ಸಾಮಾನ್ಯ ಬಳಕೆಯಲ್ಲಿ, ಕಳ್ಳತನ ಎಂದರೆ ಹಕ್ಕುಳ್ಳ ಮಾಲೀಕನಿಂದ ಕಿತ್ತುಕೊಳ್ಳುವ ಉದ್ದೇಶದಿಂದ ಮತ್ತೊಬ್ಬ ವ್ಯಕ್ತಿಯ ಸ್ವತ್ತು ಅಥವಾ ಸೇವೆಗಳನ್ನು ಆ ವ್ಯಕ್ತಿಯ ಅನುಮತಿ ಅಥವಾ ಸಮ್ಮತಿಯಿಲ್ಲದೇ ತೆಗೆದುಕೊಳ್ಳುವುದು.[] ಈ ಶಬ್ದವನ್ನು ಕನ್ನಗಳವು, ಹಣ ಲಪಟಾಯಿಸುವುದು, ಅಪಹಾರ, ಲೂಟಿ, ದರೋಡೆ, ಅಂಗಡಿ ಕಳ್ಳತನ, ಗ್ರಂಥಾಲಯ ಕಳ್ಳತನ ಮತ್ತು ವಂಚನೆಯಂತಹ (ಸುಳ್ಳು ಸೋಗುಗಳನ್ನು ಹಾಕಿ ಹಣ ಪಡೆಯುವುದು) ಆಸ್ತಿಗಳ ವಿರುದ್ಧದ ಕೆಲವು ಅಪರಾಧಗಳಿಗೆ ಅನೌಪಚಾರಿಕ ಸಂಕ್ಷಿಪ್ತ ರೂಪದ ಪದವಾಗಿ ಕೂಡ ಬಳಸಲಾಗುತ್ತದೆ. ಕೆಲವು ನ್ಯಾಯ���್ಯಾಪ್ತಿಗಳಲ್ಲಿ, ಕಳ್ಳತನವನ್ನು ಅಪಹಾರದ ಸಮಾನಾರ್ಥಕ ಪದವೆಂದು ಪರಿಗಣಿಸಲಾಗುತ್ತದೆ; ಇತರ ನ್ಯಾಯವ್ಯಾಪ್ತಿಗಳಲ್ಲಿ ಕಳ್ಳತನವು ಅಪಹಾರದ ಬದಲಾಗಿ ಬಂದಿದೆ. ಕಳ್ಳತನದ ಕ್ರಿಯೆಯನ್ನು ನಡೆಸುವವನು ಅಥವಾ ಕಳ್ಳತನವನ್ನು ವೃತ್ತಿಯಾಗಿ ಮಾಡಿಕೊಂಡಿರುವವನನ್ನು ಕಳ್ಳ ಎಂದು ಕರೆಯಲಾಗುತ್ತದೆ.

Paul-Charles Chocarne-Moreau, The Cunning Thief, 1931

ಉದಾಹರಣೆಗೆ, ಕ ನು ಉಪಾಹಾರ ಗೃಹಕ್ಕೆ ಹೋಗಿ, ತಪ್ಪಾಗಿ ತನ್ನ ಶಿರೋವಸ್ತ್ರವನ್ನು ತೆಗೆದುಕೊಳ್ಳುವ ಬದಲು ಗ ನ ಶಿರೋವಸ್ತ್ರವನ್ನು ತೆಗೆದುಕೊಂಡರೆ, ಅವನು ಭೌತಿಕವಾಗಿ ಗ ನಿಂದ ಆ ಸ್ವತ್ತಿನ ಬಳಕೆಯನ್ನು ಕಿತ್ತುಕೊಂಡಿದ್ದಾನೆ, ಆದರೆ ಅದು ತಪ್ಪಾಗಿ ಆಗಿರುವುದರಿಂದ ಕ ನು ಅಪರಾದೋದ್ದೇಶದಿಂದ ಇದನ್ನು ಮಾಡಿಲ್ಲ (ಅಂದರೆ, ಕ ನು ತಾನು ಮಾಲೀಕನೆಂದು ನಂಬಿರುವುದರಿಂದ, ಅವನು ಅಪ್ರಾಮಾಣಿಕನಲ್ಲ ಮತ್ತು ಅದನ್ನು ಅದರ ಮಾಲೀಕನಿಂದ ಕಿತ್ತುಕೊಳ್ಳುವ ಉದ್ದೇಶ ಹೊಂದಿಲ್ಲ), ಹಾಗಾಗಿ ಈ ಸಮಯದಲ್ಲಿ ಯಾವುದೇ ಅಪರಾಧವನ್ನು ಮಾಡಲಾಗಿಲ್ಲ. ಆದರೆ ಅವನು ಮನೆಗೆ ಹೋದಮೇಲೆ ತನ್ನ ತಪ್ಪನ್ನು ಅರಿತುಕೊಂಡು ಶಿರೋವಸ್ತ್ರವನ್ನು ಗ ಗೆ ಹಿಂದಿರುಗಿಸಬಹುದಾಗಿದ್ದು, ಕ ನು ಅಪ್ರಾಮಾಣಿಕವಾಗಿ ಅದನ್ನು ಇಟ್ಟುಕೊಂಡರೆ ಅವಳು ಶಿರೋವಸ್ತ್ರವನ್ನು ಕದ್ದಂತಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Criminal Law – Cases and Materials, 7th ed. 2012, Wolters Kluwer Law & Business; John Kaplan, Robert Weisberg, Guyora Binder, ISBN 978-1-4548-0698-1, [೧]


"https://kn.wikipedia.org/w/index.php?title=ಕಳ್ಳತನ&oldid=920304" ಇಂದ ಪಡೆಯಲ್ಪಟ್ಟಿದೆ