರ ಮುದ್ರೆಯಾಗಿದೆ.[೧೦] ಇದನ್ನು ಕೆಲವೊಂದು ಬಾರಿ "ಕಾರ್ಡ್ ಐಸ್" ಎಂದು ಬರೆಯಲಾಗುತ್ತದೆ.[೧೧]
ತಯಾರಿಕೆ
[ಬದಲಾಯಿಸಿ]ಡ್ರೈ ಐಸ್‌ನ್ನು ಸುಲಭವಾಗಿ ತಯಾರಿಸಲಾಗುತ್ತದೆ.[೧೨][೧೩] ಸಾಧಾರಣವಾಗಿ, ಡ್ರೈ ಐಸನ್ನು ತಯಾರಿಸಲು ಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮೊದಲಿಗೆ, ಅಧಿಕ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ಹೊಂದಿದ ಅನಿಲಗಳನ್ನು ತಯಾರಿಸಲಾಗುತ್ತದೆ. ಇಂತಹ ಅನಿಲಗಳು ಕೆಲವು ಇತರ ಪ್ರಕ್ರಿಯೆಯ ಒಂದು ಉಪೋತ್ಪನ್ನವಾಗಿರಬಹುದು, ಉದಾಹರಣೆಗೆ ಸಾರಜನಕದಿಂದ ಹಾಗು ನಿಸರ್ಗಾನಿಲದಿಂದ ಅಮೋನಿಯಾದ ತಯಾರಿಕೆ, ಅಥವಾ ದೊಡ್ಡ ಪ್ರಮಾಣದಲ್ಲಿ ಕಿಣ್ವನಕ್ಕೆ ಒಳಪಡುತ್ತದೆ.[೧೩] ಎರಡನೇಯದಾಗಿ, ಇಂಗಾಲದ ಡೈಆಕ್ಸೈಡ್ ವಿಫುಲವಾಗಿರುವ ಅನಿಲವನ್ನು ಒತ್ತಡಕ್ಕೆ ಒಳಪಡಿಸುವುದರ ಜೊತೆಗೆ ಅದು ದ್ರವ ರೂಪಕ್ಕೆ ಬದಲಾಗುವ ತನಕ ಶೈತ್ಯೀಕರಿಸಲಾಗುತ್ತದೆ. ನಂತರ, ಒತ್ತಡವನ್ನು ಕಡಿಮೆ ಮಾಡಲಾಗುತ್ತದೆ. ಈ ಕ್ರಿಯೆಯಲ್ಲಿ ಕೆಲವು ದ್ರವ ರೂಪದ ಇಂಗಾಲದ ಡೈಆಕ್ಸೈಡ್ ಆವಿಯಾಗುತ್ತದೆ, ಹಾಗು ಇದು ಉಳಿದ ದ್ರವ ರೂಪದ ಇಂಗಾಲದ ಡೈಆಕ್ಸೈಡ್‌ನ ಉಷ್ಣತೆಯನ್ನು ಶೀಘ್ರವಾಗಿ ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ, ತೀವ್ರತರವಾದ ತಂಪು, ದ್ರವವನ್ನು ಹಿಮ ರೂಪದ ಸಾಂದ್ರತೆಗೆ ಘನೀಕರಿಸುತ್ತದೆ. ಅಂತಿಮವಾಗಿ, ಹಿಮರೂಪದ ಘನವಾದ ಇಂಗಾಲದ ಡೈಆಕ್ಸೈಡ್‌ನ್ನು ಸಣ್ಣ ಗೋಲಿಗಳಾಗಿ ಅಥವಾ ಡ್ರೈ ಐಸ್‌ನ ದೊಡ್ಡ ತುಂಡುಗಳಾಗಿ ಸಂಪೀಡನಗೊಳಿಸಲಾಗುತ್ತದೆ.[೧೪]
ಡ್ರೈ ಐಸನ್ನು ವಿಶೇಷವಾಗಿ ಎರಡು ಸ್ಟ್ಯಾಂಡರ್ಡ್ ರೂಪಗಳಲ್ಲಿ ತಯಾರಿಸಲಾಗುತ್ತದೆ: ತುಂಡುಗಳು ಹಾಗು ಸಿಲಿಂಡರಾಕಾರದ ಗೋಲಿಗಳು. ಸಾಮಾನ್ಯವಾಗಿ ಒಂದು ಸ್ಟ್ಯಾಂಡರ್ಡ್ ತುಂಡು ಸರಿಸುಮಾರು 30 ಕೆಜಿಯಷ್ಟು ತೂಗುತ್ತದೆ. ಇದನ್ನು ಸಾಮಾನ್ಯವಾಗಿ ಹಡಗು ರವಾನೆಯಲ್ಲಿ ಬಳಕೆ ಮಾಡಲಾಗುತ್ತದೆ, ಏಕೆಂದರೆ ಹೆಚ್ಚು ಕಡಿಮೆ ಒಂದು ಸಣ್ಣ ಮೇಲ್ಮೈಯ ವಿಸ್ತೀರ್ಣವನ್ನು ಹೊಂದಿರುವ ಕಾರಣದಿಂದಾಗಿ ಬಹಳ ನಿಧಾನವಾಗಿ ಉತ್ಪತನಗೊಳ್ಳುತ್ತದೆ. ಗೋಲಿಗಳು ಸುಮಾರು 1 cm (0.4 in)ರಷ್ಟು ವ್ಯಾಸವನ್ನು ಹೊಂದಿರುವುದರ ಜೊತೆಗೆ ಇದು ಸುಲಭವಾಗಿ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಈ ರೂಪವು ಸಣ್ಣ ಪ್ರಮಾಣದ ಬಳಕೆಗೆ ಯೋಗ್ಯವಾಗಿದೆ, ಉದಾಹರಣೆಗೆ ದಿನಸಿ ಮಳಿಗೆಗಳು ಹಾಗು ಪ್ರಯೋಗಾಲಯಗಳು.[ಸೂಕ್ತ ಉಲ್ಲೇಖನ ಬೇಕು]
ಉಪಯೋಗಗಳು
[ಬದಲಾಯಿಸಿ]ವಾಣಿಜ್ಯ ಬಳಕೆ
[ಬದಲಾಯಿಸಿ]ಡ್ರೈ ಐಸನ್ನು ಸಾಮಾನ್ಯವಾಗಿ ಚಕ್ರಗತಿಯಲ್ಲದ ಶೈತ್ಯೀಕರಣದ ವಿಧಾನವನ್ನು ಬಳಕೆ ಮಾಡಿಕೊಂಡು,[೧] ಆಹಾರ ಸಂರಕ್ಷಣೆಯನ್ನು ಮಾಡಲಾಗುತ್ತದೆ.
ತಂಪಾಗಿ ಅಥವಾ ಶೀತಾವರಣದಲ್ಲಿ ಉಳಿಯಬೇಕಾದ ವಸ್ತುಗಳನ್ನು ಕಟ್ಟಲು ಇದನ್ನು ಸಾಧಾರಣವಾಗಿ ಬಳಸಲಾಗುತ್ತದೆ, ಉದಾಹರಣೆಗೆ, ಯಾಂತ್ರಿಕ ಶೀತಲೀಕರಣವನ್ನು ಬಳಸದೆ,[೧೫] ಐಸ್ ಕ್ರೀಮ್ ಅಥವಾ ಜೀವವಿಜ್ಞಾನದ ಮಾದರಿಗಳು ಸಂರಕ್ಷಿಸುವುದಕ್ಕೆ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಅಲ್ಲದೆ, ಡ್ರೈ ಐಸನ್ನು ಶೀಘ್ರ ಘನೀಕರಣ ಆಹಾರದಲ್ಲಿ,[೧೬] ಪ್ರಯೋಗಾಲಯದಲ್ಲಿ ಜೀವವಿಜ್ಞಾನದ ಮಾದರಿಗಳಿಗೆ, ಕಾರ್ಬೊನೇಟ್ ಪಾನೀಯಗಳಲ್ಲಿ,[೧೬] ಹಾಗು ಐಸ್ ಕ್ರೀಮ್‌ನ ತಯಾರಿಕೆಯಲ್ಲಿ ಬಳಸಲಾಗುತ್ತದೆ.[೧೭]
ಡ್ರೈ ಐಸನ್ನು ಮುಚ್ಚಿದ ಧಾರಕಗಳಲ್ಲಿರುವ ಧಾನ್ಯಗಳು ಹಾಗು ಧಾನ್ಯದ ಉತ್ಪನ್ನಗಳಲ್ಲಿ ಉಂಟಾಗುವ ಕೀಟಾಣುಗಳನ್ನು ತಡೆಗಟ್ಟಲು ಹಾಗು ಅದನ್ನು ನಿರೋಧಿಸಲು ಬಳಸಲಾಗುತ್ತದೆ. ಏಕೆಂದರೆ ಅದು ಆಮ್ಲಜನಕವನ್ನು ಸ್ಥಳಾಂತರಿಸುತ್ತದೆ ಆದರೆ ಅಂತಹ ಆಹಾರದ ಗುಣಮಟ್ಟ ಹಾಗು ರುಚಿಯಲ್ಲಿ ಬದಲಾವಣೆಯನ್ನು ತರುವುದಿಲ್ಲ. ಇದೆ ಕಾರಣದಿಂದಾಗಿ, ಇದು ಆಹಾರದಲ್ಲಿ ಎಣ್ಣೆಗಳನ್ನು ವಿಲಂಬನಗೊಳಿಸುತ್ತದೆ ಅಥವಾ ತಡೆಗಟ್ಟುವುದರ ಜೊತೆಗೆ ಕೊಬ್ಬು ಕಮಟು ಹಿಡಿಯುವುದನ್ನು ಸಹ ತಡೆಗಟ್ಟುತ್ತದೆ.
ಡ್ರೈ ಐಸನ್ನು ನೀರಿನಲ್ಲಿಟ್ಟಾಗ ಉತ್ಪತನ ಕ್ರಿಯೆಯು ಚುರುಕುಗೊಳ್ಳುತ್ತದೆ, ಜೊತೆಗೆ ಕಡಿಮೆ ಅದ್ದಿಕೆಯನ್ನು ಹೊಂದಿರುವ ಹೊಗೆ ಮಾದರಿಯ ಮಂಜಿನ ದಟ್ಟ ರಾಶಿಯು ಸೃಷ್ಟಿಯಾಗುತ್ತದೆ. ಇದನ್ನು ಮಂಜಿನ ಯಂತ್ರಗಳು, ಚಿತ್ರ ಮಂದಿರಗಳು, ಡಿಸ್ಕೋ ಥೆಕ್ಕುಗಳಲ್ಲಿ, ಜನ ಸ್ಥಾನಗಳ ಆಕರ್ಷಣೆಯಲ್ಲಿ, ಹಾಗು ನೈಟ್ ಕ್ಲಬ್ಗಳಲ್ಲಿ, ನಾಟಕೀಯ ಪರಿಣಾಮವನ್ನು ಬೀರಲು ಬಳಸಲಾಗುತ್ತದೆ. ಹೆಚ್ಚಿನ ಕೃತಕ ಮಂಜಿನ ಯಂತ್ರಗಳಲ್ಲಿ ಮಂಜು ಹೊಗೆಯ ಮಾದರಿ ಮೇಲಕ್ಕೆರುತ್ತದೆ, ಇದಕ್ಕೆ ಭಿನ್ನವಾಗಿ ಡ್ರೈ ಐಸ್‌ನ ಮಂಜು ನೆಲದ ಮೇಲೆ ಸುಳಿದಾಡುತ್ತದೆ.[೧೪] ದಟ್ಟ ಮಂಜಿನ ಪರಿಣಾಮಗಳು ಅಗತ್ಯವಿರುವ ಚಿತ್ರ ನಿರ್ಮಾಣಗಳಲ್ಲಿ ಡ್ರೈ ಐಸ್ ಬಹಳ ಸಹಕಾರಿಯಾಗಿದೆ.[೧೮]
ಇದನ್ನು ಸಾಂಧರ್ಬಿಕವಾಗಿ ಸಣ್ಣ ಗಂಟುಗಳನ್ನು ಹೆಪ್ಪುಗಟ್ಟಿಸಿ ಅದನ್ನು ತೆಗೆಯಲು ಬಳಸಲಾಗುತ್ತದೆ.[೧೯] ಆದಾಗ್ಯೂ, ದ್ರವರೂಪದ ಸಾರಜನಕವು ಈ ಕ್ರಿಯೆಯನ್ನು ಉತ್ತಮವಾಗಿ ನಿರ್ವಹಿಸುತ್ತದೆ, ಇದು ತುಂಬಾ ತಂಪಾಗಿರುವ ಕಾರಣ, ಈ ಕ್ರಿಯೆಗೆ ಬಹಳ ಕಡಿಮೆ ಸಮಯ ಹಾಗು ಕಡಿಮೆ ಒತ್ತಡದ ಅವಶ್ಯಕತೆಯಿರುತ್ತದೆ.[೨೦] ಆದಾಗ್ಯೂ, ಡ್ರೈ ಐಸ್‌ನ ಸಂಗ್ರಹಣೆಯಲ್ಲಿ ಕೆಲವು ಸಮಸ್ಯೆಗಳಿವೆ, ಏಕೆಂದರೆ, ಅಗತ್ಯ ಬಿದ್ದಾಗ ಇದನ್ನು ಸಂಪೀಡನಗೊಂಡ ಇಂಗಾಲದ ಡೈಆಕ್ಸೈಡ್ ಅನಿಲದಿಂದ ಉತ್ಪಾದಿಸಬಹುದು.[೨೦]
ಕೊಳಾಯಿಗಾರರು ಒಂದು ಪೈಪಿನ ಸುತ್ತ ಒಂದು ರಕ್ಷಣಾ ಹೊದಿಕೆಗೆ ಬಲ ನೀಡುವ ಒತ್ತಡಕ್ಕೊಳಗಾದ ದ್ರವದ ಸಾಧನವನ್ನು ಬಳಕೆ ಮಾಡುತ್ತಾರೆ; ರೂಪುಗೊಂಡ ಡ್ರೈ ಐಸ್, ನೀರಿನ ಘನೀಕರಣಕ್ಕೆ ಕಾರಣವಾಗುವುದರ ಜೊತೆಗೆ ಒಂದು ಐಸ್ ಪ್ಲಗ್‌ನ್ನು ರೂಪಿಸುತ್ತದೆ. ಇದು ಅವರಿಗೆ ಮುಖ್ಯವಾದ ನೀರಿನ ಕೊಳಾಯಿಯನ್ನು ನಿಲ್ಲಿಸದೆ ರಿಪೇರಿ ಮಾಡಲು ಸಾಧ್ಯವಾಗುತ್ತದೆ. ಈ ವಿಧಾನವನ್ನು 4 ಇಂಚಿನವರೆಗೂ (100 ಮಿಮೀ) ವ್ಯಾಸವನ್ನು ಹೊಂದಿರುವ ಪೈಪುಗಳಿಗೆ ಬಳಕೆ ಮಾಡಬಹುದಾಗಿದೆ.[೧೧]
ಡ್ರೈ ಐಸನ್ನು ಸೊಳ್ಳೆಗಳನ್ನು ಹಾಗು ಇತರ ಕ್ರಿಮಿಗಳನ್ನು ತಡೆಯುವ ಆಕರ್ಷಕ ಪದಾರ್ಥವಾಗಿಯೂ ಸಹ ಬಳಸಬಹುದಾಗಿದೆ, ಏಕೆಂದರೆ ಇವುಗಳು ಇಂಗಾಲದ ಡೈಆಕ್ಸೈಡ್ ಎಡೆಗೆ ಆಕರ್ಷಣೆಯನ್ನು ಹೊಂದಿರುತ್ತವೆ.[೨೧]
ಕಂಪ್ಯೂಟರ್ ಭಾಗಗಳನ್ನು ತಂಪುಗೊಳಿಸುವ ಒಂದು ಪರ್ಯಾಯ ವಿಧಾನವೆಂದರೆ ಡ್ರೈ ಐಸ್‌ನ ಬಳಕೆ. ಈ ಉದ್ದೇಶವನ್ನು ಹೆಚ್ಚಿನ ಸಾಂಪ್ರದಾಯಿಕ ಮಾದರಿಗಳಾದ ಫ್ಯಾನ್ ನ ಬಳಕೆ, ಶಾಖವನ್ನು ವರ್ಗಾಯಿಸುವ ದ್ರವಗಳು, ದ್ರವರೂಪದ ಸಾರಜನಕ, ಅಥವಾ ಶೈತ್ಯೀಕರಣದ ಘಟ್ಟ ಬದಲಾವಣೆಗಳು ಮರೆಮಾಡಿವೆ.
ಕೈಗಾರಿಕಾ ಬಳಕೆ
[ಬದಲಾಯಿಸಿ]ಡ್ರೈ ಐಸನ್ನು ಆಸ್ಫಾಲ್ಟ್ ಹಾಕಿದ ನೆಲದ ಟೈಲ್ಸ್‌ಗಳನ್ನು ಸಡಿಲ ಮಾಡಲು ಅಥವಾ ಕಾರಿನ ಗಡಸುತನವನ್ನು ನಿಶಬ್ದೀಕರಣಗೊಳಿಸುವ ಸಾಮರ್ಥ್ಯವನ್ನು ಪಡೆದಿದೆ,[೨೨] ಅಲ್ಲದೆ ಕವಾಟವಿಲ್ಲದ ಪೈಪುಗಳಲ್ಲಿ ಘನೀಕರಣಗೊಂಡ ನೀರಿನ ಸಮೇತ ರಿಪೇರಿ ಮಾಡಲು ಸಾಧ್ಯವಾಗಿಸುತ್ತದೆ.[೨೩]
ಡ್ರೈ ಐಸ್‌ನ ಅತ್ಯಂತ ದೊಡ್ಡ ಯಾಂತ್ರಿಕ ಬಳಕೆಯೆಂದರೆ ಅದರ ಸಿಡಿಗಾಳಿಯಿಂದ ಶುದ್ಧೀಕರಣ. ಡ್ರೈ ಐಸ್‌ನ ಗೋಲಿಗಳನ್ನು ಸಂಪೀಡನಗೊಂಡ ಅನಿಲದ ಜೊತೆಗೆ ಒಂದು ನಳಿಕೆಯ ಮೂಲಕ ಹೊಡೆಯಲಾಗುತ್ತದೆ. ಇದು ಕೈಗಾರಿಕೆಗಳಲ್ಲಿ ಬಳಸಲಾಗುವ ಉಪಕರಣಗಳಲ್ಲಿರುವ ಶೇಷಗಳನ್ನು ತೆಗೆಯುತ್ತದೆ. ಶೇಷಗಳನ್ನು ತೆಗೆಯಲಾದ ವಸ್ತುಗಳಿಗೆ ಉದಾಹರಣೆಯೆಂದರೆ ಇಂಕು, ಅಂಟು, ಎಣ್ಣೆ, ಪೈಂಟು, ಅಚ್ಚು ಮತ್ತು ರಬ್ಬರ್. ಡ್ರೈ ಐಸ್‌ನ ಸಿಡಿಗಾಳಿಯು, ಮರಳು ಕ್ಷೇಪಕ, ಹಬೆಕ್ಷೇಪಕ, ನೀರಿನ ಕ್ಷೇಪಕ ಅಥವಾ ದ್ರಾವಕ ಕ್ಷೇಪಕವನ್ನು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಡ್ರೈ ಐಸ್‌ನ ಸಿಡಿತದಿಂದ ಪರಿಸರದ ಮೇಲಾಗುವ ಪ್ರಾಥಮಿಕ ಶೇಷದಲ್ಲಿ ಉತ್ಪತನವಾದ CO2 ಸೇರಿದೆ. ಇತರ ಸಿಡಿತದ ವಿಧಾನದಿಂದ ಹೊರಬೀಳುವ ಶೇಷಗಳು ಅಹಿತಕರವಾಗಿರುವುದರಿಂದ, ಈ ವಿಧಾನವು ಪ್ರಯೋಜನಕಾರಿಯಾಗಿದೆ.[೨೪]
ಸಂಗ್ರಾಹಕ ಟ್ಯಾಂಕ್‌ಗಳಿಂದ ಹೊರಬೀಳುವ ದಾಹ್ಯ ಅನಿಲ ರೂಪವನ್ನು ಅನಿಲ ರಹಿತವನ್ನಾಗಿ ಮಾಡುವಲ್ಲಿ ಡ್ರೈ ಐಸ್ ಸಹಕಾರಿಯಾಗಿದೆ. ಖಾಲಿಯಾದ ಹಾಗು ರಂಧ್ರವುಳ್ಳ ಟ್ಯಾಂಕ್‌ನೊಳಗಿರುವ ಡ್ರೈ ಐಸ್‌ನ ಗೋಲಿಗಳ ಉತ್ಪತನವು CO2ನ ಹೊರಹರಿವಿಗೆ ಕಾರಣವಾಗುತ್ತದೆ. ಇದು ತನ್ನ ಜೊತೆಗೆ ದಾಹ್ಯ ಅನಿಲವನ್ನು ಹೊಂದಿರುತ್ತದೆ.[೨೫]
ವೈಜ್ಞಾನಿಕ ಬಳಕೆ
[ಬದಲಾಯಿಸಿ]ಪ್ರಯೋಗಾಲಯಗಳಲ್ಲಿ, ದ್ರವರೂಪದ ಡ್ರೈ ಐಸ್ ಒಂದು ಕಾರ್ಬನಿಕ ದ್ರಾವಕವಾಗಿರುತ್ತದೆ. ಒಂದು ತಂಪಾದ ರಾಸಾಯನಿಕ ಕ್ರಿಯೆಗಳಘನೀಕಾರಕ ಮಿಶ್ರಣವಾಗಿದೆ ಹಾಗು ಆವರ್ತಕ ಬಾಷ್ಪೀಕರಣ ಕೋಶಗಳಲ್ಲಿ ದ್ರಾವಕಗಳನ್ನು ಸಂಘನಿಸುತ್ತವೆ.[೨೬]
ಮೋಡವನ್ನು ಬದಲಾಯಿಸುವ ಅವಕ್ಷೇಪನ ಪ್ರಕ್ರಿಯೆಯನ್ನು ಸಹ ಡ್ರೈ ಐಸ್‌ನ ಬಳಕೆಯಿಂದ ಮಾಡಬಹುದಾಗಿದೆ.[೨೭] ಇದನ್ನು ಕಳೆದ 1950ರಲ್ಲಿ ಹಾಗು 60ರ ಆರಂಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅನೇಕ ಪ್ರಯೋಗಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಇದನ್ನು ನಂತರ ಸಿಲ್ವರ್ ಅಯೋಡೈಡ್ ವಿಧಾನಕ್ಕೆ ಮಾರ್ಪಡಿಸಲಾಯಿತು.[೨೭] ಅದೇನೇ ಇದ್ದರೂ, ಡ್ರೈ ಐಸ್ ತುಲನಾತ್ಮಕವಾಗಿ ಅಗ್ಗವಾಗಿರುವುದರ ಜೊತೆಗೆ ಸಂಪೂರ್ಣವಾಗಿ ವಿಷರಹಿತವಾಗಿರುವುದರಿಂದ ಪ್ರಯೋಜನಕಾರಿಯಾಗಿದೆ.[೨೭] ಆದರೂ ಇದರ ಪ್ರಮುಖ ಅನನುಕೂಲವೆಂದರೆ, ಯಾವುದೇ ಕೃತಕ ಮೋಡ ಬಿತ್ತನೆಯ ಮಾಡಲಾಗುವಂತಹ ಅತಿಶೀತಲ ಪ್ರದೇಶಕ್ಕೆ ನೇರವಾಗಿ ವಿತರಣೆ ಮಾಡಬೇಕಾಗುತ್ತದೆ.[೨೭]
ಡ್ರೈ ಐಸ್ ಬಾಂಬುಗಳು
[ಬದಲಾಯಿಸಿ]ಡ್ರೈ ಐಸ್ ಬಾಂಬುಗಳಲ್ಲಿ ಡ್ರೈ ಐಸ್ ಒಂದು ಘಟಕಾಂಶವಾಗಿ ಕೆಲಸ ಮಾಡುತ್ತದೆ. ಡ್ರೈ ಐಸ್ ಬಾಂಬ್ ಎಂದರೆ, ಡ್ರೈ ಐಸ್ ಹಾಗು ನೀರು ತುಂಬಿದ ಧಾರಕದಿಂದ, ಉದಾಹರಣೆಗೆ ಪ್ಲ್ಯಾಸ್ಟಿಕ್ ಬಾಟಲ್ನಿಂದ ನಿರ್ಮಾಣಗೊಂಡ ಒಂದು ಬಾಂಬ್-ಮಾದರಿಯ ಸಾಧನ. ಡ್ರೈ ಐಸ್ ಉತ್ಪತನಗೊಳ್ಳುತ್ತಿದ್ದಂತೆ ಒತ್ತಡವು ಹೆಚ್ಚಾಗಿ, ಸಾಮಾನ್ಯವಾಗಿ ಬಾಟಲಿನ ಸ್ಫೋಟಕ್ಕೆ ಕಾರಣವಾಗುತ್ತದೆ. ಇದರ ಸರಳತೆಯ ಕಾರಣದಿಂದಾಗಿ, ಡ್ರೈ ಐಸ್ ಬಾಂಬ್ ಒಂದು ಜನಪ್ರಿಯ ವಿನೋದದ ಚಟುವಟಿಕೆಯಾಗಿದೆ. ಆದಾಗ್ಯೂ, ಯಾವುದೇ ಇತರ ಸ್ಫೋಟಕದಂತೆ ಇದೂ ಸಹ ಊಹನಾತೀತವಾಗಿರುವುದರ ಜೊತೆಗೆ ಅಪಾಯಕಾರಿಯಾಗಿರುತ್ತದೆ. ಕ್ಯಾಲಿಫೋರ್ನಿಯಾ ಕಾನೂನು ವಿನಾಶಕಾರಿ ಸಾಧನವನ್ನು ಆಯುಧದ ಒಂದು ಮಾದರಿ ಎಂದು ವಿವರಿಸುತ್ತದೆ. ಇದರಲ್ಲಿ "ಡ್ರೈ ಐಸನ್ನು(CO2) ಒಳಗೊಂಡ ಯಾವುದೇ ಸೀಲುಳ್ಳ ಸಾಧನ ಅಥವಾ ಒಂದು ರಾಸಾಯನಿಕ ಪ್ರಕ್ರಿಯೆಯ ಮೂಲಕ ಒಂದು ಸ್ಫೋಟವನ್ನು ಮಾಡುವ ಉದ್ದೇಶದಿಂದ ಒಟ್ಟುಗೂಡಿಸಲಾದಂತಹ ರಾಸಾಯನಿಕವಾಗಿ-ಪ್ರತಿಕ್ರಿಯಾತ್ಮಕ ಪದಾರ್ಥಗಳನ್ನು ಒಳಗೊಂಡಿದೆ."[೨೮] ಆದಾಗ್ಯೂ, ಡ್ರೈ ಐಸ್ ಬಾಂಬುಗಳು ರಾಸಾಯನಿಕ ಪ್ರಕ್ರಿಯೆಯ ಮೂಲಕವಲ್ಲದೆ ಒಂದು ಸ್ಥಿತಿ ಬದಲಾವಣೆಯ ಮೂಲಕ ಕಾರ್ಯ ನಿರ್ವಹಿಸುತ್ತವೆ. ಒಂದು ಗೊತ್ತಾದ ದ್ರವ್ಯರಾಶಿಯ ಡ್ರೈ ಐಸ್‌ನ ದ್ರವೀಕರಣದಿಂದ ಉತ್ಪತ್ತಿಯಾದ ಇಂಗಾಲದ ಡೈಆಕ್ಸೈಡ್ ಅನಿಲದ ಸರಾಸರಿ ಮೊತ್ತವನ್ನು ಐಡಿಯಲ್ ಗಾಸ್ ಲಾ(ಆದರ್ಶ ಅನಿಲ ನಿಯಮ) ಬಳಸಿ ಕಂಡುಹಿಡಿಯಬಹುದಾಗಿದೆ.
ಈ ಬಾಂಬ್ ಮಿಥ್‌ಬಸ್ಟರ್ಸ್ ನ 57ನೇ ಸಂಚಿಕೆಯಾದ ಮೆನ್ಟೋಸ್ ಮ್ತತು ಸೋಡಾದಲ್ಲಿ ಚಿತ್ರಿತವಾಗಿದೆ, ಇದನ್ನು ಆಗಸ್ಟ್ 9, 2006ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.[೨೯] ಇದು ಟೈಮ್ ವಾರ್ಪ್ನ ಸಂಚಿಕೆಯೊಂದರಲ್ಲೂ ಸಹ ಪ್ರದರ್ಶನಗೊಂಡಿದೆ.
ಸುರಕ್ಷತೆ
[ಬದಲಾಯಿಸಿ]ಡ್ರೈ ಐಸಿಗೆ ದೀರ್ಘಕಾಲಿಕವಾಗಿ ಒಡ್ಡಿಕೊಂಡರೆ, ಇದು ಹಿಮಗಡಿತದ ಮೂಲಕ ತೀವ್ರತರವಾದ ಚರ್ಮದ ಹಾನಿಗೆ ಕಾರಣವಾಗುತ್ತದೆ. ಜೊತೆಗೆ ಉತ್ಪತ್ತಿಯಾದ ಮಂಜು ಸಹ ಒಂದು ಸುರಕ್ಷಿತ ರೀತಿಯಲ್ಲಿ ಸಂಪರ್ಕದಿಂದ ಹೊರಬರುವ ಎಲ್ಲಾ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುತ್ತದೆ. ದೊಡ್ಡ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನಿಲದ ಜೊತೆಗೆ ಉತ್ಪತನವಾಗುವುದರಿಂದ ಮತ್ತು ಇದು ಆಮ್ಲಜನಕವನ್ನು ಉಳ್ಳ ಅನಿಲವನ್ನು ಸ್ಥಳಾಂತರ ಮಾಡುವುದರ ಜೊತೆಗೆ ಶ್ವಾಸ ಬಂಧನದ ಅಪಾಯವನ್ನು ಉಂಟುಮಾಡಬಹುದಾದ್ದರಿಂದ, ಡ್ರೈ ಐಸನ್ನು ಕೇವಲ ಒಂದು ಉತ್ತಮ-ಗಾಳಿ ಬೆಳಕಿನ ಪರಿಸರದಲ್ಲಿ ಮುಕ್ತವಾದ ಗಾಳಿಗೆ ತೆರೆದಿಡಬೇಕು.[೨೨] ಈ ಕಾರಣದಿಂದಾಗಿ, ಪ್ರಾಯೋಗಿಕ ಸುರಕ್ಷತೆಯ ಸಂದರ್ಭದಲ್ಲಿ ಡ್ರೈ ಐಸ್‌ಗೆ S-ಫ್ರೇಸ್ S9 ನೀಡಲಾಗಿದೆ. ಕೈಗಾರಿಕೆಯಲ್ಲಿ ಬಳಕೆಯಾಗುವ ಡ್ರೈ ಐಸ್ ಕಲ್ಮಶಕಾರಕಗಳನ್ನು ಒಳಗೊಳ್ಳಬಹುದು. ಇದರಿಂದಾಗಿ ಆಹಾರ ಪದಾರ್ಥಗಳ ಜೊತೆ ನೇರ ಸಂಪರ್ಕಕ್ಕೆ ಬಂದಾಗ ಇದರ ಬಳಕೆಯೂ ಅಸುರಕ್ಷಿತವೆನಿಸುತ್ತದೆ.[೩೦]
ಡ್ರೈ ಐಸ್ ಒಂದು ಅಪಾಯಕಾರಿ ಪದಾರ್ಥವೆಂದು ಯುರೋಪಿಯನ್ ಒಕ್ಕೂಟ ವಿಂಗಡಣೆ ಮಾಡಿಲ್ಲದಿದ್ದರೂ[೩೧] ಅಥವಾ ಹಡಗಿನಲ್ಲಿ ಅಥವಾ ವಿಮಾನದಲ್ಲಿ ಸಾಗಾಣಿಕೆ ಮಾಡುವಾಗ ಭೂಮಿಯ ಮೇಲಿನ ಸಂಚಾರಕ್ಕೆ ಒಂದು ಅಪಾಯಕಾರಿ ವಸ್ತುವೆಂದು DOT ನಿರ್ದೆಶಿಸಿಲ್ಲದಿದ್ದರೂ, ಇದನ್ನು ಒಂದು ಅಪಾಯಕಾರಿ ಸರಕೆಂದು ನಿಯಂತ್ರಣಗೊಳಿಸಲಾಗುತ್ತದೆ ಹಾಗು IATA ಪ್ಯಾಕಿಂಗ್ ಸೂಚನೆ 904 (IATA PI 904) ಇದಕ್ಕೆ ವಿಶೇಷವಾಗಿ ಗುರುತುಪಟ್ಟಿ ನೀಡಬೇಕೆಂದು ಹೇಳಿದೆ. ಇದರಲ್ಲಿ ಒಂದು ಡೈಮಂಡ್ ಆಕಾರದ ಕಪ್ಪು ಹಾಗು ಬಿಳುಪಿನ ಗುರುತುಪಟ್ಟಿ, UN 1845 ಸೇರಿದೆ. ಇದಲ್ಲದೆ, ಸಾಕಾಷ್ಟು ಗಾಳಿ ಬೆಳಕು ಇರುವ ಕಡೆ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು. ಈ ರೀತಿಯಾಗಿ ಒತ್ತಡದಿಂದಾಗಿ ಪ್ಯಾಕೆಜಿಂಗ್ ನಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಬೇಕು.[೩೨] ಅಮೆರಿಕ ಸಂಯುಕ್ತ ಸಂಸ್ಥಾನದ ದಿ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೆಶನ್ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ 2 ಕೆಜಿಯಷ್ಟು ಡ್ರೈ ಐಸನ್ನು ತಮ್ಮ ಕೈಚೀಲದಲ್ಲಿ ಒಯ್ಯಲು ಅನುಮತಿ ನೀಡುತ್ತದೆ ಹಾಗು ಬೇಗನೆ ಹಾಳಾಗುವಂತಹ ಶೈತ್ಯೀಕರಣದ ಅಗತ್ಯವಿರುವ ವಸ್ತುಗಳನ್ನು ಹಗುರ ಕೈಚೀಲದಲ್ಲಿ 2.3 ಕೆಜಿಯಷ್ಟು ಒಯ್ಯಲು ಅನುಮತಿ ನೀಡುತ್ತದೆ.[೩೩]
ಮಂಗಳ ಗ್ರಹದ ಮೇಲಿನ ಸಂಭವ
[ಬದಲಾಯಿಸಿ]ಕಳೆದ 1966ರ ಮ್ಯಾರಿನರ್ 4 ಗಗನನೌಕೆಯನ್ನು ಅನುಸರಿಸಿ ವಿಜ್ಞಾನಿಗಳು, ಮಂಗಳ ಗ್ರಹದ ಧ್ರುವಗಳು ಸಂಪೂರ್ಣವಾಗಿ ಡ್ರೈ ಐಸ್‌ನಿಂದ ರಚಿತವಾಗಿದೆಯೆಂಬ ತೀರ್ಮಾನಕ್ಕೆ ಬಂದರು.[೩೪] ಆದಾಗ್ಯೂ, ಕಳೆದ 2003ರಲ್ಲಿ ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಮಂಗಳ ಗ್ರಹದ ಧ್ರುವಗಳು ಸಂಪೂರ್ಣವಾಗಿ ನೀರಿನಿದ ರಚಿತವಾಗಿದೆ ಹಾಗು ಡ್ರೈ ಐಸ್ ಕೇವಲ ಧ್ರುವದ ಮೇಲ್ಪದರದಿಂದ ಮುಚ್ಚಲ್ಪಟ್ಟಿದೆ ಎಂಬುದನ್ನು ಕಂಡು ಹಿಡಿದಿದ್ದಾರೆ.[೩೪][೩೫] ಅಂತೋಣಿ ಕೋಲಪ್ರೇಟೆಯಂತಹ ವಿಜ್ಞಾನಿಗಳು ಮಂಗಳ ಗ್ರಹದ ಧ್ರುವ ಪ್ರದೇಶಗಳಲ್ಲಿ ಸಂಭವಿಸುವ ಸಂಗತಿಯನ್ನು ಡ್ರೈ ಐಸ್ ಸ್ಟಾರ್ಮ್(ಚಂಡಮಾರುತ) ಎಂಬುದಾಗಿ ಕಂಡು ಹಿಡಿದಿದ್ದಾರೆ. ಕೋಲಪ್ರೇಟೆ ಮಂಗಳಗ್ರಹದ ಡ್ರೈ ಐಸ್ ಸ್ಟಾರ್ಮ್ಅನ್ನು ಭೂಮಿಯ ಚಂಡಮಾರುತ ಮಳೆಗೆ ಹೋಲಿಸಿದ್ದಾರೆ, ಮೋಡದಲ್ಲಿ ನೀರಿನ ಸ್ಥಾನವನ್ನು ಸ್ಫಟಿಕೀಯ CO2 ಆಕ್ರಮಿಸುತ್ತದೆ.[೩೬]
ಆಕರಗಳು
[ಬದಲಾಯಿಸಿ]- ↑ ೧.೦ ೧.೧ Yaws 2001, p. 125
- ↑ Häring 2008, p. 200
- ↑ Yaws 2001, p. 124
- ↑ Khanna & Kapila 2008, p. 161
- ↑ Khanna & Kapila 2008, p. 163
- ↑ ೬.೦ ೬.೧ Duane 1952
- ↑ Charles Thilorier; Thilorier, M. (1834). "Solidification de l'Acide carbonique". Comptes rendus (in French). 1: 194. doi:10.1086/349402.
{{cite journal}}
: CS1 maint: unrecognized language (link) - ↑ ೮.೦ ೮.೧ Killeffer, D.H. (October 1930). "The Growing Industry-Dry-Ice". Industrial & Engineering Chemistry. 22. Industrial & Engineering Chemistry: 1087. doi:10.1021/ie50250a022.
- ↑ The Trade-mark Reporter. United States Trademark Association. 1930.
- ↑ "Case details for Trade Mark 516211". UK Intellectual Property Office. Retrieved 2009-07-25.
- ↑ ೧೧.೦ ೧೧.೧ Treloar 2003, p. 175
- ↑ "What is Dry Ice?". Continental Carbonic Products, Inc. Archived from the original on 2009-07-27. Retrieved 2009-07-26.
- ↑ ೧೩.೦ ೧೩.೧ "Carbon Dioxide (CO2) Properties, Uses, Applications: CO2 Gas and Liquid Carbon Dioxide". Universal Industrial Gases, Inc. Retrieved 2009-07-26.
- ↑ ೧೪.೦ ೧೪.೧ "How does dry ice work?". HowStuffWorks. Retrieved 2009-07-26.
- ↑ Bocco Diana. "What are Some Uses for Dry Ice?". WiseGeek. Retrieved 2009-07-26..
{{cite web}}
: Check date values in:|accessdate=
(help) - ↑ ೧೬.೦ ೧೬.೧ "Cool Uses for Dry Ice". Airgas.com. Archived from the original on 2010-12-01. Retrieved 2009-07-25.
- ↑ Blumenthal, Heston (2006-10-29). "How to make the best treacle tart and ice cream in the world". London: The Sunday Times. Archived from the original on 2011-06-29. Retrieved 2007-06-12.
- ↑ McCarthy 1992
- ↑ Lyell A. (1966). "Management of warts". British medical journal. 2 (5529): 1576–9. doi:10.1136/bmj.2.5529.1576. PMC 1944935. PMID 5926267.
- ↑ ೨೦.೦ ೨೦.೧ Goroll & Mulley 2009, p. 1317
- ↑ Reisen WK, Boyce K, Cummings RC, Delgado O, Gutierrez A, Meyer RP, Scott TW. (1999). "Comparative effectiveness of three adult mosquito sampling methods in habitats representative of four different biomes of California". J Am Mosq Control Assoc. 15 (1): 24–31. PMID 10342265.
{{cite journal}}
: CS1 maint: multiple names: authors list (link) - ↑ ೨೨.೦ ೨೨.೧ "Dry ice pops off Asphalt Tile". Popular Mechanics. 115 (2): 169. 1961.
{{cite journal}}
: Unknown parameter|month=
ignored (help) - ↑ "Dry Ice as a Plumbing Aid". Popular Science. 177 (1): 159. 1960.
{{cite journal}}
: Unknown parameter|month=
ignored (help) - ↑ Wolcott, John (January, 2008). "Ice-blasting firm offers a cool way to clean up". The Daily Herald. Archived from the original on 2008-01-09. Retrieved 2008-01-20.
{{cite news}}
: Check date values in:|date=
(help); Italic or bold markup not allowed in:|publisher=
(help) - ↑ "ಆರ್ಕೈವ್ ನಕಲು". Archived from the original on 2015-07-18. Retrieved 2010-07-01.
- ↑ Housecroft 2001, p. 410
- ↑ ೨೭.೦ ೨೭.೧ ೨೭.೨ ೨೭.೩ Keyes 2006, p. 83
- ↑ "CA Codes (pen:12301-12316)". Archived from the original on 2009-05-13. Retrieved 2010-07-01.
- ↑ "Mythbusters episode 57". Archived from the original on 2009-06-27. Retrieved 2010-07-01.
- ↑ Nelson, Lewis (2000). "Carbon Dioxide Poisoning". Emergency Medicine. Archived from the original on 2007-07-18. Retrieved 2009-07-28.
- ↑ "Regulation (EC) No 1272/2008 of the European Parliament". Retrieved 2009-07-31.
- ↑ Requirements for Shipping Dry Ice [IATA PI 904]. Environmental Resource Center. 24 May 2006. Retrieved 2009-07-31.
- ↑ "Hazardous Materials Information for Passengers" (PDF). Archived from the original (PDF) on 2009-05-10. Retrieved 2009-07-26. available on the FAA website: http://www.faa.gov/
- ↑ ೩೪.೦ ೩೪.೧ Mars Poles Covered by Water Ice, Research Shows. National Geographic. 13 February 2003. Retrieved 2009-07-26.
- ↑ Byrne, S. (2003-02-14). "A Sublimation Model for Martian South Polar Ice Features". Science. 299 (5609). American Association for the Advancement of Science: 1051. doi:10.1126/science.1080148. Retrieved 2009-07-30.
- ↑ Dry Ice Storms May Pelt Martian Poles, Experts Say. National Geographic. 19 December 2005. Retrieved 2009-07-26.
ಗ್ರಂಥಸೂಚಿ
[ಬದಲಾಯಿಸಿ]- Yaws, Carl (2001). Matheson gas data book (7th ed.). McGraw-Hill Professional. p. 982. ISBN 9780071358545. Retrieved 2009-07-27.
- Häring, Heinz-Wolfgang (2008). Industrial Gases Processing. Translated by Christine Ahner. Wiley-VCH. ISBN 9783527316854. Retrieved 2009-07-31.
- Treloar, Roy (2003). Plumbing Encyclopaedia (3rd ed.). Wiley-Blackwell. p. 528. ISBN 9781405106139. Retrieved 2009-07-31.
- Housecroft, Catherine; Sharpe, Alan G (2001). Inorganic Chemistry. Harlow: Prentice Hall. ISBN 0582310806. Retrieved 2009-07-31.
- Mitra, Somenath (2003). Sample preparation techniques in analytical chemistry. Wiley-IEEE. ISBN 9780471328452. Retrieved 2009-07-31.
- McCarthy, Robert E. (1992). Secrets of Hollywood special effects. Boston: Focal Press. ISBN 0-240-80108-3.
- Duane, H. D. Roller; Thilorier, M. (1952). "Thilyorier and the First Solidification of a "Permanent" Gas (1835)". Isis. 43 (2): 109–113. doi:10.1086/349402.
- Khanna, S. K.; Kapila, Dr. B. (2008). Comprehensive Chemistry X. Laxmi Publications. ISBN 9788170085966. Retrieved 2009-07-31.
- Goroll, Allan H; Mulley, Albert G (2009). Primary Care Medicine: Office Evaluation and Management of the Adult Patient. Lippincott Williams & Wilkins. ISBN 9780781775137.
- Keyes, Conrad G (2006). Guidelines for cloud seeding to augment precipitation. American Society of Civil Engineers. ASCE Publications. ISBN 9780784408193.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಟೆಂಪ್ಲೇಟು:Co2 ಸೇಫ್ಟಿ ಇನ್ಫಾರ್ಮೇಶನ್ ಆನ್ ಇನ್ಸ್ಪೆಕ್ಟಪೀಡಿಯ Archived 2009-09-28 ವೇಬ್ಯಾಕ್ ಮೆಷಿನ್ ನಲ್ಲಿ.
- How does dry ice work at HowStuffWorks
- ಡ್ರೈ ಐಸ್ ಇನ್ಫೋ
- ಸ್ಟಿರ್ಲಿಂಗ್ ಇಂಜಿನ್ ರನ್ನಿಂಗ್ ಆನ್ ಡ್ರೈ ಐಸ್ Archived 2009-08-06 ವೇಬ್ಯಾಕ್ ಮೆಷಿನ್ ನಲ್ಲಿ.
- Dry ice and metal coin
- Pages using the JsonConfig extension
- Harv and Sfn no-target errors
- CS1 maint: unrecognized language
- CS1 errors: dates
- CS1 maint: multiple names: authors list
- CS1 errors: unsupported parameter
- CS1 errors: markup
- Wikipedia introduction cleanup from September 2009
- All pages needing cleanup
- Articles covered by WikiProject Wikify from September 2009
- All articles covered by WikiProject Wikify
- Articles with hatnote templates targeting a nonexistent page
- Articles with unsourced statements from July 2009
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಇಂಗಾಲದ ಡೈಆಕ್ಸೈಡ್
- ತಂಪುಕಾರಿಗಳು
- ಶೀತಕಗಳು