ಮೋಹನ್ ಲಾಲ್‌

ದಕ್ಷಿಣ ಭಾರತೀಯ ನಟ ಮತ್ತು ನಿರ್ಮಾಪಕ

ಮೋಹನ್ ಲಾಲ್ (ಮಲಯಾಳಂ:മോഹന്‍ലാല്‍) ಎಂಬ ಏಕ ಹೆಸರಿನಿಂದ ಕರೆಯಲ್ಪಡುವ ಮೋಹನ್ ಲಾಲ್ ವಿಶ್ವನಾಥನ್ ನಾಯರ್ (೧೯೬೦ರ ಮೇ ೨೧ರಂದು ಜನಿಸಿದರು)[] ಒಬ್ಬ ಭಾರತೀಯ ಚಲನಚಿತ್ರ ನಟ ಮತ್ತು ನಿರ್ಮಾಪಕರಾಗಿದ್ದಾರೆ. ಅವರು ಮುಖ್ಯವಾಗಿ ಮಲಯಾಳಂ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು - ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಜ್ಯೂರಿ ಪ್ರಶಸ್ತಿ ಮತ್ತು ಒಂದು ಅತ್ಯುತ್ತಮ ಚಿತ್ರಕ್ಕಾಗಿ ಪ್ರಶಸ್ತಿ (ನಿರ್ಮಾಪಕರಾಗಿ) ಮೊದಲಾದವನ್ನು ಪಡೆದಿದ್ದಾರೆ. ಕೇರಳದ ಯಾವುದೇ ನಟರಿಗಿಂತ ಹೆಚ್ಚು ಬಾರಿ ಅಂದರೆ ಆರು ಬಾರಿ ಅತ್ಯುತ್ತಮ ನಟ ಕೇರಳ ರಾಜ್ಯ ಪ್ರಶಸ್ತಿಯನ್ನು ಮೋಹನ್‌ಲಾಲ್‌ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ೨೦೦೧ರಲ್ಲಿ ಭಾರತ ಸರ್ಕಾರ ಮೋಹನ್‌ಲಾಲ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೨೦೦೯ರಲ್ಲಿ ಅವರು ಪ್ರಾದೇಶಿಕ ಸೈನ್ಯ(ಟೆರಿಟೋರಿಯಲ್ ಆರ್ಮಿ)ದಿಂದ ಲೆಫ್ಟೆನಂಟ್ ಕರ್ನಲ್‌ ಎಂಬ ಗೌರವ ಸ್ಥಾನವನ್ನು ಪಡೆದರು.[] ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಬ್ಬ ನಟನು ಗೌರವ ಸೈನ್ಯ ಸ್ಥಾನವನ್ನು ಪಡೆಯುವುದರ ಮೊದಲ ನಿದರ್ಶನವಾಗಿತ್ತು. ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಪುರಸ್ಕರಿಸಿತು.[]

ಮೋಹನ್ ಲಾಲ್
ಡಾ. ಮೋಹನ್ ಲಾಲ್
Born
ಮೋಹನ್ ಲಾಲ್ ವಿಶ್ವನಾಥನ್ ನಾಯರ್

ಮೇ ೨೧,೧೯೬೦
ಎಳಂತೂರ್, ಪಟ್ಟಣಂತಿಟ್ಟಾ ಜಿಲ್ಲೆ, ಕೇರಳ, ಭಾರತ

ಆರಂಭಿಕ ಜೀವನ (೧೯೬೦-೧೯೭೭)

ಬದಲಾಯಿಸಿ
  • ಮೋಹನ್ ಲಾಲ್ ಕೇರಳದ ಪತನಾಂತಿಟ್ಟದಲ್ಲಿ ಕೇರಳಾ ಸರ್ಕಾರದ ವಕೀಲ ಮತ್ತು ಅನಂತರ ಕಾನೂನು ಕಾರ್ಯದರ್ಶಿಯಾದ ವಿಶ್ವನಾಥನ್ ನಾಯರ್ ಹಾಗೂ ಗೃಹಿಣಿ ಶಾಂತಕುಮಾರಿ ದಂಪತಿಗೆ ಜನಿಸಿದರು. ತಂದೆ ಸರ್ಕಾರಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಲಾಲ್ ಮತ್ತು ಅವರ ಸಹೋದರರು ತ್ರಿವೆಂಡ್ರಮ್‌ನಲ್ಲಿ ಬೆಳೆದರು. ಅವರು ಮುದವಾನ್ಮುಕಲ್ LP ಶಾಲೆಯಲ್ಲಿ ಕಲಿತರು. ನಂತರ ತಿರುವನಂತಪುರಮ್‌ನ ಮಾಡೆಲ್ ಸ್ಕೂಲ್‌ಗೆ ಸೇರಿದರು.[] ಆರನೇ ತರಗತಿ ಯಲ್ಲಿ ಅವರು ಅವರ ಶಾಲೆಯಲ್ಲಿ ಅತ್ಯುತ್ತಮ ನಟರಾಗಿ ಆಯ್ಕೆಯಾದರು. ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ಹತ್ತನೇ ತರಗತಿಯವರಿಗೆ ನೀಡಲಾಗುತ್ತಿತ್ತು.[]
  • ಮೋಹನ್ ಲಾಲ್ ಅವರ ಸ್ನಾತಕ ಪದವಿಗಾಗಿ ತಿರುವನಂತಪುರಮ್‌‌ನ ಮಹಾತ್ಮ ಗಾಂಧಿ ಕಾಲೇಜ್‌ಗೆ ಸೇರಿದರು. ಅಲ್ಲಿಯೂ ಅವರು ಅವರ ನಟನೆಯನ್ನು ಮುಂದುವರಿಸಿದರು ಮತ್ತು ಹಲವಾರು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಕಾಲೇಜಿನಲ್ಲಿ ಅವರು ನಾಟಕ ಸಾಹಿತ್ಯ ಮತ್ತು ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಗುಂಪೊಂದನ್ನು ಸಂಧಿಸಿದರು; ಈ ಗುಂಪು ಅ���ರಿಗೆ ಮೊದಲ ಪ್ರಮುಖ ಪ್ರಗತಿಯನ್ನು ತಂದುಕೊಡುವಲ್ಲಿ ಕಾರಣಾರ್ಥಕವಾಗಿದೆ.[] ಪ್ರಿಯದರ್ಶನ್, ಎಂ.ಜಿ.ಶ್ರೀಕುಮಾರ್ ಮತ್ತು ಮಣಿಯನ್‌ಪಿಳ್ಳ ರಾಜು ಮೊದಲಾದ ಈ ಗುಂಪಿನ ಕೆಲವು ಸದಸ್ಯರು ಪ್ರಖ್ಯಾತ ಚಲನಚಿತ್ರ ನಿರ್ದೇಶಕರು, ನಟರು ಅಥವಾ ಗಾಯಕರಾದರು.

ಚಿತ್ರರಂಗದ ವೃತ್ತಿಜೀವನ

ಬದಲಾಯಿಸಿ

ಪ್ರಾರಂಭದ ವರ್ಷಗಳು (೧೯೭೮–೧೯೮೫)

ಬದಲಾಯಿಸಿ
  • ಮೋಹನ್ ಲಾಲ್‌ರ ಮೊದಲ ಚಲನಚಿತ್ರ ತಿರನೊಟ್ಟಮ್ (೧೯೭೮). ಈ ಚಿತ್ರವು ಸೆನ್ಸರ್ ಮಂಡಳಿಯಲ್ಲಿ ತೊಂದರೆಗೆ ಸಿಕ್ಕಿಕೊಂಡಿತು ಮತ್ತು ಅದು ಕೇವಲ ಒಂದು ಕೇಂದ್ರದಲ್ಲಿ ಮಾತ್ರ ಬಿಡುಗಡೆಗೊಂಡಿತು. ಮೋಹನ್‌ ಲಾಲ್ ಪ್ರಥಮ ಬಾರಿಗೆ ತಮ್ಮ ಛಾಪು ಮಾಡಿಸಿದ್ದು ೧೯೮೦ರಲ್ಲಿ. ಮೋಹನ್‌ಲಾಲ್‌ ಅವರು ಪ್ರತಿನಾಯಕನಾಗಿ ನಟಿಸಿದ ಮಳಿಯಾಂಪುರಕಲ್‌ನ ನಿರ್ಮಾಪಕ ಚಾಕೊ ಪುನ್ನೋಸ್ ನವೋದಯ ಅಪ್ಪಾಚನ್ ಅವರ ಮಂಜಿಲ್ ವಿರಿಂಜ ಪೂಕ್ಕಲ್ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತು.
  • ಅವರು ನಂತರದ ವರ್ಷಗಳಲ್ಲಿ ಕ್ರಮೇಣ ವಾಗಿ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಪಾತ್ರಗಳಲ್ಲಿ ಅಸಂಖ್ಯಾತ ಚಿತ್ರಗಳಲ್ಲಿ ನಟಿಸಿದರು. ೧೯೮೩ರಲ್ಲಿ ಅವರು ೨೫ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರು ಗಳಿಸಿದರು. ಪ್ರಸಿದ್ಧ ಕಥಾಲೇಖಕ ಎಂ.ಟಿ. ವಾಸುದೇವನ್ ನಾಯರ್ ಬರೆದ ಮತ್ತು ಐ.ವಿ. ಶಶಿ ನಿರ್ದೇಶಿಸಿದ ಮೋಸ ಹಾಗೂ ವಂಚನೆಯ ಕಥೆಯನ್ನುಳ್ಳ ಉಯರಂಗಲೀಲ್ ಈ ಅವಧಿಯ ಪ್ರಮುಖ ಚಿತ್ರವಾಗಿತ್ತು.
  • ಅವರು ನಂತರ ತಮ್ಮ ನಿರ್ದೇಶಕ-ಸ್ನೇಹಿತ ಮತ್ತು ಕಾಲೇಜು ಸಹಪಾಠಿ ಪ್ರಿಯದರ್ಶನ್‌‌ರ ಮೊದಲ ಚಿತ್ರ ಪೂಚಕ್ಕೊರು ಮೂಕುತಿ ಯಲ್ಲಿ ನಟಿಸುವ ಮೂಲಕ ತಮ್ಮ ನಟನೆಯನ್ನು ಹಾಸ್ಯ ಪಾತ್ರಗಳಲ್ಲಿಯೂ ಮುಂದುವರಿಸಿದರು.

ಸುವರ್ಣ ಯುಗ (೧೯೮೬-೧೯೯೫)

ಬದಲಾಯಿಸಿ
  • ಈ ಅವಧಿಯನ್ನು (೧೯೮೬-೧೯೯೫) ವ್ಯಾಪಕವಾಗಿ ಮಲಯಾಳಂ ಸಿನಿಮಾ ರಂಗದ ಸುವರ್ಣ ಯುಗವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ವಿವರಾತ್ಮಕ ಚಿತ್ರಕಥೆ, ಸ್ಪಷ್ಟ ನಿರೂಪಣೆ ಹಾಗೂ ಕಲೆ ಮತ್ತು ವಾಣಿಜ್ಯ ಚಿತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಹೊಚ್ಚ ಹೊಸ ಚಿಂತನೆಗಳನ್ನೊಳಗೊಂಡ ಚಿತ್ರಗಳು ಬಿಡುಗಡೆ ಕಂಡವು.[] ಪ್ರಸಿದ್ಧಿ ಹೆಚ್ಚುತ್ತಿದ್ದ ಕಿರಿಯ ಪ್ರತಿಭಾವಂತ ನಟ ಮೋಹನ್ ಲಾಲ್ ವ್ಯಾಪಕ ಭಾವನೆಗಳನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ನೀಡುವ ಪಾತ್ರಗಳನ್ನು ಪಡೆದರು. ಅಲ್ಲದೆ ಅವರು ಮಲಯಾಳಂ ಸಿನಿಮಾ ರಂಗದ ಹಲವಾರು ಉತ್ತಮ ನಿರ್ದೇಶಕರು ಮತ್ತು ಬರಹಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದರು.
  • ೧೯೮೬ನೇ ವರ್ಷವು ಅವರಿಗೆ ಹೆಚ್ಚು ಪ್ರಸಿದ್ಧಿಯನ್ನು ತಂದು ಕೊಟ್ಟ ವರ್ಷಗಳಲ್ಲಿ ಒಂದಾಗಿತ್ತು. ಸತ್ಯನ್ ಅಂತಿಕಾದ್‌ರ ಟಿ.ಪಿ. ಬಾಲಗೋಪಾಲನ್ ಎಂ.ಎ. ಚಿತ್ರವು ಅವರಿಗೆ ಅವರ ಮೊದಲ 'ಅತ್ಯುತ್ತಮ ನಟನೆಗಾಗಿ ಕೇರಳಾ ರಾಜ್ಯ ಪ್ರಶಸ್ತಿ'ಯನ್ನು ತಂದುಕೊಟ್ಟಿತು. ರಾಜವಿಂತೆ ಮಕಾನ್ ‌ನಲ್ಲಿ ಭೂಗತಲೋಕದ ನಾಯಕನ ಪಾತ್ರವು ಮೋಹನ್ ಲಾಲ್‌‌ರಿಗೆ ಮಲಯಾಳಂ ಸಿನಿಮಾ ರಂಗದಲ್ಲಿ ಸೂಪರ್‌ಸ್ಟಾರ್ ಆಗಿ ಪ್ರಸಿದ್ಧಿ ಹೊಂದುವಂತೆ ಮಾಡಿತು.
  • ರಾಜವಿಂತೆ ಮಕಾನ್ ಚಿತ್ರವು ೧೯೮೬ ರ ವರ್ಷದ ಗಲ್ಲಾಪೆಟ್ಟಿಗೆಯಲ್ಲಿ ಅಮೋಘ ಹೆಸರು ಗಳಿಸಿದ ಚಲನಚಿತ್ರವಾಗಿದೆ. ಅದೇ ವರ್ಷದಲ್ಲಿ ಅವರು ತಾಲವಟ್ಟಮ್ ಚಿತ್ರದಲ್ಲಿ ರಕ್ಷಣಾವಲಯ ನಿವಾಸಿಯಾಗಿ, ಸನ್ಮಾನಸ್ಸುಲ್ಲಾವರ್ಕು ಸಮಾಧಾನಮ್ ‌ನಲ್ಲಿ ಕಿರುಕುಳಕ್ಕೊಳಗಾದ ಮನೆ-ಮಾಲಿಕನಾಗಿ, ಎಂ. ಟಿ. ವಾಸುದೇವನ್ ನಾಯರ್‌ನ ಪಂಚಾಗ್ನಿ ಯಲ್ಲಿ ಪತ್ರಿಕೋದ್ಯಮಿಯಾಗಿ, ನಮುಕು ಪರ್ಕಾನ್ ಮುಂತಿರಿ ತೊಪ್ಪುಕ್ಕಾಲ್ ‌ನಲ್ಲಿ ಪ್ರೀತಿಸುತ್ತಿರುವ ಜಮೀನುದಾರನಾಗಿ ಮತ್ತು ಗಾಂಧಿ ನಗರ್ ಸೆಕೆಂಡ್ ಸ್ಟ್ರೀಟ್ ‌ನಲ್ಲಿ ಬಲವಂತವಾಗಿ ಗೂರ್ಖನಾಗುವ ನಿರುದ್ಯೋಗಿಯಾಗಿ ನಟಿಸಿದರು.
  • ಶ್ರೀನಿವಾಸನ್ ಮತ್ತು ಸಾಮಾಜಿಕವಾಗಿ ಪ್ರಸಿದ್ಧಿ ಗಳಿಸಿದ ವಿಡಂಬನ ಸಾಹಿತ್ಯಗಳನ್ನು ರಚಿಸುವಲ್ಲಿ ಹೆಸರು ಮಾಡಿದ ಸತ್ಯನ್ ಅಂತಿಕಾದ್‌ರ ಲೇಖಕ-ನಿರ್ದೇಶಕರೊಂದಿಗಿನ ಅವರ ಸಹಯೋಗವು ನಾಡೋಡಿಕ್ಕಟ್ಟು ಮತ್ತು ವಾರವೆಲ್ಪು ಚಿತ್ರಗಳಲ್ಲಿ ನಟಿಸುವಂತೆ ಮಾಡಿತು. ನಾಡೋಡಿಕ್ಕಟ್ಟು ಚಿತ್ರದಲ್ಲಿ ಅವರು ನಿರುದ್ಯೋಗಿಯಾಗಿ ನಟಿಸಿದರು. ಅದೇ ವಾರವೆಲ್ಪು ಚಿತ್ರದಲ್ಲಿ ಅವರು ದುರಾಶೆಯ ಸಂಬಂಧಿಕರಲ್ಲಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಪ್ರತಿಕೂಲ ಪರಿಸರವನ್ನು ಹೊಂದಿರುವ ರಾಜ್ಯಕ್ಕೆ ಗಲ್ಫ್‌ನಿಂದ ಹಿಂದಿರುಗುವ ವ್ಯಕ್ತಿಯಾಗಿ ನಟಿಸಿದರು.
  • ನಿರ್ದೇಶಕ ಪ್ರಿಯದರ್ಶನ್‌ನ ಸಂಗೀತಮಯ ಕಾಮಿಡಿ ಚಿತ್ರಗಳು, ಮುಖ್ಯವಾಗಿ ಚೈತ್ರಂ ಮತ್ತು ಕಿಲುಕ್ಕಮ್, ಅವರನ್ನು ಸಾಂಪ್ರದಾಯಿಕ ಭಾರತೀಯ ರೊಮ್ಯಾಂಟಿಕ್ ನಾಯಕನಾಗಿ ಮಾಡಿದವು ಹಾಗೂ ಹದಿಹರೆಯದ ಚಲನಚಿತ್ರ-ಪ್ರೇಮಿಗಳಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು.
  • ತೂವನ ತುಂಬಿಕಲ್ ಚಿತ್ರದಲ್ಲಿ ಅವರು ಇಬ್ಬರ ಪ್ರೀತಿಯಲ್ಲಿ ಸಿಕ್ಕಿ ಕಷ್ಟ ಪಡುವ ಪಾತ್ರಲ್ಲಿ ನಟಿಸಿದ್ದಾರೆ. ಈ ಚಿತ್ರವು ನಾಯಕನು ಮೊದಲ ಹುಡುಗಿಯಿಂದ ನಿರಾಕರಿಸಲ್ಪಟ್ಟ ನಂತರ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸುವಂತಹ ಭಾರತೀಯ ಚಲನಚಿತ್ರಗಳ ಅನೇಕ ರೂಢಮಾದರಿ ಗಳನ್ನು ಮುರಿಯಿತು. ಅಮೃತಂಗಮಯ ಚಿತ್ರವು ಕಾಲೇಜಿನಲ್ಲಿ ರ‌್ಯಾಗಿಂಗ್‌ನಲ್ಲಿ ತಿಳಿಯದೆ ಸಾಯಿಸಿದ ಹುಡುಗನ ಮನೆ ಮಂದಿಗೆ ಸಹಾಯವಾಗುವ ವ್ಯಕ್ತಿಯ ಕಥೆಯನ್ನು ಒಳಗೊಂಡಿದೆ. ತಳವರಂ ಈ ಅವಧಿಯ ಮತ್ತೊಂದು ಪ್ರಮುಖ ಚಿತ್ರವಾಗಿದೆ.
  • ಲೇಖಕ ಲೋಹಿತ ದಾಸ್ ಮತ್ತು ನಿರ್ದೇಶಕ ಶಿಬಿ ಮಲಾಯಿಲ್‌ರಿಬ್ಬರು ಮೋಹನ್ ಲಾಲ್‌ರನ್ನು ಹೆಚ್ಚು ನೆನಪಿಗೆ ತರುವ ಪಾತ್ರಗಳನ್ನು ನಿರ್ದೇಶಿಸಿದ್ದಾರೆಂದು ಪರಿಗಣಿಸಲಾಗುತ್ತದೆ. ಪೋಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡು ಕೊನೆಗೆ ಅಪರಾಧಿಯಾಗುವ ಕಿರೀದಮ್ ಚಿತ್ರ ದಲ್ಲಿನ ಸೇತು ಮಹಾದೇವನ್‌ನ ಪಾತ್ರವು ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಭಾರತಂ ಚಿತ್ರದಲ್ಲಿನ, ಮಾತ್ಸರ್ಯ ಮತ್ತು ತನ್ನ ಗಾಯಕ ಸಹೋದರನ ಸಾವಿನಿಂದ ಬೇಸತ್ತ ಶಾಸ್ತ್ರೀಯ ಸಂಗೀತಗಾರನ ಪಾತ್ರವು ಅವರಿಗೆ ನಂತರದ ವರ್ಷದಲ್ಲಿ 'ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ'ಯನ್ನು ತಂದುಕೊಟ್ಟಿತು.
  • ೯೦ ರ ದಶಕದಲ್ಲಿ ಅವರು ಹಿಸ್ ಹೈನೆಸ್ ಅಬ್ದುಲ್ಲಾ ಮೊದಲಾದ ಇನ್ನಷ್ಟು ಮನರಂಜನೆಯನ್ನು ನೀಡುವ ಚಿತ್ರಗಳ ಮೂಲಕ ಪ್ರಸಿದ್ಧಿ ಗಳಿಸಿದರು. ಈ ಚಿತ್ರದಲ್ಲಿ ಅವರು ರಾಜನನ್ನು ಕೊಲ್ಲಲು ನಂಬೂದರಿಯಾಗಿ ವೇಷಮರೆಸಿಕೊಂಡ ಮುಸ್ಲಿಮ್‌ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಮಿಧುನಂ , ಮಿನ್ನಾರಂ ಮತ್ತು ತೇನ್ಮಾವಿನ್ ಕೊಂಬತ್ ಇತ್ಯಾದಿ ಈ ಅವಧಿಯ ಇತರ ಪ್ರಮುಖ ವಾಣಿಜ್ಯ ಚಲನಚಿತ್ರಗಳು ಉತ್ತಮ-ಬರಹದ ಕಥಾವಸ್ತುಗಳು ಮತ್ತು ಅತ್ಯುತ್ತಮ ಪಾತ್ರಗಳನ್ನೊಳಗೊಂಡು ೮೦ರ ದಶಕದ ಸಂಪ್ರದಾಯವನ್ನು ಮುಂದುವರಿಸಿದವು. ರಂಜಿತ್ ಬರೆದ ಮತ್ತು ಐ. ವಿ. ಶಶಿ ನಿರ್ದೇಶಿಸಿದ ದೇವಾಸುರಂ ಚಿತ್ರವನ್ನು ಕೇಂದ್ರ ಕೇರಳಾದ ಊಳಿಗಮಾನ್ಯ ಪದ್ಧತಿಯ ಪರಿಸರದಲ್ಲಿ ಚಿತ್ರೀಕರಿಸಲಾಯಿತು.
  • ಇದರಲ್ಲಿ ಮೋಹನ್ ಲಾಲ್ ಶ್ರೀಮಂತ, ಅಹಂಕಾರದ ಮತ್ತು ದುಡುಕಿನ ಯುವಕನು ನಿಧಾನವಾಗಿ ಹಲವಾರು ಘಟನೆಗಳಿಂದ ಗರ್ವಭಂಗಗೊಳ್ಳುವ ಪಾತ್ರವನ್ನು ಮಾಡಿದ್ದಾರೆ. ನಿರ್ದೇಶಕ ಭದ್ರನ್‌ರ ಸ್ಪಾಡಿಕಂ ಚಿತ್ರವು ಸಾಹಸ ಪ್ರದರ್ಶನಗಳನ್ನು ಚಿತ್ರೀಕರಿಸುವ ಕ್ರಾಂತಿಕಾರಕ ಮಾರ್ಗಕ್ಕೆ ಆಧಾರಭೂತವಾಯಿತು. ಈ ಅವಧಿಯಲ್ಲಿ ವಿಮರ್ಶಾತ್ಮಕವಾಗಿ ದೂರಲ್ಪಟ್ಟ ಚಿತ್ರಗಳು ಕೆಲವು ಮಾತ್ರ ಇದ್ದವು ಹಾಗೂ ಮ��ಿಚಿತ್ರತಳು ಚಿತ್ರದಂತಹ ಕೆಲವು ಹೆಚ್ಚಾಗಿ ಅರೆ-ಮನರಂಜಕಗಳಾಗಿದ್ದವು. ಇದು ತಿಲಕನ್ ಮತ್ತು ಮೋಹನ್ ಲಾಲ್‌‌ರ ತಂದೆ-ಮಗ ಜೋಡಿಯು ಮಲಯಾಳಂ ಚಲನಚಿತ್ರ ರಂಗದ ಮೇಲೆ ಮತ್ತು ವಿಶೇಷವಾಗಿ ಇಬ್ಬರು ನಟರ ಅಭಿಮಾನಿಗಳ ಮೇಲೆ ಪ್ರಮುಖ ಪರಿಣಾಮವನ್ನು ಉಂಟುಮಾಡಿದ ಕಾಲವಾಗಿತ್ತು.

ನಂತರದ ವರ್ಷಗಳು (೧೯೯೬ ರಿಂದ-ಇತ್ತೀಚಿನವರೆಗೆ)

ಬದಲಾಯಿಸಿ
  • ಅವರ ವೃತ್ತಿಜೀವನದ ಈ ಅವಧಿಯಲ್ಲಿ ಚಿತ್ರ ನಿರ್ಮಾಪಕರು ಮೋಹನ್ ಲಾಲ್‌ರಿಗೆ ಅಪಾರ ಜನಯಪ್ರಿಯತೆಯನ್ನು ಗಳಿಸಿಕೊಟ್ಟರು. ಇದರಿಂದ ಅವರು ಚಲನಚಿತ್ರಗಳಲ್ಲಿ ಅಜೇಯ, ಉತ್ಸಾಹಭರಿತ ನಾಯಕನಾಗಿ ನಟಿಸಿದರು. ಆರಮ್ ತಂಬುರನ್ , ನರಸಿಂಹಂ , ರಾವಣ ಪ್ರಭು ಮತ್ತು ನರನ್ ಮೊದಲಾದ ಚಿತ್ರಗಳಲ್ಲಿನ ಅವರ ಪಾತ್ರಗಳು ಉತ್ತಮ ಪ್ರಭಾವ ಬೀರಿದವು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಹೆಸರು ಗಳಿಸಿದವು. ಅವುಗಳ ಆರಂಭಿಕ ನವೀನತೆಯ ನಂತರ ಈ ಚಿತ್ರಗಳು ಅವುಗಳಲ್ಲಿನ ನೈಜತೆ ಕೊರತೆಯಿಂದಾಗಿ ಮತ್ತು ಚಿತ್ರಗಳನ್ನು ಮೋಹನ್ ಲಾಲ್‌ರ ಸುತ್ತ ರಚಿಸಿದುದಕ್ಕಾಗಿ ಟೀಕೆಗೆ ಒಳಗಾದವು.
  • ಪ್ರಿಯದರ್ಶನ್‌ರ ಕಾಲಾಪಾಣಿ (ಇದು ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಾ ಹೋರಾಟದ ಕಥೆಯನ್ನು ಒಳಗೊಂಡಿದ್ದು ಅಂಡಮಾನ್ ದ್ವೀಪಗಳ ಸಣ್ಣ ಸಣ್ಣ ಕೋಣೆಗಳ ಜೈಲುಗಳನ್ನು ಕೇಂದ್ರೀಕರಿಸಿದೆ) ಮತ್ತು ಹೋಲಿತ ದಾಸ್‌ರ ಕಣ್ಮದಂ [] 1990ರ ಉತ್ತರಾರ್ಧದ ಸಂದರ್ಭದ ಅವರ ಕೆಲವು ಗಮನಾರ್ಹ ಚಿತ್ರಗಳಾಗಿವೆ.
  • ಮೋಹನ್ ಲಾಲ್ ಮಲಯಾಳಂ-ಮಾತನಾಡುವ ಜಗತ್ತಿಕ್ಕಿಂತಲೂ ಹೊರಗೆ ಗುರುತಿಸಲ್ಪಡಲು ಆರಂಭವಾದ ಕಾಲವಿದು. ಅವರನ್ನು ಜನಪ್ರಿಯ ನಿರ್ದೇಶಕ ಮಣಿರತ್ನಂ ತಮಿಳು ಚಿತ್ರ ಇರುವರ್ ‌ಗೆ ಕರೆತಂದುದರಿಂದ ಮೋಹನ್ ಲಾಲ್ ತಮ್ಮ ಮೊದಲನೇ ಮಲಯಾಳಂ-ಅಲ್ಲದ ಚಿತ್ರದಲ್ಲಿ ನಟಿಸಿದರು. ಇದರಲ್ಲಿ ಮೋಹನ್ ಲಾಲ್ ತಮಿಳುನಾಡಿನ ಗಣ್ಯ ವ್ಯಕ್ತಿ ಎಂಜಿಆರ್ ಪಾತ್ರದಲ್ಲಿ ನಟಿಸಿದರು. ಇಂಡೊ-ಫ್ರೆಂಚ್ ನಿರ್ಮಾಣ ವಾನಪ್ರಸ್ಥಂ ಚಿತ್ರದಲ್ಲಿ ಅವರು ಕಥಕ್ಕಳಿ ನೃತ್ಯ ಕಲಾವಿದನ ಪಾತ್ರದಲ್ಲಿ ನಟಿಸಿದರು.
  • ಇದು ಅವರಿಗೆ ಎರಡನೇ 'ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ'ಯನ್ನು ತಂದುಕೊಟ್ಟಿತು ಹಾಗೂ ಇದು ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಮಾಡಿದ ಮೊದಲನೇ ಚಿತ್ರವಾಗಿದೆ. ಈ ಚಿತ್ರವು ಕ್ಯಾನ್ನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಯಿತು ಮತ್ತು ಅದರಲ್ಲಿನ ಅವರ ನಿರ್ವಹಣೆಯು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು.[]
  • ಮೋಹನ್ ಲಾಲ್ ನರಸಿಂಹಂ ಚಿತ್ರದೊಂದಿಗೆ ಹೊಸ ಸ್ವರ್ಣಯುಗವನ್ನು ಆರಂಭಿಸಿದರು. ಇದು ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಲಾಭಗಳಿಸಿದ ಚಿತ್ರಗಳಲ್ಲಿ ಒಂದಾಯಿತು. ೨೦೦೨ ರಲ್ಲಿ ಮೋಹನ್ ಲಾಲ್ ಅವರ ಮೊದಲ ಬಾಲಿವುಡ್ ಚಿತ್ರ ಕಂಪನಿ ಯಲ್ಲಿ ನಟಿಸಿದರು, ಇದು ಅವರನ್ನು ಭಾರತದಲ್ಲಿ ಹಿಂದಿ-ಮಾತನಾಡುವ ವ್ಯಾಪಕ ಪ್ರೇಕ್ಷಕ ವರ್ಗಕ್ಕೆ ಪರಿಚಯಿಸಿಕೊಟ್ಟಿತು. ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯವಾಗಿ ಜಯಭೇರಿ ಸಾಧಿಸಿತು. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು 'ಅತ್ಯುತ್ತಮ ಪೋಷಕ ನಟನೆಗಾಗಿ IIFA ಸ್ಟಾರ್ ಸ್ಕ್ರೀನ್ ಪ್ರಶಸ್ತಿ'ಯನ್ನು ಪಡೆದರು. ೨೦೦೫ ರಲ್ಲಿ ತಾನ್ಮಾತ್ರ ಚಿತ್ರದಲ್ಲಿನ ("ಮಾಲಿಕ್ಯೂಲ್") ಅಲ್ಜೈಮರ್ ರೋಗಕ್ಕೆ ತುತ್ತಾದ ವ್ಯಕ್ತಿಯ ಪಾತ್ರವು ಅವರಿಗೆ ಅತ್ಯುತ್ತಮ ನಟನೆಗಾಗಿ ಕೇರಳಾ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು.
  • ಅವರ ಎರಡನೇ ಬಾಲಿವುಡ್ ಚಿತ್ರ, ೧೯೭೫ ರ ಬ್ಲಾಕ್‌ಬಸ್ಟರ್ ಚಿತ್ರ ಶೋಲೆ ಯ ರಿಮೇಕ್ ರಾಮ್ ಗೋಪಾಲ್ ವರ್ಮಾ ಕಿ ಆಗ್ ‌ನಲ್ಲಿ ಅವರು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದರು, ಈ ಪಾತ್ರವನ್ನು ಮೂಲದಲ್ಲಿ ಸಂಜೀವ್ ಕುಮಾರ್ ಅಭಿನಯಿಸಿದ್ದರು. ೨೦೦೫ರಲ್ಲಿ ಮೋಹನ್ ಲಾಲ್ ಸತ್ಯನ್ ಅಂತಿಕಾದ್ ನಿರ್ದೇಶಿಸಿದ ರಾಸತಂತ್ರಂ ಚಿತ್ರದಲ್ಲಿ ನಟಿಸಿದರು, ಇದು ಮತ್ತೊಂದು ದಾಖಲೆ ಸಾಧಿಸಿದ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಹೆಸರು ಗಳಿಸಿದ ಚಿತ್ರವಾಯಿತು. ಮೋಹನ್ ಲಾಲ್ ಪರದೇಸಿ ಚಿತ್ರದಲ್ಲಿನ ವಾಲಿಯಕತು ಮೂಸ ಪಾತ್ರಕ್ಕಾಗಿ ೨೦೦೭ರ ಅತ್ಯುತ್ತಮ ನಟನೆಗಾಗಿ ಕೇರಳಾ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.
  • ಮೋಹನ್ ಲಾಲ್‌ರ ಹಲ್ಲೂ ೨೦೦೭ರ ಅತ್ಯಂತ ಹೆಚ್ಚು ಜನಪ್ರಿಯ ಚಿತ್ರವಾಯಿತು.೨೦೦೯ರಲ್ಲಿ ಮೋಹನ್ ಲಾಲ್ ತಮಿಳು ಚಿತ್ರ ಉನ್ನೈಪೋಲ್ ಒರುವನ್ ಕಮಲ್ ಹಾಸನ್ ಒಂದಿಗೆ ಅಭಿನಯಿಸಿದರು. ಅವರು ೨೦೧೦ರ ವರ್ಷವನ್ನು ನೈಜ ಕೌಟುಂಬಿಕ ಕಥೆಯುಳ್ಳ ರೋಶನ್ ಆಂಡ್ರಿವ್ಸ್ ನಿರ್ದೇಶನದ ಎವಿದಮ್ ಸ್ವರ್ಗಮನು ಚಿತ್ರದೊಂದಿಗೆ ಆರಂಭಿಸಿದರು. ೨೦೧೦ ರಲ್ಲಿ ಅವರು ಜನಕನ್ ಚಿತ್ರದಲ್ಲಿ ಸುರೇಶ್ ಗೋಪಿಯೊಂದಿಗೆ ಅತಿಥಿ-ಪಾತ್ರದಲ್ಲಿ ಕಾಣಿಸಿಕೊಂಡರು; ಈ ಚಿತ್ರವು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.
  • ನಂತರ ಅವರು ಹಾಲಿವುಡ್ ಚಿತ್ರ ರೈನ್ ಮ್ಯಾನ್ ‌ನ ರಿಮೇಕ್ ಅಲೆಕ್ಸಾಂಡರ್ ದಿ ಗ್ರೇಟ್ ‌ನಲ್ಲಿ ನಟಿಸಿದರು. ಅನಂತರ ಅವರು ಶಿಕ್ಕರ್ ಚಿತ್ರದಲ್ಲಿ ಅಭಿನಯಿಸಿದರು. ಇದು ೨೦೧೦ ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡಿತು ಹಾಗೂ ಇದು ಮತ್ತೊಂದು ಬ್ಲಾಕ್‌ಬಸ್ಟರ್ ಆಯಿತು. ೨೦೧೦ರ ಅವರ ಕೊನೆಯ ಚಿತ್ರ ಕಂದಾಹಾರ್, ಇದರಲ್ಲಿ ಅಮಿತಾಬ್ ಬಚ್ಚನ್ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ; ಇದು ಡಿಸೆಂಬರ್ 16ರಂದು ಬಿಡುಗಡೆ ಹೊಂದಿತು. ಅವರು ೨೦೧೦ರಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ‌ನಲ್ಲೂ ಅಭಿನಯಿಸಿದ್ದಾರೆ. ಇದು ೨೦೧೧ರ ಜನವರಿ ೨೬ ರಂದು ಬಿಡುಗಡೆ ಹೊಂದಲಿದೆ.

ರಂಗಭೂಮಿ

ಬದಲಾಯಿಸಿ
  • ಇತರ ಭಾರತೀಯ ನಟರಂತೆ ಮೋಹನ್ ಲಾಲ್ ರಂಗಭೂಮಿ ಹಿನ್ನೆಲೆಯನ್ನು ಹೊಂದಿಲ್ಲ. ಆದರೂ ಅವರು ಕೆಲವು ನಾಟಕಗಳಲ್ಲಿ ನಟಿಸಿದ್ದಾರೆ. ಅವರು ಸಂಸ್ಕೃತ ನಾಟಕ ಕರ್ಣಭಾರಂ ನಲ್ಲಿ ಕರ್ಣನ (ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿನ ಒಂದು ಪಾತ್ರ) ಪಾತ್ರದಲ್ಲಿ ಮೊದಲ ಬಾರಿಗೆ ರಂಗಭೂಮಿಯಲ್ಲಿ ನಟಿಸಿದರು. ಇದು ನ್ಯಾಷನಲ್ ಥಿಯೇಟರ್ ಫೆಸ್ಟಿವಲ್‌ನ ಅಂಗವಾಗಿ ನವದೆಹಲಿಯಲ್ಲಿ ಮೊದಲ ಪ್ರದರ್ಶನ ಕಂಡಿತ್ತು.
  • ಈ ನಾಟಕವು ಕರ್ಣನು ಕುರುಕ್ಷೇತ್ರ ಯುದ್ಧದ ಹಿಂದಿನ ದಿನ ತನ್ನ ಗತಕಾಲದ ಬಗ್ಗೆ ಮತ್ತು ತನ್ನ ಸತ್ಯದ ಬಗ್ಗೆ ಯೋಚಿಸಿ ಮಾನಸಿಕ ಯಾತನೆ ಪಡುವುದನ್ನು ಚಿತ್ರಿಸುತ್ತದೆ.[] ಕಾದಯಟ್ಟಂ ಮಲಯಾಳಂ ಸಾಹಿತ್ಯದಿಂದ ಆರಿಸಿದ ೧೦ ಮರೆಯಲಾಗದ ಪಾತ್ರಗಳು ಮತ್ತು ಸಂದರ್ಭಗಳನ್ನು ಚಿತ್ರಿಸುವ ಮೋಹನ್ ಲಾಲ್ ಅಭಿನಯಿಸಿದ ಒಂದು ಪ್ರದರ್ಶನವಾಗಿದೆ. ಇದನ್ನು ತನ್ನ ಮಾತೃ ಭಾಷೆಗೆ ತಾನು ನೀಡಿದ ಕೊಡುಗೆಯೆಂದು ಅವರು ಹೇಳಿದ್ದಾರೆ.
  • ಈ ಪ್ರದರ್ಶನವು ರಂಗಭೂಮಿ ನಟನೆ, ಚಲನಚಿತ್ರ ಅಭಿವ್ಯಕ್ತಿ, ಧ್ವನಿ ಮತ್ತು ಬೆಳಕಿನ ತಂತ್ರಜ್ಞಾನಗಳು ಹಾಗೂ ಸಂಗೀತ ಮೊದಲಾದವುಗಳ ಸಂಯೋಗವಾಗಿತ್ತು, ಇದನ್ನು ಚಲನಚಿತ್ರ ನಿರ್ದೇಶಕ T. K. ರಾಜೀವ್ ಕುಮಾರ್ ರೂಪಿಸಿದ್ದರು.[]ಚಾಯಮುಖಿ ಯು ಮೋಹನ್ ಲಾಲ್ ಮತ್ತು ಮಲಯಾಳಂ ನಟ ಮುಕೇಶ್ ಜಂಟಿಯಾಗಿ ನಡೆಸುತ್ತಿರುವ ನಿರ್ಮಾಣ ಸಂಸ್ಥೆ ಕಾಳಿದಾಸ ವಿಸ್ವಲ್ ಮ್ಯಾಜಿಕ್‌ ಬ್ಯಾನರ್‌ನಡಿಯಲ್ಲಿ ಪ್ರದರ್ಶಿಸಲ್ಪಟ್ಟ ಮೋಹನ್ ಲಾಲ್‌ರ ಇತ್ತೀಚಿನ ನಾಟಕವಾಗಿದೆ. ಇದರಲ್ಲಿ ಮೋಹನ್ ಲಾಲ್ ಭೀಮನ್ ಮತ್ತು ಮುಕೇಶ್ ಕೀಚಕನ್ ಪಾತ್ರದಲ್ಲಿ ಅಭಿನಯಿಸಿದರು. ಈ ನಾಟಕವು ಮೊದಲ ಬಾರಿಗೆ ೨೦೦೮ರ ಮಾರ್ಚ್ ೧೨ರಂದು ತ್ರಿಚೂರ್‌ನಲ್ಲಿ ಪ್ರದರ್ಶನವಾಯಿತು.[೧೦]

ವ್ಯವಹಾರ ಸಾಹಸಗಳು

ಬದಲಾಯಿಸಿ
  • ಮ್ಯಾಕ್ಸ್‌ಲ್ಯಾಬ್ ಸಿನಿಮಾಸ್ ಆಂಡ್ ಎಂಟರ್ಟೈನ್ಮೆಂಟ್ಸ್ - ಮಲಯಾಳಂ ಚಲನಚಿತ್ರ ವಿತರಣಾ ಸಂಸ್ಥೆ
  • ವಿಸ್ಮಾಯಸ್ ಮ್ಯಾಕ್ಸ್ - ಇದು ಒಂದು ಚಲನಚಿತ್ರ ನಿರ್ಮಾಣ-ನಂತರದ ಸ್ಟುಡಿಯೊ ಹಾಗೂ ತ್ರಿವೆಂಡ್ರಮ್‌ನ ಕಳಕೂಟಂನ ವೀಡಿಯೊ ಪಾರ್ಕ್ ಮತ್ತು ಕಿನ್ಫ್ರಾ ಫಿಲ್ಮ್‌ನ ಡಬ್ ಮಾಡುವ ಕಲಾವಿದರಿಗಾಗಿರುವ ಕಾಲೇಜು
  • ಪ್ರಾಣವಂ ಆರ್ಟ್ಸ್ - ಚಲನಚಿತ್ರ ನಿರ್ಮಾಣ ಸಂಸ್ಥೆ
  • ಪ್ರಾಣವಂ - ಚಲನಚಿತ್ರ ವಿತರಣಾ ಸಂಸ್ಥೆ (ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ)
  • ಕೋಳಿಕೋಡ್‌ನಲ್ಲಿರುವ ಪ್ರಮುಖ ಕಡಲ ತಿನಿಸು ರಫ್ತು ಕಂಪನಿ ಯೂನಿ ರಾಯಲ್ ಮೆರೈನ್ ಎಕ್ಸ್‌ಪೋರ್ಟ್ಸ್‌ನ ಪಾಲುದಾರ ಮತ್ತು ನಿರ್ದೇಶಕರಾಗಿದ್ದಾರೆ
  • ದುಬೈಯಲ್ಲಿ ಮೋಹನ್ ಲಾಲ್ಸ್ ಟೇಸ್ಟ್‌ಬಡ್ಸ್ ಎಂಬ ಹೆಸರಿನ ರೆಸ್ಟಾರೆಂಟ್ ಸರಪಣಿಯೇ ಇದೆ
  • ಟ್ರಾವನ್ಕೋರ್ ಕೋರ್ಟ್ - ಕೊಚ್ಚಿಯಲ್ಲಿರುವ ತ್ರೀ-ಸ್ಟಾರ್ ಹೋಟೆಲ್
  • ಚಲನಚಿತ್ರ ವಿತರಣಾ ಸಂಸ್ಥೆ ಮ್ಯಾಕ್ಸ್‌ಲ್ಯಾಬ್ ಸಿನಿಮಾಸ್ ಆಂಡ್ ಎಂಟರ್ಟೈನ್ಮೆಂಟ್ಸ್‌ನ ಪಾಲುದಾರ
  • ಬೆಂಗಳೂರಿನಲ್ಲಿ ದಿ ಹಾರ್ಬರ್ ಮಾರ್ಕೆಟ್ ಎಂಬ ಹೆಸರಿನ ರೆಸ್ಟಾರೆಂಟ್ ಒಂದಿದೆ
  • ಉಪ್ಪಿನಕಾಯಿ ಮತ್ತು ಮಸಾಲೆ ಹುಡಿ ತಯಾರಕ ಸಂಸ್ಥೆ ಮೋಹನ್ ಲಾಲ್ಸ್ ಟೇಸ್ಟ್‌ಬಡ್ಸ್ Archived 2020-10-25 ವೇಬ್ಯಾಕ್ ಮೆಷಿನ್ ನಲ್ಲಿ.‌ನ[೧೧] ಪಾಲುದಾರ
  • ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನ (JtPac) ಅಧ್ಯಕ್ಷ
  • ಕ್ಲೆನರ್ಜೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯಾ[೧೨] ದ ಸ್ವತಂತ್ರ ನಿರ್ದೇಶಕ

ಪ್ರಶಸ್ತಿಗಳು ಮತ್ತು ಸಾಧನೆಗಳು

ಬದಲಾಯಿಸಿ
  • ಮೋಹನ್ ಲಾಲ್‌ರ ಚಿತ್ರ ಗುರು ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವನ್ನು ಪಡೆಯಿತು ಹಾಗೂ ೧೯೯೭ರ ಅತ್ಯುತ್ತಮ ವಿದೇಶ ಚಲನಚಿತ್ರಕ್ಕಾಗಿ ನಾಮನಿರ್ದೇಶನವನ್ನು ಪಡೆಯಿತು.
  • ಮೋಹನ್ ಲಾಲ್ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು: ವಿಶೇಷ ಜ್ಯೂರಿ ಪ್ರಶಸ್ತಿ (ನಟ),
  • ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು ಮತ್ತು ಅತ್ಯುತ್ತಮ ಚಲನಚಿತ್ರ (ನಿರ್ಮಾಪಕ) ಪ್ರಶಸ್ತಿ.
  • ಮೋಹನ್ ಲಾಲ್ ೨೦೦೧ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀಯನ್ನು ಪಡೆದರು.
  • ಮೋಹನ್ ಲಾಲ್‌ರ ಚಲನಚಿತ್ರ ವಾನಪ್ರಸ್ತಂ ೧೯೯೯ರ ಕ್ಯಾನ್ನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ "ಅನ್ ಸರ್ಟೈನ್ ರಿಗಾರ್ಡ್" ವಿಭಾಗದಲ್ಲಿ ಪ್ರದರ್ಶಿಸಲ್ಪಟ್ಟಿತು.[೧೩]
  • ಮೋಹನ್ ಲಾಲ್ ೨೦೦೬ರಲ್ಲಿ CNN-IBNನಿಂದ ನಡೆಸಲಾದ ಸಮೀಕ್ಷೆಯೊಂದರಲ್ಲಿ ಮೋಸ್ಟ್ ಪಾಪ್ಯುಲರ್ ಕೇರಲೈಟ್ ಆಗಿ ಆಯ್ಕೆಯಾದರು.
  • ಮೋಹನ್ ಲಾಲ್ ೨೦೦೯ರಲ್ಲಿ ಭಾರತೀಯ ಪ್ರಾದೇಶಿಕ ಸೈನ್ಯದಲ್ಲಿ ಗೌರವ ಲೆಫ್ಟೆನಂಟ್ ಕರ್ನಲ್ ಸ್ಥಾನವನ್ನು ಪಡೆದರು.(ಭಾರತೀಯ ನಟನೊಬ್ಬನು ಗೌರವ ಸೈನ್ಯ ಸ್ಥಾನವನ್ನು ಪಡೆಯುವುದು ಮೊದಲ ನಿದರ್ಶನವಾಗಿದೆ.)
  • ಮೋಹನ್ ಲಾಲ್ ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ಅನ್ನು ಪಡೆದರು.
  • ಮೋಹನ್ ಲಾಲ್ IIFA ಪ್ರಶಸ್ತಿಯನ್ನು ಪಡೆದ ಏಕೈಕ ಮಲಯಾಳಂ ನಟರಾಗಿದ್ದಾರೆ (೨೦೦೩ರಲ್ಲಿ ಅತ್ಯುತ್ತಮ ಪೋಷಕ ನಟರಾಗಿ).

ರಾಯಭಾರಿಯಾಗಿ

ಬದಲಾಯಿಸಿ

ಮೋಹನ್ ಲಾಲ್ ಹಲವಾರು ಕಾರ್ಯಚಟುವಟಿಕೆಗಳಿಗೆ ಮತ್ತು ಸಂಘಟನೆಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಉದಾಹರಣೆಗಾಗಿ:

ಉಲ್ಲೇಖಗಳು

ಬದಲಾಯಿಸಿ
  1. "ಮಿ ಮೋಹನ್ ಲಾಲ್ ಆನ್ ಮೈಸೆಲ್ಫ್". Archived from the original on 2010-03-09. Retrieved 2011-01-11.
  2. "ಪದ್ಮಶ್ರೀ ಮೋಹನ್ ಲಾಲ್‌ ಕನ್ಫೆರ್ಡ್ ವಿದ್ ರ್ಯಾಂಕ್ ಆಫ್ Lt Col (Hony) ಇನ್ ಟೆರಿಟೋರಿಯಲ್ ಆರ್ಮಿ". ಪ್ರೆಸ್ ಇನ್ಫರ್ಮೇಶನ್ ಬ್ಯೂರೊ, ಗವರ್ನ್ಮೆಂಟ್ ಆಫ್ ಇಂಡಿಯಾ ಜುಲೈ ೦೯, ೨೦೦೯.
  3. "Mohanlal, Pookutty get D.Litt". The Hindu. 2010-03-17. Archived from the original on 2010-04-02. Retrieved 2010-5-18. {{cite news}}: Check date values in: |accessdate= (help)
  4. ೪.೦ ೪.೧ "Mohanlal in Model School". ದಿ ಹಿಂದೂ. Chennai, India. 25 May 2009. Archived from the original on 30 ಮೇ 2009.
  5. ೫.೦ ೫.೧ "?". Archived from the original on 2009-02-16.
  6. "ಮಲಯಾಳಂ ಸಿನಿಮಾ ಹಿಸ್ಟರಿ". Archived from the original on 2010-02-28. Retrieved 2011-01-11.
  7. "Kanmadam". IMDb. 1998. Retrieved 25 September 2010.
  8. celebzone/hindi/ mohanlal vishwanathannair "Mohanlal Vishwanathan Nair - Profile". CineCurry. Retrieved 25 September 2010. {{cite web}}: Check |url= value (help)
  9. ಕಾವಲಂ ನಾರಾಯಣ ಪಣಿಕ್ಕರ್ - "ಮೋಹನ್ ಲಾಲ್ಸ್ ನ್ಯೂ ಒಬೆಶನ್"
  10. "ಮೋಹನ್ ಲಾಲ್ ಮೇಕ್ಸ್ ಎ ಕಮ್‌ಬ್ಯಾಕ್ ಟು ಥಿಯೇಟರ್". ApunKaChoice.com. 1 ಫೆಬ್ರವರಿ 2008. 2010 ಮೇ 10ರಂದು ಪುನರ್‌ಸಂಪಾದಿಸಲಾಗಿದೆ.
  11. ಟೈಮ್ಸ್ ಆಫ್ ಇಂಡಿಯಾ: ಮೋಹನ್ ಲಾಲ್ ಸೆಲ್ಸ್ ಟೇಸ್ಟ್ ಬಡ್ಸ್ ಟು ಈಸ್ಟರ್ನ್ ಗ್ರೂಪ್
  12. "ರೀಜನಲ್ ಮ್ಯಾನೇಜ್ಮೆಂಟ್ - ಕ್ಲೆನರ್ಜೆನ್ ಕಾರ್ಪೊರೇಶನ್". Archived from the original on 2011-07-05. Retrieved 2011-01-11.
  13. "Festival de Cannes: Vanaprastham". festival-cannes.com. Retrieved 2009-11-03.


ಬಾಹ್ಯ ಕೊಂಡಿಗಳು

ಬದಲಾಯಿಸಿ