ಬಿಪಿನ್ ರಾವತ್
"ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್" (೧೬ ಮಾರ್ಚ್ ೧೯೫೮ - ೮ ಡಿಸೆಂಬರ್ ೨೦೨೧), ಇವರು ಭಾರತೀಯ ಸೇನಾಧಿಕಾರಿ ಹಾಗೂ ಭಾರತ ದೇಶದ ಮೊದಲ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರಾಗಿದ್ದರು.
ಜನನ ಮತ್ತು ಕೌಟುಂಬಿಕ ಹಿನ್ನಲೆ
ಬದಲಾಯಿಸಿಜನರಲ್ ರಾವತ್ ಅವರು ೧೯೫೮ರ ಮಾರ್ಚ್ ೧೬ರಂದು ಉತ್ತರಾಖಂಡ ರಾಜ್ಯದ ಪೌರಿಯಲ್ಲಿ ಜನಿಸಿದರು. ಹಲವು ತಲೆಮಾರುಗಳಿಂದ ಅವರ ಕುಟುಂಬ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿತ್ತು. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಸೈಂಜಿ ಗ್ರಾಮದವರು. ಇವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ್ದರು. ಡೆಹ್ರಾಡೂನ್ ನ ಕೇಂಬ್ರಿಯಾನ್ ಹಾಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಶಿಮ್ಲಾದ ಸೈಂಟ್ ಎಡ್ವರ್ಡ್ ಶಾಲೆಯಲ್ಲಿ ಮಾಧ್ಯಮಿಕ, ಪ್ರೌಢ ಶಿಕ್ಷಣ ಮುಗಿಸಿ ನಂತರ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಮಾಂಡ್ ಮತ್ತು ಕಾನ್ಸಾಸ್‌ನ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಜನರಲ್ ಸ್ಟಾಫ್ ಕಾಲೇಜಿನಲ್ಲಿ ಹೈಯರ್ ಕಮಾಂಡ್ ಕೋರ್ಸ್‌ನ ಪದವಿ ಪಡೆದರು.[೧]
ಸೇನಾಪಡೆಯಲ್ಲಿ
ಬದಲಾಯಿಸಿರಾವತ್ ಅವರನ್ನು ಡಿಸೆಂಬರ್ ೧೬, ೧೯೭೮ರಂದು ೧೧ ಗೂರ್ಖಾ ರೈಫಲ್ಸ್‌ನ ೫ ನೇ ಬೆಟಾಲಿಯನ್‌ಗೆ ಕರ್ನಲ್ ಆಗಿ ನಿಯೋಜಿತರಾಗುವ ಮೂಲಕ ಭಾರತೀಯ ಸೇನೆಗೆ ಪ್ರವೇಶಿಸಿದರು. ಅವರು ಕಿಬಿತುದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪೂರ್ವ ವಲಯದಲ್ಲಿ ೧೧ ಗೂರ್ಖಾ ರೈಫಲ್ಸ್‌ನ ೫ ನೇ ಬೆಟಾಲಿಯನ್‌ಗೆ ಕಮಾಂಡರ್ ಆಗಿದ್ದರು. ಬಳಿಕ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದ ಅವರು ಸೋಪೋರ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಸೆಕ್ಟರ್‌ಗೆ ಕಮಾಂಡರ್ ಆಗಿ ನೇಮಕಗೊಂಡರು.ನಂತರ ಅವರು ಯುಎನ್ ಮಿಷನ್ ಅಡಿಯಲ್ಲಿ ಕಾಂಗೋದಲ್ಲಿ ನಡೆದ ಆಂತರಿಕ ಗಲಭೆಯನ್ನು ನಿಯಂತ್ರಿಸಲು ಬಹುರಾಷ್ಟ್ರೀಯ ಬ್ರಿಗೇಡ್‌ಗೆ ನಿಯೋಜಿಸಲ್ಪಟ್ಟರು.
ಮೇಜರ್ ಜನರಲ್ ಆಗಿ ಬಡ್ತಿ ಪಡೆದ ನಂತರ, ರಾವತ್ ಉರಿಯಲ್ಲಿ ೧೯ನೇ ಪದಾತಿ ದಳದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನರಲ್ ಆಗಿ, ಪುಣೆಯಲ್ಲಿ ದಕ್ಷಿಣ ಸೇನೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ದಿಮಾಪುರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ III ಕಾರ್ಪ್ಸ್‌ಗೆ ಕಮಾಂಡರ್ ಆಗಿದ್ದರು. ೧ ಜನವರಿ ೨೦೧೬ ರಂದು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಸದರ್ನ್ ಕಮಾಂಡ್ ಆಗಿ ನೇಮಕಗೊಂಡರು.
.೨೦೧೯ರ ಆರಂಭದಲ್ಲಿ ಭಾರತೀಯ ಸೇನೆಯನ್ನು ಏಕತ್ರ��ೊಳಿಸುವ ಹಾಗೂ ಮೂರು ಸೇನೆಗಳ ಬಗ್ಗೆ ಒಂದೆ ಕೇಂದ್ರದಿಂದ ಮಾಹಿತಿ ಪಡೆಯಲು ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸೃಷ್ಟಿಸಲು ಉದ್ದೇಶಿಸಲಾಯ್ತು. ೨೦೧೯ರ ಜನವರಿ ೧೧ರಿಂದ ಈ ಹುದ್ದೆಗೆ ಮೊದಲಿಗರಾಗಿ ಜನರಲ್ ರಾವತ್ ಅವರು ಅಧಿಕಾರ ಸ್ವೀಕರಿಸಿದರು.[೨]
ಪದಕಗಳು ಹಾಗೂ ಶ್ಲಾಘನೆಗಳು
ಬದಲಾಯಿಸಿಬಿಪಿನ್ ರಾವತ್ ಅವರ ಸಂಪೂರ್ಣ ಸೇವಾ ವೃತ್ತಿಜೀವನದ ೪೨ ವರ್ಷಗಳ ಅವಧಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ, ಇವರಿಗೆ PVSM, UYSM, AVSM, YSM, SM ಮತ್ತು VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ, ಅವರು ಎರಡು ಸಂದರ್ಭಗಳಲ್ಲಿ ಸೇನಾ ಮುಖ್ಯಸ್ಥರ ಶ್ಲಾಘನೆ ಮತ್ತು ಸೇನಾ ಕಮಾಂಡರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಂಗೋದಲ್ಲಿ ಯುಎನ್‌ನೊಂದಿಗೆ ಸೇವೆ ಸಲ್ಲಿಸುತ್ತಿರುವಾಗ, ಅವರಿಗೆ ಎರಡು ಬಾರಿ ಫೋರ್ಸ್ ಕಮಾಂಡರ್‌ನ ಪ್ರಶಂಸೆ ನೀಡಲಾಗಿದೆ.[೩]
ಪರಮ ವಿಶಿಷ್ಟ ಸೇವಾ ಪದಕ | ಉತ್ತಮ ಯುದ್ಧ ಸೇವಾ ಪದಕ | ||
ಅತಿ ವಿಶಿಷ್ಟ ಸೇವಾ ಪದಕ | ಯುದ್ಧ ಸೇವಾ ಪದಕ | ಸೇನಾ ಪದಕ | ವಿಶಿಷ್ಟ ಸೇವಾ ಪದಕ |
ಪರಾಕ್ರಮ ಪದಕ | ಸಾಮಾನ್ಯ ಸೇವಾ ಪದಕ | ವಿಶೇಷ ಸೇವಾ ಪದಕ | ಪರಾಕ್ರಮ ಕಾರ್ಯಾಚರಣೆ ಪದಕ |
ಸೈನ್ಯ ಸೇವಾ ಪದಕ | ಪರ್ವತ ಪ್ರದೇಶ ಸೇವಾ ಪದಕ | ವಿದೇಶ ಸೇವಾ ಪದಕ | ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪದಕ |
ಮೂರು ದಶಕಗಳ ಸೇವೆಗಾಗಿ ಪದಕ | ಎರಡು ದಶಕಗಳ ಸೇವೆಗಾಗಿ ಪದಕ | ಒಂಬತ್ತು ವರ್ಷಗಳ ಸೇವೆಗಾಗಿ ಪದಕ | ಕಾಂಗೋದ ಯುಎನ್ ಮಿಷನ್ ಗಾಗಿ ವಿಶ್ವ ಸಂಸ್ಥೆಯ ಪದಕ |
ವೈವಾಹಿಕ ಜೀವನ
ಬದಲಾಯಿಸಿಬಿಪಿನ್ ರಾವತ್ ಅವರು ಮಧುಲಿಕಾರವರೊಂದಿಗೆ ೧೯೮೫ರಲ್ಲಿ ವಿವಾಹವಾದರು. ರಾಜಕಾರಣಿ ದಿ.ಮೃಗೇಂದ್ರ ಸಿಂಗ್ ಅವರ ಪುತ್ರಿಯಾದ ಮಧುಲಿಕಾ ರಾವತ್, ಮೂಲತಃ ಮಧ್ಯಪ್ರದೇಶ ಶಹ್ದೋಲ್ ಜಿಲ್ಲೆಯ ಸೋಹಾಗಪುರ್ದವರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸೈಕಾಲಜಿ ವಿಷಯಲ್ಲಿ ಪದವಿ ಪಡೆದಿದ್ದಾರೆ.[೪]ಇವರು ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆಯಾಗಿದ್ದರು. ರಾವತ್ ದಂಪತಿಗೆ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಮಧುಲಿಕಾ ರಾವತ್ ಅವರು ೨೦೨೧ರ ಡಿಸೆಂಬರ್ ೮ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರ್ ಬಳಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿದರು.[೫]
ಮರಣ
ಬದಲಾಯಿಸಿ೨೦೨೧ರ ಡಿಸೆಂಬರ್ ೮ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರ್ ಬಳಿ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಸೇನೆಯ ಹೆಲಿಕಾಫ್ಟರ್ ಅಪಘಾತಕ್ಕೊಳಗಾಯಿತು. ಈ ಅಪಘಾತದಲ್ಲಿ ಬಿಪಿನ್ ರಾವತ್ ಅವರು ಮೃತಪಟ್ಟರು.[೬]
ಉಲ್ಲೇಖಗಳು
ಬದಲಾಯಿಸಿ- ↑ "ಭಾರತ ಮಾತೆಯ ಹೆಮ್ಮೆಯ ಪುತ್ರ ಜನರಲ್ ಬಿಪಿನ್ ರಾವತ್: ಸೇನಾ ಕುಟುಂಬದಲ್ಲಿ ಹುಟ್ಟಿ ರಕ್ಷಣಾ ಪಡೆಯ ಮುಖ್ಯಸ್ಥ ಹುದ್ದೆಗೆ ಸಾಗಿದ ರೋಚಕ ಪಯಣ, "ಕನ್ನಡಪ್ರಭ" ವರದಿ".
- ↑ "ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಜನರಲ್ ರಾವತ್ ಅಧಿಕಾರ ಸ್ವೀಕಾರ,ಪ್ರಜಾವಾಣಿ ವರದಿ".
- ↑ "One India ಜಾಲತಾಣದಲ್ಲಿ ಪ್ರಕಟವಾದ ಲೇಖನ".
- ↑ "Zee News ವರದಿ".
- ↑ "ಪ್ರಜಾವಾಣಿ ವರದಿ". Archived from the original on 2021-12-09. Retrieved 2021-12-09.
- ↑ "ಪ್ರಜಾವಾಣಿ ವರದಿ". Archived from the original on 2021-12-09. Retrieved 2021-12-09.